Police Bhavan Kalaburagi

Police Bhavan Kalaburagi

Thursday, July 9, 2020

BIDAR DISTRICT DAILY CRIME UPDATE 09-07-2020


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 09-07-2020

ನೂತನ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 78/2020 ಕಲಂ 471, 420 ಐಪಿಸಿ :-

ದಿನಾಂಕ 08/07/2020 ರಂದು 1330 ಗಂಟೆಗೆ ಮಾನ್ಯ ಪೊಲೀಸ ಅಧೀಕ್ಷಕರು ಬೀದರ ರವರು ನೀಡಿದ ಜ್ಞಾಪನ ಪತ್ರ ಸಂ.ಅಪರಾಧ-1/ಇತರೆ/ಬೀ/2020 ದಿನಾಂಕ 10/06/2020 ನೇದ್ದರಲ್ಲಿ ಸದಸ್ಯ ಕಾರ್ಯದರ್ಶಿಗಳು ಹಾಗೂ ಮುಖ್ಯ ಆಡಳಿತಾಧಿಕಾರಿಗಳು , ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಆನಂದರಾವ ವೃತ್ತ ಬೆಂಗಳೂರು, ರವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಶುಶ್ರುಕರ ನೇಮಕಾತಿ ಕುರಿತು ಭ್ಯರ್ಥಿಯಾದ ಮಂಜುನಾಥ ತಂದೆ ರೆವಣಪ್ಪ ಪ್ಲಾಟ ನಂ. 42, ಸಾಯಿ ನಗರ ಕಾಲೋನಿ ನೌಬಾದ ಈತನು ಅಂಗವಿಕಲತೆಯ ಬಗ್ಗೆ ಸುಳ್ಳು ವೈದ್ಯಕೀಯ ದಾಖಲಾತಿ ಸಲ್ಲಿಸಿ ಅಂಗವಿಕಲ ಮೀಸಲಾತಿ ಅಡಿಯಲ್ಲಿ ಶುಶ್ರುಕರ ಹುದ್ದೆಗೆ ಆಯ್ಕೆಯಾಗಿದ್ದು ಇರುತ್ತದೆ. ಸದರಿಯವನ ಮೇಲೆ ಕಾನೂನು ಕ್ರಮ ಕೈಕೊಳ್ಳುವಂತೆ ಸದಸ್ಯ ಕಾರ್ಯದರ್ಶಿಗಳು ಹಾಗೂ ಮುಖ್ಯ ಆಡಳಿತಾಧಿಕಾರಿಗಳು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಬೇಂಗಳೂರು ರವರು ಕೋರಿದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ. 

ಜನವಾಡ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 40/2020 ಕಲಂ 454, 457, 380 ಐಪಿಸಿ :-

ದಿನಾಂಕ 08/07/2020 ರಂದು 1500 ಗಂಟೆಗೆ ಶ್ರೀಮತಿ  ಮಂಜುರಾಣಿ ಗಂಡ ಪ್ರಫೂಲ ಕ್ರೀಷ್ಣಫರ್ ಮುಖ್ಯೋಪದ್ಯಾಯರು ಸರಕಾರಿ ಹಿರಿಯ ಪ್ರಾಥಮೀಕ ಶಾಲೆ ಚಿಮಕೋಡ ತಾ|| ಜಿ|| ಬೀದರ ರವರು ಖುದ್ದಾಗಿ ಪೊಲೀಸ್ ಠಾಣೆಗೆ ಲಿಖಿತ ದೂರು ನೀಡಿದರ ಸಾರಾಂಶವೆನೆಂದರೆ ದಿನಾಂಕ 27/06/2020 ರಂದು ಶಾಲೆ ಮುಗಿಸಿಕೊಂಡು ದಿನಾಂಕ 29/6/2020 ರಂದು ಸೊಮವಾರ ಬೆಳಿಗ್ಗೆ 9: 45 ಗಂಟೆಯ ಸುಮಾರಿಗೆ   ಶಾಲೆಯ ಸಹ ಶೀಕ್ಷಕರಾದ ಶ್ರೀ ರಾಮಲು ಹಾಗು ಫಿರ್ಯಾದಿಯು ಶಾಲೆಗೆ ಹೊಗಿದ್ದಾಗ ಶಾಲೆಯ ಕಂಪ್ಯುಟರ ಕೋಣೆಯ ಬಾಗಿಲಿಗೆ ಹಾಕಿದ್ದ ಬೀಗ ಒಡೆದು   ಕೋಣೆಯಲ್ಲಿದ್ದ ಸಿ.ಎನ್.ಟಿ.206ಬಿಓಎನಎಮ್ ಮತ್ತು ಸಿ.ಎನ್.ಟಿ.205ಬಿಒಆರ್.ಸಿ. ಸಂಖ್ಯೆಯ 18’ 5” ಮಾನಿಟರ್ ಗಳು ಒಂದು ಬ್ಯಾಟರಿ ಮತ್ತು ಒಂದು ಪ್ಲಾಸ್ಟಿಕ್ ಚೆರ್ ಕಳುವಾಗಿರುತ್ತವೆ.   ಸದರಿ ಕಂಪ್ಯೂಟರಗಳು ಸಿದ್ದಾರ್ಥ ಇನಫೋಟೆಕ್ ಪೈ.ಲಿ. ಬೆಂಗಳೂರು ರವರಿಂದ ದಿನಾಂಕ 17/04/2012 ರಂದು  ನಮ್ಮ ಶಾಲೆಗೆ ಸರಬರಾಜು ಆಗಿರುತ್ತವೆ. ಸರಬರಾಜು ಆದ ಕಂಪ್ಯೂಟರ ಮಾನಿಟರ್  ಸಿಪಿಯು  ಬ್ಯಾಟರಿ ಸೇರಿ ಅಂದಿನ ಬೇಲೆ  26,444.75/- ರೂ ಗಳು ಆಗುತ್ತವೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.