Police Bhavan Kalaburagi

Police Bhavan Kalaburagi

Wednesday, May 5, 2021

BIDAR DISTRICT DAILY CRIME UPDATE 05-05-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 05-05-2021

 

ಬೀದರ ಗ್ರಾಮಿಣ ಪೊಲೀಸ್ ಠಾಣೆ ಯು.ಡಿ.ಆರ್ ನಂ. 04/2021, ಕಲಂ. 174 ಸಿ.ಆರ್.ಪಿ.ಸಿ :-

ಫಿರ್ಯಾದಿ ಮೋಹ್ಮದ ಅಲಿ ತಂದೆ ಇಬ್ರಾಹಿಂಸಾಬ ವಯ: 38 ವರ್ಷ, ಜಾತಿ: ಮುಸ್ಲಿಂ, ಸಾ: ಮಲಕಾಪೂರ, ಬೀದರ ರವರ ತಾಯಿ ಶಾದಕಬೀ ಗಂಡ ಇಬ್ರಾಹಿಂಸಾಬ ವಯ: 75 ವರ್ಷ ರವರಿಗೆ ಎರಡು  ವರ್ಷದಿಂದ ಹೊಟ್ಟೆ ನೋವು ಇದ್ದು ಖಾಸಗಿ ಚಿಕಿತ್ಸೆ ಕೋಡಿಸದರೂ ಕಡಿಮೆ ಆಗಿರುವುದಿಲ್ಲ, ಹೀಗಿರುವಾಗ ದಿನಾಂಕ 04-05-2021 ರಂದು ಫಿರ್ಯಾದಿಯವರ ತಾಯಿ ರವರು ತನ್ನ ಹೊಟ್ಟೆ ನೋವು ತಾಳಲಾರದೇ ನೇಣು ಹಾಕಿಕೊಂಡು ಮರಣ ಹೊಂದಿರುತ್ತಾರೆ, ಅವರ ಸಾವಿನ ಬಗ್ಗೆ ಯಾರ ಮೇಲೆ ಯಾವುದದೇ ದೂರು, ಸಂಶಯ ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳೀಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಕೆ ಕೈಗೊಳ್ಳಲಾಗಿದೆ.

 

ಧನ್ನೂರ ಪೊಲೀಸ ಠಾಣೆ ಅಪರಾಧ ಸಂ. 43/2021, ಕಲಂ. 304(ಎ) ಐಪಿಸಿ :-

ದಿನಾಂಕ 04-05-2021 ರಂದು ಫಿರ್ಯಾದಿ ಪುಲ್ಲಾಬಾಯಿ ಗಂಡ ದಿಗಂಬರ ಇರಜೊಲೆ ವಯ: 53 ವರ್ಷ ಸಾ: ನೆಲವಾಡ, ತಾ: ಭಾಲ್ಕಿ ದಿನಾಂಕ  04-05-2021 ನೆಲವಾಡ ಗ್ರಾಮದ ಬೀದಿಯಲ್ಲಿ ರಾಜೇಂದ್ರ ಕಂದಗೂಳೆ ಮನೆಯ ಎದುರಿಗೆ ರಸ್ತೆಯ ಮೇಲೆ ಊರಿಗೆ ಬಂದ ಅಳಿಯನಾದ ಪುಂಡಲೀಕ ಇವರ ಆಟೋದಲ್ಲಿ ಜೋಳಹಾಕಲು ಫಿರ್ಯಾದಿಯವರ ಮಗನಾದ ಅಂಕುಶ ತಂದೆ ದಿಗಂಬರ ಸಾ: ನೆಲವಾಡ, ತಾ: ಭಾಲ್ಕಿ ಇತನು ಹೋದಾಗ ಅಲ್ಲಿ ರಸ್ತೆಯ ಮೇಲಿಂದ ಹಾದು ಹೋದ ವಿದ್ಯುತ ತಂತಿ ಕಡಿದು ಅಂಕುಶ ಇತನ ಮೈಮೇಲೆ ಬಿದ್ದ ಪ್ರಯುಕ್ತ ಆತ ನೆಲದ ಮೇಲೆ ಬಿದ್ದಿರುತ್ತಾನೆ, ಆಗ ಅಳಿಯ ಪುಂಡಲೀಕ ಇತನು ಕಟ್ಟಿಗೆಯಿಂದ ವಿದ್ಯುತ ತಂತಿ ಸರಿಸಿ ಅಂಕುಶ ಇತನಿಗೆ ತನ್ನ ಆಟೋದಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಹಳ್ಳಿಖೇಡ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದಾಗ ಚಿಕಿತ್ಸೆ ಫಲಕಾರಿಯಾಗದೇ ಅಂಕುಶ ಇತನು ಮೃತಪಟ್ಟಿರುತ್ತಾನೆ, ಕಡಿದು ರಸ್ತೆಯಲ್ಲಿ ಬಿದ್ದ ವಿದ್ಯುತ ತಂದತಿ ಬಹಳ ಹಳೆಯದಿದ್ದು, ಅದನ್ನು ದುರಸ್ತಿ ಮಾಡುವಂತೆ ಊರಿನ ಜನರು ಕೆಇಬಿ ಲೈನಮೇನ್ ಮತ್ತು ಅಧಿಕಾರಿಯವರಿಗೆ ಹೇಳಿದ್ದು, ಅವರು ದುರಸ್ತಿ ಮಾಡದೇ ನಿಷ್ಕಾಳಜಿ ಮಾಡಿರುತ್ತಾರೆ ಅವರ ನಿಷ್ಕಾಳಜಿಯಿಂದ ವಿದ್ಯುತ ತಂತಿ ಕಡಿದು ನನ್ನ ಮಗನ ಮೇಲೆ ಬಿದ್ದಿ ಪ್ರಯುಕ್ತ ಅಂಕುಶ ಇತನು ಮೃತಪಟ್ಟಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಗಾಂಧಿ ಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 70/2021, ಕಲಮ. 379 ಐಪಿಸಿ :-

ಯಾರೋ ಅಪರಿಚಿತ ಕಳ್ಳರು ದಿನಾಂಕ 11-04-2021 ರಂದು 0700 ಗಂಟೆಯಿಂದ 1030 ಗಂಟೆಯ ಮಧ್ಯದ ಅವಧಿಯಲ್ಲಿ ಫಿರ್ಯಾದಿ ರೋಹನ ತಂದೆ ಶಿವಕುಮಾರ ಮುದ್ದಾ ವಯ: 26 ವರ್ಷ, ಜಾತಿ: ಲಿಂಗಾಯತ, ಸಾ: ಕೈಲಾಸ ನಗರ ಗುಂಪಾ, ಬೀದರ ರವರು ಬಿ.ವಿ.ಬಿ ಕಾಲೇಜ ಆವರಣದಲ್ಲಿ ನಿಲ್ಲಿಸಿದ ತನ್ನ ಹೀರೋ ಸ್ಪ್ಲೆಂಡರ್ ಪ್ರೋ ಮೋಟಾರ ಸೈಕಲ್ ನಂ. ಕೆಎ-38/ಎಲ್-7717, ಚಾಸಿಸ್ ನಂ. MBLHA10ASCHE13052, ಇಂಜಿನ್ ನಂ. HA10ELCHE15527, ಮಾಡಲ್ 2012 ಹಾಗೂ 26,000/- ರೂ. ನೇದನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 04-05-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಭಾಲ್ಕಿ ಗ್ರಾಮೀಣ ಪೊಲೀಸ ಠಾಣೆ ಅಪರಾಧ ಸಂ. 51/2021, ಕಲಂ. 279, 337, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-

ದಿನಾಂಕ 04-05-2021 ರಂದು ಫಿರ್ಯಾದಿ ಶಿವಾಜಿ ತಂದೆ ದತ್ತಾತ್ರಿ ಸಿಂದೆ ಸಾ: ಭಾತಂಬ್ರಾ, ತಾ: ಭಾಲ್ಕಿ ರವರು ತನ್ನ ಗೆಳೆಯರಾದ ರಿತೇಷ ತಂದೆ ಮಹಾದೇವ, ಆಕಾಶ ತಂದೆ ಸುಭಾಷರಾವ ಬಿರಾದಾರ ರವರು ಮೋಟಾರ ಸೈಕಲ್ ನಂ. ಎಂ.ಎಚ್.-24/ಎ.ಎನ್-6090 ನೇದರ ಮೇಲೆ ತಮ್ಮ ಹೊಲಕ್ಕೆ ಹೋಗಿ ಹೊಲದಲ್ಲಿ ಕುಳಿತು ಅದೇ ಮೋಟಾರ ಸೈಕಲ್ ಮೇಲೆ ಮೂವರು ಕುಳಿತು ಮೋಟಾರ ಸೈಕಲ್ ರಿತೇಷ ತಂದೆ ಮಹಾದೇವ ಈತನು ಚಲಾಯಿಸುತ್ತಾ ಹೊಲದಿಂದ ಭಾತಂಬ್ರಾ ಗ್ರಾಮದ ಮನೆಗೆ ಬರುವಾಗ ಭಾತಂಬ್ರಾ-ಹುಲಸೂರ ರೋಡಿನ ಮೇಲೆ ಭವಾನಿ ಮಂದಿರ ಹತ್ತಿರ ಎದುರುಗಡೆಯಿಂದ ಅಂದರೆ ಭಾತಂಬ್ರಾ ಕಡೆಯಿಂದ ಕಾರ ನಂ. ಕೆಎ-17/ಎನ್-0465 ನೇದರ ಚಾಲಕನಾದ ಆರೋಪಿ ಸಂಗಮೇಶ ತಂದೆ ರಮೇಶ ಸಾ: ಹುಲಸೂರ ಇತನು ತನ್ನ ಕಾರನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯದಿ ಕುಳಿತ ಮೋಟಾರ್ ಸೈಕಲಗೆ ಡಿಕ್ಕಿ ಮಾಡಿ ತನ್ನ ಕಾರನ್ನು ರೋಡಿನ ಬದಿಯಲ್ಲಿ ಪಲ್ಟಿ ಮಾಡಿಸಿ ಕಾರ ಬಿಟ್ಟು ಓಡಿ ಹೋಗಿರುತ್ತಾನೆ,  ಸದರಿ ಅಪಘಾತದಿಂದ ಪಿರ್ಯಾದಿಯ ಬಲಾಗಾಲ ಮೋಳಕಾಲ ಕೆಳಗೆ ಭಾರಿ ರಕ್ತಗಾಯವಾಗಿ ಕಾಲು ಮುರಿದಿರುತ್ತದೆ ಮತ್ತು  ರಿತೇಷ ಈತನ ಬಲಗಾಲ ಮೋಳಕಾಲ ಕೆಳಗೆ ಭಾರಿ ಗುಪ್ತಗಾಯವಾಗಿರುತ್ತದೆ ಮತ್ತು ಆಕಾಶ ಇವನ ಬಲಗಾಲ ಮೋಳಕಾಲ ಕೆಳಗೆ ಭಾರಿ ಗುಪ್ತಗಾಯವಾಗಿರುತ್ತದೆ, ಅದೇ ವೇಳೆಗೆ ಬಳಿರಾಮ ತಂದೆ ದತ್ತಾತ್ರಿ ಸಿಂದೆ ಮತ್ತು ದತ್ತಾತ್ರಿ ತಂದೆ ನಾಮದೇವ ಅಮದಾಬಾದೆ ರವರು ಸದರಿ ಘಟನೆ ನೋಡಿ ತಕ್ಷಣ ಒಂದು ಖಾಸಗಿ ವಾಹನದಲ್ಲಿ ಮೂವರಿಗೆ ಭಾಲ್ಕಿ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ತನಿಖೆ ಕೈಗೊಳ್ಳಲಾಗಿದೆ.

 

ಕುಶನೂರ ಪೊಲೀಸ್ ಠಾಣೆ ಅಪರಾಧ ಸಂ. 34/2021, ಕಲಂ. 32, 34 ಕೆ.ಇ ಕಾಯ್ದೆ :-

ದಿನಾಂಕ 04-05-2021 ರಂದು ಸಂಗಮ ಕ್ರಾಸ್ ಕಡೆಯಿಂದ ಒಬ್ಬ ವ್ಯಕ್ತಿ ಪ್ಲಾಸ್ಟಿಕ್ ಚೀಲದಲ್ಲಿ ಅಕ್ರಮವಾಗಿ ಸರಾಯಿ ಬಾಟಲಗಳನ್ನು ಮಾರಾಟ ಮಾಡಲು ತೆಗೆದುಕೊಂಡು ಬರುತ್ತಿದ್ದಾನೆಂದು ರೇಣುಕಾ ಪಿಎಸ್ಐ(ಅವಿ) ಕುಶನೂರ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಸಂಗಮ ಗ್ರಾಮದ ಸರಕಾರಿ ಶಾಲೆಯ ಕಂಪೌಂಡ ಮರೆಯಾಗಿ ಕಾಯುತ್ತಾ ನಿಂತುಕೊಂಡಾಗ ಆರೋಪಿ ಚಂದ್ರಪ್ಪಾ ತಂದೆ ಸಿದ್ರಾಮ ಮೇತ್ರೆ ವಯ: 60 ವರ್ಷ, ಜಾತಿ: ಕುರುಬ, ಸಾ: ಸಂಗಮ ಗ್ರಾಮ ಇತನು ತನ್ನ ತಲೆಯ ಮೇಲೆ ಒಂದು ಪ್ಲಾಸ್ಟಿಕ್ ಚೀಲ ಇಟ್ಟುಕೊಂಡು ಬಂದಿದ್ದು ಸದರಿ ಆರೋಪಿತನ ಮೇಲೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ನಂತರ ಸದರಿಯವನಿಗೆ ತನ್ನ ತಲೆಯ ಮೇಲಿರುವ ಚೀಲದಲ್ಲಿ ಏನಿದೇ ಅಂತ ವಿಚಾರಿಸಲಾಗಿ ಸಮಂಜಷವಾದ ಉತ್ತರ ನೀಡಲಿಲ್ಲ, ನಂತರ ಚೀಲ ತೆಗೆದು ನೋಡಲು ಅದರಲ್ಲಿ ಸರಾಯಿ ತುಂಬಿದ ಪ್ಲಾಸ್ಟಿಕ್ ಬಾಟಲಗಳಿದ್ದು ಹೊರಗೆ ತೆಗೆದು ನೋಡಲು ಯು.ಎಸ್ ವಿಸ್ಕಿ 90 ಎಂ.ಎಲ್110 ಬಾಟಲಗಳು ಅ.ಕಿ 3,850/- ರೂಪಾಯಿ ಇದ್ದು, ನಂತರ ಸದರಿ ಸರಾಯಿ ಬಾಟಲಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.