¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 30-06-2017
ºÀ½îSÉÃqÀ (©) ¥ÉưøÀ oÁuÉ AiÀÄÄ.r.Dgï £ÀA. 06/2017, PÀ®A. 174 ¹.Dgï.¦.¹
:-
ಸಿಂದಬಂದಗಿ ಗ್ರಾಮ ಸರ್ವೆ
ನಂ. 116 ರಲ್ಲಿ ಫಿರ್ಯಾದಿ ವಿಶ್ವನಾಥ ತಂದೆ ನಾಗಪ್ಪಾ ಹೂಗಾರ ವಯ: 45 ವರ್ಷ, ಜಾತಿ:
ಹೂಗಾರ, ಸಾ: ಸಿಂದಬಂದಗಿ ರವರಿಗೆ 20 ಗುಂಟೆ ಹೊಲ ಇರುತ್ತದೆ, ಫಿರ್ಯಾದಿಯವರ ಮಗನಾದ ಮಲ್ಲಪ್ಪಾ
ವಯ: 26 ವರ್ಷ ಇತನು ಸದರಿ ಹೊಲದ ಮೇಲೆ ಲಾಗೋಡಿ ಸಲುವಾಗಿ ಸಿಂದಬಂದಗಿ ಗ್ರಾಮದ ಪಿ.ಕೆ.ಪಿ.ಎಸ್
ಬ್ಯಾಂಕಿನಲ್ಲಿ 15,000/- ರೂ ಸಾಲ ತೆಗೆದುಕೊಂಡಿದ್ದು ಮತ್ತು ಹೋದ ವರ್ಷ ಹೊಲದಲ್ಲಿ ಬೆಳೆ
ಬೆಳೆಯದೆ ಇರುವದ್ದರಿಂದ ಮನೆ ಖರ್ಚಿಗಾಗಿ ಸಿಂದಬಂದಗಿ ಗ್ರಾಮದ ಅಂಬಿಕಾ ಸ್ವಸಹಾಯ ಸಂಘದಲ್ಲಿ
50,000/- ಸಾವಿರ ರೂಪಾಯಿ ಸಾಲ ಮಾಡಿರುತ್ತಾನೆ, ಹೋದ ವರ್ಷ ಹೊಲದಲ್ಲಿ ಸರಿಯಾಗಿ ಬೆಳೆ
ಆಗಿರುವುದಿಲ್ಲ ಮುಂದೆ ಮನೆ ನಡೆಸುವದು ಹೇಗೆ ಮತ್ತು ಮಾಡಿದ ಸಾಲ ತೀರಿಸುವದು ಹೇಗೆ ಅಂತ ಮಗ
ಚಿಂತಿಸುತ್ತಾ ಅವಾಗವಾಗ ಫಿರ್ಯಾದಿಗೆ ಹೇಳುತ್ತಿದ್ದನು, ಸದರಿ ಸಾಲ ತೀರಿಸುವುದು ಹೇಗೆ ಅಂತ
ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 28-06-2017 ರಂದು ರಾತ್ರಿ 0900 ಗಂಟೆಯಿಂದ ದಿನಾಂಕ
29-06-2017 ರಂದು ಮುಂಜಾನೆ 0900 ಗಂಟೆಯ ಮದ್ಯಾವಧಿಯಲ್ಲಿ ತಮ್ಮ ಮನೆಯ ಬೆಡ ರೂಮಿನಲ್ಲಿ ತಗಡದ
ದಂಟೆಗೆ ಕೆಂಪು ಬಣ್ಣದ ಸೀರೆಯಿಂದ ನೇಣು ಹಾಕಿಕೊಂಡು ಮ್ರತಪಟ್ಟಿರುತ್ತಾನೆ, ತನ್ನ ಮಗನ ಸಾವಿನ
ಬಗ್ಗೆ ಯಾರ ಮೇಲೆ ಯಾವುದೆ ಸಂಶಯ ವಗೈರೆ ಇರುವುದಿಲ್ಲ ಅಂತ ಅಂತ ನೀಡಿದ ಫಿರ್ಯಾದಿಯವರ ಹೇಳಿಕೆ
ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬಸವಕಲ್ಯಾಣ ಸಂಚಾರ ಪೊಲೀಸ ಠಾಣೆ ಗುನ್ನೆ ನಂ. 92/2017, ಕಲಂ. 279, 337, 338 ಐಪಿಸಿ :-
ದಿನಾಂಕ 29-06-2017
ರಂದು ಫಿರ್ಯಾದಿ ಇರ್ಷಾದ ತಂದೆ ಲಾಡೆಸಾಬ ಮುಲ್ಲಾ ವಯ: 36 ವರ್ಷ, ಜಾತಿ:
ಮುಸ್ಲಿಮ, ಸಾ: ಕಾಟೆವಾಡಿ, ತಾ: ಉಮರ್ಗಾ ರವರು ತನ್ನ
ಹೆಂಡತಿಯಾದ ರಿಜ್ವಾನ ಬೇಗಂ ವಯ: 26 ವರ್ಷ, ಹಾಗೂ ಮಕ್ಕಳಾದ
ಇಸಾನ ವಯ: 4 ವರ್ಷ,
ಇಮ್ರಾನ
ವಯ: 3 ವರ್ಷ,
ಮುಸಕಾನ
ವಯ: 2 ವರ್ಷ ಮತ್ತು ಸಂಬಂಧಿಯಾದ ನಸರೀನ ತಂದೆ ನಬಿ
ಶೇಕ ವಯ: 16 ವರ್ಷ, ಜಾತಿ: ಮುಸ್ಲಿಂ, ಸಾ: ಲಾಮಜಾನ, ತಾ:
ಔಸಾ (ಎಂ.ಎಸ್) ಎಲ್ಲರೂ ಒಂದು ಹೊಸದಾದ ನಂಬರ ಬರೆಯದ ಮಹಿಂದ್ರಾ ಪಿಕಪ ಗೂಡ್ಸ ವಾಹನದಲ್ಲಿ
ಉಮರ್ಗಾದಿಂದ ಹೈದ್ರಬಾದಕ್ಕೆ ಹೋಗುತ್ತಿರುವಾಗ ರಾ.ಹೆ. ನಂ. 9 ರ ಮೇಲೆ ಸಿದ್ದಯ್ಯ ಮಠದ
ಹತ್ತಿರ ಸದರಿ ವಾಹನದ ಚಾಲಕನಾದ ಆರೋಪಿ ಸುರ್ಯಭಾನ ತಂದೆ ಮಾಹದು ಗೌಳಿ
ವಯ:
47 ವರ್ಷ,
ಜಾತಿ:
ಮರಾಠಾ, ಸಾ:
ಕೊಟಗಾಂವ,
ತಾ: ನಿಪ್ಪಾಡ ಇತನು ತನ್ನ ವಾಹನವನ್ನು ಅತಿವೇಗ
ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಕಂಟ್ರೋಲ ಮಾಡದೇ ಡಿವೈಡರಗೆ ಡಿಕ್ಕಿ ಮಾಡಿ
ಪಲ್ಟಿ ಮಾಡಿರುತ್ತಾನೆ, ಸದರಿ ಪಲ್ಟಿಯಿಂದ ಫಿರ್ಯಾದಿಯ ಎಡಗೈ ಮೋಣಕೈಗೆ ಮತ್ತು ಎಡಗಾಲ ಕಿರು
ಬೆರಳಿಗೆ ತರಚಿದ ಗಾಯ ಹಾಗೂ ಬಲಗಾಲ ಪಾದಕ್ಕೆ ಗುಪ್ತಗಾಯವಾಗಿರುತ್ತದೆ, ಹೆಂಡತಿಯಾದ ರಿಜ್ವಾನಾ
ಬೇಗಂಗೆ ಸೊಂಟದಲ್ಲಿ ಗುಪ್ತಗಾಯ, ಎರಡು ಮೋಣಕಾಲಿಗೆ ತರಚಿದ
ಗಾಯ, ತಲೆಯಲ್ಲಿ ಗುಪ್ತಗಾಯವಾಗಿರುತ್ತದೆ, ಮಗಳಾದ
ಮುಸಕಾನ ಇಕೆಯ ಹಣೆಗೆ ತರಚಿದ ಗಾಯವಾಗಿರುತ್ತದೆ, ಹಾಗೂ ಸಂಬಂಧಿಯಾದ ನಸರೀನ ರವರಿಗೆ ಎಡಭುಜಕ್ಕೆ
ಭಾರಿ ಗುಪ್ತಗಾಯ, ಎಡ ತಲೆಯ ಕಿವಿಯ ಹತ್ತಿರ ರಕ್ತಗಾಯ, ಬಲಗೈ
ಮುಂಗೈಗೆ ತರಚಿದ ಗಾಯವಾಗಿರುತ್ತದೆ, ಮಕ್ಕಳಾದ ಇಸಾನ ಮತ್ತು ಇಮ್ರಾನ ರವರಿಗೆ ಯಾವದೇ
ಗಾಯವಾಗಿರುವುದಿಲ್ಲ ಹಾಗೂ ಆರೋಪಿಯ ಮೂಗಿಗೆ ತರಚಿದ ಗಾಯ ತಲೆಯಲ್ಲಿ,
ಕುತ್ತಿಗೆ, ಬೆನ್ನಲ್ಲಿ
ಗುಪ್ತಗಾಯವಾಗಿರುತ್ತದೆ ಹಾಗೂ ಫಿರ್ಯಾದಿಯಂತೆ ಕುಳಿತ ಇನ್ನೋಬ್ಬ ತ್ರಿಭವ ಪಂಡಿತ ತಂದೆ ರಾಜಭವ
ಪಂಡಿತ ವಯ: 28 ವರ್ಷ, ಸಾ: ಮಾನಮಿಟಿಯಾ, ತಾ: ಜಪ್ಪರ(ಬಿಹಾರ)
ರವರ ಎದೆಗೆ, ಕುತ್ತಿಗೆಗೆ,
ಬಲಗಾಲಿಗೆ
ಗುಪ್ತಗಾಯ ಮತ್ತು ಎರಡು ಕೈ ಬೆರಳುಗಳಿಗೆ ತರಚಿದ ಗಾಯವಾಗಿರುತ್ತದೆ, ನಂತರ ಗಾಯಾಳುಗಳು 108
ಅಂಬುಲೆನ್ಸದಲ್ಲಿ ಎಲ್ಲರೂ ಬಸವಕಲ್ಯಾಣ ಸರಕಾರಿ ಆಸ್ಪತ್ರಗೆ ಬಂದಿದ್ದು ಇರುತ್ತದೆ ಅಂತ ಕೊಟ್ಟ
ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
No comments:
Post a Comment