Police Bhavan Kalaburagi

Police Bhavan Kalaburagi

Tuesday, April 10, 2018

Yadgir District Reported Crimes Updated on 10-04-2018


                                          Yadgir District Reported Crimes
ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ ;- 81/2018 ಕಲಂ:  87 ಕೆ.ಪಿ ಎಕ್ಟ್ 1963;- ದಿನಾಂಕ;08.04.2018 ರಂದು 6-30 ಪಿಎಮ್ಮ ಕ್ಕೆ ಮಾನ್ಯ ಸಿ.ಪಿ.ಐ ಸಾಹೇಬರು ಯಾದಗಿರಿ ರವರು ಆರೋಪಿ ಮತ್ತು ಮುದ್ದೆಮಾಲಿನೊಂದಿಗೆ ಠಾಣೆಗೆ ಬಂದು ಜ್ಞಾಪನ ಪತ್ರವನ್ನು ಒಪ್ಪಿಸಿದ್ದರ ಸಾರಾಂಶವೆನೆಂದರೆ,ಇಂದು ದಿನಾಂಕ: 08.04.2018  ರಂದು ಸಾಯಂಕಾಲ 4-30 ಗಂಟೆಯ ಸುಮಾರಿಗೆ ಯಾದಗಿರಿ ನಗರದ ಗಂಜ ಏರಿಯಾದಲ್ಲಿನ ಆತ್ಮಲಿಂಗೇಶ್ವರ ದೇವಸ್ಥಾನದ ಮುಂದುಗಡೆ ರಸ್ತೆಯ ಆಚೆಯಲ್ಲಿನ ಸಾರ್ವಜನಿಕ ಸ್ಥಳದ ಖುಲ್ಲಾ ಜಾಗೆಯಲ್ಲಿ ಕೆಲವರು ಇಸ್ಪೀಟ ಜೂಜಾಟದಲ್ಲಿ ತೊಡಗಿದ ಬಗ್ಗೆ ಮಾಹಿತಿ ಬಂದಿದ್ದು ಖಚಿತ ಭಾತ್ಮೀ ಮೇರೆಗೆ ನಾನು ಮತ್ತು ಸಿಬ್ಬಂದಿಯವರು ಹಾಗೂ ಪಂಚರು ಕೂಡಿಕೊಂಡು ಹೋಗಿ 5-00 ಪಿಎಂಕ್ಕೆ ದಾಳಿ ಮಾಡಿ ಹಿಡಿದು ವಿಚಾರಿಸಲಾಗಿ ಸದರಿಯವರು ತಮ್ಮ ಹೆಸರುಗಳು ಒಬ್ಬಬ್ಬರಾಗಿ 1) ಮಹೇಶ ತಂದೆ ಹಣಮಂತ ಬಂದಳ್ಳಿ ವ;30 ಜಾ; ಮೇಧ ಉ; ಕಟ್ಟಿಗೆ ಅಡ್ಡೆ ಕೆಲಸ ಸಾ; ಗಂಜ ಏರಿಯಾ ಯಾದಗಿರಿ 2) ಶ್ರೀನಿವಾಸ ತಂದೆ ಹಣಮಂತ ಮೇಧ ವ; 35 ಜಾ; ಮೇಧ ಉ; ಕೂಲಿ ಸಾ; ಗಂಜ ಏರಿಯಾ ಯಾದಗಿರಿ 3) ಮಲ್ಲಿಕಾಜರ್ುನ ತಂದೆ ಅಯ್ಯಣ್ಣ ಅಂಬಿಗೇರ ವ;50 ಉ; ಚಾಲಕ ಸಾ; ಮೈಲಾಪೂರ ಅಗಸಿ ಯಾದಗಿರಿ 4) ನಾರಾಯಣ ತಂದೆ ರಾಮಲಿಂಗಪ್ಪ ಬಡಿಗೇರ ವ; 28 ಜಾ; ಕಬ್ಬಲಿಗ ಉ; ಇಲೆಕ್ಟ್ರಿಕಲ್ ಕೆಲಸ ಸಾ; ಚಟ್ಟಿತೋಟ ಮೈಲಾಪೂರ ಅಗಸಿ ಯಾದಗಿರಿ 5) ರೆಡ್ಡೆಪ್ಪ ತಂದೆ ಗಾಲೆಪ್ಪ ಕ್ಯಾಶಪ್ಪನಳ್ಳಿ ವ;36 ಜಾ; ಕಬ್ಬಲಿಗ ಉ; ಕೂಲಿ ಸಾ; ಮುಂಡರಗಿ ತಾ; ಜಿ; ಯಾದಗಿರಿ 6) ಸಾಬ್ಬಣ್ಣ ತಂದೆ ಸಾಬ್ಬಣ್ಣ ಮುಂಡರಗಿ ವ;40 ಜಾ ಮೇಧ ಉ: ಕೂಲಿ ಸಾ; ಮುಂಡರಗಿ ತಾ;ಜಿ; ಯಾದಗಿರಿ 7) ವೆಂಕಟೇಶ ತಂದೆ ನರಸಪ್ಪ ಮೇಧರ್ ವ;37 ಉ; ಮೆಕ್ಯಾನಿಕ್ ಸಾ; ಮೇಧರ ಓಣಿ ಸುರುಪೂರ ಹಾ.ವ. ಹೊಸ ಬಸ್ಸ ನಿಲ್ದಾಣ ಹತ್ತಿರ ಯಾದಗಿರಿ ಅಂತಾ ತಿಳಿಸಿದ್ದು ಅವರ ಅಂಗಶೋದನೆ ಮಾಡಲಾಗಿ ಸದರಿಯವರ ಹತ್ತಿರ 2480-00 ನಗದು ಹಣ, ಮತ್ತು ಮೊಬೈಲಗಳು, ಹಾಗೂ 52 ಇಸ್ಪೀಟ ಎಲೆಗೆಳು ಸಿಕ್ಕಿದ್ದು, ನಂತರ ಸದರಿ ಮುದ್ದೆ ಮಾಲನ್ನು ಮುಂದಿನ ಪುರಾವೆ ಕುರಿತು ಜಪ್ತಿ ಪಡಿಸಿಕೊಂಡಿದ್ದು ಜಪ್ತಿ ಪಂಚಾನಾಮೆಯನ್ನು 5-00 ಪಿ.ಎಮ್ ದಿಂದ 6-00 ಪಿ.ಎಮ್ ದವರೆಗೆ ಜಪ್ತಿ ಪಂಚನಾಮೆಯನ್ನು ಕೈಕೊಂಡಿದ್ದು ಆರೋಪಿ ಮತ್ತು ಮುದ್ದೆ ಮಾಲಿನೊಂದಿಗೆ 6-30 ಪಿಎಂಕ್ಕೆ ಠಾಣೆಗೆ ಬಂದು ಜ್ಞಾಪನಾ ಪತ್ರದೊಂದಿಗೆ ಜಪ್ತಿ ಪಂಚನಾಮೆಯನ್ನು ಮುಂದಿನ ಕ್ರಮಕ್ಕಾಗಿ ಸಲ್ಲಿಸಿದ್ದು ಇಂದು ದಿನಾಂಕ.09/04/2018 ರಂದು 12-15 ಪಿಎಂಕ್ಕೆ  ಮಾನ್ಯ ನ್ಯಾಯಾಲಯದ ಅನುಮತಿ ಪಡೆದುಕೊಂಡು ಪಿಸಿ-168 ರವರು ತಂದು ಹಾಜರಪಡಿಸಿದ್ದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.81/2018 ಕಲಂ.87 ಕೆಪಿ ಆ್ಯಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ. 81/2018 ಕಲಂ: 32,34 ಕೆ.ಇ ಎಕ್ಟ್ 1965;- ದಿನಾಂಕ: 09/04/2018 ರಂದು 10-15 ಎಎಮ್ ಕ್ಕೆ ಮಾನ್ಯ ಸಿ.ಪಿ.ಐ ಯಾದಗಿರಿ ವೃತ್ತ ರವರು ಪೊಲೀಸ್ ಠಾಣೆಗೆ ಹಾಜರಾಗಿ ಜಪ್ತಿ ಪಂಚನಾಮೆ ಮತ್ತು ಮುದ್ದೆಮಾಲು ಹಾಜರಪಡಿಸಿ, ವರದಿ ನೀಡಿದ್ದೇನಂದರೆ ಇಂದು ದಿನಾಂಕ: 09/04/2018 ರಂದು ನಾನು  ಪ್ರಕಾಶ ಹೆಚ್.ಸಿ 18, ಸೈಯದ ಅಲಿ ಹೆಚ್.ಸಿ 191 ಮತ್ತು ಅಂಬ್ರೇಶ ಎಪಿಸಿ 114 ವೃತ್ತ ಕಛೇರಿ ಜೀಪ ಚಾಲಕರವರೊಂದಿಗೆ ವಡಗೇರಾ ಕ್ರಾಸ ಹತ್ತಿರ ಇದ್ದಾಗ ವಡಗೇರಾ ಠಾಣಾ ವ್ಯಾಪ್ತಿಯ ನಾಯ್ಕಲ್ ಗ್ರಾಮದ ಬಟಗೇರಿ ಶರಣಗೌಡನ ಹಳೆ ಗಿರಣಿ ಹತ್ತಿರ ಖಾಲಿ ಸ್ಥಳದಲ್ಲಿ ಯಾರೋ ಒಬ್ಬನು ಹೋಗಿ ಬರುವ ಸಾರ್ವಜನಿಕರಿಗೆ ಅಕ್ರಮವಾಗಿ ಬಿಯರಗಳನ್ನು ಮಾರಾಟ ಮಾಡುತ್ತಿದ್ದಾನೆ ಎಂದು ಖಚಿತ ಬಾತ್ಮಿ ಬಂದ ಮೇರೆಗೆ ಇಬ್ಬರು ಪಂಚರು ಮತ್ತು ಸಿಬ್ಬಂದಿಯವರಿಗೆ ಸರಕಾರಿ ಜೀಪ ನಂ. ಕೆಎ 33 ಜಿ 0161 ನೇದ್ದರಲ್ಲಿ ಸ್ಥಳಕ್ಕೆ ಹೋಗಿ ಮಾರಾಟ ಮಾಡುತ್ತಿರುವುದನ್ನು ಖಚಿತಪಡಿಸಿಕೊಂಡು ಅವನ ಮೇಲೆ ದಾಳಿ ಮಾಡಿ ಹಿಡಿಯಬೇಕು ಎನ್ನವಷ್ಟರಲ್ಲಿ ಅವನು ಅಲ್ಲಿಂದ ತಪ್ಪಿಸಿಕೊಂಡು ಓಡಿ ಹೋದನು. ಆಗ ಅಲ್ಲಿಯೇ ಇದ್ದ ಪೊಲೀಸ್ ಬಾತ್ಮಿದಾರರಿಗೆ ಓಡಿ ಹೋದವನ ಹೆಸರು ವಿಳಾಸ ವಿಚಾರಿಸಲಾಗಿ ಮರೆಪ್ಪ ತಂದೆ ಮರೆಪ್ಪ ಬೈರಳ್ಳಿ, ವ:25, ಜಾ:ಹೊಲೆಯ, ಉ:ಕೂಲಿ ಸಾ:ನಾಯ್ಕಲ್ ಎಂದು ಹೇಳಿದರು. ಅವನು ಮಾರಾಟ ಮಾಡುತ್ತಿದ್ದ ಸ್ಥಳದಲ್ಲಿ ನೋಡಲಾಗಿ ಒಂದು ರಟ್ಟಿನ ಕಾಟನ ಬಾಕ್ಸಗಳಲ್ಲಿ ಕಿಂಗಫೀಶಯರ ಸ್ಟ್ರಾಂಗ 650 ಎಮ್.ಎಲ್ ದ ಬಿಯರ ಬಾಟ್ಲಿಗಳು ಇದ್ದು, ಎಣಿಸಿ ನೋಡಲಾಗಿ 8 ಬಾಟಲಿಗಳು ಇದ್ದವು. 650 ಎಮ್.ಎಲ್*8=5200 ಎಮ್.ಎಲ್ ಹೀಗೆ ಒಟ್ಟು 5 ಲೀಟರ 200 ಎಮ್.ಎಲ್ ಮದ್ಯವಾಗುತ್ತಿದ್ದು, ಎಮ್.ಆರ್.ಪಿ ಬೆಲೆ 125*8=1000=00 ರೂ.ಗಳು ಆಗುತ್ತಿದ್ದು, ಎಲ್ಲಾ ಮುದ್ದೆಮಾಲನ್ನು ಜಪ್ತಿ ಮಾಡಿಕೊಂಡು 8 ಎಎಮ್ ದಿಂದ 9 ಎಎಮ್ ದವರೆಗೆ ಪಂಚನಾಮೆ ಜರುಗಿಸಿ, 10-15 ಎಎಮ್ ಕ್ಕೆ ಮುದ್ದೆಮಾಲಿನೊಂದಿಗೆ ಪೊಲೀಸ ಠಾಣೆಗೆ ಬಂದು ಜಪ್ತಿ ಪಂಚನಾಮೆಯೊಂದಿಗೆ ಈ ವರದಿ ಕೊಡುತ್ತಿದ್ದು, ಸೂಕ್ತ ಕಾನೂನು ಕ್ರಮ ಕೈಕೊಳ್ಳಲು ಸೂಚಿಸಲಾಗಿದೆ ಎಂದು ಕೊಟ್ಟ ವರದಿ ಮತ್ತು ಜಪ್ತಿ ಪಂಚನಾಮೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 81/2018 ಕಲಂ: 32,34 ಕೆ.ಇ ಎಕ್ಟ್ 1965 ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.


ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 206/2018 ಕಲಂ 498[ಎ] 494   323 354   504 506  ಸಂ 149 ಐ.ಪಿ.ಸಿ  ;- ದಿನಾಂಕ 09/04/2018 ರಂದು ಮದ್ಯಾಹ್ನ 14-15 ಗಂಟೆಗೆ ಫಿರ್ಯಾದಿ ಶ್ರೀಮತಿ ಶೀಲಾ ಗಂಡ ಸಾಯಬಣ್ಣ ನಾಯ್ಕೋಡಿ ವಯ 23 ವರ್ಷ ಜಾತಿ ಕಬ್ಬಲೀಗ ಉಃ ಮನೆ ಕೆಲಸ ಸಾಃ ವಿಭೂತಿಹಳ್ಳಿ ತಾಃ ಶಹಾಪೂರ ಜಿಃ ಯಾದಗಿರಿ ಇವರು ತನ್ನ ತಂದೆ, ತಾಯಿಯೊಂದಿಗೆ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ, ತನ್ನ ತಂದೆ ತಾಯಿಗೆ ಇಬ್ಬರೂ ಹೆಣ್ಣು ಮಕ್ಕಳು ಮತ್ತು ಒಬ್ಬ ಗಂಡು ಮಗನಿರುತ್ತಾನೆ. ಮನೆಗೆ ಹಿರಿಯ ಮಗಳು ತಾನೆ ಇರುತ್ತೆನೆ ತನಗೆ 2013 ನೇ ಸಾಲಿನಲ್ಲಿ ದಿನಾಂಕ 20/05/2013 ರಂದು ವಿಭೂತಿಹಳ್ಳಿ ಗ್ರಾಮದ ಆರೋಪಿ ನಂ 1 ಸಾಯಬಣ್ಣ ತಂದೆ ನಾಗಪ್ಪ ನಾಯ್ಕೋಡಿ ಈತನ ಜೊತೆ ಮದುವೆಯಾಗಿದ್ದು, ಮದುವೆಯಾದ ನಂತರ ಎರಡು ವರ್ಷ ಚನ್ನಾಗಿ ನೋಡಿಕೊಂಡಿದ್ದು, ಒಂದು ಹೆಣ್ಣು ಮಗುವಾಗಿದ್ದು, ಸಾನ್ವಿ ಅಂತ  ನಾಮಕರಣ ಮಾಡಿದ್ದು ಸದ್ಯ 18 ತಿಂಗಳ ಮಗಳಿರುತ್ತಾಳೆ. ಹೆಣ್ಣು ಮಗು ಹುಟ್ಟಿದ ಸಂಬಂಧ ವಿನಾಕಾರಣ ತನ್ನ ಗಂಡ ಮತ್ತು ಗಂಡನ ಕುಟುಂಬದವರು ಕಿರಿಕಿರಿ ಕೊಡಲಾರಂಬಿಸಿದರು, ನಂತರ 2017 ಸಾಲಿನ ಡಿಸೆಂಬರ್ ತಿಂಗಳಲ್ಲಿ ಎರಡನೇ ಹೆರಿಗೆ ಹೋಗಿದ್ದು ಎರಡನೇ ಹೆರಿಗೆ ಜನೇವರಿ 2018 ನೇ ಸಾಲಿನಲ್ಲಿ ಆಗಿದ್ದು ಹೆಣ್ಣು ಮಗು ಹುಟ್ಟಿದ್ದು, ಮಗು ಸರಿಯಾಗಿ ಬೆಳವಣಿಗೆಯಾದರಿಂದ ಎರಡು ದಿನಗಳಲ್ಲಿಯೇ ಮೃತ ಪಟ್ಟಿರುತ್ತದೆ. ತಾನು ತವರು ಮನೆಯಲ್ಲಿದ್ದಾಗ ತನ್ನ ಗಂಡ ದಿನಾಂಕ 04/04/2018 ರಂದು ಎರಡನೇ ಮದುವೆ ಮಾಡಿಕೊಂಡಿದ್ದಾನೆ ಅಂತ ವಿಷಯ ಗೊತ್ತಾಗಿ ಫಿರ್ಯಾದಿ ಮತ್ತು ಫಿರ್ಯಾದಿಯ ತಂದೆ, ತಾಯಿ ಮತ್ತು ಗ್ರಾಮದವರು  ದಿನಾಂಕ 07/04/2018 ರಂದು ಮದ್ಯಾಹ್ನ 12-30 ಗಂಟೆಗೆ ವಿಭೂತಿಹಳ್ಳಿ ಗ್ರಾಮಕ್ಕೆ ಹೋದಾಗ ಆರೋಪಿತರೆಲ್ಲರೂ ಕೂಡಿ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆ ಬಡೆ ಮಾಡಿ ಫಿರ್ಯಾದಿಯ ಮೈದುನ ಬ್ಲೌಜ್ ಹಿಡಿದು ಎಳೆದಾಡಿ ಹರಿದಿರುತ್ತಾನೆ. ಸದರಿಯವರ ಮೇಲೆ ಕ್ರಮ ಕೈಕೊಳ್ಳಬೇಕು ಅಂತ ಇತ್ಯಾದಿ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 206/2018 ಕಲಂ 498[ಎ] 494, 323, 354, 504, 506, ಸಂ 149 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು. 
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 211/2018 ಕಲಂ 15 [ಎ] 32 [3] ಕೆ.ಇ ಆಕ್ಟ;- ದಿನಾಂಕ 09/04/2018  ರಂದು ರಾತ್ರಿ 20-00 ಗಂಟೆಗೆ ಸರಕಾರಿ ತಫರ್ೇ ಫಿರ್ಯಾದಿ ಶ್ರೀ  ನಾಗರಾಜ ಜಿ ಆರಕ್ಷಕ ನಿರೀಕ್ಷಕರು, ಶಹಾಪೂರ ಪೊಲೀಸ ಠಾಣೆ ಇವರು ಒಬ್ಬ ವ್ಯಕ್ತಿಯೊಂದಿಗೆ ಠಾಣೆಗೆ ಹಾಜರಾಗಿ ಮೂಲ ಜಪ್ತಿ ಪಂಚನಾಮೆ, ಮುದ್ದೆಮಾಲು ಹಾಜರ ಪಡಿಸಿ ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ ಸಾರಾಂಶವೆನೆಂದರೆ, ಆರೋಪಿ ಶಿವಕುಮಾರ ತಂದೆ ಬಸವರಾಜ ರಸ್ತಾಪೂರ ಸಾಃ ಮಡ್ನಾಳ ಇವನು ಮಡ್ನಾಳ ಗ್ರಾಮದಲ್ಲಿ ತನ್ನ ಕಿರಾಣಿ ಅಂಗಡಿಯ ಹಿಂದುಗಡೆ ಇರುವ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ  ಸಾರ್ವಜನಿಕರಿಗೆ ಮದ್ಯ ಕುಡಿಯಲು ಅನಕೂಲ ಮಾಡಿಕೊಡುತಿದ್ದಾನೆ ಅಂತ ಖಚಿತ ಮಾಹಿತಿ ಬಂದ ಮೇರೆಗೆ ಸದರಿ ಫಿರ್ಯಾಧಿಯವರು ಪಂಚರು ಮತ್ತು ಸಿಬ್ಬಂಧಿಯವರೊಂದಿಗೆ ಹೋಗಿ ದಾಳಿ ಮಾಡಿ ಆರೋಪಿತನಿಂದ 1] 90 ಎಮ್.ಎಲ್.ನ  40 ಓರಿಜಿನಲ್ ಚಾಯ್ಸ ಡಿಲಕ್ಸ ವಿಸ್ಕಿ ಪಾಕೇಟ್ಗಳು ಇದ್ದು, ಒಂದು 90 ಎಮ್.ಎಲ್.ನ   ಓರಿಜಿನಲ್ ಚಾಯ್ಸ ಡಿಲಕ್ಸ ವಿಸ್ಕಿ ಪಾಕೇಟ್ನ ಕಿಮ್ಮತ್ತ 28 ರೂಪಾಯಿ 13 ಪೈಸೆ ಇದ್ದು, 40 ಪಾಕೇಟಗಳ ಕಿಮ್ಮತ್ತ 1125 ರೂಪಾಯಿ ಆಗುತ್ತದೆ. 2] 90 ಎಮ್.ಎಲ್.ನ 3 ಓರಿಜಿನಲ್ ಚಾಯ್ಸ ಡಿಲಕ್ಸ ವಿಸ್ಕಿ ಖಾಲಿ ಪಾಕೇಟಗಳು ಸಾರ್ವಜನಿಕರು ಉಪಯೋಗಿಸಿರುತ್ತಾರೆ. ಅಂ.ಕಿ 00-00 3] 5 ಪ್ಲಾಸ್ಟೀಕ್ ಗ್ಲಾಸ್ಗಳು ಇದ್ದು, ಸದರಿ ಗ್ಲಾಸ್ ಮದ್ಯ  ಕುಡಿಯಲು ಉಪಯೋಗಿಸಿದ್ದು ಅಂ.ಕಿ 00,  ನೇದ್ದವುಗಳನ್ನು ಪಂಚರ ಸಮಕ್ಷಮದಲ್ಲಿ ಸಾಯಂಕಾಲ 18-10 ಗಂಟೆಯಿಂದ 19-10 ಗಂಟೆಯ ವರೆಗೆ  ಜಪ್ತಿ ಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ಫಿರ್ಯಾಧಿ ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 211/2018 ಕಲಂ 15[ಎ] 32[3] ಕೆ.ಇ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ  ಕೈಕೊಂಡಿರುತ್ತದೆ.
ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ. 99/2018 ಕಲಂ. 32 34 ಕನರ್ಾಟಕ ಅಭಕಾರಿ ಕಾಯ್ದೆ;- ದಿನಾಂಕ:09/04/2018 ರಂದು 07.20 ಗಂಟೆಯ ಸುಮಾರಿಗೆ ಆರೋಪಿತನು ಸರಕಾರದಿಂದಾ ಯಾವುದೇ ಪರವಾನಿಗೆಯನ್ನು ಪಡೆಯದೇ ಅಕ್ರಮವಾಗಿ ಸರಾಯಿ ಸಂಗ್ರಹಣೆ ಮಾಡಿ ಹೆಬ್ಬಾಳ(ಬಿ) ಗ್ರಾಮದ ಆರೋಪಿತನ ಅಂಗಡಿಯ ಮುಂದೆ ರೋಡಿನ ದಂಡೆಗೆ ಸಾರ್ವಜನಿಕ ಸ್ಥಳದಲ್ಲಿ ಮಾರಾಟ ಮಾಡುತ್ತಿದ್ದಾಗ ಪಿಯರ್ಾದಿ ಹಾಗೂ ಚಂದ್ರನಾಥ ಎ.ಎಸ್.ಐ, ಸಿಬ್ಬಂದಿಯಾದ ಹೆಚ್.ಸಿ-130, 67 ಪಿಸಿ-288 ರವರೊಂದಿಗೆ ಪಂಚರ ಸಮಕ್ಷಮದಲ್ಲಿ ದಾಳಿಮಾಡಲು ಸರಾಯಿ ಮಾರಾಟ ಮಾರವುನು ಪೊಲೀಸರನ್ನು ಓಡಿ ಹೋಗಿದ್ದು, ನಂತರ ಸ್ಥಳದಲ್ಲಿದ್ದ 1) 180 ಎಂಎಲ್ ದ 16 ಓಲ್ಡ್ ಟವರನ ಕಂಪನಿಯ ವಿಸ್ಕಿ ಡಬ್ಬಿಗಳು ಅಕಿ:1096.00 ರೂ 2) 90 ಎಂಎಲ್ ದ 14 ಎಂಸಿ ರಮ್ ಡಬ್ಬಿಗಳು ಅಕಿ:575.00 ರೂ 3) 90 ಎಂಎಲ್ ದ 6 ಓರಿಜನಲ್ ಚಾಯ್ಸ್ ಡಬ್ಬಿಗಳು ಅಕಿ:168.00 ರೂ 4) 90 ಎಂಎಲ್ ದ 6 ಎಂಸಿ ರಮ್ ಪ್ಲಾಸ್ಟಿಕ್ ಬಾಟಲಿಗಳು ಅಕಿ:168.00 ರೂ ಹೀಗೆ ಒಟ್ಟು ಆರೋಪಿತನು ಮಾರಾಟ ಮಾಡುತ್ತಿದ್ದ  ಒಟ್ಟು ಅಕಿ:2085-00 ರೂ ಕಿಮ್ಮತಿನ ಮದ್ಯವನ್ನು  ಜಪ್ತಿ ಮಾಡಿಕೊಂಡು ಬಾತ್ಮಿದಾರರಿಂದಾ ಆರೋಪಿತನ ಹೆಸರು ತಿಳಿದುಕೊಂಡು ಸ್ಥಳದಲ್ಲಿ ಪಂಚನಾಮೆ ಬರೆದುಕೊಂಡು ಬಂದಿದ್ದು ಅಂತಾ ಇತ್ಯಾದಿ ಪಂಚನಾಮೆ ಸಾರಾಂಶದ ಮೇಲಿಂದಾ ಕ್ರಮ ಜರುಗಿಸಿದ್ದು ಇರುತ್ತದೆ.
ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ. 87/2018 ಕಲಂ 454, 457, 380 ಐಪಿಸಿ;- ದಿನಾಂಕ 10/04/2018 ರಂದು ಮಧ್ಯಾಹ್ನ 01-15 ಗಂಟೆಗೆ ಫಿಯರ್ಾಧಿ ಶ್ರೀಮತಿ ಸುಷ್ಮಾ ಗಂಡ ರಾಹೂಲ ಪವ್ಹಾರ ವಯಾ 34 ವರ್ಷ, ಜಾ|| ಮರಾಠ ಉ|| ವಕೀಲ ವೃತ್ತಿ ಸಾ|| ಅನಪೂರ ಲೇಔಟ್ ಯಾದಗಿರಿ ಇವರು ಠಾಣೆಗೆ ಬಂದು ಒಂದು ಗಣಕೀಕರಿಸಿದ ದೂರು ನೀಡಿದ್ದು, ಸದರಿ ದೂರಿನ ಸಾರಾಂಶವೇನೆಂದರೆ, ನಮ್ಮ ಮನೆಯಲ್ಲಿ ನಾನು ಹಾಗೂ ನನ್ನ ಗಂಡ ರಾಹೂಲ ತಂದೆ ಸುಭಾಷ ಪವ್ಹಾರ ಹಾಗೂ ಇಬ್ಬರು ಮಕ್ಕಳಾದ ರೋಹಿತ (16), ಮತ್ತು ವೈಷ್ಣವಿ ಹೀಗೆ ನಾಲ್ಕು ಜನರು ವಾಸವಾಗಿರುತ್ತೇವೆ. ನಮ್ಮ ಅತ್ತೆ-ಮಾವರವರು ಸೊಲ್ಲಾಪೂರದಲ್ಲಿ ವಾಸವಾಗಿರುತ್ತಾರೆ. ದಿನಾಂಕ 07/04/2018 ರಂದು ಮಧ್ಯಾಹ್ನ 04-00 ಗಂಟೆಗೆ ನಮ್ಮ ಅತ್ತೆ-ಮಾವಂದಿರರ ಯೋಗ ಕ್ಷೇಮ ವಿಚಾರಿಸಿಕೊಂಡು ಬರಲು ಹೋಗುವಾಗ ಯಾದಗಿರಿಯಲ್ಲಿ ಇರುವ ನಮ್ಮ ಮನೆಯ ಬೀಗ ಹಾಕಿಕೊಂಡು ಹೋದೆವು. ನಂತರ ನಿನ್ನೆ ದಿನಾಂಕ 09/04/2018 ರಂದು ರಾತ್ರಿ 11 ಪಿ.ಎಂ ಸುಮಾರಿಗೆ ನಾನು, ನನ್ನ ಗಂಡ-ಮಕ್ಕಳೊಂದಿಗೆ ಮರಳಿ ಯಾದಗಿರಿ ಯಲ್ಲಿಯ ನಮ್ಮ ಮನೆಗೆ ಬಂದು ನೋಡಲಾಗಿ ನಮ್ಮ ಮನೆಯ ಕೀಲಿಯ ಕೊಂಡಿ ಮುರಿದಿದ್ದು, ಅಲ್ಪ-ಸ್ವಲ್ಪ ಮುಚ್ಚಿದಂತೆ ಕಂಡು ಬಂತು. ಗಾಭರಿಯಾಗಿ ಒಳಗೆ ಹೋಗಿ ನೋಡಲಾಗಿ ಮನೆಯಲ್ಲಿಯ ಸಾಮಾನುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದದ್ದವು. ಹಾಗೂ ಬೆಡ್ ರೂಮದಲ್ಲಿ ನೋಡಲಾಗಿ ಅಲಮರಿಯ ಕೀಲಿ ಮುರಿದಿದ್ದು, ಅದರಲ್ಲಿಯ 1) ಒಂದು 02 ತೊಲೆಯ ಬಂಗಾರದ ಚೈನ್, ಅ.ಕಿ 50,000/ ರೂ||, 2) ಒಂದು ಜೊತೆಯ 09 ತೊಲೆಯ ಬೆಳ್ಳಿ ಕಾಲು ಚೈನ್, ಅ.ಕಿ 3,600/ ರೂ||, 3) ಒಂದು 05 ತೊಲೆಯ ಬೆಳ್ಳಿಯ ನಂದಾ ದೀಪ, ಅ.ಕಿ 2000/ ರೂ||,  ಹಾಗೂ 19,000/ ರೂಪಾಯಿ ನಗದು ಹಣ ಕಾಣಲಿಲ್ಲ. ಸದರಿ ವಿಷಯವನ್ನು ನನ್ನ ಗಂಡ ತಮಗೆ ಪರಿಚಯದವರಾದ ಸಂತೋಷ ತಂದೆ ಶಂಕರ ಪವ್ಹಾರ, ಮತ್ತು ಸಾವಿತ್ರಿ ಎಂ.ಪಾಟೀಲ್ ಇವರಿಗೆ ತಿಳಿಸಿದಾಗ ಅವರು ಕೂಡ ನಮ್ಮ ಮನೆಗೆ ಬಂದು ನೋಡಿದರು. ಕಾರಣ ದಿನಾಂಕ 07/04/2018 ರಂದು ಮಧ್ಯಾಹ್ನ 04-00 ಗಂಟೆಯಿಂದ ದಿನಾಂಕ 09/04/2018 ರಂದು ರಾತ್ರಿ 11 ಗಂಟೆಯ ಅವಧಿಯಲ್ಲಿ ನಮ್ಮ ಮನೆಯ ಕೀಲಿಯ ಕೊಂಡಿ ಮುರಿದು ಮನೆ ಒಳಗೆ ಪ್ರವೇಶಮಾಡಿ ಬೆಡ್ ರೂಮಿನ ಅಲಮರಿಯಲ್ಲಿ ಇದ್ದ ಸುಮಾರು 74,600=00 ರೂಪಾಯಿ ಕಿಮ್ಮತ್ತಿನ ಬಂಗಾರ, ಬೆಳ್ಳಿ ಮತ್ತು ನಗದು ಹಣ ಯಾರೋ ಕಳ್ಳರು ಮನೆ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ನಮ್ಮ ಮನೆಯಲ್ಲಿ ಕಳ್ಳತನವಾದವುಗಳನ್ನು ಪತ್ತೆ ಮಾಡಿ ಕಳ್ಳತನ ಮಾಡಿದವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಕೊಳ್ಳಲು ವಿನಂತಿ. ಮನೆಯಲ್ಲಿ ವಿಚಾರಣೆ ಮಾಡಿ ತಡವಾಗಿ ಠಾಣೆಗೆ ಬಂದು ದೂರು ನೀಡಿದ್ದು ಇರುತ್ತದೆ. ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 87/2018 ಕಲಂ 454, 457, 380 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು. 
 

KALABURAGI DISTRICT REPORTED CRIMES

ಕೊಲೆ ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ 09-04-2018 ರಂದು ಬೆಳಿಗ್ಗೆ 07:00 ಗಂಟೆಯ ಸುಮಾರಿಗೆ ನಾನು ನಮ್ಮೂರಿನ ಬಸ್ ನಿಲ್ದಾಣದ ಹತ್ತಿರ ಇದ್ದಾಗ ಜನರು ಮಣೂರ-ಶೇಷಗಿರಿ ರೋಡಿಗೆ ಇರುವ ವರದಾಚಾರ್ಯ ಅಕ್ಕಮಂಚಿ ರವರ ಹೊಲದಲ್ಲಿ ಯಾವುದೊ ವ್ಯಕ್ತಿಯ ಕೊಲೆ ಆಗಿದೆ ಅಂತಾ ಜನರು ಮಾತನಾಡುವುದನ್ನು ಕೇಳಿ ನಾನು ಮತ್ತು ನಮ್ಮ ಪಂಚಾಯತಿಯಲ್ಲಿ ಕೆಲಸ ಮಾಡುವ ಗಣೇಶ ಹಿಳ್ಳಿ, ಮತ್ತು ನಮ್ಮೂರಿನ ದಿನೇಶ ನಾಟೀಕಾರ ಮೂರು ಜನರು ಕೂಡಿಕೊಂಡು ಸದರಿ ವರದಾಚಾರ್ಯ ರವರ ಹೊಲದ ಹತ್ತಿರ ಬಂದು ನೋಡಲಾಗಿ ಸದರಿ ವರದಾಚಾರ್ಯ ರವರ ಹೊಲದಲ್ಲಿ ಶೇಷಗಿರಿ-ಮಣೂರ ರೋಡಿನಿದ ಅಂದಾಜು 50 ಮೀಟರ ಅಂತರದಲ್ಲಿ ಒಂದು ಶವ ವಿದ್ದು ಹತ್ತಿರ ಹೋಗಿ ನೋಡಲಾಗಿ ಅಂದಾಜು 20 ರಿಂದ 25 ವಯಸ್ಸಿನ ಗಂಡು ವ್ಯಕ್ತಿಯ ಶವವಿರುತ್ತದೆ. ಸದರಿ ಶವ ಅರ್ಧ ಮರ್ಧ ಸುಟ್ಟಿದ್ದು ಮುಖ ಗುರುತು ಸಿಗದಂತೆ ಆಗಿರುತ್ತದೆ. ಸದರಿ ಶವದ ಮೇಲೆ ಅರ್ಧ ಮರ್ಧ ಸುಟ್ಟ ಹಳದಿ ಬಣ್ಣದ ಅರ್ಧ ತೋಳಿನ ಟೀ-ಶರ್ಟ ಇರುತ್ತದೆ. ಶವದ ಮೈಮೇಲಿನ ಪ್ಯಾಂಟ್ ಪೂರ್ತಿಯಾಗಿ ಸುಟ್ಟಿದ್ದು ಸುಟ್ಟಿದ ಗುರುತಿನಿಂದ ಪ್ಯಾಂಟ ಅಂದಾಜು ನೀಲಿ ಬಣ್ಣ ಜೀನ್ಸ ಪ್ಯಾಂಟ್ ಇರಬಹುದು ಎಂದು ಮೇಲ್ನೋಟಕ್ಕೆ ಕಂಡು ಬಂದಿರುತ್ತದೆ. ಶವದ ಎಡ ಬುಜಕ್ಕೆ ಹಾಗೂ ತಲೆಯ ಹಿಂಬದಿಯಿಂದ ರಕ್ತ ಸೋರಿದ್ದು ಕಂಡು ಬಂದಿರುತ್ತದೆ. ಮತ್ತು ನಾಲಿಗೆಯೂ ಸಹ ಹೊರಬಂದಿರುತ್ತದೆ. ನಮ್ಮಂತೆ ಅನೇಕ ಜನರು ಸುದ್ದಿ ತಿಳಿದು ಶವವನ್ನು ನೋಡಲು ಬಂದಿರುತ್ತಾರೆ. ಸದರಿ ಅಂದಾಜು 20 ರಿಂದ 25 ವರ್ಷ ವಯಸ್ಸಿನ ಗಂಡು ವ್ಯಕ್ತಿಯನ್ನು ಯಾರೋ ದುಷ್ಕರ್ಮಿಗಳು ಯಾವುದೋ ದ್ವೇಷದಿಂದ ಯಾವುದೋ ಒಂದು ಆಯುಧ ದಿಂದ ತಲೆಗೆ ಹೊಡೆದು ಹಾಗೂ ಕುತ್ತಿಗೆ ಒತ್ತಿ ಕೊಲೆ ಮಾಡಿ ಶವವನ್ನು ಗುರುತು ಸಿಗಬಾರದು ಎಂದು ಶವವನ್ನು ಸುಟ್ಟಿರುತ್ತಾರೆ. ಸದರಿ ಘಟನೆ ಅಂದಾಜು ನಿನ್ನೆ ದಿನಾಂಕ 08-04-2018 ರಂದು ರಾತ್ರಿ 10:30 ಗಂಟೆಯಿಂದ ಇಂದು ದಿನಾಂಕ 09-04-2018 ಬೆಳಿಗಿನ 06:00 ಗಂಟೆಯ ಮಧ್ಯದ ಅವಧಿಯಲ್ಲಿ ಮಣೂರ ಸೀಮಾಂತರದಲ್ಲಿ ವರದಾಚಾರ್ಯ ಅಕ್ಕಮಂಚಿ ಸಾ: ಮಣೂರ ಇವರ ಹೋಲ ಸರ್ವೇ ನಂ 70/ ನೇದ್ದರಲ್ಲಿ ಜರುಗಿರುತ್ತದೆ. ಅಂತಾ ಶ್ರೀ ಬಸವರಾಜ ತಂದೆ ಈರಣ್ಣ ಪಾಟೀಲ ಸಾ: ಮಣೂರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಕಳವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ವಿಜಯಕುಮಾರ ತಂದೆ ದೊಂಡಿಬಾ ಮಾನೆ ಉ: ಪೊಲೀಸ ಪೇದೆ ಸಾ: ಲಾಲಗೇರಿ ಮಹಾಲಕ್ಷ್ಮಿ ಲೇಔಟ ಬ್ರಹ್ಮಪೂರ ಕಲಬುರಗಿ ಇವರು ದಿನಾಂಕ 01.11.2017 ರಂದು ರಾತ್ರಿ 11:00 ಗಂಟೆಯ ಸುಮಾರಿಗೆ ನಾನು, ಹೆಂಡತಿ ಮಕ್ಕಳು ಮತ್ತು ನಮ್ಮ ತಾಯಿ ಹಾಗೂ ಕುಟುಂಬದ ಸದಸ್ಯರು ಕೂಡಿಕೊಂಡು ನಮ್ಮ ಮನೆಯಲ್ಲಿ ಮಲಗಿಕೊಂಡಿದ್ದು ನಾವು ಮಲಗುವಾಗ ಪ್ರತಿ ದಿವಸ ನಮ್ಮ ಮೊಬೈಲಗಳು ಟಿವಿ ಪಕ್ಕದಲ್ಲಿ ಚಾರ್ಜಗೆ ಹಚ್ಚಿ ಮಲಗಿದ್ದು ಇರುತ್ತದೆ. ದಿನಾಂಕ 02.11.2017 ರಂದು ಬೆಳ್ಳಿಗಿನ ಜಾವ  ನಮ್ಮ ಮನೆಯ ಅಂಗಳದಲ್ಲಿ ಸಪ್ಪಳ ಆಗಿದ್ದು ಮನೆಯ ಸದಸ್ಯರು ಎದ್ದು ನೈಸರ್ಗಿಕ ಕರೆಗೆ ಹೋಗಿರಬಹುದು ಅಂತ ತಿಳಿದು ನಾನು ಹಾಗೆ ಮಲಗಿಕೊಂಡಿದ್ದು ಇರುತ್ತದೆ ಬೆಳ್ಳಿಗ್ಗೆ 6 ಗಂಟೆಯ ಸುಮಾರಿಗೆ ನಾನು ಎದ್ದು ನೋಡಲು ಟಿವಿ ಹತ್ತಿರ ಚಾರ್ಜಗೆ ಹಚ್ಚಿನ ನನ್ನ ತಂದೆಯವರು ಉಪಯೋಗಿಸುತ್ತಿದ್ದ ಮೊಬೈಲ, ನನ್ನ ತಂಗಿ ಉಪಯೋಗಿಸುತ್ತಿದ್ದ ಮೊಬೈಲ ಮತ್ತು ನನ್ನ ತಮ್ಮನ ಮೊಬೈಲ ಹಾಗೂ ನಮ್ಮ ತಾಯಿ ಮೊಬೈಲಗಳು ಹೀಗೆ ಒಟ್ಟು ನಾಲ್ಕು ಮೊಬೈಲಗಳು ಕಾಣೆಯಾಗಿದ್ದು ಆಗ ಗಾಬರಿಗೊಂಡು ನಾನು ನಮ್ಮ ಮನೆಯವರಿಗೆ ಎಬ್ಬಿಸಿ ವಿಚಾರಿಸಲು ಯಾರು ಕೂಡಾ ಮೊಬೈಲಗಳು ನೋಡಿರುವದಿಲ್ಲ ಅಂತ ನಾನು ಮನೆಯಲ್ಲಿ ನೋಡಲು ನಮ್ಮ ತಂದೆಯವರು ಉಟ್ಟಿಕೊಳ್ಳುತ್ತಿದ್ದ ಬಟ್ಟೆಗಳು ಮತ್ತು ಅವರ ಬಟ್ಟೆಯಲ್ಲಿದ್ದ ನಗದು ಹಣ 23,500/- ರೂಪಾಯಿಗಳು ಹಾಗೂ ನಮ್ಮ ತಾಯಿ ಪರ್ಸನಲ್ಲಿ ಇಟ್ಟಿದ 2 ತೋಲೆ ಬಂಗಾರ ಚೈನ ಅ:ಕಿ: 50,000/- ರೂ ನೇದ್ದು ಮನೆಯಲ್ಲಿ ಕಾಣೆಯಾಗಿದ್ದು ನಂತರ ನಾನು ನಮ್ಮ ಮನೆಯವರು ಎಲ್ಲರು ಹುಡುಕಾಡಿ ನಮ್ಮ ವಸ್ತುಗಳು ಪತ್ತೆಯಾಗಿರುವದಿಲ್ಲ. ದಿನಾಂಕ 02.11.2017 ರಂದು ಬೆಳ್ಳಗಿನ ಜಾವ 3:00 ಗಂಟೆಯಿಂದ 3:30 ಗಂಟೆಯ ಮಧ್ಯದಲ್ಲಿ ಯಾರೊ ಕಳ್ಳರು ನಮ್ಮ ಮನೆಯ ಮಾಳಿಗೆಯಿಂದ ಮನೆಯ ಒಳಗೆ ಪ್ರವೇಶ ಮಾಡಿ ನಮ್ಮ ಮನೆಯಲ್ಲಿ ಇಟ್ಟಿದ 4 ಮೊಬೈಲಗಳು ಅವುಗಳ ಅಂದಾಜ ಕಿಮ್ಮತ್ತು 35,000/- ರೂ ನಗದು ಹಣ 23,500/- ರೂ ಹಾಗೂ 2 ತೋಲೆ ಬಂಗಾದ ಚೈನ ಅ:ಕಿ: 50,000/-ಹೀಗೆ ಒಟ್ಟು 1,08,500/-ರೂ ಕಿಮ್ಮತ್ತಿನ ವಸ್ತುಗಳು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಟಕಾ ಜೂಜಾಟದಲ್ಲಿ ನಿರತವರ ಬಂಧನ :
ನರೋಣಾ ಠಾಣೆ : ದಿನಾಂಕ: 07/04/2018 ರಂದು ಕಡಗಂಚಿ ಗ್ರಾಮದ ಸರ್ಕಾರಿ ಶಾಲೆಯ ಮುಂದೆ ಸಾರ್ವಜನೀಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಅಂಕಿಸಂಖ್ಯೆಗಳನ್ನು ಬರೆದುಕೊಡುತ್ತಿರುವ ಬಗ್ಗೆ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ನರೋಣಾ ಹಾಗು ಸಿಬ್ಬಂದಿ ಮತ್ತು ಕಡಗಂಚಿ ಗ್ರಾಮದಲ್ಲಿರುವ ಸರ್ಕಾರಿ ಶಾಲೆಯ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲಾಗಿ ಸರ್ಕಾರಿ ಶಾಲೆಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣ ಪಡೆದು ಓಪನ್ ನಂಬರ್ ಬಂದರೆ ಒಂದು ರೂಪಾಯಿಗೆ 08 ರೂಪಾಯಿ ಗೆಲ್ಲಿರಿ, ಜಾಯಿಂಟ್ ನಂಬರ್ ಬಂದರೆ 01 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ, ಅಂತಾ ಕೂಗುತ್ತಾ ಮಟಕಾ ಅಂಕಿ ಸಂಖೆಯುಳ್ಳ ಚೀಟಿಗಳನ್ನು ಬರೆದುಕೊಡುತ್ತಿರುವುದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ  ಹಿಡಿದು ಅವನ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ದುಬೇಶ ತಂದೆ ರೇವು ಚವ್ಹಾಣ್ ಸಾ || ಕಡಗಂಚಿತಾಂಡಾ ಗ್ರಾಮ ಅಂತಾ ತಿಳಿಸಿದ್ದು ಸದರಿಯವನಿಗೆ ಅಂಗಶೋಧನ ಮಾಡಲಾಗಿ ಮಟಕಾ ಜೂಜಾಟಕ್ಕೆ ಬಳಸಿದ 1] ಒಂದು ಮಟಕಾ ಅಂಕಿಸಂಖ್ಯೆಯುಳ್ಳ ಚೀಟಿ, 2) ಒಂದು ಬಾಲ ಪೆನ್‌ 3) ನಗದು ಹಣ 560/- ರೂಪಾಯಿಗಳು ವಶಕ್ಕೆ ತಗೆದುಕೊಂಡು ಸದರಿಯವನಿಗೆ ವಶಕ್ಕೆ ತೆಗೆದುಕೊಂಡು  ನರೋಣಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಆಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿದ್ದವರ ಬಂಧನ :
ಅಫಜಲಪೂರ ಠಾಣೆ : ದಿನಾಂಕ 08-04-2018 ರಂದು ಮಾಶಾಳ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಅನದಿಕೃತವಾಗಿ ಮದ್ಯ ಮಾರಾಟ ಮಾಡುತ್ತಿದ್ದಾನೆ ಅಂತಾ ಮಾಹಿತಿ ಬಂದ ಮೇರೆಗೆ ಪಿ.ಎಸ್. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾಶಾಳ ಗ್ರಾಮಕ್ಕೆ  ಹೋಗಿ, ಮಾಶಾಳ ಗ್ರಾಮದ ಬಸ್ ನಿಲ್ದಾಣದಿಂದ ಸ್ವಲ್ಪ ದೂರ ಮರೆಯಾಗಿ ನಿಂತುಕೊಂಡು ನೋಡಲಾಗಿ, ಸದರಿ ಬಸ್ ನಿಲ್ದಾಣ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಒಂದು ರಟ್ಟಿನ ಬಾಕ್ಸ ಇಟ್ಟುಕೊಂಡು  ಹೋಗಿ ಬರುವ ಜನರಿಗೆ ಸಾರಾಯಿ ಮಾರಾಟ ಮಾಡುತ್ತಿದ್ದನು. ಆಗ ದಾಳಿ ಮಾಡಿ  ಹಿಡಿದು ಅವನ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಜೋತಿಬಾ ತಂದೆ ರಾಮ ಕ್ಷತ್ರಿ ಸಾ|| ಮಾಶಾಳ ಗ್ರಾಮ ತಾ|| ಅಫಜಲಪೂರ ಅಂತ ತಿಳಿಸಿದ್ದು . ನಂತರ ಸದರಿಯವನ ವಶದಲ್ಲಿದ್ದ ರಟ್ಟಿನ್ ಬಾಕ್ಸನ್ನು ಚೆಕ್ ಮಾಡಲಾಗಿ, ಸದರಿ ಬಾಕ್ಸದಲ್ಲಿ Original Choice ಕಂಪನಿಯ 90 ML ಅಳತೆಯ ಮದ್ಯ ತುಂಬಿದ 102 ರಟ್ಟಿನ ಪೌಚಗಳು ಅಕಿ- 2869/- ರೂ ಕಿಮ್ಮತ್ತಿನವುಗಳು ಇದ್ದವು.  ಹಾಗೂ ಮದ್ಯ ಮಾರಾಟ ಮಾಡಿದ 410/- ರೂ ನಗದು ಹಣ ದೊರೆತವು. ಸದರಿಯವನಿಗೆ ಮದ್ಯ ಮಾರಾಟ ಮಾಡಲು  ಹಾಗೂ ಸಾಗಾಟ ಮಾಡಲು ಅನುಮತಿ ಪಡೆದುಕೊಂಡ ಬಗ್ಗೆ ವಿಚಾರಿಸಲು ತನ್ನ ಹತ್ತಿರ ಮಾರಾಟ ಮಾಡಲು ಯಾವುದೆ ಪರವಾನಿಗೆ ಇರುವುದಿಲ್ಲ ಎಂದು ತಿಳಿಸಿದನು. ನಂತರ ಸದರಿಯವನ ವಶದಿಂದ 102 Original Choice ಕಂಪನಿಯ 90 ML ಮದ್ಯ ತುಂಬಿದ ರಟ್ಟಿನ ಪೌಚಗಳನ್ನು ಮತ್ತು ಸದರಿಯವನನ್ನು ವಶಕ್ಕೆ ತೆಗೆದುಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಫಜಪೂರ ಠಾಣೆ : ದಿನಾಂಕ 08-04-2018 ರಂದು ಜೇವರ್ಗಿ (ಬಿ) ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಅನದಿಕೃತವಾಗಿ ಮದ್ಯ ಮಾರಾಟ ಮಾಡುತ್ತಿದ್ದಾನೆ ಅಂತಾ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಜೇವರ್ಗಿ(ಬಿ) ಗ್ರಾಮಕ್ಕೆ  ಹೋಗಿ, ಜೇವರ್ಗಿ(ಬಿ) ಗ್ರಾಮದ ಬಸ್ ನಿಲ್ದಾಣದಿಂದ ಸ್ವಲ್ಪ ದೂರ ನಮ್ಮ ವಾಹನವನ್ನು ನಿಲ್ಲಿಸಿ, ನಡೆದುಕೊಂಡು ಹೋಗಿ ಮರೆಯಾಗಿ ನಿಂತುಕೊಂಡು ನೋಡಲಾಗಿ, ಸದರಿ ಬಸ್ ನಿಲ್ದಾಣ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಒಂದು ರಟ್ಟಿನ ಬಾಕ್ಸ ಇಟ್ಟುಕೊಂಡು  ಹೋಗಿ ಬರುವ ಜನರಿಗೆ ಸಾರಾಯಿ ಮಾರಾಟ ಮಾಡುತ್ತಿದ್ದನು. ಆಗ ನಾವು ಪಂಚರ ಸಮಕ್ಷಮ ದಾಳಿ ಮಾಡಿ  ಹಿಡಿದು ಅವನ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಚಂದ್ರಕಾಂತ ತಂದೆ ಬಸಣ್ಣ ಕುಂಬಾರ ಸಾ|| ಜೇವರ್ಗಿ(ಬಿ) ತಾ|| ಅಫಜಲಪೂರ ಅಂತ ತಿಳಿಸಿದನು. ನಂತರ ಸದರಿಯವನ ವಶದಲ್ಲಿದ್ದ ರಟ್ಟಿನ್ ಬಾಕ್ಸನ್ನು ಚೆಕ್ ಮಾಡಲಾಗಿ, ಸದರಿ ಬಾಕ್ಸದಲ್ಲಿ Original Choice ಕಂಪನಿಯ 90 ML ಅಳತೆಯ ಮದ್ಯ ತುಂಬಿದ 96 ರಟ್ಟಿನ ಪೌಚಗಳು ಅಕಿ- 2688/- ರೂ ಕಿಮ್ಮತ್ತಿನವುಗಳು ಇದ್ದವು.  ಹಾಗೂ ಮದ್ಯ ಮಾರಾಟ ಮಾಡಿದ 530/- ರೂ ನಗದು ಹಣ ದೊರೆತವು. ಸದರಿಯವನಿಗೆ ಮದ್ಯ ಮಾರಾಟ ಮಾಡಲು  ಹಾಗೂ ಸಾಗಾಟ ಮಾಡಲು ಅನುಮತಿ ಪಡೆದುಕೊಂಡ ಬಗ್ಗೆ ವಿಚಾರಿಸಲು ತನ್ನ ಹತ್ತಿರ ಮಾರಾಟ ಮಾಡಲು ಯಾವುದೆ ಪರವಾನಿಗೆ ಇರುವುದಿಲ್ಲ ಎಂದು ತಿಳಿಸಿದನು. ನಂತರ ಸದರಿಯವನ ವಶದಿಂದ 96 Original Choice ಕಂಪನಿಯ 90 ML ಮದ್ಯ ತುಂಬಿದ ರಟ್ಟಿನ ಪೌಚಗಳನ್ನು ನಗದು ಹಣ ಮತ್ತು ಸದರಿಯವನನ್ನು ವಶಕ್ಕೆ ತೆಗೆದುಕೊಂಡು ಸದರಿಯವನೊಂದಿಗೆ  ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ಮಳಖೇಡ ಠಾಣೆ : ಶ್ರೀ ಸಚಿನ ತಂದೆ ಸತೀಷ ಹೊಸುರ ಸಾ: ಹಂಗನಳ್ಳಿ ಇವರು ದಿನಾಂಕ 07-04-2018 ರಂದು  ಸಾಯಂಕಾಲ ನಮ್ಮ ತಾಯಿಯಾದ ಕವಿತಾ ಇವರು ನನಗೆ ಸ್ಟೇಷನತಾಂಡಾಕ್ಕೆ ಹೋಗಿ ತರಕಾರಿ ಹಾಗು ಇತರೆ ಸಾಮಾನು ತೆಗೆದುಕೊಂಡು ಬಾ ಅಂತಾ ಹೇಳಿದ್ದರಿಂದ ನಾನು ನಮ್ಮೂರಿನ ಒಬ್ಬ ವ್ಯಕ್ತಿಯ ಮೋಟಾರ ಸೈಕಲ ಮೇಲೆ ಕುಳಿತುಕೊಂಡು  ಸ್ಟೇಷನತಾಂಡಾಕ್ಕೆ ಹೋಗಿ ಸಾಮಾನು ಖರೀದಿ ಮಾಡಿಕೊಂಡು 07-45 ಪಿ, ಎಮ್ ಸುಮಾರಿಗೆ ನಡೆದುಕೊಂಡು ಹೋಗುತ್ತಿದ್ದಾಗ ಸ್ಟೇಷನತಾಂಡಾದಿಂದ ಸ್ವಲ್ಪ ದೂರ ಬಂದಾಗ ನನ್ನ ಹಿಂದಿನಿಂದ ಒಂದು ಮೋಟಾರ ಸೈಕಲ ನಮ್ಮೂರ ಕಡೆಗೆ ಬರುತ್ತಿರುವುದನ್ನು ಅದರ ಲೈಟಿನ ಬೆಳಕು ಬಿದ್ದಿದ್ದರಿಂದ ನಾನು ರೋಡ ಪಕ್ಕ ನಿಂತು ಆ ಮೋಟಾರ ಸೈಕಲ ಚಾಲಕನಿಗೆ ಡ್ರಾಪ್ ಕೇಳಲು ಕೈ ಸನ್ನೆ ಮಾಡಿದಾಗ ಸದರಿ ಮೋಟಾರ ಸೈಕಲ ಚಾಲಕ ನಿಲ್ಲಿಸಿದಾಗ ನಾನು ಅವನಿಗೆ ನೋಡಲಾಗಿ ಆತ ನಮ್ಮೂರಿನ ನಮ್ಮ ಪೈಕಿಯವನಾದ ಹಣಮಂತ ತಂದೆ ಗಿರಿಮಲ್ಲಪ್ಪ ಹದಗಲ್ ಇದ್ದನು ನಾನು ಆತನ ಮೋಟಾರ ಸೈಕಲ ಮೇಲೆ ಹಿಂದುಗಡೆ ಕುಳಿತುಕೊಂಡು ಕುಳಿತ್ತಿದ್ದೆನು ನಾವಿಬ್ಬರು ಮೋಟಾರ ಸೈಕಲ ಮೇಲೆ ನಮ್ಮೂರಿನ ಕಡೆಗೆ ಹೋಗುತ್ತಿದ್ದಾಗ ಕೋಳಿ ಫಾರ್ಮ ದಾಟಿ ಹೋಗುತ್ತಿದ್ದಾಗ ಹಣಮಂತ ಇತನು ತನ್ನ ವಶದಲ್ಲಿದ್ದ ಮೋಟಾರ ಸೈಕಲ ನಂ;ಕೆಎ-32,ವ್ಹಿ-4886 ನೇದ್ದನ್ನು ರಸ್ತೆಯ ಎಡಭಾಗದಿಂದ ನಿಧಾನವಾಗಿ ಚಲಾಯಿಸಿಕೊಂಡು ಹೋಗುತ್ತಿದ್ದಾಗ 08-00 ಪಿ,ಎಮ್ ಸುಮಾರಿಗೆ ನಮ್ಮ ಎದುರುಗಡೆಯಿಂದ ಒಬ್ಬ ಟ್ರಾಕ್ಟರ ಚಾಲಕ ತನ್ನ ವಶದಲ್ಲಿದ್ದ ಟ್ರಾಕ್ಟರನ್ನು ಅತೀವೇಗ ಹಾಗು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದವನೆ ನಮ್ಮ ಮೋಟಾರ ಸೈಕಲಗೆ ಬಲಗಡೆ ಡಿಕ್ಕಿ ಪಡಿಸಿ ಅಫಗಾತ ಪಡಿಸಿದ್ದರಿಂದ ನನಗೆ ಬಲಗಾಲಿನ ತೊಡೆಗೆ ಭಾರಿ ಗಾಯವಾಗಿ ಕಾಲು ಮುರಿದಿದ್ದು  ಹಾಗು ಹೋಗಿ ಬರುವ ವಾಹನಗಳ ಬೆಳಕಿನಲ್ಲಿ ಹಣಮಂತ ಈತನಿಗೆ ನೋಡಲಾಗಿ ಆತನ ಬಲತಲೆಗೆ ಭಾರಿ ರಕ್ತಗಾಯ,ಬಲಗೈ ಭುಜದ ಹತ್ತಿರ ಭಾರಿ ಗಾಯವಾಗಿ ಮುರಿದಿದ್ದು , ಬಲಗಾಲಿನ ಮೊಳಕಾಲಿನ ಹತ್ತಿರ ಮುರಿದಿದ್ದು  ಹಾಗು ಕಿವಿ ಮತ್ತು ಮೂಗಿನಿಂದ ರಕ್ತ ಸ್ರಾವವಾಗಿರುತ್ತದೆ ಆತ ಮಾತಾಡುವ ಸ್ಥಿತಿಯಲ್ಲಿ ಇರಲಿಲ್ಲ ನಂತರ ನಾನು ನಮಗೆ ಅಫಗಾತ ಪಡಿಸಿದ ಟ್ರಾಕ್ಟರ ನೋಡಲಾಗಿ ಕೇವಲ ಇಂಜಿನ ಮಾತ್ರ ಇದ್ದು  ಅದಕ್ಕೆ ಟ್ರಾಲಿ ಇರಲಿಲ್ಲ, ಸದರಿ ಟ್ರಾಕ್ಟರ ಚಾಲಕನಿಗೆ ಹಾಗು ಟ್ರಾಕ್ಟರ ನಂಬರ ನೋಡಲಾಗಿ ಅದರ ನಂಬರ ಮತ್ತು ಚಾಲಕನ ಹೆಸರು ಗೊತ್ತಾಗಿರುವುದಿಲ್ಲ ನೋಡಿದರೆ ಗುರುತಿಸುತ್ತೆನೆ, ಅಪಘಾತ ಪಡಿಸಿದ ಟ್ರಾಕ್ಟರ ಚಾಲಕ ತನ್ನ ಟ್ರಾಕ್ಟರ ಸಮೇತ ಓಡಿ ಹೋಗಿರುತ್ತಾನೆ, ನಂತರ ರಸ್ತೆಯಿಂದ ಹೋಗುವವರು ನಮಗೆ ಸಹಾಯ ಮಾಡಿದ್ದು  ಅವರ ಹೆಸರು ವಿಳಾಸ ಗೊತ್ತಾಗಿಲ್ಲ ಅಫಗಾತದ ವಿಷಯ ಹಣಮಂತನ ತಂಧೆ ಗಿರಿಮಲ್ಲಪ್ಪ ಹಾಗು ಅಣ್ಣ ತಮ್ಮಕಿಯವನಾದ ಶ್ರೀಮಂತ ನಮ್ಮ ಕಾಕಾ ಈಶಪ್ಪ ಇವರು ಬಂದು ನಮಗೆ ಉಪಚಾರ ಕುರಿತು ಸೇಡಂ ಸರಕಾರಿ ಆಸ್ಪತ್ರೆಗೆ ಒಯ್ದು ಸೇರಿಕೆ ಮಾಡಿ ನಂತರ ಹೆಚ್ಚಿನ ಉಪಚಾರ ಕುರಿತು ಸೇಡಂದಿಂದ ಕಲಬುರಗಿಗೆ ಹೋಗುತ್ತಿದ್ದಾಗ ಮಾಡಬೂಳ ಟೋಲ ಗೇಟ ಹತ್ತಿರ ಹಣಮಂತ ಈತನು ಮೃತ ಪಟ್ಟಿರುತ್ತಾನೆ ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಳಖೇಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.