ದಿನಂಪ್ರತಿ
ಅಪರಾಧಗಳ ಮಾಹಿತಿ ದಿನಾಂಕ: 08-04-2020
ಸಂತಪೂರ
ಠಾಣೆ ಅಪರಾಧ ಸಂಖ್ಯೆ 25/2020
ಕಲಂ 32, 34
ಕೆ ಇ ಕಾಯ್ದೆ 273
ಐಪಿಸಿ :-
ದಿನಾಂಕಃ 07/04/2020
ರಂದು ರಂದು ಬೆಳ್ಳಿಗ್ಗೆ 0515 ಗಂಟೆಗೆ ಶ್ರೀಮತಿ
ಸುವರ್ಣ ಪಿ.ಎಸ.ಐ (ಅ.ವಿ) ಸಂತಪೂರ ಠಾಣೆ ರವರು ಠಾಣೆಯಲ್ಲಿರುವಾಗ ಇಬ್ಬರೂ ವ್ಯಕ್ತಿಗಳೂ ಮಸ್ಕಲ್-
ಸಂತಪೂರ ರೋಡಿನ ಮೇಲೆ ಮಾಜಿ ಸೈನಿಕ ಶಾಲೆಯ ಹತ್ತಿರ ಒಂದು ಬಿಳಿ ಕ್ಯಾನಿನಲ್ಲಿ ಕಳ್ಳ ಭಟ್ಟಿ
ಸರಾಯಿ ತುಂಬಿಕೊಂಡು ಮಾರಾಟ ಮಾಡಲು ತರುತ್ತಿದ್ದಾರೆ ಅಂತ ಖಚಿತ ಮಾಹಿತಿ ಬಂದ ಮೇರಗೆ
ಸಿಬ್ಬಂದಿಯೊಂದಿಗೆ ಹೋಗಿ ದಾಳಿ ಮಾಡಿದ್ದಾಗ ಒಬ್ಬ
ವ್ಯಕ್ತಿಯು ಓಡಿ ಹೋಗಿದ್ದು ಇನ್ನೋಬ ವ್ಯಕ್ತಿಯು ಸಿಕ್ಕಿದ್ದು ಅವನ ಹೆಸರು ವಿಳಾಸ ವಿಚಾರಿಸಿದ್ದು
ಅವನು ತನ್ನ ಹೇಸರು ಶಿವಕುಮಾರ ತಂದೆ ರಾಮಣ್ಣಾ
ವಡ್ಡರ ವ/ 30 ವರ್ಷ ಜಾ/ ವಡ್ಡರ ಉ/
ಕೂಲಿ ಸಾ/ ಸಂತಪೂರ ಅಂತ ತಿಳಿಸಿದ್ದು ನಂತರ ಅವನ ಹತ್ತಿರ ಇದ್ದ ಒಂದು ಬಿಳಿ ಪ್ಲಾಸ್ಟಿಕ
ಕ್ಯಾನವನ್ನು ನೋಡಲಾಗಿ ಅದರಲ್ಲಿ ಅಂದಾಜು 14 ಲೀಟರಿನಷ್ಟು ಕಳ್ಳ
ಭಟ್ಟಿ ಸರಾಯಿ ಇದ್ದು ಸದರಿ ಸರಾಯಿಯನ್ನು ಒಂದು ಲೀಟರಿಗೆ 100-/ರೂಪಾಯಿ ಯಂತೆ ಒಟ್ಟು ಅ,ಕಿ 1400/-ರೂಪಾಯಿ ಆಗಬಹುದು.
ಆರೋಪಿತನಿಗೆ ಪಂಚರ ಸಮಕ್ಷಮ ಅಂಗ ಶೋಧನ ಮಾಡಲಾಗಿ ಸದರಿ ಆರೋಪಿತನ ಹತ್ತಿರ ಇದ್ದ ಒಟ್ಟು ನಗದು ಹಣ 500/-ರೂಪಾಯಿ ನೇದ್ದನ್ನು
ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬಸವಕಲ್ಯಾಣ ಗ್ರಾಮೀಣ ಠಾಣೆ ಅಪರಾಧ ಸಂಖ್ಯೆ 22/2020 ಕಲಂ
15(ಎ), 32(3) ಕೆ.ಇ. ಕಾಯ್ದೆ :-
ದಿನಾಂಕ 07-04-2020 ರಂದು ಮದ್ಯಾನ್ಹ 1400 ಗಂಟೆಯಿಂದ 2000 ಗಂಟೆಯವರೆಗೆ ಮನ್ನಳ್ಳಿ ಬಾರ್ಡರ ಚಕ್ ಪೊಸ್ಟ ಉಸ್ತುವಾರಿ ಕರ್ತವ್ಯ ಇದ್ದರಿಂದ
ಜೊತೆಯಲ್ಲಿ ಲೊಕೇಶ ಸಿಪಿಸಿ 1152 ಹಾಗೂ ಜೀಪ ಚಾಲಕ ವಿಕ್ರಮ ಸಿಪಿಸಿ 1543 ರವರೊಂದಿಗೆ ಪೊಲೀಸ್ ಜೀಪ ನಂಬರ ಕೆಎ-38-ಜಿ-287
ನೇದ್ದರಲ್ಲಿ ಹೋಗಿ ಚೆಕ್ ಪೊಸ್ಟ ಕರ್ತವ್ಯ 2000 ಗಂಟೆಯವರೆಗೆ ಮಾಡಿ ಮರಳಿ ಠಾಣೆಗೆ ಬರುವಾಗ 2015 ಗಂಟೆಗೆ ಹಳ್ಳಿ ಗ್ರಾಮದ ಬಸ್ಸ ನಿಲ್ದಾಣದ ಹತ್ತಿರ
ಇದ್ದಾಗ ಮಾಹಿತಿ ಬಂದಿದೇನೆಂದರೆ ಹಳ್ಳಿ ಗ್ರಾಮ ಮೊರಖಂಡಿ ಕ್ರಾಸ ಹತ್ತಿರ ಇರುವ
ಸಾರ್ವಜನಿಕ ಸ್ಥಳದಲ್ಲಿ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಗೆ ಅನಧಿಕೃತವಾಗಿ
ಸರಾಯಿವುಳ್ಳ ಬಾಟಲಗಳನ್ನು ಮಾರಾಟ ಮಾಡುವ ಕುರಿತು ತನ್ನ ಹತ್ತಿರ ಸರಾಯಿವುಳ್ಳ ಬಾಟಲಿಗಳನ್ನು
ಇಟ್ಟುಕೊಂಡು ಕುಳಿತಿದ್ದಾನೆ ಮತ್ತು ಅದೆ ಸ್ಥಳದಲ್ಲಿ ಸಾರ್ವಜನಿಕರಿಗೆ ಸರಾಯಿ ಕುಡಿಯಲು ಅನುವು
ಮಾಡಿಕೋಡುತ್ತಿದ್ದನೆ.ಅಂತಾ ಭಾತ್ಮಿ ಬಂದ ಮೇರೆಗೆ 2020 ಗಂಟೆಗೆ ಹಳ್ಳಿ ಗ್ರಾಮದ ಮೊರಖಂಡಿ ಕ್ರಾಸದಿಂದ ಒಂದು ಫರ್ಲಾಂಗ
ದೂರದಲ್ಲಿ 2040 ಪಿ ಎಮ್ ಗಂಟೆಗೆ ತಲುಪಿ ಜೀಪಿನಿಂದ
ಕೆಳಗೆ ಇಳಿದು ನೋಡಲು ಮೊರಖಂಡಿ ಕ್ರಾಸ ಹತ್ತಿರ ಒಂದು ಚೀಲದಲ್ಲಿ ಸರಾಯಿ ಇಟ್ಟಿಕೊಂಡು
ಅನಧಿಕೃತವಾಗಿ ಸರಾಯಿವುಳ್ಳ ಬಾಟಲಗಳನ್ನು ಮಾರಾಟ ಮಾಡುವ ಕುರಿತು ತನ್ನ ಹತ್ತಿರ ಸರಾಯಿವುಳ್ಳ
ಬಾಟಲಿಗಳನ್ನು ಇಟ್ಟುಕೊಂಡು ಕುಳಿತಿದ್ದಾನೆ ಮತ್ತು ಅದೆ ಸ್ಥಳದಲ್ಲಿ ಸಾರ್ವಜನಿಕರಿಗೆ ಸರಾಯಿ
ಕುಡಿಯಲು ಅನುವು ಮಾಡಿಕೋಡುತ್ತಿದ್ದನ್ನು ನೊಡಿ ಖಚಿತ ಪಡಿಸಿಕೊಂಡು ಆ ವ್ಯಕ್ತಿಯ ಮೇಲೆ
ನಾವೇಲ್ಲರೂ ಪಂಚರ ಸಮಕ್ಷಮ 2045 ಪಿ ಎಮ್ ಗಂಟೆಗೆ ದಾಳಿ ಮಾಡಿದಾಗ
ಅಲ್ಲೆ ಸರಾಯಿ ಖರೀದಿ ಮಾಡುತ್ತಿದ್ದ ಜನರು ಓಡಿ ಹೋಗಿರುತ್ತಾರೆ. ಸರಾಯಿ ಮಾರಾಟ ಮಾಡುತ್ತಿದ್ದ
ವ್ಯಕ್ತಿಗೆ ಹಿಡಿದು ನಾನು ಪಂಚರ ಸಮಕ್ಷಮ ಅತನ ಹೆಸರು ವಿಚಾರಿಸಲು ಆತನು ತನ್ನ ಹೆಸರು ಪರಮೇಶ್ವರ ತಂದೆ ಶಿವಪುತ್ರಪ್ಪಾ
ಚಪ್ಪಳಗೆ ವಯ 40 ವರ್ಷ ಜಾತಿ ಲಿಂಗಾಯತ ಉದ್ಯೋಗ ಕೂಲಿ
ಕೆಲಸ ಸಾ: ಹಳ್ಳಿ ಗ್ರಾಮ ತಾ: ಬಸವಕಲ್ಯಾಣ 1] ನಾಕ್ ಔಟ ಹೈ ಪಂಚ್ ಸ್ಟ್ರಾಂಗ ಬೀರ 330 ಎಂಎಲ ನ 3 ಬಾಟಲಗಳು
ಒಂದರ ಬೆಲೆ 70 ರೂಪಾಯಿ 10ರ ಬೆಲೆ 721 ರೂಪಾಯಿ ನೇದ್ದನ್ನು
ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಗೋಳ್ಳಲಾಗಿದೆ.