Police Bhavan Kalaburagi

Police Bhavan Kalaburagi

Sunday, May 12, 2019

KALABURAGI DOST REPORTED CRIME

ನರೋಣಾ ಪೊಲೀಸ್ ಠಾಣೆ:
ಜೂಜುಕೋರರ ಬಂಧನ:  ದಿನಾಂಕ 11/05/2019 ರಂದು ಠಾಣಾ ಸರಹದ್ದಿನ ಕಮಲಾನಗರ ಹನುಮಾನ ದೇವಸ್ಥಾನದ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತು ಅಂದರ ಬಾಹರ ಎಂಬ ಇಸ್ಪಿಟ ಜೂಜಾಟಕ್ಕೆ ಹಣ ಪಣಕಿಟ್ಟು ಆಡುತ್ತಿರುವ ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗೆ ಮಾನ್ಯ ಹೆಚ್ಚುವರಿ ಜೆ.ಎಂ.ಎಫ್.ಸಿ. ನ್ಯಾಯಾಲಯ ನ್ಯಾಯಾಧೀಶರು ಆಳಂದ ರವರ ಅನುಮತಿ ಪಡೆದುಕೊಂಡು ಮಾನ್ಯ ಡಿ.ಎಸ್.ಪಿ ಸಾಹೇಬ ಆಳಂದ ಹಾಗೂ ಮಾನ್ಯ ಸಿಪಿಐ ಆಳಂದ ರವರ ಮಾರ್ಗದರ್ಶನದಂತೆ ಪಂಚರಾದ 1)ಶ್ರೀ.ಚಂದ್ರಕಾಂತ ತಂದೆ ಭೀಮಶ್ಯಾ ಪರೀಟ್‌, ವಯಾ:45 ವರ್ಷ, ಜಾತಿ:ಮಡಿವಾಳ, ಉ:ಕೂಲಿಕೆಲಸ, ಸಾ:ನರೋಣಾ ಗ್ರಾಮ ಮತ್ತು  2)ಶ್ರಿಮಂತ ತಂದೆ ಶಂಕ್ರಪ್ಪಾ ಡೆಂಕಿವಯಾ:55 ವರ್ಷಜಾತಿ:ಲಿಂಗಾಯತಉ:ಹೊಟಲಕೆಲಸಸಾ:ನರೋಣಾ ಗ್ರಾಮ ಇವರನ್ನು ನಾನು ಮತ್ತು ಎ.ಎಸ್.ಐ ರುಕ್ಮೊದ್ದಿನ ಹಾಗೂ ಸಿಬ್ಬಂದಿಯವರಾದ 1)ಬಸವರಾಜ ಸಿಪಿಸಿ-1206, 2)ಆನಂದ ಸಿಪಿಸಿ-1258, 3)ಸತೀಶ ಸಿಪಿಸಿ-1004, 4)ಪ್ರದೀಪಕುಕಮಾರ ಸಿಪಿಸಿ-095, 5)ಭೀಮಾಆಶಂಕರ ಸಿಹೆಚ್‌‌ಸಿ-401, 6)ದ್ಯಾವಪ್ಪಾ ಸಿಪಿಸಿ-942,  7)ದಯಾಂದ ಸಿಹೆಚ್‌‌ಸಿ-21 ರವರೆಲ್ಲರೂ ಬಾತ್ಮಿ ಬಂದ ಕಮಲಾನಗರದ ಹನುಮಾನ ದೇವಸ್ಥಾನದ ಕಟ್ಟೆಯ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲಾಗಿ ದೇವಸ್ಥಾನದ  ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ 09 ಜನರು ದುಂಡಾಗಿ ಕುಳಿತು ಅಂದರ ಬಾಹರ ಎಂಬ ಇಸ್ಪಿಟ ಪಣಕ್ಕೆ ಹಣ ಹಚ್ಚಿ ಆಡುತ್ತಿರುವುದನ್ನು ಖಚಿತ ಪಡಿಸಿಕೊಂಡು ನಾನು ಹಾಗೂ ಸಿಬ್ಬಂದಿಯವರು ಕೂಡಿ ಸದರಿ ಜೂಜುಕೋರರ ಮೇಲೆ ದಾಳಿ ಮಾಡಿ ಅವರನ್ನು ಹಿಡಿದು ಅವರ ಹೆಸರು ವಿಳಾಸ ವಿಚಾರಿಸಲಾಗಿ 1)ಹರಿ ತಂದೆ ಲಾಲು ಲಾಠೋಡ್‌, ಸಾ:ಸಾವಳಗಿ(ಕೆ)ತಾಂಡಾ, ಈತನ ಹತ್ತಿರ 700/- ನಗದು ಹಣ 2)ಗೇಮು ತಂದೆ ಲಕ್ಷ್ನಣ ಚವ್ಹಾಣ ಸಾ:ಸಾವಳಗಿ (ಕೆ) ತಾಂಡಾ, ಅಂತಾ ಹೇಳಿದ್ದು ಈತನ ಹತ್ತಿರ 610/- ನಗದು ಹಣ, 3)ಶಿವರಾಚಪ್ಪಾ ತಂದೆ ಚಂದ್ರಕಾಂತ ಬಿರಾದಾರ, ಸಾ:ಕಮಲಾನರ, ಈತನ ಹತ್ತಿರ 480/- ನಗದು ಹಣ 4)ಬಸವರಾಜ ತಂದೆ ರೇವಣಸಿದ್ದಪ್ಪಾ ಬಿರಾದಾರ, ಸಾ:ಕಮಲಾನಗರ ಗ್ರಾಮ, ಈತನ ಹತ್ತಿರ 420/- ನಗದು ಹಣ 5)ಶರಣಬಸಪ್ಪಾ ತಂದೆ ಶ್ರೀಮಂತರಾವ ಬಿರಾದಾರ, ಸಾ:ಕಮಲಾನಗರ, ಈತನ ಹತ್ತಿರ 1070/- ನಗದು ಹಣ 6)ಶಿವರಾಜ ತಂದೆ ಕಲ್ಯಾಣಪ್ಪಾ ಬಿರಾದಾರ, ಸಾ:ಕಮಲಾನಗರ, ಈತನ ಹತ್ತಿರ 430/- ನಗದು ಹಣ 7)ದಿಲೀಪಕುಮಾರ ತಂದೆ ಶರಣಬಸಪ್ಪಾ ಮೂಲಗೆ, ಸಾ:ಕಮಲಾನಗರ, ಈತನ ಹತ್ತಿರ 910/- ನಗದು ಹಣ 8)ನಿಜಲಿಂಗಪ್ಪಾ ತಂದೆ ಕುಪೇಂದ್ರ ವಾಗ್ದರ್ಗಿ, ಸಾ:ಕಮಲಾನಗರ ಈತನ 440/- ನಗದು ಹಣ ಅಲ್ಲದೆ ಪಣದಲ್ಲಿ ಜೂಜಿಗೆ ಇಟ್ಟ ಹಣ 320 ರೂ ಹಾಗು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಇಸ್ಪಿಟ ಎಲೆಗಳನ್ನು ಎಣಿಸಿ ನೊಡಲಾಗಿ 52 ಇಸ್ಪಿಟ ಎಲೆಗಳು ಹೀಗೆ ಒಟ್ಟು ನಗದು ಹಣ 5380/- ರೂಪಾಯಿ ಮತ್ತು 52 ಇಸ್ಪಿಟ ಎಲೆಗಳನ್ನು ಪಂಚರ ಸಮಕ್ಷಮದಲ್ಲಿ ವಶಕ್ಕೆ ತೆಗೆದುಕೊಂಡಿದ್ದು, ದಾಳಿ ಕಾಲಕ್ಕೆ ಒಬ್ಬ ವ್ಯಕ್ತಿ ಓಡಿಹೋಗಿದ್ದು ಆತನ ಹೆಸರು ವಿಚಾರಿಸಲಾಗಿ 9)ಸಿದ್ರಾಮಪ್ಪಾ ತಂದೆ ಚನ್ನಬಸಪ್ಪಾ ಜಿಂಗೆ, ಸಾ:ಕಮಲಾನಗರ ಅಂತಾ ತಿಳಿಸಿದ್ದು ಈ ಬಗ್ಗೆ ಪಂಚನಾಮೆಕೈಕೊಂಡು ಸದರಿ ಆರೋಪಿತರ ವಿರುದ್ದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಸಂಚಾರಿ ಠಾಣೆ-1:
ಅಪಘಾತ ಪ್ರಕರಣ: ದಿನಾಂಕ 11-05-2019 ರಂದು ವಿದ್ಯಾ ನಗರದಲ್ಲಿರುವ ಕೃಷ್ಣ ಮಂದಿರಕ್ಕೆ ಹೋಗುವ ಕುರಿತು ಮೋಟಾರ ಸೈಕಲ ನಂಬರ ಕೆಎ-32/ಇಎಮ್-7048 ನೇದ್ದರ ಹಿಂದುಗಡೆ ನನ್ನ ಹೆಂಡತಿಯಾದ ವಸೂದಾ ಇವರನ್ನು ಕೂಡಿಸಿಕೊಂಡು ನಮ್ಮ ಮನೆಯಿಂದ ನಾನು ಮೋಟಾರ ಸೈಕಲ ಚಲಾಯಿಸಿಕೊಂಡು ಹೋಗುವಾಗ ಸಿಐಬಿ ಕಾಲೋನಿ ಹತ್ತಿರ ಜಿಡಿಎ ಲೇಔಟನಲ್ಲಿ ರೋಡ ಎಡಗಡೆಯಿಂದ ಹೋಗುವಾಗ ಟಂ ಟಂ ಗೂಡ್ಸ ನಂ ಕೆಎ-32/ಸಿ-7237 ನೇದ್ದರ ಚಾಲಕನು ತನ್ನ ವಾಹನವನ್ನು ಅತಿವೇಗವಾಗಿ ಮತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಎದುರಿನಿಂದ ನನ್ನ ಮೋಟಾರ ಸೈಕಲಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿ ನನ್ನ ಹೆಂಡತಿಗೆ ಭಾರಿಗಾಯಗೊಳಿಸಿ ತನ್ನ ಟಂ ಟಂ ವಾಹನ ಸಮೇತ ಓಡಿ ಆತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಛಾರಿ ಠಾಣೆ-1 ರಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಫರಹತಾಬಾದ ಪೊಲೀಸ್ ಠಾಣೆ:
ಹಲ್ಲೆ ಪ್ರಕರಣ: ದಿನಾಂಕ:11.05.2019 ರಂದು ಅನ್ವರಬೀ ಗಂಡ ಮೌಲಾ ಪಟೇಲ ಸಾ: ಕಾಡನಾಳ ಗ್ರಾಮ ತಾ:ಜಿ:ಕಲಬುರಗಿ ಇವರು ದೂರು ಸಲ್ಲಿಸಿದ ಸಾರಾಂಶವೆನಂದರೆ. ನಾನು ಮತ್ತು ನನ್ನ ಮಗ ಬಾಬಾಪಟೇಲ ತಂದೆ ಮೌಲಾಪಟೆಲ ಇವರು ಸರ್ವೇ ನಂ.49/3 ನೇದ್ದರಲ್ಲಿ ಗಳೆ ಹೋಡೆಯುತ್ತಿರುವಾಗ ನಮ್ಮ ಗ್ರಾಮದವರಾದ ಖಾಸಿಂ ಪಟೆಲ ತಂದೆ ಸಾಹೇಬ ಪಟೆಲ ಇವನು ವಿನಾಃಕಾರಣ ಅವಾಚ್ಯ ಶಬ್ದಗಳಿಂಧ ಬಯ್ದು ನಮ್ಮ ಹೋಲದಲ್ಲಿಂದ ದಾರಿ ಯಾಕೆ ಹಾಕಿದ್ದರಿ ಅಂತಾ ಅಂದವನೆ ಕಲ್ಲಿನಿಂದ ನನಗೆ ಬೆನ್ನ ಮೇಲೆ ಹಾಗೂ ಎಡಗೈಬಲಗೈ ಮೇಲೆ ಹೋಡೆದಿರುತ್ತಾನೆ. ನಂತರ ನಜೀರ ಪಟೆಲ ತಂದೆ ಸಾಹೇಬ ಪಟೇಲ ಈತನು ಬಡಿಗೆಯಿಂದ ನನ್ನ ತಲೆಯ ಮೇಲೆ ಜೋರಾಗಿ ಹೋಡೆದು ರಕ್ತಗಾಯ ಮಾಡಿರುತ್ತಾನೆ. ನನ್ನ ಮಗ ಬಾಬಾ ಪಟೆಲ ಈತನು ಬಿಡಿಸಲು ಬಂದಾಗ ಆತನಿಗೆ ಜಹೀರ ಪಟೆಲ ತಂದೆ ಸಾಹೇಬ ಪಟೆಲ ಹಾಗೂ ಆಸಿಫ್ ಪಟೆಲ ತಂದೆ ಸಾಹೇಬ ಪಟೆಲ ಇವರು ನನ್ನ ಮಗನಿಗೆ ಬಡಿಗೆಯಿಂದ ಹಾಗೂ ಕಲ್ಲಿನಿಂದ ತೋಡೆಯ ಮೇಲೆ ಬೆನ್ನ ಮೇಲೆ ಹೋಡೆದು ಗುಪ್ತಗಾಯ ಮಾಡಿರುತ್ತಾರೆ. ನಮ್ಮ ಊರಿನ ಶಿವಶರಣಪ್ಪ ತಂದೆ ಹಣಮಂತರಾಯ ಪ್ಯಾಟ್ಲಿ ಇವರು ಪರಮಾನಂದ ಜಗಳ ಮಾಡಿ ಹೋಡೆಯುವುದನ್ನು ನೋಡಿ ಅವರು ಬಂದು ಜಗಳ ಬಿಡಿಸಿದ್ದು. ಆಗ ಸದರಿ ಆರೋಪಿತನು ನಮಗೆ ಇದೆ ಜಾಗದಲ್ಲಿ ಕೋಲೆ ಮಾಡಿ ಬಿಡುತ್ತೇವೆ ಎಂದು ಹೆದರಿಸಿರುತ್ತಾರೆ  ಅಂತಾ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರಹತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ
ಅಶೋಕ ನಗರ ಪೊಲೀಸ್ ಠಾಣೆ:


ಹಲ್ಲೆ ಪ್ರಕರಣ: ಶ್ರೀ ಅನಿಲಕುಮಾರ ತಂದೆ ಶಿವಲಿಂಗಪ್ಪ ಫರತಾಬಾದ ಉ: ಕಿರಾಣಿ ಅಂಗಡಿ ಸಾ|| ಸಿರನೂರ ಇತನ ದಿನಾಂಕ:09.05.2019 ರಂದು ಸಾಯಂಕಾಲ 04:00 ಗಂಟೆ ಸುಮಾರಿಗೆ ವಡ್ಡರಗಲ್ಲಿಯಿಂದ ಕೇಂದ್ರ ಬಸ್ ನಿಲ್ದಾಣದ ಮಾರ್ಗವಾಗಿ ನಡೆದುಕೊಂಡು ಬರುತ್ತಿರುವಾಗ ಬಸ್ ಡಿಪೋ ಹತ್ತಿರ ಬರುತ್ತಿದ್ದಂತೆ, ಎದರುಗಡೆಯಿಂದ 1) ಬಸವರಾಜ ಜೆಮಶೆಟ್ಟಿ 2) ರಾಜಕುಮಾರ ಜೆಮಶೆಟ್ಟಿ 3) ಶ್ರೀಶೈಲ್ ಜೆಮಶೆಟ್ಟಿ ಮತ್ತು 4) ಶಿವುಕುಮಾರ ಜೆಮಶೆಟ್ಟಿ ಇವರುಗಳು ಎರಡು ದ್ವಿ-ಚಕ್ರ ವಾಹನಗಳ ಮೇಲೆ ಬಂದವರೆ ನನ್ನ ಹತ್ತಿರ ವಾಹನ ನಿಲ್ಲಿಸಿ ಬಸವರಾಜ ಇತನು ನನಗೆ ತಡೆದು ನಿಲ್ಲಿಸಿ ನನ್ನ ಎದೆಯ ಮೇಲಿನ ಅಂಗಿ ಹಿಡಿದು ಅವಾಚ್ಯ ಶಬ್ದಗಳಿಂದ ಬಯ್ದು  ನನ್ನ ಕಪಾಳಕ್ಕೆ ಹೊಡೆದಿರುತ್ತಾನೆ, ರಾಜಕುಮಾರನು ತನ್ನ ಕೈಯಲ್ಲಿದ್ದ ಚಾಕುವಿನಿಂದ ನನಗೆ ಹೊಡೆಯಲು ಬಂದಾಗ ನನ್ನ ಎಡಗೈಯಿಂದ ಅವನ ಕೈಯಲ್ಲಿದ್ದ ಚಾಕುವನ್ನು ಹಿಡಿದಾಗ ನನ್ನ ಎಡಗೈಗೆ ರಕ್ತಗಾಯ ಆಗಿರುತ್ತದೆ. ನಂತರ ಶ್ರೀಶೈಲ್ ಇತನು ತನ್ನ ಕೈಯಿಂದ ನನ್ನ ಹೊಟ್ಟೆಗೆ ಹೊಡೆದಾಗ ನಾನು ಕೆಳಗೆ ಬಿದ್ದಾಗ ಶಿವುಕುಮಾರ ಇತನು ಅಲ್ಲಿಯೇ ಇದ್ದ ಕಲ್ಲಿನಿಂದ ನನ್ನ ಬಲಗಡೆ ಕಾಲಿಗೆ ಹೊಡೆದಿರುತ್ತಾನೆ. ನನ್ನ ಚಿಕ್ಕಪ್ಪ ಅಮೃತ ಪಾಟೀಲ್ ಮತ್ತು ಅವರ ಸ್ನೇಹಿತ ಶಿವುಕುಮಾರ ದೊಡ್ಡಮನಿ ಇಬ್ಬರು ಬಂದು ಜಗಳ ಬಿಡಿಸಿ ನನಗೆ ಉಪಚಾರಕ್ಕಾಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತಾರೆ. ಹಳೆಯ ವೈಷಮ್ಯದಿಂದ ನನ್ನೊಂದಿಗೆ ಜಗಳಕ್ಕೆ ಬಿದ್ದು, ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಕೈ ಹಾಗೂ ಕಲ್ಲು ಮತ್ತು ಚಾಕುವಿನಿಂದ ಹೊಡೆಬಡೆ ಮಾಡಿದವರ ವಿರುದ್ಧ ಕಾನೂನು ರೀತಿಯ ಕ್ರಮ ಜರುಗಿಸಲು ವಿನಂತಿ ಅಂತ ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೇ ಕೈಕೊಳ್ಳಲಾಗಿದೆ.