ಗುಲಬರ್ಗಾ
ಗ್ರಾಮೀಣ ವೃತ್ತದ ಪೊಲೀಸ್ ಅಧಿಕಾರಿಗಳ ಕಾರ್ಯಚರಣೆ,
ಕೊಲೆ ಪ್ರಕರಣದ
ಆರೋಪಿಗಳ ಬಂದನ.
ದಿನಾಂಕ:22/03/2012 ರಂದು ಮಹಾಗಾಂವ ಪೊಲೀಸ ಠಾಣೆಯಲ್ಲಿ
ಶ್ರೀ ಬಸವರಾಜ ಭೂತಪೂರ ಇವರು ತನ್ನ ಮಗನಾದ ಶಶಿಕುಮಾರ
ಹೈಸ್ಕೂಲ ಶಿಕ್ಷಕನಿಗೆ ಯಾರೋ ಅಪರಿಚಿತ ವ್ಯಕ್ತಿಗಳು ಅವನ ಕುತ್ತಿಗೆಗೆ ವೈರ ಬಿಗಿದು ಕೊಲೆ
ಮಾಡಿ ಶಶಿಕುಮಾರನ ಶವ ನಾಗೂರ ಗ್ರಾಮದ ಹಳ್ಳದಲ್ಲಿ ಬಿಸಾಕಿರುವರೆಂದು ಅರ್ಜಿ ಸಲ್ಲಿಸಿದ ಮೇರೆಗೆ ಠಾಣೆ
ಗುನ್ನೆ ನಂ 29/2012 ಕಲಂ 302, 201 ಐಪಿಸಿ ಪ್ರಕರಣ ದಾಖಲಾಗಿದ್ದು
ಸದರಿ ಪ್ರಕರಣದಲ್ಲಿ ಮಾನ್ಯ ಎಸ.ಪಿ ಸಾಹೇಬರು ಗುಲಬರ್ಗಾ, ಮಾನ್ಯ ಹೆಚ್ಚುವರಿ ಎಸ.ಪಿ ಗುಲಬರ್ಗಾ
ಹಾಗೂ ಡಿವೈಎಸ್ಪಿ ಗ್ರಾಮೀಣ ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ ಕೊಲೆಯಾದ ಶಶಿಕುಮಾರನ ಮೊಬೈಲನು ಆರೋಪಿತರು
ದೋಚಿಕೊಂಡು ಹೋದ ಮೇರೆಗೆ ಸದರಿ ಮೋಬೈಲನ್ನು ಆಧರಸಿ ಶ್ರೀಮತಿ ವಿಜಯಲಕ್ಷ್ಮಿ ಸಿಪಿಐ ಗ್ರಾಮೀಣ ವೃತ್ತ ಗುಲಬರ್ಗಾ ರವರು, ಮತ್ತು ಶ್ರೀ ಶಾಂತಿನಾಥ ಪಿಎಸ್ಐ ಕಮಲಾಪೂರ, ಶ್ರೀ ಆನಂದರಾವ
ಎಸ್ ಎನ್ ಪಿಎಸ್ಐ ಗುಲಬರ್ಗಾ ಗ್ರಾಮೀಣ ಠಾಣೆ, ಶ್ರೀ ಹೆಚ್, ಆರ್, ನಡುಗಡ್ಡಿ ಪಿಎಸ್ಐ ಮಹಾಗಾಂವ
ಪೊಲೀಸ ಠಾಣೆ, ಹಾಗೂ ಸಿಬ್ಬಂದಿಯವರಾದ ಮಹಾದೇವ ಎಎಸ್ಐ, ಪ್ರಭುಲಿಂಗ,ಸೂರ್ಯಕಾಂತ ಮುಖ್ಯ
ಪೇದೆ, ಪೇದೆಗಳಾದ ಖಂಡೇರಾವ, ಯಶವಂತ, ದತ್ತಾತ್ರೇಯ ಹುಸೇನಬಾಷಾ, ರಾಜಕುಮಾರ, ಆನಂದ, ವಾಹನ ಚಾಲಕ ರಾದ ಬಂಡೆಪ್ಪ, ಮಲ್ಲಿಕಾರ್ಜುನರವರನೊಳಗೊಂಡ ತಂಡದೊಂದಿಗೆ
ಹಾಗೂ ತನಿಖೆಗೆ ವೈಜ್ಞಾನಿಕವಾಗಿ ಸಹಾಯ ನೀಡಿ
ಪ್ರಕರಣದ ಪತ್ತೆಗೆ ಸಹಾಯ ಮಾಡಿದ ಅಧಿಕಾರಿ ಮತ್ತು ಸಿಬ್ಬಂದಿಯವರಾದ ಶ್ರೀ ಬಿ, ಬಿ, ಪಟೇಲ ಪಿಐ ಡಿಸಿಐಬಿ ಸಿಬ್ಬಂದಿಯವರಾದ
ಗಂಗಯ್ಯ, ಚನ್ನವೀರ, ಭಿಮಾಶಂಕರ ಇವರುಗಳ ಸಹಾಯದಿಂದ
ಕೊಲೆಗಾರರನ್ನು ಪತ್ತೆ ಹಚ್ಚಿ ದಸ್ತಗಿರಿ ಮಾಡಿ ವಿಚಾರಿಸಿದಾಗ ಕೊಲೆಗೈದ ಆರೋಪಿತರಾದ 1) ಸಾತಲಿಂಗ ತಂದೆ ಬಸವರಾಜ ವ: 28 ವರ್ಷ ಸಾ: ಗುಲಬರ್ಗಾ ಇವನು
ಮೃತನ ಹೆಂಡತಿ ಮೇಲೆ ಕೆಟ್ಟ ದೃಷ್ಠಿ ಬೀರಿದವನು. 2) ನಾಗರಾಜ ತಂದೆ ಚನ್ನಬಸಪ್ಪ ವ: 23 ವರ್ಷ ಸಾ: ಗುಲಬರ್ಗಾ ಇತನು ಮೃತನಿಂದ ಸಾಲ ಪಡೆದು 20 ಸಾವಿರ ರೂಪಾಯಿ
ಮರಳಿ ಕೊಡಬಾರದು ಅನ್ನುವ ಉದ್ದೇಶ ಹೊಂದಿದ್ದು. 3) ಶರಣು ತಂದೆ ಮಾಹಾಂತಯ್ಯ ವ: 21 ಸಾ: ಗುಲಬರ್ಗಾ ಇವನು ಮೃತನ ಮೈಮೇಲಿನ ಬಂಗಾರದ ಲಾಕೇಟು ಹಾಗೂ ಉಂಗುರ ದೋಚಲು
ಉದ್ದೇಶ ಹೊಂದಿ ಸದರಿಯವರು ಗೆಳೆತನದೊಂದಿಗೆ ಇದ್ದು ಮೃತ ಶಶಿಕುಮಾರನಿಗೆ ದಿನಾಂಕ:20-03-2012 ರಂದು
ಪುಸಲಾಯಿಸಿ ಟಾಟಾ ಸುಮೋ ವಿಕ್ಟಾ ಸಂಖ್ಯೆ ಕೆಎ-32 ಎಮ್-6099 ನೇದ್ದರಲ್ಲಿ ಕರೆದುಕೊಂಡು ಹೋಗಿ ಬ್ರೇಕ
ವೈರದಿಂದ ಕುತ್ತಿಗೆಗೆ ಬಿಗಿದು ಕೊಲೆ ಮಾಡಿ ಆತನ ಮೈಮೇಲಿನ ಬಂಗಾರದ ಲಾಕೇಟ ಉಂಗುರ ಮೊಬೈಲಗಳನ್ನು ದೋಚಿಕೊಂಡು
ಹೋಗಿ ಸಾಕ್ಷಿ ಪುರಾವೆ ನಾಶ ಮಾಡಲು ಶವವನ್ನು ನಾಗೂರ
ಹಳ್ಳದಲ್ಲಿ ಬಿಸಾಕಿರುತ್ತಾರೆ.ಸದರಿ ಆರೋಪಿತರಿಗೆ
ದಸ್ತಗಿರಿ ಮಾಡಿ ಅವರಿಂದ ಕೃತ್ಯಕ್ಕೆ ಉಪಯೋಗಿಸಿದ ಟಾಟಾ ಸುಮೋ ವಿಕ್ಟಾ ವಾಹನ ಹಾಗೂ ಬ್ರೇಕ ವೈರ, ಮೃತ ಶಶಿಕುಮಾರನಿಂದ ದೋಚಲಾಗಿರುವ
ಬಂಗಾರದ ಲಾಕೇಟ, ಉಂಗುರ, ಮೋಬೈಲ ಜಪ್ತಿ ಪಡಿಸಿಕೊಂಡು ಆರೋಪಿತರಿಗೆ
ನ್ಯಾಯಾಂಗ ಬಂಧನ ಕುರಿತು ಕಳಿಸಲಾಗಿದೆ. ಸದರಿ ಪತ್ತೆದಳ ತಂಡದ ಕಾರ್ಯಕ್ಕೆ ಮೇಲಾಧಿಕಾರಿಯವರು ಪ್ರಶಂಶಿಸಿರುತ್ತಾರೆ.
ಕಳ್ಳತನ
ಪ್ರಕರಣ:
ಅಶೋಕ
ನಗರ ಪೊಲೀಸ್ ಠಾಣೆ: ಶ್ರೀ ರಾಜಶೇಖರ ತಂದೆ ಮಹಾಂತಗೌಡ ಬಿರಾದಾರ ಸಾ|| ಗೊದುತಾಯಿ ನಗರ ಗುಲಬರ್ಗಾ
ರವರು ನಾನು
ಎಸ್.ವಿ ಬಂದಿ ಎನ್ನುವವರ ಮನೆಯಲ್ಲಿ 2.1/2 ವರ್ಷದಿಂದ ಮೊದಲನೆ ಮಹಡಿಯಲ್ಲಿ
ಬಾಡಿಗೆಯಿಂದ ವಾಸವಾಗಿದ್ದು ದಿನಾಂಕ:23/08/2012 ರಂದು ರಾತ್ರಿ ಮನೆಯರೆಲ್ಲರೂ
ಊಟ ಮಾಡಿಕೊಂಡು
ಮಲಗಿದ್ದು, ಸದರಿ ದಿನದಂದು ಲೈಟು ಹೋಗಿ ಬಂದು ತೊಂದರೆ ಮಾಡುತ್ತಿದ್ದರಿಂದ
ಮನೆಯ ಮುಖ್ಯ ಬಾಗಿಲು ಸ್ವಲ್ಪ ತೆರೆದಿಟ್ಟುದ್ದು ಕೊಂಡಿ ಹಾಕಿರಲಿಲ್ಲ. ಇದನ್ನು ಯಾರೋ ಗಮನಿಸಿ ದಿನಾಂಕ
24/08/2012 ರ ಬೆಳಗಿನ ಜಾವ 4-15
ರಿಂದ 5-15 ರ ಮಧ್ಯದ
ಅವಧಿಯಲ್ಲಿ ನಮ್ಮ ಮನೆಯ ಮೊದಲನೆ ಮಹಡಿಗೆ ಬರಲು ಎಣಿ ತಂದು ಮಾಲಿಕರ ಮನೆಯ ಹತ್ತಿರ ಹಚ್ಚಿ
ಮೇಲೆ ಬಂದು ನಮ್ಮ ಮನೆಯಲ್ಲಿ ನೋಕಿಯಾ ಸಿ-3 ಮೊಬೈಲ ಐ.ಎಂ.ಇ.ಐ ನಂ. 351984041925785,ನೋಕಿಯಾ
ಎಕ್ಸ - 2
ಅದರಲ್ಲಿ 9591033345
ಸಿಮ್,ನೋಕಿಯಾ ಸಿ-2 06,ನೋಕಿಯಾ
ಸಿ–1,
ಮೊಬೈಲ
ಅದರಲ್ಲಿ ಸಿಮ್ 8867012938, ಹೆಚ್.ಎಂ.ಟಿ ಕೈ ಗಡಿಯಾರ ಅ.ಕಿ 700/- ಹಾಗೂ ನಗದು ಹಣ 11500/- ರೂ. ಹೀಗೆ ಒಟ್ಟು ನಾಲ್ಕು
ಮೊಬೈಲ ಸೆಟಗಳು ಒಟ್ಟು 19000/-
ರೂ. ಅಂದಾಜು
ಬೆಲೆಯ ವಸ್ತುಗಳು ಕಳುವಾಗಿರುತ್ತವೆ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ. 75/2012 ಕಲಂ 457, 380 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಕೊಂಡಿರುತ್ತಾರೆ.