ಅಪಘಾತ
ಪ್ರಕರಣಗಳು :
ಹೆಚ್ಚುವರಿ ಸಂಚಾರಿ
ಠಾಣೆ : ದಿನಾಂಕ 23.06.2016 ರಂದು ರಾತ್ರಿ 12-30 ಗಂಟೆ ಸುಮಾರಿಗೆ ಮೃತ ಅಮೀತ ಇತನು ತನ್ನ ಮೋಟಾರ ಸೈಕಲ ನಂ ಕೆಎ-32-ಇಕೆ-4018
ನೇದ್ದನ್ನು ಪಂಡಿತ ರಂಗ ಮಂದಿರ ಕಡೆಯಿಂದ ಆನಂದ ಹೊಟೇಲ ಕಡೆಗೆ ಹೋಗುವ
ಕುರಿತು ಮೋಟಾರ ಸೈಕಲ ಅತೀವೇಗವಾಗಿ ಹಾಗೂ ಅಲಕ್ಷ್ಯತನದಿಂದ ಚಲಾಯಿಸಿಕೊಂಡು ರೋಡ ಎಡ ಬಲ ಕಟ್
ಹೊಡೆಯುತ್ತಾ ಹೋಗಿ ದಾರಿ ಮದ್ಯ ಬರುವ ಪ್ರವಾಸೊದ್ಯಮ ಇಲಾಖೆಯ ಕಾರ್ಯಾಲಯದ ಎದುರು ರೋಡ ಮೇಲೆ
ಒಮ್ಮಲೇ ಬ್ರೇಕ ಹಾಕಿ ಮೋಟಾರ ಸೈಕಲ ಸ್ಕಿಡ್ ಮಾಡಿ ಅಪಘಾತ ಹೊಂದಿ ಉಪಚಾರ ಕುರಿತು 108 ಅಂಬುಲೇನ್ಸ ವಾಹನದಲ್ಲಿ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ
ದಾರಿ ಮದ್ಯ ರಾತ್ರಿ 1-10 ಗಂಟೆಯ ಮುಂಚಿತವಾಗಿ ಮೃತಪಟ್ಟಿದ್ದು ಇರುತ್ತದೆ. ಅಂತಾ ಶ್ರೀ ಕೇಶವರಾವ ತಂದೆ ಕಮಲಾಕರರಾವ ಕುಲಕರ್ಣಿ ಸಾ :
ರಾಘವೇಂದ್ರ ನಗರ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೇವರಗಿ ಠಾಣೆ : ಶ್ರೀ ರಫೀಕ್ ತಂದೆ ಬಾಬುಸಾಬ್ ಲೋಹಾರ್ ಸಾ : ಖಾಜಾ ಕಾಲೋನಿ ಜೇವರಗಿ ರವರು ದಿನಾಂಕ 21.06.2016
ರಂದು ಸಂಜೆ ಗೋಗಿ ಪೆಟ್ರೋಲ್ ಪಂಪ್ ಹತ್ತಿರ ಆಟೋ ರಿಕ್ಷಾ ನಂ ಕೆ.ಎ32 ಸಿ 1721 ನೇದ್ದರ ಚಾಲಕ ಮಹೆಬೂಬ ಈತನ ಆಟೋದಲ್ಲಿ ನಾನು ಮತ್ತು ತರೋನಮ್
ಇಬ್ಬರು ಕುಳಿತುಕೊಂಡು ಜೇವರಗಿ ಕಡೆಗೆ ಬರುತ್ತಿದ್ದಾಗ ಅದೇ ವೇಳೆಗೆ ಎದುರುಗಡೆಯಿಂದ ಬುಲೇರೋ
ವಾಹನ ನಂ ಕೆ.ಎ 33 ಎ 5575 ನೇ5ದ್ದರ ಚಾಲಕನು ತನ್ನ
ಜೀಪ್ ಅನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿ ನಾವು ಕುಳಿತು ಬರುತ್ತಿದ್ದ ಆಟೋಗೆ
ಡಿಕ್ಕಿ ಪಡಿಸಿ ನಮಗೆ ಭಾರಿ ಹಾಗು ಸಾದಾ ಗಾಯಪಡಿಸಿ ಅಪಘಾತದ ನಂತರ ಜೀಪ್ ಅನ್ನು ಸ್ಥಳದಲ್ಲಿಯೆ
ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಸ್ಪೀಟ
ಜೂಜಾಟದಲ್ಲಿ ತೋಡಗಿದವರ ಬಂಧನ :
ಜೇವರಗಿ ಠಾಣೆ : ದಿನಾಂಕ 22.06.2016 ರಂದು ಮದ್ಯಾಹ್ನ
ಜೇವರಗಿ ಪಟ್ಟಣದ ಅಖಂಡೇಶ್ವರ ಎ.ಪಿ.ಎಮ್.ಸಿ ಯಾರ್ಡ ಹತ್ತಿರ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ಕೆಲವು ಜನರು ಗುಂಪಾಗಿ ಕುಳಿತು ಇಸ್ಪೆಟ ಎಲೆಗಳ ಸಹಾಯದಿಂದ ಹಣ
ಪಣಕ್ಕೆ ಇಟ್ಟು ಜೂಜಾಟ ಆಡುತ್ತಿದ್ದಾರೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀ. ಶ್ರೀಮಂತ
ಇಲ್ಲಾಳ ಪಿ.ಎಸ್.ಐ ಜೇವರಗಿ ಠಾಣೆರವರು ಹಾಗು
ಸಿಬ್ಬಂದಿ ಮತ್ತು ಪಂಚರೊಂದಿಗೆ ಜೇವರಗಿ ಪಟ್ಟಣದ ಅಖಂಡೆಶ್ವರ್ ಎ.ಪಿ.ಎಮ್.ಸಿ. ಮಾರ್ಕೇಟ್ ಯಾರ್ಡ ಕಡೆಗೆ ಹೊರಟು ಬಾತ್ಮೀ ಸ್ಥಳ ಹೋಗಿ ಅಲ್ಲಿ ಅಡತ
ಅಂಗಡಿಯ ಗೋಡೆಯ ಮರೆಯಲ್ಲಿ ನಿಂತು ನೋಡಲಾಗಿ ಕೆಲವು ಜನರು ಅಂಖಡೇಶ್ವರ ಮಾರ್ಕೇಟ್ ಯಾರ್ಡ ಹತ್ತಿರ
ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ಗುಂಪಾಗಿ ಕುಳಿತು ಇಸ್ಪೆಟ ಎಲೆಗಳ ಸಹಾಯದಿಂದ ಹಣ ಪಣಕ್ಕೆ ಇಟ್ಟು
ಅಂದರ ಬಹಾರ ಇಸ್ಪೆಟ ಜುಜಾಟ ಆಡುತ್ತಿರುವದನ್ನು ನೋಡಿ ಖಚಿತಪಡಿಸಿಕೊಂಡ ದಾಳಿ ಮಾಡಿ ಹಿಡಿದು ಅಂಗಶೋಧನೆ ಮಾಡಿ ಹೆಸರು ವಿಳಾಸ
ವಿಚಾರಿಸಲಾಗಿ 1) ಬಸಂತ ತಂದೆ ಮಲ್ಲಯ್ಯ ಗಾಜರೇ ಸಾಃ ಮುಸ್ಲಿಂ ಚೌಕ
ಜೇವರಗಿ 2) ಶಿವಶಂಕರ ತಂದೆ ಕಲ್ಲಪ್ಪಗೌಡ
ಪಾಟೀಲ ಸಾಃ ಬಾಗವಾನಗಲ್ಲಿ ಜೇವರಗಿ 3) ಇಮಾಮಸಾಬ ತಂದೆ ಗೂಡುಸಾಬ
ಮುಲ್ಲಾ ಸಾಃ ಕನಕದಾಸ ಚೌಕ ಜೇವರಗಿ
4) ಗೊಲ್ಲಾಳಪ್ಪ ತಂದೆ ಶರಣಪ್ಪ ಸುಂಠ್ಯಾಣ ಸಾಃ ಮದರಿ 5. ಶರಣಗೌಡ ತಂದೆ ನಾಗರೆಡ್ಡಿ ಪಾಟೀಲ ಸಾಃ ಮೂದಬಾಳ [ಕೆ] 6)
ದೇವಿಂದ್ರಪ್ಪ ಗೌಡ ತಂದೆ ಮಲ್ಲಣ್ಣಗೌಡ ಜೇವರಗಿ ಸಾಃ ಶಾಂತ ನಗರ ಜೇವರಗಿ 7) ಬಸವರಾಜ ತಂದೆ
ತಿಪ್ಪಣ್ಣಾ ಅವಂಟಿ, ಸಾಃ ಮದರಿ ಅಂಥಾ
ತಿಳಿಸಿದ್ದು ಸದರಿಯವರಿಂದ ನಗದು ಹಣ ಹೀಗೆ
17350/-ರೂ, 52 ಇಸ್ಪೇಟ ಎಲೆಗಳನ್ನು
ವಶಕ್ಕೆ ತೆಗೆದುಕೊಂಡು ಸದರಿಯವರೊಂದಿಗೆ ಜೇವರಗಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಪೊಲೀಸ
ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿ ಓಡಿ ಹೋದ ಪ್ರಕರಣ :
ಮಾಹಾತ್ಮಾ
ಬಸವೇಶ್ವರ ನಗರ ಠಾಣೆ : ಈಗ ಸುಮಾರು 2-3 ದಿನಗಳಿಂದ ಕಲಬುರಗಿ ನಗರದಲ್ಲಿ ಕಪ್ಪು ಬಣ್ಣದ ಪಲ್ಸರ ಮೋಟಾರ ಸೈಕಲ ಮೇಲೆ ಇಬ್ಬರೂ ಯುವಕರು ಸರಗಳ್ಳತನ ಮಾಡುತ್ತಿರುವ ಬಗ್ಗೆ ಮಾಹಿತಿ ಇದ್ದ ನಿಮಿತ್ಯ, ಈಗ ಎರಡು ದಿವಸಗಳಿಂದ ಸ್ವತ್ತಿನ ಪ್ರಕರಣಗಳು ತಡೆ ಗಟ್ಟುವ ನಿಮಿತ್ಯ ಠಾಣಾ ವ್ಯಾಪ್ತಿಯಲ್ಲಿ ಮೋಟಾರ ಸೈಕಲ ಮೇಲೆ ಪೆಟ್ರೋಲಿಂಗ ಕರ್ತವ್ಯ ಮಾಡುತ್ತಿದ್ದು, ಎಂದಿನಂತೆ ದಿನಾಂಕ 21/06/2016 ರಂದು ಸಾಯಂಕಾಲ 5.00 ಗಂಟೆಯಿಂದ ಮೋಟಾರ ಸೈಕಲ ಮೇಲೆ ನಾನು ಮತ್ತು ಠಾಣಾ ಸಿಬ್ಬಂದಿಯವರಾದ ಶ್ರೀ ಪ್ರಭಾಕರ ಸಿಪಿಸಿ-634 ಇಬ್ಬರೂ ಕೂಡಿಕೊಂಡು ಠಾಣಾ ವ್ಯಾಪ್ತಿಯಲ್ಲಿ ಪಟ್ರೋಲಿಂಗ ಕರ್ತವ್ಯ ಮಾಡುತ್ತಾ ಸಮಯ ರಾತ್ರಿ 9.20 ಪಿ.ಎಮದ ಸುಮಾರಿಗೆ ಜಾಗೃತಿ ಕಾಲೋನಿಯಲ್ಲಿರುವ ವೀರಶೈವ ಕಲ್ಯಾಣ ಮಂಟಪ ಹತ್ತಿರ ಬಂದಾಗ ವೀರಶೈವ ಕಲ್ಯಾಣ ಮಂಟಪ ಪಕ್ಕದಲ್ಲಿ ಕತ್ತಲ್ಲಿನಲ್ಲಿ ಒಂದು ನಂಬರ ಪ್ಲೇಟ ಇಲ್ಲದ ಕಪ್ಪು ಬಣ್ಣದ ಪಲ್ಸರ ಮೋಟಾರ ಸೈಕಲ ನಿಂತಿದ್ದು, ನಾವು ಸ್ವಲ್ಪ ದೂರದಲ್ಲಿ ನಿಂತು ಸದರಿ ಮೋಟಾರ ಸೈಕಲ ಯಾರು ತೆಗದುಕೊಂಡು ಹೊಗುತ್ತಾರೆ ನೋಡುವ ಕುರಿತು ಕಾಯುತ್ತಾ ನಿಂತುಕೊಂಡಿದ್ದು. ಅಷ್ಟರಲ್ಲಿ ನಮಗೆ ಪರಿಚಯದ ಓಂ ನಗರದ ಮೂರು ಜನ ಹುಡುಗರು ಬಂದು ನಮ್ಮೊಂದಿಗೆ ಮಾತಾಡುತ್ತಾ ನಿಂತಿದ್ದರು. ಸ್ವಲ್ಪ ಸಮಯದ ನಂತರ ಕತ್ತಲಲ್ಲಿ ನಿಂತಿದ ಮೋಟಾರ ಸೈಕಲ ಹತ್ತಿರ ಒಬ್ಬ ವ್ಯಕ್ತಿ ಬಂದಿದ್ದು, ನಾವು ಆತನಿಗೆ ನೋಡಿ ಅಲ್ಲಿಗೆ ಹೋಗಿ ಆತನಿಗೆ ನಾನು ಈ ಮೋಟಾರ ಸೈಕಲ ಯಾರದು? ಏಕೆ ನಂಬರ ಹಾಕಿಸಿರುವುದಿಲ್ಲ ಅಂತಾ ಕೇಳಿದಾಗ, ಆತನು ನಾನು ಸರ್ ಈ ಮೊದಲು ಠಾಣೆಯಲ್ಲಿ ದೂರು ಸಲ್ಲಿಸಿದೇನಲ್ಲಾ ಅಕ್ಬರ ಹುಸೇನ ಯಾದುಲ್ಲಾ ಕಾಲೋನಿ ನಿವಾಸಿ ಅಂತಾ ತನ್ನ ಪರಿಚಯ ಮಾಡಿಕೊಂಡು ನಂತರ ಮೋಟಾರ ಸೈಕಲಕ್ಕೆ ಹೊಸದಾಗಿ ಕಲರಿಂಗ್ ಮಾಡಿಸಿರುತ್ತೇನೆ ಅದಕ್ಕೆ ನಂಬರ ಇನ್ನೂ ಹಾಕಿಸಿರುವುದಿಲ್ಲ ಅಂತಾ ತಿಳಿಸಿದನು ಅದಕ್ಕೆ ನಾನು ಆಯಿತು ಮೋಟಾರ ಸೈಕಲಕ್ಕೆ ಸಂಬಂಧಿಸಿದಂತೆ ಕಾಗದ ಪತ್ರಗಳನ್ನು ತೋರಿಸು ಅಂತಾ ಅಂದಾಗ ತಡಬಡಿಸುತ್ತಾ ಮನೆಯಲ್ಲಿ ಇರುತ್ತವೆ ಸರ್ ಅಂತಾ ತಿಳಿಸಿದನು. ಸದರಿಯವನ ಮೇಲೆ ಹಾಗೂ ಮೋಟಾರ ಸೈಕಲ ಮೇಲೆ ಬಲವಾದ ಸಂಶಯ ಬಂದಿದ್ದು, ನಾನು ಆತನಿಗೆ ಈ ಮೊಟಾರ ಸೈಕಲ ಠಾಣೆಗೆ ತೆಗೆದುಕೊಂಡು ಹೊಗುತ್ತೇವೆ ನಂತರ ಕಾಗದ ಪತ್ರಗಳನ್ನು ತೋರಿಸಿ ಮೋಟಾರ ಸೈಕಲನ್ನು ತೆಗೆದುಕೊಂಡು ಹೊಗುವಂತೆ ತಿಳಿಸಿದಾಗ ಆತನು ನಾನೇ ಮೋಟಾರ ಸೈಕಲ ಠಾಣೆಗೆ ತೆಗೆದುಕೊಂಡು ಹೊಗುತ್ತೇನೆ ಬೀಡಿ ಸರ್ ಅಂತಾ ಅಂದಾಗ ನಾನು ನನ್ನ ಜೋತೆಯಲ್ಲಿದ್ದ ಸಿಬ್ಬಂದಿಯವರಾದ ಶ್ರೀ ಪ್ರಭಾಕರ ಸಿಪಿಸಿ-634 ರವರನ್ನು ಈ ಮೋಟಾರ ಸೈಕಲ ಪೊಲೀಸ ಠಾಣೆಗ ಹಚ್ಚಿ ಬನ್ನಿ ಅಂತಾ ಹೇಳಿ ಮೋಟಾರ ಸೈಕಲ ಹಿಂದೆ ಕುಳಿತುಕೊಳ್ಳಲು ತಿಳಿಸಿದ್ದು, ಆಗ ಅಕ್ಬರ ಹುಸೇನ ಈತನು ಮೋಟಾರ ಸೈಕಲ ಚಲಾಯಿಸಿಕೊಂಡು ಹೋಗುತ್ತಿದ್ದು, ಹಿಂದುಗಡೆ ನಮ್ಮ ಸಿಬ್ಬಂದಿಯವರು ಕುಳಿತ್ತಿದ್ದರು. ಮೋಟಾರ ಸೈಕಲ ಸ್ವಲ್ಪ ದೂರದಲ್ಲಿ ಮೇನ್ ರೋಡಿಗೆ ಹೋಗಿ ನಿಂತಿದ್ದು ನಾನು ದೂರದಲ್ಲಿಯೇ ನಿಂತು ನೋಡುತ್ತಿದ್ದಾಗ ಅಕ್ಬರ ಈತನು ನಮ್ಮ ಸಿಬ್ಬಂದಿಯಾದ ಪ್ರಭಾಕರ ಇವರಿಗೆ ಮೋಟಾರ ಸೈಕಲ ಮೇಲಿಂದ ಇಳಿಸಿದ್ದನ್ನು ಗಮನಿಸಿ ನಾನು ಮತ್ತು ನನ್ನ ಜೋತೆಯಲ್ಲಿದ್ದ ಓಂ ನಗರದ ಹುಡುಗರು ಕೂಡಿಕೊಂಡು ಅಲ್ಲಿಗೆ ನಡೆದುಕೊಂಡು ಹೋಗುವಷ್ಟರಲ್ಲಿ ಅಕ್ಬರ ಹುಸೇನ ಈತನು ಸಿಬ್ಬಂದಿಯಾದ ಪ್ರಭಾಕರ ಸಿಪಿಸಿ-634 ಈತನಿಗೆ ಕೈಯಿಂದ ಹೊಟ್ಟೆಯಲ್ಲಿ ಮುಷ್ಠಿಮಾಡಿ ಗುದ್ದಿ ನಂತರ ನೂಕಿಸಿಕೊಟ್ಟು ನಾವು ನೋಡು ನೋಡುತ್ತಿದಂತೆ ಪಲ್ಸರ ಮೋಟಾರ ಸೈಕಲ ತೆಗದುಕೊಂಡು ಹೊದನು. ನಾವು ಆತನಿಗೆ ಹಿಡಿಯಲು ಬೆನ್ನು ಹತ್ತಿದಾಗ ನಮಗೆ ಸಿಗದೆ ವೇಗವಾಗಿ ಸೇಡಂ ರಿಂಗ ಕಡೆಗೆ ಹೋದನು. ನಂತರ ಸಿಬ್ಬಂದಿಯವರಾದ ಪ್ರಭಾಕರ ಸಿಪಿಸಿ-634 ರವರಿಗೆ ಏನಾಯಿತ್ತು ಅಂತಾ ವಿಚಾರಿಸಿದಾಗ ಅವರು ಹೇಳಿದೆನೆಂದರೆ ಮೋಟಾರ ಸೈಕಲನ್ನು ಠಾಣೆಗೆ ತೆಗೆದುಕೊಂಡು ಹೊಗುವಾಗ ಸ್ವಲ್ಪ ದೂರು ಹೊಗುತ್ತಿದಂತೆ ಅಕ್ಬರ ಹುಸೇನ ಈತನು ವಾಹನ ಚಾಲ್ತಿಯಲ್ಲಿಟ್ಟು ಮೋಟಾರ ಸೈಕಲ ಯಿಂದ ಏನೋ ಒಂದು ತರಹದ ಅವಾಜ್ ಬರುತ್ತಿದ್ದೆ ಸ್ವಲ್ಪ ಕೇಳಗೆ ಇಳಿರಿ ಅಂತಾ ಕೇಳಗೆ ಇಳಿಸಿದಾಗ ನನ್ನ ಗಮನ ವಾಹನದ ಕಡೆಯಿದ್ದಾಗ ಒಮ್ಮೆಲೆ ತನ್ನ ಕೈಯಿಂದ ನನ್ನ ಹೊಟ್ಟೆಗೆ ಹೊಡೆದು ನನಗೆ ನೂಕಿಸಿಕೊಟ್ಟು ನಾನು ಸುಧಾರಿಸಿಕೊಳ್ಳುವಷ್ಟರಲ್ಲಿ ವಾಹನದ ಮೇಲೆ ಪರಾರಿಯಾದನು. ನಂತರ ಸಿಬ್ಬಂದಿಯಾದ ಪ್ರಭಾಕರ ಇವರು ಚೇತರಿಸಿಕೊಂಡಿದ್ದು ಆಸ್ಪತ್ರೆಗೆ ಹೋಗುವ ಅವಶ್ಯಕತೆಯಿಲ್ಲವೆಂದು ತಿಳಿಸಿದರು. ಈ ಘಟನೆ ರಾತ್ರಿ 9.30 ಗಂಟೆ ಸುಮಾರಿಗೆ ನಡೆದಿರುತ್ತದೆ. ನಂತರ ನಾನು ಇತರೆ ಸಿಬ್ಬಂದಿಯೊಂದಿಗೆ ಆತನನ್ನು ಪತ್ತೆ ಮಾಡುವ ಕಾರ್ಯದಲ್ಲಿದ್ದಾಗ ಸುಮಾರು 10.00 ಪಿಎಂ ಕ್ಕೆ ಮೊಬೈಲ್ ನಂ.
9886563888 ನಂಬರದಿಂದ ನನ್ನ ಮೊಬೈಲ್ ನಂ. 9480803551 ನಂಬರಿಗೆ ಕರೆ ಮಾಡಿ ಅಕ್ಬರ್ ಈತನು ನನಗೆ ನೋಡಿಕೊಳ್ಳುವುದಾಗಿ ಬೆದರಿಕೆ ಹಾಕಿರುತ್ತಾನೆ. ಅಂತಾ ರಾಘವೇಂದ್ರ ಪಿ.ಎಸ್.ಐ (ಕಾಸೂ) ಮಾಹಾತ್ಮಾ ಬಸವೇಶ್ವರ ನಗರ ಠಾಣೆ ಕಲಬುರಗಿ ರವರು
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣ ಮಾಡಿ ಅತ್ಯಾಚಾರ ಮಾಡಿದ ಪ್ರಕರಣ :
ಆಳಂದ ಠಾಣೆ : ಕುಮಾರಿ ಇವರಿಗೆ ಅಭಿಲಾಶ ತಂದೆ ರಮೇಶ ಕಾಂಬಳೆ ಇವನು ದಿನಾಂಕ:06/06/2016
ರಂದು ನನಗೆ ಉಮರ್ಗಾಕ್ಕೆ ಕರೆದುಕೊಂಡು ಹೋಗಿ ಅಲ್ಲಿಂದ ಅದೇ ದಿವಸ ಸಾಯಂಕಾಲ ಜಬರದಸ್ತಿ ಮಾಡಿ
ಪೂನಾಕ್ಕೆ ಕರೆದುಕೊಂಡು ಹೋಗಿ ಅವನ ಸ್ನೇಹಿತನ ರೂಮಿನಲ್ಲಿ ಇಟ್ಟು ದಿನಾಂಕ:07/06/2016 ರಂದು
ರಾತ್ರಿ ಸಮಯದಲ್ಲಿ ಮಲಗಿಕೊಂಡಾಗ ನನಗೆ ಮದುವೆ ಮಾಡಿಕೊಳ್ಳುತ್ತೇನೆ ಎಂದು ನಂಬಿಸಿ ಜಬರಿ ಸಂಭೋಗ
ಮಾಡಲು ಬಂದಾಗ ನಾನು ಮದುವೆಯಾದ ನಂತರ ಸಂಭೋಗ ಮಾಡುವಂತೆ ಹೇಳಿದರೂ ಜಬರದಸ್ತಿ ಮಾಡಿ ಜಬರಿ ಸಂಭೋಗ
ಮಾಡಿರುತ್ತಾನೆ. ನಂತರ ದಿನಾಂಕ:10/06/2016 ರಂದು ಮರಳಿ ಆಳಂದಕ್ಕೆ ಕರೆದುಕೊಂಡು ಬಂದು ಆಳಂದ
ಪಟ್ಟಣದ ಹಳೆಯ ವಾಟರ್ ಟ್ಯಾಂಕ ಹತ್ತಿರ ಇವರು ಅಭಿಲಾಷ ಅವರ ಮನೆಯಲ್ಲಿ ತಂದು ಇಟ್ಟು
ದಿ:11/06/2016 ರಂದು ನಾಳೆ ರಜಿಸ್ಟರ್ ಮ್ಯಾರೇಜ ಮಾಡಿಕೊಳ್ಳೊಣ ಎಂದು ನನಗೆ ನಂಬಿಸಿ ಮೋಸ ಮಾಡಿ
ಅಂದು ರಾತ್ರಿ ಜಬರಿ ಸಂಬೋಗ ಮಾಡಿರುತ್ತಾನೆ. ನಂತರ ದಿನಾಂಕ:12/06/2016 ರಂದು ಬೇಳಿಗ್ಗೆ
ಅಭಿಲಾಷ ಮತ್ತು ಅವಳ ತಾಯಿ ಪ್ರಭಾವತಿ ಇವರು ಟೀನ್
ಶೇಡಿನ ಬಾಗಿಲು ಮುಚ್ಚಿ ಹೊಡೆ-ಬಡೆ ಮಾಡಿ
ಅವಾಚ್ಯವಾಗಿ ಬೈದು ನಿನ್ನ ತಾಯಿ ಹತ್ತಿರ
ಹೋಗು ನಾನು ಮದುವೆ ಮಾಡಿಕೊಳ್ಳುವದಿಲ್ಲಾ. ನೀನು ಇಲ್ಲೆ ಇದ್ದರೆ ನಿನ್ನ ಜೀವ ಸಹಿತ
ಉಳಿಸುವದಿಲ್ಲಾ ಅಂತಾ ಬೇದರಿಕೆ ಹಾಕಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.