Police Bhavan Kalaburagi

Police Bhavan Kalaburagi

Tuesday, July 28, 2020

BIDAR DISTRICT DAILY CRIME UPDATE 28-07-2020


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 28-07-2020

ಬೀದರ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 51/2020, ಕಲಂ. 279, 337, 304 () .ಪಿ.ಸಿ ಜೊತೆ 187 ಎಂವಿ ಕಾಯ್ದೆ :-  
ದಿನಾಂಕ 27-07-2020 ರಂದು ಫಿರ್ಯಾದಿ ಸಾಗರ ತಂದೆ ಸ್ವಾಮಿದಾಸ, ವಯ: 22 ವರ್ಷ, ಜಾತಿ: ಕ್ರಿಶ್ಚಿಯನ್, ಸಾ: ಕಪಲಾಪೂರ (), ತಾ: ಜಿ: ಬೀದರ ರವರು ಅಬ್ರಾಹಂ ತಂದೆ ಲಾಲಪ್ಪಾ ಮಾಮಡಗಿ, ವಯ: 24 ವರ್ಷ, ಜಾತಿ: ಕ್ರಿಶ್ಚಿಯನ್, ಸಾ: ಕಪಲಾಪೂರ () ರವರ ಜೊತೆಯಲ್ಲಿ ಮೋಟಾರ ಸೈಕಲ ಕೆಎ-38/ಡಬ್ಲು-7351 ನೇದರ ಮೇಲೆ ಕಪಲಾಪೂರ() ದಿಂದ ಬೀದರಗೆ ಬರುವಾಗ ಮಾರುತಿ ಶೋ ರೂಂ ಜೇಮಿನಿ ಕ್ರಾಸ ಪ್ರತಾಪ ನಗರ ಬೀದರ ಹತ್ತಿರ ಬಂದಾಗ ಹಿಂದಿನಿಂದ ಅಂದರೆ ನೌಬಾದ ಕಡೆಯಿಂದ ಲಾರಿ ನಂ. ಕೆಎ-28/6062 ನೇದರ ಚಾಲಕನಾದ ಆರೋಪಿಯು ತನ್ನ ಲಾರಿಯನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಹಿಂದಿನಿಂದ ಫಿರ್ಯಾದಿಯವರು ಬರುತ್ತಿರುವ ಮೋಟಾರ್ ಸೈಕಲಗೆ ಡಿಕ್ಕಿ ಮಾಡಿ ಲಾರಿ ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ, ಸದರಿ ಡಿಕ್ಕಿಯ ಪರಿಣಾಮ ಫಿರ್ಯಾದಿಯ ಬಲಹಣೆಯ ಮೇಲೆ, ಬಲಗಾಲ ಪಾದದ ಮೇಲೆ ತರಚಿದ ರಕ್ತಗಾಯ, ಬಲಮೊಳಕಾಲ ಮೇಲೆ ರಕ್ತಗಾಯವಾಗಿರುತ್ತದೆ, ಅಬ್ರಾಹಂ ಇತನಿಗೆ ಎದೆಯ ಮೇಲೆ ಭಾರಿ ಗುಪ್ತಗಾಯ, ಬಲಗಾಲ ಹಿಮ್ಮಡಿಯಲ್ಲಿ ಭಾರಿ ರಕ್ತಗಾಯ, ಬಲಮೊಳಕಾಲ ಮೇಲೆ ತರಚಿದ ಗಾಯ, ಮುಖದ ಮೇಲೆ ಗುಪ್ತಗಾಯವಾಗಿ ಮೂಗಿನಿಂದ ರಕ್ತ ಬಂದಿರುತ್ತದೆ, ಹಿಂದೆ ಬರುತ್ತಿದ್ದ ರಾಜಕುಮಾರ ತಂದೆ ಕಲ್ಲಪ್ಪಾ ಮತ್ತು ಸಾದ್ರಕ ತಂದೆ ಯೇಸುದಾಸ ರವರು ಕೂಡಿ ಗಾಯಗೊಂಡ ಇಬ್ಬರಿಗೂ ಖಾಸಗಿ ವಾಹನದಲ್ಲಿ ಹಾಕಿಕೊಂಡು ಬೀದರ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆ ಕುರಿತು ದಾಖಲು ಮಾಡಿರುತ್ತಾರೆ, ಅಬ್ರಾಹಂ ಇತನಿಗೆ ವೈಧ್ಯಾಧಿಕಾರಿಯವರು ಪರಿಕ್ಷೀಸಿ ಮೃತಪಟ್ಟಿರುತ್ತಾನೆ ಅಂತಾ ತಿಳಿಸಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಖಟಕಚಿಂಚೋಳಿ ಪೊಲೀಸ್ ಠಾಣೆ ಅಪರಾಧ ಸಂ. 52/2020, ಕಲಂ. 279, 337, 338, 304(ಎ) ಐಪಿಸಿ :-
ದಿನಾಂಕ 27-07-2020 ರಂದು ಫಿರ್ಯಾದಿ ಮೂಲಾ ತಂಧೆ ಯುನುಸಮೀಯಾ ಫಕೀರ ವಯ: 29 ವರ್ಷ, ಜಾತಿ: ಮುಸ್ಲಿಂ, ಸಾ: ದಾಡಗಿ ರವರ ತಮ್ಮ ಅಕ್ಬರ ಇತನು ಬಾಜೋಳಗಾ ಕ್ರಾಸ್ ಹತ್ತಿರ ಇರುವ ಧಾಬಾದಿಂದ ದಾಡಗಿ ಗ್ರಾಮದಲ್ಲಿರುವ ತಮ್ಮ ಮನೆಗೆ ಹೊಗುತ್ತೆನೆಂದು ಹೇಳಿ ಮೋಟಾರ ಸೈಕಲ್ ನಂ. ಕೆಎ-38/ವಿ-9119 ನೇದನ್ನು ಚಲಾಯಿಸಿಕೊಂಡು ಮನೆಗೆ ಹೊಗುವಾಗ ಭಾಲ್ಕಿಬಸವಕಲ್ಯಾಣ ರೋಡಿನ ಮೇಲೆ ದಾಡಗಿ ಕಡೆಯಿಂದ ಮೋಟಾರ ಸೈಕಲ್ ನಂ. ಎಪಿ-25/ಹೆಚ್-4470 ನೇದರ ಚಾಲಕನು ತನ್ನ ವಾಹನವನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಅಕ್ಬರ್ ಇತನು ಚಲಾಯಿಸಿಕೊಂಡು ಹೊಗುತ್ತಿದ್ದ ಮೋಟಾರ ಸೈಕಲಗೆ ಎದುರುಗಡೆಯಿಂದ ಒಮ್ಮೇಲೆ ಡಿಕ್ಕಿ ಮಾಡಿದ್ದರಿಂದ ಅಕ್ಬರ ತಲೆಯ ಹಿಂಬದಿಯಲ್ಲಿ ಭಾರಿ ರಕ್ತಗಾಯ ಮತ್ತು ಮುಖದ ಮೇಲೆ ಮುಗಿಗೆ, ಬಾಯಿಗೆ, ತುಟಿಗಳಿಗೆ ಭಾರಿ ರಕ್ತಗಾಯವಾಗಿ ಅವನ ಕಿವಿಯಿಂದ ರಕ್ತ ಬಂದಿದ್ದು ಮತ್ತು ಅವನ ಬಲಗಾಲ ಮೋಳಕಾಲ ಮಂಡಿಯ ಮೇಲೆ ಮತ್ತು ಮೋಳಕಾಲ ಮೇಲೆ ತರಚಿದ ರಕ್ತಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಮನ್ನಾಎಖೇಳ್ಳಿ ಪೊಲೀಸ್ ಠಾಣೆ ಅಪರಾಧ ಸಂ. 63/2020, ಕಲಂ. 379 ಐಪಿಸಿ :-
ದಿನಾಂಕ 26-07-2020 ರಂದು ಫಿರ್ಯಾದಿ ಬಸವರಾಜ ತಂದೆ  ನಾರಾಯಣರಾವ ರಾಮತಿರ್ಥ ಯ: 30 ವರ್ಷ, ಜಾತಿ: ಕಬ್ಬಲಿಗ, ಸಾ: ನಿರ್ಣಾ ಗ್ರಾಮ ರವರ ತಮ್ಮ ರಾಜಶೇಖರ ಹಾಗು ಅವನ ಗೆಳಯನಾದ ಸಾಯಿರೆಡ್ಡಿ ಇಬ್ಬರು ಊಟ ಮಾಡಲು 2100 ಫಿರ್ಯಾದಿಯ ಬಳಿ ಇದ್ದ ಮೋಟಾರ ಸೈಕಲ ನಂ. ಟಿ.ಎಸ-15/.ಪಿ-9470 ನೇದನ್ನು ತೆಗೆದುಕೊಂಡು ತಮ್ಮೂರ ಭವಾನಿ ಧಾಬಾಕ್ಕೆ ಊಟ ಮಾಡಲು ತೇಗೆದುಕೊಂಡು ಹೋಗಿದ್ದು, ನಂತರ 2130 ಗಂಟೆಗೆ ಮ್ಮೂರ ಸಾಯಿ ರೆಡ್ಡಿ ಈತನು ಫಿರ್ಯಾದಿಗೆ ಕರೆ ಮಾಡಿ ತಿಳಿಸಿದೇನೆಂದರೆ ನೀನು ಕೂಡಾ ಭವಾನಿ ಧಾಬಾಕ್ಕೆ ಊಟ ಮಾಡಲು ಬಾ ಅಂತ ಹೇಳಿದ ಮೇರೆಗೆ ಫಿರ್ಯಾದಿಯು ನಡೆದುಕೊಂಡು ಧಾಬಕ್ಕೆ ಹೋಗಿ 3 ಜನರು ಊಟ ಮಾಡಿ 2200 ಗಂಟೆಗೆ ಧಾಬಾದ ಹೋರಗೆ ಬಂದು ನೋಡಲು ಸದರಿ ಮೋಟಾರ ಸೈಕಲ್ ನಂ. ಟಿ.ಎಸ-15/.ಪಿ-9470 ಅ.ಕಿ 35,000/- ರೂ. ಬೆಲೆ ಬಾಳುವುದನ್ನು ಯಾರೋ ಅಪರಿಚಿತರು ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 27-07-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 115/2020, ಕಲಂ. 379 ಐಪಿಸಿ :-
ದಿನಾಂಕ 19-07-2020 ರಂದು 2100 ಗಂಟೆಗೆ ಫಿರ್ಯಾದಿ ಸಂದೀಪ ತಂದೆ ಚಂದ್ರಕಾಂತ ಹಂಗರ್ಗಿ ವಯ: 23 ವರ್ಷ, ಜಾತಿ: ಲಿಂಗಾಯತ, ಸಾ: ಮನೆ ನಂ. 1-75 ಭವಾನಿ ಮಂದಿರ ಹತ್ತಿರ ಕುಂಬಾರವಾಡಾ, ಬೀದರ ರವರು ತನ್ನ ದಿನನಿತ್ಯದ ಕೆಲಸ ಮುಗಿಸಿಕೊಂಡು ಮನೆಗೆ ಬಂದು ನ್ನ ಬಜಾಜ ಪಲ್ಸರ್ ಎನ್.ಎಸ್-160 ದ್ವಿ-ಚಕ್ರ ವಾಹನ ಸಂ. ಕೆಎ-38/ವಿ-8228, ಇಂಜಿನ್ ನಂ. ಜೆ.ಇ.ವಾಯ್.ಸಿ.ಜೆ.ಎಫ್.67555, ಚಾಸಿಸ್ ನಂ. ಎಮ.ಡಿ.2.ಎ.92.ಸಿ.ವಾಯ್.8.ಜೆ.ಸಿ.ಎಫ್.39888, ಮಾಡಲ್ 2019, ಬಣ್ಣ: ಕಪ್ಪು ಬಣ್ಣ, ಅ.ಕಿ 80,000/- ರೂ. ನೇದನ್ನು ಮನೆಯ ಮುಂದೆ ನಿಲ್ಲಿಸಿ ಮನೆಯಲ್ಲಿ ಹೋಗಿ ಊಟ ಮಾಡಿಕೊಂಡು ಪುನಃ 2300 ಗಂಟೆಗೆ ಮನೆಯ ಹೊರಗಡೆ ಬಂದು ನೋಡಲಾಗಿ ಸದರಿ ವಾಹನ ಇರಲಿಲ್ಲಾ, ಸದರಿ ವಾಹನದ ಬಗ್ಗೆ ಅಕ್ಕಪಕ್ಕದ ಜನರಿಗೆ ವಿಚಾರಿಸಲು ಯಾವುದೆ ಮಾಹಿತಿ ಸಿಕ್ಕಿರುವದಿಲ್ಲಾ, ನಂತರ ಎಲ್ಲಾ ಕಡೆ ಹುಡುಕಾಡಿದರು ಸದರಿ ದ್ವಿ-ಚಕ್ರ ವಾಹನ ಪತ್ತೆ ಆಗಿರುವುದಿಲ್ಲಾ, ಸದರಿ ವಾಹನವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೊಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬೇಮಳಖೇಡಾ ಪೊಲೀಸ್ ಠಾಣೆ ಅಪರಾಧ ಸಂ. 36/2020, ಕಲಂ.87 ಕೆ.ಪಿ ಕಾಯ್ದೆ :-
ದಿನಾಂಕ 27-07-2020 ರಂದು ಚಾಂಗಲೇರಾ ಶಿವಾರದ ಶ್ರೀ ವೀರಭದ್ರೇಶ್ವರ ಗುಡಿಯ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಕೆಲವು ಜನರು ದುಂಡಾಗಿ  ಕುಳಿತುಕೊಂಡು ಹಣ ಹಚ್ಚಿ ಪಣ ತೊಟ್ಟು ನಸಿಬಿನ ಇಸ್ಪಿಟ ಜೂಜಾಟ ಆಡುತ್ತಿದ್ದಾರೆಂದು ಗಂಗಮ್ಮ ಪಿಎಸ್ಐ ಬೇಮಳಖೇಡಾ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಚಾಂಗಲೇರಾ ಶಿವಾರದ ಶ್ರೀ ವೀರಭದ್ರಶ್ವರ ಗುಡಿಯ ಹತ್ತಿರ ಹೋಗಿ ಮರೆಯಲ್ಲಿ ನಿಂತು ನೋಡಲು ರೋಡಿನ ಬದಿಯಲ್ಲಿರುವ ಲೈಟಿನ ಕಂಬದ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಲೈಟಿನ ಬೆಳಕಿನಲ್ಲಿ ಆರೋಪಿತರಾದ 1) ರೇವಣಸಿದ್ದಪ್ಪಾ ತಂದೆ ಬಸವರಾಜ ಪೂಜಾರಿ ವಯ: 35 ವರ್ಷ, ಜಾತಿ: ಕುರುಬ, ಸಾ: ಕೊಂಡಂಪಳ್ಳಿ, ತಾ: ಚಿಂಚೊಳ್ಳಿ, ಜಿ: ಕಲಬುರಗಿ, 2) ಬಲವಂತ ತಂದೆ ಸಂಗಪ್ಪಾ ಪಾಟೀಲ ವಯ: 33 ವರ್ಷ, ಜಾತಿ: ಉಪ್ಪಾರ, ಸಾ: ಪೊಲಕಪಳ್ಳಿ, ತಾ: ಹುಮನಾಬಾದ, ಜಿ: ಬೀದರ, 3) ವಿಜಯಕುಮಾರ ತಂದೆ ಮಾಣಿಕಪ್ಪಾ ಮೇಲಕೇರಿ ವಯ: 34 ವರ್ಷ, ಜಾತಿ: ಎಸ್.ಸಿ ಮಾದಿಗ, ಸಾ: ಮನ್ನಾಏಖೇಳ್ಳಿ 4) ಗುಂಡಪ್ಪಾ ತಂದೆ ತುಕಾರಾಮ ಪಾಲಾಟಿ ವಯ: 28 ವರ್ಷ, ಜಾತಿ: ಗೊಲ್ಲಾ, ಸಾ: ಬಸಿರಾಪೂ ಹಾಗೂ 5) ನರಸಿಂಗ ತಂದೆ ಬಕ್ಕಪ್ಪಾ ಮಾಡಾ ವಯ: 49 ವರ್ಷ, ಜಾತಿ: ಮುನ್ನುರು ರೆಡ್ಡಿ, ಸಾ: ಪೊಲಕಪಳ್ಳಿ ಇವರೆಲ್ಲರೂ ದುಂಡಾಗಿ ಕುಳಿತು ಹಣ ಹಚ್ಚಿ ಪಣ ತೊಟ್ಟು ನಸಿಬಿನ ಇಸ್ಪಿಟ ಜುಜಾಟ ಆಡುತ್ತಿದ್ದ ಬಗ್ಗೆ ಖಚಿತ ಪಡಿಸಿಕೊಂಡು ಸಿಬ್ಬಂದಿಯವರ ಸಹಾಯಂದಿಂದ ಸದರಿ ಆರೋಪಿತರ ಮೇಲೆ ದಾಳಿ ಮಾಡಿದಾಗ ಆರೊಪಿ ನಂ. 4, 5 ಇಬ್ಬರು ಓಡಿ ಹೋಗಿರುತ್ತಾರೆ, ನಂತರ ಉಳಿದ ಆರೋಪಿತರಿಗೆ ಹಿಡಿದು ಅವರಿಂದ ಒಟ್ಟು ನಗದು ಹಣ 8670/- ರೂ., 52 ಇಸ್ಪಿಟ ಎಲೆಗಳು ಹಾಗೂ ಹಿರೊ ಸ್ಪ್ಲೆಂಡರ್ ದ್ವಿಚಕ್ರ ವಾಹನ ನಂ. ಕೆಎ-39/ಜೆ-9834 ನೇದನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಜನವಾಡಾ ಪೊಲೀಸ್ ಠಾಣೆ ಅಪರಾಧ ಸಂ. 43/2020, ಕಲಂ. 87 ಕೆ.ಪಿ ಕಾಯ್ದೆ :-
ದಿನಾಂಕ 27-07-2020 ರಂದು ಮರಖಲ-ಗಾದಗಿ ರೋಡಿನ ಮರಖಲ ಗ್ರಾಮ ಶಿವಾರದಲ್ಲಿರುವ ರಣ್ಯದಲ್ಲಿ ಮರದ ಕೆಳಗಡೆ ಕೆಲವು ಜನರು ಅಂದರ-ಬಾಹರ ಇಸ್ಪಿಟ್ ಜೂಜಾಟ ಆಡುತ್ತಿದ್ದಾರೆಂದು ಗಂಗಮ್ಮ ಪಿಎಸ್ಐ (ಕಾ&ಸು) ಜನವಾಡಾ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ತಮ್ಮ ಸಿಬ್ಬಂದಿಯವರೊಡನೆ ಹೋಗಿ ಇಸ್ಪಿಟ್ ಜೂಜಾಟದಲ್ಲಿ ತೊಡಗಿದ ಆರೋಪಿತರಾಧ 1) ಮಹೇಶ ತಂದೆ ಸುಧಾಕರರಾವ ಫೋಲಾ ಸಾ: ದೇವಿ ಕಾಲೋನಿ ಬೀದರ, 2) ಪರಮೇಶ್ವರ ತಂದೆ ಲಕ್ಷ್ಮಣ ಸಾ: ಸಂಗನಳ್ಳಿ ಗ್ರಾಮ, 3) ಸಂತೋ಼ಷ ತಂದೆ ಸುರೇಶ ಧೋಬಿ 4) ಚಂದ್ರಕಾಂತ ತಂದೆ ಮಹಾತಂಪ್ಪ ಅಲಗುಡೆ, 5) ಮಂಜುನಾಥ ತಂದೆ ಸಿದ್ದಯ್ಯಾ ಸ್ವಾಮಿ, 6) ಸುರೇಶ ರಂಜನ ತಂದೆ ರಾಮದಾಸ ರಂಜನ, 7) ದಿಲೀಪ್ ತಂದೆ ಹಣಮಂತ ಸೋಲಾಪೂರೆ 5 ಜನ ಸಾ: ಹೌಸಿಂಗ ಬೋರ್ಡ ಕಾಲೋನಿ ಬೀದರ, 8) ಮಹೇಶ ತಂದೆ ಶಂಕರ ಪಂಚಾಳ ಸಾ: ಸಂಗನಳ್ಳಿ ಗ್ರಾಮ ಹಾಗೂ 9) ಜಲಂದರ ತಂದೆ ವೀರಭದ್ರಪ್ಪ ಪಾಟೀಲ್ ಸಾ: ಕಪಲಾಪೂರ (ಜೆ) ಗ್ರಾಮ ಇವರೆಲ್ಲರ ಮೇಲೆ ದಾಳಿ ಮಾಡಿ ಅವರನ್ನು ದಸ್ತಗಿರಿ ಮಾಡಿ, ಆರೋಪಿತರ ಕಡೆಯಿಂದ ಜೂಜಾಟದಲ್ಲಿ ತೊಡಗಿಸಿದ ಒಟ್ಟು ನಗದು ಹಣ 13,890/-ರೂ ಹಾಗೂ 52 ಇಸ್ಪಿಟ್ ಎಲೆಗಳು ಅವುಗಳ ಅ.ಕಿ 50/- ರೂ. ನೇದವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬೇಮಳಖೇಡಾ ಪೊಲೀಸ್ ಠಾಣೆ ಅಪರಾಧ ಸಂ. 35/2020, ಕಲಂ. 78(3) ಕೆ.ಪಿ ಕಾಯ್ದೆ :-
ದಿನಾಂಕ 27-07-2020 ರಂದು ಪೊಲಕಪಳ್ಳಿ ಕ್ರಾಸ ಹತ್ತಿರ ಬಸ್ ನಿಲ್ದಾಣದ ಎದುರಿಗೆ ಬೀದರ ಚಿಂಚೊಳಿ ರೋಡಿನ ಮೇಲೆ ಒಬ್ಬ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಎಂಬ ನಸೀಬಿನ ಜೂಜಾಟ ನಡೆಸುತ್ತಿದ್ದಾನೆಂದು ಗಂಗಮ್ಮ ಪಿಎಸ್ಐ ಬೇಮಳಖೇಡಾ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಪೊಲಕಪಳ್ಳಿ ಗ್ರಾಮಕ್ಕೆ ಹೋಗಿ ಪೊಲಕಪಳ್ಳಿ ಕ್ರಾಸ ಹತ್ತಿರ ಸ್ವಲ್ಪ ದೂರದಿಂದ ಮರೆಯಲ್ಲಿ ನಿಂತು ನೋಡಲು ಇಬ್ಬರು ವ್ಯಕ್ತಿಗಳು ಬೀದರ ಚಿಂಚೊಳಿ ರೋಡಿನ ಮೇಲೆ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಒಂದು ರೂಪಾಯಿಗೆ 100/- ರೂಪಾಯಿಗಳು ಕೊಡುತ್ತೇನೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಳ್ಳುತ್ತಿರುವುದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ಸದರಿ ವ್ಯಕ್ತಿಗಳ  ಮೇಲೆ ದಾಳಿ ಮಾಡಿ ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದವರಿಗೆ ಹಿಡಿದು ಅವರ ಹೆಸರು ವಿಚಾರಿಸಲಾಗಿ ಅವರಲ್ಲಿ ಒಬ್ಬನು ತನ್ನ ಹೆಸರು ಪ್ರಭು ತಂದೆ ತುಕಾರಾಮ ಕಡಿಮನಿ ವಯ: 28 ವರ್ಷ, ಜಾತಿ: ಕುರುಬ, ಸಾ: ಪೊಲಕಪಳ್ಳಿ ಅಂತಾ ತಿಳಿಸಿದನು, ಇವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂದಿಸಿದ ನಗದು ಹಣ 840/- ರೂಪಾಯಿಗಳು ಮತ್ತು ಮಟಕಾ ನಂಬರ್ ಬರೆದ 1 ಮಟಕಾ ಚೀಟಿ ಹಾಗು ಒಂದು ಬಾಲ ಪೆನ್ನ ಜಪ್ತಿ ಮಾಡಿಕೊಂಡಿದ್ದು ಮತ್ತು ಇನ್ನೊಬ್ಬ ವ್ಯಕ್ತಿಯ ಹೆಸರು ವಿಚಾರಿಸಲಾಗಿ ಅವನ ಹೆಸರು ನರಸಪ್ಪಾ ತಂದೆ ಚಂದ್ರಪ್ಪಾ ಜೀತನ ವಯ: 63 ವರ್ಷ, ಜಾತಿ: ಮುನ್ನುರ ರೆಡ್ಡಿ, ಸಾ: ಚಾಂಗಲೇರಾ ಅಂತಾ ತಿಳಿಸಿದ್ದು ಇವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂದಿಸಿದ ನಗದು ಹಣ 870/- ರೂಪಾಯಿಗಳು ಮತ್ತು ಮಟಕಾ ನಂಬರ್ ಬರೆದ 1 ಮಟಕಾ ಚೀಟಿ, ಹಾಗು ಒಂದು ಬಾಲ ಪೆನ್ನ ಜಪ್ತಿ ಮಾಡಿಕೊಂಡಿದ್ದು, ನಂತರ ಆರೋಪಿತರಾದ ಪ್ರಭು ಮತ್ತು ನರಸಪ್ಪಾ ಇವರಿಗೆ ದಸ್ತಗಿರಿ ಮಾಡಿಕೊಂಡು, ಅವರಿಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 62/2020, ಕಲಂ. 78(3) ಕೆ.ಪಿ ಕಾಯ್ದೆ :-
ದಿನಾಂಕ  27-07-2020 ರಂದು ಜಾಜನಮುಗಳಿ ಹನುಮಾನ ಮಂದಿರದ ಹತ್ತಿರ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿ ಜೋರಾಗಿ ಕುಗುತ್ತಾ ಒಂದು ರೂಪಾಯಿಗೆ 90/- ರೂಪಾಯಿ ಅಂತಾ ಕೂಗುತ್ತಿದ್ದು ಜನರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾನೆಂದು ವಸೀಮ್ ಪಟೇಲ್ ಪಿಎಸ್ಐ ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಜಾಜನಮುಗಳಿ ಗ್ರಾಮದ ಹನುಮಾನ ಮಂದಿರದ  ಹತ್ತಿರ ಇರುವ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ ಶಂಕರ ತಂದೆ ನಾಗಬಸಪ್ಪಾ ಹೊಳಕುಂದೆ ವಯ: 60 ವರ್ಷ, ಜಾತಿ: ಲಿಂಗಾಯತ ಹಾಗೂ ಇನ್ನೊಬ್ಬ ಇಬ್ಬರು ಸಾ: ಜಾಜನಮುಗಳಿ ಇವರಿಬ್ಬರು ಜೋರಾಗಿ ಕುಗುತ್ತಾ ಒಂದು ರೂಪಾಯಿಗೆ 90/- ರೂಪಾಯಿ ಅಂತಾ ಜೋರಾಗಿ ಕೂಗಿ ಜನರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಬರೆದುಕೊಳ್ಳುತ್ತಿರುವುದನ್ನು ನೋಡಿ ಖಚಿತ ಪಡಿಸಿಕೊಂಡು ಶಂಕರ ಇತನ ಮೇಲೆ ಪಂಚರ ಸಮಕ್ಷಮ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿದಾಗ ಅಲ್ಲಿದ್ದ ಜನರು ಓಡಿ ಹೋಗಿರುತ್ತಾರೆ, ನಂತರ ಶಂಕರ ಇತನ ಅಂಗ ಝಡ್ತಿ ಮಾಡಲು ಆತನ ಹತ್ತಿರ 2050/- ರೂಪಾಯಿ ನಗದು ಹಣ, ಒಂದು ಬಾಲ ಪೇನ್ ಹಾಗೂ ಮಟಕಾ ಬರೆದ ಚೀಟಿ ಸಿಕ್ಕಿರುತ್ತವೆ, ಪುನಃ ಶಂಕರ ಇತನಿಗೆ ವಿಚಾರಿಸಲು ಆತನು ತಿಳಿಸಿದ್ದೆನೆಂದರೆ ನಾನು ಹಣ ಪಡೆದುಕೊಂಡು ಮಟಕಾ ಚೀಟಿ ಬರೆದುಕೊಂಡು ಬಂದ ಹಣವನ್ನು 100/- ರೂಪಾಯಿಗೆ 20/- ರೂಪಾಯಿ ಕಮೀಷನಂತೆ ನಮ್ಮೂರಿನ ವಿಕಾಸ ತಂದೆ  ವಿಠಲ ಪವಾರ ವಯ: 40 ವರ್ಷ, ಜಾತಿ: ಮರಾಠಾ, ಇತನಿಗೆ ಕೊಡುತ್ತೇನೆ ಅಂತಾ ತಿಳಿಸಿದನು, ನಂತರ ನಗದು ಹಣ, ಮಟಕಾ ಚೀಟಿ, ಬಾಲ ಪೇನ ನೇದ್ದವುಗಳನ್ನು ತಾಬೆಗೆ ತೆಗೆದುಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.