Police Bhavan Kalaburagi

Police Bhavan Kalaburagi

Tuesday, May 11, 2021

BIDAR DISTRICT DAILY CRIME UPDATE 11-05-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 11-05-2021

 

ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 73/2021, ಕಲಂ. 32, 34 ಕೆ. ಕಾಯ್ದೆ :-

ದಿನಾಂಕ 10-05-2021 ರಂದು ಲಾಡಗೇರಿಯಲ್ಲಿ ಲಾಡಗೇರಿ ಕುಂಬಾರವಾಡಾ ರೋಡಿನ ಬದಿಯಲ್ಲಿ ಒಬ್ಬ ವ್ಯಕ್ತಿ ಅನಧಿಕೃತವಾಗಿ ಸರಾಯಿ ಮಾರಾಟ ಮಾಡುತ್ತಿದ್ದ ಬಗ್ಗೆ ಜಗದೀಶ ನಾಯ್ಕ ಪಿ.ಎಸ್. ಗಾಂಧಿಗಂಜ ಪೊಲೀಸ್ ಠಾಣೆ ಬೀದರ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಲಾಡಗೇರಿಗೆ ಹೋಗಿ ಅನಧಿಕೃತವಾಗಿ ಸರಾಯಿ ಮಾರಾಟ ಮಾಡುತ್ತಿದ್ದ ಆರೋಪಿ ಬಿರ್ಜು ತಂದೆ ವರಂಗಲ್ ವಯ: 39 ವರ್ಷ, ಜಾತಿ: ಮಾಂಗರವಾಡಿ, ಸಾ: ಲಾಡಗೇರಿ, ಬೀದರ ಈತನ ಮೇಲೆ ದಾಳಿ ಮಾಡಿ ಆತನ ವಶದಲ್ಲಿದ್ದ 1) 180 ಎಂ.ಎಲ್ ವುಳ್ಳ 41 ಆಫೀಸರ್ಸ್ಚಾಯಿಸ್ ವಿಸ್ಕಿ ಪ್ಯಾಕೇಟಗಳು .ಕಿ 4100/- ರೂ., 2)  180 ಎಂಎಲ್ ವುಳ್ಳ 8 ಪಿ.ಎಂ ವಿಸ್ಕಿ 5 ಪ್ಯಾಕೇಟಗಳು .ಕಿ 450/- ರೂ., 3) 650 ಎಂ.ಎಲ್ ವುಳ್ಳ 24 ಕಿಂಗ್ ಫೀಶರ ಸ್ಟ್ರಾಂಗ್ ಬಿಯರ್ ಬಾಟಲಗಳು .ಕಿ 3600/- ರೂ., 4) 650 ಎಂ.ಎಲ್ ವುಳ್ಳ 12 ಕಿಂಗ್ ಫೀಶರ ಪ್ರಿಮಿಯಂ ಬಿಯರ್ ಬಾಟಲಗಳು .ಕಿ 1800/- ರೂ. ನೇದವುಗಳನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 74/2021, ಕಲಂ. 394 ಐಪಿಸಿ:-

ದಿನಾಂಕ 09-05-2021 ರಂದು ಫಿರ್ಯಾದಿ ಅಭೀಶೆಕ ತಂದೆ ಸೂರ್ಯಕಾಂತ ಮುಸ್ಕೆನೋರ ವಯ: 30 ವರ್ಷ, ಜಾತಿ: ಕ್ರಿಶ್ಚನ, ಸಾ: ಪ್ಲಾಟ ನಂ. 04 ಜೀಯೋನ ಕಾಲೋನಿ ಕುಂಬಾರವಾಡಾ ಬೀದರ ರವರ ಸಂಭಂದಿಯವರಾದ ರಾಜಕುಮಾರ ತಂದೆ ಚಂದ್ರಕಾಂತ ಸಾ: ಎಡೇನ ಕಾಲೋನಿ ಮಂಗಲಪೇಟ ಬೀದರ ಇವರ ಮೋಬೈಲ ಕಳೆದು ಹೊಗಿದ್ದು ಸದರಿ ಮೋಬೈಲನ್ನು ಹುಡುಕುತ್ತಾ ಫಿರ್ಯಾದಿಯು ದಿನಾಂಕ 09-05-2021 ರಂದು 2030 ಗಂಟೆಗೆ ಬೀದರ ಗೌಳಿವಾಡಾ ಹತ್ತಿರ ಹೋದಾಗ ಅಲ್ಲಿ 04 ಜನರು ಕತ್ತಲಲ್ಲಿ ನಿಂತ್ತಿದ್ದು ಅವರಿಗೆ ನೊಡಿ ಫಿರ್ಯಾದಿಯು ರಾಜಕುಮಾರ ರವರ ಕಳೆದು ಹೋದ ಮೋಬೈಲ ಬಗ್ಗೆ ವಿಚಾರಿಸಲು ಸದರಿ 04 ಜನರು ನನಗೆ ನಿನ್ನ ಹತ್ತಿರ ಯಾವ ಮೋಬೈಲ ಇದೆ ತೋರಿಸು ಅಂತಾ ಅಂದು ಸದರಿ 04 ಜನರು ಕೂಡಿ ಬಡಿಗೆಯಿಂದ ಫಿರ್ಯಾದಿಯ ಕೈ ಮತ್ತು ಬೆನ್ನಿಗೆ ಹಾಗೂ ಎರಡು ಕಾಲುಗಳಿಗೆ ಮತ್ತು ಎರಡು ಭುಜಗಳಿಗೆ ಹೊಡೆದು ಫಿರ್ಯಾದಿಯವರ ಹತ್ತಿರವಿದ್ದ ಓನಪ್ಲಸ 8 ಟಿ ಮೋಬೈಲ್ ಕಿಮತ್ತು 45,000/- ರೂ. ಮತ್ತು ಪರ್ಸಿನಲ್ಲಿದ್ದ ನಗದು ಹಣ 19,500/- ರೂ ಮತ್ತು ಬ್ಲೂಟುಥ ಎರಫೋನ ಎರಡು ಜೊತೆ .ಕಿ 2000/- ರೂ. ಹೀಗೆ ಒಟ್ಟು 66,500/- ರೂ. ನೇದವುಗಳನ್ನು ಸದರಿ 04 ಜನರು ಫಿರ್ಯಾದಿಗೆ ಹೊಡೆದು ಕಿತ್ತುಕೊಂಡು ಹೋಗಿರುತ್ತಾರೆ, ಫಿರ್ಯಾದಿಗೆ ಹೊಡೆದು ಗಾಯಪಡಿಸಿ ಮೊಬೈಲ್ ತ್ತು ನಗದು ಹಣ ಕಿತ್ತುಕೊಂಡು ಹೋದ 04 ಜನರಲ್ಲಿ ಒಬ್ಬನನ್ನು ಫಿರ್ಯಾದಿಯು ಗುರ್ತಿಸಿದ್ದು ಆತನ ಹೆಸರು ಪ್ರದೀಪ ಸಾ: ಕ್ರಾಂತಿ ಗಣೇಶ ಹತ್ತಿರ ಬೀದರ ಇರುತ್ತಾನೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 10-05-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಕೆ ಕೈಗೊಳ್ಳಲಾಗಿದೆ.

 

ಹುಮನಾಬಾದ ಪೊಲೀಸ್ ಠಾಣೆ ಅಪರಾಧ ಸಂ. 83/2021, ಕಲಂ. 457, 380 ಐಪಿಸಿ :-

ಫಿರ್ಯಾದಿ ಧನಶೆಟ್ಟಿ ತಂದೆ ಸಂಗಶೆಟ್ಟಿ ಸಾ: ಎನ.ಜಿ.ಓ ಕಾಲೋನಿ ಹುಮನಾಬಾದ ರವರಿಗೆ ಕಾಯಿಲೆ ಬಂದು ಹುಷಾರ ಇಲ್ಲದ ದಿನಾಂಕ 13-04-2021 ರಂದು ಕಲಬುರಗಿಗೆ ಹೋಗಿ ದವಾಖಾನೆಯಲ್ಲಿ ದಾಖಲಾದಾಗ ಯಾರೋ ಅಪರಿಚಿತ ಕಳ್ಳರು ಫಿರ್ಯಾದಿಯವರ ಮನೆಯ ಮುಖ್ಯ ದ್ವಾರದ ಕೊಂಡಿ ಮತ್ತು ಕೀಲಿ ಮುರಿದು ಮನೆಯಲ್ಲಿ ಅಲಮಾರಾದಲ್ಲಿದ್ದ 1) ತಾಟು-1, ತಂಬಿಗೆ-1, 2) ಪ್ಲೆಟ-2, 3) ಗ್ಲಾಸಗಳು-3, 4) ಬಟ್ಟಲುಗಳು-3, 5) ಚಮಚಗಳು-3, 6) ಕುಂಕುಮ ಡಬ್ಬಿಗಳು-6, 7) ಆರುತಿ ಸೇಟ-2, 7) ಕಾಲುಂಗರ-4, 8) ಗಟ್ಟಿ ಬೆಳ್ಳಿ 10 ತೋಲೆ, ಹೀಗೆ ಒಟ್ಟು 2.25 ಕೆ.ಜಿ ಬೆಳ್ಳಿಯ ಸಾಮಾನುಗಳು ಹಾಗು 8) ಬಂಗಾರದ ತಾಳಿಗಳು-2, 9) ಬಂಗಾರದ ಗುಂಡುಗಳು-2, 10) ಮೂಗಿನಲ್ಲಿರುವ ನತ್ತು-1, 11) ಮೂಗಿನ ಕಡ್ಡಿಗಳು-4, ಒಟ್ಟು 7 ಗ್ರಾಂ. ಬಂಗಾರ ಮತ್ತು 10,000/- ರೂ. ನಗದು ಹಣ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 10-05-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಮುಡಬಿ ಪೊಲೀಸ್ ಠಾಣೆ ಅಪರಾಧ ಸಂ. 32/2021, ಕಲಂ. 498(), 302, 304(ಬಿ) ಜೊತೆ 34 ಐಪಿಸಿ :-

ಫಿರ್ಯಾದಿ ಕಲ್ಯಾಣಿ ತಂದೆ ಬಸವಣಪ್ಪಾ ಮೂಲಗೆ ಸಾ: ಕಣ್ಣೂರ ಗ್ರಾಮ, ತಾ: ಕಮಲಾಪೂರ ರವರ ಮಗಳಾದ ಸವಿತಾ ಇವಳಿಗೆ 2017 ನೇ ಸಾಲಿನಲ್ಲಿ ಬಾಗ ಹಿಪ್ಪರಗಾ ಗ್ರಾಮದ ಗುರುನಾಥ ತಂದೆ ವೀರಣ್ಣ ಮಲ್ಕಣಿ ಈತನೊಂದಿಗೆ ಸಂಪ್ರಾದಾಯಿಕವಾಗಿ 50,000/- ರೂ ಹಣ, ಎರಡು ತೋಲೆ ಬಂಗಾರ ವರದಕ್ಷೀಣಿ ರೂಪದಲ್ಲಿ ಕೊಟ್ಟು ಮದುವೆ ಮಾಡಿ ಕೊಟ್ಟಿದ್ದು, ಮದುವೆಯಾಗಿ ಕೆಲವು ತಿಂಗಳು ಕಳೆದ ನಂತರ ಮಗಳು ಸವಿತಾ  ಇವಳಿಗೆ ಗಂಡ ಗುರುನಾಥ ಈತನು ನನಗೆ ವರದಕ್ಷಿಣೆ, ಬಂಗಾರ ಬಹಳ ಕಡಿಮೆ ಕೊಟ್ಟು ನಿಮ್ಮ ತಂದೆ ತಾಯಿ ಮದುವೆ ಮಾಡಿ ಕೊಟ್ಟಿರುತ್ತಾರೆ, ನೀನು ಇನ್ನಷ್ಟು ಹಣ ಮತ್ತು ಬಂಗಾರ ನಿನ್ನ ತವರು ಮನೆಯಿಂದ ತರದಿದ್ದರೆ ನಿನಗೆ ಇಟ್ಟುಕೊಳ್ಳುವುದಿಲ್ಲಾ ಅಂತಾ ಕೀರುಕುಳ ನೀಡುತ್ತಿದ್ದನು, ಅವನು ದುಬೈಗೆ ಕೂಲಿ ಕೆಲಸಕ್ಕೆ ಹೋದಾಗ ಕರೆ ಮಾಡಿ ಮಗಳಿಗೆ ತವರು ಮನೆಯಿಂದ ಹಣ ತರುವಂತೆ ಪಿಡುಸುತ್ತಿದ್ದನು, ಅತ್ತೆ ಸಿದ್ದಮ್ಮಾ ಗಂಡ ವೀರಣ್ಣ ಮಲ್ಕಣಿ ಇವಳು ತನ್ನ ಮಗ ಹೇಳಿದಂತೆ ಕೇಳು ನಿನ್ನ ತವರು ಮನೆಯಿಂದ ಹಣ ಬಂಗಾರ ತಂದು ಕೊಡು ಇಲ್ಲವಾದಲ್ಲಿ ನನ್ನ ಮಗನಿಗೆ ಇನ್ನೋಂದು ಮದುವೆ ಮಾಡಿ ಹಣ ಬಂಗಾರ ಹೆಚ್ಚಿಗೆ ತೆಗೆದುಕೊಳ್ಳುತ್ತೆವೆ ಅಂತ ಮಾನಸಿಕ ಕಿರುಕುಳ ನೀಡುತ್ತಿದ್ದಳು, ಮಾವನಾದ ವೀರಣ್ಣ ತಂದೆ ಗುರಪ್ಪಾ ಇವನು ಮಗಳಿಗೆ ನೀನು ಸರಿಯಾಗಿ ಅಡುಗೆ ಮಾಡುವುದಿಲ್ಲಾ, ಮದುವೆ ಸಮಯದಲ್ಲಿ ವರದಕ್ಷಿಣೆ ಬಂಗಾರ ಬಹಳ ಕಮ್ಮಿಕೊಟ್ಟಿರುತ್ತಾರೆ, ನಿಮ್ಮ ತಂದೆ ತಾಯಿ ನೀನು ನಿನ್ನ ತವರು ಮನೆಯಿಂದ ಹೆಚ್ಚಿಗೆ ಹಣ ಬಂಗಾರ ತೆಗೆದುಕೊಂಡು ಬಂದರಷ್ಟೆ ನಿನಗೆ ಈ ಮನೆಯಲ್ಲಿ ಜಾಗ ಅಂತ ಕಿರುಕುಳ ನೀಡುತ್ತಿದ್ದನು, ಹೀಗಿರುವಾಗ ದಿನಾಂಕ 10-05-2021 ರಂದು ಬಾಗ್ ಹಿಪ್ಪರಗಾ ಗ್ರಾಮದ ಬಸವರಾಜ ತಂದೆ  ಜಗದೀಶ ಪಾಟೀಲ ಇವರು ಫಿರ್ಯಾದಿಯವರ ಮಗ ಗಜೇಂದ್ರ ಇತನಿಗೆ ಕರೆ ಮಾಡಿ ನಿಮ್ಮ ತಂಗಿ ಸವಿತಾ ಇವಳು ತೀರಿ ಕೊಂಡಿರುತ್ತಾಳೆ ಅಂತ ತಿಳಿಸಿದಾಗ, ಫಿರ್ಯಾದಿಯು ತನ್ನ ಹೆಂಡತಿ, ಮಕ್ಕಳೊಂದಿಗೆ ಕೂಡಿಕೊಂಡು ಬಾಗ್ ಹಿಪ್ಪರಗಾ ಗ್ರಾಮಕ್ಕೆ ಬಂದು ನೋಡಲು ಮಗಳು ತಿರಿಕೊಂಡಿದ್ದು ನಿಜವಿರುತ್ತದೆ, ಕುತ್ತಿಗೆಗೆ ಗಾಯ ವಿರುತ್ತದೆ, ಫಿರ್ಯಾದಿಯವರ ಮಗಳಿಗೆ ಆರೋಪಿತರಾದ 1) ಗಂಡನಾದ ಗುರುನಾಥ ತಂದೆ ವೀರಣ್ಣ ಮಲಕಣೆ, 2) ಮಾವ ವೀರಣ್ಣ ತಂದೆ ಗುರಪ್ಪ ಮಲಕಣೆ ಹಾಗೂ 3) ಅತ್ತೆ ಸಿದ್ದಮ್ಮ ಗಂಡ ವೀರಣ್ಣ ಮಲಕಣೆ ಎಲ್ಲರು ಸಾ: ಬಾಗಹಿಪ್ಪರಗಾ ಇವರೆಲ್ಲರೂ ಕೂಡಿ ತವರು ಮನೆಯಿಂದ ಬಂಗಾರ ವಡವೆ ತರುವಂತೆ ಒತ್ತಾಯಿಸಿ ಕೀರುಕುಳ ನೀಡಿ ಕುತ್ತಿಗೆಗೆ ನೇಣು ಬಿಗಿದು ಕೋಲೆ ಮಾಡಿ ನಡು ಮನೆಯಲ್ಲಿ ಮಲಗಿಸಿ ಓಡಿ ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಅರ್ಜಿಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.