Police Bhavan Kalaburagi

Police Bhavan Kalaburagi

Friday, July 16, 2021

BIDAR DISTRICT DAILY CRIME UPDATE 16-07-2021

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 16-07-2021

 

ಜನವಾಡಾ ಪೊಲೀಸ್ ಠಾಣೆ ಅಪರಾಧ ಸಂ. 45/2021, ಕಲಂ. 279, 338, 304(ಎ) ಐಪಿಸಿ :-

ದಿನಾಂಕ 15-07-2021 ರಂದು ಫಿರ್ಯಾದಿ ನಾರಾಯಣರಾವ ತಂದೆ ಯಾದವರಾವ ಕಾಳಗೊಂಡ ಸಾ: ಬೆನಕನಳ್ಳಿ ಗ್ರಾಮ, ತಾ: & ಜಿ: ಬೀದರ ರವರು ತನ್ನ ಸೋದರಳಿಯ ಪ್ರಕಾಶ ತಂದೆ ಅಮೃತ ಹಳ್ಳದಕೇರೆ ಇಬ್ಬರು ತಮ್ಮ ಮೋಟಾರ್ ಸೈಕಲ್ ಮೇಲೆ ಮತ್ತು ಸೋದರಳಿಯ ದುರ್ಗೇಶ ತಂದೆ ದಶರಥ ಸಂಗನಳ್ಳೆ ಕನ್ನಳ್ಳಿ ಗ್ರಾಮ ಸದ್ಯ ಬೆನಕನಳ್ಳಿ ಈತನು ತನ್ನ ಹಿರೋ ಸ್ಪ್ಲೆಂಡರ್ ಪ್ಲಸ್ ಮೋಟಾರ್ ಸೈಕಲ್ ಚಾಸಿಸ್ ನಂ. ಎಮ್.ಬಿ.ಎಲ್.ಹೆಚ್.ಎ.ಡಬ್ಲು.125.ಎಮ್.4.ಸಿ.09044 ನೇದರ ಮೇಲೆ ಚಾಂಬೋಳ ಗ್ರಾಮದಲ್ಲಿರುವ ಮ್ಮ ಸಂಬಂಧಿ ಮಂಜೂನಾಥ ತಂದೆ ಮಾರುತಿ ಹಿಪ್ಪಳಗಾಂವ ರವರ ಖಾನಾವಳಿ ಹೊಟೇಲಗೆ ಹೊಗುತ್ತಿರುವಾಗ ದುರ್ಗೇಶ ಈತನು ತನ್ನ ಮೋಟಾರ್ ಸೈಕಲನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬೀದರ-ವಡಗಾಂವ ರೋಡಿನ ಮ್ಮೂರ ಬಾಲಾಜಿ ಚೌಹಾಣ ರವರ ಹೊಲದ ಹತ್ತಿರ ಹೋದಾಗ ಎದುರುಗಡೆಯಿಂದ ದೀಪಕ ತಂದೆ ತಂದೆ ರಾಜಕುಮಾರ ಸಾ: ವಾಲದ್ದೊಡ್ಡಿ ಇತನು ತನ್ನ ಮೋಟಾರ್ ಸೈಕಲ ಮೇಲೆ ತನ್ನ ಹೆಂಡತಿ ಅಶ್ವಿನಿ ರವರಿಗೆ ಕೂಡಿಸಿಕೊಂಡು ತನ್ನ ಮೋಟಾರ್ ಸೈಕಲನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬರುತ್ತಿದ್ದು, ಅವನ ಮೋಟಾರ್ ಸೈಕಲ್ ಮತ್ತು ದುರ್ಗೇಶನ ಮೋಟಾರ್ ಸೈಕಲಗಳು ಮುಖಾ-ಮುಖಿ ಡಿಕ್ಕಿಯಾಗಿದ್ದು, ಸದರಿ ಡಿಕ್ಕಿಯಿಂದ ದುರ್ಗೆಶ ಇತನ ತಲೆಯ ಹಿಂಭಾಗದಲ್ಲಿ ಭಾರಿ ರಕ್ತಗಾಯವಾಗಿ ಮೂಗಿನಿಂದ ರಕ್ತಸ್ರಾವ, ಬಲ ಮತ್ತು ಎಡಗಾಲಿನ ಪಾದಕ್ಕೆ ರಕ್ತಗಾಯ, ಗಟಾಯಿಗೆ ರಕ್ತಗಾಯವಾಗಿ ಸ್ಥಳದಲ್ಲೆ ಮೃತಪಟ್ಟಿರುತ್ತಾನೆ, ನಂತರ ದಿಪಕ ಇತನ ಬಲಗಾಲಿಗೆ ಭಾರಿ ರಕ್ತ ಮತ್ತು ಗುಪ್ತಗಾಯವಾಗಿದ್ದು, ಬಲಗೈ ತೊರಬೆರಳಿಗೆ ರಕ್ತಗಾಯವಾಗಿರುತ್ತದೆ ಹಾಘೂ ದೀಪಕ ಇತನ ಹೆಂಡತಿಗೆ ಸಣ್ಣಪುಟ್ಟ ತರಚಿದ ಗಾಯಗಳಾಗಿದ್ದು ಇರುತ್ತವೆ, ಅವರ ಮೋಟಾರ್ ಸೈಕಲ್ ನೋಡಲು ಹಿರೋ ಹೊಂಡಾ ಫ್ಯಾಶನ್ ಚಾಸಿಸ್ ನಂ. 04.ಕೆ.09.ಸಿ.60949 ಇರುತ್ತದೆ, ಫಿರ್ಯಾದಿಯು ತಕ್ಷಣ 108 ಅಂಬುಲೇನ್ಸ್ ವಾಹನಕ್ಕೆ ಕರೆ ಮಾಡಿ  ಕರೆಯಿಸಿ  ಅದರಲ್ಲಿ ಗಾಯಗೊಂಡ ದೀಪಕ ಈತನಿಗೆ ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆಗೆ ಕಳಹಿಸಿಕೊಟ್ಟಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಭಾಲ್ಕಿ ಗ್ರಾಮೀನ ಪೊಲೀಸ್ ಠಾಣೆ ಅಪರಾಧ ಸಂ. 80/2021, ಕಲಂ. 279, 337, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-

ದಿನಾಂಕ 15-07-2021 ರಂದು ಫಿರ್ಯಾದಿ ಲಕ್ಷ್ಮಣ ತಂದೆ ಸುನೀಲ ಕಾರಂಜೆ ವಯ: 20 ವರ್ಷ, ಜಾತಿ: ಎಸ್.ಸಿ ಮಾದಿಗ, ಸಾ: ವಳಸಂಗ ರವರು ತನ್ನ ತಾಯಿ ರೇಖಾ ಇಬ್ಬರು ತಮ್ಮ ಮೋಟಾರ ಸೈಕಲ್ ನಂ. ಕೆಎ-39/ಎಸ್-4182 ನೇದರ ಮೇಲೆ ವಳಸಂಗದಿಂದ ಭಾಲ್ಕಿಗೆ ಹೋಗುವಾಗ ಭಾಲ್ಕಿ-ಅಂಬೆಸಾಂಗವಿ ಕ್ರಾಸ್ ರೋಡಿನ ಮೇಲೆ ಗುಂಪಾದ ಹತ್ತಿರ ಇರುವ ಬ್ರಿಜ ಮೇಲೆ ಹಿಂದಿನಿಂದ ಅಂದರೆ ಅಂಬೆಸಾಂಗವಿ ಕ್ರಾಸ್ ಕಡೆಯಿಂದ ಕೆ.ಎಸ್.ಆರ್.ಟಿ.ಸಿ.ಬಸ್ ಬಸ್ ಚಾಲಕನಾದ ಆರೋಪಿಯು ತನ್ನ ಬಸ್ಸನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯ ಮೋಟಾರ ಸೈಕಲಗೆ ಹಿಂದಿನಿಂದ ಡಿಕ್ಕಿ ಮಾಡಿ ತನ್ನ ಬಸ್ ಸಮೇತ ಓಡಿ ಹೋಗಿರುತ್ತಾನೆ, ಸದರಿ ಅಪಘಾತದಿಂದ ಫಿರ್ಯಾದಿಯ ಗಟಾಯಿಗೆ ತರಚಿದ ರಕ್ತಗಾಯ, ಬಲಗಾಲ ಮೋಳಕಾಲ ಮೇಲೆ ತರಚಿದ ರಕ್ತಗಾಯ, ಎದೆಗೆ ಗುಪ್ತಗಾಯ, ಬಲಗೈ ಮೋಳಕೈ ಮೇಲೆ ತರಚಿದ ರಕ್ತಗಾಯವಾಗಿರುತ್ತದೆ ಮತ್ತು ತಾಯಿ ರೇಖಾ ಇವರಿಗೆ ತಲೆಗೆ ಭಾರಿ ರಕ್ತಗಾಯ, ಬಲಗಣ್ಣಿನ ಹತ್ತಿರ, ಎಡಗಣ್ಣಿನ ಹತ್ತಿರ ತರಚಿದ ರಕ್ತಗಾಯ, ಬಲಗಾಲ ಮತ್ತು ಎಡಗಾಲ ಮೋಳಕಾಲ ಮೇಲೆ ತರಚಿದ ರಕ್ತಗಾಯವಾಗಿ ಮಾತನಾಡುವ ಸ್ಥತಿಯಲ್ಲಿ ಇರಲಿಲ್ಲಾ, ಅವಾಗ ಫಿರ್ಯಾದಿ ತನ್ನ ತಮ್ಮ ರಾಮ ಈತನಿಗೆ ಕರೆ ಮಾಡಿ  ಕರೆಯಿಸಿ ರಾಮ ಇತನು ಬಂದಾಗ ಗಾಯಗೋಂಡ ಇಬ್ಬರಿಗೂ ಚಿಕಿತ್ಸೆ ಕುರಿತು ಒಂದು ಖಾಸಗಿ ವಾಹನದಲ್ಲಿ ಭಾಲ್ಕಿ ಸರಕಾರಿ ಆಸ್ಪತ್ರೆಗೆ ತಂದು ದಾಖಲಿಸಿದಾಗ ನಂತರ ವೈದ್ಯಾಧಿಕಾರಿಯವರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆ ಕುರಿತು ಬೀದರ ಶ್ರೀ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.