Police Bhavan Kalaburagi

Police Bhavan Kalaburagi

Wednesday, May 2, 2018

Yadgir District Reported Crimes Updated on 02-05-2018


Yadgir District Reported Crimes

ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ ;- 121/2018  ಕಲಂ 279,337,338 ಐ.ಪಿ.ಸಿ ;- ದಿನಾಂಕ 01-05-2018 ರಂದು 7-45 ಎ.ಎಮ್ ಯಾದಗಿರಿ ಸಕರ್ಾರಿ ಆಸ್ಪತ್ರೆಯಿಂದ ದೂರವಾಣಿ ಮುಖಾಂತರ ಎಮ್.ಎಲ್.ಸಿ ವಸೂಲಾಗಿದ್ದರಿಂದ ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಬೇಟಿ ಕೊಟ್ಟು ಅಲ್ಲಿ ಉಪಚಾರ ಪಡೆಯುತ್ತಿದ್ದ ಸಿದ್ದಲಿಂಗಪ್ಪಾ ತಂದೆ ಭೀಮಣ್ಣಾ ಎಮ್ಮೇನವರ್ ವಯಾ:65 ಉ: ಒಕ್ಕಲುತನ ಜಾ: ಕಬ್ಬೇರ ಸಾ: ಹೋನಗೇರಾ ತಾ:ಜಿ: ಯಾದಗಿರಿ ಇವರು ಹೇಳಿಕೆ ನೀಡಿದ್ದು ಅದರ ಸಾರಾಂಶವೆನೆಂದರೆ ಇಂದು ದಿನಾಂಕ 01-05-2018 ರಂದು ಯಾದಗಿರಿಯಲ್ಲಿ ದನಗಳ ಸಂತೆ ಇದ್ದ ಕಾರಣ ಕುರಿಮರಗಳನ್ನು ಮಾರಾಟ ಮಾಡಲು ಮತ್ತು ಖರೀಧಿಸುವ ಸಲುವಾಗಿ 1) ನಾನು ಹಾಗೂ ನಮ್ಮೂರಿನ 2) ಮೋನಪ್ಪಾ ತಂದೆ ತಿಪ್ಪಣ್ಣಾ ತುಪ್ಪಳ್ಳೇರ  ಇತನ ಅಣ್ಣನಾದ 3) ಶರಣಪ್ಪಾ ತಂದೆ ತಿಪ್ಪಣ್ಣಾ ತುಪ್ಪಳ್ಳೇರ 4) ಮಲ್ಲಪ್ಪಾ ತಂದೆ ರಾಮಣ್ಣಾ ಕಾಕಲವಾರ 5) ಮಲ್ಲಪ್ಪಾ ತಂದೆ ನಿಂಗಪ್ಪಾ ಮೋಟನಳ್ಳಿ 6) ಮಲ್ಲಪ್ಪಾ ತಂದೆ ಏಗಪ್ಪಾ ಕಾಕಲವಾರ  ಎಲ್ಲರೂ ಕೂಡಿಕೊಂಡು ನಮ್ಮ ಗ್ರಾಮದವನೇ ಆದ ಶರಣಪ್ಪಾ ತಂದೆ ಈರಪ್ಪಾ ಮುಷ್ಟಗೇರ ಇತನ ಟಂಟಂ ಅಟೋ ನಂ: ಕೆ.ಎ-33/6164 ನೆದ್ದರಲ್ಲಿ ಕುಳಿತುಕೊಂಡು ಮತ್ತು ಮಾರಾಟ ಮಾಡುವ ಸಲುವಾಗಿ 4-5 ಕುರಿಮರಿಗಳನ್ನು ಹಾಕಿಕೊಂಡು ನಮ್ಮೂರಿನಿಂದ ಮುಂಡ್ರಗಿ ಮಾರ್ಗವಾಗಿ ಬೆಳಗ್ಗೆ   6-30 ಗಂಟೆಗೆ ಹೊರಟೇವು ಟಂಟಂ ಶರಣಪ್ಪಾ ತಂದೆ ಈರಪ್ಪಾ ಮುಷ್ಟಗೇರ ಇತನೇ ನಡೆಸುತ್ತಿದ್ದನು. ಮಾರ್ಗ ಮಧ್ಯದಲ್ಲಿ ಶರಣಪ್ಪಾ ಇತನು ಟಂಟಂ ನ್ನು ಜೋರಾಗಿ ಓಡಿಸುತ್ತಿದ್ದಾಗ ನಾವೇಲ್ಲರೂ ಆತನಿಗೆ ಸಾವಕಾಶವಾಗಿ ಓಡಿಸು ನಮಗೆನು ಅಂತಹ ಅವಸರವಿಲ್ಲಾ ಅಂತಾ ಹೇಳಿದರೂ ಸಹ ಚಾಲಕನು ನಾವು ಹೇಳಿದ ಮಾತನು ಲೆಕ್ಕಿಸದೇ ತನ್ನ ಟಂಟಂನ್ನು ಅತೀ ವೇಗ ಮತ್ತು ಅಲಕ್ಷ್ಯತನದಿಂದ ಓಡಿಸಿ ಹೋನಗೇರಾ ಮುಂಡ್ರಗಿ ಗ್ರಾಮದ ಮಧ್ಯ ಇರುವ ಮುಂಡ್ರಗಿ ಕಟಗರ ಇವರ ಹೊಲದ ಹತ್ತಿರ ಇರುವ ಹಳ್ಳದ ಬ್ರಿಡ್ಜ ಮೇಲೆ ಅದೇ ವೇಗದಲ್ಲಿ ಬಂದು ಬ್ರಿಡ್ಜಿನ ಬಲಭಾಗದಲ್ಲಿ ಪಲ್ಟಿ ಮಾಡಿ ಅಪಘಾತ ಮಾಡಿದನು ಆಗ ಸಮಯ ಬೆಳಗ್ಗೆ 7 ಗಂಟೆಯಾಗಿರಬಹುದು. ಈ ಘಟನೆಯಲ್ಲಿ ನನಗೆ 1) ಬೆನ್ನಿಗೆ ಬಾರಿ ಗುಪ್ತಗಾಯ ಬಲಗಲ್ಲಕ್ಕೆ ತರಚಿದ ಗಾಯಗಳಾಗಿದ್ದವು.  ಹಾಗೂ ನಮ್ಮೂರಿನ 2)ಮೋನಪ್ಪಾ ತಂದೆ ತಿಪ್ಪಣ್ಣಾ ತುಪ್ಪಳ್ಳೇರ ಇತನಿಗೆ ಬಲಕಪಗಂಡಿಯ ಹತ್ತಿರ ರಕ್ತಗಾಯ, ಎಡಪಕ್ಕೆಗೆ ಬಾರಗುಪ್ತಗಾಯ ಮತ್ತು ಎಡಗಡೆ ತಲೆಗೆ ರಕ್ತಗಾಯವಾಗಿತ್ತು.  ಇತನ ಅಣ್ಣನಾದ 3) ಶರಣಪ್ಪಾ ತಂದೆ ತಿಪ್ಪಣ್ಣಾ ತುಪ್ಪಳ್ಳೇರ ಇತನಿಗೆ ಎಡಪಕ್ಕೆಗೆ ಭಾರಿ ಗುಪ್ತಗಾಯ , ತಲೆಗೆ ಗುಪ್ತಗಾಯ ಮತ್ತು ಬಲಮೊಳಕಾಲಿಗೆ ತರಚಿದ ಗಾಯಗಾಳಾಗಿದ್ದವು. 4) ಮಲ್ಲಪ್ಪಾ ತಂದೆ ರಾಮಣ್ಣಾ ಕಾಕಲವಾರ ಇತನಿಗೆ ಬಲಮುಂಡಿಗೆ ಭಾರಿ ಗುಪ್ತಗಾಯವಾಗಿತ್ತು. 5) ಮಲ್ಲಪ್ಪಾ ತಂದೆ ನಿಂಗಪ್ಪಾ ಮೋಟನಳ್ಳಿ ಇತನಿಗೆ ಬಲಪಕ್ಕೆಗೆ ಬಾರಗುಪ್ತಗಾಯ ತಲೆಯ ಮಧ್ಯದಲ್ಲಿ ರಕ್ತಗಾಯ ಮತ್ತು ಎಡಹುಬ್ಬಿಗೆ ರಕ್ತಗಾಯವಾಗಿತ್ತು. 6) ಮಲ್ಲಪ್ಪಾ ತಂದೆ ಏಗಪ್ಪಾ ಕಾಕಲವಾರ ಇತನಿಗೆ ಟೊಂಕ್ಕೆ ಭಾರಗುಪ್ತಗಾಯ ಮತ್ತು ಬಲಗಾಲು ಹಿಡಕಿಗೆ ಭಾರಿಗುಪ್ತಗಾಯವಾಗಿತ್ತು. ಅಲ್ಲದೇ ಚಾಲಕನಾದ 7) ಶರಣಪ್ಪಾ ತಂದೆ ಈರಪ್ಪಾ ಇತನಿಗೆ ಬಲಮೊಳಕಾಲಿಗೆ ಭಾರಿ ಗುಪ್ತಗಾಯ ಮತ್ತು ಎಡಗಡೆ ಗದ್ದಕ್ಕೆ ತರಚಿದ ಗಾಯವಾಗಿತ್ತು. ನಂತರ ಸ್ವಲ್ಪ ಸಮಯದ ನಂತರ ಅಲ್ಲಿಗೆ ಅಂಬುಲೇನ್ಸ ವಾಹನ ಬಂದಿದ್ದು ಗಾಯ ನಾವೇಲ್ಲರೂ ಅದರಲ್ಲಿ ಕುಳಿತುಕೊಂಡು ಉಪಚಾರಕ್ಕೆ ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಬಂದು ಸೇರಿಕೆಯಾಗಿರುತ್ತೆವೆ. ಈ ಘಟನೆ ಟಂಟಂ ನಂ: ಕೆ.ಎ-33/6164 ನೆದ್ದರ ಚಾಲಕ  ಶರಣಪ್ಪಾ ತಂದೆ ಈರಪ್ಪಾ ಮುಷ್ಟಗೇರ ಇತನ ಅಲಕ್ಷ್ಯತನದಿಂದ ಜರುಗಿದ್ದು ಇತನ ವಿರುದ್ದ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಅಂತಾ  ನೀಡಿದ ಹೇಳಿಕೆಯನ್ನು ಪಡೆದುಕೊಂಡು ಮರಳಿ 9 ಎ ಎಮ್ ಕ್ಕೆ ಮರಳಿ ಠಾಣೆಗೆ ಬಂದು ಹೇಳಿಕೆ ಫಿರ್ಯಾಧೀಯ ಸಾರಾಂಸದ ಮೇಲಿಂದ ಠಾಣೆ ಗುನ್ನೆ ನಂ: 121/2018 ಕಲಂ 279, 337, 338 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ. 130/2018  ಕಲಂ. 279, 337, 304 (ಎ) ಐಪಿಸಿ ;- ದಿನಾಂಕ-01-05-2018 ರಂದು ಸಾಯಂಕಾಲ 4 ಗಂಟೆಗೆ ಪಿಯರ್ಾಧಿ ಮಹಾದೇವಪ್ಪ ತಂದೆ (ಲೇಟ) ಹಣಮಂತ್ರಾಯ ಲಕ್ಕಪ್ಪನೋರ ವಯಾ|| 60 ವರ್ಷ ಜಾ|| ಕುರಬರ ಉ|| ಒಕ್ಕಲುತನ ಸಾ|| ಸಂಗವಾರ ಗ್ರಾಮ ತಾ|| ಜಿಲ್ಲಾ|| ಯಾದಗಿರಿ ಇವರು ಸಲ್ಲಿಸಿದ ಪಿಯರ್ಾಧಿ ಸಾರಂಶವೆನೆಂದರೆ   ನಾನು ಈ ಮೇಲ್ಕಂಡ ಹೆಸರು ವಿಳಾಸದ ನಿವಾಸಿತನಿದ್ದು. ಒಕ್ಕಲುತನ ಕೆಲಸ ಮಾಡಿಕೊಂಡು ಹೆಂಡತಿ ಮಕ್ಕಳೊಂದಿಗೆ ಇದ್ದು ಉಪಜೀವನ ಸಾಗಿಸುತ್ತೇನೆ.ನಮ್ಮ ತಂದೆತಾಯಿಯವರಿಗೆ ನಾಲ್ಕು ಜನ ಮಕ್ಕಳಿದ್ದು. ಅವರಲ್ಲಿ 1) ಲಕ್ಕಪ್ಪ 2) ನಾನು ಮಹಾದೇವಪ್ಪ.3) ಸಿದ್ದಪ್ಪ. 4) ಮಲ್ಲಯ್ಯಾ ಅಂತಾ ಇರುತ್ತೇವೆ. ನಾವೇಲ್ಲಾರು ಒಂದೆ ಕುಟುಂಬದಲ್ಲಿ ಇದ್ದು ಒಕ್ಕಲುತನ ಕೆಲಸ ಮಾಡಿಕೊಂಡು ಜೀವನ ಮಾಡಿಕೊಂಡಿರುತ್ತೇವೆ.ಈ ದಿನ ದಿನಾಂಕ 01-05-2018 ರಂದು ಮದ್ಯಾನ 12 ಗಂಟೆಯ ಸುಮಾರಿಗೆ ನಾನು ನನ್ನ ತಮ್ಮ ಮಲ್ಲಯ್ಯಾ ನಾವು ಊರಿನಲ್ಲಿ ಇದ್ದಾಗ ನನ್ನ ತಮ್ಮ ಮಲ್ಲಯ್ಯಾ ಇತನು ನನಗೆ ಈ ದಿನ ನಾನು ಯಾದಗಿರಿ ಆಸ್ಪತ್ರೆಗೆ ಹೋಗಿ ತೋರಿಸಿಕೊಂಡು ಬರುತ್ತೇನೆ ಜೊತೆಯಲ್ಲಿ ಮಗನಾದ ಬಾಗೇಶನನ್ನು ಕರೆದುಕೊಂಡು ಹೋಗಿಬರುತ್ತೇನೆ ಅಂತಾ ಹೇಳಿ ಟಾ.ಟಾ. ಇಂಡಿಕಾ ಕಾರ ನಂ ಕೆಎ-33-ಎ-5054 ನೇದ್ದರಲ್ಲಿ  ಕುಳಿತು ಕಾರಿನ ಚಾಲಕನಾದ  ಮಹೇಶ ತಂದೆ ನಾಗರಾಜ ಇತನು ಚಾಲನೆ ಮಾಡಿಕೊಂಡು ನಮ್ಮೂರಿನಿಂದ ಹೊರಟು ಹೋದರು. ಮದ್ಯಾನ 1-45 ಪಿ ಎಂ ದ ಸುಮಾರಿಗೆ  ಗೌಡಗೇರಾ ಗ್ರಾಮದ ಯಾರೋ ಒಬ್ಬ ವ್ಯಕ್ತಿ ನಮ್ಮ ಗ್ರಾಮಕ್ಕೆ ಪೋನ ಮಾಡಿ ಸಂಗವಾರ ಗ್ರಾಮದ ವಾಸಿಯಾದ ಮಲ್ಲಯ್ಯಾ ಮತ್ತು ಆತನ ಮಗ ಇವರಿಬ್ಬರು ಗೌಡಗೇರಾ ಗ್ರಾಮ ಸೀಮೆ ರಾಮಯ್ಯಾ ತಂದೆ ಕೋಟೆಪ್ಪ ಇವರ ಹೊಲದ ಬಳಿ ರಸ್ತೆಯಲ್ಲಿ ಕಾರ ಚಾಲಕನು ತನ್ನ ಕಾರನ್ನು ಅತೀ ವೇಗ ಮತ್ತು ಅಜಾಗರುಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ರಸ್ತೆಯ ಬಲಬಾಗದಲ್ಲಿ ಇರುವ ರಸ್ತೆಯ ಬದಿ ಇರುವ ಬೇವಿನ ಮರಕ್ಕೆ ದಿನಾಂಕ 01-05-2018 ರಂದು ಮದ್ಯಾನ 1-30 ಗಂಟೆಯ ಸುಮಾರಿಗೆ ಡಿಕ್ಕಿ ಹೊಡೆಸಿದ ಪರಿಣಾಮ ಸ್ಥಳದಲ್ಲಿ ಅಪಘಾತ ಸಂಬವಿಸಿ ಅಪಘಾತದಲ್ಲಿ ಕಾರ ಸಂಪೂರ್ಣವಾಗಿ ಜಖಂಗೊಂಡು ಕಾರನಲ್ಲಿ ಇದ್ದ ಮಲ್ಲಯ್ಯಾ ಮತ್ತು ಆತನ ಮಗ ಬಾಗೇಶ ಇವರಿಬ್ಬರು ಸ್ಥಳದಲ್ಲಿ ಮೃತ ಪಟ್ಟಿರುತ್ತಾರೆ ಮತ್ತು ಕಾರ ಚಾಲಕನಿಗೆ ಗಾಯಗಳು ಆಗಿರುತ್ತವೆ. ಅಂತಾ ವಿಷಯ ತಿಳಿಸಿದ್ದು. ಕೂಡಲೆ ನಾನು ಮತ್ತು ನನ್ನ ಅಣ್ಣ ತಮ್ಮಂದಿರರಿಗೆ ಸಂಬಂದಿಕರಿಗೆ ವಿಷಯ ತಿಳಿಸಿ ನಮ್ಮೂರಿನಿಂದ ಒಂದು ಖಾಸಗಿ ವಾಹನದಲ್ಲಿ ಅಪಘಾತ ಸ್ಥಳಕ್ಕೆ ಹೋಗಿ ನೋಡಿದೆವು. ಅಪಘಾತ ಸ್ಥಳದಲ್ಲಿ ಕಾರ ಇದ್ದುಆ ಕಾರಿನಲ್ಲಿ ನನ್ನ ತಮ್ಮ ಮಲ್ಲಯ್ಯಾ. ಮತ್ತು ಆತನ ಮಗ ಬಾಗೇಶ ಇವರಿಬ್ಬರು ಸಿಕಕ್ಕುಹಾಕಿಕೊಂಡು ಮೃತ ಪಟ್ಟಿದ್ದರು.  ನನ್ನ ತಮ್ಮ ಮಲ್ಲಯ್ಯಾ ಇವರಿಗೆ ನೋಡಲಾಗಿ ಎಡಮೆಲಕಿನ ಹತ್ತಿರ ಹಣೆಗೆ ಎಡಗಡೆ ಗದ್ದಕ್ಕೆ.ಎಡಗಲ್ಲಕ್ಕಡೆ ರಕ್ತಗಾಯ. ಎಡಗೈ ಮೊಣಕೈಕೆಳಗೆ.ಬಾರೀ ಗುಪ್ತಗಾಯವಾಗಿ ಕೈ ಮುರಿದಂತೆ ಆಗಿದೆ. ಎಡಗಾಲು ಮೊಣಕಾಲು ಹತ್ತಿರ ಮುರಿದಂತೆ ಆಗಿದೆ.ಬಲಗಾಲು ಮೊಣಕಾಲು ಹತ್ತಿರ ಮುರಿದಂತೆ ಆಗಿದೆ. ಮತ್ತು ಬಾಗೇಶನಿಗೆ ನೋಡಲಾಗಿ.ಎಡಗಡೆ ತಲೆಗೆ ಬಾರೀ ರಕ್ತಗಾಯವಾಗಿ ರಕ್ತಸ್ರಾವವಾಗಿ ಎಡಕಿವಿಯಲ್ಲಿ ರಕ್ತಬಂದು ಮೃತ ಪಟ್ಟಿದ್ದು. ಎಡಗೈ ಬೆರಳುಗಳಿಗೆ ರಕ್ತಗಾಯವಾಗಿ ಮೃಪಟ್ಟಿದ್ದು ಕಂಡು ಬಂತು. ಮತ್ತು ಚಾಲಕ ಮಹೇಶನಿಗೆ ಸಣ್ಣ ಪುಟ್ಟ ಗಾಯಗಳು ಆಗಿದ್ದು ಕಂಡು ಬಂತು.
    ನನ್ನ ತಮ್ಮಮಲ್ಲಯ್ಯಾ. ಮತ್ತು ಆತನ ಮಗ ಬಾಗೇಶ ಇವರ ಸಾವು ಈ ದಿನ ದಿನಾಂಕ 01-05-2018 ರಂದು ಮದ್ಯಾನ 1-30 ಗಂಟೆಯ ಸುಮಾರಿಗೆ ಕಾರ ಚಾಲಕನಾದ ಮಹೇಶ ಇತನು ತನ್ನ ಕಾರನ ನಂ ಕೆಎ-33-ಎ-5054 ನೇದ್ದನ್ನು ಸೈದಾಪೂರ ಕಡೆಯಿಂದ ಯಾದಗಿರಿ ಕಡೆಗೆ ಹೋಗುವ ಕಾಲಕ್ಕೆ ಗೌಡಗೇರಾ ಗ್ರಾಮದ ಸೀಮೆ ರಾಮಯ್ಯಾ ಪುಜಾರಿ ಇವರ ಹೊಲದ ಬಳಿ ಚಾಲಕನು ತನ್ನ ಕಾರನ್ನು ಅತೀ ವೇಗ ಹಾಗು ಅಜಾಗರುಕತೆಯಿಂದ ಚಾಲನೆ ಮಾಡಿಕೊಂಡು ಹೋಗಿದ್ದರಿಂದ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬಲಬದಿಯ ಬೇವಿನ ಮರಕ್ಕೆ ಡಿಕ್ಕಿ ಹೊಡೆಸಿದ ಪರಿಣಾಮ ಅಪಘಾತ ಸಂಬಂವಿಸಿದ್ದು. ಇದರಿಂದ ಕಾರಿನಲ್ಲಿ ಇದ್ದ ನನ್ನ ತಮ್ಮ ಮತ್ತು ನನ್ನ ತಮ್ಮನ ಮಗ ಅಪಘಾತ ಸ್ಥಳದಲ್ಲಿ ಮೃತಪಟ್ಟಿರುತ್ತಾರೆ. ಕಾರ ಮತ್ತು ಚಾಲಕನ ಮೇಲೆ ಕಾನೂನ ಕ್ರಮವನ್ನು ಕೈಕೊಳ್ಳಲು ಹೇಳಿಕೆ ಪಿಯರ್ಾದಿ ನೀಡಿದ ಸಾರಂಶದ ಮೇಲಿಂದ ಠಾಣಾ ಗುನ್ನೆ ನಂ.130/2018 ಕಲಂ.279,337,304(ಎ) ಐಪಿಸಿ ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು
  
ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ. 131/2018 ಕಲಂ. 171 (ಹೆಚ್), 188.ಐಪಿಸಿ ಮತ್ತು 133 ಆರ್.ಪಿ ಯ್ಯಾಕ್ಟ್ ;- ದಿನಾಂಕ- 01-05-2018 ರಂದು ಬೆಳಿಗ್ಗೆ 10:15 ಗಂಟೆಗೆ ಸೈದಾಪೂರ ಪಟ್ಟಣದಲ್ಲಿ ಕರ್ತವ್ಯದಲಿದ್ದಾಗ ಬಿಜೆಪಿ ಅಭ್ಯಥರ್ಿ ಸಾಯಿಬಣ್ಣ ಬೊರಬಂಡ ಇವರ ನೇತೃತ್ವದಲ್ಲಿ ಬಿಜೆಪಿ ಪರ ಪ್ರಚಾರ ಮಾಡಲು ಸ್ಕಾಪರ್ಿಯೋ ಜೀಪ್ ನಂ.ಕೆಎ-32 ಎನ್-4738 ನೆದ್ದರಲ್ಲಿ ಪ್ರಚಾರ ಮಾಡುತ್ತಾ ನಾಡ ಕಾರ್ಯಲಯದ ಹತ್ತಿರ ಹೋಗುತ್ತಿರುವಾಗ ಸದರಿ ಜೀಪನ್ನು ನಿಲ್ಲಿಸಿ ಪರವಾನಿಗೆ ಬಗ್ಗೆ ವಿಚಾರಿಸಲಾಗಿ ಸದರಿ ಜೀಪಿಗೆ ಪರವಾನಿಗೆ ಇತ್ತು ಅದರ ಸಂಗಡ ಬಿಜೆಪಿ ಧ್ವಜ ಕಟ್ಟಿಕೊಂಡು ಪ್ರಚಾರ ಮಾಡಲು ಹೊರಟಿರುವ ಭೈಕ್ ನಂ.ಕೆಎ-33 ಆರ್ 7172 ಮತ್ತು ಬೈಕ್ ನಂ. ಕೆಎ-33 ಯು 4973 ನೆದ್ದವುಗಳನ್ನು ತಡೆದು ಚುನಾವಣಾಧಿಕಾರಿಗಳಿಂದ ಬೈಕನ್ನು ಪ್ರಚಾರಕ್ಕೆ ಉಪಯೋಗಿಸಲು ಅನುಮತಿ ಪಡೆದುಕೊಂಡು ಪ್ರಚಾರ ಮಾಡುವಿರೋ ಅಂತಾ ವಿಚಾರಿಸಲು ಇಲ್ಲ ಅಂತಾ ತಿಳಿಸಿದರು ವಿಚಾರಣೆ ಕಾಲಕ್ಕೆ ಪ್ರಚಾರಕ್ಕೆ ಬಳಸಿದ ಬೈಕ್ ತೆಗೆದುಕೊಂಡು ಹೊಗಿರುತ್ತಾರೆ, ಹೆಸರು ವಿಳಾಸ ಗೊತ್ತಿರುವದಿಲ್ಲ ಗುರಮಿಠಕಲ್ ಮತ ಕ್ಷೆತ್ರದ ಬಿಜೆಪಿ ಪಕ್ಷದಿಂದ ಸ್ಪದರ್ಿಸಿದ ಸಾಯಿಬಣ್ಣ ಬೊರಬಂಡ ಇವರು ಸೈದಾಪೂರ ಗ್ರಾಮದಲ್ಲಿ ಬೈಕ್ ರ್ಯಾಲಿ ಮಾಡುತ್ತ ಪಕ್ಷದ ಪ್ರಚಾರ ಮಾಡುವ ಬಗ್ಗೆ ಚುನಾವಣೆ ಅಧಿಕಾರಿಗಳಿಂದ ಅನುಮತಿಯನ್ನು ಪಡೆಯದೆ ಅನಧಿಕೃತವಾಗಿ ಪ್ರಚಾರಕ್ಕಾಗಿ ಬಳಸಿ ಚುನಾವಣಾ ವೆಚ್ಚವನ್ನು ಮರೆಮಾಚಿ ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿದ್ದು ಇರುತ್ತದೆ ಸದರಿ ಕ್ಷಿಪ್ರ ಸಂಚಾರಿ ದಳ 5 ರಲ್ಲಿನ ಶರಣಬಸವ ಪ್ರಥಮ ದಜರ್ೆ ಸಹಾಯಕರು ಕೃಷಿ ಇಲಾಖೆ ಯಾದಗಿರಿ ಮತ್ತು ಅಹ್ಮದ್ ಹುಸೇನ ಎ.ಎಸ್.ಐ ಸೈದಾಪೂರ ಪೊಲೀಸ್ ಠಾಣೆ ರವರು ಇದ್ದು ಈ ಬಗ್ಗೆ ನನ್ನದು ಬಿಜೆಪಿ ಅಭ್ಯಥರ್ಿ ಸಾಯಿಬಣ್ಣ ಬೊರಬಂಡ ಮತ್ತು ಇತರ ಬೈಕ್ ಸವಾರರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ ಸದರಿ ಘಟನೆ ವೇಳೆ ಚಿತ್ರಿಕರಣ ಮಾಡಿದ ಸಿಡಿ ಲಗತ್ತಿಸಲಾಗಿದೆ 
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 275/2018 ಕಲಂ 279, 337  338 ಐ.ಪಿ.ಸಿ  ;- ದಿನಾಂಕ 01/05/2018 ರಂದು ಸಾಯಂಕಾಲ 18-20 ಗಂಟೆಗೆ ಶಹಾಪೂರ ಸರಕಾರಿ ಆಸ್ಪತ್ರೆಯಿಂದ ಎಮ್.ಎಲ್.ಸಿ ಇದೆ ಅಂತ ದೂರವಾಣಿ ಮೂಲಕ ಮಾಹಿತಿ ಬಂದ ಮೇರೆಗೆ ನಾನು, ಜೊತೆಯಲಿ ಸಿದ್ರಾಮಯ್ಯ ಸಿ.ಪಿ.ಸಿ 258 ಇಬ್ಬರೂ ಆಸ್ಪತ್ರೆಗೆ ಭೇಟಿ ಮಾಡಿ ಎಮ್.ಎಲ್.ಸಿ ಸ್ವೀಕರಿಸಿಕೊಂಡು ಉಪಚಾರ ಪಡೆಯುತಿದ್ದ ಗಾಯಾಳುದಾರರನ್ನು ವಿಚಾರಿಸಿ ಗಾಯಾಳು ಫಿರ್ಯಾದಿ ಶ್ರೀ ರಾಮು ತಂದೆ ಮರೆಪ್ಪ ಸಿಬರಬಂಡಿ ವಯ 28 ವರ್ಷ ಜಾತಿ ಬೇಡರ ಉಃ ಒಕ್ಕಲುತನ ಸಾಃ ಕಬಾಡಗೇರಾ ಸುರಪೂರ ಇವರನ್ನು ವಿಚಾರಣೆ ಮಾಡಲಾಗಿ  ಹೇಳಿದ್ದೆನೆಂದರೆ, ದಿನಾಂಕ 09/05/2018 ರಂದು ತನ್ನ ಸೋದರತ್ತೆಯ ಮಗ ಮರೆಪ್ಪ ತಂದೆ ಯಂಕಪ್ಪ ಈತನ ಮದುವೆ ಇದ್ದುದ್ದರಿಂದ ಮದುವೆಯ ಲಗ್ನ ಪತ್ರಿಕೆ ಹಂಚುವ ಸಂಬಂದ ತಾನು ಮತ್ತು ತನ್ನ ಸೋದರತ್ತೆಯ ಮಗ ಗಾಯಾಳು ಮರೆಪ್ಪ ಇಬ್ಬರೂ ಕೂಡಿ ಮೋಟರ ಸೈಕಲ್ ನಂ ಕೆಎ-36-ಇಎಲ್-7921 ನೇದ್ದರ ಮೇಲೆ ಸಂಬಂಧಿಕರ ಊರುಗಳಿಗೆ ಹೋಗಿ ಸಾಯಂಕಾಲ ಶಹಾಪೂರದಲ್ಲಿರುವ ತಮ್ಮ ಸಂಬಂಧಿಕರಲ್ಲಿ ಮದುವೆಯ     ಲಗ್ನ ಪತ್ರಿಕೆ ಕೊಟ್ಟು ಮರಳಿ ಮೋಟರ ಸೈಕಲ್ ಮೇಲೆ ಸುರಪೂರಕ್ಕೆ ಹೋಗುತಿದ್ದರು. ಮೋಟರ ಸೈಕಲ್ ಫಿರ್ಯಾದಿ ಚಲಾಯಿಸುತಿದ್ದು, ಮರೆಪ್ಪ ಈತನು ಮೋಟರ ಸೈಕಲ್ ಹಿಂದುಗಡೆ ಕುಳಿತಿದ್ದನು, ರಸ್ತಾಪೂರ ಕಮಾನ ದಾಟಿ ಸಾಯಂಕಾಲ 5-30 ಗಂಟೆಗೆ ಹೋಗುತಿದ್ದಾಗ ಹತ್ತಿಗೂಡುರ ಕೆ.ಇ.ಬಿ ಇನ್ನೂ 1 ಕಿ.ಮೀ ಅಂತರದಲ್ಲಿರುವಾಗ ಎದರುಗಡೆಯಿಂದ ಅಂದರೆ ಹತ್ತಿಗೂಡುರ ಕಡೆಯಿಂದ ಕಾರ ನಂ ಕೆಎ-51-ಎಸ್-8653 ನೇದ್ದರ ಚಾಲಕ ದೀಪಕ್ ತಂದೆ ಹಣಮಂತ್ರಾಯ ಪಾಡಮುಖೆ ಈತನು ಕಾರನ್ನು ಅತಿ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಮೋಟರ ಸೈಕಲ್ಗೆ ಡಿಕ್ಕಿ ಮಾಡಿದರಿಂತ ತನಗೆ ಭಾರಿ ರಕ್ತಗಾಯಗಳಾಗಿರುತ್ತವೆ ಮತ್ತು ಮರೆಪ್ಪ ಈತನಿಗೆ ಸಾದಾ ಸ್ವರೂಪದ ತರಚಿದ ಗಾಯಾಳಾಗಿರುತ್ತವೆ ಸದರಿ ಕಾರ ಚಾಲಕನ ವಿರುದ್ದ ಕ್ರಮ ಕೈಕೊಳ್ಳಬೇಕು  ಅಂತ ಹೇಳಿದ ಹೇಳಿಕೆಯನ್ನು ಟೈಪ್ ಮಾಡಿಸಿಕೊಂಡು ಮರಳಿ ಠಾಣೆಗೆ 19-45 ಗಂಟೆಗೆ ಬಂದು  ಫಿರ್ಯಾದಿಯವರು ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 275/2018 ಕಲಂ 279, 337, 338 ಐ.ಪಿ.ಸಿ ಅಡಿಯಲ್ಲಿ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತದೆ.

ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ. 119/2018 ಕಲಂ. 143 147 342 504 506 ಸಂ. 149  ಐಪಿಸಿ;- ದಿನಾಂಕ:01/05/2018 ರಂದು ಫಿರ್ಯಾದಿ ತನ್ನ ತಾಯಿಯೊಂದಿಗೆ ಮನೆಯಲ್ಲಿದ್ದಾಗ ಆರೋಪಿತರೆಲ್ಲರೂ ಕೂಡಿಬಂದು ಹಳೆಯ ವೈಶಮ್ಯದಿಂದ ಅವಾಚ್ಯ ಶಬ್ದಗಳಿಂದ ಬೈದು ಅವರ ಮನೆಯಲ್ಲಿಯೇ ಕೂಡಿ ಹಾಕಿ ಮನಬಂದಂತೆ ಹೊಡೆದು ಚಾಕು, ಚೂರಿ ತೋರಿಸಿ ಹೆದರಿಸಿ ಬೆದರಿಸಿ ಸೀಮೆ ಎಣ್ಣೆ ಸುರಿಯುತ್ತಿರುವಾಗ ಅಕ್ಕಪಕ್ಕದವರು ಬಂದು ಬಿಡಿಸಿರುತ್ತಾರೆ ಅಂತಾ ಇತ್ಯಾದಿ ಲಿಖಿತ ದೂರಿನ ಸಾರಾಂಶದ ಮೇಲಿಂದಾ  ಕ್ರಮ ಜರುಗಿಸಲಾಗಿದೆ.   

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 233/2018 ಕಲಂ: 498(ಎ) 323,504, 506 ಸಂ.34 ಐಪಿಸಿ ಮತ್ತು 3 &4 ಡಿಪಿ ಕಾಯ್ದೆ 1961 ;- ದಿನಾಂಕ: 01/05/2018 ರಂದು 11 ಎ.ಎಂ.ಕ್ಕೆ ಶ್ರೀಮತಿ ರೇಣುಕಾ ಗಂಡ ಯಲ್ಲಪ್ಪ ಅಲ್ದಾಳ ಸಾ: ಕವಡಿಮಟ್ಟಿ ಇವಳ ಅಜರ್ಿ ಮಾನ್ಯ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಯಾದಗಿರವರಿಂದ ವಿಚಾರಣೆಗೊಂಡುಯ ಪೋಸ್ಟ ಮೂಲಕ ಠಾಣೆಗೆ ವಸೂಲಾಗಿದ್ದು ಸದರಿ ಅಜರ್ಿಯ ಸಾರಾಂಶವೆನೆಂದರೆ ನನಗೆ ಸುಮಾರು 4 ವರ್ಷಗಳ ಹಿಂದೆ ಮದುವೆಯಾಗಿದ್ದು ಸಧ್ಯ ತನು ಅಂತಾ 2 ವರ್ಷದ ಒಬ್ಬಳು ಮಗಳಿರುತ್ತಾಳೆ. ಮುದುವೆಯಾದ 2-3 ವರ್ಷಗಳ ವರೆಗೆ ನನ್ನ ಗಂಡನಾದ ಯಲ್ಲಪ್ಪ ತಂದೆ ಕಾಮಣ್ಣ ಅಲ್ದಾಳ ಹಾಗೂ ಅವರ ಮನೆಯವರೆಲ್ಲರು ನನ್ನನ್ನು  ಚೆನ್ನಾಗಿ ನೊಡಿಕೊಂಡಿದ್ದು ತದ ನಂತರ ಗಂಡನಾದ ಯಲ್ಲಪ್ಪ ಈತನು ನನಗೆ ದಿನಾಲು ನೀನು ಅಡುಗೆ ಮಾಡುವದಿಲ್ಲ ನೀನು ನಿನ್ನ ತವರು ಮನೆಗೆ ಹೋಗು ನಾನು ಬೇರೆ ಮದುವೆ ಮಾಡಿಕೊಳ್ಳುತ್ತೆನೆ ಅಂತಾ ಬೈಯುವದು ಹೊಡೆಯುವದು ಮಾಡುತ್ತಿದ್ದನು. ಇದಲ್ಲದೆ ನಮ್ಮ ಮಾವನಾದ ಕಾಮಣ್ಣ ತಂದೆ ಮಲ್ಲಪ್ಪ ಅಲ್ದಾಳ, ಅತ್ತೆಯಾದ ಮಾನಮ್ಮ ಗಂಡ ಕಾಮಣ್ಣ ಅಲ್ದಾಳ, ಗಂಡನ ಅಣ್ಣನಾದ ಮಲ್ಲಪ್ಪ ತಂದೆ ಕಾಮಣ್ಣ ಅಲ್ದಾಳ ಮಲ್ಲಪ್ಪ ಹೆಂಡತಿಯಾದ ಬೀಮಬಾಯಿ ಇವರೆಲ್ಲರೂ ಕೂಡಾ ನನಗೆ ದಿನಾಲು 4 ತೋಲಿ ಬಂಗಾರ 1 ಲಕ್ಷ ರೂಗಳು ತವರು ಮನೆಯಿಂದ ತಗೆದುಕೊಂಡು ಬಾ ಇಲ್ಲ ಅಂದ್ರ ನೀನಗೆ ಬೆಂಕಿ ಸುಡುತ್ತೆನೆ. ಅಂತಾ ಮಾನಸೀಕ ಮತ್ತು ದೈಹೀಕ ಕಿರುಕುಳ ತೊಂದರೆ ಕೊಡುತ್ತಾ ಬಂದಿದ್ದಲ್ಲದೆ ದಿನಾಂಕ:20-07-2017 ರಂದು 10 ಎ.ಎಂ.ಕ್ಕೆ ನಾನು ಮನೆಯಲ್ಲಿರುವಾಗ ಗಂಡ ಹಾಗೂ ಗಂಡನ ಮನೆಯವರಾದ ಮೇಲೆ ಹೇಳಿದವರೆಲ್ಲರೂ ನನಗೆ ನಿನ್ನ ತವರು ಮನೆಗೆ ಹೋಗು ಇಲ್ಲಿ ಇರಬೇಡ ರಂಡಿ ಬೊಸಡಿ ಅಂತಾ ಅವಾಚ್ಯ ಬೈದು ಕೈಯಿಂದ ಹೊಡೆ ಬಡೆ ಮಾಡುತ್ತಿರಾಗ ಗೊಬ್ಬರ ಅಂಗಡಿಗೆ ಬಂದಿದ್ದ ಕಾಮನಟಗಿ ಗ್ರಾಮದ ಪರಮಣ್ಣ ತಂದೆ ಬಸಪ್ಪ ಗಡ್ಡದ ಮತ್ತು ಸಿದ್ದಪ್ಪ ತಂದೆ ಚಂದಪ್ಪ ಕೋಳುರ ಇವರು ಜಗಳ ಬಡಿಸಿ ಹೀಗೆ ಹೊಡೆ ಬಡೆ ಮಾಡಬೇಡಿರಿ ಅಂತಾ ಅಂದರು ಕೇಳದೆ ನನ್ನನ್ನು ಮನೆಯಿಂದ ಹೊರ ಹಾಕಿದ್ದು ಇರುತ್ತದೆ. ಅಂದು ನಾನು ತವರು  ಮನೆಗೆ ಬಂದಿದ್ದು ಆಗ ನಮ್ಮ ತಂದೆ-ತಾಯಿಯವರು ಸ್ವಲ್ಪ ದಿನ ಇಲ್ಲೆ ಇರು ಇವತ್ತು ನಾಳೆ ನಿನ್ನ ಗಂಡ ಬಂದು ಕರೆದುಕೊಂಡು ಹೊಗಬಹುದು ಅಂತಾ ಹೇಳಿದ್ದಕ್ಕೆ ನಾನು ತವರು ಮನೆಯಲ್ಲಿಯೆ ಇದ್ದಿದ್ದು ಇರುತ್ತದೆ. ಹೀಗಿರುವಾಗ ನನ್ನ ಗಂಡ ಯಲ್ಲಪ್ಪ ಈತನು ನಾನು ತವರು ಮನೆಗೆ ಬಂದ ಸಮಯದಲ್ಲಿ ತಾನು ಬೆರೊಂದು ಮದುವೆ ಮಾಡಿಕೊಂಡಿರುತ್ತಾನೆ ಅಂತಾ ಗೊತ್ತಾಗಿದ್ದು ಇರುತ್ತದೆ.  ಸದರಿಯವರನ್ನು ಕರೆಯಿಸಿ ನನಗೆ  ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
 
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 234/2018 ಕಲಂ: 279,337,338 ಐಪಿಸಿ ಮತ್ತು ಕಲಂ. 187 ಐ.ಎಂ.ವಿ ಕಾಯ್ದೆ ;- ದಿನಾಂಕ:30/042018 ರಂದು ಕಲಬುರಗಿ ಯುನೈಟೆಡ್ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದ ಗಾಯಾಳುದಾರನಾದ ಶ್ರೀ ಮಲ್ಲಪ್ಪ ತಂದೆ ನಿಂಗಪ್ಪ ಜಾಲಗಾರ ಸಾ: ಹೊಸ ಸಿದ್ದಾಪೂರ ಈತನು ಹೇಳಿಕೆ ನಿಡಿದ್ದನ್ನು ಪಡೆದುಕೊಂಡು ಠಾಣೆಗೆ ಬಂದಿದ್ದು ಸಾರಾಂಶವೆನೆಂದರೆ ದಿನಾಂಕ:28-04-2018 ರಂದು ಬೆಳಿಗ್ಗೆ ಸುಮಾರಿಗೆ ಎಂದಿನಂತೆ ನಾನು ಗೌಂಡಿ ಕೆಲಸ ಮಾಡುವ ಕುರಿತು ಸುರಪುರಕ್ಕೆ ಬಂದು ಕೆಲಸ ಮುಗಿಸಿಕೊಂಡು ನನ್ನ ಮೊಟಾರ ಸೈಕಲ್ ನಂಬರ ಕೆಎ-47 ಹೆಚ್-3188 ನೇದ್ದರ ಮೇಲೆ ಸಿದ್ದಾಪೂರ ಸಿಮಾಂತರ ನಾನು ಲಿಜೀಗೆ ಹಾಕಿಕೊಂಡ ಹೋಲಕ್ಕೆ ಹೋಗುವ ಕುರಿತು ಮದ್ಯಾಹ್ನ 1-30 ಗಂಟೆ ಸುಮಾರಿಗೆ ದೇವರಗೊನಾಳ - ಸುರಪೂರ ರಸ್ತೆಯ ಸಿದ್ದಾಪೂರ ಪೂಲ ಹತ್ತಿರ ಹೋಗಿ ರಸ್ತೆಯ ಪಕ್ಕದಲ್ಲಿ ನನ್ನ ಮೊಟಾರ ಸೈಕಲ್ ನಿಲ್ಲಿಸಿ ನಾನು ನಡೆದುಕೊಂಡು ಹೊಲಕ್ಕೆ ಹೋಗಬೇಕು ಅನ್ನುವಷ್ಟರಲ್ಲಿ ದೇವರಗೋನಾಲ ಕಡೆಯಿಂದ ಒಂದು ಕಾರ ನಂಬರ ಕೆಎ-28 ಪಿ-6248 ನೇದ್ದರ ಚಾಲಕನು ತನ್ನ ಕಾರನ್ನು ಅತೀ ವೇಗ ಮತ್ತು ನಿರ್ಲಕ್ಷಿತನದಿಂದ ನಡೆಸಿಕೊಂಡು ಬಂದವನೆ ನನ್ನ ಬೈಕು ಮತ್ತು ನನಗೆ ಡಿಕ್ಕಿ ಪಡಿಸಿದ್ದರಿಂದ ನಾನು ಕೆಳಗೆ ಬಿದ್ದಿದ್ದು, ನೋಡಲು ನನ್ನ ಬಲಗಡೆ ಬೆನ್ನಿನ ಹಿಂದುಗಡೆ ಭಾರಿಗಾಯವಾಗಿ ಎಲುಬು ಮುರಿದಿದ್ದು, ಹಾಗೂ ಎರಡು ಕಾಲುಗಳ ಮಂಡಿಯ ಹತ್ತಿರ ಹಾಗೂ ತಲೆಯ ಕಿವಿಯ ಹತ್ತಿರ ಅಲ್ಲಲ್ಲಿ ರಕ್ತಗಾವವಾಗಿ ನೆಲಕ್ಕೆ ಬಿದ್ದಾಗ ಅದೇ ರಸ್ತೆಯ ಮುಖಾಂತರ ಹೋಗುತ್ತಿದ್ದ ಸಿದ್ದಾಪೂರ ಗ್ರಾಮದ ಗೋಪಣ್ಣ ತಂದೆ ಕೊಟ್ರೆಪ್ಪ ಈತನು ಘಟನೆ ಕಣ್ಣಾರೆ ಕಂಡು ನನ್ನನ್ನು ಎಬ್ಬಿಸಿ ಉಪಚಾರ ಕುರಿತು ಸರಕಾರಿ ಆಸ್ಪತ್ರೆಗೆ ಸುರಪೂರಕ್ಕೆ ಸೇರಿಕೆ ಮಾಡಿದ್ದು, ನಂತರ ಸುದ್ದಿ ತಿಳಿದು ನನ್ನ ತಮ್ಮನಾದ ನಾಗಪ್ಪ ತಂದೆ ನಿಂಗಪ್ಪ ಜಾಲಗಾರ ಈತನು ಆಸ್ಪತ್ರೆಗೆ ಬಂದು ನನ್ನನ್ನು ಹೆಚ್ಚಿನ ಉಪಚಾರ ಕಲಬುರಗಿ ಯುನೈಟೆಡ್ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು ಇರುತ್ತದೆ. ಕಾರ ಚಾಲಕನು ಕಾರ ನಿಲ್ಲಿಸಿ ಓಡಿ ಹೋಗಿದ್ದು ಅವನು ಹೆಸರು ವಿಳಾಸ ಗೊತ್ತಿರುವದಿಲ್ಲ ಕಾರ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಹೇಳಿ ಬರೆಯಿಸಿದ್ದು ನಿಜವಿರುತ್ತದೆ ಅಂತಾ ಕೊಟ್ಟ ಹೇಳಿಕೆಯ ಮೇಲಿಂದ ಠಾಣೆ ಗುನ್ನೆ ನಂಬರ 234/2018 ಕಲಂ. 279,337,338 ಐಪಿಸಿ ಮತ್ತು ಕಲಂ. 187 ಐ.ಎಂ.ವಿ ಕಾಯ್ದೆ ನೇದ್ದರಡಿಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ