¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 27-08-2019
ಕಮಲನಗರ ಪೊಲೀಸ್ ಠಾಣೆ ಯು.ಡಿ.ಆರ್ ಸಂ. 09/2019, ಕಲಂ. 174
ಸಿ.ಆರ್.ಪಿ.ಸಿ :-
ದಿನಾಂಕ 26-08-2019 ರಂದು ಶ್ರಾವಣ ಮಾಸದ ಕೊನೆಯ ಸೋಮವಾರ ಇರುವುದಿರಿಂದ ಫಿರ್ಯಾದಿ
ನರಸಿಂಗ ತಂದೆ ಪುಂಡ್ಲಿಕ ಮಮದಾಪೂರೆ ವಯ: 70 ವರ್ಷ, ಜಾತಿ: ಎಸ್.ಸಿ ಹೊಲಿಯಾ, ಸಾ: ಚಾಂದೋರಿ, ತಾ:
ಕಮಲನಗರ ರವರ ಮಗನಾದ ಮಹೇಶ 16 ವರ್ಷ ಇತನು ಸಂಗಮ ದೇವಸ್ಥಾನಕ್ಕೆ ದರ್ಶನಕ್ಕೆ ಹೋಗಿ ಮಂದಿರದ
ಹತ್ತಿರ ನೀರು ಇರಲಾರದ ಕಾರಣ ಖೇಢ ಶಿವಾರದ ಕಡೆ ಇರುವ ಭೀಮಶೇಟ್ಟಿ ದಾನಾ ಇವರ ಹೊಲದ ಹತ್ತಿರ ಮಾಂಜ್ರಾ
ನದಿಯಲ್ಲಿ ನದಿಯ ತಗ್ಗಿನಲ್ಲಿರುವ ನೀರಲ್ಲಿ ಇಜಾಡಲು ಹೊಗಿ ಆಕಸ್ಮಿಕವಾಗಿ ಮ್ರತಪಟ್ಟಿರುತ್ತಾನೆ,
ತನ್ನ ಮಗನ ಸಾವಿನ ಮೇಲೆ ಯಾವುದೇ ರೀತಿಯ ಯಾರ ಮೇಲೆಯು ಸಂಶಯ ಇರುವುದಿಲ್ಲಾ ಅಂತ ಕೊಟ್ಟ
ಫಿರ್ಯಾಧಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಚಿಟಗುಪ್ಪಾ ಪೊಲೀಸ ಠಾಣೆ ಅಪರಾಧ
ಸಂ. 87/2019, ಕಲಂ. 32, 34 ಕೆ.ಇ ಕಾಯ್ದೆ :-
ದಿನಾಂಕ 26-08-2019
ರಂದು
ಕಲ್ಲೂರ ಗ್ರಾಮದಲ್ಲಿ ಸಾರ್ವಜನಿಕರ ಸ್ಥಳದಲ್ಲಿ ಅನಧಿಕೃತವಾಗಿ ಸರಾಯಿ ಮಾರಾಟ ಮಾಡುತ್ತಿರುವ ಬಗ್ಗೆ ಮುಜೀಬ ಎ.ಎಸ್.ಐ. ಚಿಟಗುಪ್ಪಾ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಎ.ಎಸ್.ಐ ರವರು ಇಬ್ಬರು ಪಂಚರನ್ನು
ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಕಲ್ಲೂರ ಗ್ರಾಮದ ಪಂಚಾಯತ ಹತ್ತಿರ ಮರೆಯಾಗಿ ನಿಂತು ನೋಡಲು ಆರೋಪಿ ಅಂಬಣ್ಣಾ ತಂದೆ ಭೀಮಣ್ಣಾ ಚೌಡಪ್ಪನೋರ,
ವಯ: 60 ವರ್ಷ, ಸಾ: ಕಲ್ಲೂರ ಇತನು ಒಂದು ಪ್ಲಾಸ್ಟಿಕ ಚೀಲದಲ್ಲಿ ಸರಾಯಿ ಮಾರಾಟ ಮಾಡುವುದನ್ನು ನೋಡಿ ಖಚಿತ ಪಡಿಸಿಕೊಂಡು ಅವನ ಮೇಲೆ ದಾಳಿ ಮಾಡಿ ಹಿಡಿದು ಅವನ ಹತ್ತಿರ ಇದ್ದ ಪ್ಲಾಸ್ಟೀಕ್ ಚೀಲದಲ್ಲಿ ನೋಡಲು ಅದರಲ್ಲಿ ಯು.ಎಸ್ ವಿಸ್ಕಿ 90 ಎಮ್.ಎಲ್ ವುಳ್ಳ 38 ಪ್ಲಾಸ್ಟಿಕ್ ಬಾಟಲಗಳು
ಅ.ಕಿ 1140/- ರೂಪಾಯಿ ನೇದನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು,
ಸದರಿ ಆರೋಪಿಗೆ ಮಧ್ಯ ಮಾರಾಟ ಮಾಡಲು ಸರಕಾರದಿಂದ ಪರವಾನಿಗೆ ಪಡೆದ ಯಾವುದಾದರೂ ಕಾಗದ ಪತ್ರಗಳು ಇವೆಯಾ ಅಂತಾ ವಿಚಾರಿಸಿದಾಗ ನನ್ನ ಹತ್ತಿರ ಯಾವುದೇ ಕಾಗದ ಪತ್ರಗಳಿರುವುದಿಲ್ಲ ಅಂತಾ ತಿಳಿಸಿದನು, ನಂತರ ಆರೋಪಿಗೆ ತಾಬೆಗೆ ತೆಗೆದುಕೊಂಡು, ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಗೊಳ್ಳಲಾಗಿದೆ.
ಖಟಕಚಿಂಚೊಳಿ ಪೊಲೀಸ್ ಠಾಣೆ
ಅಪರಾಧ ಸಂ. 105/2019, ಕಲಂ. 3 & 7 ಇ.ಸಿ ಕಾಯ್ದೆ :-
ದಿನಾಂಕ 26-08-2019 ರಂದು ಖಟಕ ಚಿಂಚೋಳಿ
ಗ್ರಾಮದ ನಾಗಶೇಟ್ಟಿ ತಂದೆ ರುದ್ರಪ್ಪಾ ಸಿರ್ಸಗೆ ರವರ ಮಳಿಗೆಯಲ್ಲಿ ಸರಕಾರದ ವಿವಿಧ ಯೋಜನೆ
ಅಡಿಯಲ್ಲಿ ಸರಬರಾಜು ಮಾಡುವ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ಕಾಳ ಸಂತೆಯಲ್ಲಿ ಮಾರಾಟ ಮಾಡಲು
ಅಕ್ರಮವಾಗಿ ಅಕ್ಕಿಯ ಚೀಲಗಳನ್ನು ಲಾರಿಯಲ್ಲಿ ತುಂಬುತ್ತಿರುವ ಬಗ್ಗೆ ಫಿರ್ಯಾದಿ ರಾಜೇಂದ್ರ ಕುಮಾರ
ಆಹಾರ ನಿರೀಕ್ಷಕರು ತಹಶಿಲ ಕಛೇರಿ ಭಾಲ್ಕಿ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಫಿರ್ಯಾದಿರವರು ಖಟಕ
ಚಿಂಚೋಳಿ ಪೊಲೀಸ್ ಠಾಣೆಗ ಬಂದು ಪೊಲೀಸರನ್ನು ಕರೆದುಕೊಂಢು ಇಬ್ಬರು ಪಂಚರನ್ನು ಬರಮಾಡಿಕೊಂಡು ನಾಗಶೇಟ್ಟಿ
ತಂದೆ ರುದ್ರಪ್ಪಾ ಸಿರ್ಸಗೆ ರವರ ಮಳಿಗೆ ಹತ್ತಿರ ಹೊದಾಗ ಆರೋಪಿತರಾದ 1) ನಾಗಪ್ಪಾ @ ನಾಗರಾಜ ತಂದೆ ಶಿವರಾಜ
ಸಜ್ಜನಶೇಟ್ಟಿ ವಯ: 38 ವರ್ಷ, ಜಾತಿ: ಲಿಂಗಾಯತ, 2) ಪ್ರಕಾಶ ತಂದೆ ಪ್ರಭುರಾವ
ಹುಡಗೆ ವಯ: 28
ವರ್ಷ,
ಜಾತಿ: ಲಿಂಗಾಯತ, 3) ದಸ್ತಗೀರಿ ತಂದೆ
ಖಮೊರೊದ್ದಿನ್ ಎಖ್ಖೇಳೆ ವಯ: 21 ವರ್ಷ, ಜಾತಿ: ಮುಸ್ಲಿಂ, 4) ಶಿವರಾಜ ತಂದೆ ಹಣಮಂತಪ್ಪಾ ಕಮಠಾಣೆ ವಯ: 48 ವರ್ಷ, ಜಾತಿ: ಲಿಂಗಾಯತ
ಹಾಗೂ 5) ಮಲ್ಲಿಕಾರ್ಜುನ ತಂದೆ ವಿಠಲ ಮೇತ್ರೆ ವಯ: 35 ವರ್ಷ, ಜಾತಿ: ಕುರುಬ,
ಎಲ್ಲರೂ ಸಾ: ಖಟಕ ಚಿಂಚೋಳಿ ಇವರೆಲ್ಲರೂ ಚೀಲಗಳನ್ನು ಹೊತ್ತಿಕೊಂಡು ಲಾರಿಯಲ್ಲಿ
ತುಂಬುತ್ತಿರುವುದನ್ನು ನೋಡಿ ಎಲ್ಲರು ಕೂಡಿ ಲಾರಿಯ ಹತ್ತಿರ ಹೋಗಿ ದಾಳಿ ಮಾಡಲು ಲಾರಿ ನಂ. ಜಿಜೆ-36/ಟಿ-8055 ನೇದರಲ್ಲಿ ಪರಿಶೀಲಿಸಿ
ನೋಡಲಾಗಿ ಅದರಲ್ಲಿ ಸರಕಾರದ ವಿವಿಧ ಯೋಜನೆ ಅಡಿಯಲ್ಲಿ ಸರಬರಾಜು ಮಾಡುವ ಅಕ್ಕಿಯ ಚೀಲಗಳಿದ್ದು ಹಾಗೂ ಮಳಿಗೆಯಲ್ಲಿ ಹೋಗಿ ನೋಡಲು
ಅಲ್ಲಿಯು ಕೂಡ ಚೀಲಗಳಿದ್ದು ಅವುಗಳನ್ನು ಪರಿಶೀಲಿಸಿ ನೋಡಲಾಗಿ ಅದರಲ್ಲಿ ಸರಕಾರದ ವಿವಿಧ ಯೋಜನೆ
ಅಡಿಯಲ್ಲಿ ಸರಬರಾಜು ಮಾಡುವ ಅಕ್ಕಿಯ ಚೀಲಗಳಿದ್ದು, ಮಳಿಗೆಯಲ್ಲಿ
ಸಂಗ್ರಹಿಸಿಟ್ಟು ಇಲ್ಲಿಂದ ಸಾಗಾಣೆ ಮಾಡಲು ಸರಕಾರದಿಂದ ಯಾವುದಾದರು ಪರವಾನಿಗೆ ಪಡೆದುಕೊಂಡ ಬಗ್ಗೆ
ವಿಚಾರಿಸಲು ಆರೋಪಿತರು ಸರಕಾರದಿಂದ ವಿವಿಧ ಯೋಜನೆಗಳ ಅಡಿಯಲ್ಲಿ ಸರಬರಾಜು ಮಾಡುವ
ಅಕ್ಕಿಯನ್ನು ಈ ಮಳಿಗೆಯಲ್ಲಿ ಸಂಗ್ರಹಿಸಿಟ್ಟು ಇಲ್ಲಿಂದ ಸಾಗಾಣೆ ಮಾಡಲು ಯಾವುದೇ ಪರವಾನಿಗೆ
ಇರುವುದಿಲ್ಲ ಅಂತ ತಿಳಿಸಿರುತ್ತಾರೆ, ಲಾರಿ
ಚಾಲಕ ಅಲ್ಲಿಂದ ಓಡಿ ಹೊಗಿರುತ್ತಾನೆ, ಒಟ್ಟು 506 ಪ್ಲಾಸ್ಟೀಕ್ ಚೀಲಗಳಿದ್ದು ಸದರಿ ಅಕ್ಕಿಯ ಚೀಲಗಳನ್ನು
ತೂಕ ಮಾಡಲು ಒಂದು ಎಲೆಕ್ಟ್ರಾನಿಕ್ ತೂಕ ಯಂತ್ರ ತರಿಸಿ ಹಮಾಲರುಗಳಾದ 1) ಸುಲ್ತಾನಸಾಬ ಸಿಂದನಕೇರಾ, 2) ಓಂಕಾರ ಭದ್ರಶೇಟ್ಟೆ, 3) ಕಾಶೇಪ್ಪಾ ಜಿರಗೆ, 4) ಗೌಶೋದ್ದಿನ್ ತಬೊಲಿ, 5) ಬಸವರಾಜ ಹಾಲಹಿಪ್ಪರ್ಗೆ
ಹಾಗೂ 6)
ಶಿವಕುಮಾರ
ಹಿಪ್ಪರ್ಗೆ ಎಲ್ಲರು ಸಾ: ಖಟಕ ಚಿಂಚೋಳಿ ರವರ ಸಹಾಯದೊಂದಿಗೆ ಪ್ರತಿಯೊಂದು ಚೀಲವನ್ನು
ಪ್ರತ್ಯೇಕವಾಗಿ ತೂಕ ಮಾಡಲಾಗಿ ಪ್ರತಿಯೊಂದು ಅಕ್ಕಿಯ ಚೀಲವು 40 ಕೆ.ಜಿ
ತೂಕವುಳ್ಳವುಗಳಾಗಿದ್ದು, ಹೀಗೆ 506 ಪ್ಲಾಸ್ಟಿಕ್ ಚೀಲಗಳಲ್ಲಿ ಒಟ್ಟು 202 ಕ್ವಿಂಟಲ್ 40 ಕೆ.ಜಿ ಅಕ್ಕಿ ಇದ್ದು ಪ್ರತಿ
ಕೆ.ಜಿ ಯ ಅಕ್ಕಿಯ ಬೆಲೆ 28.30 ರೂಪಾಯಿ
ಇದ್ದು ಹೀಗೆ ಒಟ್ಟು ಅಕ್ಕಿಯ ಅ.ಕಿ 5,72,792/- ರೂಪಾಯಿ ಬೆಲೆ ಬಾಳುವುದು ಇರುತ್ತದೆ, ನಂತರ
ಸದರಿ ಹಮಾಲರ ಸಹಾಯೊಂದಿಗೆ ಎಲ್ಲಾ 506 ಅಕ್ಕಿ ಚೀಲಗಳನ್ನು ಅಕ್ರಮವಾಗಿ ಸಾಗಣೆ ಮಾಡಲು
ತಂದಿದ್ದ ಲಾರಿ ನಂ. ಜಿಜೆ-36/ಟಿ-8055 ನೇದು ಅ.ಕಿ 15,00,000/-ರೂ ನೇದರಲ್ಲಿ ತುಂಬಿಸಿ
ಅಕ್ಕಿ ಚೀಲಗಳನ್ನು ತುಂಬಿದ ಲಾರಿ ಹಾಗು ಅಕ್ರಮವಾಗಿ ಅಕ್ಕಿಯನ್ನು ಸಂಗ್ರಹಿಸಿ ಸಾಗಣೆ
ಮಾಡುತ್ತಿರುವ ವ್ಯಕ್ತಿಗಳನ್ನು ವಶಕ್ಕೆ ಪಡೆದುಕೊಂಡು ಖಟಕ ಚಿಂಚೋಳಿ ಪೊಲೀಸ್ ಠಾಣೆಗೆ ಬಂದು ಒಪ್ಪಿಸಿದ
ಮೇರೆಗೆ ಸದರಿ ಆರೋಪಿತರ ವಿರುದ್ದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.