Police Bhavan Kalaburagi

Police Bhavan Kalaburagi

Friday, June 30, 2017

Yadgir District Reported Crimes

                       Yadgir District Reported Crimes
ಗೋಗಿ ಪೊಲೀಸ್ ಠಾಣೆ ಗುನ್ನೆ ನಂ. 98-2017 ಕಲಂ, 498(ಎ), 323, 324, 504, 506, ಸಂಗಡ 149 ಐಪಿಸಿ ಮತ್ತು ಕಲಂ, 3 & 4 ಡಿ.ಪಿ ಆ್ಯಕ್ಟ್  1961 ;- ದಿನಾಂಕ: 29/06/2017 ರಂದು 4-30 ಪಿಎಮ್ ಕ್ಕೆ ಶಹಾಪೂರ ಸರಕಾರಿ ಆಸ್ಪತ್ರೆಯಿಂದ ಪೋನ್ ಮುಖಾಂತರ ಎಮ್.ಎಲ್.ಸಿ ವಸೂಲಾದ ಮೇರೆಗೆ ಆಸ್ಪತ್ರೆಗೆ ಬೇಟಿ ನೀಡಿ ಉಪಚಾರ ಪಡೆಯುತ್ತಿದ್ದ ಗಾಯಾಳು ಶ್ರೀಮತಿ ಮಲ್ಲಮ್ಮ ಗಂಡ ಭೀಮಣ್ಣ ಸಾತಖೇಡ ಸಾ|| ಕರಕಳ್ಳಿ ತಾ|| ಶಹಾಪೂರ ಇವರ ಹೇಳಿಕೆ ಪಿರ್ಯಾದಿ ಪಡೆದುಕೊಂಡಿದ್ದರ ಸಾರಾಂಶವೆನೆಂದರೆ, ಪಿರ್ಯಾದಿಗೆ ಸುಮಾರು ಎರಡು ವರ್ಷಗಳ ಹಿಂದೆ ಆರೋಪಿ ನಂ: 01 ಭೀಮಣ್ಣ ಈತನೊಂದಿಗೆ ಮದುವೆಯಾಗಿದ್ದು 7-8 ತಿಂಗಳುವರೆಗೆ ಸರಿಯಾಗಿ ಇದ್ದು ಅಲ್ಲಿಂದಿಚಿಗೆ ಆರೋಪಿತರೆಲ್ಲರೂ ಮದುವೆಯ ಸಮಯದಲ್ಲಿ ಕೊಟ್ಟ ವರದಕ್ಷಿಣೆ ಹಣ 50,000=00 ರೂ 5 ತೊಲೆ ಬಂಗಾರ ಕಮ್ಮಿಯಾಗಿದೆ ಅಂತಾ ಪಿರ್ಯಾದಿಗೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕಿರುಕುಳ ಕೊಡುತ್ತಾ ಬಂದು ಈ ಬಗ್ಗೆ ಸಾಕಷ್ಟು ತಿಳುವಳಿಕೆ ಹೇಳಿದರೂ ಕೂಡಾ ತವರು ಮನೆಯವರು ಗಂಡನ ಮನೆಗೆ ಕಳುಹಿಸಿ ಹೋದರೂ ಕೂಡಾ ದಿನಾಂಕ: 29/06/2017 ರಂದು ಇನ್ನೂ 1,00,000=00 ರೂ ಹಣ ತೆಗೆದುಕೊಂಡು ಬಾ ಅಂತಾ ಅವಾಚ್ಯವಾಗಿ ಬೈದು, ಹೊಡೆಬಡೆ ಮಾಡಿ ಜೀವದ ಭಯ ಹಾಕಿರುತ್ತಾರೆ ಅಂತಾ ಸಾರಂಶವಿದ್ದು ಮರಳಿ ಠಾಣೆಗೆ 7-30 ಪಿಎಮ್ ಕ್ಕೆ ಠಾಣೆಗೆ ಬಂದು ಸದರಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 98/2017 ಕಲಂ, 498(ಎ), 323, 324, 504, 506, ಸಂಗಡ 149 ಐಪಿಸಿ ಮತ್ತು ಕಲಂ, 3 & 4 ಡಿ.ಪಿ ಆ್ಯಕ್ಟ್ 1961 ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 171/2017 ಕಲಂ 323, 326, 504 ಐಪಿಸಿ;- ದಿನಂಕಃ 29-06-2017 ರಂದು 8-30 ಪಿ.ಎಮ್ ಕ್ಕೆ ಫಿಯರ್ಾದಿ ಠಾಣೆಗೆ ಬಂದು ಅಜರ್ಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ನಿನ್ನೆ ದಿಃ 28-06-17 ರಂದು ಸಾಯಂಕಾಲ ನಾನು ನನ್ನ ಸ್ನೇಹಿತರಾದ ಲಕ್ಷ್ಮಣ ತಂದೆ ಮಲ್ಲಯ್ಯ, ರಾಜು ತಂದೆ ಯಂಕಪ್ಪ ಇವರೊಂದಿಗೆ ನಮ್ಮೂರಿನಲ್ಲಿರುವ ಬೀರಪ್ಪನ ಕಟ್ಟೆಯ ಹತ್ತಿರ ಆಸ್ಪತ್ರೆ ಕಟ್ಟಲು ಹಾಕಿರುವ ಮರಳಿನ ಮೇಲೆ ಮಾತನಾಡುತ್ತ ಕುಳಿತಿದ್ದೇನು. ಆಗ 6-30 ಗಂಟೆಯ ಸುಮಾರಿಗೆ ನಮ್ಮೂರಿನ ನಮ್ಮ ಜನಾಂಗದವನಾದ ಮಲ್ಲಪ್ಪ ತಂದೆ ಹಣಮಂತ ಗಡ್ಡಿಮನಿ ಇತನು ಕುಡಿದ ಅಮಲಿನಲ್ಲಿ ಜೋಲಿ ಹೊಡೆಯುತ್ತ ಬಂದು ನನ್ನ ಪಕ್ಕದಲ್ಲಿ ಕುಳಿತು ನಶೆಯಲ್ಲಿ ನನ್ನ ಮೈಮೇಲೆ ಬಿದ್ದಿದ್ದರಿಂದ ನಾನು ಆತನಿಗೆ ದೂರ ಕೂಡಲು ಆಗುವದಿಲ್ಲೇನು, ಮೈಮೇಲೆ ಬಿಳುತ್ತಿ ಅಲ್ಲ, ಕೂಡಿದಿದ್ದಿ ವಾಸನೆ ಬರುತ್ತಿದೆ ಸರಿದು ಕೂಡು ಅಂತಾ ಅಂದಿದ್ದಕ್ಕೆ ವಿನಾಕಾರಣ ಜಗಳ ತಗೆದು ಅವಾಚ್ಯ ಶಬ್ದಗಳಿಂದ ಬೈಯ್ಯುತ್ತ ಕಬ್ಬಿಣದ ರಾಡಿನಿಂದ ತಲೆಯ ಮೇಲೆ ಜೋರಾಗಿ ಹೊಡೆದಿದ್ದರಿಂದ ಭಾರಿ ರಕ್ತಗಾಯವಾಗಿರುತ್ತದೆ ಅಂತಾ ವಗೈರೆ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 171/2017 ಕಲಂ: 323 326 504 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 94-2017 ಕಲಂ 279 337 338  ಐಪಿಸಿ;- ದಿನಾಂಕ:27/06/2017 ರಂದು 18.30 ಗಂಟೆ ಸುಮಾರಿಗೆ ಗಾಯಾಳು ತನ್ನ ಮೋಟಾರ್ ಸೈಕಲ ನಂ. ಕೆಎ-25 ಯು-3399 ನೇದ್ದರ ಮೇಲೆ ಬಲಶೆಟ್ಟಿಹಾಳ-ಗೆದ್ದಲಮರಿ ರೋಡಿನಲ್ಲಿ ಬಲಶೆಟ್ಟಿಹಾಳ ಹೈಸ್ಕೂಲ ಹತ್ತಿರ ಹೊರಟಾಗ ಎದರುಗಡೆಯಿಂದಾ ಆರೋಪಿತನು ತನ್ನ ಮೋಟಾರ್ ಸೈಕಲ ನಂ.ಕೆಎ-33 ಹೆಚ್-136 ನೇದ್ದನ್ನು ರೋಡಿನ ಮೇಲೆ ಅತಿವೇಗ ಹಾಗೂ ಅಲಕ್ಷತನದಿಂದಾ ನಡೆಯಿಸಿಕೊಂಡು ಬಂದು ಗಾಯಳೂ ಮೋಟಾರ್ ಸೈಕಲಗೆ ಡಿಕ್ಕಿ ಹೊಡೆದು ಅಪಘಾತ ಮಾಡಿದ್ದು, ಇಬ್ಬರು ಮೋಟಾರ್ ಸೈಕಲ ಸವಾರರು ರೋಡಿನ ಮೇಲೆ ಬಿದ್ದು, ಪಿಯರ್ಾದಿಗೆ ಬಲಕುತ್ತಿಗಿಗೆ, ಬಲಕಣ್ಣಿನ ಪಕ್ಕ ಬಾರಿ ರಕ್ತಗಾಯವಾಗಿದ್ದು, ಆರೋಪಿತನಿಗೆ ಬಲಕಣ್ಣಿಗೆ ರಕ್ತಗಾಯ, ಎಡ ತೆಲೆಗೆ ರಕ್ತಗಾಯವಾಗಿದ್ದು, ಇಬ್ಬರೂ ಗಾಯಾವಾದವರಿಗೆ ಗಾಯಳು ನೋಡಿ ಉಪಚಾರಕ್ಕೆಂದು ಹುಣಸಗಿ ಸರಕಾರಿ ದವಾಖಾನೆಗೆ ತಂದು ಹಾಕಿ, ಗಾಯಳು ರಂಗಪ್ಪ ಈತನಿಗೆ ಹೆಚ್ಚಿನ ಉಪಚಾರಕ್ಕೆಂದು ಬಸವೇಶ್ವರ ಕಲಬುಗರ್ಿ ದವಾಖಾನಗೆ  ತೆಗೆದುಕೊಂಡು  ಹೋಗಿ ಸೇರಿಕೆ ಮಾಡಿದ್ದು ಇರುತ್ತದೆ ಅಂತಾ ಇತ್ಯಾದಿ ದೂರಿನ ಮೇಲಿಂದಾ ಕ್ರಮ ಜರುಗಿಸಿದ್ದು ಇರುತ್ತದೆ.
ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ. 95-2017 ಕಲಂ 78(3) ಕೆಪಿ ಯಾಕ್ಟ್ ;- ದಿನಾಂಕ:28/06/2017 ರಂದು 18.30 ಗಂಟೆಗೆ ಆರೋಪಿತನು  ಹುಣಸಗಿ ಮಹಾಂತಸ್ವಾಮಿ ವೃತ್ತದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಜನರಿಂದಾ ಹಣ ಪಡೆದು ಇದು ಬಾಂಬೆ ಮಟಕಾ ಜೂಜಾಟ ಒಂದು ರೂಪಾಯಿ ಹಚ್ಚಿದರೆ ಎಂಬತ್ತು ರೂಪಾಯಿ ಬರುತ್ತದೆ ಅದೃಷ್ಟ ಇದ್ದರೆ ನಂಬರ ಹಚ್ಚಿರಿ ಅಂತಾ ಜನರಿಂದಾ ಹಣ ಪಡೆದು ಮಟಕಾ ಚೀಟಿ ಬರೆದು ಕೊಡುವಾಗ ಪಿಯರ್ಾದಿ ಮತ್ತು ಅಧಿಕಾರಿ ಪಿ.ಎಸ್.ಐ ಹುಣಸಗಿ ಠಾಣೆ ಹಾಗೂ ಸಿಬ್ಬಂದಿಯವರಾದ ಹೆಚ್.ಸಿ-130, ಪಿಸಿ-173 ವರೊಂದಿಗೆ ದಾಳಿ ಮಾಡಿ ಹಿಡಿದು ಸದರಿಯವನಿಂದ 1010=00 ರೂ ನಗದು ಹಣ, ಒಂದು ಮಟಕಾ ನಂಬರ ಬರೆದ ಚೀಟ, ಒಂದು ಬಾಲ್ ಪೆನ್ ಜಪ್ತಿ ಮಾಡಿಕೊಂಡಿದ್ದು ಅಂತಾ ಪಂಚನಾಮೆಯ ಸಾರಾಂಶದ ಮೇಲಿಂದ ಕ್ರಮ ಜರುಗಿಸಲು ನ್ಯಾಯಾಲಯದ ಅನುಮತಿಯನ್ನು ಪಡೆದು ಇಂದು ಕ್ರಮ ಜರುಗಿಸಿದ್ದು ಇರುತ್ತದೆ.


BIDAR DISTRICT DAILY CRIME UPDATE 30-06-2017



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 30-06-2017

ºÀ½îSÉÃqÀ (©) ¥ÉưøÀ oÁuÉ AiÀÄÄ.r.Dgï £ÀA. 06/2017, PÀ®A. 174 ¹.Dgï.¦.¹ :-
ಸಿಂದಬಂದಗಿ ಗ್ರಾಮ ಸರ್ವೆ ನಂ. 116 ರಲ್ಲಿ ಫಿರ್ಯಾದಿ ವಿಶ್ವನಾಥ ತಂದೆ ನಾಗಪ್ಪಾ ಹೂಗಾರ ವಯ: 45 ವರ್ಷ, ಜಾತಿ: ಹೂಗಾರ, ಸಾ: ಸಿಂದಬಂದಗಿ ರವರಿಗೆ 20 ಗುಂಟೆ ಹೊಲ ಇರುತ್ತದೆ, ಫಿರ್ಯಾದಿಯವರ ಮಗನಾದ ಮಲ್ಲಪ್ಪಾ ವಯ: 26 ವರ್ಷ ಇತನು ಸದರಿ ಹೊಲದ ಮೇಲೆ ಲಾಗೋಡಿ ಸಲುವಾಗಿ ಸಿಂದಬಂದಗಿ ಗ್ರಾಮದ ಪಿ.ಕೆ.ಪಿ.ಎಸ್ ಬ್ಯಾಂಕಿನಲ್ಲಿ 15,000/- ರೂ ಸಾಲ ತೆಗೆದುಕೊಂಡಿದ್ದು ಮತ್ತು ಹೋದ ವರ್ಷ ಹೊಲದಲ್ಲಿ ಬೆಳೆ ಬೆಳೆಯದೆ ಇರುವದ್ದರಿಂದ ಮನೆ ಖರ್ಚಿಗಾಗಿ ಸಿಂದಬಂದಗಿ ಗ್ರಾಮದ ಅಂಬಿಕಾ ಸ್ವಸಹಾಯ ಸಂಘದಲ್ಲಿ 50,000/- ಸಾವಿರ ರೂಪಾಯಿ ಸಾಲ ಮಾಡಿರುತ್ತಾನೆ, ಹೋದ ವರ್ಷ ಹೊಲದಲ್ಲಿ ಸರಿಯಾಗಿ ಬೆಳೆ ಆಗಿರುವುದಿಲ್ಲ ಮುಂದೆ ಮನೆ ನಡೆಸುವದು ಹೇಗೆ ಮತ್ತು ಮಾಡಿದ ಸಾಲ ತೀರಿಸುವದು ಹೇಗೆ ಅಂತ ಮಗ ಚಿಂತಿಸುತ್ತಾ ಅವಾಗವಾಗ ಫಿರ್ಯಾದಿಗೆ ಹೇಳುತ್ತಿದ್ದನು, ಸದರಿ ಸಾಲ ತೀರಿಸುವುದು ಹೇಗೆ ಅಂತ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 28-06-2017 ರಂದು ರಾತ್ರಿ 0900 ಗಂಟೆಯಿಂದ ದಿನಾಂಕ 29-06-2017 ರಂದು ಮುಂಜಾನೆ 0900 ಗಂಟೆಯ ಮದ್ಯಾವಧಿಯಲ್ಲಿ ತಮ್ಮ ಮನೆಯ ಬೆಡ ರೂಮಿನಲ್ಲಿ ತಗಡದ ದಂಟೆಗೆ ಕೆಂಪು ಬಣ್ಣದ ಸೀರೆಯಿಂದ ನೇಣು ಹಾಕಿಕೊಂಡು ಮ್ರತಪಟ್ಟಿರುತ್ತಾನೆ, ತನ್ನ ಮಗನ ಸಾವಿನ ಬಗ್ಗೆ ಯಾರ ಮೇಲೆ ಯಾವುದೆ ಸಂಶಯ ವಗೈರೆ ಇರುವುದಿಲ್ಲ ಅಂತ ಅಂತ ನೀಡಿದ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬಸವಕಲ್ಯಾಣ ಸಂಚಾರ ಪೊಲೀಸ ಠಾಣೆ ಗುನ್ನೆ ನಂ. 92/2017, ಕಲಂ. 279, 337, 338 ಐಪಿಸಿ :-
ದಿನಾಂಕ 29-06-2017 ರಂದು ಫಿರ್ಯಾದಿ ಇರ್ಷಾದ ತಂದೆ ಲಾಡೆಸಾಬ ಮುಲ್ಲಾ ವಯ: 36 ವರ್ಷ, ಜಾತಿ: ಮುಸ್ಲಿಮ, ಸಾ: ಕಾಟೆವಾಡಿ, ತಾ: ಉಮರ್ಗಾ ರವರು ತನ್ನ ಹೆಂಡತಿಯಾದ ರಿಜ್ವಾನ ಬೇಗಂ ವಯ: 26 ವರ್ಷ, ಹಾಗೂ ಮಕ್ಕಳಾದ ಇಸಾನ ವಯ: 4 ವರ್ಷ, ಇಮ್ರಾನ ವಯ: 3 ವರ್ಷ, ಮುಸಕಾನ ವಯ: 2 ವರ್ಷ ಮತ್ತು ಸಂಬಂಧಿಯಾದ ನಸರೀನ ತಂದೆ ನಬಿ ಶೇಕ ವಯ: 16 ವರ್ಷ, ಜಾತಿ: ಮುಸ್ಲಿಂ, ಸಾ: ಲಾಮಜಾನ, ತಾ: ಔಸಾ (ಎಂ.ಎಸ್) ಎಲ್ಲರೂ ಒಂದು ಹೊಸದಾದ ನಂಬರ ಬರೆಯದ ಮಹಿಂದ್ರಾ ಪಿಕಪ ಗೂಡ್ಸ ವಾಹನದಲ್ಲಿ ಉಮರ್ಗಾದಿಂದ ಹೈದ್ರಬಾದಕ್ಕೆ ಹೋಗುತ್ತಿರುವಾಗ ರಾ.ಹೆ. ನಂ. 9 ರ ಮೇಲೆ ಸಿದ್ದಯ್ಯ ಮಠದ ಹತ್ತಿರ ಸದರಿ ವಾಹನದ ಚಾಲಕನಾದ ಆರೋಪಿ ಸುರ್ಯಭಾನ ತಂದೆ ಮಾಹದು ಗೌಳಿ ವಯ: 47 ವರ್ಷ, ಜಾತಿ: ಮರಾಠಾ, ಸಾ: ಕೊಟಗಾಂವ, ತಾ: ನಿಪ್ಪಾಡ ಇತನು ತನ್ನ ವಾಹನವನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಕಂಟ್ರೋಲ ಮಾಡದೇ ಡಿವೈಡರಗೆ ಡಿಕ್ಕಿ ಮಾಡಿ ಪಲ್ಟಿ ಮಾಡಿರುತ್ತಾನೆ, ಸದರಿ ಪಲ್ಟಿಯಿಂದ ಫಿರ್ಯಾದಿಯ ಎಡಗೈ ಮೋಣಕೈಗೆ ಮತ್ತು ಎಡಗಾಲ ಕಿರು ಬೆರಳಿಗೆ ತರಚಿದ ಗಾಯ ಹಾಗೂ ಬಲಗಾಲ ಪಾದಕ್ಕೆ ಗುಪ್ತಗಾಯವಾಗಿರುತ್ತದೆ, ಹೆಂಡತಿಯಾದ ರಿಜ್ವಾನಾ ಬೇಗಂಗೆ ಸೊಂಟದಲ್ಲಿ ಗುಪ್ತಗಾಯ, ಎರಡು ಮೋಣಕಾಲಿಗೆ ತರಚಿದ ಗಾಯ, ತಲೆಯಲ್ಲಿ ಗುಪ್ತಗಾಯವಾಗಿರುತ್ತದೆ, ಮಗಳಾದ ಮುಸಕಾನ ಇಕೆಯ ಹಣೆಗೆ ತರಚಿದ ಗಾಯವಾಗಿರುತ್ತದೆ, ಹಾಗೂ ಸಂಬಂಧಿಯಾದ ನಸರೀನ ರವರಿಗೆ ಎಡಭುಜಕ್ಕೆ ಭಾರಿ ಗುಪ್ತಗಾಯ, ಎಡ ತಲೆಯ ಕಿವಿಯ ಹತ್ತಿರ ರಕ್ತಗಾಯ, ಬಲಗೈ ಮುಂಗೈಗೆ ತರಚಿದ ಗಾಯವಾಗಿರುತ್ತದೆ, ಮಕ್ಕಳಾದ ಇಸಾನ ಮತ್ತು ಇಮ್ರಾನ ರವರಿಗೆ ಯಾವದೇ ಗಾಯವಾಗಿರುವುದಿಲ್ಲ ಹಾಗೂ ಆರೋಪಿಯ ಮೂಗಿಗೆ ತರಚಿದ ಗಾಯ ತಲೆಯಲ್ಲಿ, ಕುತ್ತಿಗೆ, ಬೆನ್ನಲ್ಲಿ ಗುಪ್ತಗಾಯವಾಗಿರುತ್ತದೆ ಹಾಗೂ ಫಿರ್ಯಾದಿಯಂತೆ ಕುಳಿತ ಇನ್ನೋಬ್ಬ ತ್ರಿಭವ ಪಂಡಿತ ತಂದೆ ರಾಜಭವ ಪಂಡಿತ ವಯ: 28 ವರ್ಷ, ಸಾ: ಮಾನಮಿಟಿಯಾ, ತಾ: ಜಪ್ಪರ(ಬಿಹಾರ) ರವರ ಎದೆಗೆ, ಕುತ್ತಿಗೆಗೆ, ಬಲಗಾಲಿಗೆ ಗುಪ್ತಗಾಯ ಮತ್ತು ಎರಡು ಕೈ ಬೆರಳುಗಳಿಗೆ ತರಚಿದ ಗಾಯವಾಗಿರುತ್ತದೆ, ನಂತರ ಗಾಯಾಳುಗಳು 108 ಅಂಬುಲೆನ್ಸದಲ್ಲಿ ಎಲ್ಲರೂ ಬಸವಕಲ್ಯಾಣ ಸರಕಾರಿ ಆಸ್ಪತ್ರಗೆ ಬಂದಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 

Kalaburagi District Reported Crimes

ಆಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿದ್ದವನ ಬಂಧನ :
ಶಾಹಾಬಾದ ನಗರ ಠಾಣೆ : ದಿನಾಂಕ 29/06/2017 ರಂದು ಹೊನಗುಂಟಾಗ್ರಾಮದಲ್ಲಿ ಬಸ್ಸಣ್ಣ ಹಾಬಾ ಈತನು ಅಕ್ರಮ ಮಧ್ಯ ಮಾರಾಟ ಮಾಡುತಿದ್ದಾನೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಮಾಹಿತಿ ಬಂದ ಮೇರೆಗೆ ಪಿ ಐ ಶಹಾಬಾದ ರವರು ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಹೊನಗುಂಟಾ ಗ್ರಾಮಕ್ಕೆ ಹೋಗಿ ಮಧ್ಯ ಮಾರಾಟ ಮಾಡುವುದನ್ನು ನೋಡಿ ಖಚಿತಪಡಿಸಿಕೊಂಡು ಒಬ್ಬ ಮನುಷ್ಯನಿಗೆ ಹಿಡಿದು ವಿಚಾರಿಸಿ ಆತನ ಹೆಸರು ಬಸ್ಸಣ್ಣ ತಂದೆ ಮರೆಪ್ಪಾ ಹಾಬಾ ಸಾ: ಹೊನಗುಂಟಾ ಅಂತಾ ಹೇಳಿ ಆತನ ಹತ್ತಿರ ಇದ್ದ 30 180 ಎಮ್ ಎಲ್ ದ ಓಟಿ ಹಳದಿ ಡಬ್ಬಿಗಳನ್ನು ಅಂ ಕಿ 2040 ರೂ ನೇದ್ದು ಪಂಚರ ಸಮಕ್ಷಮ ಜಪ್ತಿ ಪಡೆಸಿಕೊಂಡು ಸದರಿಯವನೊಂದಿಗೆ ಶಾಹಾಬಾದ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣ :
ನರೋಣಾ ಠಾಣೆ : ಶ್ರೀಮತಿ.ಕವಿತಾ ಗಂಡ ಸಂತೋಷಕುಮಾರ ದೇಗಾಂವ, ಸಾ||ಬಾಳಿ ಗ್ರಾಮ ಇವರು ಕಲಬುರಗಿ ನಗರದ ಶ್ರೀ.ಸಂಗಮ್ಮ ವಿಧ್ಯಾಲಯದಲ್ಲಿ ಸಹಶಿಕ್ಷಕಿ ಅಂತಾ ಕರ್ತವ್ಯ ನಿರ್ವಹಿಸುತ್ತಿದ್ದರಿಂದ ಕಲಬುರಗಿಯಲ್ಲಿ ಮನೆಮಾಡಿಕೊಂಡು ಗಂಡಹೆಂಡತಿ ಇಬ್ಬರು ಒಟ್ಟಿಗೆ ವಾಸವಾಗಿದ್ದೇವು ಆಗಾಗ ಬಾಳಿ ಗ್ರಾಮಕ್ಕೆ ಬಂದು ಹೋಗಿ ಮಾಡುತ್ತಿರುತ್ತೇವೆ. ನನ್ನ ಗಂಡನಾದ ಸಂತೋಷಕುಮಾರ ಇವರು ಈಗ ಸುಮಾರು 6-7 ವರ್ಷಗಳಿಂದ ಮಾನಸಿಕ ರೋಗದಿಂದ ಬಳಲುತ್ತಿದ್ದರಿಂದ ಅವರಿಗೆ ಕಲಬುರಗಿಯ ಪತಂಗೆ ಮನೋ ವೈಧ್ಯರ ಹತ್ತಿರ ಚಿಕಿತ್ಸೆ ಕೂಡ ಮಾಡಿಸಿದ್ದು ಇರುತ್ತದೆ. ಆದರು ಸಹ ಅವರ ಮಾನಸಿಕ ರೋಗ ಕಡಿಮೆ ಆಗಿರಲಿಲ್ಲ. ವಿಷಯವಾಗಿ ನನ್ನ ಗಂಡನು ತುಂಬ ಮನನೊಂದುಕೊಂಡಿದ್ದರು ದಿನಾಂಕ:28/06/2017 ರಂದು ಮುಂಜಾನೆ 09-30 ಗಂಟೆ ಸುಮಾರಿಗೆ ನಾನು ಕಲಬುರಗಿಯಲ್ಲಿ ನನ್ನ ಗಂಡನಿಗೆ ಹೇಳಿ ಶಾಲೆಗೆ ಹೋಗಿರುತ್ತೇನೆ. ನಂತರ ಶಾಲೆ ಮುಗಿಸಿಕೊಂಡು ಮನೆಗೆ ಬಂದಾಗ ಸಂಜೆ 6-00 ಗಂಟೆ ಸುಮಾರಿಗೆ ನನ್ನ ಗಂಡನು ನನಗೆ ಫೋನಮಾಡಿ ತಾವು ಬಾಳಿ ಗ್ರಾಮಕ್ಕೆ ಹೋಗಿರುವ ಬಗ್ಗೆ ತಿಳಿಸಿರುತ್ತಾರೆ. ಇಂದು ದಿನಾಂಕ:29-06-2017 ರಂದು ಮುಂಜಾನೆ 07-00 ಗಂಟೆ ಸುಮಾರಿಗೆ ಮನೆಯಲ್ಲಿದ್ದಾಗ ಬಾಳಿ ಗ್ರಾಮದಿಂದ ನಮ್ಮ ಸಂಬಂಧಿಕರಾದ ಗುರುಲಿಂಗಪ್ಪ ತಂದೆ ಸಿದ್ದಪ್ಪ ಬಿರಾದಾರ ಇವರು ಫೋನ್ ಮಾಡಿ ನಿನ್ನ ಗಂಡನಾದ ಸಂತೋಷಕುಮಾರ ಇವರು ನಮ್ಮ ಬಾಳಿ ಗ್ರಾಮದ ಮನೆಯಲ್ಲಿ ವಿಷ ಸೇವನೆ ಮಾಡಿಕೊಂಡು ಮೃತಪಟ್ಟಿರುತ್ತಾರೆಂದು ತಿಳಿಸಿದ ಮೇರೆಗೆ ನಾನು ಮತ್ತು ನಮ್ಮ ತಾಯಿಯಾದ ಶೋಭ ಗಂಡ ಬಾಲಚಂದ್ರ ನೆಲ್ಲೂರ ರವರು ಕೂಡಿ ಬಾಳಿ ಗ್ರಾಮಕ್ಕೆ ಬಂದು ನೋಡಲಾಗಿ ವಿಷಯ ನಿಜವಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಣೆ ಕಿರುಕಳ ಪ್ರಕರಣ :
ಆಳಂದ ಠಾಣೆ : ಶ್ರೀಮತಿ ಶೈಲಜಾ ಗಂಡ ಜಗದೀಶ ವಾಲೆ ಸಾ: ಬೋರಗಾಂವ ತಾ: ಅಕ್ಕಲಕೋಟ ಹಾ:ವ: ಜಮಗಾ (ಜೆ) ತಾ:ಆಳಂದ ರವರು ದಿನಾಂಕ:10/05/2015 ರಂದು ಬೋರಗಾಂವ ಗ್ರಾಮದ ಜಗದೀಶ ತಂದೆ ರಾಜೇಂದ್ರ ವಾಲೆ ಎಂಬವನೊಂದಿಗೆ ನಮ್ಮ ಧಾರ್ಮಿಕ ಪದ್ದತಿಯಂತೆ ಜಮಗಾ (ಜೆ) ಗ್ರಾಮದಲ್ಲಿ ಮದುವೆ ಮಾಡಿಕೊಟ್ಟಿದ್ದು ಮದುವೆ ಸಮಯದಲ್ಲಿ ಅಳಿಯನಿಗೆ 4 ತೊಲೆ ಬಂಗಾರ ಹಾಗು ಒಂದು ಲಕ್ಷ ರೂಪಾಯಿ ಕಿಮ್ಮತ್ತಿನ ಮದುವೆಯ ಗೃಹ ಬಳಕೆಯ ವಸ್ತುಗಳನ್ನು ಕೊಟ್ಟು ಮದುವೆ ಮಾಡಿ ಕೊಟ್ಟಿದ್ದು ಇರುತ್ತದೆ. ಮದುವೆಯಾದ ನಂತರ ನನ್ನೊಂದಿಗೆ ನನ್ನ ಗಂಡ ಎರಡು ತಿಂಗಳ ಚೆನ್ನಾಗಿ ಇದ್ದು ನಂತರ ದಿನಗಳಲ್ಲಿ ನನಗೆ ಅಡುಗೆ ಮಾಡಲು ಬರುವುದಿಲ್ಲ ಅಂತಾ ಆಗಾಗ ನನಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಾ ಬಂದಿದ್ದು ಮತ್ತು ಮದುವೆ ಸಮಯದಲ್ಲಿ ಮಾತನಾಡಿದ ಬಂಗಾರದಲ್ಲಿ ಇನ್ನು ಉಳಿದ 2 ತೊಲೆ ಬಂಗಾರ ತರುವಂತೆ ಒತ್ತಾಯಿಸಿ ನನಗೆ ದಿನಾಲೂ ಕಿರಿಕಿರಿ ಮಾಡುತ್ತಾ ಬಂದಿರುತ್ತಾನೆ. ಆಗ ನಾನು ನನ್ನ ಗಂಡನ ಮನೆಯಲ್ಲಿ ನಡೆದ ವಿಷಯವನ್ನು ನನ್ನ ತವರು ಮನೆಯಾದ ಜಮಗಾ (ಜೆ) ಗ್ರಾಮಕ್ಕೆ ಬಂದು ತಿಳಿಸಿದಾಗ ನನ್ನ ತಂದೆ-ತಾಯಿಯವರು ನನಗೆ ಬಿದ್ದಿವಾದ ಹೇಳಿ ಕರೆದುಕೊಂಡು ಹೋಗಿ ಮತ್ತೆ ನನ್ನ ಗಂಡನ ಮನೆಯಲ್ಲಿ ಬಿಟ್ಟಿರುತ್ತಾರೆ. ಆಗ ಸ್ವಲ್ಪ ದಿವಸಗಳ ಕಾಲ ಚೆನ್ನಾಗಿ ಇದ್ದಂತೆ ನಟನೆ ಮಾಡಿ ನಂತರದ ದಿನಗಳಲ್ಲಿ ಮತ್ತೆ ನನಗೆ ನಿಮ್ಮ ತಂದೆಯವರಿಂದ ಬಂಗಾರ ತೆಗೆದುಕೊಂಡು ಬಾ ಅಂದರು ತೆಗೆದುಕೊಂಡು ಬಂದಿರುವುದಿಲ್ಲ ರಂಡಿ ಎಂದು ಹೊಡೆಯುತ್ತಿದ್ಧಾಗ ನಮ್ಮ ಅತ್ತೆ ಅಂಬಾಬಾಯಿ , ನಾದನಿ ಪಾರ್ವತಿ , ಹಾಗು ನಾದನಿ ಗಂಡ ಶಿವರಾಜ ಇವರು ಬಂದು ಈ ರಂಡಿಗೆ ಎಷ್ಟು ಸಾರಿ ಹೇಳಿದರೂ ಕೆಲಸವು ಸರಿಯಾಗಿ ಮಾಡುವುದಿಲ್ಲಾ ಬಂಗಾರವು ತರುವುದಿಲ್ಲ ಈ ರಂಡಿ ಇವತ್ತು ಖಲಾಷ ಮಾಡು ಅಂತಾ ಬೈದು ಅವಳ ಕುದಲು ಹಿಡಿದು ಎಳೆದಾಡಿ ನೇಲಕ್ಕೆ ಹಾಕಿದಾಗ ನನ್ನ ಗಂಡ ನನಗೆ ಕಪಾಳ ಮೇಲೆ ಹೊಡೆದು ಹೊರಕ್ಕೆ ಹಾಕಿರುತ್ತಾನೆ. ನಂತರ ನಾನು ಮತ್ತೆ ತವರು ಮನೆಗೆ ಬಂದಾಗ ನನ್ನ ತಂದೆಯವರು ಈ ಬಾರಿ ಪಂಚಾಯತಿ ಮಾಡಿ ಬಿಟ್ಟಿ ಬಂದರಾಯಿತು ಅಂತಾ ನಾನು ಮತ್ತು ನನ್ನ ತಂದೆ , ನಮ್ಮ ಕಾಕ ಗುಂಡೆರಾವ ಹಾಗು ನಮ್ಮ ಸಂಬಂದಿ ಸಿದ್ದಾರಾಮ ಸಕ್ಕರಗಿ , ಮಲ್ಲಿನಾತ ಬಿರೆದಾರ ಎಲ್ಲರೂ ಕೂಡಿಕೊಂಡು ನನ್ನ ಗಂಡನ ಮನೆಗೆ ಹೋದಾಗ ಅಲ್ಲಿ ಎಲ್ಲರೂ ಸೇರಿ ಪಂಚಾಯತಿಗೆ ಕುಳಿತಾಗ ನನ್ನ ಗಂಡ , ಅತ್ತೆ , ನಾದನಿ ಹಾಗು ನಾದನಿ ಗಂಡ ಎಲ್ಲರೂ ನಮಗೆ ಹಾಗು ಪಂಚಾಯತಿ ಮಾಡಲು ಬಂದವರಿಗೆ ಮನಬಂದಂತೆ ಬೈದು ನಿಮ್ಮ ಮಗಳನ್ನು ಕರೆದುಕೊಂಡು ಹೋಗಿ ಅಂತಾ ಬೈದು ಕಳುಹಿಸಿರುತ್ತಾರೆ. ನಂತರ ದಿನಾಂಕ 07/10/2015 ರಂದು ನಾವು ಆಳಂದ ಪೊಲೀಸ ಠಾಣೆಗೆ ಹೋಗಿ ದೂರು ಸಲ್ಲಿಸಿದಾಗ ಅವರು ಸದರಿ 4 ಜನರನ್ನು ಠಾಣೆಗೆ ಕರೆಯಿಸಿದಾಗ ಅವರು ಸದರಿ 4 ಜನರನ್ನು ಕರೆಯಿಸಿ ವಿಚಾರಣೆ ಮಾಡಿದಾಗ ಅವರು ಇನ್ನುಮುಂದೆ ನಾವು ಚೆನ್ನಾಗಿ ನೋಡಿಕೊಳ್ಳುತ್ತೇವೆ ಅಂತಾ ಪಾಬಂದಿ ಮುಚ್ಚಳಿಕೆ ಬರೆದು ಕೊಟ್ಟು ನನ್ನ ಮಗಳನ್ನು ಕರೆದುಕೊಂಡು ಹೊದರು. ನಂತರ 15 ದಿವಸಗಳ ಕಾಲ ಚೆನ್ನಾಗಿ ಇದ್ದು ನಂತರ ದಿನಗಳಲ್ಲಿ ಮತ್ತೆ ಮೊದಲಿನಂತೆ ಕಿರಿಕರಿ ಮಾಡುತ್ತಾ ದೈಹಿಕ ಮಾನಸಿಕ ಕಿರುಕುಳ ನೀಡಲು ಪ್ರಾರಂಬಿಸಿದರು ನಂತರ ನಾನು ನನ್ನ ತಂದೆಯವರು ಕರೆಯಿಸಿ ನನ್ನ ತವರು ಮನೆಯಲ್ಲಿ ಬಂದು ಇದ್ದಿರುತ್ತೇನೆ. ಆಗ ಸ್ವಲ್ಪ ದಿವಸಗಳ ನಂತರ ಜಮಗಾ (ಜೆ) ಕ್ಕೆ ಬಂದು ಏ ರಂಡಿ ನೀನು ನಮ್ಮ ಮನೆಗೆ ಬರದೆ ಇದ್ದರೆ ನಾನು ಇನ್ನೊಂದು ಮದುವೆ ಮಾಡಿಕೊಳ್ಳುತ್ತೇನೆ ಅಂತಾ ನನ್ನೊಂದಿಗೆ ಜಗಳವಾಡಿ ಹೊಗಿರುತ್ತಾನೆ .ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.