Police Bhavan Kalaburagi

Police Bhavan Kalaburagi

Tuesday, June 15, 2021

BIDAR DISTRICT DAILY CRIME UPDATE 15-06-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 15-06-2021

 

ಬಗದಲ ಪೊಲೀಸ್ ಠಾಣೆ ಅಪರಾಧ ಸಂ. 34/2021, ಕಲಂ. 279, 337, 338, 304(ಎ) ಐಪಿಸಿ ಜೊತೆ 187 ಐಎಂವಿ ಕಾಯ್ದೆ :-

ದಿನಾಂಕ 14-06-2021 ರಂದು ಫಿರ್ಯಾದಿ ರೇಸಾ ಬೇಗಂ ಗಂಡ ಚಾಂದಾಪಾಶಾ, ವಯ:30 ವರ್ಷ, ಜಾತಿ: ಮುಸ್ಲಿಂ, ಸಾ: ಸಾತೋಳಿ ರವರ ತಮ್ಮನಾದ ಖೈರೋದ್ದಿನ ತಂದೆ ಮೈನೋದ್ದಿನ ಜಮಾದರ, ವಯ: 25 ವರ್ಷ, ಜಾತಿ: ಮುಸ್ಲಿಂ, ಸಾ: ನಾಗಿದಲಾಯಿ, ತಾ: ಚಿಂಚೋಳಿ ಇತನ ಮದುವೆಯ ಕಾರ್ಯಕ್ರಮದ ಬಟ್ಟೆ ಮತ್ತು ಅಡುಗೆ ಸಾಮಾನುಗಳು ತರಲು ಫಿರ್ಯಾದಿಯು ತನ್ನ ತಮ್ಮ ಖೈರೋದ್ದಿನ, ತಾಯಿ ಮುಮತಾಜಬೀ ಗಂಡ ಮೈನೋದ್ದಿನ ಜಮಾದರ, ವಯ: 56 ವರ್ಷ ಹಾಗೂ ಮಗಳು ಮಹೇಕ ತಂದೆ ಚಾಂದಾಪಾಶ ಜಮಾದರ ವಯ: 8 ವರ್ಷ ಎಲ್ಲರೂ ಸೇರಿ ಸಿರಾಜ ತಂದೆ ಮಶಾಕಸಾಬ ವಯ: 38 ವರ್ಷ, ಸಾ: ತುಮಕುಂಟಾ, ತಾ: ಚಿಂಚೋಳಿ ಇತನ ಆಟೋ ನಂ. ಕೆಎ-32/ಬಿ-9742 ನೇದರಲ್ಲಿ ನಾಗಿದಲಾಯಿಂದ ಬೀದರಗೆ ಹೋಗಿ ಬೀದರ ಗಾಂಧಿಗಂಜನಲ್ಲಿ ಮದುವೆ ಬಟ್ಟೆ ಮತ್ತು ಅಡುಗೆ ಸಾಮಾನುಗಳು ಖರೀದಿ ಮಾಡಿ ಪುನಃ ಬೀದರದಿಂದ ನಾಗಿದಲಾಯಿಗೆ ಸದರಿ ಆಟೋ ನೇದರಲ್ಲಿ ಬರುತ್ತಿರುವಾಗ ಬಗದಲ ಧರಿ ಹತ್ತಿರ ಬಂದಾಗ ಸದರಿ ಆಟೋ ಚಾಲಕನಾದ ಆರೋಪಿ ಸಿರಾಜ ತಂದೆ ಮಶಾಕಪಾಶಾ ಸಾ: ತುಮಕುಂಟಾ ಇತನು ತನ್ನ ಆಟೋವನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿ ವೇಗ ಹತೋಟಿಯಲ್ಲಿಟ್ಟುಕೊಳ್ಳದೇ ಆಟೋವನ್ನು ಪಲ್ಟಿ ಮಾಡಿ ಆಟೋ ಸ್ಥಳದಲ್ಲಿ ಬಿಟ್ಟು ಓಡಿ ಹೋಗಿರುತ್ತಾನೆ, ಸದರಿ ಪಲ್ಟಿಯಿಂದ ಆಟೋದಲ್ಲಿ ಕುಳಿತ ಫಿರ್ಯಾದಿಯ ತಲೆಯಲ್ಲಿ ಭಾರಿ ರಕ್ತಗಾಯ, ಮೂಗಿಗೆ ರಕ್ತಗಾಯ, ಹಲ್ಲಿಗೆ ಪೆಟ್ಟು ಬಿದ್ದಿದ್ದು, ಬಲಭುಜಕ್ಕೆ ಭಾರಿ ಗುಪ್ತಗಾಯವಾಗಿರುತ್ತದೆ, ಮಗಳು ಮಹೇಕ ಇವಳಿಗೆ ಕಾಲುಗಳಿಗೆ ತರಚಿದ ರಕ್ತಗಾಯವಾಗಿರುತ್ತದೆ ಹಾಗೂ ತಮ್ಮ ಖೈರೋದ್ದಿನ ಇವನಿಗೆ ತಲೆಯಲ್ಲಿ ಭಾರಿ ರಕ್ತಗಾಯವಾಗಿ ಬಾಯಿಯಿಂದ, ಮೂಗಿನಿಂದ, ಕಿವಿಯಿಂದ ರಕ್ತಬಂದಿರುತ್ತದೆ ಮತ್ತು ಬಲಗಾಲ ಪಾದದ ಹತ್ತಿರ ರಕ್ತಗಾಯವಾಗಿ ಮಾತನಾಡುವ ಸ್ಥಿತಿಯಲ್ಲ ಇರಲ್ಲಿಲ್ಲ, ತಾಯಿ ಮುಮತಾಜಬೀ ಇವಳಿಗೆ ತಲೆಯಲ್ಲಿ ಭಾರಿ ರಕ್ತಗಾಯವಾಗಿ ಬಾಯಿಯಿಂದ, ಕಿವಿಯಿಂದ, ಮೂಗಿನಿಂದ ರಕ್ತ ಬಂದು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾಳೆ, ಆಗ ಅಲ್ಲಿಂದಲೇ ಹೋಗುತ್ತಿದ್ದ, ಚಂದ್ರಕಾಂತ ತಂದೆ ಮಾರುತಿ ಸಾ: ಬಗದಲ ರವರು ನೋಡಿ ತಮ್ಮ ಸಿರಾಜೋದ್ದಿನ ಇವನಿಗೆ ಕರೆ ಮಾಡಿ ವಿಷಯ ತಿಳಿಸಿದಾಗ ತಮ್ಮ ಸಿರಾಜ ಇತನು ಘಟನಾ ಸ್ಥಳಕ್ಕೆ ಬಂದು ಎಲ್ಲರಿಗೂ 108 ಅಂಬುಲೇನ್ಸ ಕರೆಯಿಸಿ ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 64/2021, ಕಲಂ. 279, 337, 338, 304(ಎ) ಐಪಿಸಿ :-

ದಿನಾಂಕ 14-06-2021 ರಂದು ಫಿರ್ಯಾದಿ ಶಿಲ್ಪಾ ಗಂಡ ಪಾಂಡುರಂಗ ಪೋಗಾಕೆ ವಯ: 22 ವರ್ಷ, ಜಾತಿ: ಎಸ್.ಟಿ ಬೇಡರ, ಸಾ: ಬೇಡರವಾಡಿ(ಜಿ) ರವರ ಮಾವರಾದ ನಾಮದೇವ ತಂದೆ ರಾಮಾ ಪೋಗಾಕೆ ವಯ: 65 ವರ್ಷ ರವರು ಫಿರ್ಯಾದಿಗೆ ರಾಮತಿರ್ಥ(ಕೆ) ಗ್ರಾಮಕ್ಕೆ ಹೋಗಿ ಬಟ್ಟೆ ತೆಗೆದುಕೊಂಡು ಬರೋಣಾ ಅಂತಾ ಹೇಳಿ ತಮ್ಮ ಮೋಟಾರ ಸೈಕಲ ನಂ. ಕೆಎ-56/-6892 ನೇದರ ಮೇಲೆ ಇಬ್ಬರು ಹೋಗುವಾಗ ಮಗಳಾದ ಈಶ್ವರಿ ತಂದೆ ಪಾಂಡುರಂಗ ವಯ: 4 ವರ್ಷ ಇವಳಿಗೂ ಜೊತೆಗೆ ಕರೆದುಕೊಂಡು ಮ್ಮೂರಿನಿಂದ ರಾಮತಿರ್ಥ(ಕೆ) ಹೋಗುವಾಗ ರಾಮತಿರ್ಥ (ಕೆ) ರೋಡಿನ ಮೇಲೆ ರಾಮತಿರ್ಥ ಶಿವಾರದ ರಾಜು ಜಾಧವ ರವರ ಹೊಲದ ಹತ್ತಿರ ಬಂದಾಗ ಎದುರಿನಿಂದ ಅಂದರೆ ರಾಮತಿರ್ಥ ಕಡೆಯಿಂದ ಮೋಟಾರ ಸೈಕಲ ನಂ. ಕೆಎ-35/ಕೆ-7046 ನೇದರ ಚಾಲಕನಾದ ಆರೋಪಿ ಪರಮೇಶ್ವರ ತಂದೆ ಚಂದ್ರಕಾಂತ ಕಾಂಬಳೆ ಸಾ: ರಾಮತಿರ್ಥ (ಕೆ) ಇತನು ತನ್ನ ಮೋಟಾರ ಸೈಕಲನ್ನು ಅತಿವೇಗವಾಗಿ ಹಾಗೂ ನಿಷ್ಕಾಳಜಿಯಿಂದ ಓಡಿಸಿಕೊಂಡು ಬಂದು ಫಿರ್ಯಾದಿಯು ಕುಳಿತ ಮೋಟಾರ ಸೈಕಲಗೆ ಬಲವಾಗಿ ಡಿಕ್ಕಿ ಮಾಡಿದ್ದು ಇರುತ್ತದೆ, ಸದರಿ ಡಿಕ್ಕಿಯಲ್ಲಿ ಫಿರ್ಯಾದಿಯ ತಲೆಯಲ್ಲಿ ಭಾರಿ ಗುಪ್ತಗಾಯ, ಎಡಗಣ್ಣಿನ ಹತ್ತಿರ ತರಚಿದ ಗಾಯ, ಮಗಳಾದ ಈಶ್ವರಿ ಇವಳಿಗೆ ಹಣೆಯಲ್ಲಿ ತರಚಿದ ಗಾಯ ಮತ್ತು ಮಾವ ರವರಿಗೆ ತಲೆಯಲ್ಲಿ ಭಾರಿ ಗಾಯವಾಗಿ ಸ್ಥಳದಲ್ಲೆ ಮೃತಪಟ್ಟಿರುತ್ತಾರೆ ಹಾಗೂ ಆರೋಪಿಯ ತಲೆಯಲ್ಲಿ ಭಾರಿ ರಕ್ತಗಾಯ, ಬಾಯಿಯ ಮೇಲೆ ರಕ್ತಗಾಯ ಮತ್ತು ಅವನ ಹಿಂದೆ ಕುಳಿತವನ ಹೆಸರು ವಿವೇಕ ತಂದೆ ಸಿದ್ರಾಮ ಮಾನೆ ಸಾ: ಜಾಜನಮುಗಳಿ ಆತನಿಗೆ ಎಡಗಣ್ಣಿನ ಮೇಲೆ ಭಾರಿ ರಕ್ತ ಮತ್ತು ಗುಪ್ತಗಾಯ, ಮೂಗಿನ ಮೇಲೆ ರಕ್ತಗಾಯಗಳು ಆಗಿದ್ದು ಇರುತ್ತದೆ, ಅಂಬುಲೆನ್ಸ ಬಂದ ನಂತರ ಫಿರ್ಯಾದಿಯು ಚಿಕಿತ್ಸೆ ಕುರಿತು ಬಸವಕಲ್ಯಾಣ ಸರ್ಕಾರಿ ಆಸ್ಪತ್ರೆಗೆ ಬಂದು ದಾಖಲಾಗಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಮನ್ನಳ್ಳಿ ಪೊಲೀಸ್ ಠಾಣೆ ಅಪರಾಧ ಸಂ. 24/2021, ಕಲಂ. 279, 337, 338 ಐಪಿಸಿ :-

ದಿನಾಂಕ 14-06-2021 ರಂದು ಫಿರ್ಯಾದಿ ವಿಠ್ಠಲನಾಥ ತಂದೆ ಬಕ್ಕಪ್ಪಾ ಸಾ: ತಡಪಳ್ಳಿ ಗ್ರಾಮ ರವರು ಫ್ಲಿಪ್ ಕಾರ್ಟನ ಆರ್ಡರ ಬಂದ ಕಾರಣ ಅದನ್ನು ತರುವ ಸಲುವಾಗಿ ತಡಪಳ್ಳಿ ಗ್ರಾಮದಿಂದ ಹೊಂಡಾ ಶೈನ್ ಮೋಟಾರ ಸೈಕಲ ನಂ. ಕೆಎ-38/ಡ್ಬ್ಲೂ-0951 ನೇದರ ಮೇಲೆ ಫಿರ್ಯಾದಿ ಮತ್ತು ತಮ್ಮ ಆದಿನಾಥ ಇಬ್ಬರೂ ತಡಪಳ್ಳಿ-ಯಾಕತಪುರ ರಸ್ತೆಯ ಮೇಲೆ ಸಂಜು ಧನಗರ ರವರ ಹೋಲದ ಹತ್ತಿರ ಬಂದಾಗ ಎದುರಿನಿಂದ ಬರುತ್ತಿದ್ದ ಬಜಾಜ್ ಪ್ಲಾಟಿನಾ ಮೋಟಾರ ಸೈಕಲ ನಂ. ಕೆಎ-03/ಹೆಚಬಿ-1669 ನೇದರ ಚಾಲಕನಾದ ಆರೋಪಿ ಗೌಸ ತಂದೆ ಮಾರೂಫ ಅಲಿ ವಯ: 20 ವರ್ಷ, ಸಾ: ತಡಪಳ್ಳಿ ಇತನು ತನ್ನ ಮೋಟಾರ ಸೈಕಲನ್ನು ಅತಿವೇಗ ಹಾಗು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯದಿಯ ಮೋಟಾರ ಸೈಕಲಿಗೆ ಡಿಕ್ಕಿ ಮಾಡಿರುತ್ತಾನೆ, ಸದರಿ ಡಿಕ್ಕಿಯಿಂದ ಫಿರ್ಯಾದಿಯ ಬಲಗಾಲ ತೊಡೆಯ ಮೂಳೆ ಮುರಿದಿದ್ದು ಮತ್ತು ಮೋಳಕಾಲ ಹಾಗು ಹಿಮ್ಮಡಿ ಹತ್ತಿರ ಸಹ ಮುರಿದಂತೆ ಆಗಿ ರಕ್ತ ಬಂದು ಗಂಭೀರ ಗಾಯವಾಗಿರುತ್ತದೆ, ಮತ್ತು ತಮ್ಮ ಆದಿನಾಥನಿಗೆ ಇತನಗೂ ಸಹ ಬಲಗಾಲ ತೋಡೆ ಮೋಳಕಾಲ ಹತ್ತಿರ ಮುರಿದಂತೆ ಕಾಣುತ್ತಿದ್ದು ಭಾರಿ ರಕ್ತಗಾಯವಾಗಿರುತ್ತದೆ ಹಗೂ ಆರೋಪಿಗೂ ಸಹ ಕಾಲಿಗೆ, ಕೈಗೆ, ಬಲಗಾಲಿಗೆ ಸಾದಾ ಮತ್ತು ಗಂಭಿರ ಗಾಯವಾಗಿರುತ್ತದೆ, ನಂತರ ಸದರಿ ವಿಷಯ ತಮ್ಮ ತಂದೆ ಬಕ್ಕಪ್ಪಾ ರವರಿಗೆ ತಿಳಿಸಲು ಅವರು ಮತ್ತು ಚಿಕ್ಕಪ್ಪ ಓಂಪ್ರಕಾಶ ಬಂದು ಇಬ್ಬರಿಗೂ 108 ಅಂಬುಲೆನ್ಸಗೆ ಕರೆ ಮಾಡಿ ಅದರಲ್ಲಿ ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬಗದಲ ಪೊಲೀಸ್ ಠಾಣೆ ಅಪರಾಧ ಸಂ. 35/2021, ಕಲಂ. 279, 337, 338 ಐಪಿಸಿ :-

ದಿನಾಂಕ 14-06-2021 ರಂದು ಸಿರ್ಸಿ ಗ್ರಾಮದಲ್ಲಿ ಫಿರ್ಯಾದಿ ಚಂದ್ರಕಲಾ ಗಂಡ ಸುನೀಲ ಮಾಳಗೆ ಸಾ: ವಳಖಿಂಡಿ ರವರ ಸಂಬಂಧಿಕರ ಮದುವೆ ಕಾರ್ಯಕ್ರಮ ಇದ್ದ ಪ್ರಯುಕ್ತ ಫಿರ್ಯಾದಿಯು ರಾಬಿನಪಾಲ ತಂದೆ ಶಿರೋಮಣಿ ಮಾಳಗೆ, ವಯ: 26 ವರ್ಷ, ಜಾತಿ: ಕ್ರಿಶ್ಚಿಯನ್, ಸಾ: ವಳಖಂಡಿ ಇಬ್ಬರು ಕೂಡಿ ಮೋಟಾರ ಸೈಕಲ ನಂ. ಕೆಎ-39/ಎಲ್-5217 ನೇದರ ಮೇಲೆ ವಳಖಿಂಡಿಯಿಂದ ಸಿರ್ಸಿ ಗ್ರಾಮಕ್ಕೆ ಹೋಗಿ ಮದುವೆ ಕಾರ್ಯಕ್ರಮ ಮುಗಿಸಿಕೊಂಡು ಮರಳಿ ವಳಖಿಂಡಿ ಗ್ರಾಮಕ್ಕೆ ಬಗದಲ ಗ್ರಾಮದ ಮುಖಾಂತರ ಬರುತ್ತಿರುವಾಗ ಬಗದಲ ಗ್ರಾಮದ ಅಮೃತರಾವ ಪಾಟೀಲ ರವರ ಹೊಲದ ಹತ್ತಿರ ಬಂದಾಗ ಮೋಟಾರ ಸೈಕಲ ನಂ. ಕೆಎ-38/ಎಲ್-6850 ನೇದರ ಚಾಲಕನಾದ ಆರೋಪಿ ದೇವಿಂದ್ರಪ್ಪಾ ತಂದೆ ಬಾಬಣ್ಣಾ ಕರಮಪುರ ಸಾ: ಸುಲಪೇಟ ಇತನು ತನ್ನ ಮೋಟಾರ ಸೈಕಲನ್ನು ರಾಂಗ್ ಸೈಡಿನಿಂದ ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯು ಕುಳಿತ ಮೋಟಾರ ಸೈಕಲಗೆ ಡಿಕ್ಕಿ ಮಾಡಿರುತ್ತಾನೆ, ಸದರಿ ಡಿಕ್ಕಿಯ ಪರಿಣಾಮ ಫಿರ್ಯಾದಿಗೆ ಬಲಗಾಲಿನ ಮೊಣಕಾಲಿನ ಮೇಲೆ ಭಾರಿ ಗುಪ್ತಗಾಯ, ಎಡಗಣ್ಣಿನ ಮೇಲೆ ಗುಪ್ತಗಾಯ, ತಲೆಗೆ ರಕ್ತಗಾಯವಾಗಿರುತ್ತದೆ, ರಾಬಿನಪಾಲ ಇವನಿಗೆ ತಲೆಗೆ ಭಾರಿ ರಕ್ತಗಾಯವಾಗಿ ಎಡಕಿವಿಯಿಂದ ರಕ್ತ ಬಂದಿರುತ್ತದೆ, ಎದೆಗೆ ಗುಪ್ತಗಾಯ, ಎಡಗಾಲ ಮೊಣಕಾಲ ಕೆಳಗೆ ಭಾರಿ ಗುಪ್ತಗಾಯವಾಗಿ ಮಾತನಾಡುವ ಸ್ಥಿತಿಯಲ್ಲಿ ಇರಲ್ಲಿಲ್ಲ, ಆರೋಪಿಗೆ ಸಾದಾ ಗುಪ್ತಗಾಯಗಳು ಆಗಿರುತ್ತವೆ, ಆಗ ಅಲ್ಲಿಂದಲೇ ಹೊಗುತ್ತಿದ್ದ ಸಾಗರ ತಂದೆ ಮಾಣಿಕ ವಯ: 25 ವರ್ಷ, ಸಾ: ಸಿರ್ಸಿ ಮತ್ತು ಮಹೆಂದ್ರ ಸಾ: ಸಿರ್ಸಿ ರವರು ನೋಡಿ ಮೂವರಿಗೂ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಬಗದಲ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಯವರ ಹೇಳಿಕೆ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 91/2021, ಕಲಂ. 78(3) ಕೆ.ಪಿ ಕಾಯ್ದೆ :-

ದಿನಾಂಕ 14-06-2021 ರಂದು ಬೀದರ ನಗರದ ಚಿಟ್ಟಾ ಕ್ರಾಸ ಹತ್ತಿರ ಇರುವ ಗೋಲ್ಡನ ಹೋಟೆಲ್ ಹತ್ತಿರ ಮಟಕಾ ಚೀಟಿಗಳು ರೆದುಕೊಳ್ಳುತ್ತಿದ್ದಾರೆಂದು ಜಗದೀಶ ನಾಯ್ಕ ಪಿಎಸ್ಐ ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಯ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಬೀದರ ನಗರದ ಚಿಟ್ಟಾ ಕ್ರಾಸ ಹತ್ತಿರ ಇರುವ ಸಿದ್ದಾರೂಡ ಆಸ್ಪತ್ರೆಯ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲು ಅಲ್ಲಿ ಆರೋಪಿ ಫಯಾಜ ತಂದೆ ಅಬ್ದುಲ್ ರಸೀದ ಚಿಲ್ಲರ್ಗಿವಾಲೆ ವಯ: 29 ವರ್ಷ, ಸಾ: ಚಿಟ್ಟಾ ಇತನು ಮಟಕಾ ಚೀಟಿ ರೆದುಕೊಳ್ಳುತ್ತಿರುವುದನ್ನು ಖಚಿತ ಡಿಸಿಕೊಂಡು ಪಂಚರ ಸಮಕ್ಷಮ ಆತನ ಮೇಲೆ ದಾಳಿ ಮಾಡಿ ವಶಕ್ಕೆ ಪಡೆದು ಆತನ ವಶದಲ್ಲಿದ್ದ 1) ನಗದು ಹಣ 3200/- ರೂ., 2) 1 ಮಟಕಾ ಚೀಟಿ ಹಾಗೂ 3) ಒಂದು ಬಾಲ ಪೆನ್ ನೇದವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂ. 105/2021, ಕಲಂ. 78(3) ಕೆ.ಪಿ ಕಾಯ್ದೆ :-

ದಿನಾಂಕ 14-06-2021 ರಂದು ಮುಚಳಂಬ ಕ್ರಾಸ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಗೆ ಕಾನೂನು ಬಾಹಿರವಾಗಿ ಒಂದು ರೂಪಾಯಿಗೆ 90/- ರೂಪಾಯಿ ಎಂದು ಕೂಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ನಸಿಬಿನ ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾರೆಂದು ಜಿ.ಎಂ.ಪಾಟೀಲ್ ಪಿ.ಎಸ್. (ಕಾ&ಸೂ) ಬಸವಕಲ್ಯಾಣ ನಗರ ಪೋಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಬಸವಕಲ್ಯಾಣ ನಗರದ ಮುಚಳಂಬ ಕ್ರಾಸ್ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲು ಬಾತ್ಮಿಯಂತೆ ಮುಚಳಂಬ ಕ್ರಾಸ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ 1) ಸೈಲಾನಿ ತಂದೆ ಸಲೀಮ್ ಶೇಖ ವಯ: 25 ವರ್ಷ, ಜಾತಿ: ಮುಸ್ಲಿಂ, ಸಾ: ಖಡಿಝಂಡಾ ಬಸವಕಲ್ಯಾಣ ಹಾಗೂ 2) ಇಜಾಜ ತಂದೆ ಇಸ್ಮಾಯಿಲ್ ಸಾಬ ಝರಂಜಿ ವಯ: 35 ವರ್ಷ, ಜಾತಿ: ಮುಸ್ಲಿಂ, ಸಾ: ಅಲ್ಲಾನಗರ ಬಸವಕಲ್ಯಾಣ ಇವರಿಬ್ಬರು ನಿಂತುಕೊಂಡು ಸಾರ್ವಜನಿಕರಿಗೆ ಒಂದು ರೂಪಾಯಿಗೆ 90/- ರೂಪಾಯಿ ಎಂದು ಕೂಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಳ್ಳುವುದನ್ನು ನೋಡಿ ಎಲ್ಲರು ಮ್ಮೇಲೆ ದಾಳಿ ಮಾಡಿ ಅವರಿಂದ 1) 3,050/- ರೂ. ನಗದು ಹಣ, 2) 02 ಮಟಕಾ ಚೀಟಿಗಳು ಹಾಗೂ 3) ಒಂದು ಬಾಲ್ ಪೆನ್ ನೇದವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬೀದರ ನೂತನ ನಗರ ಪೊಲೀಸ್ ಠಾಣೆ ಅಪರಾಧ ಸಂ. 67/2021, ಕಲಂ. 379 ಐಪಿಸಿ :-

ದಿನಾಂಕ 02-05-2021 ರಂದು 2100 ಗಂಟೆಯಿಂದ ದಿನಾಂಕ 03-05-2021 ರಂದು 0700 ಗಂಟೆಯ ಮಧ್ಯಾವಧಿಯಲ್ಲಿ ಫಿರ್ಯಾದಿ ಘಾಳೆಪ್ಪ ತಂದೆ ಚೆನ್ನಪ್ಪ ಹೊನ್ನಾ ವಯ: 61 ವರ್ಷ, ಜಾತಿ: ಲಿಂಗಾಯತ, ಸಾ: ಸಂಗಮೇಶ್ವರ ಕಾಲೋನಿ, ಚಿದ್ರಿ ರೋಡ, ಬೀದರ ತನ್ನ ಹೀರೊ ಹೊಂಡಾ ಸ್ಪ್ಲೆಂಡರ ಪ್ಲಸ್ ಮೊಟಾ ಸೈಕಲ ನಂ. KA-38/K-4492, ಚಾಸಿಸ್ ನಂ. MBLHA10EE9HF05427, ಇಂಜಿನ್ ನಂ. HA10EA9HF79944, ಮಾಡಲ್: 2009, ಬಣ್ಣ: ನೀಲಿ ಬಣ್ಣ ಹಾಗೂ ಅ.ಕಿ 15,000/- ರೂ. ನೇದನ್ನು ಬೀದರ ಸರಕಾರಿ ಆಸ್ಪತ್ರೆಯ ಮುಂದೆ ನಿಲ್ಲಿಸಿರುವುದನ್ನು ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿವಯರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 14-06-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.