Police Bhavan Kalaburagi

Police Bhavan Kalaburagi

Tuesday, June 8, 2021

BIDAR DISTRICT DAILY CRIME UPDATE 08-06-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 08-06-2021

 

ಜನವಾಡಾ ಪೊಲೀಸ್ ಠಾಣೆ ಯು.ಡಿ.ಆರ್ ನಂ. 05/2021, ಕಲಂ. 174 ಸಿ.ಆರ್.ಪಿ.ಸಿ :-

ಫಿರ್ಯಾದಿ ನುಸರಿತಬೇಗಂ ಗಂಡ ಯೂನಿಸಮೀಯಾ ಚಿಟಗುಪ್ಪೇವಾಲೆ ಸಾ: ಬಗದಲ ಗ್ರಾಮ ರವರ ಮಗಳಾದ ಮಾಹೆ ಜಬೀನ ಗಂಡ ಖಯುಮ ಚಾವುಸ್ ವಯ: 33 ವರ್ಷ, ಜಾತಿ: ಮುಸ್ಲಿಂ, ಸಾ: ಮರಖಲ ಗ್ರಾಮ ಇವಳಿಗೆ ಕಳೆದ 4 ವರ್ಷಗಳಿಂದ ಹೊಟ್ಟೆಬೇನೆ ಇದ್ದು, ದವಾಖಾನೆಗೆ ತೋರಿಸಿದರೂ ಸಹ ಕಡಿಮೆ ಆಗಿರುವುದಿಲ್ಲ, ಅವಳು ಹೊಟ್ಟೆಬೇನೆ ಎದ್ದಾಗಲೆಲ್ಲಾ ನಾನು ಸಾಯುತ್ತೆನೆ ಹೊಟ್ಟೆಬೇನೆ ನನಗೆ ಕಡಿಮೆ ಆಗುವುದಿಲ್ಲ ಅಂತಾ ಹೇಳುತ್ತಿದ್ದಳು ಹೀಗಿರುವಾಗ ದಿನಾಂಕ 07-06-2021 ರಂದು ಮಾಹೆಜಬೀನ ಇವಳಿಗೆ ಹೊಟ್ಟೆಬೇನೆ ಎದ್ದು, ನೋವಾಗುತ್ತಿರುವಾಗ ಅವಳು ಮನೆಯಲ್ಲಿದ್ದ ಕೀಟನಾಶಕ ಔಷಧಿ ಸೇವಿಸಿದ್ದರಿಂದ ತಕ್ಷಣ ಅವಳಿಗೆ ಚಿಕಿತ್ಸೆಗಾಗಿ ಒಂದು ಖಾಸಗಿ ವಾಹನದಲ್ಲಿ ಬೀದರ ಸರಕಾರಿ ಆಸ್ಪತ್ರೆಗೆ ತಂದು ವೈದ್ಯರಿಗೆ ತೊರಿಸಲು ವೈದ್ಯರು ಅವಳಿಗೆ ನೋಡಿ ಮೃತಪಟ್ಟಿರುತ್ತಾಳೆಂದು ತಿಳಿಸಿರುತ್ತಾರೆ, ಮಾಹೇ ಜಬೀನ್ ಅವಳು ಹೊಟ್ಟೇಬೇನೆಯ ನೋವು ತಾಳಲಾರದೇ ಕಿಟನಾಶಕ ಔಷಧಿ ಸೇವಿಸಿ ಮೃತಪಟ್ಟಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬೀದರ ನೂತನ ನಗರ ಪೊಲೀಸ್ ಠಾಣೆ ಅಪರಾಧ ಸಂ. 63/2021, ಕಲಂ. 379 ಐಪಿಸಿ :-

ದಿನಾಂಕ 02-06-2021 ರಂದು 2100 ಗಂಟೆಯಿಂದ  ದಿನಾಂಕ 03-06-2021 ರಂದು 0900 ಗಂಟೆಯ ಅವಧಿಯಲ್ಲಿ ಬೀದರ ಕೆ.ಎಚ.ಬಿ. ಕಾಲೋನಿಯಲ್ಲಿ ಫಿರ್ಯಾದಿ ಅರುಣಕುಮಾರ ತಂದೆ ವಿಠ್ಠಲರಾವ ಸಾ: ಜನವಾಡಾ, ತಾ: ಬಸವಕಲ್ಯಾಣ, ಸದ್ಯ: ಕೆ.ಎಚ.ಬಿ. ಕಾಲೋನಿ ಬೀದರ ರವರ ಬಾಡಿಗೆ ಮನೆಯ ಎದುರಿಗೆ  ನಿಲ್ಲಿಸಿದ ಹೀರೊ ಸ್ಪ್ಲೆಂಡರ ಪ್ಲಸ್ ಮೋಟಾರ್ ಸೈಕಲ ನಂ. KA32EJ6377, ಚಾಸಿಸ್ ನಂ. MBLHA10BWFHE67478, ಇಂಜಿನ್ ನಂ. HA10EWFHE04426, ಮಾಡಲ್: 2015, ಬಣ್ಣ: SILVER ಹಾಗೂ ಅ.ಕಿ 25,000/- ರೂ. ನೇದನ್ನು ಯಾರೋ ಅಪರಿಚಿತ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 07-06-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬಸವಕಲ್ಯಾಣ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 48/2021, ಕಲಂ. 279, 337, 338 .ಪಿ.ಸಿ :-

ದಿನಾಂಕ 07-06-2021 ರಂದು ಫಿರ್ಯಾದಿ ಎಮ್.ಡಿ ಗೌಸ್ ತಂದೆ ಕರೀಮೋದ್ದಿನ್ ಮನಿಯಾರ, ವಯ: 21 ವರ್ಷ, ಜಾತಿ: ಮುಸ್ಲಿಂ, ಸಾ: ಗಾಜಿಪೂರಾ ಗಲ್ಲಿ ಬಸವಕಲ್ಯಾಣ ರವರು ತ್ರಿಪುರಾಂತ ಮಡಿವಾಳ ಚೌಕ್ ಹತ್ತಿರ ನಿಂತಿರುವಾಗ ಪರಿಚಯದ ಇರ್ಷಾದ ತಂದೆ ಮುಸ್ತಾಫಾ ಶೇಖ ವಯ: 40 ವರ್ಷ ಇವರು ಸೇಬು ಹಣ್ಣು ಮನೆಗೆ ಕೊಟ್ಟು ಬರೋಣ ಅಂತಾ ಹೇಳಿ ಅವರ ಮೋಟರ ಸೈಕಲ್ ನಂ. ಕೆಎ-56/ಜೆ-4632 ನೇದರ ಮೇಲೆ ಕೂಡಿಸಿಕೊಂಡು ಗದಗಿ ಮಠ ರಸ್ತೆ ಮುಖಾಂತರ ಕರೀಮ ಕಾಲೋನಿ ಕಡೆಗೆ ಹೋಗುವಾಗ ಕಠಾರೆ ರವರ ಹೊಲದ ಹತ್ತಿರ ಎದುರಿನಿಂದ ಅಂದರೆ ಗದಗಿ ಮಠ ಕಡೆಯಿಂದ ಒಬ್ಬ ಮೋಟಾರ್ ಸೈಕಲ್ ಚಾಲಕನು ತನ್ನ ವಾಹನವನ್ನು ಅತಿವೇಗ & ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯು ಕುಳಿತ ವಾಹನಕ್ಕೆ ಡಿಕ್ಕಿ ಮಾಡಿರುತ್ತಾನೆ, ಸದರಿ ಅಪಘಾತದಿಂದ ಫಿರ್ಯಾದಿಗೆ ಅಲ್ಲಲ್ಲಿ ಸಣ್ಣ ಪುಟ್ಟ ಗಾಯಗಳಾಗಿರುತ್ತವೆ ಹಾಗೂ ಇರ್ಷಾದ ಶೆಖ ರವರ ತಲೆಗೆ ಭಾರಿ ರಕ್ತಗಾಯವಾಗಿರುತ್ತದೆ, ನಂತರ ಡಿಕ್ಕಿ ಮಾಡಿದ ಮೋಟರ ಸೈಕಲ್ ನಂ.  ನೋಡಲು ಅದಕ್ಕೆ ನಂಬರ ಇರಲಿಲ್ಲ, ಹೊಂಡಾ ಶೈನ್ ಮೋಟರ ಸೈಕಲ್ ಇದ್ದು ಅದರ ಚಾಸಿಸ್ ನಂ. ME4JC65DBK7020975 ಇರುತ್ತದೆ, ಆತನ ಹೆಸರು ವಿಚಾರಿಸಲು ಅರಬಾಜಖಾನ ತಂದೆ ಸಾಜೀದಖಾನ ವಯ: 21 ವರ್ಷ, ಸಾ: ಶೀವಪೂರ ಅಂತಾ ತಿಳಿಸಿರುತ್ತಾನೆ, ಆತನಿಗೂ ಕೂಡ ಹಣೆಯ ಮೇಲೆ ರಕ್ತಗಾಯವಾಗಿರುತ್ತದೆ, ನಂತರ ಫಿರ್ಯಾದಿಯು ಕೂಡಲೆ ಇರ್ಷಾದ ರವರ ತಮ್ಮ ಫಯಾಜ ಈತನಿಗೆ ಕರೆ ಮಾಡಿ ಫಯಾಜ ಬಂದ ನಂತರ ಗಾಯಗೊಂಡ ಇರ್ಷಾದ & ಅರಬಾಜಖಾನ ಇಬ್ಬರಿಗೂ ಆಟೋದಲ್ಲಿ ಚಿಕಿತ್ಸೆ ಕುರಿತು ಬಸವಕಲ್ಯಾಣ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.