Police Bhavan Kalaburagi

Police Bhavan Kalaburagi

Monday, February 18, 2019

KALABURAGI DISTRICT REPORTED CRIMES

ಕೊಲೆ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ. 17-2-2019 ರಂದು ಮುಂಜಾನೆ 7-00 ಎ.ಎಂ. ಗಂಟೆಯ ಸುಮಾರಿಗೆ ನಮೂರಿನಿಂದ ಕೆರೂರ ಗ್ರಾಮಕ್ಕೆ ನನ್ನ ವಯಕ್ತಿಕ ಕೆಲಸದ ನಿಮಿತ್ಯ ನನ್ನ ಮೋಟಾರ ಸೈಕಲ ಮೇಲೆ ಹೋಗುತ್ತಿರುವಾಗ ತಾವರಗೇರಾ ಸೀಮಾಂತರದಲ್ಲಿ ಬರುವ ಸಾತಪೀರ ದರ್ಗಾ ಇನ್ನೂ ಒಂದು ಫರ್ಲಾಂಗ ಕ್ಕಿಂತ ಮುಂಚಿತವಾಗಿ ಸರಕಾರಿ ಗೈರಾಣಿ ಜಮೀನಿನಲ್ಲಿ ರೋಡನ  ಪಕ್ಕದಲ್ಲಿ  ಒಬ್ಬ ವ್ಯಕ್ತಿ ಬಿದಿದ್ದನ್ನು ನೋಡಿ ಸಮೀಪ ಹೋಗಿ ನೋಡಲಾಗಿ ಒಬ್ಬ ವ್ಯಕ್ತಿಯು ಅಂದಾಜ 25-30 ವರ್ಷ ವಯಸ್ಸಿನವನಿದ್ದು ಅವನ ಕುತ್ತಿಗೆಯ  ಎಡಭಾಗದಲ್ಲಿ, ಎದರುಗಡೆ ಹಾಗೂ ಎಡಕಿವಿ ಮೇಲೆ ಭಾರಿ ಹರಿತವಾದ ಆಯುಧದಿಂದ ಕೊಯಿದು ಭಾರಿ ರಕ್ತಗಾಯವಾಗಿ ಮಾಂಸಖಂಡಗಳು ಕಾಣುತಿದ್ದು ಬಾಯಿ, ಮೂಗಿನಿಂದ ರಕ್ತಸ್ರಾವಾಗಿ ಮೃತ ಮೃಟ್ಟಿದ್ದನು.  ಸದರಿ ವ್ಯಕ್ತಿಯ ಮುಖದ ಮೇಲೆ ಉದ್ದನೆಯ ಕಪ್ಪು ದಾಡಿ ಇದ್ದು, ಎತ್ತರ 5 ಫೀಟ 6 ಇಂಚು ಇದ್ದು ತಳ್ಳನೆಯ ಸದೃಡ ಮೈಕಟ್ಟು ಹೊಂದಿದ್ದು ,ಕೆಂಪು ಗೋಧಿ ಮೈಬಣ್ಣ ಹೊಂದಿದ್ದು ಮೈ ಮೇಲೆ ಒಂದುನೀಲಿ ಕಲರ ಕುರ್ತಾ (ಶರ್ಟ), ಒಂದು ಬಿಳಿಬನಿಯನ, ಒಂದು ಕಪ್ಪು ಬಣ್ಣದ ಪೈಜಾಮ ಧರಿಸಿದ್ದು  ಸದರೀ ವ್ಯಕ್ತಿಯು ಮುಸ್ಲಿಂ ಸಮುದಾಯ ದವನಾಗಿರುವ ಬಗ್ಗೆ ಮೇಲ್ನೋಟಕ್ಕೆ ಕಂಡು ಬಂದಿರುತ್ತದೆ. ಸದರಿ ಘಟನೆಯು ದಿನಾಂಕ. 16-2-2019 ರಂದು ರಾತ್ರಿ ವೇಳೆಯಿಂದ ದಿನಾಂಕ. 17-2-2019 ರಂದು 7-00 ಎ.ಎಂ.ದ ಮದ್ಯದ ಅವಧಿಯಲ್ಲಿ ಆಗಿರುತ್ತದೆ.  ದಿನಾಂಕ.16-2-2019 ರಂದು  ರಾತ್ರಿ ವೇಳೆಯಿಂದ ದಿನಾಂಕ. 17-2-2019 ರಂದು ಬೆಳಗ್ಗೆ 7-00 ಎ.ಎಂ. ದ ಮದ್ಯದ ಅವಧಿಯಲ್ಲಿ ಯಾರೋ ದುಷ್ಕರ್ಮಿಗಳು ಯಾವುದೋ ದುರುದ್ದೇಶದಿಂದ ಹರಿತವಾದ ಆಯುಧಗಳಿಂದ ಕುತ್ತಿಗೆಗೆ,ಎಡಕಿವಿಗೆ ಹೊಡೆದು ಕೊಲೆ ಮಾಡಿರುತ್ತಾರೆ.ಸದರಿ ಮೃತ ವ್ಯಕ್ತಿಯು ಅಪರಿಚಿದನಾಗಿದ್ದು ಹೆಸರು ವಿಳಾಸ ಗೊತ್ತಾಗಿರುವದಿಲ್ಲಾ. ಆದುದರಿಂದ ಸದರಿ ವ್ಯಕ್ತಿಯನ್ನು ಕೊಲೆ ಮಾಡಿದ ಆರೋಪಿತರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಶ್ರೀ ಆನಂದ ತಂದೆ ರಾಣಪ್ಪಾ ಹುಲಿ ಸಾ;ತಾವಗೇರಾ ತಾ;ಜಿ;ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಸಂತೋಷ ತಂದೆ ಅರ್ಜುನ ಬಿರಾದಾರ  : ಪಶುವೈಧ್ಯಕೀಯ ಸಹಾಯಕ ಪಶು ಆಸ್ಪತ್ರೆ ಉಡಚಾಣ ಸಾ: ಕರಜಗಿ ರವರು ಮತ್ತು ತಾಯಿಯವರಾದ ಶ್ರೀಮತಿ ಅಂಬವ್ವ ಗಂಡ ಅರ್ಜುನ ಬಿರಾದಾರ, ಹೆಂಡತಿಯಾದ ಗಜರಾಬಾಯಿ ಎಲ್ಲರೂ ದಿನಾಂಕ  14-02-2019 ರಂದು  ಸಾಯಂಕಾಲ 5:00 ಗಂಟೆಗೆ ಉಡಚಾಣ ಗ್ರಾಮದಲ್ಲಿ ನನ್ನ ಸಂಬಂಧಿಕರ ಅಕ್ಕಿಕಾಳು ಕಟ್ಟುವ ಕಾರ್ಯಕ್ರಮಕ್ಕಾಗಿ ಕರಜಗಿ ಗ್ರಾಮದಲ್ಲಿರುವ ನಮ್ಮ ಸ್ವಂತ ಮನೆಗೆ ಕೀಲಿ ಹಾಕಿಕೊಂಡು ಹೋಗಿರುತ್ತೇವೆ.         ಉಡಚಾಣ ಗ್ರಾಮದಿಂದ ದಿನಾಂಕ 15-02-2019 ರಂದು ಸಾಯಂಕಾಲ 3:30 ಗಂಟೆಗೆ ಮರಳಿ ಎಲ್ಲರೂ ಊರಿಗೆ ಬಂದು ನಮ್ಮ ಮನೆಗೆ ಹೋಗಿ ನೋಡಿದಾಗ ಮನೆಯ ಬಾಗಿಲಿಗೆ ಹಾಕಿದ ಕಿಲಿ ಕೊಂಡಿ ಮುರಿದ ಸ್ಥಿತಿಯಲ್ಲಿ ಇದ್ದು ನಾವೆಲ್ಲ ಮನೆಯ ಒಳಗೆ ಹೋಗಿ ನೋಡಿದಾಗ ಬೆಡ್ರೂಮ  ಕೋಣೆಯಲ್ಲಿದ್ದ ಅಲಮಾರಿ  ತೆರದ ಸ್ಥಿತಿಯಲ್ಲಿದ್ದು ಹಾಗೂ ಅಲಮಾರಿಯ ಮುಂದೆ ಬಟ್ಟೆ ಬರೆಗಳು ಚಲ್ಲಾಪಿಲ್ಲಿ ಯಾಗಿ ಬಿದ್ದಿದ್ದು ನಾವೆಲ್ಲರು ಗಾಬರಿಯಾಗಿ ನಾವು ಅಲಮಾರಿ ಚೆಕ ಮಾಡಲಾಗಿ ಅಲಮಾರಿಯಲ್ಲಿಟ್ಟಿದ್ದ ಬಂಗಾರದ ಆಭರಣಗಳು  ಮತ್ತು ನಗದು ಹಣ  ಒಟ್ಟು :ಕಿ:3,30,000/- ಸಾವಿರ ರೂಪಾಯಿಗಳ ಮೌಲ್ಯದ ಬಂಗಾರದ ಆಭರಣಗಳು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಡ್ಡಿಗೆ ಬೆಂಕಿ ಹಚ್ಚಿ ಹಾನಿ ಮಾಡಿದ ಪ್ರಕರಣ :
ಯಡ್ರಾಮಿ ಠಾಣೆ : ದಿನಾಂಕ 16-02-2019 ರಂದು ಬೆಳಿಗ್ಗೆ ನಮ್ಮ ತಂಗಿ ಗಂಡ ಬಸವರಾಜ ಈತನು ನಾನು ನನ್ನ ಹಂಡತಿಗೆ ನಮ್ಮೂರಿಗೆ ಕರೆದುಕೊಂಡು ಹೊಗುತ್ತೇನೆ ಅಂತಾ ಅಂದನು, ಆಗ ನಾವು ಮುಂಬರುವ ಶಿವರಾತ್ರಿ ಹಬ್ಬ ಮಾಡಿಕೊಂಡು ಕರೆದುಕೊಂಡು ಹೋಗು ಅಂತಾ ಹೇಳಿದೇವು ಅದಕ್ಕೆ ಆತನು ಒಪ್ಪದೇ ನಮ್ಮೊಂದಿಗೆ ಗಲಾಟೆ ಮಾಡಿಕೊಂಡು ಹೋದನು, ನಂತರ ರಾತ್ರಿ 8;00 ಗಂಟೆಗೆ ಬಸವರಾಜ ಈತನು ಮತ್ತೆ ಸರಾಯಿ ಕುಡಿದು ನಮ್ಮ ಮನೆಗೆ ಬಂದು ಏ ಸೂಳಿ ಮಕ್ಕಳ್ಯಾ ನನ್ನ ಹೆಂಡತಿಗೆ ನನ್ನೊಂದಿಗೆ ಕಳಿಸು ಅಂದರೆ ಕಳಸಲ್ಲ ಅಂತಿರಾ ಮಕ್ಕಳ್ಯಾ ಇವತ್ತ ನಿಮಗೆಲ್ಲರಿಗೂ ಬೆಂಕಿ ಹಚ್ಚಿ ಸುಡತಿನಿ ಅಂತಾ ಅನ್ನುತ್ತಿದ್ದನು, ಆಗ ನಮ್ಮ ಅಣ್ಣತಮ್ಮಕಿಯ ಬಾಬುಗೌಡ ಮಾಲಿ ಪಾಟೀಲ ಮತ್ತು ಮಲ್ಲಿನಾಥ ತಂದೆ ಬಸವಂತ್ರಾಯ ಮಾಲಿ ಬಿರಾದಾರ ರವರೆಲ್ಲರೂ ಕೂಡಿ ಬಸವರಾಜನಿಗೆ ತಿಳವಳಿಕೆ ಹೇಳಿ ಕಳುಹಿಸಿಕೊಟ್ಟರು, ನಮ್ಮ ಮನೆಯ ಮುಂದೆ ತೊಗರಿ ಕಟ್ಟಿಗೆ ಮತ್ತು ಆಪಿನಿಂದ ಒಂದು ಶಡ್ಡ ಕಟ್ಟಿದ್ದು, ಅದರ ಮೇಲೆ 10 ಪತರಾಸ ಹಾಕಿರುತ್ತೇವೆ, ಮನೆಯಲ್ಲಿ ಮತ್ತು ಮನೆಯ ಮುಂದೆ ಇದ್ದ ಶಡ್ಡಿನಲ್ಲಿ ಹತ್ತಿ ಹಾಕಿದ್ದು ಇರುತ್ತದೆ, ಮತ್ತು ಎರಡುಕುರಿಗಳನ್ನು ಸಹ ಅಲ್ಲೆ ಶಡ್ಡಿನಲ್ಲಿ ಕಟ್ಟಿ ನಾನು ನಮ್ಮ ತಂಗಿ ಬೋರಮ್ಮ ಮತ್ತು ಅವಳ ಮಗ ಮೂರುಜನರು ಊಟ ಮಾಡಿ ರಾತ್ರಿ 9;30 ಗಂಟೆಗೆ ಶಡ್ಡಿನಲ್ಲೇ ಮಲಗಿಕೊಂಡಿರುತ್ತೇವೆ, ನಮ್ಮ ತಂದೆ ತಾಯಿ ಮತ್ತು ನಮ್ಮ ತಮ್ಮ ಬಾಪುಗೌಡ ಹಾಗು ಅವನ ಹೆಂಡತಿ ದೇವಕ್ಕಿ ಹೀಗೆಲ್ಲರೂ ಮನೆಯ ಮುಂದಿನ ಇನ್ನೊಂದು ಕೋಣೆಯಲ್ಲಿ ಮಲಗಿಕೊಂಡಿದ್ದರು, ರಾತ್ರಿ 11;00 ಗಂಟೆ ಸುಮಾರಿಗೆ ನಾವು ಮಲಗಿದ ಶಡ್ಡಿಗೆ ಬೆಂಕಿ ಹತ್ತಿದ್ದನ್ನು ನೋಡಿ ನಾನು ಒಮ್ಮೇಲೆ ಚೀರಾಡಿ ನಮ್ಮ ತಂಗಿಗೆ ಮತ್ತು ಅವಳ ಮಗನಿಗೆ ಕರೆದುಕೊಂಡು ಹೊರಗೆ ಬಂದು ನೋಡಿದಾಗ ನಮ್ಮ ತಂಗಿ ಗಂಡ ಬಸವರಾಜ ಈತನು, ಕಡ್ಡಿ ಕೊರಿದು ಬೆಂಕಿ ಹಚ್ಚಿನಿ ಮಕ್ಕಳ್ಯಾ ಇವತ್ತ ನನ್ನ ಕೈಯಲ್ಲಿ ನೀವೆಲ್ಲರೂ ಸಾಯಿತಿರಿ ಅಂತಾ ಅನ್ನುತ್ತಿದ್ದನು, ಆಗ ನಾನು ಅವನಿಗೆ ಹಿಡಿಯಲು ಹೋದಾಗ ಓಡಿ ಹೋದನು, ನಂತರ ನಮ್ಮ ತಂದೆ ತಾಯಿ ನಮ್ಮ ತಮ್ಮ ಬಾಪುಗೌಡ ಮತ್ತು ಅವರ ಹೆಂಡತಿ ದೇವಕ್ಕಿ ಹಾಗು ನಮ್ಮ ಅಣ್ಣತಮ್ಮಕಿಯ ಬಾಬುಗೌಡ ಮಾಲಿಪಾಟೀಲ, ಮಲ್ಲಿನಾಥ ಮಾಲಿ ಬಿರಾದಾರ, ಬಸವರಾಜ ತಂದೆ ಶರಣಪ್ಪ ಬಳೂಂಡಗಿ, ಖ್ಯಾತಪ್ಪಗೌಡ ಖಾನಗೌಡ ಹಿಗೆಲ್ಲರೂ ಕೂಡಿ ಬೆಂಕಿ ಆರಿಸುವಷ್ಟರಲ್ಲಿ ಶಡ್ಡಿನಲ್ಲಿದ್ದ ಸುಮಾರು 12 ಕ್ವೀಂಟಲ್ ಹತ್ತಿ ಮತ್ತು ಅಡುಗೆ ಸಾಮಾನುಗಳು ವ್ಯವಸಾಯಕ್ಕೆ ಉಪಯೋಗಿಸುವ ದಿಂಡು ಮತ್ತು ನಗ ಹಾಗು ಇತರೆ ವ್ಯವಸಾಯದ ಸಾಮಗ್ರಿಗಳು, ಮತ್ತು ಮೋಟರ ಸೈಕಲ್ ನಂ ಕೆ.-32/.ಎಲ್-6389, ಮತ್ತು 10 ಪತರಾಸಗಳು ಹಾಗು ಒಂದು ಕುರಿಯನ್ನು ಸಂಪೂರ್ಣವಾಗಿ ಸುಟ್ಟು ಸತ್ತು ಹೋಗಿರುತ್ತದೆ, ಇನ್ನೊಂದು ಕುರಿಗೆ ಸುಟ್ಟ ಗಾಯಗಳು ಆಗಿರುತ್ತವೆ, ಹೀಗೆ ಸುಮಾರು ಅಂದಾಜು 1,20,000/- (ಒಂದು ಲಕ್ಷ ಇಪ್ಪತ್ತು ಸಾವಿರ) ರೂಪಾಯಿಯಷ್ಟು ಹಾನಿಮಾಡಿರುತ್ತಾನೆ ಅಂತಾ ಶ್ರೀ ಶರಣಗೌಡ ತಂದೆ ಅಳ್ಳಪ್ಪಗೌಡ ಮಾಲಿ ಬಿರಾದರ, ಸಾ: ಸುಂಬಡ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ:
ರಾಘವೇಂದ್ರ ನಗರ ಠಾಣೆ : ಶ್ರೀ ಚಾಂದಪಟೇಲ ತಂದೆ ಮೋದಿನ ಪಟೇಲ ಸಾ:ಶಹಾಜಿಲಾನಿ ದರ್ಗಾ ಹತ್ತಿರ 2ನೇ ಕ್ರಾಸ ಮದೀನಾ ಕಾಲೋನಿ ಕಲಬುರಗಿ ರವರು ಹಾಗೂ ದೌಲ ಪಟೇಲ, ಲಾಲ ಪಟೇಲ ಹಾಗೂ ಚಾಂದ ಪಟೇಲ ಅಂತಾ 4 ಜನ ಅಣ್ಣ-ತಮ್ಮಂದಿರು ಇದ್ದು ನಮ್ಮ ತಂದೆಯವರಾದ ಮೋದಿನ ಪಟೇಲ ಇವರು ಮದೀನಾ ಕಾಲೋನಿಯ ಜಿಲಾನಾಬಾದ ದರ್ಗಾ ಹತ್ತಿರ ಪ್ಲಾಟ ಖರೀದಿಸಿ ಮನೆ ಕಟ್ಟಿಸಿದ್ದು ಆ ಮನೆಯಲ್ಲಿ 4 ಜನ ಅಣ್ಣ-ತಮ್ಮಂದಿರಿಗೆ ಸಮನಾಗಿ ಕೋಣೆಗಳು ಹಂಚಿಕೆಯಾಗಿದ್ದು ಆದರೆ ನಮ್ಮ ಅಣ್ಣನಾದ ಲಾಲಪಟೇಲ ಇತನು ನಾನೇ ಮನೆಯ ವಾರಸುದಾರ ನಾನು ಮನೆ ಕೊಡುವದಿಲ್ಲಾ ಅಂತಾ ನಮ್ಮೊಂದಿಗೆ ಜಗಳ ಮಾಡುತ್ತಾ ಬಂದಿರುತ್ತಾನೆ. ದಿನಾಂಕ:- 16/02/2019 ರಂದು 7.30 ಪಿ.ಎಂ ಸುಮಾರಿಗೆ ನಾನು ನಮ್ಮ ಸ್ವಂತ ಊರಾದ ಹಸರಗುಂಡಗಿಯಿಂದ ಮನೆಗೆ ಬಂದಾಗ ನಮ್ಮ ಅಣ್ಣನಾದ ಲಾಲ ಪಟೇಲ ಇತನು ಈ ಮನೆಗೆ ಯಾಕೆ ಬಂದಿದ್ದಿ ಮಗನೆ ನಿನ್ನ ಸೊಕ್ಕು ಬಹಳ ಆಗ್ಯಾದ ಅಂದವನೆ ನನಗೆ ಹೊಡೆಯಲು ಬಂದನು ಆಗ ಆತನಿಂದ ತಪ್ಪಿಸಿಕೊಂಡು ಹಿಂದೆ ಸರಿದಾಗ ನಮ್ಮ ಅತ್ತಿಗೆಯಾದ ಅಂಜುಮ ಬೇಗಂ ಗಂಡ ಲಾಲಪಟೇಲ ಇವರು ಬಂದು ನನಗೆ ತಡೆದು ಹಿಡಿದುಕೊಂಡಳು ಆಗ ನಮ್ಮ ಅಣ್ಣ ಲಾಲಪಟೇಲ ಇತನು ಚಾಕುವಿನಿಂದ ನನ್ನ ಎಡಗೈ ರಟ್ಟೆಗೆ ಹೊಡೆದು ರಕ್ತಗಾಯ ಗೊಳಿಸಿದನು. ಆಗ ಲಾಲಪಟೇಲ ಇತನ ಅತ್ತೆ, ಮಾವ ಇವರು ಬಂದು ಇವನಿಗೆ ಬಿಡಬೇಡ ಹೊಡೆಯಿರಿ ಅಂತಾ ಅವರು ನನಗೆ ಹಿಡಿದುಕೊಂಡರು ಆಗ ಮತ್ತೆ ನಮ್ಮ ಅಣ್ಣ ಲಾಲಪಟೇಲ ಚಾಕುವಿನಿಂದ ಹೊಡೆಯಲು ಬಂದಾಗ ನನ್ನ ಬಲಗೈ ಉಂಗುರು ಬೇರಳಿಗೆ ಏಟು ಬಿದ್ದು ಸ್ವಲ್ಪ ರಕ್ತಗಾಯವಾಗಿದ್ದು ಇರುತ್ತದೆ.  ಅಕ್ಕ-ಪಕ್ಕದ ಮನೆಯವರು ಬಂದಾಗ ನನಗೆ ಹೊಡೆಯುವದು ಬಿಟ್ಟು ಇನ್ನೊಂದು ಸಲ ಈ ಮನೆ ಕಡೆಗೆ ಬಂದರೆ ನಿನಗೆ ಜೀವ ಸಹಿತ ಬಿಡುವದಿಲ್ಲಾ ಅಂತಾ ಬೈಯುತ್ತಾ ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ದರೋಡೆ ಮಾಡಿ ಅಪಹರಣ ಮಾಡಿಕೊಂಡು ಹೋದ ಪ್ರಕರಣ :
ನರೋಣಾ ಠಾಣೆ : ಶ್ರೀ  ಅಪ್ಪಾರಾಯ ತಂದೆ ವಿಠಲ್ ಇಲ್ಲಾಳ ಸಾ:ಲೇಂಗಟಿ ಗ್ರಾಮ ರವರ ಮಗಳಾದ  ಸದುಮತಿ ಇವಳು, ಈಗ ಕೆಲವು ದಿವಸಗಳ ಹಿಂದೆ ನನ್ನ ಮಗಳು ಆಳಂದಲ್ಲಿ ಕೆಲವು ದಿವಸ ಖಾಸಗಿ ಶಿಕ್ಷಕಿ ಅಂತಾ ಕೆಲಸ ಮಾಡಿ ಕೆಲವು ದಿವಸಗಳಿಂದ ನನ್ನ ಮಗಳು ನಮ್ಮ ಹತ್ತಿರವೆ ಇದ್ದಳು.   ದಿನಾಂಕ:13/02/2019 ರಂದು ಬೆಳಿಗ್ಗೆ 0600 ಗಂಟೆ ಸುಮಾರಿಗೆ ನಾನು ನನ್ನ ಹೆಂಡತಿ ಗೀತಾಬಾಯಿ ಮಗಳಾದ ಸದುಮತಿ ಹೊಲದಲ್ಲಿದ್ದಾಗ ಅದೇ ಸಮಯಕ್ಕೆ ನಮ್ಮ ಹೊಲದಲ್ಲಿ ಸುಮರು 5-6 ಜನರು ಅಪರಿಚಿತರು ಕೂಡಿಕೊಂಡು ಒಂದು ಖಾಸಗಿ ವಾಹನದಲ್ಲಿ ಬಂದು ನನಗೂ ಮತ್ತು ನನ್ನ ಹೆಂಡತಿಯಾದ ಗೀತಾಬಾಯಿ ಇಬ್ಬರಿಗೂ ಕೈಯಿಂದ ಮತ್ತು ಕಾಲಿನಿಂದ ಮತ್ತು ಬಡೆಗೆಯಿಂದ ಸಿಕ್ಕಾಪಟ್ಟೆ ಹೊಡೆಬಡೆ ಮಾಡಿ ಜೀವನ ಸಹಿತ ಬಿಡುವುದಿಲ್ಲ ಅಂತಾ ನನಗೆ ಹಾಗೂ ನನ್ನ ಹೆಂಡತಿಗೆ ಜೀವ ಭಯಹಾಕಿ ಅವಾಚ್ಯ ಶಬ್ದಗಳಿಂದ ರಂಡಿಮಗಳೆ ಭೋಸಡಿ ಮಗಳೆ ಎಂದು ನನ್ನ ಹೆಂಡತಿ ಹತ್ತಿರ ಇದ್ದ ಒಂದು 10 ಗ್ರಾಂ ಬಂಗಾರದ ಚೈನ್ ಅ.ಕಿ 30000/- ರೂಪಾಯಿ ಕಿಮ್ಮತ್ತಿನ ಜಬರದಸ್ತಿಯಿಂದ ಕಸಿದುಕೊಂಡು ಅಲ್ಲದೇ ನನ್ನ ಮಗಳಾದ ಸದುಮತಿ ಇವಳಿಗೆ ಅಪರಿಹಿಸಿಕೊಂಡು ಅವರು ತಾವು ತಂದ ವಾಹನದಲ್ಲಿ ಹಾಕಿಕೊಂಡು ಓಡಿಹೋಗುವಾಗ ಏ ರಮೇಶ ನಡಿಯೋ, ಏ ಶ್ರೀಮಂತ ನಡಿಯೋ, ಏ ಪ್ರಕಾಶ ನಡಿಯೋ, ಸಿದ್ದಾರೂಡ, ಅನೀಲ ತುಸಾರ ಬೇಗ ನಡೆರಿ ಬೇಗ ನಡೆರಿ ಅಂದಾಡುತ್ತಾ ಓಡಿ ತಮ್ಮ ದೂರದಲ್ಲಿ ನಿಂತಿರುವ ಜೀಪ್ ವಾಹನದಲ್ಲಿ ನನ್ನ ಮಗಳನ್ನು ಅಪಹರಿಸಿಕೊಂಡು ಖೇರಡಕ್ಕೆ ಹೋಗುತ್ತಿದ್ದೇವೆ ಅಂತಾ ಹೇಳಿದರು ಆಗ ಅದೇ ಸಮಯಕ್ಕೆ ದಾರಿಯಿಂದ ನಮ್ಮೂರ ಕಾಶಿರಾಯ ಲಾಡವಂತಿ ಮತ್ತು ಹಣಮಂತ ಇವರು ದಾರಿಯಿಂದ ಬರುತ್ತಿರುವಾಗ ನೋಡಿರುತ್ತಾರೆ.  ನಮಗೆ ಯಾವುದೇ ರೀತಿ ತೋಚದೆ ಇರುವುದರಿಂದ ನಾವು ಹಾಗೆ ಮನೆಯಲ್ಲಿ ಊಳಿದುಕೊಂಡು ಮತ್ತು ಖಾಸಗಿಯವಾಗಿ ಮನೆಯಲ್ಲಿ ಉಪಚಾರ ಪಡೆದುಕೊಂಡಿದ್ದು ನನಗೆ ಹೊಡೆಬಡೆ ಮಾಡಿ ನಮ್ಮ ಹತ್ತಿರವಿದ್ದ ಬಂಗಾರದ ಆಭರಣಗಳನ್ನು ಜಬರದಸ್ತಿಯಿಂದ ಕಸಿದುಕೊಂಡು ಸುಲಗೆ ಮತ್ತು ದರೋಡೆ ಮಾಡಿದ್ದು ಅಲ್ಲದೇ ನನ್ನ ಮಗಳಾದ ಸದುಮತಿ ಇವಳಿಗೆ ಅಪರಿಸಿಕೊಂಡು ಹೋಗಿದ್ದು ಆದ್ದರಿಂದ ನನ್ನ ಮಗಳಾದ ಸದುಮತಿಗೆ ಪತ್ತೆಹಚ್ಚಿ ಹಾಗೂ ಅಪಹರಣ ಮತ್ತು ದರೋಡೆ ಮಾಡಿದವರ ಹಾಗೂ ಅವಾಚ್ಯ ಶಬ್ದಗಳಿಂದ ಬೈದು ಹೊಡೆಬಡೆ ಮಾಡಿದವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.