Police Bhavan Kalaburagi

Police Bhavan Kalaburagi

Thursday, March 19, 2020

BIDAR DISTRICT DAILY CRIME UPDATE 19-03-2020


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 19-03-2020

ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 47/2020, ಕಲಂ. 505 (1) (ಬಿ) ಐಪಿಸಿ :-
ದಿನಾಂಕ 18-03-2020 ರಂದು ವಿ.ಜಿ ರೆಡ್ಡಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೀದರ ರವರು ಠಾಣೆಗೆ ಹಾಜರಾಗಿ ದೂರು ಸಲ್ಲಿಸಿದ್ದು ಅದರ ಸಾರಾಂಶವೇನೆಂದರೆ ಮೋಬೈನಲ್ಲಿ ಬೀದರ ಲೆಟೆಸ್ಟ ನ್ಯೂಸ ಗ್ರುಪ ಇದ್ದು ಅದರಲ್ಲಿ  ಶಾಹಿದ ಅನ್ನುವ ವಾಟ್ಸಪ ಗ್ರುಪನ್ನು ರಚಿಸಿದ್ದು ಅದರಲ್ಲಿ ನಾನು ಕೂಡಾ ಸದಸ್ಯನಿದ್ದು ಹಾಗು ಬೀದರನ ಇತರೆ ಅಧಿಕಾರಿಗಳು ಕೂಡಾ ಸದಸ್ಯರಾಗಿರುತ್ತಾರೆ, ಕರೋನಾ ಸೊಂಕಿನ ಬಗ್ಗೆ ಈಗಾಗಲೆ ಜಿಲ್ಲಾ ಮಟ್ಟದಲ್ಲಿ ಮತ್ತು ಪ್ರತಿಯೊಂದು ತಾಲೂಕಾ ಮಟ್ಟದಲ್ಲಿ ಸಭೆಗಳನ್ನು ಮಾಡಿ ಯಾವುದೇ ಸಾರ್ವಜನಿಕರು ಸುಳ್ಳು ಸುದ್ದಿಗಳನ್ನು ಹಬ್ಬಿಸಬಾರದೆಂದು ಪತ್ರಿಕೆಗಳಲ್ಲಿ ಹಾಗೂ ವಾಟ್ಸಪಗಳ ಮುಖಾಂತರ ಕೂಡಾ ತಿಳುವಳಿಕೆ ನೀಡಿದ್ದು ಇರುತ್ತದೆ ಆದರು ಸಹ ದಿನಾಂಕ 18-3-2020 ರಂದು 1439 ಗಂಟೆಯ ಸಮಯದಲ್ಲಿ ನಾನು ನನ್ನ ವಾಟ್ಸಪನ ಗ್ರುಪನ್ನು ಪರಿಶಿಲಿಸಿದಾಗ ಬೀದರ ಲೆಟೆಸ್ಟ ನ್ಯೂಸ ಗ್ರುಪನ ಸದಸ್ಯನಾದ ಮಹ್ಮದ ಅರ್ಶದಖಾನ ಇತನ ಮೋಬೈಲ್ ನಂ. 9986809652 ನೇದರಿಂದ Breaking News A man from Bidar City detected as positive for covid -19 is on the loose and ran away from Govt Hospital every one is requested to stay indoor and not leave unless, If a emergency suspect is on the loose from Bidar Govt Hospital towards Shivangat Bidar is currently on red alert please safe and take care of your loved one ಅಂತಾ ಸುಳ್ಳು ಸಂದೇಶ ಕಳುಹಿಸಿ ಸಾರ್ವಜನಿಕರಲ್ಲಿ ತಪ್ಪು ಕಲ್ಪನೆ ಮೂಡಿಸುವ ಉದ್ದೇಶದಿಂದ  ಭಯ ಮತ್ತು ಆತಂಕ ಮೂಡಿಸುವಂತೆ ಮಾಡಿದು್ದ ಇರುತ್ತದೆ, ನಂತರ ಬೀದರ ಗ್ರುಪ ಅಡ್ಮಿನಾದ ಮಹ್ಮದ ಮಹ್ಮದ ಮಹೆಬೂಬ ಇತನು ನನ್ನ ಕಛೇರಿಗೆ ಬಂದು ಆತನ ಮೋಬೈಲನ್ನು ತೊರಿಸದ್ದು ಅದರಲ್ಲಿ ಅಹ್ಮದ ಮುಜಿಬೋದ್ದಿನ ಇತನ ಮೋಬೈಲ್ ನಂ. 9738349741 ನೇದರಿಂದ ಮೇಲೆ ಇಂಗಿಷ್ಲನಲ್ಲಿ ನಮೂದಿಸಿದ ಸಂದೇಶವನ್ನು ಫಾರವರ್ಡ ಮಾಡಿದ್ದು ಇದರಲ್ಲಿ ಮಹ್ಮದ ಆರ್ಶದ ಇತನು ಸಹ ಬೀದರ ಗ್ರುಪನಲ್ಲಿ ಸದಸ್ಯನಿದ್ದು ಅದೇ ಸಂದೇಶವನ್ನು ಬೀದರ ಲೆಟೆಸ್ಟ ನ್ಯೂಸಗೆ ಫಾರವರ್ಡ ಮಾಡಿದ್ದು ಕಾರಣ ಮಹ್ಮದ ಅರ್ಶದ ಮತ್ತು ಮಹ್ಮದ ಮುಜಿಬೋದ್ದಿನ ಇವರುಗಳ ವಿರುದ್ದ ಸೂಕ್ತ ಕಾನೂನ ಕ್ರಮ ಜರೂಗಿಸಲು ವಿನಂತಿ ಇದೆ ಅಂತಾ ಸಲ್ಲಿಸಿದ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬೇಮಳಖೇಡಾ ಪೊಲೀಸ್ ಠಾಣೆ ಅಪರಾಧ ಸಂ. 09/2020, ಕಲಂ. 78(3) ಕೆ.ಪಿ ಕಾಯ್ದೆ :-
ದಿನಾಂಕ 18-03-2020 ರಂದು ಕಾರಪಾಕಪಳ್ಳಿ ಗ್ರಾಮದಲ್ಲಿನ ಬಸ್ ನಿಲ್ದಾಣದ ಹತ್ತಿರ ಒಬ್ಬ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಎಂಬ ಜೂಜಾಟ ನಡೆಸುತ್ತಿದ್ದಾನೆ ಅಂತಾ ಗಂಗಮ್ಮಾ ಪಿಎಸ್ಐ ಸಾ: ಬೇಮಳಖೇಡಾ ಪೊಲೀಸ್ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಕಾರಪಾಕಪಳ್ಳಿ ಗ್ರಾಮಕ್ಕೆ ಹೋಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹತ್ತಿರ ಹೋಗಿ ಬಸ್ ನಿಲ್ದಾಣದ ಹಿಂದೆ ಮರೆಯಲ್ಲಿ ನಿಂತು ನೋಡಲು ಅಲ್ಲಿ ಆರೋಪಿ ಮಲ್ಲಪ್ಪಾ ತಂದೆ ಸುಬಣ್ಣಾ ಫುಲ್ಲಾ ವಯ: 23 ವರ್ಷ, ಜಾತಿ: ಎಸ್.ಟಿ ಗೊಂಡ, ಸಾ: ಕಾರಪಾಕಪಳ್ಳಿ ಇತನು ಬಸ್ ನಿಲ್ದಾಣದ ಎದುರಿಗೆ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಒಂದು ರೂಪಾಯಿಗೆ 100/- ರೂಪಾಯಿಗಳು ಕೊಡುತ್ತೇನೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಳ್ಳುತ್ತಿರುವುದನ್ನು ನೊಡಿ ಖಚಿತ ಪಡಿಸಿಕೊಂಡು ಪಿಎಸ್ಐ ರವರು ತಮ್ಮ ಸಿಬ್ಬಂದಿಯವರ ಜೊತೆಯಲ್ಲಿ ಸದರಿ ಆರೋಪಿತನ ಮೇಲೆ ದಾಳಿ ಮಾಡಿ ಹಿಡಿದು ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂದಿಸಿದ ನಗದು ಹಣ 1780/- ರೂಪಾಯಿಗಳು ಮತ್ತು ಮಟಕಾ ನಂಬರ್ ಬರೆದ 2 ಮಟಕಾ ಚೀಟಿ, ಹಾಗು ಒಂದು ಬಾಲ ಪೆನ್ನ ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಸಂತಪೂರ ಪೊಲೀಸ್ ಠಾಣೆ ಅಪರಾಧ ಸಂ. 21/2020, ಕಲಂ. 32, 34 ಕೆ.ಇ ಕಾಯ್ದೆ :-
ದಿನಾಂಕ 18-03-2020 ರಂದು ವಡಗಾಂವ ಗ್ರಾಮದ ಹತ್ತಿರ ಇರುವ ಜೈಭವಾನಿ ಧಾಬಾದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ ಅಂತ ಟಿ.ಆರ್ ರಾಘವೆಂದ್ರ ಸಿಪಿಐ ಔರಾದ(ಬಿ) ರವರಿಗೆ ಖಚಿತ ಮಾಹಿತಿ ಬಂದ ಸಿಪಿಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ತಮ್ಮ ಸಿಬ್ಬಂದಿಯವರೊಡನೆ ಜೈಭವಾನಿ ಧಾಬಾದ ಹತ್ತಿರ ಹೋಗಿ ಮರೆಯಾಗಿ ನೋಡಲು ಅಲ್ಲಿ ಆರೋಪಿ ನಾಗಶೇಟ್ಟಿ ತಂದೆ ಗಣಪತರಾವ ಸಿದ್ದೆಶ್ವರೆ ವಯ: 59 ವರ್ಷ, ಜಾತಿ: ಲಿಂಗಾಯತ, ಸಾ: ವಡಗಾಂವ (ದೆ) ತನು ತನ್ನ ಜೈಭವಾನಿ ಧಾಬಾದ ಕೌಂಟರ ಹತ್ತಿರ ಅಕ್ರಮವಾಗಿ ಮದ್ಯ ಇಟ್ಟು ಮಾರಾಮಾಡುವುದನ್ನು ಕಂಡು ಖಚಿತ ಪಡಿಸಿಕೊಂಡು ಅವನ ಮೇಲೆ ದಾಳಿ ಮಾಡಿ ಅವನ ಕೌಂಟರ ಹತ್ತಿರ ಇದ್ದ ಒಂದು ಬಿಳಿ ಚಿಲದಲ್ಲಿದ್ದ ಮದ್ಯವನ್ನು ಒಂದೊಂದಾಗಿ ನೋಡಲಾಗಿ 1) 650 ಎಂ.ಎಲ ವುಳ್ಳ ಕಿಂಗ್ ಫಿಶರ್ 04 ಬಾಟಲಗಳು ಅ.ಕಿ 580/- ರೂ., 2) 90 ಎಮ್.ಎಲ್ ವುಳ್ಳ 25 .ಸಿ ಪೌಚ ಸರಾಯಿ ಪಾಕೇಟಗಳು ಅ.ಕಿ 758/- ರೂ., 3) 180 ಎಮ್.ಎಲ್ ವುಳ್ಳ 4 ಆಫೀಸರ ಚೋಯಿಲ್ ಪೌಚ ಅ.ಕಿ 360.84/- ರೂ. ಹಾಗೂ 4) 90 ಎಮ್.ಎಲ್ ವುಳ್ಳ 15 .ಟಿ ಟಾವೇರಿನ್ ಪೌಚಗಳು ಅ.ಕಿ 677.40 ರೂ ಇದ್ದು ಹಾಗು ಆರೋಪಿತನ ಹತ್ತಿರ ನಗದು ಹಣ 2170/- ರೂ. ಸಿಕ್ಕಿದ್ದು, ನಂತರ ಆತನಿಗೆ ನಿನ್ನ ಹತ್ತಿರ ಇವುಗಳ ಮದ್ಯ ಮಾರಾಟದ ಬಗ್ಗೆ ಸರಕಾರದ ಪರವಾನಿಗೆ ಪತ್ರ ಇದೆಯೇ? ಎಂದು ಕೇಳಿದಾಗ ಆರೋಪಿತನು ನನ್ನ ಹತ್ತಿರ ಯಾವುದೆ ಅನುಮತಿ ಪತ್ರ ಇರುವದಿಲ್ಲ ನಾನು ಕಳ್ಳಸಂತೆಯಿಂದ ತಂದು ಧಾಬಾದಲ್ಲಿ ಬರುವ ಎಲ್ಲಾರಿಗೆ ಕೊಟ್ಟು ರಾಟ ಮಾಡುತ್ತೆನೆ ಅಂತ ತಿಳಿಸಿದ್ದು, ನಂತರ ಸದರಿ ಸರಾಯಿ ಹಾಗು ನಗದು ಹಣವನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.