ನಿಂದನೆ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿದ ಪ್ರಕರಣ :
ಫರತಾಬಾದ ಠಾಣೆ : ಶ್ರೀ ಅರ್ಜುನ ತಂದೆ ತಿಮ್ಮಯ್ಯ ಕೆರಮಗಿ ಸಾಃ ಸಿರನೂರ ರವರ ಊರಿನ ಅಂಬಯ್ಯ ತಂದೆ ನಾಗಯ್ಯ ಗುತ್ತೆದಾರ ಈತನು ದಿನಾಂಕ 29/05/2018 ರಂದು ರಾತ್ರಿ 9.30 ಗಂಟೆಯ ಸುಮಾರಿಗೆ ನನ್ನ ತಂಗಿಯಾದ ಇವಳಿಗೆ ಮದುವೆಯಾಗುವುದಾಗಿ ನಂಬಿಸಿ ತನ್ನ ಮನೆಗೆ ಕರೆದುಕೊಂಡು ಹೊಗಿ, ಮನೆಯಲ್ಲಿ ಜಬರದಸ್ತಿಯಿಂದ ಜಬರಿ ಸಂಬೋಗ ಮಾಡಿದ್ದು ಈ ಬಗ್ಗೆ ಫರಹತಾಬಾದ ಪೊಲೀಸ ಠಾಣೆ ಪ್ರಕರಣ ದಾಖಲಾಗಿದ್ದಾಗಿದ್ದರಿಂದ ಅಂಬಯ್ಯ ಇತನು ಜೇಲಿನಲ್ಲಿ ಇರುತ್ತಾನೆ. ಅಂಬಯ್ಯ ಇತನ ತಂದೆಯಾದ ನಾಗಯ್ಯ ಕಲಾಲ, ತಾಯಿ ನರಸಮ್ಮ, ಅಣ್ಣಂದಿರರಾದ ಬಸಯ್ಯ, ಮಲ್ಲಯ್ಯ, ದಸ್ತಯ್ಯ, ಮತ್ತು ಅತ್ತಿಗೆಯರಾದ ಪದ್ಮಾವತಿ ಗಂಡ ಮಹಾದೇವಯ್ಯ, ಮಂಜುಳಾ ಗಂಡ ಬಸಯ್ಯ ಹಾಗು ಅಕ್ಕಳಾದ ನೀಲಮ್ಮ ಗಂಡ ಶಿವಲಿಂಗಪ್ಪ ಇವರುಗಳು ನನ್ನ ತಂಗಿಗೆ ಅಂಬಯ್ಯ ಇತನ ಮೇಲೆ ಕೇಸು ಮಾಡಿಸಿ ಜೇಲಿಗೆ ಕಳುಹಿಸಿದ್ದಿ ರಂಡಿ ಅಂತಾ ಅವರ ಮನೆಯ ಮುಂದೆ ಹೋದಾಗ ಬಂದಾಗ ಅನ್ನುತ್ತಿದ್ದು ಈ ವಿಷಯವನ್ನು ನನ್ನ ತಂಗಿ ನನ್ನ ಮತ್ತು ನನ್ನ ತಂದೆ ತಾಯಿಯ ಮುಂದೆ ಹೇಳುತ್ತಿದ್ದು, ನಾವು ಆಕೆಗೆ ಸಮಧಾನ ಮಾಡುತ್ತಿದ್ದೇವು. ಹೀಗಿದ್ದು ನಿನ್ನೆ ದಿನಾಂಕ 23/6/2018 ರಂದು ಸಾಯಂಕಾಲ 6-30 ಗಂಟೆಯ ಸುಮಾರಿಗೆ ನನ್ನ ತಂಗಿಯು ಅಂಬಯ್ಯ ಇತನ ಮನೆಯ ಮುಂದಿನಿಂದ ಬಹಿರದೆಸೆಗೆಂದು ಹೋಗುತ್ತಿದ್ದಾಗ ಮೇಲಿನವರೇಲ್ಲರೂ ಕೂಡಿಕೊಂಡು ನನ್ನ ತಂಗಿಗೆ ವಡ್ಡ ಸುಳೇ ಮಗಳೆ ನೀನು ಅಂಬಯ್ಯ ಇತನಿಗೆ ಜೇಲಿಗೆ ಕಳುಹಿಸಿ ಊರಲ್ಲಿ ಹೀಗೆ ತಿರುಗಾಡುತ್ತಿದ್ದಿ ಭೋಸಡಿ ನೀನು ಭೂಮಿ ಮೇಲೆ ಬದುಕಬಾರದು ಸಾಯಿಬೇಕು ನಿನ್ನಿಂದ ಯಾರಿಗೂ ಉಪಯೋಗವಿಲ್ಲ ಅಂತಾ ಅಂದಾಗ ನನ್ನ ತಂಗಿ ಮನೆಗೆ ಬಂದು ಈ ವಿಷಯವನ್ನು ನಮಗೆ ತಿಳಿಸಿದಾಗ ನಾವು ಅವಳಿಗೆ ಸಮಧಾನ ಮಾಡಿರುತ್ತೇವೆ. ರಾತ್ರಿ ನಾವೇಲ್ಲರೂ ಊಟ ಮಾಡಿ ನಂತರ ನಾವು ನಮ್ಮ ಮನೆಯಲ್ಲಿ ಮಲಗಿಕೊಂಡಿದ್ದು ನನ್ನ ತಂಗಿಯಾದ ಕಾವೇರಿ ಇವಳು ನಮ್ಮ ಅಜ್ಜನಾದ ಕಾಳಪ್ಪ ನಿಂಗನಕಲ್ಲ ಇವರ ಮನೆಯ ಒಂದು ಕೊಣೆಯಲ್ಲಿ ಮಲಗಿಕೊಂಡಳು. ಇಂದು ದಿನಾಂಕ 24/6/2018 ರಂದು ಬೆಳಿಗ್ಗೆ 6-00 ಗಂಟೆಯ ಸುಮಾರಿಗೆ ನನ್ನ ಸೋದರ ಮಾವನಾದ ಹಣಮಂತ ತಂದೆ ಕಾಳಪ್ಪ ನಿಂಗನಕಲ್ಲ ಇವರು ಓಡುತ್ತಾ ಬಂದು ತಿಳಿಸಿದ್ದೇನೆಂದರೆ ತಂಗಿಯಾದ ಕಾವೇರಿ ಇವಳು ಮನೆಯಲ್ಲಿ ನೇಣು ಹಾಕಿಕೊಂಡಿರುತ್ತಾಳೆ. ಅಂತಾ ತಿಳಿಸಿದ್ದರಿಂದ ನಾವು ಗಾಬರಿಯಾಗಿ ಹೋಗಿ ನೋಡಲಾಗಿ ಕವಿತಾ @ ಕಾವೇರಿ ಇವಳು ಮನೆಯ ಜಂತಿಗೆ ವೈಯರ ಹಗ್ಗದಿಂದ ನೇಣು ಹಾಕಿಕೊಂಡಿದ್ದು ಅವಳು ಜಿವಂತ ಇರಬಹುದು ಅಂತಾ ತಿಳಿದು ನಾವು ಹಗ್ಗ ಕತ್ತರಿಸಿ ಅವಳಿಗೆ ಕೆಳಗೆ ಮಲಗಿಸಿ ನೋಡಲಾಗಿ ಅವಳು ಮೃತ ಪಟ್ಟಿದ್ದಳು. ನನ್ನ ತಂಗಿಯಾದ ಕವಿತಾ @ ಕಾವೇರಿ ಇವಳಿಗೆ ಅಂಬಯ್ಯ ಇತನ ತಂದೆಯಾದ ನಾಗಯ್ಯ ಕಲಾಲ, ತಾಯಿ ನರಸಮ್ಮ, ಅಣ್ಣಂದಿರರಾದ ಬಸಯ್ಯ, ಮಲ್ಲಯ್ಯ, ದಸ್ತಯ್ಯ, ಮತ್ತು ಅತ್ತಿಗೆಯರಾದ ಪದ್ಮಾವತಿ ಗಂಡ ಮಹಾದೇವಯ್ಯ, ಮಂಜುಳಾ ಗಂಡ ಬಸಯ್ಯ ಹಾಗು ಅಕ್ಕಳಾದ ನೀಲಮ್ಮ ಗಂಡ ಶಿವಲಿಂಗಪ್ಪ ಇವರುಗಳ ಕಿರುಕುಳದಿಂದ ಮನನೊಂದು ಇಂದು ದಿನಾಂಕ 24/6/2018 ರಂದು ಬೆಳಗಿನ ಜಾವ 5-30 ಗಂಟೆಯಿಂದ 6-00 ಗಂಟೆಯ ಅವಧಿಯಲ್ಲಿ ಮನೆಯಲ್ಲಿ ಜಂತಿಗೆ ವೈಯರ ಹಗ್ಗದಿಂದ ನೇಣು ಹಾಕಿಕೊಂಡು ಮೃತ ಪಟ್ಟಿರುತ್ತಾಳೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ ರುಕ್ಸಾನ ಗಂಡ ಮಹಿಮುದ್ದ ಮುಜಾವರ ಸಾ|| ಮಾಶಾಳ ಇವರ ಗಂಡನಾದ ಮಹಿಮುದ್ದ ರವರು ನನಗೆ ಹಾಗು ನಮ್ಮ ಮಕ್ಕಳಿಗೆ ಇಲ್ಲೆ ಬಿಟ್ಟು ದುಡಿಯಲಿಕ್ಕೆ ದುಬೈಗೆ ಹೋಗಿರುತ್ತಾರೆ ನಮ್ಮ ಕುಲದವರಾದ ಹಾಜಿಮಲಂಗ@ ರಾಜಾ ತಂದೆ ಮದರಸಾಬ ಮುಜಾವರ ಈತನು ಆಗಾಗ ವಿನಾ ಕಾರಣ ನನಗೆ ಯಾಸಿ ಬೈಯುವದು ಮಾಡುತ್ತಾ ಬಂದಿರುತ್ತಾನೆ ನಾನು ಸುಮ್ಮನೆ ಇದ್ದೇನು ದಿನಾಂಕ 22/06/2018 ರಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ಹಾಜಿ ಮಲಂಗ@ರಾಜಾ ಈತನು ನನಗೆ ಯಾಸಿಯಾಗಿ ಬೈಯುತ್ತಾ ನಮ್ಮ ಮನೆಯ ಮುಂದಿನಿಂದ ಹೋಗಿರುತ್ತಾನೆ. ನಾನು ರಾತ್ರಿ 8:00 ಗಂಟೆ ಸುಮಾರಿಗೆ ಹಾಜಿಮಲಂಗ@ರಾಜಾ ಅವರ ತಾಯಿಯಾದ 2)ಶ್ರೀಮತಿ ಗಂಡ ಮದರಸಾಬ 3) ಖ್ವಾಜಲ್ ತಂದೆ ಮದರಬಾಬ ಹಾಗು 4) ಮದರಸಾಬ ತಂದೆ ಮಲಂಗಸಾಬ ರವರೇಲ್ಲರು ತಮ್ಮ ಮನೆಯ ಮುಂದೆ ಕುಳಿತಿದ್ದಾಗ ನಾನು ಅವರ ಹತ್ತಿರ ಹೋಗಿ ಹಾಜಿಮಲಂಗ@ ರಾಜಾ ರವರ ತಂದೆ ತಾಯಿಗೆ ನಿಮ್ಮ ಮಗ ವಿನಾ ಕಾರಣ ನನಗೆ ಯಾಸಿ ಬೈಯುವದು ಮಾಡುತಿದ್ದಾನೆ ಅಂತ ಹೇಳುತಿದ್ದಾಗ ಹಾಜಿಮಲಂಗ@ರಾಜಾ, ಶ್ರೀಮತಿ, ಖ್ವಾಜಲ್, ಮದರಸಾಬ ಎಲ್ಲರೂ ಕೂಡಿ ನನ್ನ ಹತ್ತಿರ ಅವಾಚ್ಯ ಶಬ್ದಗಳಿಂದ ಬೈಯುತ್ತಾ ಬಂದು ನನ್ನ ಸೀರೆ ಹಿಡಿದು ಜಗ್ಗಾಡುತಿದ್ದಾಗ. ನಾನು ಜಿರಾಡುವ ಸಪ್ಪಳ ಕೇಳಿ ನಮ್ಮ ಓಣಿಯ ರಜೀಯಾ ಬೀ ಗಂಡ ಸೈಫಲಸಾಬ ಮುಜಾವರ, ಝರೀನಾ ಗಂಡ ಹೈಮದ್ ಮುಜಾವರ ರವರು ಬಂದು ನನಗೆ ಬಿಡಿಸುತಿದ್ದಾಗ ಹಾಜಿ ಮಲಂಗ @ ರಾಜಾ ಈತನು ನನಗೆ ರಂಡಿ ನಿನಗೆ ಇವತ್ತ ಬಿಡಲ್ಲಾ ಅಂತ ಅಂದು ನನ್ನ ಕೊರಳಲ್ಲಿನ ತಾಳಿ ಜಗ್ಗಿ ತಾಳಿ ಹರಿದು ನನ್ನ ಬಲಗೈ ಅಂಗೈ ಮೇಲೆ ತನ್ನ ಬಾಯಿ ಹಲ್ಲಿನಿಂದ ಕಚ್ಚಿ ಕಂದುಗಟ್ಟಿದ ಗುಪ್ತ ಗಾಯ ಮಾಡಿರುತ್ತಾನೆ ಆಗ ಅಲ್ಲೆ ಇದ್ದ ರಜೀಯಾ ಬೀ, ಝರಿನಾ ಬಿಡಿಸುತಿದ್ದಾಗ ಮದರಸಾಬ, ಖ್ವಾಜಲ್, ಶ್ರೀಮತಿ ಇವರು ತಮ್ಮ ಕೈಯಿಂದ ನನಗೆ ಹೊಡೆದಿರುತ್ತಾರೆ . ಸದರಿಯವರು ನನಗೆ ಹೊಡೆಯುವದನ್ನು ಬಿಟ್ಟು ಹೋಗುವಾಗ ರಂಡಿ ನೀ ಇನ್ನೊಮ್ಮೆ ನಮ್ಮ ತಂಟೆಗೆ ಬಂದಿ ನೀನ ಜೀವ ಸಹಿತ ಬಿಡುವುದಿಲ್ಲ ಅಂತ ಜೀವ ಬೆದರಿಕೆ ಹಾಕಿ ಹೊಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಆಳಂದ ಠಾಣೆ : ದಿನಾಂಕ 23-06-2018 ರಂದು ನನ್ನ ತಮ್ಮ ಹಮೀದ ಹಾಗು ಇಸ್ಮಾಯಿಲ ಗದಲೆಗಾಂವ ಇಬ್ಬರು ಕೂಡಿಕೊಂಡು ಇಸ್ಮಾಯಿಲ ನ ಬೈಕ ನಂ. ಕೆಎ 32-ಇಕೆ-8791 ಮೇಲೆ ಕುಳಿತು ಸಾವಳೇಶ್ವರಕ್ಕೆ ಹೊಗಿ ರಾತ್ರಿ ಸಮಯ 10 ಗಂಟೆ ಸುಮಾರಿಗೆ ಮರಳಿ ಬರುವಾಗ ಇಸ್ಮಾಯಿಲ ನು ಬೈಕ ಚಲಾಯಿಸುತ್ತಿದ್ದು ನನ್ನ ತಮ್ಮ ಹಿಂದೆ ಕುಳಿತಿದ್ದು, ಇಸ್ಮಾಯಿಲನು ಬೈಕನ್ನು ಅತಿವೇಗ ಮತ್ತು ಅಜಾಗರುಕತೆಯಿಂದ ಚಲಾಯಿಸಿ ರಸ್ತೆ ಮದ್ಯೆ ನಿಲ್ಲಿಸಿದ ಟ್ರ್ಯಾಕ್ಟರ ಟ್ರ್ಯಾಲಿಗೆ ಹಿಂದುಗಡೆ ಡಿಕ್ಕಿ ಪಡಿಸಿದ್ದರಿಂದ ನನ್ನ ತಮ್ಮ ಹಮೀದನ ತಲೆಗೆ , ಮುಖಕ್ಕೆ ಭಾರಿ ಗಾಯವಾಗಿ ಸ್ಥಳದಲ್ಲಿ ಬಿದ್ದಿದರು. ಬೈಕ ಚಲಾಯಿಸುತ್ತಿದ್ದ ಇಸ್ಮಾಯಿಲನಿಗೂ ತಲೆಗೆ ಮೈ-ಕೈಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿ ಬಿದ್ದಿರುತ್ತಾರೆ. ಎಂದು ಈ ವಿಷಯ ಗೊತ್ತಾಗಿ ನಾನು ಹಾಗು ತಮ್ಮ ಗ್ರಾಮದವರಾದ ಶಿವಕಿರಣ ಶ್ರೀಮಂತರಾವ ಪಾಟೀಲ, ಸಪ್ಪನಿಲ್ ಖಾಳೆ, ಮುಬಾರಕ ಮುಲಗೆ ಸ್ಥಳಕ್ಕೆ ಹೊಗಿ ನೊಡಲು ನನ್ನ ತಮ್ಮ ಹಮೀದ ಮತ್ತು ಬೈಕ ಚಾಲಕ ಇಸ್ಮಾಯಿಲ್ ಇಬ್ಬರು ಭಾರಿಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಆಗ ಸಮಯ ರಾತ್ರಿ 10 ಗಂಟೆ ಆಗಿತ್ತು. ಈ ಅಪಘಾತಕ್ಕೆ ಮೂಲ ಕಾರಣವೆನೆಂದರೆ ರಸ್ತೆ ಮದ್ಯ ನಿಲ್ಲಿಸಿದ ಟ್ರ್ಯಾಕ್ಟರ ಟ್ರ್ಯಾಲಿ ನಂ. ಕೆಎ 32-ಟಿ-8550 ರ ಚಾಲಕನು ರಸ್ತೆ ಬದಿಯಲ್ಲಿ ನಿಲ್ಲಿಸದೇ ರಸ್ತೆಯ ಮದ್ಯ ನಿಲ್ಲಸಿ ಅದಕ್ಕೆ ಯಾವುದೇ ಮುನ್ನೆಚ್ಚರಿಕೆ ಕೈಗೊಳ್ಳದೇ ಅಲಕ್ಷತನ ತೊರಿಸಿದ್ದರಿಂದ ಮತ್ತು ಬೈಕ ಚಾಲಕ ಇಸ್ಮಾಯಿಲನು ಅತಿವೇಗ ಮತ್ತು ಅಜಾಗರುಕತೆಯಿಂದ ಚಲಾಯಿಸಿ ಡಿಕ್ಕಿಪಡಿಸಿದ್ದರಿಂದ ನನ್ನ ತಮ್ಮ ಹಮೀದ ಮೃತಪಟ್ಟಿರುತ್ತಾನೆ. ಆದ್ದರಿಂದ ಅಲಕ್ಷತನದಿಂದ ಟ್ರ್ಯಾಕ್ಟರ ಟ್ರ್ಯಾಲಿ ರಸ್ತೆ ಮದ್ಯದಲ್ಲಿ ನಿಲ್ಲಿಸಿದ ಟ್ರ್ಯಾಕ್ಟರ ಟ್ರ್ಯಾಲಿ ನಂ. ಕೆಎ 32-ಟಿ-8550 ರ ಚಾಲಕನ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದು ಶ್ರೀ. ಅಲ್ತಾಫ ತಂದೆ ಇಸೂಫ್ ಜಾನಿ ಮುಲ್ಲಾ ಸಾ- ಪಡಸಾವಳಿ ಗ್ರಾಮ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫರತಾಬಾದ ಠಾಣೆ : ದಿನಾಂಕ 23/06/18 ರಂದು ಮದ್ಯಾಹ್ನ ಎನ್ಹೆಚ್ 218 ರಸ್ತೆ ಸರಡಗಿ (ಬಿ) ಖಣಿ ಹತ್ತಿರ ತನ್ನ ಕಾರ ಟಿಪಿ ನಂ ಕೆಎ-35ಟಿಪಿ-002920/2018-19 ನೇದ್ದ ರಲ್ಲಿ ಶ್ರೀ ಗಿರೀಶ ತಂದೆ ವೆಂಕೋಬಾ ಯಾದವ ಸಾ: ವೆಂಕಟ ನಾರಾಯಣ ಪೇಟ ಮುದಗಲ ರವರ ತಂದೆ ಮತ್ತು ತಂಗಿಯೊಂದಿಗೆ ಮರಳಿ ಊರಿಗೆ ಹೋಗುವಾಗ ಎದುರಿನಿಂದ ಬಂದ ಲಾರಿ ನಂಬ ಜಿಜೆ -03 ಎಟಿ-3851 ನೇದ್ದರ ಚಾಲಕ ತನ್ನ ವಶದಲ್ಲಿದ್ದ ಲಾರಿ ನಂ ಜಿಜೆ-03 ಎಟಿ 3851 ನೇದ್ದನ್ನು ಅತೀವೇಗವಾಗಿ ಅಲಕ್ಷ ತನದಿಂದ ಚಲಾಯಿಸಿಕೊಂಡು ಬಂದಿ ಡಿಕ್ಕಿ ಪಡೆಯಿಸಿ ಗಾಯ ಪಡಿಸಿದ್ದು ಇರು ತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.