Police Bhavan Kalaburagi

Police Bhavan Kalaburagi

Wednesday, February 5, 2020

BIDAR DISTRICT DAILY CRIME UPDATE 05-02-2020


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 05-02-2020

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಯು.ಡಿ.ಆರ್ ನಂ. 04/2020, 174 ಸಿ.ಆರ್.ಪಿ.ಸಿ :-
ದಿನಾಂಕ 03-02-2020 ರಂದು 2345 ಗಂಟೆಯಿಂದ ದಿನಾಂಕ 04-02-2020 ರಂದು 0605 ಗಂಟೆಯ ಮಧ್ಯದ ಅವಧಿಯಲ್ಲಿ ಫಿರ್ಯಾದಿ ಎಂ.ಜಯಶಂಕರ ತಂದೆ ಮಹದೇವಪ್ಪಾ ವಯ: 45 ವರ್ಷ, ಸಾ: ಸಂತೇಮರ ಹಳ್ಳಿ, ತಾ: ಜಿ: ಚಾಮರಾಜ ನಗರ ರವರ ಗೆಳೆಯ .ಕೆ.ಶಿವರಾಜ ತಂದೆ ಕುನ್ನುಮಾದಪ್ಪಾ ವಯ: 64 ವರ್ಷ, ಟಿ.ಎಸ್ ಪುರಾ ಮೈಸೂರು ರವರು ಮೂತ್ರ ವಿರ್ಸಜನೆಗೆ ಹೋದಾಗ ಚಳಿಯಿಂದ ಹೃದಯ ಘಾತವಾಗಿ ಕುಸಿದು ಬಿದಿದ್ದು ಫಿರ್ಯಾದಿಯು ನೋಡಿ ಶಂಕರ ತಂದೆ ಮಾಣಿಕಪ್ಪ ರವರ ಸಹಾಯದಿಂದ ರೂಂನಿಂದ ಬಸವಕಲ್ಯಾಣ ಸರಕಾರಿ ಆಸ್ಪತ್ರೆಗೆ ಬುಲೇನ್ಸದಲ್ಲಿ ತಂದು ವೈದ್ಯಾಧಿಕಾರಿಗಳು ಪರಿಶೀಲಿಸಿದಾಗ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ, ಸ್ನೇಹಿತನ ಮರಣದ ಬಗ್ಗೆ ಯಾರ ಮೇಲೆ ಸಂಶಯವಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಹುಲಸೂರ ಪೊಲೀಸ್ ಠಾಣೆ ಅಪರಾಧ ಸಂ. 07/2020, ಕಲಂ. 279, 337, 338 ಐಪಿಸಿ :-
ದಿನಾಂಕ 04-02-2020 ರಂದು ಫಿರ್ಯಾದಿ ಮನೋಹರ ತಂದೆ ಮಾಣಿಕರಾವ ಹಂಡೆ ವಯ: 32 ವರ್ಷ, ಜಾತಿ: ಕುರುಬ, ಸಾ: ದೇವನಾಳ, ತಾ: ಹುಲಸೂರ ರವರ ತಂಗಿಯ ಮಗನಾದ ರಾಹುಲ ಗೌರೆ ಈತನು ದೇವನಾಳ ಶೀವಾರದಲ್ಲಿರುವ ತಮ್ಮ ಹೊಲದಿಂದ ಸೈಕಲ್ ಚಲಾಯಿಸಿಕೊಂಡು ಗಡಿಗೌಂಡಗಾಂವಕ್ಕೆ ಬರುªÁ  ಬಸವಕಲ್ಯಾಣ-ಹುಲಸೂರ ರಸ್ತೆಯ ದೇವನಾಳ ಕ್ರಾಸ್ ಹತ್ತಿರ ಬಸವಕಲ್ಯಾಣ ಕಡೆಯಿಂದ ಬರುತ್ತಿದ ಕಾರ ನಂ. ಕೆಎ-56/ಎಮ್-0654 ನೇದರ ಚಾಲಕನಾದ ಆರೋಪಿಯು ತನ್ನ ಕಾರನ್ನು ಅತಿವೇಗ ಹಾಗು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ರಾಹುಲ ಈತನು ಚಲಾಯಿಸಿಕೊಂಡು ಬರುತ್ತಿದ್ದ ಸೈಕಲಿಗೆ ಡಿಕ್ಕಿ ಮಾಡಿ ಕಾರ ಸಮೇತ ಓಡಿ ಹೋಗಿರುತ್ತಾನೆ, ಸದರಿ ಡಿಕ್ಕಿಯಿಂದ ರಾಹುಲ ಇತನಿಗೆ ಗಟಾಯಿಗೆ ಭಾರಿ ರಕ್ತಗಾಯ, ತಲೆಯಲ್ಲಿ ಗುಪ್ತಗಾಯ, ಕಿವಿಯಿಂದ ರಕ್ತ ಬರುತಿತ್ತು, ಬಲಗಾಲ ಮೊಳಕಾಲಿಗೆ, ಪಾದಕ್ಕೆ  ಮತ್ತು ಬಲಗೈಗೆ ತರಚಿದ ರಕ್ತಗಾಯವಾಗಿದ್ದರಿಂದ ಬಸವಕಲ್ಯಾಣ ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ ನಂತರ ವೈದ್ಯಾಧಿಕಾರಿಗಳ ಸಲಹೆ ಮೇರೆಗೆ ಗಾಯಗೊಂಡ ರಾಹುಲ ಈತನಿಗೆ ಹೆಚ್ಚಿನ ಚಿಕಿತ್ಸೆ ಕುರಿತು ಕಲಬುರಗಿಗೆ ತೆಗೆದುಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಹುಮನಾಬಾದ ಪೊಲೀಸ್ ಠಾಣೆ ಅಪರಾಧ ಸಂ. 15/2020, ಕಲಂ. 363, 366 ಐಪಿಸಿ :-
ದಿನಾಂಕ 30-01-2020 ರಂದು ಫಿರ್ಯಾದಿ ಅರುಣಾ ಗಂಡ ತುಕ್ಕಾರೆಡ್ಡಿ ತುಮಕುಂಟಾ ಸಾ: ಹೂವಿನ ಬಾವಿ, ತಾ: ಚಿಂಚೋಳಿ, ಸದ್ಯ: ಹುಮನಾಬಾದ ರವರ ಮಗಳಾದ ಸೌಜನ್ಯ ವಯ: 18 ವರ್ಷ 6 ತಿಂಗಳು ಇವಳಿಗೆ ಇವತ್ತು ನೀನು ಕಾಲೇಜಿಗೆ ಹೋಗಬೇಡ ನನಗೆ ಸ್ವಲ್ಪ ಮೈಯಲ್ಲಿ ಹುಷಾರಿಲ್ಲ ಕೆಲಸ ಇದೆ, ಮನೆಯಲ್ಲಿಯೇ ಇರು ಅಂತ ಹೇಳಿದಾಗ ಅವಳು ಮಾತಿಗೆ ಒಪ್ಪಿಕೊಂಡು ಮನೆಯಲ್ಲಿ ಉಳಿದುಕೊಂಡು ಕೆಲಸ ಮಾಡುತ್ತಿದ್ದಳು, ನಂತರ 1230 ಗಂಟೆಯ ಸುಮಾರಿಗೆ ಸೌಜನ್ಯ ಇವಳು ಒಗೆದ ಬಟ್ಟೆಗಳನ್ನು ಒಣ ಹಾಕಲು ಮನೆಯಿಂದ ಹೊರಗೆ ಹೋದಾಗ ಆರೋಪಿ ವರುಣ ತಂದೆ ತುಕಾರಾಮ ಸಾ: ಹುಮನಾಬಾದ ಇತನು ಒಂದು ಮೋಟಾರ್ ಸೈಕಲ್ ಮೇಲೆ ಬಂದು ಮಗಳು ಸೌಜನ್ಯ ಇವಳಿಗೆ ಒತ್ತಾಯದಿಂದ ಮೋಟಾರ್ ಸೈಕಲ್ ಮೇಲೆ ಕೂಡಿಸಿಕೊಂಡು ಹೋದನು, ಫಿರ್ಯಾದಿಯು ಕೂಗಾಡುವಷ್ಟರಲ್ಲಿ ಅವನು ಮಗಳಿಗೆ ಅಪಹರಿಸಿಕೊಂಡು ಹೋದನು, ಮಗಳಿಗೆ ಅಪರಿಸಿರುವುದನ್ನು ಕಂಡು ಗಾಬರಿಯಲ್ಲಿ ಮೋಟಾರ್ ಸೈಕಲ್ ನಂಬರ ನೋಡಿರುವುದಿಲ್ಲಾ, ವರುಣ ತಂದೆ ತುಕಾರಾಮ ಎಂಬ ಹುಡುಗ ಯಾವಾಗಲೂ ಮನೆಯ ಮುಂದೆ ಆಗಾಗ ಓಡಾಡುತಿದ್ದು ಅವನ ಹೆಸರು ಗೊತ್ತಿರುತ್ತದೆ, ಸದರಿ ಆರೋಪಿಯು ಮೋಟಾರ್ ಸೈಕಲ್ ಮೇಲೆ ಮಗಳು ಸೌಜನ್ಯ ಇವಳಿಗೆ ಯಾವುದೋ ಉದ್ದೇಶದಿಂದ ಅಪಹರಿಸಿಕೊಂಡು ಹೋಗಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 04-02-2020 ರಂದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಔರಾದ(ಬಿ) ಪೊಲೀಸ್ ಠಾಣೆ ಅಪರಾಧ ಸಂ. 12/2020, ಕಲಂ. ಮಹಿಳೆ ಕಾಣೆ :-
ಲಕ್ಷ್ಮೀಬಾಯಿ ಗಂಡ ಗಣಪತಿ ಗಾಯಕವಾಡ ಸಾ: ಲಿಡಕರ ಕಾಲೂನಿ ಔರಾದ(ಬಿ) ರವರ ಮಗಳಾದ ಶೋಭಾಂಗಿ ಇವಳು ಔರಾದ ಪ್ರಥಮ ದರ್ಜೆ ಕಾಲೇಜನಲ್ಲಿ ಬಿಎ 4 ನೇ ಸೆಮಿಸ್ಟರನಲ್ಲಿ ಓದುತ್ತಿದ್ದಳು, ಹೀಗಿರುವಾಗ ದಿನಾಂಕ 30-01-2020 ರಂದು ಮಗಳು ಶೋಭಾಂಗಿ ಇವಳು 1000 ಗಂಟೆಗೆ ಕಾಲೇಜಿಗೆ ಹೋಗುವುದಾಗಿ ಹೇಳಿ ಹೋಗಿ ರಾತ್ರಿ ಕತ್ತಲಾದರೂ ಮರಳಿ ಮನೆಗೆ ಬಂದಿರುವುದಿಲ್ಲ, ಈ ವಿಷಯ ಮ್ಮ ಎಲ್ಲಾ ಮಕ್ಕಳಿಗೆ ತಿಳಿಸಿ ವಿಚಾರಿಸಿದ್ದು ಮಗಳ ಪತ್ತೆಯಾಗಿರುವುದಿಲ್ಲ, ತನ್ನ ಮಗಳು ಪತ್ತೆ ಕುರಿತು ಉದಗೀರ ಲಾತೂರ ಹೈದ್ರಾಬಾದ ಪಟ್ಟಣಗಳಿಗೆ ಹೋಗಿ ಹುಡುಕಾಡಿದ್ದು ಇಲ್ಲಿಯವರೆಗೆ ಪತ್ತೆಯಾಗಿರುವುದಿಲ್ಲ, ಮಗಳು ಮನೆಯಿಂದ ಹೋಗುವಾಗ ಕಾಲೇಜ ಸಮವಸ್ತ್ರ ನೀಲಿ ಬಣ್ಣದ ಪ್ಯಾಂಟ ಮತ್ತು ನೀಲಿ ಬಿಳಿ ಮಿಶ್ರಿತ ಚಕ್ಸ ಟಾಪ ಧರಿಸಿಕೋಂಡಿರುತ್ತಾಳೆ, ಮಗಳ ಚಹರೆ ಪಟ್ಟಿ ಉದ್ದನೇಯ ಮುಖ, ಕೆಂಚನೇಯ ಮೈಬಣ್ಣಾ, ತೆಳ್ಳನೇಯ ಮೈಕಟ್ಟು, 4 ಫೀಟ 8 ಇಂಚು ಎತ್ತರ ಹೊಂದಿರುತ್ತಾಳೆಂದು ಕೊಟ್ಟ ಫಿರ್ಯಾದಿಯವರ ಅರ್ಜಿಯ ಸಾರಾಂಶದ ಮೇರೆಗೆ ದಿನಾಂಕ 04-02-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಸಂತಪುರ ಪೊಲೀಸ್ ಠಾಣೆ ಅಪರಾಧ ಸಂ. 10/2020, ಕಲಂ. 78(3) ಕೆ.ಪಿ ಕಾಯ್ದೆ :-
ದಿನಾಂಕ 04-02-2020 ರಂದು ಸಂತಪೂರ ಗ್ರಾಮದ ಬಸವೇಶ್ವರ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಮಟ್ಕಾ ಚೀಟಿ ಬರೆದುಕೊಳ್ಳುತ್ತಿದ್ದಾರೆ ಅಂತಾ ಪ್ರಭಾಕರ ಪಟೀಲ್ ಪಿ.ಎಸ್.ಐ ಸಂತಪೂರ ಪೊಲೀಸ್ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಸಂತಪೂರ ಬಸವೇಶ್ವರ ಚೌಕ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲು ಬಸವೇಶ್ವರ ಚೌಕ ಹತ್ತಿರ ಒಬ್ಬ ವ್ಯಕ್ತಿಯು ರೋಡಿಗೆ ಸಾರ್ವಜನಿಕರಿಗೆ ಮಟ್ಕಾ ನಸಿಬಿನ ಜೂಜಾಟ ಒಂದು ರೂಪಾಯಿಗೆ 80/- ರೂ. ಅಂತಾ ಕನ್ನಡದಲ್ಲಿ ಹೇಳುತ್ತಾ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟ್ಕಾ ಚೀಟಿ ಬರೆದುಕೊಳ್ಳುತ್ತಿರುವುದನ್ನು ನೋಡಿ ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ಆತನ ಮೇಲೆ ದಾಳಿ ಮಾಡುವಷ್ಟರಲ್ಲಿ ಹಣಕೊಟ್ಟು ಮಟ್ಕಾ ಚೀಟಿ ಬರೇಸುತ್ತಿದ್ದ ಜನರು ಓಡಿ ಹೋಗಿರುತ್ತಾರೆ, ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದ ಆರೋಪಿತನಾದ ರಘುನಾಥ ತಂದೆ ಪಾಪಣ್ಣಾ ಒಡೆಯರ ವಯ: 29 ವರ್ಷ, ಜಾತಿ: ವಡ್ಡರ, ಸಾ: ಸಂತಪೂರ ಇತನಿಗೆ ಹಿಡಿದು ಚೆಕ ಮಾಡಿದಾಗ ಅವನ ಹತ್ತಿರ 800/- ರೂ. ಹಾಗು ಒಂದು ಬಾಲ್ ಪೆನ್ ಮತ್ತು ಒಂದು ಮಟಕಾ ಚೀಟಿ ಇದ್ದು ಅವುಗಳು ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.