Police Bhavan Kalaburagi

Police Bhavan Kalaburagi

Friday, May 29, 2020

BIDAR DISTRICT DAILY CRIME UPDATE 29-05-2020


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 29-05-2020

ಹುಲಸೂರ ಠಾಣೆ ಅಪರಾಧ ಸಂಖ್ಯೆ 34/2020 ಕಲಂ. 15 [ಎ], 32 [3] ಕೆ.ಇ ಆಕ್ಟ್ :-

ದಿನಾಂಕ 28/5/2020 ರಂದು 1500 ಗಂಟೆಗೆ ಪಿಎಸ್ಐ ರವರು ಪೊಲೀಸ್ ಠಾಣೆಯಲ್ಲಿರುವಾಗ ಹುಲಸೂರ ಗ್ರಾಮದ ಸೆರಗಾರ ಓಣಿಯ ಅಗಸಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ವಿಸ್ಕಿ ಸರಾಯಿ ಸೇವನೆ ಮಾಡುವವರಿಗೆ ಚಿಲ್ಲರೆಯಾಗಿ ಮಾರಾಟ ಮಾಡಿ ಕುಡಿಯಲು ಅನುವು ಮಾಡಿಕೊಡುತ್ತಿದ್ದಾನೆಂದು ಮಾಹಿತಿ ಬಂದ ಮೇರೆಗೆ ಸಿಬ್ಬಂದಿಯೊಂದಿಗೆ  ಹುಲಸೂರ ಗ್ರಾಮದ ಸೆರಗಾರ  ಹತ್ತಿರ ಹೋಗಿ ನೋಡಿದಾಗ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ತನ್ನ ಅಧಿನದಲ್ಲಿ ವಿಸ್ಕಿ ಪಾಕೇಟಗಳು ಮತ್ತು ಪ್ಲಾಸ್ಟಿಕ್ ಗ್ಲಾಸ್ ಇಟ್ಟುಕೊಂಡು ನಿಂತಿದ್ದು ಕಂಡು ಅವನ ಮೇಲೆ  ದಾಳಿ ನಡೆಸಿ ಹಿಡಿದು ಅವನ ಹೆಸರು ಮತ್ತು ವಿಳಾಸ ವಿಚಾರಿಸಲು ಬಾಬುರಾವ ತಂದೆ ಗೋವಿಂದರಾವ ಟೊಂಪೆ ವಯ 65 ವರ್ಷ, ಜಾತಿ ಕಲಾಲ, ಉ: ಕೂಲಿ ಕೆಲಸ ಸಾ: ಹುಲಸೂರ  ಆತನ ವಶದಲ್ಲಿದ 90 ಎಮ್.ಎಲ್. ನ 12 ಓಸಿ ವಿಸ್ಕಿ ಟೆಟ್ರಾ ಪ್ಯಾಕವುಳ್ಳ ಪಾಕೇಟಗಳಿದ್ದು ಅದರಲ್ಲಿ ಒಂದು ಒಡೆದಿದ್ದು ಇರುತ್ತದೆ ಎಲ್ಲವುಗಳ ಅ.ಕಿ 420/- ನೇದ್ದನ್ನು ಜಪ್ತಿ ಮಾಡಿಕೊಂಡು ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.