Police Bhavan Kalaburagi

Police Bhavan Kalaburagi

Friday, April 10, 2020

BIDAR DISTRICT DAILY CRIME UPDATE 10-04-2020ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 10-04-2020

ಚಿಂತಾಕಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ  16/2020 ಕಲಂ 32,34,38() ಕೆ.ಇ. ಕಾಯ್ದೆ :-

 ದಿ: 09-04-2020 ರಂದು ಪಿಎಸ್ಐ ರವರು ಠಾಣೆಯಲ್ಲಿರುವಾಗ ಚಿಂತಾಕಿ ಬೆಲ್ದಾಳ ರೋಡಿನ ಅಶೋಕ ನಗರ ತಾಂಡಾ ಕ್ರಾಸ್ ಹತ್ತಿರ ಒಬ್ಬ ವ್ಯಕ್ತಿ ಒಂದು ಬಿಳಿ ಹೊಂಡಾ ಅಕ್ಟಿವಾದಲ್ಲಿ ಕಳ್ಳ ಭಟ್ಟಿ ಸರಾಯಿ ಮಾರಾಟ ಮಾಡಲು ಹೋಗುತ್ತಿದ್ದಾನೆ ಅಂತಾ ಮಾಹಿತಿ ಬಂದಿದ ಮೇರೆಗೆ ಸಿಬ್ಬಂದಿಯೊಂದಿಗೆ ಹೋಗಿ ದಾಳಿ ಮಾಡಿ ರವಿ ತಂದೆ ಶಂಕರ ಚವ್ಹಾಣ ವಯ: 26 ವರ್ಷ ಸಾ: ಅಶೋಕನಗರ ಥಾಂಡಾ ಇತನನ್ನು ಹಿಡಿದು ಇತನ ಹತ್ತಿರವಿದ್ದ 4 ಲೀ. ಕಳ್ಳಭಟ್ಟಿ ಸರಾಯಿ ಅಂ.ಕಿ. 400/- ಹಾಗೂ ಅವನ ಹತ್ತಿರವಿದ್ದ ನಗದು ರೂ.500 ಹಾಗೂ ದ್ವಿಚಕ್ರ ವಾಹನ ಸಂಖ್ಯೆ ಟಿಎಸ್36/ಬಿ-2649 .ಕಿ. 20,000/- ನೇದ್ದನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬಸವ ಕಲ್ಯಾಣ ನಗರ ಠಾಣೆ ಅಪರಾಧ ಸಂಖ್ಯೆ 44/2020 ಕಲಂ 171 ಜೊತೆ 34 ಐಪಿಸಿ ಮತ್ತು ಕಲಂ 5 ಎಂಬಲಮ್ ನೆಮ್ಸ್ (ಪ್ರಿವೆನ್ಷನ್ ಆಫ್ ಇಂಪ್ರಾಪರ್ ಯುಸ್) ಕಾಯ್ದೆ 1950: -

ದಿನಾಂಕ: 09-04-2020 ರಂದು ಪಿಎಸ್ಐ ಸುನಿಲ ಕುಮಾರ ರವರು ಬಸವಕಲ್ಯಾಣ ನಗರದಲ್ಲಿ ಪೆಟ್ರೋಲಿಂಗ್ ಕರ್ತವ್ಯ ನಿರ್ವಹಿಸುತ್ತಿರುವಾಗ ಹರಳಯ್ಯಾ ಚೌಕ ಹತ್ತಿರ ಅಂದಾಜು ಸಮಯ 1100 ಗಂಟೆಗೆ ಜಿಪ್ಪನ್ನು ನಿಲ್ಲಿಸಿ ವಾಹನ ಪರೀಶಿಲನೆ ಮಾಡುವಾಗ ತ್ರಿಪರಾಂತ ಕಡೆಯಿಂದ ಒಂದು ಟೋಯಾಟೋ ಫಾರ್ಚುನರ್ ಕಾರ ನಂ. ಕೆಎ-56-ಎಮ್=8200 ನೇದ್ದನ್ನು ಬರುವುದನ್ನು ನೋಡಿ ಕಾರ ಚಾಲಕನನ್ನು ನಿಲ್ಲಿಸುವಂತೆ ಕೈ ಸನ್ನೆ ಮಾಡಿದಾಗ ಕಾರ ಚಾಲಕ ನಿಲ್ಲಿಸಿದಾಗ ಕಾರ ಪರಿಶಿಲಿಸಿದಾಗ ಕಾರಿನ ಮುಂದಿನ ಭಾಗದಲ್ಲಿ ಗ್ಲಾಸ್ ಮೇಲೆ ಪೊಲೀಸ್ ಎಂದು ಬರೆದಿರುವ ಲೆಬಲನ್ನು ಮತ್ತು ಸೊಲಾಪೂರ ಆರ್.ಟಿ.ಓ. ರವರು ಅವಶ್ಯಕ ವಸ್ತುಗಳನ್ನು ಸರಬರಾಜು ಮಾಡುವ ವಾಹನ ದು ಪ್ರಮಾಣ ಪತ್ರ ನಿಡಿದ್ದನ್ನು ಅಂಟಿಸಿದ್ದು ಇರುತ್ತದೆ. ಕಾರ ಚಾಲನ ಹೆಸರು ಸಂಜಯ ತಂದೆ  ಹರಿಬಾ ಜಾಧವ ವಯ: 50 ವರ್ಷ, ಸಾ: ದತ್ತಾ ನಿವಾಸ ಅಂಬಾಜೊಗಿ ರಸ್ತೆ ರೆಣುಕಾ ನಗರ  ಲಾತೂರ ಸದ್ಯ ಬ.ಕಲ್ಯಾಣ ಅಂತಾ ತಿಳಿಸಿದ್ದು ಕಾರಿನ ಮೂಂಭಾಗಕ್ಕೆ ಯಾವುದೆ ಪೊಲೀಸ್ ಅಧಿಕಾರಿ ಯಾಗಿರದೆ   ಅನವಾಶ್ಯಕವಾಗಿ ಲೆಬಲ್ ಹಾಗೂ ಸೋಲಾಪೂರ್ ಆರ್.ಟಿ.ಓ. ರವರಿಂದ ಸುಳ್ಳು ಅವಶ್ಯಕತೆ ವಸ್ತುಗಳ ಸರಬರಾಜು ವಾಹನ ಎಂದು ವಾಹನ ಪ್ರಮಾಣ ಪತ್ರ ಪಡೆದು ಅಂಟಿಸಿ ಬ.ಕಲ್ಯಾಣ ನಗರದಲ್ಲಿ ಅನಾವಶ್ಯಕವಾಗಿ ಕಾರು ಚಲಾಯಿಸಿರುತ್ತಾರೆ. ಆದ್ದರಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.