Police Bhavan Kalaburagi

Police Bhavan Kalaburagi

Saturday, February 27, 2021

BIDAR DISTRICT DAILY CRIME UPDATE 27-02-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 27-02-2021

 

ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 26/2021, ಕಲಂ. 87 ಕೆ.ಪಿ ಕಾಯ್ದೆ :-

ದಿನಾಂಕ 26-02-2021 ರಂದು ಹಳ್ಳಿ ಗ್ರಾಮದ ದಯಾನಂದ ಪಾಟೀಲ್ ಪಾನ್ ಅಂಗಡಿಯ ಹಿಂದುಗಡೆ ಕೆಲವು ಜನರು ಸಾರ್ವಜನಿಕ ಸ್ಥಳದಲ್ಲಿ ಗೋಲಾಕಾರವಾಗಿ ಕುಳಿತು ಹಣವನ್ನು ಪಣಕ್ಕೆ ಇಟ್ಟು ಅಂದರ ಬಾಹರ್ ಎಂಬ ಸ್ಪಿಟ್ ಜೂಜಾಟ ಆಡುತ್ತಿದ್ದಾರೆಂದು ವಸೀಮ ಪಟೇಲ್ ಪಿ.ಎಸ. (ಕಾ.ಸು) ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಹಳ್ಳಿ ಗ್ರಾಮದ ದಯಾನಂದ ಪಾಟೀಲ್ ಪಾನ್ ಅಂಗಡಿಯ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲು ದಯಾನಂದ ಪಾಟೀಲ್ ಪಾನ್ ಅಂಗಡಿಯ ಹಿಂದುಗಡೆ ಆರೋಪಿತರಾದ ಹಣಮಂತ ತಂದೆ ಬಸಪ್ಪ ಕೊಳಿ ವಯ: 45 ವರ್ಷ, ಜಾತಿ: ಕಬ್ಬಲಿಗ, ಸಾ: ಭೀಮಪೆಟ್ ಸೋಲಾಪುರ, ಸದ್ಯ: ಜೈಭವಾನಿ ಧಾಬಾ ಹಳ್ಳಿ ಇತನು ಹಾಗೂ ಇನ್ನೂ 8 ಜನ ಇವರೆಲ್ಲರೂ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಕುಳಿತುಕೊಂಡು ಹಣವನ್ನು ಪಣಕ್ಕೆ ಇಟ್ಟು ಅಂದರ ಬಾಹರ್ ಎಂಬ ನಶಿಬಿನ ಸ್ಪಿ ಜೂಜಾಟ ಆಡುತ್ತಿರುವುದನ್ನು ನೋಡಿ ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ಸದರಿ ಆರೋಪಿತರ ಮೇಲೆ ದಾಳಿ ಮಾಡಿದಾಗ 4 ಜನ ಆರೋಪಿತರು ತಪ್ಪಿಸಿಕೊಂಡು ಓಡಿ ಹೋಗಿರುತ್ತಾರೆ, ನಂತರ ಅವರಿಂದ 1) ನಗದು ಹಣ 12,000/- ರೂ. ಗಳು ಮತ್ತು 2) 52 ಇಸ್ಪಿಟ್ ಎಲೆಗಳು ಮತ್ತು ಆರೋಪಿತರಿಗೆ ಸಂಬಂಧಿಸಿದ ಮೋಟಾರ ಸೈಕಲಗಳು 1) ಬಜಾಜ್ ಅವೆಂಜರ್ ನಂ. ಟಿ.ಎಸ್-07/ಇಜಿ-3088, 2) ಹಿರೋ ಹೊಂಡಾ ಸ್ಪ್ಲೆಂಡರ್ ಪ್ಲಸ್ ನಂ. ಕೆ.-39/ಜೆ-4257, 3) ಹೊಂಡಾ ಆಕ್ಟೀವಾ ನಂ. ಕೆ.-56/ಜೆ-8957 ನೇದವುಗಳನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಮಂಠಾಳ ಪೊಲೀಸ್ ಠಾಣೆ ಅಪರಾಧ ಸಂ. 15/2021, ಕಲಂ. 379 ಐಪಿಸಿ :-

ಫಿರ್ಯಾದಿ ಮಹೇಶ ತಂದೆ ವಿಜಯಕುಮಾರ ಗೊಗೆ ವಯ: 36 ವರ್ಷ, ಜಾತಿ: ನೀಲಗಾರ, ಸಾ: ಸರ್ವೋದಯ ಕಾಲೋನಿ ಬಸವಕಲ್ಯಾಣ ರವರಿಗೆ ಆರಾಮ ಇಲ್ಲದ ಕಾರಣ ದಿನಾಂಕ 20-02-2021 ರಂದು 1900 ಗಂಟೆಗೆ ಚಿಕಿತ್ಸೆ ಕುರಿತು ನ್ನ ಹಿರೋ ಹೊಂಡಾ ಸ್ಪ್ಲೆಂಡರ್ ಪ್ಲಸ್ ಮೋಟಾರ್ ಸೈಕಲ್ ನಂ. ಕೆಎ-39/ಎಚ್-7112 ನೇದರ ಮೇಲೆ ಆಸ್ಪತ್ರೆಗೆ ಬಸವಕಲ್ಯಾಣದಿಂದ ಮಂಠಾಳ ಗ್ರಾಮಕ್ಕೆ ಬಂದು ಆಸ್ಪತ್ರೆಯ ಮುಂದೆ ವಾಹನ ನಿಲ್ಲಿಸಿ ಚಿಕಿತ್ಸೆ ಪಡೆದುಕೊಳ್ಳಲು ಆಸ್ಪತ್ರೆಯ ಒಳಗಡೆ ಹೋಗಿ ಆಸ್ಪತ್ರೆಯಲ್ಲಿ ವೈದ್ಯರಿಂದ ಚಿಕಿತ್ಸೆ ಪಡೆದುಕೊಂಡು 1930 ಗಂಟೆಗೆ ನನ್ನ ವಾಹನ ನಿಲ್ಲಿಸಿದ ಸ್ಥಳಕ್ಕೆ ಬಂದು ನೋಡಲು ಸದರಿ ಮೋಟಾರ ಸೈಕಲ ಸ್ಥಳದಲ್ಲಿ ಇರಲಿಲ್ಲ, ನಂತರ ಫಿರ್ಯಾದಿಯು ತನ್ನ ಮೋಟಾರ್ ಸೈಕಲನ್ನು ಎಲ್ಲಾ ಕಡೆ ಹುಡುಕಾಡಿದರೂ ಸಿಕ್ಕಿರುವುದಿಲ್ಲ, ಸದರಿ ವಾಹನವನ್ನು ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ, ಸದರಿ ವಾಹನ ಅ.ಕಿ 30,000/- ರೂಪಾಯಿ ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 26-02-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂ. 37/2021, ಕಲಂ. 454, 380 ಐಪಿಸಿ :-

ದಿನಾಂಕ 25-02-2021 ರಂದು 1430 ಗಂಟೆಯಿಂದ 1500 ಗಂಟೆಯ ಅವಧಿಯಲ್ಲಿ ಯಾರೋ ಅಪರಿಚೀತ ಕಳ್ಳರು ಫಿರ್ಯಾದಿ ಶೆರ ಅಹ್ಮದ ಪಟೇಲ ತಂದೆ ಅಬ್ದುಲ ರಹೇಮಾನ ಸಾ: ಮಾಸುಮ ಪಾಶಾ ಕಾಲೋನಿ ಭಾಲ್ಕಿ ರವರ ಗೋದಾಮಿನ ಗೇಟಿನ ಕೀಲಿ ಮುರಿದು ಒಳಗೆ ಪ್ರವೇಶ ಮಾಡಿ ಗೋದಾಮಿನಲ್ಲಿದ್ದ 1) ಒಂದು ಕಬ್ಬಿಣ ಲಂಗ್ :ಕಿ 500/- ರೂ., 2) ಒಂದು ಇಂಜಿನ ಪಂಕ ಅ.ಕಿ 6000/- ರೂ., 3) ಎರಡು ಸೈಲೆನ್ಸರಗಳು ಅ.ಕಿ 1500/- ರೂ., 4) 5 ಆಯೀಲ ಇಂಜಿನಿನ ಟೋಚನ ರಾಡಗಳು ಅ.ಕಿ 800/- ರೂ.,, 5) 10 ಕಬ್ಬಿಣದ ರಾಡುಗಳು ಮತ್ತು ಹಳೆ ಕಬ್ಬಿಣದ ಸಾಮಾನುಗಳು ಅ.ಕಿ 1000/- ರೂ., ಹೀಗೆ ಎಲ್ಲಾ ಸೇರಿ ಒಟ್ಟು ಅ.ಕಿ 9,800/- ರೂ. ದಷ್ಟು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 26-02-2021 ರಂದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.