Police Bhavan Kalaburagi

Police Bhavan Kalaburagi

Thursday, August 30, 2018

KALABURAGI DISTRICT REPORTED CRIMES

ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ 26-08-2018 ರಂದು ರಾತ್ರಿ 9-30 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಗಂಡನಾದ ತಿಪ್ಪಣ್ಣಾ ಇಬ್ಬರೂ ಸೇಡಂ ರಿಂಗ ರೋಡ ಕಡೆಗೆ ಬರುವ ಸಿಟಿ ಆಸ್ಪತ್ರೆಗೆ ಇಬ್ಬರೂ ಹೋಗಿ ವಾಪಸ್ಸ ಮನೆಗೆ ಬರುವ ಸಲುವಾಗಿ ಒಂದು ಆಟೋರಿಕ್ಷಾ ವಾಹನದಲ್ಲಿ ಕುಳಿತು ಎಮ್.ಆರ.ಎಮ್.ಸಿ ಕಾಲೇಜ ಎದುರುಗಡೆ ಇಳಿದು ನಡೆದುಕೊಂಡು ಕಾಲೇಜ ಎದುರುಗಡೆ ಬರುವ ವಾಹನಗಳನ್ನು ನೋಡಿಕೊಂಡು ಇಬ್ಬರೂ ರಸ್ತೆ ದಾಟುತ್ತೀರುವಾಗ ಆಟೋರಿಕ್ಷಾ ನಂ ಕೆಎ-32-ಎ-1798 ನೇದ್ದರ ಚಾಲಕ ಜಿ.ಜಿ.ಹೆಚ್ ಸರ್ಕಲ ಕಡೆಯಿಂದ ಆರ.ಟಿ.ಓ ಕ್ರಾಸ ಕಡೆಗೆ ಹೋಗುವ ಕುರಿತು ತನ್ನ ಆಟೋರಿಕ್ಷಾ ವಾಹನವನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಗಂಡನಿಗೆ ಡಿಕ್ಕಿಪಡಿಸಿ ಅಪಘಾತ ಮಾಡಿ ಆತನಿಗೆ ಭಾರಿಗಾಯಗೊಳಿಸಿ ಉಪಚಾರ ಮಾಡಿಸುವ ಕುರಿತು ಆಸ್ಪತ್ರೆವರೆಗೆ ಬಂದು ಆಸ್ಪತ್ರೆಯಿಂದ ಹೇಳದೆ ಕೇಳದೆ ಓಡಿ ಹೋಗಿದ್ದು ನನ್ನ ಗಂಡನಾದ ತಿಪ್ಪಣ್ಣಾ ಇತನು ರಸ್ತೆ ಅಪಘಾತದಲ್ಲಿ ಆದ ಭಾರಿ ಗಾಯದ ಉಪಚಾರ ಪಡೆಯುತ್ತಾ ಯುನೈಟೆಡ ಆಸ್ಪತ್ರೆಯಲ್ಲಿ ದಿನಾಂಕ 29.08.2018 ರಂದು ಬೆಳಿಗ್ಗೆ 10-35 ಗಂಟೆ ಅಪಘಾತದಲ್ಲಿ ಆದ ಗಾಯದ ಉಪಚಾರ ಫಲಕಾರಿಯಾಗದೆ ಮೃತಪಟ್ಟಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಧೋಳ ಠಾಣೆ : ಶ್ರೀ ಮೊಗಲಪ್ಪಾ ತಂದೆ ದೊಡ್ಡನರಸಪ್ಪಾ ರೆಬ್ಬನಪಲ್ಲಿ ಸಾ|| ಬಿಚ್ಚಾಲಗ್ರಾಮ ಮಂಡಲ; ದೌಲ್ತಬಾದ ಟಿ.ಎಸ್ ರವರ ಹೆಂಡತಿ ಪದ್ಮಮ್ಮಾ ಇವರ ತವರು ಮನೆ ನರಸಪುರಮ ಗ್ರಾಮ ಇದ್ದು ಇವಳು ತನ್ನ ಅಣ್ಣನಾದ ವೆಂಕಟಪ್ಪಾ ಇವರಿಗೆ ರಾಖಿ ಕಟ್ಟಿ ಬರೋಣ ಅಂತಾ ಹೇಳಿದ್ದರಿಂದ ನಿನ್ನೆ ದಿನಾಂಕ; 28-08-2018 ರಂದು ಮದ್ಯಾಹ್ನ ನಾನು ಮತ್ತು ನನ್ನ ಹೆಂಡತಿ ಪದ್ಮಮ್ಮಾ ಇಬ್ಬರು ಕೂಡಿ ನಮ್ಮ ಮೊಟಾರ ಸೈಕಿಲ ನಂ ಎ.ಪಿ-28-ಎ.ಕೆ-4620 ನ್ನೆದ್ದರ ಮೆಲೆ ನಮ್ಮುರದಿಂದ ನನ್ನ ಹೆಂಡತಿಯ ತವರು ಮನೆ ನರಸಾಪುರ ಊರಿಗೆ ಬಂದು ಇಲ್ಲಿ ನನ್ನ ಹೆಂಡತಿಯ ಅಣ್ಣನಾದ ವೆಂಕಟಪ್ಪಾ ಇವರಿಗೆ ರಾಖಿ ಕಟ್ಟಿ ರಾತ್ರಿ ಅಲ್ಲೆ  ಊಳಿದುಕೊಂಡು ಇಂದು ದಿನಾಂಕ; 29-08-2018 ರಂದು ಬೇಳಗ್ಗೆ 9-00 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಹೆಂಡತಿ ಪದ್ಮಮ್ಮಾ ಇಬ್ಬರು ಕುಡಿ ನಮ್ಮ ಮೊಟಾರ ಸೈಕಿಲ ಮೆಲೆ ನರಸಪುರಮದಿಂದ ವಾಪಾಸ ನಮ್ಮುರಿಗೆ ಹೊಗುತ್ತಿದ್ದಾಗ  ಬೇಳಗ್ಗೆ 9-30 ಗಂಟೆ ಸುಮಾರಿಗೆ ಹುಲಿಗುಂಡಮ್ ಗೇಟ ಹತ್ತಿರ ಕೊಡಂಗಲ ಗುರಮಿಟಕಲ್ ಮುಖ್ಯ ರಸ್ತೆಯಲ್ಲಿ ರಸ್ತೆಯ ಎಡಬದಿಯಿಂದ ಹೊಗುತಿದ್ದಾಗ ಕೊಡಂಗಲಕಡೆಯಿಂದ ಗುರಮಿಟಕಲಕಡೆಗೆ ಬರುತಿದ್ದ ಒಂದು ಲಾರಿಯ ಚಾಲಕನು ತನ್ನ ಲಾರಿಯನ್ನು ಅತಿವೇಗವಾಗಿ ಮತ್ತು ನಿರ್ಲಕ್ಷತನದಿಂದ ನಡೆಸಿಕೊಂಡು ಬಂದು ನನ್ನ ಸೈಕಿಲ ಮೊಟಾರಿಗೆ ಡಿಕ್ಕಿ ಪಡಿಸಿ ಅಫಘಾತ ಮಾಡಿದ್ದು ಇದರಿಂದ ನನ್ನಹೆಂಡತಿ ಕೆಳಗಡೆ ರಸ್ತೆಯಲ್ಲಿ ಬಿದ್ದಿದ್ದು ನಾನು ಮೊಟಾರ ಸೈಕಿಲ ಸಮೇತ ರಸ್ತೆಯ ಪಕ್ಕದಲ್ಲಿ ಬಿದ್ದಿದ್ದು ಸದರಿ ಲಾರಿಯು ನನ್ನ ಹೆಂಡತಿಯ ಮೈ ಮೆಲಿಂದ ಹೊಗಿದ್ದರಿಂದ ನನ್ನ ಹೆಂಡತಿಗೆ ತಲೆಯಿಂದ ಪಾದದವರೆಗೆ  ದೇಹಾ ಪೂರ್ತಿ ನಜ್ಜುಗುಜ್ಜಾಗಿ ಭಾರಿ ರಕ್ತಗಾಯಗಳಾಗಿ  ಸ್ಥಳದಲ್ಲಿ ಮೃತಪಟ್ಟಿದ್ದು ನನಗೆ ರಸ್ತೆಯಿಂದ ಹೊಗಿ ಬರುವ ಜನರು ಮತ್ತು ನಮ್ಮುರ ಯಲ್ಲಪ್ಪಾ ಜೋಗಿ ಮತ್ತು ಇತನ ಹೆಂಡತಿ ದಿವ್ಯಾ ಇತರರು ಕೂಡಿ ಎಬ್ಬಿಸಿ ನೊಡಲಾಗಿ ನನಗೆ ಯಾವುದೆ ಗಾಯ ವೈಗರೆ ಆಗಿರುವದಿಲ್ಲಾ ಸದರಿ ಲಾರಿಯ ಚಾಲಕನು ಅಫಘಾತ ಪಡಿಸಿ ಸ್ವಲ್ಪ ಮುಂದುಗಡೆ ಹೊಗಿ ತನ್ನ ಲಾರಿಯನ್ನು ನೀಲ್ಲಿಸಿದ್ದು ಅದರ ನಂಬರ ನೋಡಲಾಗಿ ಸದರಿ ಲಾರಿ ನಂ ಎಮ್.ಹೆಚ್ಚ್-12-ಡಿ.ಟಿ-4165 ಅಂತಾ ಇದ್ದು ಸದರಿ ಲಾರಿಚಾಲಕನು ನನ್ನ ಹೆಂಡತಿ ಸತ್ತಿದ್ದನ್ನು ನೋಡಿ ತನ್ನ ಲಾರಿಯನ್ನು ಅಲ್ಲೀಂದ ಓಡಿಸಿಕೊಂಡು ಹೊಗಿದ್ದು ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀ ವಿನಾಶ ತಂದೆ ಅಂಬಾದಾಸ ಸೂರ್ಯವಂಶಿ ಸಾ||ದೇವಣಗಾಂವ ಹಾ||||ಸಮತಾ ನಗರ ಕಲಬುರಗಿ ರವರ ತಂದೆಯಾದ ಅಂಬಾದಾಸ ತಂದೆ ಚನ್ನಪ್ಪ ಸೂರ್ಯವಂಶಿ ರವರು   ದಿನಾಂಕ 25/07/2018 ರಂದು ಮದ್ಯಾಹ್ನ 1.00 ಗಂಟೆ ಸುಮಾರಿಗೆ  ನಮ್ಮ ತಂದೆಯವರು ನಮಗೆ ತಿಳಿಸಿದ್ದೆನೆಂದರೆ ನಾನು ನಮ್ಮ ಮೋಟಾರ್ ಸೈಕಲ್ ನಂ ಕೆಎ-32 ಇಎಫ್ 5955 ನೇದ್ದರ ಮೇಲೆ ದೇವಣಗಾಂವಕ್ಕೆ  ಹೋಗಿ ಬರುತ್ತೇನೆ ಅಂತ ಹೇಳಿ ಮನೆಯಿಂದ ಹೋಗಿರುತ್ತಾರೆದಿನಾಂಕ 25/07/2018 ರಂದು ಮದ್ಯಾಹ್ನ 3.50 ಗಂಟೆ ಸುಮಾರಿಗೆ ನಾನು ನಮ್ಮ ಮನೆಯಲಿದ್ದಾಗ ಮಾತೋಳಿ ಗ್ರಾಮದ ನಮ್ಮ ಸಂಬಂಧಿಕರಾದ ಅವಿನಾಶ ತಂದೆ ಮಾರುತಿ ಮೋರೆ ರವರು ನನ್ನ ಮೋಬೈಗೆ ಪೊನ್ ಮಾಡಿ ತಿಳಿಸಿದ್ದೆನೆಂದರೆ  ಈಗ ಸ್ವಲ್ಪ ಸಮಯದ ಹಿಂದೆ ಅಂದರೆ 3.30 ಪಿಎಮ್ ಗಂಟೆ ಸುಮಾರಿಗೆ ನಾನು ನಮ್ಮ ಮೋಟಾರ್ ಸೈಕಲ್ ಮೇಲೆ ಚವಡಾಪೂರದಿಂದ ಮಾತೋಳಿಗೆ ಹೋಗುತಿದ್ದಾಗ ನನ್ನ ಮುಂದೆ ನಿಮ್ಮ ತಂದೆ ಅಂಬಾದಾಸ ರವರು ಮೋಟಾರ ಸೈಕಲ್ ನಂ ಕೆಎ-32 ಇಎಫ್ 5955 ನೇದ್ದರ ಮೇಲೆ ಅಫಜಲಪೂರ ಕಡೆ ಹೋಗುತಿದ್ದರು ಮಲ್ಲಾಬಾದ ಸಿಮಾಂತರ ಮಲ್ಲಾಬಾದ ಗ್ರಾಮದ ಶರಣಪ್ಪ ತಂದೆ ಸಿದ್ರಾಮಪ್ಪ ಕಲ್ಲೂರ ರವರ ಹೊಲದ ಹತ್ತಿರ ಮುಖ್ಯ ರಸ್ತೆ  ಮೇಲೆ ಹಿಂದಿನಿಂದ Mahindra TUV 300 ನೇದ್ದರ ಚಾಲಕ  ಸದರಿ ವಾಹನವನ್ನು ಅತಿವೇಗ ಹಾಗು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಮುಂದೆ ಹೋಗುತಿದ್ದ ನಿಮ್ಮ ತಂದೆಯ ಮೋಟಾರ ಸೈಕಲ್ ಗೆ ಡಿಕ್ಕಿ ಪಡಿಸಿದ್ದರಿಂದ ನಿಮ್ಮ ತಂದೆ ಮೋಟಾರ ಸೈಕಲ್ ಸಮೇತ ರೋಡಿನ ಮೇಲೆ ಬಿದ್ದು ತಲೆಗೆ ಭಾರಿ ರಕ್ತ ಗಾಯ ವಾಗಿರುತ್ತದೆ. ಸದರಿ ವಾಹನ ಚಾಲಕನು ತನ್ನ ವಾಹನವನ್ನು ರೋಡಿನ ಮೇಲೆ ಪಲ್ಟಿ ಮಾಡಿ ಸ್ಥಳದಲ್ಲಿಯೆ ಬಿಟ್ಟು ಓಡಿ ಹೋಗಿರುತ್ತಾನೆ ನಾನು 108 ಅಂಬ್ಯೂಲೆನ್ಸಕ್ಕೆ ಕಾಲ್ ಮಾಡಿ ಅಲ್ಲಿಂದ ಹೋಗುತಿದ್ದ ಪ್ರಯಾಣಿಕರ ಸಹಾಯದಿಂದ ನಿಮ್ಮ ತಂದೆಗೆ 108 ಅಂಬ್ಯೂಲೆನ್ಸದಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಬಸವೇಶ್ಚರ ಆಸ್ಪತ್ರೆ ಕಲಬುರಗಿಗೆ ಬರುತಿದ್ದೇನೆ ನೀವು ಬನ್ನಿ ಅಂತ ತಿಳಿಸಿದ ಬಳಿಕ ನಾನು ಹಾಗು ನಮ್ಮ ಮಾವನಾದ ಹುಲಿರಾಯ ತಂದೆ ಶಂಕರರಾವ ಕಾಜಲೆ ಇಬ್ಬರು ಬಸವೇಶ್ವರ ಆಸ್ಪತ್ರೆಗೆ ಹೋಗಿ ನಮ್ಮ ತಂದೆಗೆ ನೋಡಲಾಗಿ ನಮ್ಮ ತಂದೆಯ ತಲೆಗೆ ಭಾರಿ ರಕ್ತಗಾಯವಾಗಿ ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲಾ  ಎರಡು ಕಾಲುಗಳಿಗೆ ಎರಡು ಕೈಗಳಿಗೆ ಬೆನ್ನಿನ ಮೇಲೆ ತರಚಿದ ರಕ್ತಗಾಯಗಳಾಗಿರುತ್ತವೆ ತನ್ನ ವಾಹನವನ್ನು ಅತಿವೇಗ ಹಾಗು ನಿಸ್ಕಾಳಜಿತನದಿಂದ  ಚಲಾಯಿಸಿ ನಮ್ಮ ತಂದೆ ಚಲಾಯಿಸುತಿದ್ದ  ಮೋಟಾರ್ ಸೈಕಲಗೆ ಡಿಕ್ಕಿ ಪಡಿಸಿ ಭಾರಿ ರಕ್ತಗಾಯ ಪಡಿಸಿದ ಚಾಲಕನ ಮೇಲೆ ಕಾನೂನಿನ ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸದರಿ ಪ್ರಕರಣದಲ್ಲಿ ಗಾಯಾಳು ಅಂಬಾದಾಸ ತಂದೆ ಚನ್ನಪ್ಪ ಸೂರ್ಯವಂಶಿ ರವರು ಉಪಚಾರ ಫಲಕಾರಿಯಾಗದೆ ದಿನಾಂಕ 28-08-2018 ರಂದು ಸತ್ಯ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಮಾಡಿ ಸರ್ಕಾರಿ ಕರ್ತವ್ಯಕ್ಕೆ ಅಡೆ ತಡೆ ಮಾಡಿದ ಪ್ರಕರಣ :
ನರೋಣಾ ಠಾಣೆ : ಶ್ರೀ ಅಂಬಾದಾಸ ತಂದೆ ಬಂಗಾರಪ್ಪಾ ಸೂರ್ಯವಂಶಿ ಸಾ : ಕೊಳ್ಳಿ ತಾ : ಬಸವಕಲ್ಯಾಣ ಜಿ : ಬೀದರ ಮೂರು ವರ್ಷಗಳಿಂದ ಬಸವ ಕಲ್ಯಾಣ ಬಸ್ ಘಟಕದಲ್ಲಿ ಚಾಲಕ ಕಂ ನಿರ್ವಾಹಕ  ಅಂತಾ ರ್ತವ್ಯ ನಿರ್ವಹಿಸುತ್ತಿದ್ದು ಇದೆ ಡಿಪೊದಲ್ಲಿ (ಘಟಕ) ನನ್ನ ಖಾಸ ತಮ್ಮನಾದ ಪ್ರಕಾಶ ಸೂರ್ಯವಂಶಿ ಇವರು ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ,
ನಿನ್ನೆ ದಿನಾಂಕ:28/08/2018 ರಂದು ನನಗೆ ನಿರ್ವಹಕನಾಗಿ ಮತ್ತು ನನ್ನ ತಮ್ಮನಾದ ಪ್ರಕಾಶನಿಗೆ ಚಾಲಕನಾಗಿ ರೂ ನಂ: 66 ಬಸವ ಕಲ್ಯಾಣ ದಿಂದ ಕಲಬುರಗಿ ವಾಯ ಅಂಬಲಗಾ ಮಾರ್ಗಕ್ಕೆ ನಮ್ಮ ಡಿಪೊ ಬಸ್ ನಂ: ಕೆಎ38-ಎಫ್715 ಇದರ ಮೇಲೆ ಕರ್ತವ್ಯಕ್ಕೆ ನೇಮಕ ಮಾಡಿದ್ದು ಅದರಂತೆ ನಾನು ಮತ್ತು ನನ್ನ ಈ ಮೆಲೆ ನಮೂದಿಸಿದ ರೂಟನಲ್ಲಿ ಒಂದು ಬಾರಿ ಹೋಗಿ ಬಂದಿರುತ್ತೇವೆ. ಎರಡನೆ ಟ್ರಿಪ್ ಬಸವ ಕಲ್ಯಾಣದಿಂದ ಕಲಬುರಗಿಗೆ ಬರುವಾಗ ಮಾಧ್ಯಾಹ್ನ 3-30 ಗಂಟೆ ಸುಮಾರಿಗೆ ಅಂಬಗಲಾ ಗ್ರಾಮದ ಮೇಲೆ 8 ಜನರು ಸೇರಿ ನಮ್ಮ ಬಸ್ಸಿಗೆ ತಡೆದು ನಿಲ್ಲಿಸಿ ಅವರಲ್ಲಿ 4 ಜನರು ಬಸ್ಸಿನಲ್ಲಿ ಹತ್ತಿ ನನಗೆ ಏ ಬೋಸಡಿ ಮನಗೆ ಇಷ್ಟ್ಯಾಕೆ ಲೇಟ್ ಮಾಡಿ ಬಸ್ ತಂದಿದ್ದಿಯಾ ಎಂದು ಅವಾಚ್ಯವಾಗಿ ಬಯುತ್ತಾ 4ಜನ ಕೂಡಿ ನನ್ನೊಂದಿಗೆ ಜಗಳ ತಗೆದು ನನ್ನ ಸಮವಸ್ತ್ರ ಹಿಡಿದು ಎಳೆದಾಡಿ ಕೈಯಿಂದ ತಲೆ ಮೇಲೆ ಬೆನ್ನು ಮೇಲೆ ಬಲಕಣ್ಣಿನ ಮೇಲೆ ಹೊಡೆದಿದ್ದು ಅಲ್ಲದೇ ಕೈಯೀಂದ ಎದೆಯ ಮೇಲೆ ಚೂರಿದ್ದು ಮತ್ತು ಹಲ್ಲಿನಿಂದ ನನ್ನ ಎಡಗೈ ಹಸ್ತದ ಹಿಂಭಾಗಕ್ಕೆ ಕಚ್ಚಿದ್ದರಿಂದ ರಕ್ತಗಾಯ ವಾಗಿರುತ್ತದೆ. ಅಷ್ಟರಲ್ಲಿಯೇ ನನ್ನ ತಮ್ಮನಾದ ಪ್ರಕಾಶ ಇವರು ಜಗಳ ಬಿಡಿಸಲು ಬಂದಾಗ ಅದೇ ನಾಲ್ಕು ಜನ ಸೇರಿ ಅವರಿಗೂ ಸಹ ಕೈಯಿಂದ ಹೊಡೆಬಡೆ ಮಾಡುತ್ತಿರುವಾಗ ಬಸ್ಸಿನಲ್ಲಿದ್ದ ಪ್ರಯಾಣೀಕರಾದ ದೇಶಮುಖ ತಂದೆ ಅಣ್ಣೆಪ್ಪಾ ಬಾಚನಾಳ ಸಾ:ನಾರಾಯಣಪೂರ, ಅಮೀರಖಾನ ತಂದೆ ಅಬ್ದುಲ್ ರಹಿಮ್ ಪಟ್ಟಣ, ಸಾ:ತ್ರಿಪೂರಂತ ಮತ್ತು ಮಾರ್ತಂಡಪ್ಪ ಬಬಲಾದ ಎಂಬುವರು ಜಗಳ ನೋಡಿ ಬಿಡಿಸಿರುತ್ತಾರೆ. ನನಗೆ ಹೊಡೆಬಡಿಮಾಡಿ ಕರ್ತವ್ಯಕ್ಕೆ ಅಡತಡೆ ಉಂಟುಮಾಡಿದ 8ಜನರಲ್ಲಿ ಇಬ್ಬರ ಹೆಸರು ಮಾತ್ರ ಗೊತ್ತಾಗಿದ್ದು ಅವರು ಮಲ್ಲಿನಾಥ @ ಮಲ್ಲು ತಂದೆ ಸಿದ್ದಪ್ಪಾ ಮಾಚಿ, ಸಾ:ಅಂಬಲಗಾ ಹಾಗೂ ಶಿವಾನಂದ ತಂದೆ ಕಾಶಪ್ಪಾ ಯಳವಂತಗಿ ಸಾ:ಅಂಬಲಗಾ ಅಂತಾ ತಿಳಿದು ಬಂದಿರುತ್ತದೆ. ಇನ್ನುಳಿದ 6ಜನರ ಹೆಸರು ಮತ್ತು ವಿಳಾಸ ಗೊತ್ತಿರುವುದಿಲ್ಲ ಅವರುಗಳನ್ನು ನೋಡಿದಲ್ಲಿ ಗುರ್ತಿಸುತ್ತೇನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.