Police Bhavan Kalaburagi

Police Bhavan Kalaburagi

Saturday, March 28, 2020

KALABURAGI DISTRICT REPORTED CRIMES

ಅಪಘಾತ ಪ್ರಕರಣ :
ಅಫಹಲಪೂರ ಠಾಣೆ : ಶ್ರೀ ಶಿವಲಿಂಗೇಶ್ವರ ತಂದೆ ಸಿದ್ದಾರಾಮ ಜಾಲವಾದಿ ಸಾ: ಹೋಸುರ ರವರು             ದಿನಾಂಕ 14-12-2019 ರಂದು ಬೆಳಿಗ್ಗೆ 10:15 ಗಂಟೆ ಸುಮಾರಿಗೆ ನಾನು ನನ್ನ ಸ್ವಂತ ಕೆಲಸದ ಮೇಲೆ ಮಣ್ಣೂರಕ್ಕೆ ಮೋಟರ ಸೈಕಲ ಮೇಲೆ ಹೋರಟಿರುತ್ತೇನೆ. ಅದೆ ಸಮಯಕ್ಕೆ ನಮ್ಮ ಮಾವನಾದ ಮಹಾಧೇವ ಇವರು ನಮ್ಮೂರಿನ ನಿಂಗರಾಜ ತಂದೆ ಶಿವುಕುಮಾರ ಗೌಡಗಾಂವ ಈತನ ಮೋಟರ ಸೈಕಲ ಮೇಲೆ ಹೋಸೂರದಿಂದ ಮೋಟರ ಸೈಕಲ ಮೇಲೆ ಹಿಂದೆ ಕುಳಿತು ಮಣ್ಣೂುರ ಗ್ರಾಮಕ್ಕೆ ಹೊರಟಿರುತ್ತಾರೆ. ಅಂದಾಜು 10:30 ಗಂಟೆ ಸುಮಾರಿಗೆ ಹೋಸೂರ – ಮಣ್ಣೂರ ರಸ್ತೆಗೆ ಇರುವ ಉಪ್ಪಾರವಾಡಿ ಕ್ರಾಸ ಹತ್ತಿರ ಹೋಗುತ್ತಿದ್ದಾಗ ನಮ್ಮ ಮುಂದೆ ಹೋಗುತ್ತಿದ್ದ ನಿಂಗರಾಜ ಗೌಡಗಾಂವ ಈತನು ಮೋಟರ ಸೈಕಲನ್ನು ವೇಗವಾಗಿ ಚಲಾಯಿಸಿಕೊಂಡು ಹೋಗಿ ಕ್ರಾಸಿನಲ್ಲಿ ಸ್ಕೀಡ್ ಮಾಡಿದನು. ಆಗ ನಾನು ಮೋಟರ ಸೈಕಲನ್ನು ನಿಲ್ಲಿಸಿ ನೋಡಲು ನಮ್ಮ ಮಾವನಾದ ಮಹಾಧೇವನಿಗೆ ಬಲ ಗಾಲು ಮೋಳಕಾಲಿನ ಹತ್ತಿರ ಭಾರಿ ರಕ್ತಗಾಯ ಮತ್ತು ಒಳಪೆಟ್ಟುಗಳು ಆಗಿ ಕಾಲು ಮುರಿದಿತ್ತು. ಮೋಟರ ಸೈಕಲ ನಡೆಸುತ್ತಿದ್ದ ನಿಂಗರಾಜನಿಗೆ ಸ್ವಲ್ಪ ತರಚಿದ ಗಾಯಗಳು ಆಗಿದ್ದವು. ಮೋಟರ ಸೈಕಲ ನಂ ನೋಡಲು ಹಿರೊ ಹೆಚ್.ಎಫ್. ಡಿಲೆಕ್ಸ ಕಂಪನಿಯ ಮೋಟರ ಸೈಕಲ ನಂ ಕೆಎ-28 ಇಸಿ-0990 ಇರುತ್ತದೆ. ನಂತರ ನನ್ನ ಮಾವನು ಮೋಟರ ಸೈಕಲ ಮೇಲೆ ಬಿದ್ದ ವಿಷಯವನ್ನು ನನ್ನ ಇನ್ನೊಬ್ಬ ಮಾವನಾದ ತುಕಾರಾಮ ಇವರಿಗೆ ಪೋನ್ ಮಾಡಿ ತಿಳಿಸಿದ್ದುನಾನು ಮತ್ತು ನನ್ನ ಮಾವ ತುಕಾರಾಮ ಇಬ್ಬರೂ ಕೂಡಿ ನನ್ನ ಮಾವನಾದ ಮಹಾದೇವನನ್ನು ಸೋಲ್ಲಾಪೂರದ ಅಶ್ವೀನಿ ಆಸ್ಪತ್ರೆಗೆ ಕರೆದುಕೊಂಡು ಹೋಗಿಅಲ್ಲಿಂದ ಹೆಚ್ಚಿನ ಚಿಕಿತ್ಸೆ ಕುರಿತು ಮಹಾರಾಷ್ಟ್ರದ ಮಿರಜದಲ್ಲಿರುವ ವಿನಯ ಅರವಟ್ಟಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿರುತ್ತೇವೆ. ನಿಂಗರಾಜ ತಂದೆ ಶಿವಕುಮಾರ ಗೌಡಗಾಂವ ಸಾ|| ಹೋಸೂರ ತಾ|| ಅಫಜಲಪೂರ ಈತನು ಮೋಟರ ಸೈಕಲ ನಂ ಕೆಎ-28 ಇಸಿ-0990 ನೇದ್ದರ ಮೇಲೆ ನನ್ನ ಮವಾನಾದ ಮಹಾಧೇವ ಇವರನ್ನು ಕೂಡಿಸಿಕೊಂಡು ಹೋಗಿಮೋಟರ ಸೈಕಲನ್ನು ಅತಿವೇಗವಾಗಿ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಮೋಟರ ಸೈಕಲನ್ನು ಸ್ಕೀಡ್ ಮಾಡಿ ನನ್ನ ಮಾವನಾದ ಮಹಾಧೇವನ ಬಲಗಾಲು ಮುರಿದಿರುವುದಕ್ಕೆ ಕಾರಣನಾಗಿರುತ್ತಾನೆ. ಕಾರಣ ನಿಂಗರಾಜನ ಮೇಲೆ ಕಾನೂನು ಕ್ರಮ ಜರೂಗಿಸಲು ವಿನಂತಿ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಸ್ವಾಭಾವಿಕ ಸಾವು ಪ್ರಕರಣ :
ಜೇವರಗಿ ಠಾಣೆ : ಶ್ರೀನಿವಾಸರಾವ ತಂದೆ ಶಾಸಯ್ಯ ಇಲ್ಲೋರಿ ತಾ/ ಮದ್ದಿಪಾಡು ಜಿ/  ಪ್ರಕಾಶಂ ರಾ/ ಆಂದ್ರಪ್ರದೇಶ ಹಾ/ವ/ ಯಾಳವಾರ ತಾ/ ಜೇವರಗಿ ರವರು ಪ್ರತೀಕ ತಂದೆ ಬಂಡುರಾವ ಕುಲಕರ್ಣಿ ಸಾ/ ಯಾಳವಾರ ಇವರ 16 ಎಕರೆ ಹೋಲ ಲೀಜಿಗೆ ಹಾಕಿಕೊಂಡು ಸಾಗುವಳಿ ಮಾಡುತ್ತಾ ವೀರಣ್ಣ ಸಾಹು ಸಾ/ ಯಾಳವಾರ ಇವರ ಹೋಲದಲ್ಲಿ ನಮ್ಮಂತೆ ಬಂದಿರುವ ನಮ್ಮ ಭಾಗದ ಇತರೆ ಜನರೊಂದಿಗೆ ಗುಡಿಸಲು ಹಾಕಿಕೊಂಡು ನನ್ನ ಹೆಂಡತಿ ಸುಬ್ಬರತ್ನಮ್ಮ ಇವಳೊಂದಿಗೆ ವಾಸವಾಗಿರುತ್ತೇನೆ. ಇಂದು ದಿನಾಂಕ 27/03/2020 ರಂದು ಬೆಳಿಗ್ಗೆ 06-00 ಎಎಮ್ ಸುಮಾರಿಗೆ ನಾನು ಹೋಲಕ್ಕೆ ಹೋಗಿರುತ್ತೇನೆ ನಂತರ 10-00 ಎಎಮ್ ಸುಮಾರಿಗೆ ಮರಳಿ ನಾನು ನಮ್ಮ ಗುಡಿಸಲಿಗೆ ಬಂದಾಗ ನನ್ನ ಹೆಂಡತಿ ಸುಬ್ಬರತ್ನಮ್ಮ ಇವಳು ಮನೆಯೆಲ್ಲಿ ( ಗುಡಿಸಲಲ್ಲಿ ) ಇರಲಿಲ್ಲ. ಆಗ ನಾನು ನಮ್ಮ ಪಕ್ಕದ ಗುಡಿಸಲಿನವರಿಗೆ ವಿಚಾರಿಸಿದಾಗ ನಿನ್ನ ಹೆಂಡತಿ ಬಟ್ಟೆ ತೋಳೆದುಕೊಂಡು ಬರಲು ಕಾಲುವೆಗೆ ಹೋಗಿರುತ್ತಾಳೆ ಅಂತಾ ವಿಜಯಲಕ್ಷ್ಮೀ ಗಂಡ ಯಾನಾದಿ ಇವಳು ಹೇಳಿದಳು. ನಾನು ಸ್ವಲ್ಪ ಸಮಯ ಕಳೆದರು ನನ್ನ ಹೆಂಡತಿ ಬಟ್ಟೆ ತೊಳೆದುಕೊಂಡು ಮರಳಿ ಮನೆಗೆ ಬಾರದೆ ಇರುವದರಿಂದ ನಾನು ಅಲ್ಲಿಯೆ ವೀರಣ್ಣ ಸಾಹು ಇವರ ಹೋಲದ ಹತ್ತಿರ ಕೇನಾಲಕ್ಕೆ ಹೋಗಿ ನೋಡಿದಾಗ ಕೇನಾಲ ದಂಡೆಯೆಲ್ಲಿ ನನ್ನ ಹೆಂಡತಿಯ ಚಪ್ಪಲಿ ಇದ್ದು ಮತ್ತು ನಮ್ಮ ಬಟ್ಟೆಗಳು ಇದ್ದವು ಆದರೆ ನನ್ನ ಹೆಂಡತಿ ಇರಲಿಲ್ಲ ಆಗ ನಾನು ಗಾಬರಿಯಾಗಿ ನಮ್ಮ ಗುಡಿಸಲು ಹತ್ತಿರ ಬಂದು ಈ ವಿಷಯ ಕೆ .ಶ್ರೀನಿವಾಸಲು ಕಲಗುಂಟ ,ಚಂದ್ರಶೇಖರ ಯಡವಲ್ಲಿ,ಶ್ರೀನಿವಾಸ ವೆಲ್ಲಮ್ಮರಿ,ಇವರಿಗೆ ತಿಳಿಸಿದ್ದು ಎಲ್ಲರು ಕೂಡಿಕೊಂಡು ನನ್ನ ಹೆಂಡತಿ ಕೆನಾಲ ನೀರಿನಲ್ಲಿ ಹರೆದುಕೊಂಡು ಹೋಗಿರಬಹುದು ಎಂದು ಬಾವಿಸಿ ಹುಡುಕಾಡ ತೋಡಗಿದಾಗ ಬೆಳಿಗ್ಗೆ 11-30 ಎಎಮ್ ಸುಮಾರಿಗೆ ನನ್ನ ಹೆಂಡತಿ ಶವ ಗಂವ್ವಾರ ಸೀಮೆಯ ದೇವೀಂದ್ರಪ್ಪ ಕಂದಗಲ್ ಇವರ ಹೋಲದ ಹತ್ತಿರ ಕೇನಾಲ ನೀರಿನಲ್ಲಿ ಕಟ್ಟಿಗೆಗೆ ತಟ್ಟಿ ನಿಂತಿದ್ದು ನಮೆಗೆ ಸಿಕ್ಕಿರುತ್ತದೆ. ಇಂದು ದಿನಾಂಕ 27/03/2020 ರಂದು ಬೆಳಿಗ್ಗೆ 09-00 ಎಎಮ್ ಸುಮಾರಿಗೆ ನನ್ನ ಗೆಂಡತಿ ಬಟ್ಟೆ ತೋಳೆಯಲು ಕೇನಾಲಗೆ ಹೋದಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದರಿಂದ ನನ್ನ ಹೆಂಡತಿಗೆ ಈಜು ಬಾರದೆ ಇದ್ದಿದರಿಂದ ನೀರಿನಲ್ಲಿ ಮುಳಗಿ ಮೃತಪಟ್ಟಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.