Police Bhavan Kalaburagi

Police Bhavan Kalaburagi

Friday, June 21, 2019

KALABURAGI DISTRICT PRESS NOTE

ಸಂ. ಸಿಬ್ಬಂದಿ-1/ನೇಮಕಾತಿ ಪ್ರಕ್ರಿಯೆ/2019                        ಪೊಲೀಸ್ ಅಧೀಕ್ಷಕರವರ ಕಛೇರಿ
                                                                                 ಕಲಬುರಗಿ. ದಿನಾಂಕ.20-06-2019.

ಪತ್ರಿಕಾ ಪ್ರಕಟಣೆ
            ಅಧಿಸೂಚನೆ ಸಂಖ್ಯೆ: 80/ನೇಮಕಾತಿ-2/2018-19. ದಿನಾಂಕ:28-02-2019 ರಂದು ಹೊರಡಿಸಲಾದ ಅಧಿಸೂಚನೆಯಂತೆ ಜೈಲರ್ ಮತ್ತು ವಾರ್ಡರ್ (ಪುರುಷ ಮತ್ತು ಮಹಿಳಾ ) ಹುದ್ದೆಗಳ ಅರ್ಹ ಅಭ್ಯರ್ಥಿಗಳಿಂದ ಅರ್ಜಿ  ಅಹ್ವಾನಿಸಲಾಗಿತ್ತುಸದರಿ ಹುದ್ದೆಗಳ ಲಿಖಿತ ಪರೀಕ್ಷೆಗಳನ್ನು ದಿನಾಂಕ:23-06-2019 ರಂದು ಬೆಳಿಗ್ಗೆ 11-00 ಗಂಟೆಯಿಂದ 12-30 ಗಂಟೆಯವರೆಗೆ ವಾರ್ಡರ್ ಹುದ್ದೆಯ ಲಿಖಿತ ಪರೀಕ್ಷೆಗಳು ಮತ್ತು ಜೈಲರ್ ಹುದ್ದೆಯ ಲಿಖಿತ ಪರೀಕ್ಷೆಗಳು ಮಧ್ಯಾಹ್ನ 2-30 ಗಂಟೆಯಿಂದ ಸಾಯಂಕಾಲ 4-00 ಗಂಟೆಯವರೆಗೆ ಕಲಬುರಗಿ ನಗರದ ಕೆಲವು ಶಾಲಾ / ಕಾಲೇಜುಗಳಲ್ಲಿ ಕೈಕೊಳ್ಳುತ್ತಿದ್ದುಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಸದರಿ ಹುದ್ದೆಯ ಲಿಖಿತ ಪರೀಕ್ಷೆಗಳಿಗೆ ಹಾಜರಾಗಲು ಈ ಮೂಲಕ ಪತ್ರಿಕಾ ಪ್ರಕಟಣೆ ಹೊರಡಿಸಲಾಗಿದೆ.
                                                                                                     ಸಹಿ/-
ಪೊಲೀಸ್ ಅಧೀಕ್ಷಕರು,
                                                                                             ಕಲಬುರಗಿ

KALABURAGI DISTRICT REPORTED CRIMES

ಮಟಕಾ ಜೂಜಾಟದಲ್ಲಿ ನಿರತವರ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ 20.06.2019 ರಂದು ರಾಘವೇಂದ್ರ ನಗರ  ಠಾಣಾ ವ್ಯಾಪ್ತಿಯ ಡಬರಬಾದ ಕ್ರಾಸ್ ಹತ್ತಿರ ಇರುವ ದೇವರ ದಾಸಿಮಯ್ಯ ಮಂದಿರದ ಪಕ್ಕದಲ್ಲಿ ಮೂರು ಜನರು  ಕೂಳಿತುಕೊಂಡು ರಸ್ತೆಯ ಮೇಲೆ ಹೋಗಿ ಬರುವವರಿಗೆ ಇದು ಬಾಂಬೆ ಮಟಕಾ ಇದೆ 1 ರೂಪಾಯಿಗೆ 80 ರುಪಾಯಿ ಬರುತ್ತದೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಟೆದುಕೊಂಡು ಮಟಕಾ ಚೀಟಿ ಬರೆದುಕೂಡುತ್ತಿದ್ದಾರೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಐ. ರಾಘವೇಂದ್ರ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಡಬರಬಾದ ಕ್ರಾಸ್ ಹತ್ತಿರ ಇರುವ ದೇವರ ದಾಸಿಮಯ್ಯ ಮಂದಿರದ ಹತ್ತಿರ ಹೋಗಿ ಮರೆಯಲ್ಲಿ ನಿಂತುಕೊಂಡು ನೋಡಲಾಗಿ ದೇವರ ದಾಸಿಮಯ್ಯ ಮಂದಿರದ ರಸ್ತೆಯ ಪಕ್ಕದಲ್ಲಿ ಮೂರು ಜನರು ಗಿಡದ ನರೆಳಲ್ಲಿ ಕುಳಿತುಕೊಂಡು ರಸ್ತೆಯ ಮೇಲೆ ಹೋಗಿ ಬರುವವರಿಗೆ ಇದು ಬಾಂಬೆ ಮಟಕಾ ಇದೆ 1 ರೂಪಾಯಿಗೆ 80 ರುಪಾಯಿ ಬರುತ್ತದೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಟೆದುಕೊಂಡು ಮಟಕಾ ಚೀಟಿ ಬರೆದುಕೂಡುತ್ತಿರುವ ಬಗ್ಗೆ ಖಚಿತ ಪಡಿಸಿಕೊಂಡು ದಾಳಿ ಮಾಡಲು, ಮಟಕಾ ಬರೆಯಿಸಲು ಬಂದವರು ಓಡಿ ಹೋಗಿದ್ದು ಮಟಕಾ ಚೀಟಿಯನ್ನು ಬರೆದುಕೊಳ್ಳುತ್ತಿದ್ದವರನ್ನು ಹಿಡಿದುಕೊಂಡು ಅವರ ಹೆಸರು ವಿಳಾಸ ವಿಚಾರಿಸಲು ಮೊದಲನೆಯವನು ತನ್ನ ಹೆಸರು 1) ಜಾಹೀದ ಅಲಿ ತಂದೆ ಮಹಿಬೂಬ ಪಟೇಲ ಸಾಃ ಮಿಸ್ಬಾ ನಗರ ಕಲಬುರಗಿ  2) ಮಲ್ಲಿಕಾರ್ಜುನ ತಂದೆ ಶರಣಪ್ಪ ಗೌನಳ್ಳಿ ಸಾಃ ಲಾಲಗಿರಿ ಕ್ರಾಸ್ ಹತ್ತಿರ ಕಲಬುರಗಿ 3)ಅನೀಲಕುಮಾರ ತಂದೆ ಸುರೇಶ ಗಾಜರೆ ಸಾಃ ಕೋಟನೂರ (ಡಿ) ಜಿಡಿಎ ಲೇಔಟ ಕಲಬುರಗಿ ಅಂತ ತಿಳಿಸಿದ್ದು ಸದರಿಯವರಿಂದ ಮಟಕಾ ಜೂಜಾಟಕ್ಕೆ ಸಂಬಂಧಿಸಿದ ನಗದು ಹಣ  ಒಟ್ಟು 1230 ರೂ ನಗದು ಹಣ ಮೂರು ಮಟಕಾ ಚೀಟಿಗಳು ,ಎರಡು ಬಾಲ ಪೇನ್ನಗಳು ಸದರಿ ವಸ್ತುಗಳನ್ನು ಜಪ್ತಿಮಾಡಿಕೊಂಡು ಸದರಿಯವರೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಠಾಣೆ ಗುನ್ನೆ 71/2019 ಕಲಂ:78 (3) ಕೆ.ಪಿ ಆಕ್ಟ್ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ಅಫಜಲಪೂರ ಠಾಣೆ : ದಿನಾಂಕ: 20/06/2019 ರಂದು ಅಫಜಲಪೂರ ಠಾಣಾ ವ್ಯಾಪ್ತಿಯ, ಕಲ್ಲೂರ ತಾಂಡಾದ ಸೇವಾಲಾಲ ಗುಡಿಯ ಹಿಂದೆ ಸಾರ್ವಜನಿಕ ಸ್ಥಳದಲ್ಲಿ  ಇಸ್ಪಿಟ-ಜೂಜಾಟ ನಡೆಯುತ್ತಿದೆ ಅಂತಾ ಮಾಹಿತಿ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಕಲ್ಲೂರ ತಾಂಡಾಕ್ಕೆ ಹೋಗಿ  ಸೇವಾಲಾಲ ಗುಡಿಯಿಂದ ಸ್ವಲ್ಪ ದೂರು ಜಿಪ ನಿಲ್ಲಿಸಿ ಕಾಲ ನಡಿಗೆಯ ಮೂಲಕ ಹೋಗಿ ಮರೆಯಾಗಿ ನಿಂತು ನೋಡಲು ಸೇವಾಲಾಲ ಗುಡಿಯ ಹಿಂದೆ 04 ಜನರು ದುಂಡಾಗಿ ಕುಳಿತು ಅಂದರಗೆ 50 ಬಾಹರಗೆ 50 ಅಂತ ಅಂದರ ಬಾಹರ ಇಸ್ಪಿಟ ಜೂಜಾಟ ಆಡುತ್ತಿರುವದನ್ನು ಖುದ್ದಾಗಿ ನೋಡಿ ದಾಳಿ ಮಾಡಿ ಜೂಜಾಡುತ್ತಿದ್ದ ಮೂರು ಜನರನ್ನು ಹಿಡಿದು ಹೆಸರು ವಿಳಾಸ ವಿಚಾರಿಸಲಾಗಿ 1) ಶ್ರೀಕಾಂತ ತಂದೆ ಚಂದು ರಾಠೋಡ  2) ರವಿ ತಂದೆ ಕೇಸು ರಾಠೋಡ 3) ಸಂತೋಷ ತಂದೆ ತೇಜು ರಾಠೋಡ 4) ರಾಮು ತಂದೆ ವಿಠಲ ರಾಠೋಡ ಸಾ: ಎಲ್ಲರು ಕಲ್ಲೂರ ತಾಂಡಾ ತಾ:ಅಫಜಲಪೂರ  ಅಂತಾ ತಿಳಿಸಿದ್ದು  ಸದರಿಯವರಿಂದ ಜೂಝಾಟಕ್ಕೆ ಬಳಸಿದ  ಒಟ್ಟು 2630/-ರೂ ನಗದು ಹಣ ಮತ್ತು 52 ಇಸೀಟ ಎಲೆಗಳು ಎಲ್ಲವುಗಳನ್ನು ಜಪ್ತಿ ಮಾಡಿಕೊಂಡು ಸದರಿಯವರೊಂದಿಗೆ ಅಫಜಲಪೂರ ಠಾಣೆಗೆ ಬಂದು ಠಾಣೆ ಗುನ್ನೆ ನಂ 96/2019 ಕಲಂ 87 ಕೆ.ಪಿ ಆಕ್ಟ ನೇದ್ದರಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ಜೇವರಗಿ ಠಾಣೆ : ಮುಕ್ತಾರ ಅಲಿ ತಂದೆ ಜಂಗಿಸಾಬ ನದಾಫ್  ಸಾ : ಹರವಾಳ ತಾ : ಜೇವರಗಿ ರವರ ಮಗ ಅಲೀಮ ವ : 9 ವರ್ಷ  ಇತನು ಜೇವರಗಿ ಪಟ್ಟಣದ ನೂರಂದೇಶ್ವರ  ಶಾಲೆಯಲ್ಲಿ  4 ನೇ ತರಗತಿಯಲ್ಲಿ ವಿದ್ಯಾಬ್ಯಾಸ ಮಾಡುತ್ತಿದ್ದಾನೆ. ಎಂದಿನಂತೆ ದಿನಾಂಕ 11.06.2019 ರಂದು ಬೆಳಿಗ್ಗೆ ಸದರಿ ನನ್ನ ಮಗ ಅಲೀಮ ಇತನು ಶಾಲೆಗೆ ಹೋಗಿರುತ್ತಾನೆ.ನಂತರ 10 ಗಂಟೆಯ ಸುಮಾರಿಗೆ ನಮ್ಮೂರಿನ ಪಂಚಯ್ಯಾ ತಂದೆ ಸಿದ್ದಯ್ಯಾ ಹಿರೇಮಠ ಇವರು ನನಗೆ ಪೋನ ಮಾಡಿ ವಿಷಯ ತಿಳಿಸಿದ್ದೇನೆಂದರೆ, ಈಗ ಅರ್ದ ಗಂಟೆಯ ಹಿಂದೆ ಅಂದರೆ 9-30 .ಎಮ್ ಗಂಟೆಗೆ ನಿನ್ನ ಮಗ ಅಲೀಮ ಇತನು ಜೇವರಗಿಯಲ್ಲಿ ನಡೆದುಕೊಂಡು ಶಾಲೆಗೆ ಹೋಗುತ್ತೀರುವಾಗ ಕೋರ್ಟ ಎದುರಿನ ನರಿಬೋಳ ರೋಡಿನ ಮೇಲೆ ಮೋಟಾರ ನಂ KA-32 V-4682  ನೇದ್ದರ ಸವಾರ ಡಿಕ್ಕಿ ಪಡಿಸಿದ್ದರಿಂದ ಅಲೀಮನಿಗೆ ಗಾಯಗಳಾಗಿರುತ್ತವೆ ನಾನು , ವಿಶ್ವನಾಥ  ಮೈನಾಳ ಹಾಗೂ ಅಪಗಾತ ಪಡಿಸಿದ ಮೋ/ ಸೈ ಸವಾರ ಮೂವರು ಕೂಡಿ ಚಿಕಿತ್ಸೆಗಾಗಿ ಸರಕಾರಿ ಆಸ್ಪತ್ರೆ ಜೇವರಗಿಗೆ ತಂದು ಸೇರಿಕೆ ಮಾಡಿರುತ್ತೇವೆ ನೀವು ಕೂಡಲೆ ಬನ್ನೀರಿ ಅಂತಾ ತಿಳಿಸಿದನು. ಆಗ ನಾನು ಮತ್ತು ನನ್ನ ಹೆಂಡತಿ ಮೈಹಿರೂನಬಿ ಇಬ್ಬರೂ ಗಾಬರಿಯಾಗಿ ಸರಕಾರಿ ಆಸ್ಪತ್ರೆ ಜೇವರಗಿಗೆ  ಬಂದು ನೋಡಲಾಗಿ ವಿಷಯ ನಿಜವಿದ್ದು ನನ್ನ ಮಗ ಅಲೀಮ ಇತನಿಗೆ ತಲೆಗೆ ರಕ್ತಗಾಯವಾಗಿ ,ಹೊಟ್ಟೆಗೆ ಭಾರಿ ಒಳಪೆಟ್ಟಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದನು.ಆಗ ನಾನು ಅಲ್ಲಿಯೇ ಇದ್ದ ನಮ್ಮೂರಿನ ಪಂಚಯ್ಯಾ ಹಿರೇಮಠ ಇವರಿಗೆ ಹೇಗಾಯಿತು ಅಂತಾ ವಿಚಾರಿಸಿದಾಗ ಬೆಳಿಗ್ಗೆ 9-30 ಗಂಟೆಯ ಸುಮಾರಿಗೆ ನಾನು ಕೋರ್ಟ ಹತ್ತೀರ ಇರುವ ನನ್ನ ಹೊಟೆಲನಲ್ಲಿ ಇದ್ದಾಗ ನಿನ್ನ ಮಗ ಅಲೀಮ ಇತನು ಕೋರ್ಟ ಮುಂದಿನ ನರಿಬೋಳ ರೋಡಿನ ಮೇಲೆ ನಡೆದುಕೊಂಡು ನೂರಂದೇಶ್ವರ ಶಾಲೆಯ ಕಡೆಗೆ ಹೋಗುತ್ತಿದ್ದನು ಇದೇ ವೇಳೆಗೆ ಜೇವರಗಿ ಕಡೆಯಿಂದ  ಮೋ/ಸೈ ನಂ KA-32 V-4682  ನೇದ್ದರ ಸವಾರನು  ತನ್ನ ವಶದಲ್ಲಿರುವ ಮೋಟಾರ ಸೈಕಲ ಅತೀ ವೇಗ ಮತ್ತು ಅಜಾಗುರಕತೆಯಿಂದ ಚಲಾಯಿಸಿಕೊಂಡು ಬಂದವನೇ ನಿಯಂತ್ರಣ ಕಳೆದುಕೊಂಡು ರೋಡಿನ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವ ನಿನ್ನ ಮಗನಿಗೆ ಹಿಂದಿನಿಂದ ಡಿಕ್ಕಿ ಪಡಿಸಿರುತ್ತಾನೆ. ಆಗ ನಿನ್ನ ಮಗ ಅಲೀಮ ಇತನು ನೆಲಕ್ಕೆ ಬಿದ್ದಾಗ ನಾನು ಮತ್ತು ಅಲ್ಲಿಯೇ ಇದ್ದ ವಿಶ್ವನಾಥ ತಂದೆ ಮರೆಪ್ಪಾ ಮೈನಾಳ ಸಾ// ಜೋಗೂರ ಹಾಗೂ ಡಿಕ್ಕಿ ಪಡಿಸಿದ ಮೋ/ಸೈ ಸವಾರ ಮೂವರು ಕೂಡಿಕೊಂಡು ಅಲೀಮನಿಗೆ ಖಾಸಗಿ ವಹಾನದಲ್ಲಿ ಚಿಕಿತ್ಸೆಗಾಗಿ ಸರಕಾರಿ ಆಸ್ಪತ್ರೆ ಜೇವರಗಿಗೆ ತಂದು ಸೇರಿಕೆ ಮಾಡಿರುತ್ತೇವೆ. ಡಿಕ್ಕಿ ಪಡಿಸಿದ ಮೋ/ಸೈ ನಂ KA-32 V-4682  ನೇದ್ದರ ಸವಾರನ ಹೆಸರು ವಿಳಾಸ ವಿಚಾರಿಸಲಾಗಿ ಅವನು ತನ್ನ ಹೆಸರು ಖಲೀಲ ತಂದೆ ಅಬ್ದುಲಸಾಬ ಚೌಧರಿ ಸಾ : ಚಿಗರಳ್ಳಿ ಕ್ರಾಸ್ ಅಂತಾ ಹೇಳಿ ಆಸ್ಪತ್ರೆಯಿಂದ ಹೋದನು ಅಂತಾ ತಿಳಿಸಿದನು. ನನ್ನ ಮಗ ಅಲೀಮ ಇತನಿಗೆ ನನಗೆ ಡಿಕ್ಕಿ ಪಡಿಸಿ ಓಡಿ ಹೋದ ಮೋ/ಸೈ ನಂ KA-32 V-4682  ನೇದ್ದರ ಸವಾರ ಖಲೀಲ ತಂದೆ ಅಬ್ದುಲಸಾಬ ಚೌಧರಿ ಸಾ : ಚಿಗರಳ್ಳಿ ಕ್ರಾಸ್ ತಾ : ಜೇವರಗಿ ಇತನ ವಿರುದ್ದ  ಸೂಕ್ತ ಕಾನೂನಿನ ಕ್ರಮವನ್ನು ತೆಗೆದುಕೋಳ್ಳಬೆಕೆಂದು  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ,
ಹಲ್ಲೆ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ.ಮನಸೂರ ಪಟೇಲ ತಂದೆ ಉಸ್ಮಾನ ಪಟೇಲ್ ಸಾ; ನಿಯರ ಅಮೀನ ಮಜೀದ ರೆಹಮಾನ ಕಾಲೂನಿ ಹಾಗರಗಾ ರೋಡ ಕಲಬುರಗಿ ರವರು  ದಿನಾಂಕ. 15-6-2019 ರಂದು  ಕಲಬುರಗಿಯ ಎಂ.ಎಸ್.ಕೆ.ಮಿಲ್ ನ ಮೋಯಿನ ಶಾದಿಕಾನದಲ್ಲಿ ನಮ್ಮ ಸಮ್ಮಂದಿಕರ  ಮದುವೆ ಇದ್ದು ಸದರಿ ಮದುವೆ ಕಾರ್ಯಾಕ್ರಮಕ್ಕೆ ಹಾಜರಾಗಲು ನಾನು ಮತ್ತು ನನ್ನ ಹೆಂಡತಿ 1) ರೆಹಮತ ಬೇಗಂ. ಮಕ್ಕಳಾದ 2) ಶಾಹಿದ ಮತ್ತು 3) ಶಗುಪ್ತ ಎಲ್ಲರೂ ಕೂಡಿಕೊಂಡು ನನ್ನ ಟವೇರ ಕಾರ ನಂ.ಕೆ.ಎ.19 ಪಿ-3423 ನೆದ್ದರಲ್ಲಿ ಹೋಗಿದ್ದು ಕಾರ್ಯಾಕ್ರಮ ಮುಗಿಸಿಕೊಂಡು ದಿನಾಂಕ.16-6-2019 ರಂದು ಮದ್ಯ ರಾತ್ರಿ.1-30 ಎ.ಎಂ.ಗಂಟೆಯ ಸುಮಾರಿಗೆ ಮರಳಿ ಬರುತ್ತಿರುವಾಗ ಆಳಂದ ಚಕ್ಕ ಪೊಸ್ಟ ದಾಟಿ ಹುಮನಾಬಾದ ರಿಂಗ ರೋಡ ಕಡೆಗೆ ಬರುತ್ತಿರುವಾಗ ಲಾರಿತಂಗುದಾಣದ ಹತ್ತಿರ ರಿಂಗರೋಡ ಮೇಲೆ ಹೋಗುತ್ತಿರುವಾಗ ಅದೇ ವೇಳಗೆ ಯಾರೋಒಬ್ಬ ವ್ಯಕ್ತಿ ಒಂದು ಭಾರವಾದ ಕಲ್ಲು ತೆಗೆದುಕೊಂಡು ಫ್ರಂಟ ಗ್ಲಾಸಿಗೆ ಹೋಡೆದನು ಆಗ ಸದರಿ ನಮ್ಮಟವೇರ ವಾಹನದ ಎದುರಿನ ಗ್ಲಾಸ ಒಡೆದಿದ್ದು ಮತ್ತು ವಾಹನದ ಎಡಗಡೆ ವಿಂಡೋ ಗ್ಲಾಸ ಕೂಡಾ ಒಡೆದಿರುತ್ತದೆ ಇದರಿಂದ ನನ್ನ ಮುಖದ ಮೇಲೆ, ಎದೆಯ ಮೇಲೆ ಗಾಜಿನ ಚೂರುಗಳು ಬಿದ್ದಿರುತ್ತವೆ ನಮಗೆ ಸಣ್ಣ ಪುಟ್ಟಗಾಯಗಳಾಗಿದ್ದು ಸದರಿ ವ್ಯಕ್ತಿ ನನಗೆ ಕೊಲೆ ಮಾಡುವ ಉದ್ದೇಶದಿಂದ ಇನ್ನೊಂದು ಕಲ್ಲುಎತ್ತಿ ಹಾಕುವಷ್ಟರಲ್ಲಿ ನಾವು ತಪ್ಪಿಸಿಕೊಂಡು ಹಾಗೆ ಗಾಡಿ ಓಡಿಸಿಕೊಂಡು ಬಂದಿರುತ್ತೇನೆ. ಅದೇವೇಳಗೆ ಹಿಂದೆ ಬರುತ್ತಿದ್ದ ವಾಹನಗಳ ಬೆಳಕಿನಿಂದ ಸದರಿ ವ್ಯಕ್ತಿಯನ್ನು ನೋಡಲಾಗಿ ಒಬ್ಬ ವ್ಯಕ್ತಿ ಇದ್ದು ವಯಸ್ಸುಅಂದಾಜು 25-30 ವರ್ಷದವನಿದ್ದು  ಸ್ವಲ್ಪ ಮುಂದೆ ಹೋಗಿ ಕಾರ ನಿಲ್ಲಿಸಿ ವಿಚಾರಿಸಿದ ಸದರಿಯವನ ಹೆಸರು ವಿನೋದ ತಂದೆ ನಾಮದೇವ ರಾಠೋಡ ಆಶ್ರಯ ಕಾಲೂನಿ ಕಲಬುರಗಿ ಅಂತಾ ಗೊತ್ತಾಗಿದ್ದು  ಸದರಿಯವನು ಈ ಮೊದಲು ಕೂಡಾ ರೋಡಿಗೆ ಹೋಗುವ ವಾಹನಗಳಿಗೆ ಕಲ್ಲಿನಿಂದ ಹೊಡದು ಲುಕ್ಸಾನ ಮಾಡಿದವನಿರುತ್ತಾನೆ ಅಂತಾ ಗೊತ್ತಾಗಿರುತ್ತದೆ. ನಮಗೆ ಯಾರಿಗೂ ಅಷ್ಟೆನು ಗಾಯಗಳಾಗಿರುವದಿಲ್ಲಾ ಆಸ್ಪತ್ರೆಗೆ ಹೋಗಿರುವದಿಲ್ಲಾ ಎರಡು ಗ್ಲಾಸಗಳು ಅಕಿ. 8000/-  ಬೆಲೆಬಾಳುವದು ಒಡೆದು ಲುಕ್ಸಾನಆಗಿರುತ್ತದೆ.ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆ  ಗುನ್ನೆ ನಂ.166/2019 ಕಲಂ.427,336,307 ಐಪಿಸಿ  ನೆದ್ದರ ಪ್ರಕಾರ ಪ್ರಕರಣ ದಾಖಲಿಸಲಾಗಿದೆ,
ದ್ವೀಚಕ್ರ ವಾಹನ ಕಳವು ಪ್ರಕರಣ :
ಚೌಕ ಠಾಣೆ : ಶ್ರೀ ಭಾರತ ತಂದೆ ಭೀಮಶ್ಯಾ ಹೊಳಕುಂದಿ ಸಾ: ಮನೆ ನಂ 3-10/1 ತಾಜಸುಲ್ತಾನಪೂರ ಗ್ರಾಮ ರವರು 2017 ನೇ ಸಾಲಿನಲ್ಲಿ ನನ್ನ ಉಪಯೋಗ ಸಲುವಾಗಿ ಒಂದು ಹೀರೊ ಸ್ಪ್ಲೆಂಡರ ಪ್ಲಸ್ ಮೊಟಾರ ಸೈಕಲ ನಂ KA 32 EG 3587 ನೇದ್ದು ಖರೀದಿ ಮಾಡಿದ್ದು ಮೋಟಾರ ಸೈಕಲನ್ನು  ಇಲ್ಲಿಯವರೆಗೆ ನಾನೆ ಉಪಯೋಗ ಮಾಡಿಕೊಂಡು ಬಂದಿರುತ್ತೇನೆ. ದಿನಾಂಕಃ 05.06.2019 ರಂದು ನಾನು ಕೆಲಸ ಮಾಡುವ ರಾಯ್ಕೋಡ ಪಾಟೀಲ ಬಟ್ಟೆ ಅಂಗಡಿಗೆ ಬಂದಿದ್ದು ವೇಳೆಯಲ್ಲಿ ನನ್ನ ಮೋಟರ ಸೈಕಲನ್ನು ಪ್ರತಿನಿತ್ಯ ನಿಲ್ಲಿಸುವಂತೆ ರಸಾಳಕರ ಬನಿಯನ್ ಅಂಗಡಿಯ ಮುಂದೆ ಮದ್ಯಾಹ್ನ 12.30 ಗಂಟೆಗೆ ನಿಲ್ಲಿಸಿ ಕೆಲಸಕ್ಕೆ ಹೋಗಿದ್ದು ಇರುತ್ತದೆ. ಕೆಲಸ ಮುಗಿಸಿಕೊಂಡು ಮರಳಿ ಮನೆಗೆ ಹೋಗಲು ರಾತ್ರಿ 8.30 ಗಂಟೆಗೆ ನಾನು ಮೋಟರ ಸೈಕಲ ನಿಲ್ಲಿಸಿದ ಸ್ಥಳದಲ್ಲಿ ಬಂದು ನೋಡಲು ನನ್ನ ಮೋಟರ ಸೈಕಲ್ ಇರಲಿಲ್ಲ ನಾನು ಅಕ್ಕ-ಪಕ್ಕದಲ್ಲಿ ಎಲ್ಲ ಕಡೆಗೆ ನೋಡಲಾಗಿ ಎಲ್ಲಿಯೂ ನನ್ನ ಮೋಟರ ಸೈಕಲ ಇರಲಿಲ್ಲ ಇದರಿಂದ ಗಾಬರಿಗೊಂಡು ನಾನು ಅಲ್ಲಿಯೇ ಇದ್ದ ನನ್ನ ಗೆಳೆಯರಾದ 1. ಶ್ರೀ ರಮೇಶ ಕುರ್ಲೇ, 2. ಶ್ರೀ ಗುರುರಾಜ ರಂಗದಾಳ, 3. ಶ್ರೀ ಮನೋಹರ ದೇವರಮನಿ ಇವರಿಗೆ ಕರೆದು ನನ್ನ ಮೋಟರ ಸೈಕಲ ನಾನು ನಿಲ್ಲಿಸಿದ ಸ್ಥಳದಲ್ಲಿ ಇಲ್ಲ ಯಾರೋ ಕಳವುಮಾಡಿಕೊಂಡು ಹೋಗಿರುತ್ತಾರೆ ಎಂದು ತಿಳಿಸಿದ್ದು ಆಗ ಅವರೂ ಕೂಡಾ ಬಂದು ಮಾರ್ಕೇಟದಲ್ಲಿ ಎಲ್ಲಕಡೆಗೆ ನನ್ನ ಮೋಟರ ಸೈಕಲನ್ನು ಹುಡುಕಾಡಲಾಗಿ ಎಲ್ಲಿಯೂ ಸಿಕ್ಕಿರುವುದಿಲ್ಲ ನಾವು ಎಲ್ಲರೂ ಅಂದಿನಿಂದ ಇಲ್ಲಿಯವರೆಗೆ ನನ್ನ ಮೋಟರ ಸೈಕಲಗಾಗಿ ಪತ್ತೆಯಾಗಿರುವುದಿಲ್ಲ. ಸದರಿ ನನ್ನ ಕಳುವಾದ ಮೋಟಾರ ಸೈಕಲ ವಿವರ ಕೆಳಗಿನಂತಿದೆ.ಮೋಟಾರ ಸೈಕಲ ವಿವರ :HERO SPLENDOR PLUS, ಮೋಟಾರ ಸೈಕಲ ನಂ: KA 32 EG 3587, ಮೋಟಾರ ಸೈಕಲ  ಚೆಸ್ಸಿ ನಂ:MBLHA10AMEHF10814, ಮೋಟಾರ ಸೈಕಲ ಇಂಜನ ನಂ: HA10EJEHE30090, ಮೋಟಾರ ಸೈಕಲ ಮಾದರಿ: 2014, ಮೋಟಾರ ಸೈಕಲ ಬಣ್ಣ: SILVER, ಅಂದಾಜ ಕಿಮ್ಮತ್ತು : 25000/- ರೂಪಾಯಿ ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆ ಗುನ್ನೆ ನಂ 71/2019 ಕಲಂ 379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.