Police Bhavan Kalaburagi

Police Bhavan Kalaburagi

Friday, June 12, 2020

BIDAR DISTRICT DAILY CRIME UPDATE 12-06-2020

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 12-06-2020

ಬೀದರ ನಗರ ಪೊಲೀಸ ಠಾಣೆ ಅಪರಾಧ ಸಂ. 68/2020, ಕಲಂ. 87 ಕೆ.ಪಿ ಕಾಯ್ದೆ :-
ದಿನಾಂಕ 11-06-2020 ರಂದು ತಳಘಾಟ ಗ್ರಾಮದ ಸರಕಾರಿ ಶಾಲೆಯ ಹತ್ತಿರ ಕೆಲವು ಜನರು ಗುಂಪು ಕಟ್ಟಿಕೊಂಡು ಹಣ ಪಣಕ್ಕೆ ಹಚ್ಚಿ ಪರೆಲ ಎಂಬ ನಸೀಬಿನ್ ಇಸ್ಪಿಟ ಜೂಜಾಟ ಆಡುತ್ತಿದ್ದ ಬಗ್ಗೆ ಸಿದ್ದಲಿಂಗ ಪಿ.ಎಸ್. (ಕಾಸು) ಬೀದರ ನಗರ ಪೊಲೀಸ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಆರೋಪಿತರಾದ 1) ಸಮೀರ ತಂದೆ ನವಾಬ ಮಿಯ್ಯಾ ವಯ: 41 ವರ್ಷ, ಸಾ: ಅಹಮದ್ ಬಾಗ ಬೀದರ, 2) ಮೋಹ್ಮದ್ ಮುಖಿವತಂದೆ ಅಕ್ಬರ ವಯ: 22 ವರ್ಷ, ಸಾ: ಅಹ್ಮದ್ ಬಾಗ ಬೀದರ ಹಾಗೂ 3) ಎಂ.ಡಿ ಮೋಸಿನ್ ತಂದೆ ಎಂ.ಡಿ ಲತ್ತೀಫ್ ವಯ: 28 ವರ್ಷ ಸಾ: ಮನಿಯಾ ತಾಲೀಮ ಬೀದರ ಇವರೆಲ್ಲರೂ ಇಸ್ಪಿಟ್ ಜೂಜಾಟ ಆಡುತ್ತಿರುವಾಗ ಅವರ ಮೇಲೆ ದಾಳಿ ಮಾಡಿ ಹಿಡಿದು ಅವರಿಂದ ನಗದು ಹಣ 1060/- ರೂ ಮತ್ತು 52 ಇಸ್ಪಿಟ ಎಲೆಗಳು ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬೀದರ ನೂತನ ನಗರ ಪೊಲೀಸ್ ಠಾಣೆ ಅಪರಾಧ ಸಂ. 66/2020, ಕಲಂ. 379 ಐಪಿಸಿ :-
ಬೀದರನ ಮಲಬಾರ ಗೊಲ್ಡ ಅಂಡ ಡೈಮಂಡ್ಸ ಅಂಗಡಿಯು ಅಕ್ಕಮಹಾದೇವಿ ಕಾಲೋನಿಯ ವಜೀರ ಕಾಂಪ್ಲೆಕ್ಸ್ದಲ್ಲಿ ಇರುತ್ತದೆ, ಅಂಗಡಿಯಲ್ಲಿ ಎಲ್ಲಾ ಸೇರಿ 24 ಜನ ಕೆಲಸ ಮಾಡುತಿದ್ದು, ಅಂಗಡಿಗೆ ಹಿಂದುಗಡೆ ಗೋಡೆಗೆ 5 ದೊಡ್ಡ ಎಸಿಗಳನ್ನು ಮತ್ತು 2 ಸಣ್ಣ ಎಸಿಗಳನ್ನು ಕೂಡಿಸಿದ್ದು ಇರುತ್ತದೆ, ಎಲ್ಲಾ ಎಸಿಗಳಿಗೆ ಔಟಡೆÆೕರ ಯುನಿಟದಿಂದ ಇಂಡೋರ ಯುನಿಟನ ಕಾಂಪ್ರೆಸರಗೆ ತಾಮ್ರದ ಪೈಪ ಮುಖಾಂತರ  ಜೊತೆಗೂಡಿಸಿದ್ದು ಇರುತ್ತದೆ, ಹೀಗಿರುವಾದ ದಿನಾಂಕ 08-06-2020 ರಂದು 1900 ಗಂಟೆಗೆ ಎಲ್ಲರು ಸದರಿ ಅಂಗಡಿಯನ್ನು ಮುಚ್ಚಿ ಅಂಗಡಿಗೆ ಬೀಗ ಹಾಕಿ ನೆಗಳಿಗೆ ಹೋಗಿದ್ದು ಇರುತ್ತದೆ, ಅಂಗಡಿಯ ರಾತ್ರಿ ಕಾವಲಿಗೆ ಸೆಕ್ಯೂರಿಟಿ ಗಾರ್ಡಗಳಾದ ಚಂದ್ರಕಾಂತ ಮತ್ತು ಸಂಜುಕುಮಾರ ಇವರು ಇದ್ದರು, ನಂತರ ಎಲ್ಲರು ದಿನಾಂಕ 09-06-2020 ರಂದು 1000 ಗಂಟೆಯ ಸುಮಾರಿಗೆ ಅಂಗಡಿಗೆ ಬಂದು, ಅಂಗಡಿಯನ್ನು ತೆರೆದು ಎಸಿ ಚಾಲು ಮಾಡಿದಾಗ ಕೂಲಿಂಗ ಬರಲಿಲ್ಲ, ಅಂಗಡಿಯ ಹೊರಗಡೆ ಹೋಗಿ ನೋಡಲು ಎಸಿಗಳ ತಾಮ್ರದ ಪೈಪಗಳನ್ನು ಮುರಿದು ಯಾರೋ ಕಳವು ಮಾಡಿಕೊಂಡು ಹೊಬಗ್ಗೆ ಕಂಡುಬಂದಿರುತ್ತದೆ, ಕಳ್ಳರು ಪೈಪುಗಳನ್ನು ಮುರಿದು ಎಸಿಗಳನ್ನು ಹಾಳು ಮಾಡಿದ್ದು ಇರುತ್ತದೆ, ಸುಮಾರು 05 ಕಿಲೊ ಗ್ರಾಂ ತೂಕವುಳ್ಳ ತಾಮ್ರದ ಪೈಪುಗಳನ್ನು ಕಳವು ಮಾಡಿದ್ದು, ಕಳವು ಮಾಡಿದ ತಾಮ್ರದ ಪೈಪುಗಳ .ಕಿ. 2500/- ರೂಪಾಯಿ ಆಗುತ್ತದೆ ಅಂತ ಕೊಟ್ಟ ಫಿರ್ಯಾದಿ ಶ್ರೀಕಾಂತ ತಂದೆ ಶಿವಾನಂದ ಶೀಲವಂತ ವಯ: 29 ವರ್ಷ, ಜಾತಿ: ಲಿಂಗಾಯತ, : ಅಸಿಸ್ಟಂಟ ಮ್ಯಾನೆಜರ, ಸಾ: ಶಿವಪುರ ರೋಡ ಬಸವಕಲ್ಯಾಣ, ದ್ಯ: ವೈಷ್ಣವಿ ಕಾಲೋನಿ ಬೀದರ ರವರ ನೀಡಿದ ದೂರಿನ ಸಾರಾಂಶದ ಮೇರೆಗೆ ದಿನಾಂಕ 11-06-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.