ದಿನಂಪ್ರತಿ
ಅಪರಾಧಗಳ ಮಾಹಿತಿ ದಿನಾಂಕ: 24-09-2020
ಚಿಟಗುಪ್ಪಾ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 125/2020 ಕಲಂ
457, 380 ಐಪಿಸಿ :-
ಹುಮನಾಬಾದ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 131/2020 ಕಲಂ 78(3) ಕೆಪಿ ಕಾಯ್ದೆ :-
ದಿನಾಂಕ 23/09/2020 ರಂದು 1130 ಗಂಟೆಗೆ ಹುಮನಾಬಾದ
ಎ.ಪಿ.ಎಂ.ಸಿ ಗೇಟ ಹತ್ತಿರ ರೊಡಿನ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ರೋಡಿನ ಮೇಲೆ
ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಬರುತ್ತವೆ ಅಂತಾ ಅವರಿಂದ ಹಣ ಪಡೆದು ಅವರಿಗೆ ಮಟಕಾ
ಅಂಕಿ ಸಂಖ್ಯೆಗಳು ಬರೆದುಕೊಡುತ್ತಿದ್ದಾನೆ ಅಂತ ಖಚಿತ ಬಾತ್ಮಿ ಮೇರೆಗೆ ಪಿಎಸ್ಐ ರವರು
ಸಿಬ್ಬಂದಿಯೊಂದಿಗೆ ಹೋಗಿ ನೋಡಲು ಭಾತ್ಮಿ ನಿಜ ಇದ್ದು 1220 ಗಂಟೆಗೆ ಮಟಕಾ
ಚೀಟಿ ಬರೆದುಕೊಡುತ್ತಿದ್ದ ವ್ಯಕ್ತಿ ಮೇಲೆ ದಾಳಿ ಮಾಡಿ ಹಿಡಿದು ಅವನ ಹೆಸರು ವಿಳಾಸ ವಿಚಾರಿಸಲು
ಅವನು ತನ್ನ ಹೆಸರು ಶಕೀಲ ತಂದೆ ಲಿಯಾಕತ ಅಲಿ ಪಟೇಲ, ವಯ 34 ವರ್ಷ, ಜಾ. ಮುಸ್ಲಿಂ, ಉ. ಡ್ರೈವರ, ಸಾ. ವರವಟ್ಟಿ
(ಬಿ) ಸದ್ಯ ಪಾಶಾ ಹೋಟೆಲ ಹಿಂದಗಡೆ ಕಲ್ಲುರ ರೋಡ ಹುಮನಾಬಾದ ಅಂತಾ ತಿಳಿಸಿದನು ಅವನಿಗೆ ಚೇಕ
ಮಾಡಲು ಮಟಕಾ ಜೂಜಾಟಕ್ಕೆ ಸಂಬಂಧಪಟ್ಟ 1] ನಗದು ಹಣ 1300=00 ರೂಪಾಯಿಗಳು ಹಾಗು 2] ಒಂದು ಬಾಲ
ಪೇನ್ನ 3] 8 ಮಟಕ್ಕಾ ಅಂಕಿ ಸಂಖ್ಯೆಗಳು ಬರೆದ ಚೀಟಿಗಳು ಜಪ್ತಿ ಮಾಡಿಕೊಂಡು ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
ಬಸವಕಲ್ಯಾಣ ಗ್ರಾಮೀಣ ಠಾಣೆ ಅಪರಾಧ
ಸಂಖ್ಯೆ 81/2020 ಕಲಂ 78(3) ಕೆ.ಪಿ.ಕಾಯ್ದೆ :-
ದಿನಾಂಕ: 23/09/2020 ರಂದು 16:30 ಗಂಟೆಗೆ ಪಿಎಸ್.ಐ.
ರವರು ಠಾಣೆಯಲ್ಲಿದ್ದಾಗ ಹಳ್ಳಿ ಗ್ರಾಮದ ಸಮುದಾಯ ಭವನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಜನರಿಂದ ಹಣವನ್ನು ಪಡೆದುಕೊಂಡು 1 ರೂ ಗೆ 80 ರೂಪಾಯಿ ಕೊಡುತ್ತೇನೆ ಅಂತಾ ಜನರಿಗೆ ಮಟಕಾ ನಂಬರ ಚೀಟಿ ಬರೆದು ಕೊಡುತಿದ್ದಾನೆ, ಅಂತಾ ಮಾಹಿತಿ ಬಂದಿದ
ಮೇರೆಗೆ ಸಿಬ್ಬಂದಿಯೊಂದಿಗೆ ಹಳ್ಳಿ ಗ್ರಾಮದ ಸಮುದಾಯ ಭವನದಿಂದ ಹತ್ತಿರ ಒಬ್ಬನು ಸಾರ್ವಜನಿಕ ಸ್ಥಳದಲ್ಲಿ 1 ರೂ ಗೆ 80 ರೂಪಾಯಿ ಕೊಡುತ್ತೇನೆ, ಅಂತಾ ಜೋರಾಗಿ ಕೂಗಿ ಕೂಗಿ ಕರೆದು ಜನರಿಂದ ಹಣವನ್ನು ಪಡೆದುಕೊಂಡು ಮಟಕಾ ಚೀಟಿ ಬರೆದು ಕೊಡುವಾಗ ಖಚಿತಪಡಿಸಿಕೊಂಡು ದಾಳಿ ಮಾಡಿ ಹಿಡಿದು ಆತನಿಗೆ ವಿಚಾರಿಸಲು ತನ್ನ ಹೆಸರು ರಂಜೀತ ತಂದೆ ಅಂಬಾದಾಸ ಗಾಯಕವಾಡ ವಯ:42 ವರ್ಷ ಜಾತಿ:ಎಸ,ಸಿ ಹೊಲಿಯಾ ಉ:ಕೂಲಿಕೆಲಸ ಸಾ:ಹಳ್ಳಿ ಅಂತಾ ತಿಳಸಿದನು ಸದರಿಯವನ ಅಂಗ ಜಡ್ತ ಮಾಡಲು ಇತನ ಹತ್ತಿರ 1) ನಗದು ಹಣ 2480/-2) ನಾಲ್ಕು ಮಟಕಾ ನಂಬರ ಬರೆದ ಚೀಟಿಗಳು 3) ಒಂದು ಬಾಲ ಪೆನ್ನು ಸಿಕ್ಕಿರುತ್ತದೆ. ಪುನಃ ವಿಚಾರಣೆ ಮಾಡಲು ತಿಳಿಸಿದೇನೆಂದರೆ ತಾನು ಬರೆದ ಮಟಕಾ ಚೀಟಿಗಳು ಮತ್ತು ಹಣವನ್ನು ರಾಜೇಶ್ವರ ಗ್ರಾಮದ ದತ್ತು ತಂದೆ ಲಕ್ಷ್ಮಣ ಗಾಂಗ್ರೆ ರವರಿಗೆ ಒಯ್ದು ಕೊಡುತ್ತೇನೆ ಸದರಿಯವರು ನನಗೆ ಕಮೀಷನ ಕೊಡುತ್ತಾನೆ ಅಂತಾ ಹೇಳಿ ತಾನು ಮಟಕಾ ಚೀಟಿಗಳನ್ನು ಬರೆದುಕೊಳ್ಳುತಿದ್ದ ಬಗ್ಗೆ ಒಪ್ಪಿಕೊಂಡಿದ್ದರಿಂದ ಸದರಿಯವನಿಗೆ ಮತ್ತು ಆತನ ಹತ್ತಿರ ಸಿಕ್ಕ ನಗದು ಹಣ ನಾಲ್ಕು ಮಟಕಾ ಚೀಟಿ ಮತ್ತು ಒಂದು ಬಾಲ ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮಾರ್ಕೇಟ
ಪೊಲೀಸ್ ಠಾಣೆ ಅಪರಾಧ ಸಂಖ್ಯೆ 78(3) ಕೆ.ಪಿ. ಕಾಯ್ದೆ :-
ದಿನಾಂಕ: 23-09-2020 ರಂದು 1215 ಗಂಟೆಯ
ಸುಮಾರಿಗೆ ಠಾಣೆಯಲ್ಲಿದ್ದಾಗ ಪೊಲೀಸ್ ಚೌಕ ಹತ್ತಿರ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಪಡೆದು ಮಟಕಾ ಚೀಟಿ ಬರೆದು ಕೊಡುತ್ತಿದ್ದಾನೆಂದು ಖಚಿತ
ಬಾತ್ಮಿ ಮೇರೆಗೆ ಹೋಗಿ ದಾಳಿ ಮಾಡಿ ಆರೋಪಿತರಾದ ಅಶೋಕ ತಂದೆ ಸೂರ್ಯಭಾನ ಉಪಾಧ್ಯಾಯ ನನ್ನು
ದಸ್ತಗಿರಿ ಮಾಡಿ ಅವನ ಹತ್ತಿರ ಇದ್ದ ನಗದು ಹಣ 2150/-ರೂ. ಮಟಕಾ
ಚೀಟಿ ಹಾಗೂ ಒಂದು ಬಾಲಪೆನ್ನು ಜಪ್ತಿ ಮಾಡಿಕೊಂಡು ಪ್ರರಣ ದಾಖಲಿಸಿಕೊಂಡು ತನಿಖೆ
ಕೈಗೋಳ್ಳಲಾಗಿದೆ.
ಕುಶನೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 65/2020 ಕಲಂ 457,
380 ಐಪಿಸಿ :-
ದಿನಾಂಕ:23/09/2020 ರಂದು 1730 ಗಂಟೆಗೆ ಫಿರ್ಯಾದಿ ಶ್ರೀ ಮುಕುಂದರಾವ
ತಂದೆ ಗೋವಿಂದರಾವ ಜೋಶಿ ಸಾ:ಠಾಣಾ ಕುಶನೂರ ಗ್ರಾಮ
ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದ್ದು ಸಾರಾಂಶವೇನೆಂದರೆ, ದಿನಾಂಕ: 12/09/2020 ರಂದು ಶನಿವಾರ ಮಧ್ಯಾಹ್ನ 12 ಗಂಟೆಗೆ ಫಿರ್ಯಾದಿಯು ತನ್ನ ಮಗಳಾದ ವೈಶಾಲಿಯ ಮನೆಗೆ ಮಹಾರಾಷ್ಟ್ರ ರಾಜ್ಯದ
ಅಹಮದಪೂರ ನಗರಕ್ಕೆ ಕುಟುಂಬ ಸಮೇತ ಮನೆಗೆ ಬೀಗ ಹಾಕಿ ಹೋಗಿರುತ್ತಾರೆ ದಿನಾಂಕ:23/09/2020 ರಂದು ಬೆಳಿಗ್ಗೆ 0740 ಗಂಟೆಗೆ ಮನೆಯ ಕೆಲಸ ಮಹಿಳೆ ಸಂಗೀತಾ ಇವರು ಫೋನ್ ಮಾಡಿ ನಿಮ್ಮ ಮನೆಯಲ್ಲಿ ಕಳ್ಳತನ ಆಗಿರುತ್ತದೆ
ಅಂತ ತಿಳಿಸಿದರಿಂದ ಫೀರ್ಯಾದಿಯು ತನ್ನ ಪತ್ನಿ ರಾಧಾ ಹಾಗು ಮಗ ಮಹೇಶ ಮೂವರು ಕೂಡಿ ಕುಶನೂರದ ನಮ್ಮ
ಮನೆಗೆ ಬಂದು ನೋಡಲು ಮನೆಯ ಬೀಗದ ಕೈ ಒಡೆದಿದ್ದು ದೇವರ ಕೋಣೆಯಲ್ಲಿಟ್ಟಿದ್ದ ಮೂರ್ತಿಗಳು ಹಾಗು ವಡವೆಗಳು ಕಳ್ಳತನ
ಆಗಿರುತ್ತವೆ. ಈ ಕಳ್ಳತನವು ದಿನಾಂಕ:22/09/2020 ರಂದು ರಾತ್ರಿ 11 ಗಂಟೆಯಿಂದ ದಿನಾಂಕ:0500 ಗಂಟೆ ನಡುವಿನ ಅವಧಿಯಲ್ಲಿ ನಡೆದಿರುತ್ತದೆ. ಮನೆಯಲ್ಲಿ ಕಳುವಾಗಿರುವ ವಸ್ತುಗಳು: 1] ನಮ್ಮ ಮನೆಯ ಮೂಲ ವಿಗ್ರಹ ವೆಂಕಟೇಶ್ವರ
ಪಂಚ ಧಾತು ಮೂರ್ತಿ -1 (ಉದ್ದ:4 ರಿಂದ 4 ವರೆ ಇಂಚು) ಅ.ಕಿ. 2000/- 2] ಜಗದಂಬಾ ಮರ್ತಿ ಹಿತ್ತಾಳೆಯದ್ದು -3 (ಉದ್ದ: 4 ಇಂಚು) ಅ.ಕಿ. 3000/- 3] ಗೋಪಾಲ ಕೃಷ್ಣ ಮೂರ್ತಿ ತಾಮ್ರದ್ದು - 3 ಅ.ಕಿ. 3000/- 4] ಲಕ್ಷ್ಮಿನರಸಿಂಹ ಮೂರ್ತಿ ತಾಮ್ರದ್ದು -2 ಅ.ಕಿ. 2000/- 5] ಅನ್ನಪೂರ್ಣ ಮೂರ್ತಿ ತಾಮ್ರದ್ದು-2 ಅ.ಕಿ. 2000/- 6] ಮಾರುತಿ ಮೂರ್ತಿ ಹಿತ್ತಾಳಿಯದ್ದು -1, ತಾಮ್ರದ್ದು-1 ಅ.ಕಿ. 2000/- 7] ಗರುಡ ಮೂರ್ತಿ ತಾಮ್ರದ್ದು -1
ಅ.ಕಿ. 1000/-
8] ಗಣಪತಿ ಮೂರ್ತಿ ತಾಮ್ರದ್ದು -1 ಅ.ಕಿ. 1000/- 9] ಬಂಗಾರ 40 ಗ್ರಾಂ. ಅದರಲ್ಲಿ ಅಂದಾಜು 10 ಗ್ರಾಂ ನ 3 ಸರ ಮತ್ತು ಮೂತ್ತಿನ ಹಾರ 2 (10 ಗ್ರಾಂ) ಅ.ಕಿ. 80,000/-10] ಬೆಳ್ಳಿ ಸಾಮಾನುಗಳು (ಪಾವ್ ಕೆ.ಜಿ)-
ಬೆಳ್ಳಿಯ ದೇವರ ಛತ್ರಿಗಳು3, ಮಕರ1, ಪತಾಕೆ1 ಅ.ಕಿ. 10000/- ಹೀಗೆ ಒಟ್ಟು 1,06,000/- ರೂ. ಬೆಲೆಯುಳ್ಳದ್ದು ಕಳ್ಳರು ಕಳ್ಳತನ
ಮಾಡಿಕೊಂಡು ಹೋಗಿರುತ್ತಾರೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಗೋಳ್ಳಲಾಗಿದೆ.