ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 19-05-2021
ಹುಮನಾಬಾದ ಸಂಚಾರ ಪೊಲೀಸ್ ಠಾಣೆ, ಅಪರಾಧ ಸಂ. 48/2021, ಕಲಂ. 279, 337 ಐಪಿಸಿ :-
ದಿನಾಂಕ 18-05-2021 ರಂದು ಫಿರ್ಯಾದಿ ಮಮತಾ ಗಂಡ ಅಶೋಕರೆಡ್ಡಿ ಬೋಗಲೆ ವಯ: 45 ವರ್ಷ, ಜಾತಿ:
ರೆಡ್ಡಿ, ಸಾ: ಕಿಟ್ಟಾ, ತಾ: ಬಸವಕಲ್ಯಾಣ ರವರ ಮಗಳು ವೈಷ್ಣವಿ ಬೋಗಲೆ ಇವಳಿಗೆ ಮೈಯಲ್ಲಿ ಹುಷಾರಿಲ್ಲದ ಕಾರಣ
ಗಂಡ ಅಶೋಕರೆಡ್ಡಿ
ಬೋಗಲೆ ಇವರು ಚಲಾಯಿಸುತ್ತಿದ್ದ ಕಾರ್ ಸಂ.
ಎಮ್.ಹೆಚ್-12/ಕೆ.ವಾಯ್-2395 ನೇದರಲ್ಲಿ ಫಿರ್ಯಾದಿ ಹಾಗೂ ಮಗಳು ಇಬ್ಬರು ಕುಳಿತುಕೊಂಡು ಕಿಟ್ಟಾದಿಂದ ಹುಮನಾಬಾದ ಮಾರ್ಗವಾಗಿ ಬೀದರ ಖಾಸಗಿ ಆಸ್ಪತ್ರೆಗೆ ಹೋಗುತ್ತಿರುವಾಗ
ಗಂಡ ಅಶೋಕರೆಡ್ಡಿ ಬೋಗಲೆ ಇವರು ತಾನು ಚಲಾಯಿಸುತ್ತಿದ್ದ ಕಾರನ್ನು ರೋಡಿನ ಮೇಲೆ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ
ರಾಷ್ಟ್ರೀಯ ಹೆದ್ದಾರ ನಂ. 50 ಹುಮನಾಬಾದ - ಬೀದರ
ರೋಡಿನ ಮೇಲೆ ಜಲಸಂಗಿ ಶಿವಾರದ ರಿಲೈಯನ್ಸ್ ಗ್ಯಾಸ್ ಹತ್ತಿರ ವಾಹನದ ಮೇಲಿನ ತನ್ನ ನಿಯಂತ್ರಣ ತಪ್ಪಿದ್ದರಿಂದ ಕಾರನ್ನು ತನ್ನಿಂದ ತಾನೇ ರೋಡಿನ ಬದಿಯಲ್ಲಿ ಪಲ್ಟಿ ಮಾಡಿರುತ್ತಾರೆ,
ಕಾರಣ ಸದರಿ ಅಪಘಾತದಿಂದ ಕಾರಿನಲ್ಲಿದ್ದ ಫಿರ್ಯಾದಿಯ ಬೆನ್ನಿನಲ್ಲಿ ಸಾದಾ ಗುಪ್ತಗಾಯವಾಗಿರುತ್ತದೆ,
ಮಗಳು ವೈಷ್ಣವಿ ಇವಳಿಗೆ ತಲೆಯ ಹಿಂದೆ ಮತ್ತು ಬೆನ್ನಿನಲ್ಲಿ ಸಾದಾ ಗುಪ್ತಗಾಯಗಳು ಆಗಿರುತ್ತವೆ,
ಗಂಡನ ಬಲಭುಜಕ್ಕೆ
ಸಾದಾ ರಕ್ತಗಾಯ ಮತ್ತು ಹಣೆಗೆ ತರಚಿದ ರಕ್ತಗಾಯಗಳು ಆಗಿರುತ್ತವೆ,
ನಂತರ ಗಂಡ ತನಮ್ಮ ಸಂಬಂಧಿಕರಿಗೆ ಮತ್ತು ತಮ್ಮ ಪರಿಚಯಸ್ಥರಿಗೆ ಘಟನೆಯ ಬಗ್ಗೆ ಕರೆ ಮಾಡಿ ತಿಳಿಸಿದ್ದರಿಂದ ನಾಗೇಶ ತಂದೆ ರಾಚಯ್ಯಾ ಕತ್ರಿ ಸಾ: ಟೀಚರ್ ಕಾಲೋನಿ ಹುಮನಾಬಾದ ರವರು ತನ್ನ ಕಾರನ್ನು ತೆಗೆದುಕೊಂಡು ಘಟನಾ
ಸ್ಥಳಕ್ಕೆ ಬಂದು ಗಾಯಗೊಂಡ ಎಲ್ಲರಿಗೂ ಚಿಕಿತ್ಸೆ ಕುರಿತು ತಮ್ಮ ಕಾರಿನಲ್ಲಿ ಹುಮನಾಬಾದ ಸರ್ಕಾರಿ ಆಸ್ಪತ್ರೆಗೆ ತಂದು
ದಾಖಲು ಮಾಡಿರುತ್ತಾರೆಂದು
ಕೊಟ್ಟ ಫಿರ್ಯಾದಿಯವರ ಮೌಖಿಕ ಹೇಳಿಕೆ ಸಾರಾಂಶದ ಮೇರೆಗೆ
ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಗೊಳ್ಳಲಾಗಿದೆ.