Police Bhavan Kalaburagi

Police Bhavan Kalaburagi

Saturday, October 17, 2020

BIDAR DISTRICT DAILY CRIME UPDATE 17-10-2020

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 17-10-2020

 

ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 154/2020, ಕಲಂ. 379 ಐಪಿಸಿ :-

ದಿನಾಂಕ 22-08-2020 ರಂದು 2000 ಗಂಟೆಯಿಂದ 2330 ಗಂಟೆಯ ಅವಧಿಯಲ್ಲಿ ಫಿರ್ಯಾದಿ ಓಂಕಾರ ತಂದೆ ಸುಭಾಶ ವಯ: 25 ವರ್ಷ, ಜಾತಿ: ಎಸ್.ಸಿ ಹೋಲಿಯಾ, ಸಾ: ಮನೆ ನಂ. 17-02-423 ಗಾಂಧಿ ನಗರ ಮೈಲೂರ ಬೀದರ ರವರ ದ್ವಿಚಕ್ರ ವಾಹನ ಸಂ. KA-38/V-0963, ENGINE No. HA10AGJHCB9538, CHESSI No. MBLHAR073JHCA3922 ನೇದನ್ನು ತನ್ನ ಮನೆಯ ಹೊರಗೆ ನಿಲ್ಲಿಸಿರುವುದನ್ನು ಯಾರೋ ಅಪರಿಚಿತ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 16-10-2020 ರಂದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.    

 

ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 155/2020, ಕಲಂ. 457, 380 ಐಪಿಸಿ :-

ದಿನಾಂಕ 15,16-10-2020 ರಂದು ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ಫಿರ್ಯಾದಿ ಸುಶೀಲಾಬಾಯಿ ಗಂಡ ಧುಳಪ್ಪಾ ಮೇತ್ರೆ ವಯ: 56 ವರ್ಷ, ಜಾತಿ: ಎಸ್.ಟಿ ಗೊಂಡಾ, ಸಾ: ರಾಂಪುರೆ ಕಾಲೋನಿ ಬೀದರ ರವರು ಬಾಡಿಗೆಯಿಂದ ವಾಸವಾಗಿರುವ ಮನೆಯ ಬೀಗ ಮುರಿದು ಒಳಗೆ ಪ್ರವೇಶಿಸಿ ಅಲಮಾರಾದ ಲಾಕರ ಕೀಲಿ ಮುರಿದು ಅಲಮಾರಾದಲ್ಲಿಟ್ಟಿದ್ದ 1) 30 ಗ್ರಾಮ ಬಂಗಾರದ 06 ಕೈ ಉಂಗುರುಗಳು .ಕಿ 1,50,000/- ರೂ., 2) ಬೇಳ್ಳಿ ಕಾಲು ಚೈನು ಅಂದಾಜು 100 ಗ್ರಾಮ .ಕಿ 6000/- ರೂ., 3) ನಗದು ಹಣ 1,00,000/- ರೂಪಾಯಿ ಹೀಗೆ ಒಟ್ಟು 2,56,000/- ರೂಪಾಯಿ ಮೌಲ್ಯದ ಬಂಗಾರದ ಒಡವೆಗಳು, ಬೆಳ್ಳಿ ಮತ್ತು ನಗದು ಹಣ ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.  

 

ಹುಮನಾಬಾ ಪೊಲೀಸ್ ಠಾಣೆ ಅಪರಾಧ ಸಂ. 141/2020, ಕಲಂ. 457, 380 ಐಪಿಸಿ :- 

ದಿನಾಂಕ 15-10-2020 ರಂದು 2300 ಗಂಟೆಯಿಂದ ದಿನಾಂಕ 16-10-2020 ರಂದು 0600 ಗಂಟೆಯ ಮಧ್ಯದ ಅವಧಿಯಲ್ಲಿ ಫಿರ್ಯಾದಿ ಮನೋಹರ ತಂದೆ ಸಂಗಪ್ಪಾ ಪುಜಾರಿ ವಯ: 52 ವರ್ಷ, ಜಾತಿ: ಕುರುಬ, ಸಾ: ಕಠೋಳಿ, ಸದ್ಯ: ಪಿ.ಕೆ.ಪಿ.ಎಸ ಬ್ಯಾಂಕ ಹತ್ತಿರ ಇರುವ ಪಿ.ಡಬ್ಲೂ.ಡಿ ಕ್ವಾರ್ಟಸ ಮನೆ ನಂ. 22/10 ಹುಮನಾಬಾದ ರವರ ಮನೆಯ ಬಾತರೂಮ ಕಿಟಕಿಯ ಮುಖಾಂತರ ಯಾರೋ ಅಪರಿಚಿತ ಕಳ್ಳರು ಮನೆಯ ಒಳಗೆ ಪ್ರವೇಶ ಮಾಡಿ ಮನೆಯಲ್ಲಿ ಅಲಮಾರದಲ್ಲಿದ್ದ 1) ಒಂದು ಬಂಗಾರದ 3 ತೋಲಿ ನಾನ್ .ಕಿ 1,35,000/- ರೂ., 2) ಒಂದು 2 ತೋಲಿ ಬಂಗಾರದ ಚಪ್ಪಲಾರ ಎರಡು ಎಳೆಯದ್ದು .ಕಿ 90,000/- ರೂ., 3) ಒಂದು ಬಂಗಾರದ 1 ತೋಲೆ ಲ್ಯಾಕೇಟ .ಕಿ 45,000/- ರೂ., 4) ಒಂದು ತೋಲಿ ಬಂಗಾರದ ತಾಳಿ ಚೈನ್ .ಕಿ 45,000/- ರೂ., 5) 4 ಗ್ರಾಮದ 3 ಜೊತೆ 12 ಗ್ರಾಮ ಬಂಗಾರದ ಕಿವಿಯ ಓಲೆಗಳು .ಕಿ 50,000/- ರೂ., 6) 5 ಗ್ರಾಮ ಬಂಗಾರದ ತಾಳಿ ಗುಂಡು .ಕಿ 22,000/- ರೂ., 7) 4 ಗ್ರಾಮ ಬಂಗಾರದ ಒಂದು ಉಂಗುರು .ಕಿ 18,000/- ರೂ., 8) ಒಂದು 6 ಗ್ರಾಮ ಬಂಗಾರದ ಲ್ಯಾಕೇಟ .ಕಿ 25,000/- ರೂ., 9) 4 ಗ್ರಾಮ ಬಂಗಾರದ ಕಿವಿ ಓಲೆಯ ಚೈನ .ಕಿ 18,000/- ರೂ., 10) ನಗದು ಹಣ 37,600/- ರೂಪಾಯಿ ಮತ್ತು ಮಕ್ಕಳು ಮಲಗಿದ ರೂಮಿನಲ್ಲಿ ಚಾರ್ಜಿಂಗ ಹಚ್ಚಿದ ಒಂದು ಎಂ. ನೋಟ್-8 ನೀಲಿ ಬಣ್ಣದ ಮೋಬೈಲ ನೇದವುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂ. 132/2020, ಕಲಂ. 78(3) ಕೆ.ಪಿ ಕಾಯ್ದೆ :-

ದಿನಾಂಕ 16-10-2020 ರಂದು ಬಸವಕಲ್ಯಾಣ ನಗರದ ಕೆ.ಎಸ್.ಆರ್.ಟಿ.ಸಿ ಬಸ್ಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಗೆ ಕಾನೂನು ಬಾಹಿರವಾಗಿ ಒಂದು ರೂಪಾಯಿಗೆ 90/- ರೂಪಾಯಿ ಎಂದು ಕೂಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ನಸಿಬಿನ ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾನೆಂದು ಜಿ.ಎಂ.ಪಾಟೀಲ್ ಪಿ.ಎಸ. [ಕಾ&ಸೂ] ಬಸವಕಲ್ಯಾಣ ನಗರ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಬಸವಕಲ್ಯಾಣ ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲು ಬಾತ್ಮಿಯಂತೆ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಶೇಖ್ ರಿಯಾಜೋದ್ದಿನ ತಂದೆ ಶೇಖ್ ಅಬ್ದುಲ ಕರೀಮ ವಯ: 40 ವರ್ಷ, ಜಾತಿ: ಮುಸ್ಲಿಂ, ಸಾ: ಅಮೀರಪೇಟ ಬಸವಕಲ್ಯಾಣ ಇತನು ನಿಂತುಕೊಂಡು ಸಾರ್ವಜನಿಕರಿಗೆ ಒಂದು ರೂಪಾಯಿಗೆ 90/- ರೂಪಾಯಿ ಎಂದು ಕೂಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಳ್ಳುವುದನ್ನು ನೋಡಿ ಎಲ್ಲರು ಒಮ್ಮೆಲೆ ದಾಳಿ ಮಾಡಿ ಆರೋಪಿತನಿಗೆ ಹಿಡಿದುಕೊಂಡು ಆತನ ಅಂಗ ಶೋಧನೆ ಮಾಡಲು ತನ ಹತ್ತಿರ ನಗದು ಹಣ 4,200/-ರೂ. ಮತ್ತು 02 ಮಟಕಾ ಚೀಟಿ ಹಾಗು ಒಂದು ಬಾಲ್ ಪೆನ್ ಸಿಕ್ಕಿದ್ದು ನೇದ್ದವುಗಳನ್ನು ತಾಬೆಗೆ ತೆಗೆದುಕೊಂಡು ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 84/2020, ಕಲಂ. 15(), 32(3) ಕೆ.ಇ ಕಾಯ್ದೆ :-

ದಿನಾಂಕ 16-10-2020 ರಂದು ಮೊರಖಂಡಿ ಗ್ರಾಮದ ರಾಜಮುದ್ರಾ ಧಾಬಾದ ಹತ್ತಿರ ಇರುವ ಸಾರ್ವಜನಿಕ ಸ್ಥಳದಲ್ಲಿ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಗೆ ಅನಧಿಕೃತವಾಗಿ ಸರಾಯಿವುಳ್ಳ ಬಾಟಲಗಳನ್ನು ಮಾರಾಟ ಮಾಡುವ ಕುರಿತು ತನ್ನ ಹತ್ತಿರ ಸರಾಯಿವುಳ್ಳ ಬಾಟಲಗಳನ್ನು ಇಟ್ಟುಕೊಂಡು ಕುಳಿತ್ತಿದ್ದಾನೆ ಮತ್ತು ಅದೇ ಸ್ಥಳದಲ್ಲಿ ಸಾರ್ವಜನಿಕರಿಗೆ ಸರಾಯಿ ಕುಡಿಯಲು ಅನುವು ಮಾಡಿಕೊಡುತ್ತಿದ್ದಾನೆಂದು ವಸೀಮ ಪಟೇಲ್ ಪಿ.ಎಸ. (ಕಾ.ಸು) ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಮೊರಖಂಡಿ ಗ್ರಾಮಕ್ಕೆ ಹೋಗಿ ನೋಡಲು ಅಲ್ಲಿ ಆರೋಪಿ ಅವಿನಾಶ ತಂದೆ ವಾಲ್ಮಿಕಿ ಮೋರಖಂಡಿ ವಯ: 32 ವರ್ಷ, ಜಾತಿ: ಕೋಳಿ, ಸಾ: ಮೋರಖಂಡಿ ಗ್ರಾಮ ಇತನು ಮೊರಖಂಡಿ ಗ್ರಾಮದ ರಾಜಮುದ್ರಾ ಧಾಬಾದ ಹತ್ತಿರ ಇರುವ ಸಾರ್ವಜನಿಕ ಸ್ಥಳದಲ್ಲಿ ಖುಲ್ಲಾ ಜಾಗೆಯಲ್ಲಿ ಒಂದು ಚೀಲದಲ್ಲಿ ಸರಾಯಿ ಇಟ್ಟಿಕೊಂಡು ಅನಧಿಕೃತವಾಗಿ ಸರಾಯಿವುಳ್ಳ ಬಾಟಲಗಳನ್ನು ಮಾರಾಟ ಮಾಡುವ ಕುರಿತು ಬಾಟಲಿಗಳನ್ನು ಇಟ್ಟುಕೊಂಡು ಕುಳಿತಿದ್ದು ಮತ್ತು ಅದೇ ಸ್ಥಳದಲ್ಲಿ ಸಾರ್ವಜನಿಕರಿಗೆ ಸರಾಯಿ ಕುಡಿಯಲು ಅನುವು ಮಾಡಿಕೋಡುತ್ತಿರುವುದನ್ನು ನೋಡಿ ಖಚಿತ ಪಡಿಸಿಕೊಂಡು ಸದರಿ ಆರೋಪಿತನ ಮೇಲೆ ಸಿಬ್ಬಂದಿಯ ಸಹಾಯದಿಂದ ಪಂಚರ ಸಮಕ್ಷಮ ದಾಳಿ ಮಾಡಿದಾಗ ಸರಾಯಿ ಖರೀದಿ ಮಾಡುತ್ತಿದ್ದ ಜನರು ಓಡಿ ಹೋಗಿರುತ್ತಾರೆ, ನಂತರ ಸದರಿ ಆರೋಪಿಗೆ ಹಿಡಿದು ಪಂಚರ ಸಮಕ್ಷಮ ಚೀಲದಲ್ಲಿ ಎನಿದೆ ಅಂತಾ ವಿಚಾರಿಸಿದಾಗ ಆತನು ತಿಳಿಸಿದ್ದೆನೆಂದರೆ ಇದರಲ್ಲಿ ಸರಾಯಿ ಬಾಟಲಗಳು ಇರುತ್ತವೆ ಅಂತಾ ತಿಳಿಸಿದನು, ಪುನಃ ಆತನಿಗೆ ನಿನ್ನ ಹತ್ತಿರ ಸರಾಯಿ ಮಾರಾಟ ಮಾಡಲು ಸರಕಾರದಿಂದ ಯಾವುದೇ ರೀತಿಯ ಪರವಾನಗಿ ಇದೆಯಾ? ಅಂತಾ ವಿಚಾರಿಸಿದಾಗ ತನ್ನ ಹತ್ತಿರ ಯಾವುದೇ ಪರವಾನಗಿ ಇರುವುದಿಲ್ಲಾ ತಾನು ಅನಧೀಕೃತವಾಗಿ ಸರಾಯಿ ಮಾರಾಟ ಮಾಡುತ್ತಿದ್ದ ಬಗ್ಗೆ ಒಪ್ಪಿಕೊಂಡಿದ್ದರಿಂದ ಪಂಚರ ಸಮಕ್ಷಮ ಪರಿಶೀಲಿಸಿ ನೋಡಲು ಅದರಲ್ಲಿ 1) 3 ಟುಬರ್ಗ ಸ್ಟ್ರಾಂಗ್ ಬಿಯರ್ 650 ಎಂ.ಎಲ್ ಅ.ಕಿ 450/- ರೂ., 2) 5 ಆಪಿಸರ್ ಚಾಯಿಸ್ 180 ಎಂ.ಎಲ್ ವುಳ್ಳ ಪ್ಯಾಕೇಟಗಳು ಅ.ಕಿ 530/- ರೂಪಾಯಿ ಹೀಗೆ ಒಟ್ಟು 980/- ರೂಪಾಯಿ ಬೆಲೆವುಳ್ಳದ್ದು ಇದ್ದು, ನಂತರ ಸದರಿ ಸರಾಯಿಯನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.