ದಿನಂಪ್ರತಿ ಅಪರಾಧಗಳ
ಮಾಹಿತಿ ದಿನಾಂಕ : 27-07-2012
ಮಾರ್ಕೇಟ ಪೊಲೀಸ ಠಾಣೆ ಗುನ್ನೆ ನಂ. 100/12 ಕಲಂ 379 ಐಪಿಸಿ :-
ದಿನಾಂಕ 26-07-2012 ರಂದು 1800 ಗಂಟೆಗೆ ಫಿರ್ಯಾದಿ ಶ್ರೀ ಧನರಾಜ ತಂದೆ
ನಾಗುರಾವ ಬಿರಾದಾರ ವಯ 32 ವರ್ಷ ಜಾತಿ ಮರಾಠ ಉ;ದ್ವಿಚಕ್ರವಾಹನ ಮೇಕಾನಿಕ ಸಾ;ಕೌಡಗಾಂವ ಗ್ರಾಮ ತಾ:ಔರಾದ ಸದ್ಯ ಹೊರ ಶಾಹಗಂಜ ಬೀದರ ರವರು ನೀಡಿದ
ದೂರಿನ ಸಾರಾಂಶವೆನಂದರೆ, ನನ್ನ ಹತ್ತಿರ ಇರುವ ಒಂದು ಹಿರೋ ಹೊಂಡಾ ಸ್ಪಲೆಂಡರ್ ಪ್ಲಸ್ ದ್ವಿಚಕ್ರವಾಹನ ಕಪ್ಪು ಬಣ್ಣದು
ಅದಕ್ಕೆ ನೀಲಿ ಸ್ಟಿಕ್ಕರ ಇರುತ್ತವೆ ಈ
ದ್ವಿಚಕ್ರವಾಹನ ನಂ. ಕೆ.ಎ.38-ಎಲ್-4509 ನೇದ್ದು ಇದ್ದು ಇದರ ಅ.ಕಿ.30,000=00 ರೂ ಇರುತ್ತದೆ. ಹೀಗಿರುವಾಗ ದಿನಾಂಕ 19-07-2012 ರಂದು ರಾತ್ರಿ 2000 ಗಂಟೆಯ ಸುಮಾರಿಗೆ ನಾನು
ಮತ್ತು ನನ್ನ ಗೆಳೆಯ ಸುನೀಲಕುಮಾರ ತಂದೆ ರುದ್ರಮಣಿ ಸ್ವಾಮಿ ಸಾ;ಕೈಲಾಸ ನಗರ ಗುಂಪಾ ಹತ್ತಿರ ಬೀದರ ನಾವು
ಇಬ್ಬರೂ ಈ ಮೇಲೆ ನಮೂದು ಮಾಡಿ ನನ್ನ ದ್ವಿಚಕ್ರವಾಹನ ಮೇಲೆ ಬೀದರ ಬಸವೇಶ್ವರ ವೃತ್ತದ ಹತ್ತಿರ
ಇರುವ ಪಟ್ನ ಎಲೆಕ್ಟ್ರಾನಿಕ ಅಂಗಡಿಗೆ ಟಿ.ವಿ.ರಿಮೊಟ ಖರೀದಿ ಮಾಡಲು ಹೋಗಿ ದ್ವಿಚಕ್ರರವಾಹನವನ್ನು ಅಂಗಡಿ ಮುಂದೆ ನಿಲ್ಲಿಸಿರುತ್ತೇವೆ. ಅಂಗಡಿಯಲ್ಲಿ ಟಿ.ವಿ.ರಿಮೊಟ್ ಖರೀದಿ ಮಾಡಿ ಮರಳಿ ರಾತ್ರಿ
2015 ಗಂಟೆಗೆ
ಬಂದು ನೋಡಲಾಗಿ ನಾನು ನಿಲ್ಲಿಸಿದ ನನ್ನ ದ್ವಿಚಕ್ರವಾಹನ ಇರಲಿಲ್ಲಾ. ಸದರಿ ನನ್ನ ದ್ವಿಚಕ್ರವಾಹನ ಯಾರೂ ಅಪರಿಚಿತ ಕಳ್ಳರೂ
ದಿನಾಂಕ 19-07-2012 ರಂದು ರಾತ್ರಿ 2000 ಗಂಟೆಯಿಂದ 2015 ಗಂಟೆಯ ಅವಧಿಯಲ್ಲಿ ಕಳವು
ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಫಿರ್ಯಾದು
ಮೇರೆಗೆ ಬೀದರ ಮಾಕರ್ೆಟ ಪೊಲೀಸ್ ಠಾಣೆ ಅಪರಾಧ ಸಂ.100/2012 ಕಲಂ 379 ಐಪಿಸಿ ನೇದರ ಪ್ರಕಾರ ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಮಾರ್ಕೇಟ ಪೊಲೀಸ ಠಾಣೆ ಗುನ್ನೆ ನಂ. 99/12 ಕಲಂ 78 ಕೆಪಿ ಎಕ್ಟ
ಜೊತೆ 420 ಐಪಿಸಿ :-
ದಿನಾಂಕ 26-07-2012 ರಂದು 1145 ಗಂಟೆಗೆ ಬಾತ್ಮಿ ಮೇರೆಗೆ ಪಿ.ಎಸ್.ಐ
(ಕಾ.ಸು) ರವರು ಸಿಬ್ಬಂದಿಯವರೊಂದಿಗೆ ನಜರತ
ಕಾಲೋನಿ ಗ್ರೇಸ್ ಟೀ ಹೋಟಲ ಪಕ್ಕದಲ್ಲಿ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದು
ಕೊಡುತ್ತಿದ್ದಾರೆ ಅಂತಾ ಮಾಹಿತಿ ಮೇರೆಗೆ ಹೋಗಿ ದಾಳಿ ಮಾಡಿ ಆರೋಪಿತರಾದ 1)ಅಶೋಕ ತಂದೆ ಸೂರ್ಯಭಾನು
ಉಪದ್ಯಾಯ 2)ವಿಜಯಕುಮಾರ
ತಂದೆ ಎಕಂಬರಿನಾಥ 3)ಶೇಕ ಫಿರೋಜ @ ಬಬ್ಯೂ ತಂದೆ ಶೇಕ ಮನ್ಸೂರ ರವರುಗಳನ್ನು
ದಸ್ತಗಿರಿ ಮಾಡಿ ಅರೋಪಿತರು ಮಟಕಾ ಚೀಟಿ ಬರೆದುಕೊಟ್ಟು ಸಾರ್ವಜನಿಕರಿಗೆ ಮೊಸ ಮಾಡಿ
ಸಾರ್ವಜನಿಕರಿಂದ ಪಡೆದ ಹಣ 15,000/- ರೂ ಗಳನ್ನು ಹಾಗೂ 25 ಮಟಕಾ ಚೀಟಿಗಳನ್ನು ಹಗೂ ಒಂದು ಬಾಲ್ ಪೆನ ಜಪ್ತಿ ಮಾಡಿ
ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಬೀದರ ನಗರ ಪೊಲೀಸ್
ಠಾಣೆ ಗುನ್ನೆ ನಂ. 57/2012 ಕಲಂ: 78 ( ) ಕೆ.ಪಿ ಆಕ್ಟ್ ಜೊತೆ 420 ಐ.ಪಿ.ಸಿ :-
ದಿನಾಂಕ:26/07/2012 ರಂದು 2115 ಗಂಟೆಗೆ ಪಿಎಸ್ಐ(ಕಾಸು) ಬೀದರ ನಗರ
ಠಾಣೆರವರು ಡಿ.ಎಸ್.ಪಿ ಬೀದರ ಹಾಗು ಸಿಪಿಐ ನಗರ
ವೃತ್ತ ಬೀದರ ರವರ ಸೂಚನೆ ಮೇರೆಗೆ ಬೀದರ ಶಾಹಗಂಜ ಕಮಾನ ಹತ್ತೀರ ಸಾರ್ವಜನಿಕ ಸ್ಥಳದಲ್ಲಿ
ಮೇಲೆ ಆರೋಪಿತರಾದ ಎ1. ತಹಸೀನ್ ತಂದೆ ಖಾಜಾ
ಮೈನೊದ್ದಿನ್ ವಯ 42 ವರ್ಷ ಜಾ// ಮುಸ್ಲಿಂ ಉ// ವ್ಯಾಪಾರಸಾ// ಮನೆನಂ 1-1-46 ರಾವ ತಾಲೀಮ ಬೀದರ ಇತನು 1-ರೂಪಾಯಿಗೆ 80-ರೂಪಾಯಿ ಅಂತ ಅನ್ನುತ್ತಾ
ಸಾರ್ವಜನಿಕರಿಂದ ಹಣ ಪಡೆದು ಮಟಕಾ ಅಂಕಿ ಸಂಖ್ಯೆಗಳ ಚಿಟಿ ಬರೆದು ಕೊಟ್ಟು ಸಾರ್ವಜನಿಕರಿಗೆ ಮೊಸ
ಮಾಡುತ್ತಿದ್ದರಿಂದ ಪಿಎಸ್ಐ ರವರು ಸಿಬ್ಬಂದಿಯೊಂದಿಗೆ ಹೋಗಿ ದಾಳಿಮಾಡಿ ಹಿಡಿದು ಆರೋಪಿತನ ವಶದಿಂದ
1)ನಗದು ಹಣ 10,000/-ರೂ. 2) ಎರಡು ಮಟಕಾ ಅಂಕಿ ಸಂಖ್ಯೆ
ಬರೆದ ಚಿಟಿಗಳು 3)ಒಂದು ಬಾಲ ಪೇನ್ ಜಪ್ತ ಮಾಡಿಕೊಂಡು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಬೀದರ ಸಂಚಾರ ಪೊಲೀಸ್ ಠಾಣೆ ಗುನ್ನೆ ನಂ. 185/12 ಕಲಂ 279,
338 ಐಪಿಸಿ ಜೊತೆ 187 ಐಎಮ್ವಿ ಕಾಯ್ದೆ :-
ದಿನಾಂಕ 27/07/2012 ರಂದು 13:00 ಗಂಟೆಗೆ ಫಿರ್ಯಾದಿ ಅಮೃತ ತಂದೆ ಮಾಣಿಕ
54 ವರ್ಷ ಉ:
ಮುಖ್ಯ ಉಪಧ್ಯಾಯರು ಸಾ/ ಬೆಥೇಲಿಂ ಕಾಲೋನಿ ಮಂಗಲಪೆಟ ಬೀದರ ರವರು ತನ್ನ ಮೋಟಾರ ಸೈಕಲ ನಂ ಕೆಎ38ಹೆಚ್2820 ನೇದ್ದರ ಮೇಲೆ
ಬೋಮ್ಮಗೊಂಡೇಶ್ವರ ವೃತ್ತದ ಕಡೆಯಿಂದ ಬಸವೇಶ್ವರ ವೃತ್ತದ ಕಡೆಗೆ ಹೊಗುವಾಗ ಫಿಯರ್ಾದಿಯು ಬಸವೇಶ್ವರ
ವೃತ್ತದ ಹತ್ತಿರ ಬಂದು ಬಲಕ್ಕೆ ತಿರುಗಿ ಹೊಗುವ ಸಲುವಾಗ ಇಂಡಿಕೇಟರ ಹಾಕಿ ತಿರುಗಿಸಿಕೊಳ್ಳುವಾಗ ಹಿಂದಿನಿಂದ ಒಬ್ಬ ಲಾರಿ ನಂ ಕೆಎ38/6350 ನೇದ್ದರ ಚಾಲಕನು ತನ್ನ
ವಾಹನವನ್ನು ವೇಗವಾಗಿ ಹಾಗೂ ಅಜಾಗರೂತೆಯಿಂದ ಚಲಾಯಿಸಿಕೊಂಡು ಬಂದು ಫಿಯರ್ಾದಿಗೆ ಡಿಕ್ಕಿ ಹೊಡೆದು
ಅಪಘಾತ ಪಡಿಸಿದರಿಂದ ಫಿರ್ಯಾದಿಗೆ ಬಲಕಾಲಿನ
ತೊಡೆಯಲ್ಲಿ ಎಲಬು ಮುರಿದಂತೆ ಭಾರಿಗಾಯ ಮತ್ತು ಎಡಕಾಲಿನ ಪಾದಕ್ಕೆ,ಹಿಮ್ಮಡಿಗೆ ರಕ್ತಗಾಯ ಮತ್ತು ಎದೆಯಲ್ಲಿ
ಗುಪ್ತಗಾಯ, ಬಲಭುಜಕ್ಕೆ
ತರಚಿದ ರಕ್ತಗಾಯ ಪಡಿಸಿ ತನ್ನ ಲಾರಿಯನ್ನು ಅಪಘಾತ ಸ್ಥಳದಲ್ಲಿ ಬಿಟ್ಟು ಓಡಿ ಹೊಗಿರುತ್ತಾನೆ ಅಂತಾ
ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.