Police Bhavan Kalaburagi

Police Bhavan Kalaburagi

Wednesday, June 22, 2016

BIDAR DISTRICT DAILY CRIME UPDATE 22-06-2016¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 22-06-2016

ºÀ½îSÉÃqÀ (©) ¥ÉưøÀ oÁuÉ UÀÄ£Éß £ÀA. 69/2016, PÀ®A 323, 354, 504, 506 eÉÆvÉ 34 L¦¹ ªÀÄvÀÄÛ 3(1) (10) J¸ï.¹/J¸ï.n PÁAiÉÄÝ 1989 :-
ಹುಮನಾಬಾದ ತಾಲೂಕಿನ ಸಿತಾಳಗೇರಾ ಗ್ರಾಮದ ಸರ್ವೆ ನಂ. 94 ರಲ್ಲಿ 7 ಜನ ದಲಿತರಿಗೆ ಸರಕಾರಿ ಭೂಮಿ ಮಂಜೂರು ಮಾಡಿ ಭೂಮಿಗೆ ಸಂಬಂಧಪಟ್ಟ ಪಹಣೆ ಪತ್ರಿಕೆ, ಮೋಟೇಷನ ಈ ಎಲ್ಲಾ ದಾಖಲಾತಿಗಳನ್ನು ಹೊಂದಿ ದಿನಾಂಕ 17-06-2016 ರಂದು ನಮ್ಮ ಭೂಮಿಯಲ್ಲಿ ವ್ಯವಸಾಯ ಮಾಡಲು ಹೋದಾಗ ಆರೋಪಿತರಾದ 1) ಹುಮನಾಬಾದ ವಲಯ ಅರಣ್ಯ ಅಧೀಕಾರಿಯಾದ ರಾಜೇಂದ್ರ ಮತ್ತು 2) ಉಪ ವಲಯ ಅರಣ್ಯ ಅಧೀಕಾರಿಯಾದ ಗೋಪಿನಾಥ ಹಾಗೂ ಸಿಬ್ಬಂದಿಗಳು ಸೇರಿ ನಮ್ಮ ಮೇಲೆ ದೌರ್ಜನ್ಯ ಮಾಡಿ ಮತ್ತು ನಾವುಗಳಾದ ಹೆಣ್ಣು ಮಕ್ಕಳನ್ನು ಅವಾಚ್ಯ ಶಬ್ದಗಳಿಂದ ಬೈದಿರುವದಲ್ಲದೆ, ದೈಹಿಕವಾಗಿ ಹಲ್ಲೆ ಮಾಡಿರುತ್ತಾರೆ, ಈ ಅಧೀಕಾರಿಗಳು  ಹೊಲೆಯ ಮಾದಿಗರಿಗೆ ಸೊಕ್ಕು ಹೆಚ್ಚಾಗಿದೆ ನಿಮ್ಮನ್ನು ಒಬ್ಬೊಬ್ಬರಿಗೆ  ಮುಗಿಸುತ್ತೇವೆ ಎಂದು ಜಾತಿ ನಿಂದನೆ ಮಾಡಿದ್ದಲ್ಲದೆ ಜೇವದ ಬೆದರಿಕೆ ಹಾಕಿರುತ್ತಾರೆಂದು  ದಿನಾಂಕ 21-06-2016 ರಂದು ಫಿರ್ಯಾದಿ ಮಹಾದೇವಿ ಗಂಡ ಶರಣಪ್ಪಾ ಸಾ: ಸಿತಾಳಗೇರಾ ರವರು ನೀಡಿದ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ºÀ½îSÉÃqÀ (©) ¥ÉưøÀ oÁuÉ UÀÄ£Éß £ÀA. 70/2016, PÀ®A 353, 504, 506 eÉÆvÉ 149 L¦¹ ªÀÄvÀÄÛ PÀ®A 33 CgÀtå PÁAiÉÄÝ 1963 CrAiÀÄ°è :-
ದಿನಾಂಕ 20-06-2016 ರಂದು ಮುಂಜಾನೆ ಸಮಯದಲ್ಲಿ ಆರೋಪಿತರಾದ 1) ಅಂಕುಶ ಗೋಖ್ಲೆ ಜಿಲ್ಲಾ ಅಧ್ಯಕ್ಷರು ಬಹುಜನ ಸಮಾಜ ಪಾರ್ಟಿ ಬೀದರ, ಸಾ: ಹುಮನಾಬಾದ, 2) ಶರಣಪ್ಪಾ ತಂದೆ ಪೀರಪ್ಪಾ ನಿಟ್ಟೂರೆ, 3) ಚಂದ್ರಕಾಂತ ತಂದೆ ಪೀರಪ್ಪಾ ನಿಟ್ಟೂರೆ, 4) ರಘುನಾಥ ತಂದೆ ಶಂಕರ ನಿಟ್ಟೂರೆ, 5) ಶಿವಲಿಂಗ್ ತಂದೆ ಗುಂಡಪ್ಪಾ, 6) ಅರ್ಜುನ ತಂದೆ ಗುಂಡಪ್ಪಾ ಮುದನಾಳ, 7) ದಶರಥ ತಂದೆ ಗುಂಡಪ್ಪಾ ಮುದ್ದನಾಳ, 8) ರೇವಣಪ್ಪಾ ತಂದೆ ತುಕಾರಾಮ ಚಿಟ್ಟಾ, 9) ವಿಜಯಕುಮಾರ ತಂದೆ ಕೃಷ್ಣಾಪ್ಪಾ ಮಾಳಗೆ, 10) ದಯಾನಂದ ತಂದೆ ಶರಣಪ್ಪಾ ನಿಟ್ಟೂರೆ, 11) ತುಕಾರಾಮ ತಂದೆ ಹಣಮಂತ, 12) ಮಲ್ಲಿಕಾರ್ಜುನ ತಂದೆ ತುಕಾರಾಮ, 13) ಯಲ್ಲಪ್ಪಾ ತಂದೆ ವೆಂಕಟ, 14) ಭೀಮಶಾ ತಂದೆ ರಾಮಣ್ಣಾ, 15) ಪ್ರಕಾಶ ತಂದೆ ಭೀಮಣ್ಣಾ ಇವರೆಲ್ಲರೂ ಸಾ: ಸಿತಾಳಗೇರಾ  ಹಾಗೂ 16) ಭೀಮಶಾ ತಂದೆ ವಿಠಲ ಸಾ: ಮರಖಲ, 17] ಪ್ರಶಾಂತ ತಂದೆ ವಿಠಲ ಸಾ: ಮರಖಲ, 18) ಇಸ್ಮಾಯಿಲ್ ಸಾ: ಮಂಗಳಗಿ, 19) ಸಿದ್ದಪ್ಪಾ ತಂದೆ ನರಸಪ್ಪಾ ಸಾ: ಹಳ್ಳಿಖೇಡ (ಬಿ) ಎಲ್ಲರೂ ಸೇರಿಕೊಂಡು ಸಿತಾಳಗೇರಾ ಗ್ರಾಮದ ಅರಣ್ಯ ಸರ್ವೆ ನಂ. 94 ರ ಅರಣ್ಯ ನೇಡು ತೋಪಿನ ವಿಸ್ತೀರ್ಣವನ್ನು ಒತ್ತುವರಿ ಮಾಡಿ ಈ ಸ್ಥಳದಲ್ಲಿ ಬೆಳೆಸಲಾದ ಸುಮಾರು 25 ಸಾವಿರ ಸಸಿಗಳನ್ನು ನಾಶ ಮಾಡಿರುತ್ತಾರೆ. ಅಲ್ಲದೆ ಸಿತಾಳಗೇರಾ ಸರ್ವೆ ನಂ. 94 ರ ಭೂಮಿಯ ವಿಚಾರದಲ್ಲಿ ಈ ಮೇಲ್ಕಾಣಿಸಿದ ಕೆಲವೊಂದು ಆರೋಪಿತರು ಮಾನ್ಯ ಪ್ರಥಾನ ಸಿವಿಲ್ ನ್ಯಾಯಾಲಯ ಹುಮನಾಬಾದನಲ್ಲಿ ದಾವೆ ಹೂಡಿ ನ್ಯಾಯಾಲಯದಲ್ಲಿ ವಿಚಾರಣೆ ಚಾಲ್ತಿ ಇದ್ದರೂ ಸಹ ಸರಕಾರಿ ಕಾನೂನು ಹಾಗೂ ನ್ಯಾಯಾಲಯದ ದಾವೆಯ ವಿಚಾರಣೆ ಹಂತವನ್ನು ಸಹ ಉಲ್ಲಂಘಿಸಿರುತ್ತಾರೆ ಮತ್ತು ಸಿತಾಳಗೇರ ಗ್ರಾಮದ ಅರಣ್ಯ ಸರ್ವ ನಂ. 94 ರ ವಿಸ್ತೀರ್ಣದ ಸರಕರಿ ನೇಡು ತೋಪನು ಇಲಾಖೆಯ ಸಿಬ್ಬಂದಿಯವರು ರಕ್ಷಿಸಲು ಕರ್ತವ್ಯ ನಿರ್ವಹಿಸುವ ಸಮಯದಲ್ಲಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಅವರ ಕೈಯಲ್ಲಿ ಕೋಯಿತಿ ಮತ್ತು ಕೊಡ್ಲೆಗಳನ್ನು ಹಿಡಿದ ಸಿಬ್ಬಂದಿಗಳಿಗೆ ಒಂದು ವೇಳೆ ಈ ಜಾಗಕ್ಕೆ ಬಂದರೆ ಕೊಲ್ಲೂವದಾಗಿ ಜೀವದ ಬೇದರಿಕೆ ಹಾಕಿದಲ್ಲದೆ ನಿಮ್ಮಗಳ ಮೆಲೆ ದಲಿತ ದೌರ್ಜುನ್ಯ ಕಾಯ್ದೆ ಅಡಿಯಲ್ಲಿ ಜಾತಿ ನಿಂದನೆ ಪ್ರಕರಣದವನ್ನು ದಾಖಲಿಸಿ ಜೇಲಿಗೆ ಕಳುಹಿಸುತ್ತೇವೆ ಎಂದು ಹೇಳುತ್ತಾ ಸಸಿಗಳನ್ನು ನಾಶ ಮಾಡಿರುತ್ತಾರೆಂದು ಫಿರ್ಯಾದಿ ಕೆ.ಗೋಪಿನಾಥ ಉಪ ವಲಯ ಅರಣ್ಯಾಧಿಕಾರಿ ಬೇನಚಿಂಚೋಳಿ ಶಾಖೆ ಹುಮನಾಬಾದ ವಲಯ ರವರು ನೀಡದ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 

Kalaburagi District Reported Crimes

ಅಪಘಾತ ಪ್ರಕರಣ :
ಫರತಾಬಾದ ಠಾಣೆ : ²æà ಶೇಖ ಖಾಜಾ ತಂದೆ ಶೇಖ ಮೋದ್ದಿನ ಸಾ: ಬೆರೂನಖಿಲ್ಲಾ ರಾಯಚೂರ. ರವರು ದಿನಾಂಕ: 28/05/2016 ರಂದು ರಾತ್ರಿ 11 ಗಂಟೆಯ ಸುಮಾರಿಗೆ ನಾವು ಕಲಬುರಗಿ ಜಿಲ್ಲೆಯ ಪೀರೋಜಾಬಾದ ಗ್ರಾಮದ ಖಲ್ಲಿಫತ್ ರೆಹಮಾನ ದರ್ಗಾಕ್ಕೆ ದೇವರ ಕಾರ್ಯ ಮಾಡುವ ಸಲುವಾಗಿ ನಾನು, ನಮ್ಮ ಅಣ್ಣಂದಿರಾದ ಮಹ್ಮದ ಶಫಿ,ಮಹ್ಮದ ರಫೀಕ ಹಾಗೂ ಇತರರು ಕೂಡಿಕೊಂಡು ರಾಯಚೂರಿನಿಂದ ಬಂದಿರುತ್ತೆವೆ. ದಿನಾಂಕ 29/05/2016 ರಂದು ಬೆಳಗ್ಗೆ 6.15 ಗಂಟೆಯ ಸುಮಾರಿಗೆ ನಮ್ಮ ಅಣ್ಣನಾದ ಮಹ್ಮದ ರಫೀಕ ಈತನು ರಾಷ್ಟ್ರೀಯ ಹೆದ್ದಾರಿ 218 ರಸ್ತೆಯ ಪಕ್ಕಕ್ಕೆ ಇರುವ ಬಸ್ ನಿಲ್ದಾಣದ ಹತ್ತಿರ ಸಂಡಾಸಕ್ಕೆ ಹೋಗುತ್ತೆನೆ ಅಂತಾ ಹೇಳಿ ಹೋಗಿರುತ್ತಾನೆ. ನಾವು ದರ್ಗಾದ ಹೊರಗೆ ದೇವರ ಕಾರ್ಯದ ತಯಾರಿ ಮಾಡುತ್ತಿದ್ದೆವು. ಬೆಳಗ್ಗೆ 6.30 ಗಂಟೆಯ ಸುಮಾರಿಗೆ ಸಂಡಾಸಕ್ಕೆ ಹೋದ ನಮ್ಮ ಅಣ್ಣ ಮಹ್ಮದ ರಫೀಕ ಈತನು ಒಮ್ಮೆಲೆ ಚೀರಾಡುವುದನ್ನು ಕೇಳಿ ಹೋಗಿ ನೋಡಲಾಗಿ ಜೇವರ್ಗಿ ಕಡೆಯಿಂದ ಒಬ್ಬ ಮಹೀಂದ್ರ ಪಿಕಪ್ ವಾಹನ ಚಾಲಕನು ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ತನ್ನ ವಾಹನದ ನಿಯಂತ್ರಣದ ತಪ್ಪಿ ರಸ್ತೆಯ ಎಡಬದಿಗೆ ಬೋರಲಾಗಿ ಪಲ್ಟಿಗೊಳಿಸಿರುತ್ತಾನೆ. ಇದರಿಂದ ರಸ್ತೆಯ ಪಕ್ಕಕ್ಕೆ ಕೆಳಗೆ ಸಂಡಾಸಕ್ಕೆ ಕುಳಿತ ನಮ್ಮ ಅಣ್ಣನ ಮೇಲೆ ಪಿಕಪ್ ವಾಹನದಲ್ಲಿದ್ದ ಜೋಳದ ಚೀಲಗಳು ಮೈ ಮೇಲೆ ಬಿದ್ದಿರುತ್ತವೆ. ಇದರಿಂದ ನಮ್ಮ ಅಣ್ಣನಿಗೆ ಬಲಗಾಲಿಗೆ ಭಾರಿ ರಕ್ತಗಾಯ ,ಸೊಂಟಕ್ಕೆ ಗುಪ್ತಗಾಯವಾಗಿರುತ್ತದೆ. ಮಹೀಂದ್ರ ಪಿಕಪ್ ವಾಹನದಲ್ಲಿದ್ದ ಹುಲಗಪ್ಪಾ ಎನ್ನುವವನಿಗೆ ಕುತ್ತಿಗೆಗೆ ಮತ್ತು ಬೆನ್ನಿಗೆ ಭಾರಿ ಗುಪ್ತಗಾಯವಾಗಿರುತ್ತದೆ. ಅದರಲ್ಲಿದ್ದ ಯಲ್ಲಪ್ಪ ಎನ್ನುವವನಿಗೆ ಹಾಗೂ ಅದರ ಚಾಲಕ ಇಸ್ಮಾಯಿಲ್ ಎನ್ನುವವನಿಗೆ ಯಾವುದೇ ಗಾಯ ವೈಗೆರೆಯಾಗಿರುವುದಿಲ್ಲಾ.ಸದರಿ ವಾಹನವನ್ನು ಪಲ್ಟಿಗೊಳಿಸಿದ ನಂತರ ಅದರ ಚಾಲಕನು ಸದರಿ ಸ್ಥಳದಿಂದ ಓಡಿಹೋಗಿರುತ್ತಾನೆ. ನಂತರ ನಾವು ಸದರಿ ಮಹೀಂದ್ರ ಪಿಕಪ್ ವಾಹನದ ನಂಬರ ನೋಡಲಾಗಿ ಕೆಎ-36/ಬಿ-2545 ಅಂತಾ ಇರುತ್ತದೆ.ಈ ವಾಹನದಲ್ಲಿ ಜೋಳದ ಚೀಲಗಳು ಇರುತ್ತವೆ.ನಂತರ ಗಾಯಳು ನಮ್ಮ ಅಣ್ಣನಿಗೆ ಹಾಗೂ ಪಿಕಪ್ ವಾಹನದಲ್ಲಿದ್ದ ಗಾಯಾಳು ಹುಲಗಪ್ಪಾ ಎನ್ನುವವನಿಗೆ 108 ಅಂಬ್ಯುಲೆನ್ಸದಲ್ಲಿ ಉಪಚಾರ ಕುರಿತು ಕಲಬುರಗಿಗೆ ತೆಗೆದುಕೊಂಡು ಬಂದಿರುತ್ತೆವೆ. ನಮ್ಮ ಅಣ್ಣನಾದ ಮಹ್ಮದ ರಫೀಕ ಈತನು ಕಾಮರೆಡ್ಡಿ ಆಸ್ಪತ್ರೆಯಲ್ಲಿ  ಹಾಗೂ ಹುಲಗಪ್ಪಾ ಈತನು ಬಸವೇಶ್ವರ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದು ಹುಲಗಪ್ಪಾ ಈತನು ದಿನಾಂಕ 21-06-2016 ರಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾನೆ ಅಂತಾ ಶ್ರೀಮತಿ ಬಸಮ್ಮ ಗಂಡ ಹುಲಗಪ್ಪಾ ಜಗೋದವರ ಸಾ : ಗುರಗುಂಟಾ ತಾ : ಲಿಂಗಸೂರ ಜಿಲ್ಲಾ : ರಾಯಚೂರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೊಸ ಮಾಡಿದ ಪ್ರಕರಣ :
ನಿಂಬರ್ಗಾ ಠಾಣೆ : ಶ್ರೀ ಅಂಭೋಜಿ ತಂದೆ ರೂಪಲಾ ಚವ್ಹಾಣ, || ಆಹಾರ ನೀರಿಕ್ಷಕರು ಆಳಂದ, ಇವರು  ದಿನಾಂಕ 03/06/2016 ರಂದು ಗ್ರಾಮಕ್ಕೆ ಭೇಟ್ಟಿ ಕೊಟ್ಟು ವಿಚಾರಿಸಲಾಗಿ ನ್ಯಾಯಬೇಲೆ ಅಂಗಡಿ ಸಂಖ್ಯೆ 38 ರ ವಿತರಕರಾದ ಬಾಬುರಾವ ಹಾಗೂ ನ್ಯಾಯಬೇಲೆ ಅಂಗಡಿ ಸಂಖ್ಯೆ 118 ರ ವಿತರಕರಾದ ಭೀಮಣ್ಣಾ ಇವರು ಮೇ – 2016 ನೇ ಸಾಲಿನ ಪಡಿತರ ಆಹಾರ ಧಾನ್ಯವನ್ನು ಕಾರ್ಡುದಾರರಿಗೆ ಒಟ್ಟಾರೆಯಾಗಿ ವಿತರಣೆ ಮಾಡದೆ, ಜೂನ – 2016 ನೇ ಸಾಲಿನ ಪಡಿತರ ಆಹಾರ ಧಾನ್ಯದ ಪೈಕಿ ಕಾರ್ಡದಾರರಿಗೆ ನಿಗದಿತ ಪ್ರಮಾಣದಲ್ಲಿ ವಿತರಿಸದೆ ಕಡಿಮೆ ಪ್ರಮಾಣದಲ್ಲಿ ವಿತರಿಸಿ ಮೋಸ ಮಾಡಿರುತ್ತಾರೆ  ಸದರಿಯವರ ಮೇಲೆ ಸೂಕ್ತ ಕಾನೂನು  ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಮಾಡಿ ಹಿಂಸೆ ನೋಡಿ ಸಾಯಲು ಪ್ರಚೋದಿಸಿದ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀಮತಿ  ರಮಾಬಾಯಿ ಇವಳಿಗೆ ಈಗ ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದು, ಆಕೆಯ ಗಂಡ, ಅತ್ತೆ, ಮಾವ ನಾದಿನಿಯವರು  ಮದುವೆಯಾದ 2 ತಿಂಗಳ ವರೆಗೆ ಸರಿಯಾಗಿ ನೋಡಿಕೊಂಡಿದ್ದು, ನಂತರ ಅವಳಿಗೆ ಅಡುಗೆ ಕೆಲಸ ಸರಿಯಾಗಿ ಮಾಡುವುದಿಲ್ಲಾ ಅಂತಾ ಹೇಳಿ ನನಗೆ ಚುಚ್ಚು ಮಾತುಗಳಿಂದ ಹೀಯಾಳಿಸಿ ಬೈಯ್ಯುವುದು ಮತ್ತು  ನನಗೆ ಕೂಲಿ ಕೆಲಸಕ್ಕೆ ಹೋಗು ಅಂತಾ ಹೇಳುತ್ತಿದ್ದು. ಮತ್ತು  ನನ್ನ ಗಂಡ ಅತ್ತೆ, ಮಾವ, ನಾದಿನಿಯವರಿಗೆ ನಮ್ಮ ತವರು ಮನೆಯಲ್ಲಿ ಕೂಲಿಕೆಲಸಕ್ಕೆ ಹೋಗಿಲ್ಲಾ. ಕೂಲಿ ಕೆಲಸ ಮಾಡಲು ಬರುವುದಿಲ್ಲಾ ಎಂದು ಹೇಳಿದರೂ ಕೂಡಾ ಕೂಲಿಕೆಲಸಕ್ಕೆ ಹೋಗುವುದಿಲ್ಲಾ ಅಂತಾ ಹೇಳುತ್ತೀ ರಂಡಿ ಭೋಸಡಿ ಅಂತಾ ಬೈದು ಹೊಡೆ ಬಡಿ ಮಾಡಿ ಮಾನಸಿಕ ಮತ್ತು ದೈಹಿಕ ಕಿರುಕುಳ ಕೊಡುತ್ತಿದ್ದರು. ಅಲ್ಲದೇ ಮನೆಯಲ್ಲಿ ಮಗ ಸಮರ್ಥ ಇತನಿಗೆ ಊಟ ಮಾಡಿಸಿದರೆ  ಸೂಳೀ ಬಿಟ್ಟಿ ಕೂಳಾ ಯಾಕ ತಿನ್ನುಸುತ್ತೀ ನೀನು ದುಡಿದು ತಂದು ನಿನ್ನ ಮಗನಿಗೆ ಊಟ  ಮತ್ತು ಬಟ್ಟೆ ಬರೆ ಹಾಕು ಅಂತಾ ಹೇಳಿ  ನನ್ನ ಗಂಡ ಅತ್ತೆ ಇಟಾಬಾಯಿ, ಮಾವ ಶಿವಪ್ಪ, ನಾದಿನಿ ಸುಧಾರಣಿ  ಇವರೆಲ್ಲರೂ ನನಗೆ ಮತ್ತು ನನ್ನ ಮಗ ಇಬ್ಬರು  ಊಟ ಮಾಡುತ್ತಿದ್ದರೆ ಬಿಟ್ಟಿ ಕೂಳಾ ತಿನ್ನಬೇಡಾ ಅಂತಾ ಹೊಡೆ ಬಡಿ ಮಾಡುತ್ತಿದ್ದರು. ಈ ವಿಷಯ ತನ್ನ ತಾಯಿಗೆ ತಿಳಿಸಿದ್ದು, ತವರು ಮನೆಗೆ ಕರೆದುಕೊಂಡು ಹೋಗಿ ಒಂದು ವಾರದ ಹಿಂದೆ ಗಂಡನ ಮನೆಗೆ ಬಂದು ಬಿಟ್ಟು ತನ್ನ ಮಗಳಿಗೆ ಸರಿಯಾಗಿ ನೋಡಿಕೊಳ್ಳಿರಿ ಅಂತಾ ಹೇಳಿ ಬಿಟ್ಟು ಹೋಗಿದ್ದು ಇರುತ್ತದೆ. ದಿನಾಂಕ 21/06/16 ರಂದು ಬೆಳಿಗ್ಗೆ  09-00 ಗಂಟೆಗೆ ನನ್ನ ಮಗನಿಗೆ ಊಟ ಮಾಡಿಸುತ್ತಿದ್ದಾಗ ಆಗ ನನ್ನ ಗಂಡ, ಅತ್ತೆ ಇಟಾಬಾಯಿ, ಮಾವ ಶಾಂತಪ್ಪ, ಸುಧಾರಾಣಿ ಮತ್ತು ಕಾರುಹುಣ್ಣಿಮೆ ಹಬ್ಬಕ್ಕೆ ಬಂದಿದ್ದ ನಾದಿನಿ ಅನಿತಾ ಇವರೆಲ್ಲರೂ ಕೂಡಿ ನನಗೆ ಎ ರಂಡಿ, ಸೂಳೇ ಬಿಟ್ಟಿ ಕೂಳಾ ನಿನ್ನ ಮಗನಿಗೆ ಯಾಕೇ ತಿನ್ನುಸುತ್ತೀದ್ದೀ ನೀನು ದುಡಿದು ತಂದು ನಿನ್ನ ಮಗನಿಗೆ ಕೂಳಾ ಹಾಕು ಆಗಿಲ್ಲಾ ಅಂದರೆ ಎಲ್ಲಿಯಾದರೂ ಹೋಗಿ ಸಾಯಿ ನೀನು ಸತ್ತ ನಂತರ ನನ್ನ ಮಗ/ಅಣ್ಣ ತಮ್ಮನಿಗೆ ಕೂಲಿ ಕೆಲಸ ಮಾಡುವ ಇನ್ನೊಂದು ಹೆಣ್ಣು ತೆಗೆದು ಮದುವೆ ಮಾಡುತ್ತೇವೆ ರಂಡಿ ಅಂತಾ ಬೈದರು. ಅವರಲ್ಲಿ  ನನ್ನ ಗಂಡ  ಲಕ್ಷ್ಮಣ ಇತನು ನನಗೆ ಕೂಲಿಕೆಲಸ ಮಾಡಿ ಮಗನಿಗೆ ಕೂಳ ಹಾಕು ಇಲ್ಲಾ ಅಂದರೆ ಎಲ್ಲಿಯಾದರೂ ಹೋಗಿ ಸಾಯಿ ಅಂತಾ ಅಂದು ಕೈಯಿಂದ ಕಪಾಳ ಹೊಡೆದು ಕೆಲಸಕ್ಕೆ ಹೋದನು. ಮನೆಗೆಲಸ ಮುಗಿಸಿದ ನಂತರ ಮಗನೊಂದಿಗೆ ಕೋಣೆಯಲ್ಲಿ ಮಲಗಿಕೊಂಡೆನು. ಸಂಜೆ 04-30 ಗಂಟೆ ಸುಮಾರಿಗೆ ನಾನು ಮತ್ತು ಮಗ ಎದ್ದೇವು. ನನ್ನ ಮಗ ಸಮರ್ಥ ಹೊರೆಗಡೆ ಪಡಸಾಲಿಯಲ್ಲಿ ಆಟ ಆಡುತ್ತಿದ್ದನು. ಸಂಜೆ  05-00 ಗಂಟೆ ಸುಮಾರಿಗೆ  ನನ್ನ ಗಂಡ ಮತ್ತು ಅವರ ಮನೆಯವರು ಕೊಟ್ಟ ಮಾನಸಿಕ ಮತ್ತು ದೈಹಿಕ ಕಿರುಕುಳ ತಾಳಲಾರದೇ ಮನನೊಂದು ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ಮನೆಯಲ್ಲಿದ್ದ ಸೀಮೆ ಎಣ್ಣೆ ಮತ್ತು ಕಡ್ಡಿ ಪೆಟ್ಟಿಗೆ ತೆಗೆದುಕೊಂಡು ಮಲಗುವ ಕೋಣೆಯಲ್ಲಿ ಹೋಗಿ ಮೈಮೇಲೆ ಸೀಮೆ ಎಣ್ಣೆ ಹಾಕಿಕೊಂಡು ಕಡ್ಡಿ ಕೊರೆದು ಮೈಯಿಗೆ ಬೆಂಕಿ ಹಚ್ಚಿಕೊಂಡೆನು. ತ್ರಾಸ ತಾಳಲಾರದೇ ಚೀರಾಡುತ್ತಾ ನೆಲಕ್ಕೆ ಬಿದ್ದು ಹೊರಳಾಡುತ್ತಿದ್ದಾಗ ಪಡಸಾಲೆಯಲ್ಲಿ ಆಟ ಆಡುತ್ತಿದ್ದ ನನ್ನ ಮಗ ಸಮರ್ಥ ಇತನು ನನ್ನ ಹತ್ತಿರ ಬರಲು ಅವನಿಗೆ ನನ್ನ ಹತ್ತಿರ ಬರದಂತೆ ನೂಕಿಸಿಕೊಟ್ಟೆನು. ನಾನು ಚೀರುವ ಸಪ್ಪಳ ಕೇಳಿ ನನ್ನ ಮಗ ಸಮರ್ಥ ಬೆಂಕಿ ಹತ್ತಿದ ನನ್ನ  ಮೈಮೇಲೆ ಬಂದು ಬಿದ್ದಾಗ ಅವನಿಗೂ ಕೂಡಾ ನೆಲದ ಮೇಲೆ ಸೀಮೆ ಎಣ್ಣೆ ಮಗ ಧರಿಸಿದ ಬಟ್ಟೆಗೆ ಹತ್ತಿ ಅವನ ಮೈ ಕೂಡಾ ಸುಟ್ಟಿತು. ಚೀರಾಡುವ ಸಪ್ಪಳ ಕೇಳಿ  ಅಕ್ಕ ಪಕ್ಕದ ಮನೆಯ ಲಕ್ಷ್ಮಣ ಡಾಂಗೆ, ಅಶೋಕ ಡಾಂಗೆ, ಮಧುಮತಿ, ಅತ್ತೆ ಇಟಾಬಾಯಿ ಇತರೇ ಜನರು ಕೂಡಿಕೊಂಡು ಬಂದು ಮೈಮೇಲೆ ನೀರು ಹಾಕಿ ಬೆಂಕಿ ಆರಿಸಿದರು. ಜನರು ಬೆಂಕಿ ಆರಿಸುವಷ್ಟರಲ್ಲಿ ನನ್ನ ತಲೆಯಿಂದ ಕಾಲಿನ ಪಾದದವರೆ ಪೂರ್ತಿ ಮೈ ಸುಟ್ಟು ಚರ್ಮ ಸುಲಿದಿರುತ್ತದೆ. ಮತ್ತು ನನ್ನ ಮಗನ ಮೈ ಪೂರ್ತಿ ಸುಟಿರುತ್ತದೆ.  ನನಗೆ ಮತ್ತು ನನ್ನ ಮಗ ಸಮರ್ಥ ಇಬ್ಬರಿಗೂ ಉಪಚಾರ ಕುರಿತು ಅಶೋಕ ಡಾಂಗೆ ಮತ್ತು ಮಧುಮತಿ ಮತ್ತು ಮಾಹಾದೇವಿ, ಅತ್ತೆ ಇಟಾಬಾಯಿ  ಇವರೆಲ್ಲರೂ ಕೂಡಿಕೊಂಡು  ಒಂದು ಖಾಸಗಿ ಜೀಪಿನಲ್ಲಿ ಹಾಕಿಕೊಂಡು ಸರಕಾರಿ ಆಸ್ಪತ್ರೆ ಕಲಬುರಗಿಗೆ ತಂದು ಸೇರಿಕೆ ಮಾಡಿದರು. ಆಗ ವೈದ್ಯರು ನನ್ನ ಮಗನಿಗೆ ನೋಡಿ ದಾರಿಯಲ್ಲಿ ತರುವಾಗ ಮೃತಪಟ್ಟಿರುತ್ತಾನೆ ಎಂದು ತಿಳಿಸಿದರು. ಕಾರಣ ನನ್ನ ಗಂಡ ಅತ್ತೆ, ಮಾವ, ನಾದಿನಿಯರು, ಇವರೆಲ್ಲರೂ ಕೂಡಿಕೊಂಡು ನನಗೆ ದೈಹಿಕ ಮತ್ತು ಮಾನಸಿಕ ಹಿಂಸೆ ಕೊಟ್ಟು ಎಲ್ಲಿಯಾದರೂ ಹೋಗಿ ಸಾಯಿ ಎಂದು ದುಷ್ರಪೇರಣೆ (ಪ್ರದೋಚನೆ) ನೀಡಿದವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣ :
ಮಾಡಬೂಳ ಠಾಣೆ : ಶ್ರೀ ಮಂಜುನಾಥ ತಂದೆ ಚಂದ್ರಶಾ ಸಾ: ಕಲಗುರ್ತಿ ತಾ:ಚಿತ್ತಾಪೂರ ನಾನು ನನ್ನ ತಂದೆ ತಾಯಿ ಜೂತೆಯಲ್ಲಿ ಕಿರಾಣಿ ಅಂಗಡಿ ವ್ಯಾಪಾರ ಮಾಡಿಕೊಂಡು ವಾಸವಾಗಿರುತ್ತೆನೆ ನನ್ನ ತಾಯಿ ಸದ್ಯ ಕೋರವಾರ ಗ್ರಾಮ ಪಂಚಾಯಿತಿಯ ಉಪಾದ್ಯಕ್ಷ ಇರುತ್ತಾರೆ, ಈಗ ಕೇಲವು ದಿವಸಗಳ ಹಿಂದೆ ನಮ್ಮೂರಿನ ನಮ್ಮ ಓಣಿಯಲ್ಲಿ ವಾಸವಾಗಿರುವ  ನಮ್ಮ ಜಾತಿಯದವರಾದ ಗುರಬಸಪ್ಪಾ ತಂದೆ ಶಿವಪ್ಪಾ ಸಂಗನ ಹಾಗೂ ಹಾಗೂ ಅವರ ಅಣ್ಣತಮ್ಮಕಿ ದವರು ನಮ್ಮ ಓಣಿಯ ರಸ್ತೆಯಲ್ಲಿ ನೀರು ಬೀಡುವ ವಿಚಾರಕ್ಕೆ ಸಂಬಂದಿಸಿದಂತೆ ನಮ್ಮ ಜೊತೆಯಲ್ಲಿ ಸುಮಾರು ಬಾರಿ ತಂಟೆ ತಕರಾರು ಮಾಡಿರುತ್ತಾರೆ. ಅದೆ ಹಳೆಯ ವೈಮನಸ್ಸು ಇಟ್ಟಿಕೊಂಡು  ದಿನಾಂಕ: 21/6/2016 ರಂದು ನಮ್ಮೋರಿನಲ್ಲಿ ಕಾರಹುಣ್ಣೆಮ್ಮೆ ಇದ್ದ ಪ್ರಯುಕ್ತ ರಾತ್ರಿ 8-30 ಪಿಎಂ ಸುಮಾರಿಗೆ ನಮ್ಮ ಸಂಬಂದಿಕನಾದ ಮಹೇಶ ತಂದೆ ಚಂದ್ರಪ್ಪಾ ಇವರು ತನ್ನ  ಮನೆಯ ಅಂಗಳದಲ್ಲಿ ನಿಂತಾಗ ಆಸಂದರ್ಭದಲ್ಲಿ ನಮ್ಮ ಓಣಿಯ ಈ ಮೇಲೆ ನಮೂದಿಸಿದ ಆರೋಪಿತರೆಲ್ಲರು  ತಮ್ಮ ಎತ್ತುಗಳನ್ನು ಮೇರವಣಿಗೆ ಮಾಡುತ್ತಾ ಕೈಯಲ್ಲಿ ಬಡಿಗೆ  ಕಲ್ಲು ಗಳು ಹಿಡಿದುಕೊಂಡು ಬಂದವರೆ ಮಹೇಶ ಇತನ ಮನೆಯ ಮುಂದಿನ ರಸ್ತೆ ಮೆಲೆ ಜಗಳ ತೆಗೆಯುವು  ಸಲುವಾಗಿ ಉದ್ದೆಶ ಪೋರ್ವಕವಾಗಿ ನಿಂತು ಜೋರಾಗಿ ಹಲಗಿ  ಬಾರಿಸುತ್ತಿದ್ದಾಗ  ಆಗ ಮಹೇಶ ಇತನು ರಸ್ತೆಯ ಮೇಲೆ ಬಂದು ಜೋರಾಹಿ ಹಲಗಿ ಬಾರಿಸ ಬೇಡಿ ಮನೆಯ ಅಂಗಳದಲ್ಲಿ ಕಟ್ಟಿದ ನನ್ನ ಧನಗಳೂ ಬೆದರುತ್ತಾವೆ ಮುಂದಗಡೆ ಹೋಗಿ ಬಾರಿಸು ಅಂತ ಅನ್ನಲು  ಎಲ್ಲರು ಈ ಸೂಳೆ ಮಗದು ಬಹಳ ಸೂಕ್ಕ ಇದೆ ಅಂತಾ ಬೈಯ್ಯುತ್ತಾ ಅದರಲ್ಲಿ 1) ಗುರಬಸಪ್ಪಾ ತಂದೆ ಶಿವಪ್ಪಾ ಸಂಗನ 2) ದಸರಥ ತಂದೆ ಶಿವಪ್ಪಾ ಸಂಗನ 3) ಭೀಮಶಾ ಸರಡಗಿ ಇವರು ಮೂವರು ಈ ರಂಡಿ ಮಗನೆಗೆ ಹೋಡ್ರಿಲೇ ಅಂತಾ ಅಂದು ಗುರಬಸಪ್ಪಾ ಇತನು ತನ್ನ ಕೈಯಲ್ಲಿದ್ದ ಬಡಿಗೆಯಿಂದ ಜೂರಾಗಿ ಮಹೇಶ ಇತನ ತಲೆ ಮೇಲೆ ಹೂಡೆದು ರಕ್ತಗಾಯಪಡಿಸಿದನು  ಉಳಿದ ಇಬ್ಬರು ಬಡಿಗೆಯಿಂದ ಬಲ ತೋಡೆಗೆ ಹಾಗೂ ಬುಜದ ಮೇಲೆ  ಹೂಡೆ ಹತ್ತಿದ್ದಾಗ ಆಗ ನನ್ನ ತಂದೆ ಚಂದ್ರಶಾ ಹಾಗೂ ನಾನು ನನ್ನ ಅಣ್ಣ ಕೃಷ್ಣಾ ಹಾಗೂ ಶಮರಂತ ನಾವೆಲ್ಲರೂ ನೋಡಿ  ಮದ್ಯ  ಹೂಗಿ ಬಿಡಿಸಲು ಹೂದಾಗ  ಈ ಮೂವರ ಪೈಕಿ ಗುರಬಸಪ್ಪಾ ಇತನು  ಸರಿ ಅಲೇ ಈ ಸೂಳೆ ಮಗನಿಗೆ ಇವತ್ತು ಖಲಾಸ ಮಾಡ್ತಿನಿ  ಅಂತಾ  ಅಂದು ತನ್ನ ಕೈಲ್ಲಿದ್ದ  ಬಡಿಗೆ ಯಿಂದ  ನನ್ನ ತಂದೆ ತಲೆಯ ಮೇಲೆ ಜೋರಾಗಿ ಹೋಡೆದು ರಕ್ತಗಾಯ ಪಡಿಸಿ ನಂತರ  ದಶರಥ ಇತನು ಕೋಲೆ ಮಾಡುವ ಉದ್ದೆಶದಿಂದ  ಕೈಲ್ಲಿದ್ದ ಕಲ್ಲಿನಿಂದ ತಲೇ ಮೇಲೆ ಜೂರಾಗಿಹಾಗಿ ರಕ್ತ ಗಾಯ ಪಡಿಸಿದಾಗ ಭಿಮಶಾ ಸರಡಗಿ ಇತನು ಎಡಗೈ ಮೇಲೆ ಕಲ್ಲಿನಿಂದ ಹೂಡೆದು ಗುಪ್ತಗಾಯ ಪಡಿಸುತ್ತಿರುವಾಗ  ಬೀಡಿಸಲು ಹೂದಾಗ ನನ್ನ ಅಣ್ಣನಿಗೆ ರಾಜಪ್ಪಾ ತಂದೆ ಚಂದ್ರಪ್ಪಾ ಸಂಗನ ಇತನು ಕಲ್ಲಿನಿಂದ ತಲೆಗೆ ಹೂಡೆದು ರಕ್ತಗಾಯ ಪಡಿಸಿದನು ದಶರಥ ತಂದೆ ಪ್ರಕಾಶ ಸಂಗನ, ರವಿ ತಂದೆ ಬಸವರಾಜ ಸಂಗನ  ಇವರಿಬ್ಬರು ಬಡಿಗೆಯಿಂದ ಎಡಗೈ ಹಸ್ತ ಹಾಗೂ ಕೈ ಬೆರಳಲ್ಲಿ ಬೆನ್ನಿನ ಮೆಲೆ ಹೂಡೆದು ರಕ್ತ ಗಾಯ ಹಾಗೂ ಗುಪ್ತ ಗಾಯ ಪಡಿಸಿದನು, ದಶರಥ ತಂದೆ ಘಾಳಪ್ಪಾ ಇತನು ನನಗೆ  ಬಡಿಗೆಯಿಂದ ತಲೆ ಮೆಲೆ ಹೋಡೆದು ರಕ್ತ ಗಾಯ ಪಡಿಸಿದನು ಶಮರಂತ ಇತನಿಗೆ ದೆವಪ್ಪಾ ತಂದೆ ಘಾಳಪ್ಪಾ ಇತನಿಗೆ  ಬೇನ್ನಿನ ಮೆಲೆ ಬಡಿಗೆ ಯಿಂದ ಹೂಡೆದು ಗುಪ್ತ ಗಾಯ ಪಡಿಸಿದನು  ಬೀಡಿಸಲು ಬಂದ  ಶಾರದಾ ಹಾಗೂ ನನ್ನ ತಾಯಿ ಇವರಿಬ್ಬರಿಗೆ ಬಸವರಾಜ ತಂದೆ ದೇವಿಂದ್ರಪ್ಪಾ ಹಾಗೂ ಮಹಾಂತಪ್ಪಾ ತಂದೆ ಚಂದ್ರಪ್ಪಾ  ಇವರಿಬ್ಬರು ತಲೆಯ ಮೇಲಿನ ಕೂದಲು ಹಿಡಿದು ಎಳೆದಾಡಿ ಅವಮಾನ ಗೂಳಿಸಿ  ಬಡಿಗೆಯಿಂದ  ಕೈಗಗಳಿಗೆ ಹೂಡೆದು ಒಳಪೆಟ್ಟ ಮಾಡಿರುತ್ತಾನೆ  ಬಿಡಿಸಲು ಬಂದ ಗುಜಮ್ಮಾ ಇವಳಿಗೆ ಬಲ ಹಣೆಯ ಮೇಲೆ ಹೂಡೆದು ಗುಪ್ತ ಗಾಯ ಪಡಿಸಿ ನನ್ನ ತಂದೆಯವರು  ಭಾರಿ ರಕ್ತಗಾಯವಾಗಿ ಬೇಹೂಷಾಗಿ ಕೆಳಗೆ ಬೇಹೊಷಆಗಿ  ಬಿದ್ದಿದ್ದನ್ನು ನೋಡಿ ಸತ್ತಿರುತ್ತಾರೆ ಅಂತಾ ತಿಳಿದು ನಮಗೆ ಹೂಡೆಯುವುದನ್ನು ಬಿಟ್ಟು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.