ಧನ್ನೂರಾ ಪೊಲೀಸ್ ಠಾಣೆ ಗುನ್ನೆ ನಂ. 127/12 ಕಲಂ 279, 337, 338 ಐಪಿಸಿ :-
ದಿ:22/08/2012 ರಂದು ಫಿರ್ಯಾದಿ ಶ್ರೀ ನಿವರ್ತಿ ತಂದೆ ರಾಜಾರಾಮ ಜಾದವ, 41 ವರ್ಷ ರವರು ತನ್ನ ತಂದೆ
ರಾಜಾರಾಮ ಇವರು ಅನಾರೋಗ್ಯ ಇದ್ದ ಕಾರಣ ಉದಗೀರ ಜ್ಞಾನೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು
ಅವರನ್ನು ನೋಡಲು ಫಿರ್ಯಾದಿ ಹಾಗು ಅಶೋಕ ತಂದೆ ರಾಮರಾವ ನಯಕೊಡೆ ಸಾ/ ಇಳೆಗಾಂವ ಸದ್ಯ ಹೈದ್ರಾಬಾದ ಇಬ್ಬರೂ
ಜೊತೆಗೂಡಿ ಹೋಗುವಾಗ ಫಿರ್ಯಾದಿ ಕಾರ ಚಾಲಕನು ವಾಹಾನ ಅತಿವೇಗ ಹಾಗು ನಿಷ್ಕಾಳಜೀತನದಿಂದ ನಡೆಸಿಕೊಂಡು
ಬಂದು ಬೀದರ ಉದಗೀರ ರೋಡಿನ ಹುಪಳಾ ಗ್ರಾಮದ ಹತ್ತಿರ 1900 ಗಂಟೆ ಸುಮಾರಿಗೆ ಪಲ್ಟಿ ಮಾಡಿರುತ್ತಾನೆ. ಪಲ್ಟಿಯ
ಪರಿಣಾಮ ಫಿರ್ಯಾದಿಗೆ ತಲೆಗೆ ತುಟಿಗೆ, ಮುಗಿಗೆ, ರಕ್ತಗಾಯ, ಎದೆಗೆ ಗುಪ್ತಗಾಯ ಬಲಕಾಲಿಗೆ ಭಾರಿ ಗುಪ್ತಗಾಯವಾಗಿರುತ್ತದೆ. ಅಶೋಕ ಇತನಿಗೆ
ತುಟಿಗೆ ರಕ್ತಗಾಯ ಸೊಂಟಕ್ಕೆ ಗುಪ್ತಗಾಯವಾಗಿರುತ್ತದೆ.
ಮತ್ತು ಚಾಲಕ ಪ್ರಕಾಶ ಇತನಿಗೆ ಸೊಂಟಕ್ಕೆ ಗುಪ್ತಗಾಯ ಹಾಗು ರಕ್ತಗಾಯವಾಗಿರುತ್ತದೆ. ಅಂತ ದಿ:
23-08-2012 ರಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ
ಬೇಮಳಖೇಡಾ ಪೊಲೀಸ ಠಾಣೆ ಗುನ್ನೆ ನಂ 61/2012 ಕಲಂ 279 ಐ.ಪಿ.ಸಿ ಜೊತೆ 187 ಐ.ಎಮ್.ವಿ.ಎಕ್ಟ :-
ದಿನಾಂಕ: 23-08-2012 ರಂದು 1030 ಗಂಟೆಗೆ ವಸಂತ ತಂದೆ ಮಾರುತಿರಾವ ಕಲವಾಡಿ ರವರು ನೀಡಿದ ದೂರಿನ ಸಾರಾಂಶವೆನೆಂದರೆ
ದಿನಾಂಕ 21-08-2012 ರಾತ್ರಿ 2130 ಗಂಟೆಗೆ ರಾ.ಹೆ ನಂ 9 ರ ರೋಡ ಮೇಲೆ ಸೈಯದ ವಾಜೀದ ತಂದೆ ಸೈಯದ ಮುಬಾರಕ ಹಾಗೂ ಗೂಡ್ಸ ಲಾರಿ ನಂ ಎ.ಪಿ-23 ವಯ್ 3286 ನೇದ್ದರ ಚಾಲಕ ವಿಜಯಕುಮಾರ
ತಂದೆ ವೀರಶೇಟ್ಟಿ ಇತನು ಜಹೀರಾಬಾದದಿಂದ ಮನ್ನಾಎಖೇಳ್ಳಿ ಕಡೆಗೆ ಬರುವಾಗ ಭಂಗೂರ ಚಕ ಪೋಸ್ಟ ಹತ್ತಿರ
ತನ್ನ ವಾಹನವನ್ನು ಅತೀ ವೇಗ ಹಾಗೂ ನಿಷ್ಕಾಳಜಿತನದಿಂದ
ಚಲಾಯಿಸಿಕೊಂಡು ಬಂದಿದರಿಂದ ರೋಡಿನ ಬಲಗಡೆ ಹೋಗಿ ರೋಡಿನ ಕೆಳಗೆ ಉರುಳಿ ಬಿದ್ದು ಲುಕ್ಸಾನ
ಆಗಿರುತ್ತದೆ ಚಾಲಕ ವಾಹನ ಬಿಟ್ಟು ಹೋಗಿರುತ್ತಾನೆ ಅಂತಾ ತಿಳಿಸಿದ ಮೇರೆಗೆ ಫಿರ್ಯಾದಿ ದಿನಾಂಕ 23-08-2012 ರಂದು ಹೃದ್ರಾಬಾದದಿಂದ
ಘಟನೆ ಸ್ಥಳಕ್ಕೆ ಬಂದು ವಾಹನ ಬಿದ್ದಿದು ನೋಡಿ ಠಾಣೆಗೆ ಬಂದು ನೀಡಿರುವ ಫಿಯರ್ದಿನ ಮೇಲೆ ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
ಭಾಲ್ಕಿ ಗ್ರಾಮೀಣ ಠಾಣೆ ಗುನ್ನೆ ನಂ. 97/12 ಕಲಂ 380
ಐಪಿಸಿ :-
ದಿನಾಂಕ 24-08-2012 ರಂದು 1100 ಗಂಟೆಗೆ ಫಿರ್ಯಾದಿ ದತ್ತು ಕುಮಾರ ತಂದೆ ಮಲ್ಲಿಕಾರ್ಜುನ ಕುಡತೆ ವಯ 33
ವರ್ಷ ಜಾತಿ ಲಿಂಗಾಯತ
ಉದ್ಯೋಗ ಒಕ್ಕಲುತನ ಸಾ: ಭಾಲ್ಕಿ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ದಿ: 24-08-2012
ರ ರಾತ್ರಿ ಸಮಯದಲ್ಲಿ
ಅಂದರೆ 0215 ಗಂಟೆಯಿಂದ 0240 ಗಂಟೆಯ ಅವಧಿಯಲ್ಲಿ ಯಾರೋ ಕಳ್ಳರು ಫಿರ್ಯಾದಿ ಮತ್ತು
ಅವರ ಕುಟುಂಬದವರೆಲ್ಲರೂ ಮಲಗಿದಾಗ ಅವರ ಮನೆಗೆ ಅಕ್ರಮವಾಗಿ ಪ್ರವೇಶ ಮಾಡಿ ಮನೆಯಲ್ಲಿದ್ದ ಮೈಕ್ರೋಮೆಕ್ಸ್
ಮೋಬೈಲ್ ಅಂ.ಕಿ. 2000 ರೂ. ಮತ್ತು ಸೋನಾಟಾ ಕಂಪೆನಿ ವಾಚ್ ಅಂ.ಕಿ. 1000, ಅವರ ತಾಯಿ ಕಮಳಾಬಾಯಿ ಕುಡತೆ ಇವರ ಕೋರಳಲ್ಲಿದ್ದ
1 ತೋಲೆ ಬಂಗಾರದ ಲಾಕೆಟ್
ಅಂ.ಕಿ. 20,000/-, ತಂಗಿಯಾದ ಜ್ಯೋತಿ ರವರ ಕೋರಳಲ್ಲಿದ್ದ 5 ತೊಲೆ ಬಂಗಾರದ ಗಂಟನ್ ಅಂ.ಕಿ. 60,000/- ಹಾಗೂ ಜೆಬಿನಲ್ಲಿದ್ದ 20,000/- ಮತ್ತು ಮನೆಯ ಹೋರಗಡೆ
ನಿಲ್ಲಿಸಿದ್ದ ಮೋಟಾರ ಸೈಕಲ್ ಅಂ.ಕಿ. 20,000/- ಹೀಗೆ ಒಟ್ಟು 1,31.000/- ರೂ. ನೇದ್ದನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ
ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನೀಖೆ ಕೈಗೋಳ್ಳಲಾಗಿದೆ.
No comments:
Post a Comment