ಕೊಲೆ ಪ್ರಕರಣ :
ಅಫಜಲಪೂರ
ಠಾಣೆ : ಶ್ರೀಮತಿ ಆಸ್ರಬಿ ಗಂಡ
ಮದರಶಾ ಮಕಾಂದಾರ ಸಾ: ಅಫಜಲಪೂರ ರವರ ಗಂಡ
ಮದರಶಾ ಈತನು ಬಹಳ ವರ್ಷಗಳ ಹಿಂದೆ ತಿರಿಕೊಂಡಿರುತ್ತಾನೆ. ನನಗೆ ಸಿಲೇಮಾನ, ಸೈಯದ, ನಬಿಶಾ ಅಂತ ಮೂರು ಜನ ಗಂಡು ಮಕ್ಕಳಿರುತ್ತಾರೆ ಸಿಲೇಮಾನ ಈತನು ತಿರಿಕೊಂಡಿರುತ್ತಾನೆ. ಸೈಯದ ಈತನು ಸೊಲಾಪೂರದಲ್ಲಿ ವಾಸವಾಗಿರುತ್ತಾನೆ. ಆದ್ದರಿಂದ ನಾನು ಮತ್ತು ನಬಿಶಾ ಇಬ್ಬರೆ ಅಫಜಲಪೂರದಲ್ಲಿ ವಾಸವಾಗಿರುತ್ತೇವೆ. ನಬಿಶಾ ಈತನಿಗೆ 33 ವರ್ಷಗಳಾಗಿದ್ದು ಇನ್ನು ಮದುವೆಯಾಗಿರುವದಿಲ್ಲ ಮತ್ತು ನಿಬಿಶಾ ಈತನು ಕುಡಿಯುವ ಚಟಕ್ಕೆ ಅಂಟಿಕೊಂಡು ದಿನಾಲು ಎನು ಕೆಲಸ ಮಾಡದೆ ಕುಡಿದುಕೊಂಡು ತಿರುಗಾಡುತ್ತಿದ್ದನು. ನಿನ್ನೆ ದಿನಾಂಕ:22/04/2019 ರಂದು ನನ್ನ ಮಗ ರಾತ್ರಿ 8-30 ಪಿ,ಎಮ್.ಸುಮಾರಿಗೆ ನಮ್ಮ ಮನೆಯಲ್ಲಿ ಊಟ ಮಾಡಿ ಹೊರಗಡೆ ಹೋಗಿ ಬರುತ್ತೇನೆ ಅಂತ ಹೋಗಿರುತ್ತಾನೆ ನಂತರ ರಾತ್ರಿ 11-30 ಗಂಟೆಯಾದರು ನನ್ನ ಮಗ ಮನೆಗೆ ಬರದ ಕಾರಣ ನಾನು ಮತ್ತು ನನ್ನ ಮೈದುನನ ಹೆಂಡತಿಯಾದ ಶರೀಫಾ ಗಂಡ ಮಕ್ತುಮಸಾಬ ಮಕಾಂದಾರ ಹಾಗೂ ನನ್ನ ಭಾವನ ಮಕ್ಕಳಾದ ರಫೀಕ ತಂದೆ ಲಾಲಶಾ ಮಕಾಂದಾರ,ನಸರುದ್ದಿನ ತಂದೆ ಲಾಲಶಾ ಮಕಾಂದಾರ ನಾಲ್ಕು ಜನ ನನ್ನ ಮಗನಿಗೆ ಹುಡುಕಾಡುತ್ತಾ ನಮ್ಮ ಓಣಿಯಲ್ಲಿ ತಿರುಗಾಡುತ್ತಿದ್ದಾಗ ನಮ್ಮ ಓಣಿಯ ಆರೀಫ ಹವಾಲ್ದಾರ ರವರ ಹೋಟಲ ಮುಂದೆ ಹೋಗಿ ನೋಡಲಾಗಿ ನನ್ನ ಮಗನು ಕೊಲೆಯಾಗಿ ಸತ್ತು ಬಿದ್ದಿದ್ದು ಕಂಡು ಬಂತು. ನನ್ನ ಮಗ ನಬಿಶಾ ಈತನಿಗೆ ನಿನ್ನೆ ದಿನಾಂಕ:22/04/2019 ರಂದು ರಾತ್ರಿ 8-30 ಪಿ,ಎಮ್.ದಿಂದ ರಾತ್ರಿ 11-30 ಪಿ,ಎಮ್.ಮದ್ಯದ ಅವಧಿಯಲ್ಲಿ ಯಾರೊ ದುಷ್ಕರ್ಮಿಗಳು ಯಾವುದೊ ಉದ್ದೇಶದಿಂದ ಕೊಲೆ ಮಾಡಿರುತ್ತಾರೆ. ಅಂತಾ ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಸಂಚಾರಿ
ಠಾಣೆ 01 : ಶ್ರೀ ಗಿರೀಶ ತಂದೆ ಬಸವಂತಾಯ ರವರು ದಿನಾಂಕ 21.04.2019 ರಂದು ರಾತ್ರಿ ಸಮಯದಲ್ಲಿ ನಮ್ಮ ಮನೆಯಿಂದ ಹಳೆ ವೆಂಕಟಗಿರಿ
ಹೊಟೇಲನಲ್ಲಿ ಊಟ ಮಾಡಿಸುವ ಸಲುವಾಗಿ ನಾನು ಚಲಾಯಿಸುತ್ತಿರುವ ಕಾರ ನಂಬರ ಕೆಎ-28/ಪಿ-9279
ನೆದ್ದರಲ್ಲಿ ಶಿವಲಿಂಗಪ್ಪಾ ಮತ್ತು ಸಾಯಬಣ್ಣಾ ಇಬ್ಬರನ್ನು ಕೂಡಿಸಿಕೊಂಡು ಕರುಣೇಶ್ವರ ನಗರ ಕ್ರಾಸ
ಮುಖಾಂತರವಾಗಿ ನಾನು ಕಾರ ಚಲಾಯಿಸಿಕೊಂಡು ಹೊಗುವಾಗ ದಾರಿ ಮದ್ಯ ಚಿತ್ತಾರಿ ಅಡ್ಡಾ ಹತ್ತೀರ ಬರುವ
ಸ್ಮಶಾನ ಭೂಮಿ ಎದುರಿನ ರೋಡ ಮೇಲೆ ದುರಸ್ಥಿ ಕೆಲಸ ನಡೆದ್ದಿದ್ದರಿದ ಒಂದೆ ರೋಡಿನಿಂದ ಎಲ್ಲಾ
ವಾಹನಗಳು ಹೋಗುವದು ಬರುವದು ಮಾಡುತ್ತಿದ್ದವು ನಾನು ಎಡ ರೋಡಿನಿಂದ ಕಾರ ಚಲಾಯಿಸಿಕೊಂಡು ಹೋಗುವಾಗ
ರಾತ್ರಿ 9-20 ಗಂಟೆ ಸುಮಾರಿಗೆ ಕೆಟಿಎಮ್ ಡ್ಯೂಕ ನಂ ಕೆಎ-32/ಇಕೆ-6669 ನೇದ್ದರ ಸವಾರನು ತನ್ನ
ಮೋಟಾರ ಸೈಕಲ ಹಿಂದುಗಡೆ ಒಬ್ಬನನ್ನು ಕೂಡಿಸಿಕೊಂಡು ಆರ.ಪಿ ಸರ್ಕಲ ರೋಡದಿಂದ ಕಡೆಯಿಂದ ರಾಮ ಮಂದಿರ
ರಿಂಗ ರೋಡ ಕಡೆಗೆ ಹೋಗುವ ಕುರಿತು ಅತಿವೆಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು
ಎದುರಿನಿಂದ ನನ್ನ ಕಾರಿಗೆ ಡಿಕ್ಕಿಪಡಿಸಿ ಅಪಘಾತ ಮಾಡಿ ನಮ್ಮ ಕಾರ ಡ್ಯಾಮೇಜ್ ಮಾಡಿ ತಾವು ಗಾಯ
ಹೊಂದಿದ್ದು. ಸದರ ಮೋಟಾರ ಸೈಕಲ ಸವಾರನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂಎಉ ಸಾರಾಂಶದ ಮೇಲಿಂದ ಸಂಚಾರಿ ಠಾಣೆ 01
ರಲ್ಲಿ ಪ್ರಕರಣ ದಾಖಲಾಗಿದೆ.