Police Bhavan Kalaburagi

Police Bhavan Kalaburagi

Friday, October 16, 2020

BIDAR DISTRICT DAILY CRIME UPDATE 16-10-2020

 

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 16-10-2020

ಮಾರ್ಕೇಟ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 70/2020 379 ಐಪಿಸಿ :-

ದಿನಾಂಕ:01-10-2020 ರಂದು ಬೀದರ ನಗರದ ಶಹಾಪುರ ಗೇಟ ಹತ್ತಿರ ತನ್ನ ದ್ವೀಚಕ್ರ ವಾಹನ ಸಂ:ಕೆ-38 ಡಬ್ಲೂ-3937 ಅಕಿ:35000/-ರೂಪಾಯಿಗಳ ಬೆಲೆಬಾಳುವದನ್ನು ಶಹಾಪುರ ಗೇಟ ಹತ್ತಿರ ಇರುವ ಸಕರ್ಾರಿ ಶಾಲೆಯ ಮುಂದೆ ನಿಲ್ಲಿಸಿ ಶಾಲೆಯ ಎದುರುಗಡೆ ಇರುವ ಹೊಟೆಲದಲ್ಲಿ ಹೋಗಿ ಚಹಾ ಕುಡಿದು ಮರಳಿ ಬಂದು ನೋಡಿದಾಗ ದ್ವೀಚಕ್ರ ವಾಹನ ಇರಲಿಲ್ಲಾ  ಎಲ್ಲಾ ಕಡೆ ಹುಡುಕಾಡಿದರು ಸಹ  ದ್ವೀಚಕ್ರ ವಾಹನ ಸಿಕ್ಕಿರುವದಿಲ್ಲಾ ಯಾರೋ ಅಪರಿಚಿತ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 205/2020 ಕಲಂ 78(3) ಕೆ.ಪಿ ಕಾಯ್ದೆ :-

 ದಿನಾಂಕ 15/10/2020 ರಂದು 13:30 ಗಂಟೆಗೆ ಠಾಣೆಯಲ್ಲಿದ್ದಾಗ ಭಾಲ್ಕಿಯ ಪಾಪವ್ವಾ ನಗರದಲ್ಲಿರುವ ಸಾರ್ವಜನೀಕ ಶೌಚಾಲಯದ ಹತ್ತಿರ ಇಬ್ಬರು ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಕುಳಿತುಕೊಂಡು 1 ರೂ ಗೆ 80 ರೂ ಕೊಡುತ್ತೆವೆ ಇದು ಬಾಂಬೆ ಮಟಕಾ ಇರುತ್ತದೆ ಅಂತಾ ಹೇಳಿ ಜನರಿಗೆ ಕೂಗಿ ಕೂಗಿ ಕರೆದು ಅವರಿಂದ ಹಣ ಪಡೆದು ಮಟಕಾ ನಂಬರಿನ ಚೀಟಿ ಬರೆದುಕೊಡುತ್ತಿದ್ದಾನೆ ಅಂತಾ ಖಚಿತ ಮಾಹಿತಿ ಬಂದ ಮೇರೆಗೆ ಸಿಬ್ಬಂದಿಯೊಂದಿಗೆ  ಹೋಗಿ ದಾಳಿ ಮಾಡಿ 1] ವಿಜಯ ತಂದೆ ಪಾಪಯ್ಯಾ ಕಾಸಲೆ ಸಾ: ಪಾಪವ್ವಾ ನಗರ ಭಾಲ್ಕಿ 2] ಅಜಯ ತಂದೆ ಸಂಜೀವಕುಮಾರ ಕಪ್ಪೇಕೆರೆ ಸಾ:ಇಂದಿರಾನಗರ ಭಾಲ್ಕಿ ಅಂತಾ ತಿಳಿಸಿದ್ದು ಸದರಿಯವರ ವಶದಿಂದ 1) ನಗದು ಹಣ 5,200 ರೂ 2) 8 ಮಟಕಾ ಚೀಟಿಗಳು 3) ಎರಡು ಬಾಲ ಪೆನ್ನ ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಧನ್ನೂರಾ ಪೊಲೀಸ್ ಠಾಣೆ ಯು.ಡಿ.ಆರ್. ಸಂಖ್ಯೆ 24/2020 ಕಲಂ 174 ಸಿಆರ್.ಪಿ.ಸಿ. :-

ದಿನಾಂಕ: 15/10/2020 ರಂದು ಮದ್ಯಾಹ್ನ 3 ಗಂಟೆ ಸುಮಾರಿಗೆ ಫಿರ್ಯಾದಿ ಶಿವರಾಜ ತಂದೆ ಗ್ಯಾನಪ್ಪ ಮಾಸಿಮಾಡೆ ವಯ: 46 ವರ್ಷ  ಸಾ: ನಮದಾಪೂರವಾಡಿ ರವರ ಮಗ ಹರ್ಷವರ್ಧನ [ಸುಮಿತ] ಇತನು ಮತ್ತು  ಆಕಾಶ ಹಾಗು ನೀಲಮನಳ್ಳಿ ಗ್ರಾಮದ ರಘುಪತಿ ತಂದೆ ಕಾಶಿನಾಥ ಇವರು ನೀಲಮನಳ್ಳಿ ಗ್ರಾಮ ಶಿವಾರದಲ್ಲಿ ಆಕಳು ಮೈಸಲು ಹೊಗಿ ಅರಣ್ಯ ಪ್ರದೇಶದಲ್ಲಿ ಕಲ್ಲು ಕೊರೆದ ಕಲ್ಲಿನ ಖ್ವಾರಿಯಲ್ಲಿ ಮಳೆ ನೀರು ಸಂಗ್ರವಾಗಿದ್ದು ಅದರಲ್ಲಿ ಈಜಲು ಹೊಗಿದಾಗಿ ಹರ್ಷವರ್ಧನ ಸುಮಿತ ವಯ: 14 ವರ್ಷ ಇತನು ನೀರಿನಲ್ಲಿ ಮುಳಗಿ ಮೃತಪಟ್ಟಿರುತ್ತಾನೆ.  ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.