ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ
04-09-2020
ಬೀದರ ಗ್ರಾಮೀಣ ಠಾಣೆ ಅಪರಾಧ
ಸಂಖ್ಯೆ
40/2020 ಕಲಂ 32, 34, ಕೆ.ಇ. ಕಾಯ್ದೆ :-
ದಿನಾಂಕ 03/09/2020 ರಂದು 1545 ಗಂಟೆಗೆ ಪಿಎಸ್ಐ ರವರು ಗಾದಗಿ
ಗ್ರಾಮದ ಹತ್ತಿರ ಪೆಟ್ರೊಲಿಂಗ ಕರ್ತವ್ಯದ ಮೇಲೆ ಇದ್ದಾಗ ತುಕಾರಾಮ ತಂದೆ ಶಿವರಾಜ ಸೋಮನೋರ ವಯ-28 ಜಾ|| ಕುರುಬರು ಉ|| ಹೋಟಲ ಕೆಲಸ ಸಾ|| ಕಮಠಾಣಾ ಇತನು ತನ್ನ ಹೋಟಲ್ ಹತ್ತಿರ ಅಕ್ರಮವಾಗಿ
ಸರಾಯಿ ಮಾರಾಟ ಸಾಗಾಟ ಮಾಡುತಿದ್ದಾನೆ ಅಂತ ಖಚಿತ ಬಾತ್ಮಿ ಬಂದಿದ ಮೇರೆಗೆ ಪಿಎಸ್ಐ ರವರು ಸಿಬ್ಬಂದಿಯೊಂದಿಗೆ
ಹೋಗಿ ದಾಳಿ ಮಾಡಿ 90 ಎಮ್ ಎಲ್ ವುಳ್ಳ 44 ಓರಿಗಜಿನಲ್ ಚೋಯಿಸ್
ವಿಸ್ಕಿ ಒಟ್ಟು ಕಿಮ್ಮತ್ತು ರೂ 1334/-/-ಜಪ್ತಿ ಮಾಡಿಕೊಂಡು ಪ್ರಕರಣ
ದಾಖಲಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
ನೂತನ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 100/2020 ಕಲಂ 406, 420 ಐಪಿಸಿ ;-
ದಿನಾಂಕ
03/09/2020 ರಂದು 13;00 ಗಂಟೆಗೆ ಫಿರ್ಯಾದಿ ಶ್ರೀ ಸೈಲೇಶ ತಂದೆ ಶಿವಶರಣಪ್ಪ ಸೀರಿ ವಯ 38 ವರ್ಷ, ಜ್ಯಾತಿ ಲಿಂಗಾಯತ ಉದ್ಯೋಗ ವ್ಯಾಪಾರ ಸಾ: ಸೀರಿ ಕಾಂಪ್ಲೆಕ್ಷ ನ್ಯೂ ಜೇವರ್ಗಿ ರೋಡ ಎನ.ಜಿ.ಓ ಕಾಲೋನಿ ಕಲಬುರಗಿ ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದರ ಸಾರಾಂಶವೆನೆಂದರೆ, ಫಿರ್ಯಾದಿಯು , 2018 ರಲ್ಲಿ ಬೀದರನ ಗುರುನಗರ ಶಿವಕಲಾ ಕಾಂಪ್ಲೆಕ್ಷದಲ್ಲಿ ಗ್ಲೇಜ್ ಯುನಿಸೇಫ್ ಸಲೂನ ನನ್ನು ಪ್ರಾರಂಭಿಸಿ ಸದರಿ ಅಂಗಡಿಯ ವ್ಯವಹಾರವನ್ನು ಫಿರ್ಯಾದಿಯೆ ನೋಡಿಕೊಳ್ಳುತ್ತಿದ್ದು ನಂತರ 2019 ರ ಆಗಸ್ಟ್ 1 ನೇ ತಾರಿಖಿನಿಂದ ಅಂಗಡಿ ನೊಡಿಕೊಳ್ಳಲು ಫಿರ್ಯಾದಿಗೆ ಅನಾನೂಕೂಲತೆ ಆಗುತ್ತಿದ್ದರಿಂದ ಅಂಗಡಿಯ ವ್ಯವಹಾರವನ್ನು ನೊಡಿಕೋಳ್ಳಲು ಶ್ರೀಮತಿ ಸೀಮರನ್ ಜೀತ ಕೌರ ಗಂಡ ಮಂಜೀತ ಎಸ್. ಸಿಂಗ ಮು: ಗುರುದ್ವಾರಾ ಶ್ರೀ ನಾನಕ ಝರಾ ಬೀದರ ಇವಳನ್ನು ತಿಂಗಳಿಗೆ 8000/- ರೂ. ಸಂಬಳ ಮಾತಾಡಿ ಅಂಗಡಿಯ ಮ್ಯಾನೇಜರ ಅಂತಾ ನೇಮಿಸಿಕೊಂಡಿದ್ದು ದಿನನಿತ್ಯ ಆಗುಹೋಗುಗಳ ಮಾಹಿತಿ ಕೊಡುತ್ತಿದ್ದಳು. ಕಳೆದ ವರ್ಷ ನವೆಂಬರ್ 2019 ರಿಂದ ಮಾರ್ಚ 2020 ರ ವರೆಗೆ ಈ ಮಹಿಳೆಯು ಸಲೂನಿನಲ್ಲಿ ಆಗಿರುವ ಲೆಕ್ಕವನ್ನು ಕೊಡುವುದು ವಿಳಂಬ ಮಾಡುತ್ತಿದ್ದಾಗ ಆಗಸ್ಟ 2020 ಮುಗಿದರೂ 5 ತಿಂಗಳ ಲೆಕ್ಕ ಮತ್ತು ಹಣವನ್ನು ಕೊಡದೇ ಮುಂದುಡುತ್ತಿದ್ದಾಳೆ.
ಇದರ ಬಗ್ಗೆ ಸುಮಾರು ಸಲ ಅವಳ ಗಂಡ ಅವಳ ಮಾವ ಮತ್ತು ಅವಳಿಗೆ ಅಂಗಡಿಯಲ್ಲಿ ಗಳಿಕೆಯಾದ ಹಣವನ್ನು ನಮಗೆ ಕೊಡಲು ನಾನು ಮತ್ತು ನನ್ನ ಹೆಂಡತಿ ಡಾ: ರೂಪಾಶ್ರೀ ಇಬ್ಬರೂ ಬಂದು ಕೇಳಿದರೆ ಇಂದು ಕೊಡುತ್ತೇನೆ ನಾಳೆ ಕೊಡುತ್ತೇನೆ, ಅಂತಾ ಸುಳ್ಳು ಹೇಳುತ್ತಾ ಬರುತ್ತಿದ್ದಾಳೆ. ದಿನಾಂಕ 30/08/2020 ರಂದು ಸೀಮರನ್ ಮತ್ತು ಅವಳ ಗಂಡ ಮತ್ತು ಮಾವನವರನ್ನು ಅಂಗಡಿಗೆ ಕರೆಯಿಸಿ ನವೆಂಬರ್ 2019 ರಿಂದ 15 ಜೂನ್ 2020 ರ ವರೆಗೆ ಸದರಿ ಅಂಗಡಿಯ ಖರ್ಚು ವೆಚ್ಚ ನೋಡಲು ಸುಮಾರು 12 ಲಕ್ಷ 33 ಸಾವಿರ 543 ರೂಪಾಯಿಗಳು ಹಣ ಜಮಾ ಆಗಿದ್ದು ಅದನ್ನು ಕೊಡದೇ ಮತ್ತು ಅಂಗಡಿಯಲ್ಲಿಯ ಲೆಕ್ಕಪತ್ರದ ರೆಜಿಸ್ಟಿರ್ ಹರಿದು ಹಾಕಿ ವ್ಯಾಪಾರದ ಕಸ್ಟಮರ್ ಡಾಟಾ ಮತ್ತು ಎಲ್ಲಾ ಕಸ್ಟಮರ್ ಕಾಂಟ್ಯಾಕ್ಟ ನಂಬರಗಳನ್ನು ಪಡೆದುಕೊಂಡು ನಮ್ಮ ಸಲೂನ ಬ್ಯಾಂಕಿನ ಖಾತೆಗೆ ಬರಬೇಕಾದ ಎಲ್ಲಾ ಗೂಗಲ್ ಪೇ ಹಣವನ್ನು ಅವಳ ಪಂಜಾಬ ಸಿಂಧ ಬ್ಯಾಂಕ ಖಾತೆಗೆ ಗೂಗಲ್ ಪೇ ಮಾಡಿಸಿಕೊಂಡು ವಂಚನೆ ಮಾಡಿ ನನ್ನನ್ನು ಮೋಸ ಮಾಡಿರುತ್ತಾಳೆ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
ಬೀದರ ನೂತನ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 101/2020 ಕಲಂ 353, 332 ಐಪಿಸಿ ಜೊತೆ ಕರ್ನಾಟಕ ಪ್ರೊಹಿಬಿಷನ್ ಆಫ್ ವೈಲೆನ್ಸ್ ಅಗೆನ್ಸಟ್ ಮೆಡಿಕೆರ್ ಸರ್ವಿಸ್ ಪರ್ಸನಲ್ & ಡ್ಯಾಮೇಜ್ ಟೂ ಪ್ರಾಪರ್ಟಿ ಇನ್ ಮೆಡಿಸಿನ್ ಸರ್ವಿಸ್ ಇನ್ಸಿಟಿಟ್ಯೂಷನ್
ಆಕ್ಟ್ :-
ದಿನಾಂಕ 03/09/2020 ರಂದು 1745 ಗಂಟೆಗೆ ಶ್ರೀ ಅಮೀರಖಾನ ತಂದೆ ರಶಿದಖಾನ ವಯ 45 ವರ್ಷ ಉ/ ಲ್ಯಾಬ ಟೆಕ್ನಿಷೆನ್ ಬ್ರೀಮ್ಸ್ ಕೋವಿಡ್ ಆಸ್ಪತ್ರೆ ಸಾ/ ನೂರಖಾನ ತಾಲಿಮ ಬೀದರ ರವರು ಠಾಣೆಗೆ ಹಾಜರಾಗಿ ದೂರು ನೀಡಿದರ ಸಾರಾಂಶವೆನೆಂದರೆ, ಫಿರ್ಯಾದಿಯು ಸೂಮಾರು 10-12 ವರ್ಷಗಳೀಂದ ಬೀದರ ಸರಕಾರಿ ಆಸ್ಪತ್ರೆಯಲ್ಲಿ ಲ್ಯಾಬ ಟೆಕ್ನಿನಿಷನ್ ಎಂದು
ಕರ್ತವ್ಯ ನಿರ್ವಹಿಸಿಕೊಂಡಿದ್ದು ದಿನಾಂಕ 03/09/2020 ರಂದು ಮುಂಜಾನೆ 1148 ನಿಮಿಷಕ್ಕೆ ಶ್ರೀ ಯೇಸೆಪ್ಪ ತಂದೆ ಸಿದ್ರಾಮ ವಯ 55 ವರ್ಷ ಗ್ರಾಮ ಗುಮ್ಮಾ ತಾ/ ಬೀದರ ಈತನು ಮೈಬೇನೆ ಹಾಗೂ ಭೇದಿಯಿಂದ ಕೋವಿಡ್ ಆಸ್ಪತ್ರೆಗೆ ಧಾಖಲಾಗಿರುತ್ತಾನೆ. ದಾಖಲಾದ ನಂತರ ಆತನನ್ನು ಡಾ: ಜುಬೇರ ರವರು ರೋಗಿಯನ್ನು ಪರಿಕ್ಷೀಸಿ
ಆತನ ಆಕ್ಷಿಜನ್ ಸ್ಯಾಚುರೇಶನ ಕಡಿಮೆ ಇದ್ದ ಕಾರಣ ಅವನನ್ನು ಆಕ್ಷಿಜನ್ ಪ್ರಾರಂಭಿಸಿ ಅವಶ್ಯವಿದ್ದ ಎಲ್ಲಾ ಔಷಧಿಗಳನ್ನು ನಿಡಿರುತ್ತಾರೆ. ವೈದ್ಯರ ಸಲಹೆಯಂತೆ ಲ್ಯಾಬ್ ಟೆಕ್ನಿಷಿಯನ್ನ ಆದ ಫಿರ್ಯಾದಿ ಮತ್ತು ಲ್ಯಾಬ್
ಟೆಕ್ನಿಷಿಯನ್ ಆದ ಶ್ರೀ ಸಂಜುಕುಮಾರ ಇಬ್ಬರು ರೋಗಿಯ ಗಂಟಲು ದ್ರವ ಮಾದರಿಯನ್ನು ತೆಗೆದುಕೊಳ್ಳಲು
ಎಸ್ ಆರ್ ಎಫ್ ಜನರೇಟ್ ಮಾಡುತ್ತಿದ್ದಾಗ ರೋಗಿಯ ಸಂಬಂಧಿಕನಾದ ಬಾಬು ಸಾ/ ಗುಮ್ಮಾ,, ಜ್ಯೋತಿ ಮತ್ತು ರಾಜಕುಮಾರ ಹಾಗೂ ಇತರರು ಧಿಡೀರನೆ ಕೋವಿಡ್ ವಾರ್ಡನಲ್ಲಿ ಬಂದು ನಮ್ಮನ್ನು
ಬೇಗನೆ ವರದಿ ನಿಡಬೇಕು ಸೂಳೇ ವಕ್ಕಳೇ ಎಂದು ಅವಾಚ್ಯ ಶಬ್ದಗಳಿಂದ ಬೈದು ಫಿರ್ಯಾದಿ ಹಾಗೂ ಸಂಜುಕುಮಾರ
ಮೇಲೆ ಹಲ್ಲೆ ನಡೆಸಿದರು. ನಂತರ ಅವರಲ್ಲಿ ಬಾಬು ಈತನು ನನಗೆ ತನ್ನ ಕೈಮುಷ್ಠಿಯಿಂದ ಎಡಕಪಾಳಕ್ಕೆ ಹೊಡೆದಿರುತ್ತಾನೆ. ನಂತರ ರೋಗಿಯನ್ನು ವೈದ್ಯಕೀಯ ಉಪದೇಶಕ್ಕೆ ವಿರುದ್ದವಾಗಿ ತೆಗೆದುಕೊಂಡು ಹೋಗುತ್ತೆವೆ ಅಂತ
ಕೇಸ್ ಶೀಟ್ ಮೇಲೆ ರೋಗಿಯ ಸಂಬಂಧಿರಾದ ಜ್ಯೋತಿ ಮತ್ತು ರಾಜಕುಮಾರ ಎನ್ನುವವರು ಸಹಿ ಮಾಡಿ ನಂತರ ವಾರ್ಡನಲ್ಲಿ
ಬಲವಂತವಾಗಿ ಬಂದು ಕೋವಿಡ್ ಕೆಲಸದಲ್ಲಿ ಕರ್ತವ್ಯ ನಿರತನಾದ ಫಿರ್ಯಾದಿ ಹಾಗೂ ಸಂಜುಕುಮಾರವರಿಗೆ ಅವಾಚ್ಯ
ಶಬ್ದಗಳೀಂದ ಬೈದು ನಮ್ಮ ಸರಕಾರಿ ಕರ್ತವ್ಯಕ್ಕೆ ಅಡೆ ತಡೆ ಮಾಡಿ ದಿನಾಂಕ 03/09/2020 ರಂದು ಮದ್ಯಾಹ್ನ 3 ಪಿಎಮ್ ಗಂಟೆಗೆ ಸ್ಟ್ರಚರ್ ಮೇಲೆ ರೋಗಿಯನ್ನು ತೆಗೆದುಕೊಂಡು ಹೋಗಿರುತ್ತಾರೆ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
ಭಾಲ್ಕಿ ನಗರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆ
78 ಕೆಪಿ
ಕಾಯ್ದೆ
:-
ದಿನಾಂಕ 03/09/2020 ರಂದು 10:30 ಗಂಟೆಗೆ ಠಾಣೆಯಲ್ಲಿದ್ದಾಗ ಭಾಲ್ಕಿಯ ಶೀವಾಜಿ ಚೌಕ ಹತ್ತಿರ ಇಬ್ಬರು ಸಾರ್ವಜನಿಕ
ಖುಲ್ಲಾ ಜಾಗೆಯಲ್ಲಿ ಕುಳಿತುಕೊಂಡು 1 ರೂ ಗೆ 80 ರೂ
ಕೊಡುತ್ತೆವೆ ಇದು ಬಾಂಬೆ ಮಟಕಾ ಇರುತ್ತದೆ ಅಂತಾ ಹೇಳಿ ಜನರಿಗೆ ಕೂಗಿ ಕೂಗಿ ಕರೆದು ಅವರಿಂದ ಹಣ
ಪಡೆದು ಮಟಕಾ ನಂಬರಿನ ಚೀಟಿ ಬರೆದುಕೊಡುತ್ತಿದ್ದಾನೆ ಅಂತಾ ಖಚಿತ ಮಾಹಿತಿ ಬಂದ ಮೇರೆಗೆ
ಸಿಬ್ಬಂದಿಯೊಂದಿಗೆ ಹೋಗಿ ನೋಡಿದಾಗಿ ಅಲ್ಲಿ ಒಬ್ಬ ವ್ಯಕ್ತಿ 1 ರೂ. ಗೆ 80 ರೂ ಕೊಡುತ್ತೆವೆ ಇದು ಬಾಂಬೆ ಮಟಕಾ ಇರುತ್ತದೆ ಅಂತಾ ಹೇಳಿ ಜನರಿಗೆ ಕೂಗಿ ಕೂಗಿ
ಕರೆದು ಅವರಿಂದ ಹಣ ಪಡೆದು ಮಟಕಾ ನಂಬರ ಚೀಟಿ ಬರೆದು ಕೊಡುವದನ್ನು ನೋಡಿ 11:15 ಗಂಟೆಗೆ ಪಂಚರ ಸಮಕ್ಷಮ ಸದರಿಯವರ ಮೇಲೆ
ದಾಳಿ ಮಾಡಿ ಹಿಡಿದು ವಿಚಾರಿಸಲು ತಮ್ಮ ಹೆಸರು 1] ಹಣಮಂತ ತಂದೆ ವೆಂಕಟ ಪವಾರ ಸಾ: ಸಾಯಿನಗರ ಭಾಲ್ಕಿ 2] ವಿಶ್ವನಾಥ ತಂದೆ ತಂದೆ ಗೋವಿಂದರಾವ
ಹುಪ್ಳೆಕರ ಸಾ: ಜ್ಯೋಶಿನಗರ ಭಾಲ್ಕಿ ಅಂತಾ ತಿಳಿಸಿದ್ದು ಸದರಿಯವರ ವಶದಿಂದ 1) ನಗದು ಹಣ 820 ರೂ 2) 4 ಮಟಕಾ ಚೀಟಿಗಳು 3) ಎರಡು ಬಾಲ ಪೆನ್ನ ಪಂಚರ ಸಮಕ್ಷಮ ಜಪ್ತಿ
ಮಾಡಿಕೊಂಡು ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.