Police Bhavan Kalaburagi

Police Bhavan Kalaburagi

Saturday, February 8, 2020

KALABURAGI DISTRICT REPORTED CRIMES.

ªÁr ಪೊಲೀಸ್ oÁuÉ    : ದಿನಾಂಕ 06/02/2020 ರಂದು ರಾತ್ರಿ 08.00 ಗಂಟೆಗೆ ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿಯಲ್ಲಿ ಗಾಯಾಳು ಮಲ್ಲಪ್ಪ ಇತನ ಎಮ್.ಎಲ್.ಸಿ ಪಡೆದುಕೊಂಡು ನಂತರ ಗಾಯಾಳು ಮಲಪ್ಪ ಇತನಿಗೆ ಮಾತನಾಡಿಸಲು ಆತನಿಗೆ ಸರಿಯಾಗಿ ಮಾತನಾಡಲು ಬರದೇ ಇರುವದರಿಂದ ಇಂದು ದಿನಾಂಕ 07/02/2020 ರಂದು ಬೆಳಗ್ಗೆ 08.30 ಗಂಟೆಗೆ ಮಲ್ಲಪ್ಪ ತಂದೆ ಶ್ಯಾಮರಾಯ ಹೊನಗುಂಟಿ ವಯ-50 ವರ್ಷ ಉದ್ಯೋಗ-ಒಕ್ಕಲುತನ ಜಾತಿ-ಕುರುಬ ಸಾ.ಇಂಗಳಗಿ ರವರ ಹೇಳಿಕೆಯನ್ನು ಪಡೆದುಕೊಂಡು ಮರಳಿ ಬೆಳಗ್ಗೆ 11.00 ಗಂಟೆಗೆ ಠಾಣೆಗೆ ಬಂದಿದ್ದು ಸದರಿ ಹೇಳಿಕೆಯ ಸಂಕ್ಷಿಪ್ತ ಸಾರಾಂಶವೇನಂದೆ, ನಾನು ಮೇಲಿನ ವಿಳಾಸದವನಿದ್ದು ಒಕ್ಕಲುತನ ಕೆಲಸ ಮಾಡಿಕೊಂಡು ಉಪ ಜೀವಿಸುತ್ತೇನೆ. ಈಗ ಒಂದು ವರ್ಷದ ಹಿಂದೆ ನನ್ನ ಸೋಸೆ ಮಂಜುಳಾ ಇವಳು ಹೋಲಕ್ಕೆ ಹೋದಾಗ ನಮ್ಮ ಅಣ್ಣ ತಮ್ಮಕೀಯ ಅರ್ಜುನ ತಂದೆ ಮರೇಪ್ಪ ಇತನು ಅವಳಿಗೆ ಚುಡಾಯಿಸಿದ್ದರಿಂದ  ಈ ಬಗ್ಗೆ ನಾನು ಆತನ ತಂದೆಗೆ ವಿಚಾರಿಸಿದದ್ದಕ್ಕೆ ನನ್ನೊಂದಿಗೆ ಅರ್ಜುನ ಇತನು ಜಗಳ ಮಾಡಿ ನಿನಗೆ ಒಂದು ಕೈ ನೋಡಿಯೇ ಬಿಡುತ್ತೇನೆಅಂತಾ ಬೈದಾಡಿದ್ದು ಇರುತ್ತದೆ. ನಂತರ ದಿನಾಂಕ-05/02/2020 ರಂದು ರಾತ್ರಿ 08.00 ಗಂಟೆ ಸುಮಾರು ನಾನು ಮನೆಯ ಹೊರಗೆ ಬಂದಾಗ ಮರೇಪ್ಪ ಇತನು ನಮ್ಮ ಮನೆಯ ಮುಂದುಗಡೆ ಕುಳಿತು ಏಕೀ ಮಾಡುತ್ತಿದ್ದನ್ನು ಕಂಡು ನಾನು ನಮ್ಮ ಮನೆಯ ಮುಂದೆ ಏಕೆ ಕುಳಿತ್ತಿದ್ದಿ ಪಕ್ಕದ ಗಲ್ಲಿಯಲ್ಲಿ ಹೋಗಿ ಏಕೀ ಮಾಡು ಅಂತಾ ಹೇಳಿದ್ದಕ್ಕೆ ಆತನು ರಂಡಿ ಮಗನೇ ನಿನ್ನ ಸೊಕ್ಕು ಹೇಚ್ಚಾಗಿದೆಅಂತಾ ಬೈದು ತಮ್ಮ ಮನೆಗೆ ಹೋಗಿ ಅರ್ಜುನ ತಂದೆ ಮರೇಪ್ಪ ,ಸಾಬಣ್ಣ ತಂದೆ ಮರೇಪ್ಪ ,ಯಲ್ಲಪ್ಪ ತಂದೆ ಮರೇಪ್ಪ,ಶರಣಪ್ಪ ತಂದೆ ಮರೇಪ್ಪ ಮತ್ತು ಶರಣಪ್ಪ ತಂದೆ ಸಾಬಣ್ಣ ರವರನ್ನು ಕರೆದುಕೊಂಡು ಬಂದು ನನಗೆ ಮರೇಪ್ಪ ಸಾಬಣ್ಣ ಗಟ್ಟೀಯಾಗಿ ಹಿಡಿದುಕೊಂಡರು ಅರ್ಜುನ ಇತನು ತನ್ನ ಕೈಯಲ್ಲಿದ್ದ ಬಡಿಗೆಯಿಂದ ನನ್ನ ಎಡ ಹುಬ್ಬಿನ ಹತ್ತಿರ ತಲೆಗೆ ಹೊಡೆದು ರಕ್ತಗಾಯ ಪಡಿಸಿದನು ಆಗ ಜಗಳ ಬಿಡಿಸಲು ಬಂದ ನನ್ನ ಮಗನಿಗೆ ದಬ್ಬಿಕೊಟ್ಟು ಯಲ್ಲಪ್ಪ ತಂದೆ ಮರೇಪ್ಪ,ಶರಣಪ್ಪ ನನಗೆ ನೇಲಕ್ಕೆ ಕೆಡವಿ ಕೈಯಿಂದ ಹೊಡೆದು ಕಾಲಿನಿಂದ ಒದ್ದಿರುತ್ತಾರೆ. ಶರಣಪ್ಪ ತಂದೆ ಸಾಬಣ್ಣ ಇತನು ರಂಡಿ ಮಕ್ಕಳಿಗೆ ಸೊಕ್ಕು ಬಂದಿದೆ ಅಂತಾ ಕೈಯಿಂದ ಮೈಮೇಲೆ ಹೊಡೆ ಬಡೆ ಮಾಡುತ್ತಿದ್ದಾಗ ಮಗ ಈಸಪ್ಪ ,ಗುಂಡಪ್ಪ ,ಶಾಂತಯ್ಯ ರವರು ಕೂಡಿ ಜಗಳ ಬಿಡಿಸಿರುತ್ತಾರೆ. ಆಗ ಅರ್ಜುನ ಇತನು ರಂಡಿ ಮಗನೇ ಮಲ್ಯ ನಮ್ಮ ತಂಟೆಗೆ ಬಂದರೆ ನಿನಗೆ ಖಲಾಸ ಮಾಡುತ್ತೇನೆ ಅಂತಾ ಜೀವ ಬೇದರಿಕೆ ಹಾಕುತ್ತೇನೆ ಅಂತಾ ಹೊರಡು ಹೋದನು ಆಗ ಸಮಯ ರಾತ್ರಿ 08.30 ಪಿ.ಎಮ್ ಆಗಿತ್ತು. ನಂತರ ನನ್ನ ಮಗ ನನಗೆ ಉಪಚಾರ ಕುರಿತು  ವಾಡಿ ಆಸ್ಪತ್ರೆಗೆ ತಂದು ಉಪಚರಿಸಿಕೊಂಡು  ಹೆಚ್ಚಿನ ಪಚಾರ ಕುರಿತು ಇಲ್ಲಗೆ  ತಂದು ಸೇರಿಕೆ ಮಾಡಿದ್ದು ನನಗೆ  ಎದೆ ನೊವು ಆಗಿದ್ದರಿಂದ  ಸರಿಯಾರಿ ಮಾತನಾಡಲು ಬರದೇ ಇರುವದರಿಂದ ಇಂದು ನನ್ನ ಹೇಳಿಕೆಯನ್ನು ನೀಡಿರುತ್ತೇನೆ. ಮೇಲೆ ನಮೂದು ಮಾಡಿದರವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಅಂತಾ ವಗೈರಿ ಹೇಳಿಕೆಯ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನೀಖೆ ಕೈಗೊಂಡಿದ್ದು ಬಗ್ಗೆ ವರದಿ.
C¥sÀd®¥ÀÆgÀ ¥Éưøï oÁuÉ : ಇಂದು ದಿನಾಂಕ:07-02-2020 ರಂದು 2-00 ಪಿ,ಎಮ್.ಕ್ಕೆ ಪಿರ್ಯಾದಿದಾರಳಾದ ಶ್ರೀಮತಿ ರೇವಮ್ಮ ಗಂಡ ರವಿಂದ್ರ ಸ್ವಾಮಿ ವ||30 ಜಾ||ಜಂಗಮ ಉ||ಮನೆ ಕೆಲಸ ಸಾ|| ನಿಲಗಾರ ಕರಜಗಿ ತಾ|| ಅಕ್ಕಲಕೋಟ ಜಿ|| ಸೋಲ್ಲಾಪೂರ ಹಾಲಿ ವಸ್ತಿ ಕಬ್ಬೇರ ಕರಜಗಿ ತಾ|| ಅಫಜಲಪೂರ ಜಿ|| ಕಲಬುರಗಿ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಗಣಕಿಕರಿಸಿದ ದೂರು ಅರ್ಜಿ ಸಲ್ಲಿಸಿದ್ದು ಸದರಿ ದೂರಿನ ಸಾರಾಂಶವೆನಂದರೆ ರವಿಂದ್ರಸ್ವಾಮಿ ಇವರ ಜೋತೆ ನನ್ನ ಮದುವೆಯಾಗಿ ಸುಮಾರು 12-13 ವರ್ಷಗಳು ಆಗಿರುತ್ತವೆ. ಸದರಿ ನಮಗೆ 2 ಗಂಡು ಮಕ್ಕಳು ಜನಿಸಿರುತ್ತವೆ. ಇವರಲ್ಲಿ ಮೊದಲನೆ ಗಂಡು ಮಗ ನನ್ನ ಹತ್ತಿರ ಇರುತ್ತಾನೆ. ಸದರಿಯವನಿಗೆ ಗದಗಿನಲ್ಲಿ ವಿದ್ಯಾಬ್ಯಾಸಕ್ಕಾಗಿ ಕಳುಹಿಸಿದ್ದು, ಅವನ ಶಾಲೆಯ ಎಲ್ಲಾ ಖರ್ಚು ನನ್ನ ಅಣ್ಣನಾದ ಈರಯ್ಯ ಹಿರೇಮಠ ಮತ್ತು ನಾನು ನೋಡಿಕೊಂಡು ಹೋಗುತ್ತಿದ್ದೇವೆ. ಅದರಂತೆ ನನ್ನ ಗಂಡ ನಮ್ಮ ಮದುವೆಯಾದ ಪ್ರಾರಂಭದಿಂದಲೂ ನನ್ನ ಜೋತೆ ಯಾವುದಾದರೊಂದು ನೇಪ್ ಮಾಡಿಕೊಂಡು ಜಗಳ ತಗೆಯುತ್ತಾನೆ. ಅದರಂತೆ ನನ್ನ ಗಂಡ ತನ್ನ ದುಶ್ಚಟಗಳಿಗಾಗಿ ನನ್ನ ಕೊರಳಲ್ಲಿ ತಾಳಿ ಮತ್ತು ಬಂಗಾರದ ಬೋರಮಳ, ಕಿವಿ ಓಲೆ ಇವುಗಳನ್ನು ತಗೆದುಕೊಂಡು ಹೋಗಿ ಮಾರಾಟ ಮಾಡಿರುತ್ತಾನೆ. ಅದರಂತೆ ನನ್ನ ತವರು ಮನೆಯಿಂದ ಹಣ ಮತ್ತು ಬಂಗಾರ ತರುವಂತೆ ನನಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ಕೊಟ್ಟಿದ್ದು ಇರುತ್ತದೆ. ಇಷ್ಟಾದರೂ ಕೂಡಾ ನಾನು ಇಂದಲ್ಲಾ ನಾಳೆ ಸುದಾರಿಸಬಹುದು ಎಂದು ತಾಳ್ಮೆಯಿಂದ ಬಂದಿರುತ್ತೇನೆ. ಆದರೂ ನನ್ನ ಗಂಡನು ಒಬ್ಬನೆ ಜಗಳ ಮಾಡಿದ್ದರೆ ನಾನು ಸಹಿಸಿಕೊಂಡಿದ್ದೆ. ಆದರೆ ಅವನ ಜೋತೆಗೆ ನನ್ನ ಅತ್ತೆಯಾದ ಗಂಗಾಬಾಯಿ ಗಂಡ ಹೋಳಯ್ಯಸ್ವಾಮಿ ಮತ್ತು ನನ್ನ ಭಾವನಾದ ವಿಜಯಕುಮಾರ ಮತ್ತು ಮೈದುನರಾದ ಶಿವಾನಂದ, ಸಂತೋಷ, ನಿರಂಜನ್, ಸುರೇಶ, ನಾಗೇಶ ಇವರುಗಳಲ್ಲದೆ ಇವರ ಹೆಂಡತಿಯರಾದ ಪೂಜಾ ಗಂಡ ವಿಯಜಕುಮಾರ, ರೇಣೂಕಾ ಗಂಡ ಶಿವಾನಂದ ಇವರು ಕೂಡಾ ನನ್ನ ಜೋತೆಗೆ ವಿನಾಕಾರಣ ಕಿರಿ ಕಿರಿ ಮಾಡುತ್ತಾರೆ. ಇವರೆಲ್ಲರ ಮಾತು ಕೇಳಿ ವಿನಾಕಾರಣ ನನಗೆ ಪ್ರತಿ ದಿನ ಹೊಡೆಯುವುದು ಬಡೆಯುವುದು ಮಾಡುತ್ತಾನೆ. ಆದ್ದರಿಂದ ಇವರೆಲ್ಲರ ಕಿರುಕುಳ ತಾಳಲಾರದೆ ನಾನು ನನ್ನ ತವರು ಮನೆಯಾದ ಕಬ್ಬೇರ ಕರಜಗಿ ಗ್ರಾಮದಲ್ಲಿ ನಮ್ಮ ಅಣ್ಣನ ಮನೆ ಹತ್ತಿರ ಬಾಡಿಗೆ ಮನೆಯಲ್ಲಿ ನನ್ನ ಮೋದಲನೆ ಮಗನ ಜೋತೆ 2 ವರ್ಷಗಳಿಂದ ವಾಸ ಮಾಡುತ್ತಿರುತ್ತೇನೆ. ಅದರಂತೆ ಈಗ ಸ್ವಲ್ಪ ದಿನಗಳ ಹಿಂದೆ ಅಂದರೆ ದಿನಾಂಕ 16-01-2020 ರಂದು 12-00 ಪಿ,ಎಮ್.ಸುಮಾರಿಗೆ ನನ್ನ ಗಂಡನು ಬಂದು ನನಗೆ ಅವಾಷ್ಯ ಶಬ್ದಗಳಿಂದ ಬೈಯುತ್ತಾ ಎ ರಂಡಿ ನನಗೆ (ದುಡ್ಡು) ಹಣ ಕೊಡು ಇಲ್ಲದಿದ್ದರೆ ನಿನಗೆ ಖಲಾಸ ಮಾಡುತ್ತೇನೆ ಎಂದು ಬಡಿಗೆಯಿಂದ ಹೊಡೆಯುತ್ತಿದ್ದಾಗ ನಾನು ಮನೆಯಿಂದ ಹೊರಗೆ ಬಂದು ಚಿರಾಡುತ್ತಿದ್ದಾಗ ನಮ್ಮ ಮನೆಯ ಎದುರಿನ ಜನರು ಬಂದು ಜಗಳ ಬಿಡಿಸಿರುತ್ತಾರೆ. ಇಲ್ಲದಿದ್ದರೆ ನನ್ನ ಪ್ರಾಣ ಹೋಗುವ ಸಂಭವ ಇತ್ತು. ಆದರೂ ಕೂಡಾ ನಾನು ಸುಮ್ಮನಿದ್ದೆ, ಆದರೆ ತಾನೆ ಈ ರೀತಿ ಜಗಳ ಮಾಡಿ ನಮ್ಮ ಮೇಲೆ ದೂರು (ಪಿರ್ಯಾದಿ) ಕೊಟ್ಟಿರುತ್ತಾನೆ. ಅಂತ ಗೊತ್ತಾಗಿ ಸದರಿ ಘಟನೆ ಬಗ್ಗೆ ನನ್ನ ಅಣ್ಣಂದಿರರೊಂದಿಗೆ ಚರ್ಚಿಸಿ ಇಂದು ತಡವಾಗಿ ಠಾಣೆಗೆ ಬಂದು ದೂರು ಅರ್ಜಿ ಸಲ್ಲಿಸುತ್ತಿದ್ದೆನೆ.ಕಾರಣ ಮಾನ್ಯರಾದ ತಾವುಗಳು ನನ್ನ ಸದರಿ ಈ ನನ್ನ ಅರ್ಜಿಯನ್ನು ಪರಿಗಣಿಸಿ ಸೂಕ್ತ ವಿಚಾರಣೆ ಮಾಡಿ, ನನ್ನ ಗಂಡ ಹಾಗೂ ಅವರ ಕುಟುಂಬದ ಸದಸ್ಯರ ಮೇಲೆ ಕಾನೂನಿನ ಸೂಕ್ತ ಕ್ರಮ ಜರೂಗಿಸಿ ನನಗೆ ನ್ಯಾಯ ದೊರಕಿಸಿ ಕೊಡಬೆಕೆಂದು ತಮ್ಮಲ್ಲಿ ಈ ಅರ್ಜಿಯ ಮೂಲಕ ಪಾರ್ಥಿಸಿ ಕೊಳ್ಳುತ್ತೇನೆ. ಅಂತ ಕೊಟ್ಟ ದೂರು ಅರ್ಜಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:19/2020 ಕಲಂ:498(ಎ),324,504,506 ಸಂ:149 ಐ.ಪಿ.ಸಿ ಮತ್ತು 3 & 4 ಡಿ.ಪಿ.ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ ಬಗ್ಗೆ ವರದಿ.                                                                 
ನೆಲೋಗಿ ಪೊಲೀಸ್ ಠಾಣೆ : ದಿನಾಂಕ: 06-02-2020 ರಂದು ಎಮ್.ಎಲ್.ಸಿ ವಿಚಾರಣೆ ಕುರಿತು ಕಳುಹಿಸಿ ಕೊಟ್ಟಿದ್ದ ಹೆಚ್.ಸಿ-235 ರವರು ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರ್ಗಿಗೆ ಬೆಟ್ಟಿನೀಡಿ ಗಾಯಾಳು ಶ್ರೀಮತಿ ಸಿದ್ದಮ್ಮ ತಳವಾರ ಸಾ: ಕುರನಳ್ಳಿ ಇವರಿಗೆ ವಿಚಾರಣೆ ಮಾಡಿ ಅವರು ಹಾಜರ ಪಡಿಸಿದ ಗಣಕಿಕರಿಸಿದ ಅರ್ಜಿ ಪಡೆದುಕೊಂಡಿದ್ದರ ಸಾರಾಂಶವೇನೆಂದರೆ,ನಾವು ನಮ್ಮೂರ ಬಸ್ಸ ನಿಲ್ದಾಣದಿಂದ ನಮ್ಮ ಮನೆಗೆ ಹೋಗಬೇಕಾದರೆ ನಮ್ಮ ಊರಿನ ಶರಣಪ್ಪ ತಂದೆ ಬಸಪ್ಪ ಕಟ್ಟಿಮನಿ ಇವರ ಮನೆಯ ಮುಂದಿನರಸ್ತೆಯ ಮೇಲೆ ಹಾದು ಹೋಗಲು ರಸ್ತೆ ಇರುತ್ತದೆ. ಇ ಮುಂಚೆ ಬಸ್ಸ ನಿಲ್ದಾಣದಿಂದ ಬರುವ ಸಾರ್ವಜನಿಕ ರಸ್ತೆಯಲ್ಲಿ ಹಾದು ಹೋಗದಂತೆ ಶರಣಪ್ಪ ತಂದೆ ಬಸಪ್ಪ ಕಟ್ಟಿಮನಿ, ಮರಗಪ್ಪ ತಂದೆ ಬಸಪ್ಪ ಕಟ್ಟಿಮನಿ, ಬಸಪ್ಪ ತಂದೆ ಶರಣಪ್ಪ ಕಟ್ಟಿಮನಿ, ಶಾಂತಪ್ಪ ತಂದೆ ಬೀಮಶ್ಯಾ ನಾಗಾವಿ, ಮಲ್ಲಪ್ಪ ತಂದೆ ಶಾಂತಪ್ಪ ನಾಗಾವಿ ಹಾಗೂ ಇನ್ನೂ ಇತರರು ನಮ್ಮೊಂದಿಗೆ ಜಗಳ ಮಾಡುತ್ತಾ ಬಂದಿರುತ್ತಾರೆ.          ಅಲ್ಲದೆ ಇದೆ ದಾರಿಯ ವಿಷಯದಲ್ಲಿಈ ಮುಂಚೆ ನಮ್ಮೋಂದಿಗೆ ಜಗಳ ತಗೆದು ಕೇಸ ಮಾಡಿರುತ್ತಾರೆ. ಹೀಗಿದ್ದು ದಿನಾಂಕ: 03-02-2020 ರಂದು 7-30 ಪಿ.ಎಮ್ ಸುಮಾರಿಗೆ ನಮ್ಮ ಮೈದುನ ಶ್ರೀಮಂತ ಜಕಮಾದಾರ ಹಾಗೂ ಅಳಿಯ ಶ್ರೀಶೈಲ ಜಮಾದಾರ ಇಬ್ಬರೂ ಕೂಡಿಕೊಂಡು ಬಸ್ಸ ನಿಲ್ದಾಣದಿಂದ ನಮ್ಮ ಓಣಿಯ ಕಡೆಗೆ ನಡೆದುಕೊಮಡು ಬರುತ್ತಿರುವಾಗ ಶರಣಪ್ಪ ತಂದೆ ಬಸಪ್ಪ ಕಟ್ಟಿಮನಿ, ಮರಗಪ್ಪ ತಂದೆ ಬಸಪ್ಪ ಕಟ್ಟಿಮನಿ, ಬಸಪ್ಪ ತಂದೆ ಶರಣಪ್ಪ ಕಟ್ಟಿಮನಿ, ಶಾಂತಪ್ಪ ತಂದೆ ಬೀಮಶ್ಯಾ ನಾಗಾವಿ, ಮಲ್ಲಪ್ಪ ತಂದೆ ಶಾಂತಪ್ಪ ನಾಗಾವಿ ಹಾಗೂ ಇನ್ನೂ ಇತರರೂ ಕೂಡಿಕೋಂಡು ಅವಾಚ್ಯವಾಗಿ ಬೈದು ನಮ್ಮ ಮನೆಯ ಮುಂದೆ ಹಾಯ್ದು ಹೋಗ ಬೇಡ ಅಂದರು ಇಲ್ಲೆ ಯಾಕೆ ಹಾಯ್ದು ಹೋಗತ್ತಿರಿ ನಿಮ್ಮ ಸೊಕ್ಕು ಬಹಳ ಆಗಿದೆ, ನಿಮ್ಮನ್ನು ಇವತ್ತು ಕೊಲೆ ಮಾಡುತ್ತೇವೆ ಅಂತಾ ಬೈದಿದ್ದು, ಅಲ್ಲಿಯೇ ಇದ್ದ ನಾನು ಹಾಗು ಮಲ್ಕಪ್ಪ ಜಮಾದಾರ ಇಬ್ಬರೂ ಕೂಡಿಕೊಂಡು ನಮ್ಮ ಮೈದುನ ಶ್ರೀಮಂತ ಜಮಾದಾರ ಮತ್ತು ನಮ್ಮ ಅಳಿಯ ಶ್ರೀಮಂತ ಜಮಾದಾರ ರವರಿಗೆ ನಮ್ಮ ಮನೆಗೆ ಕರೆದುಕೋಂಡು ಬಂದೆವು. ನಂತರ 7-45 ಪಿ.ಎಮ್ ಸುಮಾರಿಗೆ ಶರಣಪ್ಪ ತಂದೆ ಬಸಪ್ಪ ಕಟ್ಟಿಮನಿ, ಮರಗಪ್ಪ ತಂದೆ ಬಸಪ್ಪ ಕಟ್ಟಿಮನಿ, ಬಸಪ್ಪ ತಂದೆ ಶರಣಪ್ಪ ಕಟ್ಟಿಮನಿ, ಶಾಂತಪ್ಪ ತಂದೆ ಭೀಮಶ್ಯಾ ನಾಗಾವಿ, ಮಲ್ಲಪ್ಪ ತಂದೆ ಶಾಂತಪ್ಪ ನಾಗಾವಿ ಹಾಗೂ ಇನ್ನೂ ಇತರರೂ ಗುಂಪುಕಟ್ಟಿಕೊಂಡು ಕೈಯಲ್ಲಿ ಕೊಡಲಿ, ಬಡಿಗೆ ಕಲ್ಲುಗಳೂ ಹಿಡಿದು ನಮ್ಮ ಮನೆಗೆ ಬಂದು ಏ ಸೂಳೆ ಮಗ ಶ್ರೀಮಂತ್ಯಾ ನಮ್ಮ ಮನೆಯ ಮುಂದಿನ ರಸ್ತೆಯಲ್ಲಿ ಹಾದು ಹೋಗಬೇಡ್ರಿ ಅಂದರು ನಮ್ಮ ಮನೆಯ ಮುಂದೆ ಹಾಯುತ್ತಿರಾ ಸೂಳೆ ಮಕ್ಕಳ್ಯಾ ನಿಮ್ಮನ್ನು ಕೊಲೆ ಮಾಡಲು ರಡಿಯಾಗಿ ಬಂದಿದ್ದೆವೆ ಅಂತಾ ಶರಣಪ್ಪ ಕಟ್ಟಿಮನಿ ಇತನು ಬೈದನು, ಆಗ ನಮ್ಮ ಮೈದುನ ಶ್ರೀಮಂತ ಇತನು ನಾವು ನಿಮ್ಮ ರಸ್ತೆಯಲ್ಲಿ ಹಾಯುತ್ತಿಲ್ಲಾ ಸರಕಾರಿ ಸಾರ್ವಜನಿಕ ರಸ್ತೆಯಲ್ಲಿ ಇದೆ ಅಲ್ಲಿ ನಮಗೆ ಹಾಯ್ದು ಹೋಗಲು ಬೇಡವೆಂದರೆ, ನಾವು ಎಲ್ಲಿಂದ ಹಾಯ್ದು ಹೋಗಬೇಕು ಅಂತಾ ಅಂದಾಗ ಮರಗಪ್ಪ ಕಟ್ಟಿಮನಿ ಇತನು ಏ ರಂಡಿ ಮಗನ ಮತ್ತ ಎದರ ಮಾತಾಡ್ತಿಯಾ ಸೂಳೆ ಮಗನಾ ನೀವು ಬದುಕಿದ್ದರೆ ತಾನೆ ರಸ್ತೆಯಲ್ಲಿ ಹಾಯುವದು, ನಿನ್ನನ್ನು ಸದ್ಯ ಕೊಂದು ಬಿಡುತ್ತೇವೆ, ಅಂತಾ ಅಂದವನೆ ತನ್ನ ಕೈಯಲ್ಲಿದ ಕೊಡಲಿಯಿಂದ ಜೋರಾಗಿ ನನ್ನ ಮೈದುನ ಶ್ರೀಮಂತನ ಕುತ್ತಿಗೆ ಮೇಲೆ ಬಿಸಿದನು, ಆಗ ನಮ್ಮ ಮೈದುನ ಹಿಂದಕ್ಕೆ ಸರಿದು ತಪ್ಪಿಸಿಕೊಂಡನು, ಆಗ ಶರಣಪ್ಪ ಕಟ್ಟಿಮನಿ  ಹಾಗೂ ಬಸಪ್ಪ ಕಟ್ಟಿಮನಿ ಇಬ್ಬರೂ ಕೂಡಿಕೊಂಡು ಬಡಿಗೆಯಿಂದ ಶ್ರೀಮಂತನ ಮೈಕೈಗೆ ಹೊಡೆ ಹತ್ತಿದರು, ಆಗ ಬಿಡಿಸಿಕೊಳ್ಳು ಹೋದ ನನಗೆ ಶಾಂತಪ್ಪ ನಾಗಾವಿ ಇತನು ಏ ರಂಡಿ ನಿನ್ನ ತಿಂಡಿ ಬಹಳ ಆದ ಇಲ್ಲೆ ನೆಲಕ್ಕೆ ಕೆಡವಿ ಹಡುತ್ತೇನೆ ರಂಡಿ ಅಂತಾ ಅಂದವನೆ ನನ್ನ ಎದೆಯ ಮೇಲೆ ಸಿರಿ ಹಿಡಿದು ಎಳೆದು ಜಂಪರಕ್ಕೆ ಕೈ ಹಾಕಿ ಜಗ್ಗ ಹತ್ತಿದನು, ಆಗ ನಾನು ನನ್ನ ಜಂಪರ ಹಿಡಿಯ ಬೇಡಪ್ಪ ಹರಿಯುತ್ತದೆ ಅಂದರು ಅಂದರು ಕೇಳದೆ ಬಚಲೆ ಮಾಡಿ ಹಡುತ್ತೇನೆ ಅಂತಾ ಅಂದವನೆ ಜಂಪರ ಹಿಡಿದು ಜಗ್ಗಿ ಜಂಪರ ಹರಿದು ಹಾಕಿದನು, ಆಗ ನನ್ನ ಮಗಳು ನಾಗಮ್ಮ ಬಿಡಿಸಲು ಬಂದರೆ, ಮಲ್ಲಪ್ಪ ಇತನು ನಮ್ಮ ಮಗಳು ನಾಗಮ್ಮ ಇವಳ ಕೈಗೆ ಬಡಿಗೆಯಿಂದ ಹೊಡೆದು ರಕ್ತಗಾಯ ಪಡಿಸಿದನು. ಆಗ ನನ್ನ ಮಗಳು ನಾಗಮ್ಮಳೀಗೆ ಬಿಡಿಸಿಕೊಳ್ಳಲು ಹೋದ ಶ್ರೀಮಂತನಿಗೆ ಶರಣಪ್ಪ ಕಟ್ಟಿಮನಿ ಈತನು ನೆಲಕ್ಕೆ ಕೆಡವಿ ಭುಜಕ್ಕೆ ಮತ್ತು ಮಗ್ಗಲಿಗೆ ಹಲ್ಲಿನಿಂದ ಕಡಿದು ರಕ್ತಗಾಯ ಗೊಳಿಸಿದನು, ಆಗ ನಮ್ಮ ಅಳಿಯ ಶ್ರೀಶೈಲ ಬೀಡಿಸಲು ಹೋದರೆ ಶರಣಪ್ಪ ಕಟ್ಟಿಮನಿ ಹಾಗೂ ಇತರರೂ ಕೂಡಿಕೊಂಡು ಮೈಕೈಗೆ ಕಟ್ಟಿನಿಂದ ಹೊಡೆಯ ಹತ್ತಿದರು, ಆಗ ಅಲ್ಲಿಯೇ ಇದ್ದ ಬೀಮರಾಯ ತಂದೆ ದೌಲಪ್ಪ ಮಾಂಗ, ಮತ್ತು ಮುತ್ತಪ್ಪ ಜಮಾದಾರ ಇಬ್ಬರೂ ಕೂಡಿಕೊಂಡು ನಮಗೆ ಹೊಡೆ ಬಡೆ ಮಾಡುತ್ತಿರುವುದನ್ನು ನೋಡಿ ಬಿಡಿಸಿಕೊಂಡರು, ಇಲ್ಲದಿದ್ದರೆ ನಮಗೆಲ್ಲರಿಗೂ ಇನ್ನೂ ಹೊಡೆ ಬಡೆ ಮಾಡಿ ಕೊಲೆ ಮಾಡಿ ಬಿಡುತಿದ್ದರು, ನಂತರ ಅವರುಗಳು ಹೋಗುವಾಗ ಸೂಳೆ ಮಕ್ಕಳಾ ನಿಮ್ಮನ್ನು ಕೊಲೆ ಮಾಡಿ ಬಿಡುತಿದ್ದೆವು ಸದ್ಯ ಉಳಿದಿರಿ ಇನ್ನೊಮ್ಮೆ ಕೊಲೆ ಮಾಡುವ ವರೆಗೆ ಬಿಡುವುದಿಲ್ಲಾ ಅಂತಾ ಬೈದು, ಮೊದಲು ನಿಮ್ಮ ಮೇಲೆ ಕೇಸ ಮಾಡಿದರು ಬುದ್ದಿ ಬಂದಿಲ್ಲಾ ನಿಮಗೆ ನಾವು ಮತ್ತೆ ಕೇಸ ಮಾಡುತ್ತೇವೆ ಅಂತಾ ಬೈಯುತ್ತಾ ಹೋದರು. ನಂತರ ನನ್ನ ಗಂಡನಾದ ಮೈಲಾರಿ ಇತನು ಮನೆಗೆ ಬಂದ ನಂತರ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಬಂದು ಸೇರಿಕೆ ಆಗಿ ಉಪಚಾರ ಪಡೆಯುತಿದ್ದು ನನ್ನ ಗಂಡ ಟೈಪ ಮಾಡಿಸಿಕೊಂಡು ಬಂದು ಅರ್ಜಿಯ ಮೇಲೆ ಸಹಿ ಮಾಡಿ ದೂರು ಸಲ್ಲಿಸುತಿದ್ದೆನೆ. ಕಾರಣ ಸರಕಾರಿ ಸಾರ್ವಜನಿಕ ರಸ್ತೆಯಲ್ಲಿ ನಮಗೆ ತಿರುಗಾಡದಂತೆ ಜಗಳ ತಗೆದು ಅವಾಚ್ಯವಾಗಿ ಬೈದು ಕೊಡಲಿ. ಬಡಿಗೆ ಮತ್ತು ಕಲ್ಲುಗಳಿಂದ ಹೊಡೆದು ರಕ್ತಗಾಯ ಮತ್ತು ಗುಪ್ತಗಾಯ ಪಡಿಸಿ ಕೊಲೆ ಮಾಡಲು ಪ್ರಯತ್ನಿಸಿ ನನಗೆ ಮಾನ ಭಂಗ ಮಾಡಲು ಬಂದವರ ಮೇಲೆ ಕಾನೂನು ಕ್ರಮ ಕೈಕೊಳ್ಳಬೆಕೆಂದು ಇತ್ಯಾದ ಅರ್ಜಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 21/2020 ಕಲಂ: 143,147,148,341,323,324,354, 307, 504,506,ಸಂಗಡ 149 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲ ಮಾಡಿಕೊಂಡು ಬಗ್ಗೆ ವರದಿ.                     
                                                

BIDAR DISTRICT DAILY CRIME UPDATE 08-02-2020


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 08-02-2020

ಔರಾದ(ಬಿ) ಪೊಲೀಸ್ ಠಾಣೆ ಅಪರಾಧ ಸಂ. 14/2020, ಕಲಂ. 279, 304(ಎ) ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 07-02-2020 ರಂದು ಸೂರ್ಯಕಾಂತ ತಂದೆ ಚಂದ್ರಪ್ಪಾ ಹೊಸದೊಡ್ಡೆ ಸಾ: ಖಾನಾಪೂರ(ಕೆ) ರವರ ಮಗನಾದ ಅನಿಲ ಇತನು ಔರಾದ ಎಪಿಎಂಸಿ ಕ್ರಾಸ ಕಡೆಯಿಂದ ಮೊಟಾರ ಸೈಕಲ್ ನಂ. ಕೆಎ-38/ಆರ್-3825 ನೇದನ್ನು ಚಲಾಯಿಸಿಕೋಂಡು ಔರಾದ ಬಸ್ಸ ನಿಲ್ದಾಣದ ಕಡೆಗೆ ಹೋಗುವಾಗ ಪಟ್ನೆ ಪ್ರೀಂಟರ್ಸ ಹತ್ತಿರ ಹಿಂದಿನಿಂದ ಟ್ರ್ಯಾಕ್ಟರವೊಂದರ ಚಾಲಕನಾದ ಆರೋಪಿ ಪ್ರಕಾಶ ತಂದೆ ಯಲ್ಲಪ್ಪ್ಆ ಪವರ, ಸಾ: ಔರಾದ(ಬಿ) ಇತನು ತನ್ನ ಟ್ರ್ಯಾಕ್ಟರನ್ನು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಹಿಂದಿನಿಂದ ಡಿಕ್ಕಿ ಹೊಡೆದಾಗ ಮೊಟಾರ ಸೈಕಲ್ ಸಮೇತ ರೋಡಿನ ಮೇಲೆ ಬಿದ್ದಾಗ ಟ್ರ್ಯಾಕ್ಟರ ಟ್ರ್ಯಾಲಿಯ ಹಿಂದಿನ ಗಾಲಿಯು ಅನಿಲ ಇತನ ದೇಹದ ಮೇಲಿಂದ ಹಾದು ಹೋಗಿದ್ದರಿಂದ ಎದೆಗೆ ಭಾರಿ ರಕ್ತಗುಪ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಜನವಾಡಾ ಪೊಲೀಸ್ ಠಾಣೆ ಅಪರಾಧ ಸಂ. 08/2020, ಕಲಂ. 379 ಐಪಿಸಿ :-
ದಿನಾಂಕ 22-12-2019 ರಂದು 1400 ಗಂಟೆಯಿಂದ ದಿನಾಂಕ 25-12-2019 ರಂದು 1330 ಗಂಟೆಯ ಧ್ಯಾವಧಿಯಲ್ಲಿ ಪಿüರ್ಯಾದಿ ಹಮ್ಮದ ಮುಬೀನ್ ತಂದೆ ಬಾಬುಮಿಯ್ಯಾ ಅಲಿಯಾಬಾದವಾಲೆ ಸಾ: ಆಣದೂರ ಗ್ರಾಮ, ತಾ: ಜಿ: ಬೀದರ ರವರು ತನ್ನ ಅಶೋಕ ಲಿಲ್ಯಾಂಡ್ ಲಾರಿ ನಂ. ಆರ್.ಜೆ-14/ಜಿ.ಸಿ-6565 .ಕಿ 5,50,000/- ರೂ. ನೇದನ್ನು ತಮ್ಮೂರಿನಲ್ಲಿ ತಮ್ಮ ನೆಯ ತ್ತಿರ ಇರುವ ರಾಜಕುಮಾರ ಅಗರವಾಲ ಸಾ: ಬೀದರ ರವರ ಖುಲ್ಲಾ ಜಾಗದಲ್ಲಿ ನಿಲ್ಲಿಸಿದ ದರಿ ಲಾರಿಯನ್ನು ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ, ಎಲ್ಲಾ ಕಡೆಗೆ ಹುಡುಕಾಡಿದರೂ ಸಹ ದರಿ ಲಾರಿ ಸಿಕ್ಕಿರುವುದಿಲ್ಲ ಅಂತ ಕೊಟ್ಟ ಪಿüರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 07-02-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಧನ್ನೂರಾ ಪೊಲೀಸ್ ಠಾಣೆ ಅಪರಾಧ ಸಂ. 23/2020, ಕಲಂ. 279, 337, 338 ಐಪಿಸಿ :-
ದಿನಾಂಕ 06-02-2020 ರಂದು ಫಿರ್ಯಾದಿ ಖಾಜಾ ಮೈನೊದ್ದಿನ ತಂದೆ ಶಬ್ಬಿರ ಮಿಯಾ ಮಚಕುರಿ ವಯ: 30 ವರ್ಷ, ಜಾತಿ: ಮುಸ್ಲಿಂ, ಸಾ: ಹರನಾಳ, ತಾ: ಭಾಲ್ಕಿ ರವರು ತಾನು ಕೆಲಸ ಮಾಡುವ ಸೊಲಾರ ಅಂಗಿಯ ಮಾಲಿಕ ಶಿವಕುಮಾರ ರಾಜೊಳೆ ಹಾಗು ಅನಿಲಕುಮಾರ ಸಿಕೆನಪೂರೆ ಎಲ್ಲರೂ ಹೈದ್ರಾಬಾದದಲ್ಲಿ ಒಬ್ಬ ವ್ಯಾಪಾರಸ್ಥರ ಹತ್ತಿರ ಮ್ಮ ಸೊಲಾರ ವ್ಯಾಪಾರಕ್ಕೆ ಸಂಬಂಧಿಸಿದಂತೆ ಮಾತನಾಡಲು ಶಿವಕುಮಾರ ಇವರ 20 ಕಾರ ನಂ. ಕೆಎ-56/ಎಮ್-0831 ನೇದರಲ್ಲಿ ಹೈದ್ರಾಬಾದಗೆ ಹೋಗಿ ಹೈದ್ರಾಬಾದದಲ್ಲಿ ಮ್ಮ ಕೆಲಸ ಮುಗಿಸಿಕೊಂಡು ಮರಳಿ ಬರುವಾಗ ಸದರಿ ಕಾರನ್ನು ಅನೀಲಕುಮಾರ ಸಿಕೆನಪೂರೆ ಇವರು ಚಲಾಯಿಸಿಕೊಂಡು ದಿನಾಂಕ 07-02-2020 ರಂದು 0345 ಗಂಟೆ ಸುಮಾರಿಗೆ ಬೀದರ-ಭಾಲ್ಕಿ ರಸ್ತೆಯ ತರನಳ್ಳಿ ಕ್ರಾಸ್ ದಾಟಿ ಸ್ವಲ್ಪ ಮುಂದೆ ಕೊನಮೆಳಕುಂದಾ ಗ್ರಾಮ ಶಿವಾರದ ನಾಮದೇವ ಮೆತ್ರೆ ಇವರ ಹೊಲದ ಹತ್ತಿರ ಹೊದಾಗ ಅನಿಕುಮಾರ ಸಿಕೆನಪೂರೆ ಇವರು ಸದರಿ ಕಾರನ್ನು ಅತೀವೇಗ ಮತ್ತು ನಿಸ್ಕಾಳಜಿಯಿಂದ ಅಡ್ಡತಿಡ್ಡವಾಗಿ ಚಲಾಯಿಸಿ ಕಾರ ಹತೊಟಿಯಲ್ಲಿ ಇಟ್ಟುಕೊಳ್ಳದೆ ರಸ್ತೆಯ ಬದಿಯಲ್ಲಿನ ತಗ್ಗಿನಲ್ಲಿ ಹೊಗಿ ಕಾರ ಪಲ್ಟಿ ಮಾಡಿರುತ್ತಾನೆ, ಸದರಿ ಅಪಘಾತದಿಂದ ಫಿರ್ಯಾದಿಯ ಹಣೆಯ ಮೇಲೆ ರಕ್ತಗಾಯ, ಎಡಗೈ ಮೊಳಕೈ ಮೇಲೆ ತರಚಿದ ಗಾಯ, ಎದೆಯಲ್ಲಿ, ಎಡಗೈ ಮಣಿಕಟ್ಟಿನ ಹತ್ತಿರ ಮತ್ತು ಎಡಗಾಲಿನ ಮೊಳಕಾಲ ಮೇಲೆ ಗುಪ್ತಗಾಯವಾಗಿರುತ್ತದೆ, ಮಾಲಿಕ ಶಿವಕುಮಾರ ರಾಜೊಳೆ ಇವರಿಗೆ ಎಡಗಾಲ ಕಾಲುಗಣ್ಣಿನ ಹತ್ತಿರ ಭಾರಿ ರಕ್ತಗಾಯವಾಗಿ ಮೊಳೆ ಮುರಿದಿರುತ್ತದೆ, ಬಲಗೈ ಮುಂಗೈ ಹತ್ತಿರ ಬೆರಳುಗಳ ಮೇಲೆ ತರಚಿದ ರಕ್ತಗಾಯ, ಸೊಂಟದಲ್ಲಿ ಗುಪ್ತಗಾಯ, ಕೆಳಗಿನ ತುಟಿ ಮೇಲೆ ರಕ್ತಗಾಯವಾಗಿ ಮೂಗಿನಿಂದ ರಕ್ತ ಬಂದಿರುತ್ತದೆ, ಕಾರ ಚಾಲಕ ಆರೋಪಿ ಅನೀಲಕುಮಾರ ಇವರಿಗೆ ತಲೆಯ ಎಡಭಾಗದಲ್ಲಿ ರಕ್ತಗಾಯ, ಸೊಂಟದಲ್ಲಿ ಗುಪ್ತಗಾಯ ಮತ್ತು ಎಡಗಾಲಿನ ಮೊಳಕಾಲ ಮೇಲೆ ರಕ್ತಗಾಯವಾಗಿರುತ್ತದೆ, ನಂತರ ಅನೀಲಕುಮಾರ ಇವರು 108 ಅಂಬುಲೆನ್ಸಗೆ ಕರೆ ಮಾಡಿ ಕರೆಯಿಸಿ ಅದರಲ್ಲಿ ಎಲ್ಲರೂ ಬೀದರದ ಗುರು ನಾನಕ ಆಸ್ಪತ್ರೆಗೆ ಬಂದು ಚಿಕಿತ್ಸೆ ಕುರಿತು ದಾಖಲಾಗಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.