Police Bhavan Kalaburagi

Police Bhavan Kalaburagi

Wednesday, July 28, 2021

BIDAR DISTRICT DAILY CRIME UDATE28-07-201

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 28-07-2021

 

ಬೀದರ ಗ್ರಾಮೀಣ ಪೊಲೀಸ ಠಾಣೆ ಯು.ಡಿ.ಆರ್ ನಂ. 10/2021, ಕಲಂ. 174 ಸಿ.ಆರ್.ಪಿ.ಸಿ :-

ಫಿರ್ಯಾದಿ ವಿಜಯಕುಮಾರ ತಂದೆ ಶಂಕರರಾವ ಬೋಸ್ಲೆ ವಯ: 51 ವರ್ಷ, ಜಾತಿ: ಎಸ್.ಸಿ ಹೋಲಿಯಾ, ಸಾ: ಕಮಠಾಣಾ, ತಾ: & ಜಿ: ಬೀದರ ರವರ ಮಗಳಾದ ಮಗಳಾದ ವೈಷ್ನವಿ ವಯ: 15 ಇಕೆಗೆ ಒಂದು ವರ್ಷದಿಂದ ಹೊಟ್ಟೆ ಬೇನೆ ಇದ್ದು ಅಲ್ಲಲ್ಲಿ ಖಾಸಗಿ ಮದ್ದು ಕೊಡಿಸಿದರೂ ಸಹ ಕಡಿಮೆಯಾಗಿರುವುದಿಲ್ಲಾ, ಹೀಗಿರುವಾಗ ದಿನಾಂಕ 27-07-2021 ರಂದು ಮಗಳಾದ ವೈಷ್ಣವಿ ಇವಳಿಗೆ ಹೊಟ್ಟೆ ನೊವು ಇರುವುದರಿಂದ ಹೊಟ್ಟೆ ನೋವು ತಾಳಲಾರದೇ ತನ್ನ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ಜೀವನದಲ್ಲಿ ಜಿಗುಪ್ಸೆಗೊಂಡು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾಳೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಧನ್ನೂರಾ ಪೊಲೀಸ್ ಠಾಣೆ ಯು.ಡಿ.ಆರ್ ನಂ. 19/2021, ಕಲಂ. 174(ಸಿ) ಸಿ.ಆರ್.ಪಿ.ಸಿ :-

ದಿನಾಂಕ 27-07-2021 ರಂದು ಫಿರ್ಯಾದಿ ಸುನೀಲ ತಂದೆ ಶಿರವರಾಜ ಸೊನೆ ವಯ: 48 ವರ್ಷ, ಜಾತಿ: ಎಸ.ಸಿ ಮಾದಿಗ, ಸಾ: ಮಳಚಾಪೂರ ರವರು ಖಾನಾಪೂರ ಮೈಲಾರ ಮಲ್ಲಣ್ಣಾ ಮಂದಿರದ ಹತ್ತಿರ ಬಂದಾಗ ಅಲ್ಲಿ ಕೆಲವು ಜನರಿಂದ ಗೊತ್ತಾಗಿದ್ದೆನೆಂದರೆ ಮೈಲಾರ ಮಲ್ಲಣ್ಣಾ ದೇವಸ್ಥಾನ ಗವಿಯ ಅರಣ್ಯದಲ್ಲಿ ಅಪರಿಚಿತ ವ್ಯಕ್ತಿಯ ಮೃತ ಶರೀರವು ಇರುತ್ತದೆ ಅಂತ ಗೊತ್ತಾಗಿ ಫಿರ್ಯಾದಿ ಹಾಗೂ ಇತರರು ಅರಣ್ಯದಲ್ಲಿ ಹೋಗಿ ನೊಡಲು ಅಲ್ಲಿ ಆಲದ ಗಿಡದ ಕೆಳಗೆ ಅಪರಿಚಿತ ಅಂದಾಜು 20 ರಿಂದ 30 ವರ್ಷ ಗಂಡು ವ್ಯಕ್ತಿಯ ಮೃತ ಶರಿರವು ಇದ್ದು ಮೃತ ಶರಿರವು ಅಂದಾಜು 3-4 ತಿಂಗಳ ಹಿಂದೆ ಮೃತಪಟ್ಟಂತೆ ಕಂಡು ಬರುತ್ತದೆ, ಸದರಿ ಅಪರಿಚಿತ ವ್ಯಕ್ತಿಯು ಆಲದ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಂತೆ ಕಂಡು ಬರುತ್ತದೆ, ಮೃತ ಶರಿರವು ನೇಣಿಗೆ ಜೊತು ಬಿದ್ದು ಕುತ್ತಿಗೆ ಕತ್ತರಿಸಿ ಪಕ್ಕದಲ್ಲಿ ಬಿದ್ದಿದು ಚರ್ಮ, ಮೌಂಸ ಪೂರ್ತಿ ಹೋಗಿ ಬುರುಡೆ ಮಾತ್ರ ಇರುತ್ತದೆ ಹಾಗೂ ದೇಹದ ಚರ್ಮ, ಮೌಂಸ ಪೂರ್ತಿ ಹೋಗಿ ಎಲುಬು ಮಾತ್ರ ಇರುತ್ತವೆ ಹಾಗು ಜೀನ್ಸ ಪ್ಯಾಂಟ ಹಳದಿ ಟೀಶರ್ಟ ಇರುತ್ತದೆ ಹಾಗೂ ಸದರಿ ಆಲದ ಮರದ ಬುಡದಲ್ಲಿ ಪ್ಲಾಸ್ಟೀಕ ಚಪ್ಪಲಿ ಇರುತ್ತವೆ,   ಸದರಿ ಅಪರಿಚಿತ ವ್ಯಕ್ತಿಯು ಮೃತ ಪಟ್ಟ ಬಗ್ಗೆ ಸಂಶಯ ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಗಾಂಧಿ ಗಂಜ ಪೊಲೀಸ ಠಾಣೆ, ಬೀದರ ಅಪರಾಧ ಸಂ. 105/2021, ಕಲಂ. 489 (), 489 (ಬಿ), 489 (ಸಿ), 420 ಐಪಿಸಿ :-

ದಿನಾಂಕ 21-07-2021 ರಂದು ಫಿರ್ಯಾದಿ ಧೂಳಪ್ಪಾ ತಂದೆ ವೀರಸಂಗಪ್ಪಾ ಕೊಳಾರೆ ವಯ: 53 ವರ್ಷ, ಜಾತಿ: ಲಿಂಗಾಯತ, : ರಾಜಾ ಬಾರ ಮತ್ತು ರೇಸ್ಟಾರೆಂಟ ಕ್ಯಾಶಿಯರ, ಸಾ: ಬಾವಗಿ, ಸದ್ಯ: ಹನುಮಾನ ನಗರ ಬೀದರ ರವರು ತಮ್ಮ ರಾಜಾ ಬಾರನ ಕೌಂಟರ ಮೇಲೆ ಕುಳಿತು ಗಿರಾಕಿ ಮಾಡುತ್ತಿರುವಾಗ ಗಂಜ ಏರಿಯಾದಲ್ಲಿ ಹಮಾಲಿ ಕೂಲಿ ಕೆಲಸ ಮಾಡುವ ಜನರಾದ ಶರಣಪ್ಪಾ ಸಾ: ಚಿಂಚೋಳಿ ಮತ್ತು ವೆಂಕಟ ಸಾ: ತೆಗಂಪುರ ಗ್ರಾಮದವರು ಬಾರನ ದಿನನಿತ್ಯದ ಗಿರಾಕಿಯವರಾದ ವೆಂಕಟ ತಂದೆ ತಾನಾಜಿ ಇತನು 500/- ರೂಪಾಯಿಯ ನೋಟು ಕೊಟ್ಟು ಮೂರು 90 ಎಮ್.ಎಲ್ ಓರಿಜನ್ ಚಾಯಿಸ ಗಿಟ್ಟಿ ಸರಾಯಿ ಕೊಡಿ ಅಂತ ಕೇಳಿದಾಗ ಫಿರ್ಯಾದಿಯು ಗೀರಾಕಿಯ ಗಡಬಿಡಿಯಲ್ಲಿ ನೋಟು ಸ್ವೀಕರಿಸಿ ಮೂರು ಓರಿಜನ್ ಚಾಯಿಸ ಕೊಟ್ಟು ಉಳಿದ ಚಿಲ್ಲರೆ ಹಣ ಕೊಟ್ಟಿದ್ದು ಇರುತ್ತದೆ, ನಂತರ ಪುಃನ 10 ನಿಮಿಷ ಬಿಟ್ಟು ಅದೇ ಶರಣಪ್ಪಾ ಮತ್ತು ವೆಂಕಟ ಕೂಡಿ ಬಂದು ಪುನಃ 500/- ರೂಪಾಯಿಯ ನೋಟು ಕೊಟ್ಟು ಮೂರು 90 ಎಮ್.ಎಲ್ ಓರಿಜನ್ ಚಾಯಿಸ ಸರಾಯಿ ಗಿಟ್ಟಿ ಕೊಡಿ ಅಂತ ಕೇಳಿದಾಗ ಅವರ ಮೇಲೆ ಸಂಶಯ ಬಂದು 500/- ರೂಪಾಯಿಯ ನೋಟು ಪರೀಶಿಲಿ ನೋಡಲು ನಕಲಿ ನೋಟಿನಂತೆ ಕಂಡು ಬಂದಿದ್ದು, ಕೂಡಲೇ ಫಿರ್ಯಾದಿ ಮತ್ತು ಬಾರನ ಮ್ಯಾನೇಜರ ಪ್ರದೀಪ ಇಬ್ಬರೂ ಕೂಡಿಕೊಂಡು ಶರಣಪ್ಪಾ ಮತ್ತು ವೆಂಕಟ ಇಬ್ಬರಿಗೆ ಹಿಡಿದುಕೊಂಡು ನಕಲಿ ನೋಟು ಎಲ್ಲಿಂದ ತಂದಿರುವಿರಿ ಅಂತಾ ಜೋರಾಗಿ ವಿಚಾರಿಸಲು ಅವರಿಬ್ಬರೂ ಅಲ್ಲಿಯೇ ಸ್ವಲ್ಪ ದೂರದಲ್ಲಿ ನಿಂತ ವ್ಯಕ್ತಿಯನ್ನು ತೋರಿಸಿ ಇದೆ ಗಂಜಿನಲ್ಲಿ ಮುನಿಮ ಕೆಲಸ ಮಾಡಿಕೊಂಡಿದ್ದ ಅಶೋಕ ತಂದೆ ಸಿದ್ರಾಮಪ್ಪಾ ದೇಶಮುಖ ಬಿರಾದಾರ ಯರನಳ್ಳಿ ಗ್ರಾಮದವನನ್ನು ತೋರಿಸಿ, ಅವನೆ ನಮಗೆ ನೋಟು ಕೊಟ್ಟು ಸರಾಯಿ ತರಲು ಕಳುಹಿಸಿರುತ್ತಾನೆ ಅಂತಾ ಹೇಳಿದಾಗ ಎಲ್ಲರು ಅವನಿಗೆ ಹಿಡಿಯಲು ಓಡುತ್ತಿರುವಾಗ ಅಶೋಕ ದೇಶಮುಖ ಈತನು ಅಲ್ಲಿಂದ ಓಡಿ ಹೋಗಿರುತ್ತಾನೆ, ಕಾರಣ ಭಾರತ ಸರ್ಕಾರದ ಚಲಾವಣೆಯಲ್ಲಿರುವ ಅಸಲಿ ನೋಟಿನಂತಹ ನಕಲಿ (ಖೋಟಾ) ನೋಟುಗಳನ್ನು ಎಲ್ಲೋ ತಯಾರಿಸಿ ಶರಣಪ್ಪಾ ಮತ್ತು ವೆಂಕಟ ಇವರ ಮುಖಾಂತರ ಅವರಿಗೆ ಕೋಟಾ ನೋಟು ಇರುವ ಬಗ್ಗೆ ಗೊತ್ತಿಲ್ಲದಂತೆ ಸಾರ್ವಜನಿಕರಿಗೆ ಮತ್ತು ಸರ್ಕಾರಕ್ಕೆ ಮೋಸ ಮಾಡುವ ಉದ್ದೇಶದಿಂದ ಅಶೋಕ ದೇಶಮುಖ ಈತ£ÀÄ ಖೋಟಾ ನೊಟು ಚಲಾಯಿಸಿರುತ್ತಾನೆ, ಅಲ್ಲದೇ ಅಶೋಕ ದೇಶಮುಖ ಈತನು ಶರಣಪ್ಪಾ ಮತ್ತು ವೆಂಕಟ ಇವರು ಕೊಟ್ಟ 500/- ರೂಪಾಯಿ ಮುಖ ಬೆಲೆಯ ಎರಡು ಭಾರತೀಯ ನೋಟಿನಂತೆ ಇರುವ ಖೋಟಾ ನೋಟುಗಳು ಇವೆ ಇರುತ್ತವೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 27-07-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬಗದಲ ಪೊಲೀಸ್ ಠಾಣೆ ಅಪರಾಧ ಸಂ. 45/2021, ಕಲಂ. 32, 34 ಕೆ.ಇ ಕಾಯ್ದೆ :-

ದಿನಾಂಕ 27-07-2021 ರಂದು ಬಗದಲ ಗ್ರಾಮದಿಂದ ಬೀದರ ನಗರಕ್ಕೆ ಹೋಗುವ ದಾರಿ ಮಧ್ಯದಲ್ಲಿ ಮರ್ಜಾಪೂರ(ಎಂ) ಕ್ರಾಸ್ ಹತ್ತಿರದ ಅಪ್ಪು ಪೆಟ್ರೋಲ ಪಂಪ ಹತ್ತಿರ ಒಬ್ಬ ವ್ಯಕ್ತಿ ಮಧ್ಯ ಮಾರಾಟ ಮಾಡುತ್ತಿದ್ದಾನೆಂದು ಸಂಗೀತಾ ಪಿ.ಎಸ್. ಬಗದಲ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಅಪ್ಪು ಪೆಟ್ರೋಲ ಪಂಪ ಹತ್ತಿರ ಹೋಗಿ ನೋಡಲು ಅಲ್ಲಿ ಪೆಟ್ರೋಲ ಪಂಪ ಎದುರಿಗೆ ರಸ್ತೆಯ ಬದಿಯಲ್ಲಿ ಆರೋಪಿ ಧನರಾಜ ತಂದೆ ಮಾರುತಿ ಏಖೇಳ್ಳಿ ವಯ: 28 ವರ್ಷ, ಜಾತಿ: ಎಸ್.ಟಿ ಗೊಂಡ, ಸಾ: ಕಮಠಾಣಾ ಇತನು ಒಂದು ಒಂದು ಪ್ಲಾಸ್ಟಿಕ ಚೀಲವನ್ನು ಇಟ್ಟುಕೊಂಡು ತನ್ನ ಲಾಭಕ್ಕಾಗಿ ಸರಾಯಿ ಮಾರಾಟ ಮಾಡುತ್ತಿರುವಾಗ ಆತನ ಮೇಲೆ ದಾಳಿ ಮಾಡಿ ಹಿಡಿದು ಅವನ ಹತ್ತಿರವಿದ್ದ ಪ್ಲಾಸ್ಟಿಕ ಚೀಲ ಬಿಚ್ಚಿ ತೋರಿಸಲು ಹೇಳಿದಾಗ ಅವನು ಚೀಲ ಬಿಚ್ಚಿದ್ದು ಅದರಲ್ಲಿ ಮಧ್ಯದ ಟೆಟ್ರಾ ಪ್ಯಾಕೆಟಗಳು ಕಂಡು ಬಂದವು, ಆಗ ಪಿಎಸ್ಐ ರವರು ಆತನಿಗೆ ಮಧ್ಯದ ಟೆಟ್ರಾ ಪ್ಯಾಕೇಟ್ ಮಾರಾಟ ಮಾಡಲು ನಿಮ್ಮ ಹತ್ತಿರ ಸರಕಾರದ ಯಾವುದಾದರೂ ಪರವಾನಗಿ ಅಥವಾ ಲೈಸನ್ಸ ಇದೆಯೇ ಎಂದು ಕೇಳಿದಾಗ ಯಾವುದೇ ಲೈಸನ್ಸ ಅಥವಾ ಪರವಾನಗಿ ಇರುವುದ್ದಿದಿಲ್ಲ ಅಂತ ತಿಳಿಸಿದನು, ನಂತರ ಪಿ.ಎಸ್. ರವರು ಸದರಿಯವನ ಹತ್ತಿರವಿದ್ದ ಪ್ಲಾಸ್ಟಿಕ ಚೀಲವನ್ನು ಪರಿಶೀಲಿಸಿ ನೋಡಲು ಅದರಲ್ಲಿ ಔಐಆ ಖಿಂಗಿಇಖಓ Whisಞಥಿ 180 ಎಂಎಲ್ ವುಳ್ಲ 38 ಟೆಟ್ರಾ ಪ್ಯಾಕೇಟಗಳು ಅ.ಕಿ 3,296 ರೂಪಾಯಿ 50 ಪೈಸೆ ಮತ್ತು 900/- ನಗದು ಹಣ ಇರುತ್ತದೆ, ನಂತರ ಸದರಿ ಸರಾಯಿಯನ್ನು ತಾಬೆಗೆ ತೆಗೆದುಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಧನ್ನೂರಾ ಪೊಲೀಸ್ ಠಾಣೆ ಅಪರಾಧ ಸಂ. 69/2021, ಕಲಂ. 78(3) ಕೆ.ಪಿ ಕಾಯ್ದೆ :-

ದಿನಾಂಕ 27-07-2021 ರಂದು ಜಾಂತಿ ಗ್ರಾಮದಲ್ಲಿ ಬಸವೇಶ್ವರ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ 01/- ರೂಪಾಯಿಗೆ 90/- ರೂಪಾಯಿ ಕೊಡುತ್ತೆನೆಂದು ಹೇಳಿ ಜನರಿಂದ ಹಣ ಪಡೆದು ಚೀಟಿ ಬರೆದುಕೊಟ್ಟು ನಸಿಬಿನ ಮಟಕಾ ಜೂಜಾಟ ಆಡಿಸುತ್ತಿದ್ದಾನೆಂದು ವೀರಣ್ಣ ಎಸ್. ದೊಡ್ಡಮನಿ ಸಿಪಿಐ ಭಾಲ್ಕಿ ಗ್ರಾಮಿಣ ವೃತ್ತ ರವರಿಗೆ ಖಚಿತ ಬಾತ್ಮಿ ಬಂದ ಮೆರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ತಮ್ಮ ಸಿಬ್ಬಂದಿಯವರೊಡನೆ ಜಾಂತಿ ಗ್ರಾಮಕ್ಕೆ ತಲುಪಿ ಅಲ್ಲಿ ಬಸವೇಶ್ವರ ಚೌಕದಿಂದ ಹತ್ತಿರ ಮರೆಯಾಗಿ ನಿಂತು ನೊಡಲು ಅಲ್ಲಿ ಗ್ರಾಮದ ಬಸೇಶ್ವರ ಚೌಕ ಹತ್ತಿರ ಸಾರ್ವಜನಿಕ ರಸ್ತೆಯ ಮೆಲೆ ಆರೋಪಿ ಶಿವಕುಮಾರ ತಂದೆ ಶಂಕರ ಮೆತ್ರೆ ವಯ: 40 ವರ್ಷ, ಜಾತಿ: ಕುರುಬ, ಸಾ: ಜಾಂತಿ ಇತನು 01/- ರೂಪಾಯಿಗೆ 90/- ರೂಪಾಯಿ ಕೊಡುತ್ತೆನೆಂದು ಕೂಗುತ್ತಾ ಜನರಿಂದ ಹಣ ಪಡೆದು ಚೀಟಿ ಬರೆದು ಕೊಟ್ಟು ನಸಿಬೀನ ಮಟಕಾ ಜೂಜಾಟ ನಡೆಸುತ್ತಿರುವದುನ್ನು ನೋಡಿ ಖಚಿತ ಪಡಿಸಿಕೊಂಡು ಸದರಿ ಆರೋಪಿತನ ಮೆಲೆ ಪಂಚರ ಸಮಕ್ಷಮ ದಾಳಿ ಮಾಡಿ ಆತನನ್ನು ಹಿಡಿದುಕೊಂಡು ವಿಚಾರಣೆ ಮಾಡಲು ಆತನು ತಾನು ಜನರಿಂದ ಅಕ್ರಮವಾಗಿ ಹಣ ಪಡೆದು 01/- ರೂಪಾಯಿಗೆ 90/- ರೂಪಾಯಿ ಕೊಡುತ್ತೆನೆಂದು ಆಸೆ ತೋರಿಸಿ ಜನರಿಗೆ ಮಟಕಾ ಚೀಟಿ ಬರೆದುಕೊಡುತ್ತಿರುವುದಾಗಿ ಒಪ್ಪಿಕೊಂಡಿರುತ್ತಾನೆ, ನಂತರ ಆತನಿಗೆ ಪಂಚರ ಸಮಕ್ಷಮ ಶೋಧನೆ ಮಾಡಿದ್ದು ವನ ಹತ್ತಿರ 2990/- ರೂ ನಗದು ಹಣ, ಒಂದು ಬಾಲ ಪೆನ್ನ ಹಾಗು ಮಟಕಾ ನಂಬರ ಬರೆದ 06 ಮಟಕಾ ಚೀಟಿಗಳು ದೊರೆತಿದ್ದು, ನೇದವುಗಳನ್ನು  ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಹಳ್ಳಿಖೇಡ (ಬಿ) ಪೊಲೀಸ್ ಠಾಣೆ ಅಪರಾಧ ಸಂ. 81/2021, ಕಲಂ. 457, 380 ಐಪಿಸಿ :-

ದಿನಾಂಕ 17-07-2021 ರಂದು 1330 ಗಂಟೆಯಿಂದ ದಿನಾಂಕ 19-07-2021 ರಂದು 0930 ಗಂಟೆಯ ಧ್ಯಾವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ಬೇನ್ ಚಿಂಚೋಳಿ ಗ್ರಾಮದ ಸರಕಾರಿ ಪ್ರೌಢ ಶಾಲೆಯ ಗಣಕಯಂತ್ರ ರೂಮಿನ ಚನಲ್ ಗೇಟಿನ್ ಚಾವಿ ಹಾಗೂ ಬಾಗಿಲಿನ ಚಾವಿ ಮುರಿದು ಗಣಕಯಂತ್ರ ರೂಮಿನಲ್ಲಿ ಅಳವಡಿಸಲಾದ ಸರಕಾರದಿಂದ ಸರಬರಾಜು ಆದ 12 ವೋಲ್ಟ್‌ 100 .ಹೆಚ್ ಏಕ್ಸೈಡ್ ಪವರ್ ಸೇಫ್ ಕಂಪನಿಯ ಒಟ್ಟು 8 ಬ್ಯಾಟರಿಗಳು ಹೀಗೆ ಒಟ್ಟು 8 ಬ್ಯಾಟರಿಗಳ .ಕಿ 96,000/- ರೂ. ಬೆಲೆ ಬಾಳುವುದನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಅರ್ಜುನ ತಂದೆ ಮುಕುಂದ ಕಾಂಬ್ಳೆ ವಯ: 55 ವರ್ಷ, ಜಾತಿ: ಎಸ.ಸಿ ಹೊಲಿಯಾ, : ಮುಖ್ಯ ಗುರುಗಳು ಸರಕಾರಿ ಪ್ರೌಶಾಲೆ ಬೇನ್ ಚಿಂಚೋಳಿ, ಸಾ: ಕಬೀರಾಬಾದವಾಡಿ ರವರು ನೀಡಿದ ಅರ್ಜಿಯ ಸಾರಾಂಶದ ಮೇರೆಗೆ ದಿನಾಂಕ 27-07-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಹುಮನಾಬಾದ ಪೊಲೀಸ್ ಠಾಣೆ ಅಪರಾಧ ಸಂ. 129/2021, ಕಲಂ. 379 ಐಪಿಸಿ :-

ಫಿರ್ಯಾದಿ ಸಿದ್ದಯ್ಯಾ ತಂದೆ ಶರಣಯ್ಯಾ ಬರಸಾನೋರ ವಯ: 53 ವರ್ಷ, ಜಾತಿ: ಸ್ವಾಮಿ, ಸಾ: ಬಿ.ಬಿ ಗಲ್ಲಿ ಹುಮನಾಬಾದ ರವರು ವೀರಶೈವ ಕಲ್ಯಾಣ ಮಂಟಪ ಹುಮನಾಬಾದ ನೇದರ ಎದುರುಗಡೆ ನಿಲ್ಲಿಸಿರುವ ತನ್ನ ಹೀರೊ ಸ್ಪ್ಲೆಂಡರ್ ಪ್ರೋ ಮೋಟಾರ್ ಸೈಕಲ್ ನಂ. ಕೆಎ-38/ಇ-6618, ಚಾಸಿಸ್ ನಂ. MBLHA10ASDHG40958, ಇಂಜಿನ್ ನಂ. HA10ELDHG26906, ಮಾದರಿ: 2013, ಬಣ್ಣ: ಕಪ್ಪು ಬಣ್ಣ & 24,000/- ರೂ. ನೇದನ್ನು ದಿನಾಂಕ 06-07-2021 ರಂದು 2050 ಗಂಟೆಯಿಂದ 2200 ಗಂಟೆಯ ಅವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಅರ್ಜಿ ಸಾರಾಂಶದ ಮೇರೆಗೆ ದಿನಾಂಕ 27-07-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.