Police Bhavan Kalaburagi

Police Bhavan Kalaburagi

Sunday, June 7, 2020

BIDAR DISTRICT DAILY CRIME UPDATE 07-06-2020


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 07-06-2020

ಸಿ..ಎನ್ ಕ್ರೈಂ ಪೊಲೀಸ ಠಾಣೆ ಬೀದರ ಅಪರಾಧ ಸಂ. 06/2020, ಕಲಂ. 66(ಸಿ), 66(ಡಿ) .ಟಿ ಕಾಯ್ದೆ ಮತ್ತು 419, 420 ಐಪಿಸಿ :-
ದಿನಾಂಕ 05-03-2020 ಮತ್ತು 07-03-2020 ರಂದು ಫಿರ್ಯಾದಿ ಬಾಲಾಜಿ ತಂದೆ ಗೋವಿಂದ ಚಿಟ್ಟಂಪಲ್ಲೆ ಸಾ: ಜೋಗೆವಾಡಿ ಗ್ರಾಮ ರವರಿಗೆ ಯಾರೋ ಅಪರಿಚಿತ ಮಹಿಳೆ ನೇಹಾ ಶರ್ಮಾ ಇಕೆಯು ಎಕ್ಸಿಸ್ ಬ್ಯಾಂಕ ಹೆಡ್ ಆಫೀಸ್ದಿಂದ ಕರೆ ಮಾಡುತ್ತಿರುವುದಾಗಿ ಎಂದು ಸುಳ್ಳು ಹೇಳಿ ನಂಬಿಸಿ ಕ್ರೇಡಿಟ್ ಕಾರ್ಡನಲ್ಲಿ ಹಣ ಜಮಾ ಮಾಡಲು ನಿಮ್ಮ ಬಗ್ಗೆ ವೇರಿಫಿಕೇಶನ್ ಮಾಡಬೇಕಾಗುತ್ತದೆ ಅಂತ ಹೇಳಿ ಫಿರ್ಯಾದಿಯ ಕ್ರೆಡಿಟ್ ಕಾರ್ಡನ ಮಾಹಿತಿ ಮತ್ತು ಮೊಬೈಲಿಗೆ ಬಂದ ಸಂಖ್ಯೆಗಳು ಹೇಳಿದಾಗ ಫಿರ್ಯಾದಿಗೆ ಅದರ ಬಗ್ಗೆ ಯಾವುದೆ ಮಾಹಿತಿ ಇಲ್ಲದಿರುವುದರಿಂದ ಅವರು ಕೇಳಿರುವ ಮಾಹಿತಿ ತಿಳಿಸದಾಗ ಅವರು ಮೋಸದಿಂದ ಫಿರ್ಯಾದಿಯವರ ಕ್ರೇಡಿಟ್ ಕಾರ್ಡನಿಂದ ಒಟ್ಟು 1,48,000/- ರೂಪಾಯಿ ಹಣವನ್ನು ಲಪಟಾಯಿಸಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 06-06-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬೀದರ ನಗರ ಪೊಲೀಸ ಠಾಣೆ ಅಪರಾಧ ಸಂ. 65/2020, ಕಲಂ. 363 ಐಪಿಸಿ :-
ದಿನಾಂಕ 04-06-2020 ರಂದು ಬೆಳಗಿನ ಜಾವ 0400 ಗಂಟೆ ಸುಮಾರಿಗೆ ಫಿರ್ಯಾದಿ ಮೊಹ್ಮದ ಮುಜೀಬುದ್ದೀನ್ ತಂದೆ ಮೊಹ್ಮದ ಮಸಿಯೋದ್ದಿನ್ ವಯ: 43 ವರ್ಷ, ಜಾತಿ: ಮುಸ್ಲಿಂ, ಸಾ: ಮನೆ ನಂ. 7-4-44 ರೊಹೆಲ್ಲೆ ಗಲ್ಲಿ ಬೀದರ ರವರ ಮನೆಯಲ್ಲಿ ಫಿರ್ಯಾದಿಯವರ ಮಗ ಮೊಹ್ಮದ ಮುಜಾಹಿದುದ್ದೀನ್ ಮತ್ತು ಅಣ್ಣನ ಮಗ ಮೊಹ್ಮದ ಮುಖಿಮುದ್ದೀನ್ ಇಬ್ಬರು ಎದ್ದು ಮಾತಾಡುತ್ತಿದ್ದಾಗ ಫಿರ್ಯಾದಿಗೆ ಎಚ್ಚರವಾಗಿ ಎದ್ದು ಅವರಿಗೆ ವಿಚಾರಿಸಿದಾಗ ನಮಾಜ ಮಾಡಲು ಎದ್ದಿರುತ್ತೇವೆ ಅಂತ ಹೇಳಿದಾಗ ಫಿರ್ಯಾದಿಯು ಪುನ: ಮಲಗಿಕೊಂಡು ನಂತರ 0600 ಗಂಟೆಗೆ ಎದ್ದು ನೋಡಲು ಫಿರ್ಯಾದಿಯವರ ನನ್ನ ಮಗ ಮೊಹ್ಮ್‌ದ ಮುಜಾಹಿದುದ್ದೀನ್ ಮತ್ತು ಅಣ್ಣನ ಮಗ ಮೊಹ್ಮದ ಮುಖಿಮುದ್ದೀನ್ ಇಬ್ಬರು ಮನೆಯಲ್ಲಿ ಇರಲ್ಲಿಲ್ಲ, ನಂತರ ತನ್ನ ಅಣ್ಣನಿಗೆ ವಿಚಾರಿಸಲು ಅವರು ಸಹ ಅವರಿಗೆ ನೋಡಿಲ್ಲಾ ಅಂತ ತಿಳಿಸಿದಾಗ ಕೂಡಲೆ ಗಲ್ಲಿಯಲ್ಲಿ, ಬಸ್ಸ ನಿಲ್ದಾಣಕ್ಕೆ ಹೋಗಿ ನೋಡಲು ಎಲ್ಲಿಯು ಸಿಗದ ಕಾರಣ ತಮ್ಮ ಸಂಬಂಧಿಕರು ಹೈದ್ರಾಬಾದದಲ್ಲಿ ಮತ್ತು ಇತರೆ ಎಲ್ಲಾ ಕಡೆಗಳಲ್ಲಿ ಕರೆ ಮಾಡಿ ವಿಚಾರಿಸಲು ಅವರಿಬ್ಬರ ಪತ್ತೆಯಾಗಿರುವುದಿಲ್ಲ, ಫಿರ್ಯಾದಿಯಹವರ ಮಗ ಮೊಹ್ಮದ ಮುಜಾಹಿದುದ್ದೀನ್ ಇವನ ಚಹರೆ ಪಟ್ಟಿ 1) ಹೆಸರು ಮೊಹ್ಮದ ಮುಜಾಹಿದುದ್ದೀನ್ ವಯ: 17 ವರ್ಷ, 2) ಎತ್ತರ 5'6'' ದುಂಡು ಮುಖ ಸಾಧಾರಣ ಮೈಕಟ್ಟು, ಗೋಧಿ ಬಣ್ಣ, ನೆಟ್ಟಗೆ ಮೂಗು ಹೊಂದಿರುತ್ತಾನೆ, 3) ಮೈ ಮೇಲೆ ಗ್ರೈ ಬಣ್ಣದ ಟಿ-ಶರ್ಟ ಮತ್ತು ಬ್ಲೂ ಜಿನ್ಸ್ ಪ್ಯಾಂಟ್ ಇರುತ್ತದೆ, 4) ಕಪ್ಪು ಬಣ್ಣದ ಟೋಪಿ (ತಾಜ) ತೊಟ್ಟಿರುತ್ತಾನೆ, 5) ಕಾಲಿನಲ್ಲಿ ಕಪ್ಪು ಬಣ್ಣದ ಎಕ್ಷನ್ ಬೂಟ ತೊಟ್ಟಿರುತ್ತಾನೆ ಹಾಗೂ ಅಣ್ಣನ ಮಗ ಮೊಹ್ಮದ ಮುಖಿಮುದ್ದೀನ್ ಇವನ ಚಹರೆ ಪಟ್ಟಿ 1) ಹೆಸರು ಮೊಹ್ಮದ ಮುಖಿಮುದ್ದೀನ್ ವಯ: 16 ವರ್ಷ, 2) ಎತ್ತರ 5'7'' ದುಂಡು ಮುಖ ತಳ್ಳನೇಯ ಮೈಕಟ್ಟು, ಗೋಧಿ ಬಣ್ಣ, ನೆಟ್ಟಗೆ ಮೂಗು ಹೊಂದಿರುತ್ತಾನೆ, 3) ಮೈ ಮೇಲೆ ಕಪ್ಪು ಬಣ್ಣದ ಟಿ-ಶರ್ಟ ಹಾಗೂ ಬ್ಲೂ ಜಿನ್ಸ್ ಪ್ಯಾಂಟ್ ಇರುತ್ತದೆ, 4) ಕಪ್ಪು ಬಣ್ಣದ ಟೋಪಿ (ತಾಜ) ತೊಟ್ಟಿರುತ್ತಾನೆ, 5) ಕಾಲಿನಲ್ಲಿ ಕಪ್ಪು ಬಣ್ಣದ ಸೈಂಡಲ್ ತೊಟ್ಟಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 06-06-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬಸವಕಲ್ಯಾಣ ನಗರ ಪೊಲೀಸ್ ಠಾಣೆ  ಅಪರಾಧ ಸಂ. 74/2020, ಕಲಂ. 87 ಕೆ.ಪಿ ಕಾಯ್ದೆ :-
ದಿನಾಂಕ 06-06-2020 ರಂದು ಬಸವಕಲ್ಯಾಣ ನಗರದ ನಾರಾಯಣಪೂರ ಕ್ರಾಸ್ ಹತ್ತಿರ ಇರುವ ನೂತನ ನಗರ ಸಭೆ ಕಟ್ಟಡ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಗುಂಪಾಗಿ ಕುಳಿತು ಕೊಂಡು ಹಣ ಹಚ್ಚಿ ಪಣ ತೋಟ್ಟು ಇಸ್ಪಿಟ್ ಎಲೆಗಳ ಅಂದರ ಬಾಹರ್ ಎಂಬ ನಸಿಬಿನ ಜೂಜಾಟವನ್ನು ಆಡುತ್ತಿದ್ದಾರೆಂದು ಕರೆ ಮುಖಾಂತರ ಸುನಿಲಕುಮಾರ ಪಿ.ಎಸ್. (ಕಾ&ಸೂ) ಬಸವಕಲ್ಯಾಣ ನಗರ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಬಸವಕಲ್ಯಾಣ ನಗರದ ನಾರಾಯಣಪೂರ ಕ್ರಾಸ್ ಹತ್ತಿರ ಇರುವ ನೂತನ ನಗರ ಸಭೆ ಕಟ್ಟಡದ ಹತ್ತಿರ ಮರೆಯಾಗಿ ನಿಂತು ನೋಡಲು ಬಾತ್ಮಿಯಂತೆ ಬಸವಕಲ್ಯಾಣ ನಗರದ ನಾರಾಯಣಪೂರ ಕ್ರಾಸ್ ಹತ್ತಿರ ಇರುವ ನೂತನ ನಗರ ಸಭೆ ಕಟ್ಟಡ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ 1) ಸಂದೀಪ ತಂದೆ ಜಗನ್ನಾಥ ಮಾನೆ ವಯ: 22 ವರ್ಷ, ಜಾತಿ: ಕೋರವಾ & 2) ವಿನೋದ ತಂದೆ ಸಂಜು ಕಲ್ಲಮೂಳೆ ವಯ: 32 ವರ್ಷ, ಜಾತಿ: ಸುಡಗಾಡ ಸಿದ್ಧ, ಇಬ್ಬರು ಸಾ: ಕೈಕಾಡಿ ಗಲ್ಲಿ ಬಸವಕಲ್ಯಾಣ, 3) ಶಿವಾ ತಂದೆ ಮಾಣಿಕ ಸಗಟೆ ವಯ: 40 ವರ್ಷ, ಜಾತಿ: ಮಾಂಗರವಾಡಿ, 4) ಪಂಡಿತ ತಂದೆ ವಿಲಾಸರಾವ ಗಾಯಕವಾಡ ವಯ: 32 ವರ್ಷ, ಜಾತಿ: ಎಸ್.ಸಿ (ಮಾದಿಗ), ಹಾಗೂ 5) ಮುಕೇಶ ತಂದೆ ಶಟಬಾ ಧೋತರೆ ವಯ: 22 ವರ್ಷ, ಜಾತಿ: ಒಡ್ಡರ, ಮೂವರು ಸಾ: ಶರಣನಗರ ಬಸವಕಲ್ಯಾಣ ಇವರೆಲ್ಲರೂ ಕುಳಿತು ಇಸ್ಪಿಟ್ ಎಲೆಗಳ ಅಂದರ ಬಾಹರ ಎಂಬ ನಸೀಬಿನ ಜೂಜಾಟವನ್ನು ಹಣ ಹಚ್ಚಿ ಪಣ ತೊಟ್ಟು ಆಡುತ್ತಿರುವುದನ್ನು ನೋಡಿ ಎಲ್ಲರು ಒಮ್ಮೆಲೆ ದಾಳಿ ಮಾಡಿ ಹಿಡಿದುಕೊಂಡು ಪಂಚರ ಸಮಕ್ಷಮ ಅವರಿಂದ ಒಟ್ಟು ನಗದು ಹಣ 5200/- ರೂ. ಮತ್ತು 52 ಇಸ್ಪೀಟ್ ಎಲೆಗಳು ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಹುಮನಾಬಾದ ಪೊಲೀಸ್ ಠಾಣೆ ಅಪರಾಧ ಸಂ. 82/2020, ಕಲಂ. 379 ಐಪಿಸಿ :-
ಫಿರ್ಯಾದಿ ವಿಶಾಲ ಬುರಾಪುರ ಸಾ: ಹುಮನಾಬಾದ ರವರು ತನ್ನ ಮೊಟಾರ್ ಸೈಕಲ ನಂ. ಕೆಎ-39/ಕ್ಯೂ-4694, ಚಾಸಿಸ್ ನಂ. ಎಮ್.ಬಿ.ಎಲ್.ಹೆಚ್.ಎ.10.ಸಿ.ಜಿ.ಜಿ.ಹೆಚ್.ಕೆ.38569, ಇಂಜಿನ್ ನಂ. ಹೆಚ್.ಎ.10.ಇ.ಆರ್.ಜಿ.ಹೆಚ್.ಕೆ.45677, ಅ.ಕಿ 26,000/- ರೂ. ನೇದನ್ನು ದಿನಾಂಕ 29-05-2020 ರಂದು ಥೇರ್ ಮೈದಾನ ಹುಮನಾಬಾದ ಹಳೆ ನಂದಿನಿ ಮಿಲ್ಕ ಪಾರ್ಲರ ಹತ್ತಿರ ನಿಲ್ಲಿಸಿ ತರಕಾರಿ ತೆಗೆದುಕೊಂಡು ಬರಲು ಹೋಗಿ ಮರಳಿ ಬಂದು ನೋಡಲು ಸದರಿ ವಾಹನ ಇರಲಿಲ್ಲಾ, ಸದರಿ ವಾಹನವನ್ನು ಯಾರೋ ಅಪರಿಚತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಅರ್ಜಿಯ ಸಾರಾಂಶದ ಮೇರೆಗೆ ದಿನಾಂಕ 06-06-2020 ರಂದು ಪ್ರಕರನ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.