Police Bhavan Kalaburagi

Police Bhavan Kalaburagi

Sunday, September 29, 2019

KALABURAGI DISTRICT REPORTED CRIMES

ಅಸ್ವಾಭಾವಿಕ ಸಾವು ಪ್ರಕರಣ :
ಜೇವರಗಿ ಠಾಣೆ : ಶ್ರೀಮತಿ ದೇವಕಿ ಗಂಡ ಶಿವರಾಯ ನಾಯಿಕೊಡಿ ಸಾ|| ಮಾರಡಗಿ (ಎಸ್.ಎ) ರವರ ಮಗ  ವಿಶ್ವರಾಧ್ಯ @ ಈಶಪ್ಪ ತಂದೆ ಶಿವರಾಯ ನಾಯಿಕೊಡಿ ರವರು  ತನ್ನ ಕೃಷಿ ಚಟುವಟಿಕೆಗಾಗಿ ಐ.ಸಿ.ಐ.ಸಿ ಬ್ಯಾಂಕ್ ಜೇವರಗಿ ಶಾಖೆ ಮತ್ತು ಊರಲ್ಲಿ ಅವರಿವರ ಹತ್ತಿರ ಒಟ್ಟು 6.71.000/- ರೂ ಸಾಲ ಮಾಡಿಕೊಂಡಿರುತ್ತಾನೆ. ಸಮಯಕ್ಕೆ ಸರಿಯಾಗೇ ಮಳೆ ಬಾರದ ಕಾರಣ ಬೇಳೆ ಬಾರದೆ ಮಾಡಿರುವ ಹೇಗೆ ತೀರಿಸಬೇಕೆಂದು ಚಿಂತೆ ಮಾಡಿ ಸಾಲದ ಬಾದೆಯಿಂದ ದಿನಾಂಕ 09.09.19 ರಂದು ಬೇಳಗ್ಗೆ 03:00 ಸುಮಾರಿಗೆ ತಾನು ಮನೆಯಲ್ಲಿ ಕ್ರಿಮಿನಾಶಕ ಔಷಧಿ ಸೇವನೆ ಮಾಡಿ ಚಿಕಿತ್ಸೆ ಗುಣಮುಖವಾಗದೆ ನಿನ್ನೆ ದಿನಾಂಕ 26.09.2019 ರಂದು 23:40 ಕ್ಕೆ ಸರಕಾರಿ ಆಸ್ಪತ್ರ  ಕಲಬುರಗಿಯಲ್ಲಿ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳೆ ನಾಶ ಮಾಡಿ ಜೀವದ ಭಯ ಹಾಕಿದ ಪ್ರಕರಣ :
ಜೇವರಗಿ ಠಾಣೆ : ಶ್ರೀ ಅಪ್ಪಣ್ಣಗೌಡ ತಂದೆ ಸಿದ್ದರಾಮಪ್ಪ ಇಟಗಿ ಸಾ; ಬಿರಾಳ (ಕೆ) ತಾ; ಜೇವರ್ಗಿ ಹಾ,ವ ಗಾಬರೆ ಲೇಔಟ್ ಸಿದ್ದೇಶ್ವರ ಕಲ್ಯಾಣ ಮಂಟಪ ಹತ್ತಿರ ಕಲಬುರಗಿ  ರವರದು; ಜೇವರ್ಗಿ ತಾಲೂಕಿನ ಹೊನ್ನಾಳ ಗ್ರಾಮ ಸೀಮಾಂತರದ ಜಮೀನು ಸರ್ವೇ ನಂ; 43/ಅ ವಿಸ್ತೀರ್ಣ 10 ಎಕರೆ 13 ಗುಂಟೆ ಹಾಗು 43/ಆ ವಿಸ್ತೀರ್ಣ 9 ಎಕರೆ 29 ಗುಂಟೆ ಜಮೀನು ಇದ್ದು ಸದರಿ ಜಮೀನು ನನ್ನ ಮಗ ಶರಣು ಈತನ ಹೆಸರಿನಲ್ಲಿ ಇರುತ್ತದೆ. ಈ ಜಮೀನು ನಾವು ಉಳುಮೆ ಮಾಡುತ್ತಾ ಬಂದು ಸಾಗುವಳಿ ಮಾಡುತ್ತಾ ಬಂದಿರುತ್ತೇವೆ. 1) ಸಂಗಣ್ಣಗೌಡ ತಂದೆ ಲಿಂಗನಗೌಡ 2) ಭೀಮರಾಯಗೌಡ ತಂದೆ ಲಿಂಗನಗೌಡ 3) ಶರಣಗೌಡ ತಂದೆ ಲಿಂಗನಗೌಡ ಇವರು ಜಮೀನು ತಮಗೆ ಸೇರಿರುತ್ತದೆ ಎಂದು ನಮ್ಮೊಂದಿಗೆ ತಕರಾರು ಮಾಡುತ್ತಾ ಬಂದಿರುತ್ತಾರೆ. ಈ ವಿಷಯದಲ್ಲಿ ಅವರು ನಮ್ಮೊಂದಿಗೆ ವೈಮನಸ್ಸು ಹೊಂದಿರುತ್ತಾರೆ. ದಿನಾಂಕ; 20.09.2019 ಹಾಗು ದಿ; 21.09.2019 ರಂದು ಈ ಎರಡು ದಿನ ಈ ಮೇಲೆ ನಮೂದಿಸಿದ ಜಮೀನಿನಲ್ಲಿನ ತೊಗರೆ ಬೆಳೆಯನ್ನು ಹೊನ್ನಾಳ ಗ್ರಾಮದ 1) ಸಂಗಣ್ಣಗೌಡ ತಂದೆ ಲಿಂಗನಗೌಡ 2) ಭೀಮರಾಯಗೌಡ ತಂದೆ ಲಿಂಗನಗೌಡ 3) ಶರಣಗೌಡ ತಂದೆ ಲಿಂಗನಗೌಡ 4) ಈಶ್ವರಪ್ಪ ತಂದೆ ಮರೆಪ್ಪ ಸೂಗೂರ ಸಾ; ಎಲ್ಲರೂ ಹೊನ್ನಾಳ ಗ್ರಾಮ ಕೂಡಿಕೊಂಡು ನಮಗೆ ಕೇಡು ಮಾಡುವ ಉದ್ದೇಶದಿಂದ ತಮ್ಮ ದನಕರುಗಳನ್ನು ನಮ್ಮ ಜಮೀನಿನಲ್ಲಿ ಬಿಟ್ಟು ಬೆಳೆಯನ್ನು ಹಾಳು ಮಾಡಿರುತ್ತಾರೆ. ದಿ; 21.09.2019 ರಂದು ಮದ್ಯಾಹ್ನ 2-00 ಘಂಟೆಯ ಸುಮಾರಿಗೆ ನಮ್ಮ ಆಳು ಮಗ ಮಹಾಂತೇಶ ತಂದೆ ಸೈಬಣ್ಣ ಈತನು ಹೊಲದಲ್ಲಿ ಹೋದಾಗ ಅವರು ಆ ಭೋಸಡಿ ಮಗ ನಿಮ್ಮ ಮಾಲಕನಿಗೆ ಹೇಳು ನಮ್ಮ ತಂಟೆಗೆ ಬಂದರೆ ಒಬ್ಬೊಬ್ಬರಿಗೆ ಜೀವಂತವಾಗಿ ಸುಟ್ಟು ಹಾಕುತ್ತೇವೆ ಎಂದು ಜೀವದ ಭೇದರಿಕೆ ಹಾಕಿರುತ್ತಾರೆ. ಎಂದು ನಮ್ಮ ಆಳು ಮಗ ನಮಗೆ ಪೋನ್ ಮಾಡಿ ತಿಳಿಸಿರುತ್ತಾನೆ. ನಂತರ ನಾನು ನಮ್ಮ ಗ್ರಾಮದ ವಜ್ರಪ್ಪ ತಂದೆ ಈರಪ್ಪ ತಳವಾರ, ಸಾಬಣ್ಣ ತಂದೆ ಈರಪ್ಪ ತಳವಾರ, ಮಲ್ಲಣ್ಣ ತಂದೆ ಬಸು ರೆಡ್ಡಿ ಇವರಿಗೆ ಪೋನ್ ಮಾಡಿ ವಿಷಯ ತಿಳಿಸಿದ್ದರಿಂದ ಅವರು ನಮ್ಮ ಹೊಲಕ್ಕೆ ಹೋದಾಗ ತೊಗರೆ ಬೆಳೆ ಮೈಸುತ್ತಿರುವ ಈ ಮೇಲಿನವರು ಅಲ್ಲಿಂದ ಓಡಿ ಹೋಗಿರುತ್ತಾರೆ. ನಂತರ ಮರು ದಿನ ದಿನಾಂಕ 22.09.2019 ರಂದು ಬೆಳಿಗ್ಗೆ 6-30 ಘಂಟೆಯ ವೇಳೆಗೆ ನಮ್ಮ ಆಳು ಮಗ ಮಹಾಂತೇಶ ದೊರೆ ಈತನು ಪೋನ್ ಮಾಡಿ ವಿಷಯ ತಿಳಿಸಿದ್ದೇನೆಂದರೆ ಇಂದು ಬೆಳಿಗ್ಗೆ 6-00 ಘಂಟೆಯ ವೇಳೆಗೆ ನಾನು ಹೊನ್ನಾಳ ಸೀಮಾತರದಲ್ಲಿ ಇರುವ ಮೇಲೆ ನಮೂದಿಸಿದ ಹೊಲಕ್ಕೆ ಹೋದಾಗ ಹೊಲದಲ್ಲಿ 1) ಸಂಗಣ್ಣಗೌಡ ತಂದೆ ಲಿಂಗನಗೌಡ 2) ಭೀಮರಾಯಗೌಡ ತಂದೆ ಲಿಂಗನಗೌಡ 3) ಶರಣಗೌಡ ತಂದೆ ಲಿಂಗನಗೌಡ ಸಾ; ಎಲ್ಲರು ಹೊನ್ನಾಳ ಗ್ರಾಮ ಇವರು ಕೂಡಿಕೊಂಡು ಟ್ರಾಕ್ಟರ ನಂ; ಕೆ.ಎ-32-ಟಿ-9444 ಮೂಲಕ ಹೊಲದಲ್ಲಿನ ತೊಗರೆ ಬೆಳೆ ಹರಗುತ್ತಿದ್ದರು. ಆಗ ನಾನು ಹೊಲದಲ್ಲಿ ಬರುವದನ್ನು ನೋಡಿ ಅವರು ಟ್ರಾಕ್ಟರ ಸಮೇತ ಅಲ್ಲಿಂದ ಓಡಿ ಹೋದರು. ಎಂದು ನಮ್ಮ ಆಳು ಮಗ ನನಗೆ ಪೋನ್ ಮಾಡಿ ತಿಳಿಸಿದನು. ನಂತರ ಅದೇ ದಿವಸ ನಾನು ಹೊಲಕ್ಕೆ ಹೋಗಿ ನೋಡಲಾಗಿ ಹೊಲದಲ್ಲಿ ಬೆಳೆ ಸಂಪೂರ್ಣ ಟ್ರಾಕ್ಟರದಿಂದ ಹರಗಿ ಹಾಳು ಮಾಡಿದ್ದು ನಿಜವಿರುತ್ತದೆ. ಇದರಿಂದ ಹೊಲದಲ್ಲಿ ಇದ್ದ ಸುಮಾರು 7,00,000/ ರೂ ಮೌಲ್ಯದ ಬೆಳೆಯನ್ನು ಹಾನಿ ಮಾಡಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ನರೋಣಾ ಠಾಣೆ : ದಿನಾಂಕ 26/09/2019 ರಂದು ಶ್ರೀ ಸೂರ್ಯಕಾಂತ ತಂದೆ ಬಸವಣಪ್ಪಾ ಕಲಶಟ್ಟಿ ಸಾ ಬೆಳಮಗಿ ರವರು ಮತ್ತು  ಹೆಂಡತಿಯಾದ ಜಗದೇವಿ ಮಕ್ಕಳಾದ ಅಂಬೀಕಾ ಮತ್ತು ಶಂಭುಲಿಂಗ ಎಲ್ಲರೂ ರಾತ್ರಿ ನಮ್ಮ ಮನೆಯಲ್ಲಿ ಊಟ ಮಾಡಿಕೊಂಡು ಅಡುಗೆ ಕೋಣೆ ಮತ್ತು ದೆವರ ಕೋಣೆಗಳಿಗೆ ಬಾಗಿಲು ಕೊಂಡಿ ಹಾಕಿ ಹಾಗು ನಮ್ಮ ಮನೆಯ ಅಡುಗೆ ಕೋಣೆಯ ಹೊರಭಾಗದ ಬಾಗಿಲಿಗೆ ಹಾಗು ನಮ್ಮ ಮನೆಯ ಪಡಸಾಲಿಗೆ ಹೊಂದಿಕೊಂಡು ಕೂಡಿಸಿದ ಶೆಟರ ಚೈನಿಗೆ ಚಾವಿ ಹಾಕಿಕೊಂಡು ನಾವೆಲ್ಲರೂ ಮನೆಯ ಪಡಸಾಲೆಯಲ್ಲಿ ರಾತ್ರಿ ಮನೆಯಲ್ಲಿನ ಲೈಟ ಆರಿಸಿಕೊಂಡು ಮಲಗಿಕೊಂಡಿರುತ್ತೆವೆ. ದಿನಾಂಕ 27/09/2019 ರಂದು ಬೆಳಿಗ್ಗೆ ನಾನು ಪ್ರತಿ ದಿನದಂತೆ ನನ್ನ ಹೊಟಲ ಕೆಲಸಕ್ಕೆ ಹೋಗಲು ಎದ್ದು ನನ್ನ ಹೆಂಡತಿಯಾದ ಜಗದೇವಿ ಇವಳಿಗೂ ಎಬ್ಬಿಸಿದೆನು. ಲೈಟ ಹಾಕಿ ನೋಡಿದಾಗ ನಮ್ಮ ಮನೆಯ ದೆವರು ಕೋಣೆಗೆ ಹಾಕಿದ ಬಾಗಿಲು ತೆರೆದ ಸ್ಥಿತಿಯಲ್ಲಿದ್ದುದ್ದರಿಂದ ನಾನು ನನ್ನ ಹೆಂಡತಿ ಇಬ್ಬರು ಗಾಬರಿಯಾಗಿ ದೆವರು ಕೋಣೆಯಲ್ಲಿ ನೋಡಲಾಗಿ ನಮ್ಮ ಬಟ್ಟೆ ಬರೆ ಬಂಗಾರದ ಒಡವೆಯ ಡಬ್ಬಿಗಳು ಚೆಲ್ಲಾಪಿಲ್ಲಿಯಾಗಿ ತೆರೆದ ಸ್ಥಿತಿಯಲ್ಲಿ ಬಿದ್ದಿದ್ದು ನಾನು ನನ್ನ ಹೆಂಡತಿ ಇಬ್ಬರು ಒಳಗೆ ಹೋಗಿ ನೋಡಲಾಗಿ ತಿಜೂರಿ ತೆರೆದಿದ್ದು ಪರಿಶೀಲಿಸಲಾಗಿ ತಿಜೂರಿಯಲ್ಲಿ ಇಟ್ಟಿದ್ದ ಬಂಗಾರದ ಆಭರಣಗಳು ಹಾಗು ಬೆಳ್ಳಿಯ ಆಭರಣಗಳನ್ನು  ಎರಡು ಪ್ಲಾಸ್ಟಿಕ ಕ್ಯಾರಿಬ್ಯಾಗಗಳಲ್ಲಿ ನಾನು ಮುಂಬರುವ ದಿಪಾವಳಿ ಹಬ್ಬದ ಸುಮಾರಿಗೆ ನನ್ನ ಮಗಳಾದ ಅಂಬೀಕಾ ಇವಳ ಮದುವೆಗಾಗಿ ನಾನು ಜಮಾ ಮಾಡಿಟ್ಟ ಹಾಗು ಬಿ,ಸಿ ಎತ್ತಿ ಹಾಗು ಕೈಗಡ ಪಡೆದುಕೊಂಡು ಸಂಗ್ರಹಿಸಿ ಇಟ್ಟ ಒಟ್ಟು  4,50,000/- ರೂ ಹಾಗು ಮನೆಯಲ್ಲಿ ಫ್ರಿಜ್ ಮೆಲೆ ಇಟ್ಟಿದ್ದ  ಒಂದು ಚಾರ್ಜರ ಬ್ಯಾಟ್ರಿ ಅ: ಕಿ: 1500/- ರೂ  ಒಂದು ಸಾದಾ ಮೊಬೈಲ್ ಸೆಟ ಅ: ಕಿ: 1000/- ರೂ  ಒಂದು ಪವರ ಬ್ಯಾಂಕ ಅ:ಕಿ: 500/- ರೂ ಹೀಗೆ ಎಲ್ಲವುಗಳು ಕಳ್ಳತನಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.