ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 23-08-2021
ಜನವಾಡಾ ಪೊಲೀಸ್ ಠಾಣೆ ಯು.ಡಿ.ಆರ್ ಸಂ. 07/2021, ಕಲಂ. 174 ಸಿ.ಆರ್.ಪಿ.ಸಿ :-
ದಿನಾಂಕ 22-08-2021 ರಂದು ಫಿರ್ಯಾದಿ ಸಂತೋಷಿ ಗಂಡ ಸಂತೋಷ ಪಾಟೀಲ ಸಾ: ನವಲಾಸಪುರ ಗ್ರಾಮ ತಾ: & ಜಿ: ಬೀದರ ರವರ ಗಂಡನಾದ ಸಂತೋಷ್ ತಂದೆ ನಾಗಶಟ್ಟಿ ಪಾಟೀಲ್ ವಯ: 40 ವರ್ಷ ಇವರು ಕೃಷಿ ಕೆಲಸಕ್ಕೆ ಬ್ಯಾಂಕಿನಿಂದ ಸಾಲ ಮಾಡಿದ್ದು, ಸರಿಯಾಗಿ ಮಳೆಯಾಗದ ಕಾರಣ ಬೆಳೆ ಬೆಳೆಯಲಾರದೆ ಸಾಲ ಹೇಗೆ ತೀರಿಸಬೇಕೆಂದು ಮನನೊಂದು ಸಾಲಭಾದೆಯಿಂದ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ಯು.ಡಿ.ಆರ್ ಸಂ. 16/2021, ಕಲಂ. 174(ಸಿ) ಸಿ.ಆರ್.ಪಿ.ಸಿ :-
ದಿನಾಂಕ 21-08-2021 ರಂದು 1730 ಗಂಟೆ ಸುಮಾರಿಗೆ ಫಿರ್ಯಾದಿ ತ್ರಿವೇಣಿ ಗಂಡ ಶ್ರೀಕಾಂತ ದೊಡ್ಡಮನಿ ವಯ: 33 ವರ್ಷ, ಜಾತಿ: ಎಸ್.ಸಿ ಮಾದಿಗ, ಉ: ಸಹಾಕಯ ತೋಟಗಾರಿಕೆ ನಿರ್ದೇಶಕರು ಹಳ್ಳಿ ಕ್ಷೇತ್ರ, ಸಾ: ಭವಾನಿ ಕಾಲೋನಿ ಹುಮನಾಬಾದ ರವರ ತೋಟಗಾರಿಕೆ ಕ್ಷೇತ್ರದಲ್ಲಿ ಸಹಾಯಕ ತೋಟಗಾರಿಗೆ ಅಧಿಕಾರಿ ಅಂತಾ ಕೆಲಸ ಮಾಡುವ ಪುಂಡಲಿಕ ತಂದೆ ಮಾಣಿಕರಾವ ಮೇಟಿ ರವರು ಕರೆ ಮಾಡಿ ನಮ್ಮ ಸರ್ವೆ ನಂ. 123 ನೇದರ ಜಮೀನಿನಲ್ಲಿರುವ ಬಾವಿಯಲ್ಲಿ ಒಂದು ಅಪರಿಚಿತ ಶವ ಬಿದ್ದಿದೆ ಅಂತಾ ತಿಳಿಸಿದರು, ನಂತರ ಫಿರ್ಯಾದಿಯವರು ಮೇಲಾಧಿಕಾರಿಗಳಿಗೆ ವಿಷಯ ತಿಳಿಸಿ ದಿನಾಂಕ 22-08-2021 ರಂದು 0700 ಗಂಟೆಗೆ ತಮ್ಮ ತೋಟಗಾರಿಕೆ ಕ್ಷೇತ್ರಕ್ಕೆ ಹೋಗಿ ಜಮೀನಿನ ಆವರಣದಲ್ಲಿರುವ ಬಾವಿಯ ಹತ್ತಿರ ಹೋಗಿ ನೋಡಲು ಒಂದು ಅಪರಿಚಿತ ಶವ ಬೋರಲಾಗಿ ನೀರಿನ ಮೇಲೆ ತೆಲುತಿತ್ತು ಶವ ಪೂರ್ತಿ ಕೊಳೆತಂತೆ ಕಂಡುಬರುತ್ತದೆ, ಸದರಿ ಘಟನೆ ಸುಮಾರು 20-25 ದಿವಸಗಳ ಹಿಂದೆ ಜರುಗಿದಂತೆ ಕಂಡು ಬರುತ್ತಿದ್ದು, ಸದರಿ ಸಾವಿನ ಬಗ್ಗೆ ನನಗೆ ಸಂಶಯ ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬೀದರ ನೂತನ ನಗರ ಪೊಲೀಸ್ ಠಾಣೆ ಅಪರಾಧ ಸಂ. 94/2021, ಕಲಂ. 379 ಐಪಿಸಿ :-
ದಿನಾಂಕ 23-07-2021 ರಂದು 2200 ಗಂಟೆಯಿ0ದ ದಿನಾಂಕ 24-07-2021 ರಂದು 0600 ಗಂಟೆಯ ಅವಧಿಯಲ್ಲಿ ಬೀದರ ನಗರದ ಯಲ್ಲಾಲಿಂಗ ಕಾಲೋನಿ ನೌಬಾದನಲ್ಲಿರುವ ಫಿರ್ಯಾದಿ ಅಜಯಕುಮಾರ ತಂದೆ ರಾಮಯ್ಯ ಸಾ: ಯಲ್ಲಾಲಿಂಗ ಕಾಲೋನಿ ನೌಬಾದ ಬೀದರ ರವರು ಬಾಡಿಗೆ ಮನೆಯ ಮುಂದೆ ನಿಲ್ಲಿಸಿದ ತಮ್ಮ ಹೊಂಡಾ ಶೈನ ಮೋಟಾರ್ ಸೈಕಲ ನಂ. TS-26/C-8132, Chassis No. ME4JC652KKG025547, Engine No. JC65EG0204305, Color: Black ಹಾಗೂ ಅ.ಕಿ 35,000/- ರೂ. ನೇದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಔರಾದ (ಬಿ) ಪೊಲೀಸ್ ಠಾಣೆ ಅಪರಾಧ ಸಂ. 106/2021, ಕಲಂ. 392 ಐಪಿಸಿ :-
ದಿನಾಂಕ 22-08-2021 ರಂದು 0600 ಗಂಟೆಗೆ ಫಿರ್ಯಾದಿ ಸರಸ್ವತಿ ಗಂಡ ಸೂರ್ಯಕಾಂತ ಮಾನಕಾರೆ ವಯ: 47 ವರ್ಷ, ಜಾತಿ: ಎಸ್.ಸಿ ಮಾದಿಗ, ಸಾ: ಸರಸ್ವತಿ ಸೂರ್ಯ ನಿಲಯ ಶಿವನಗರ ಕಾಲೋನಿ ಐಬಿ ಹಿಂದುಗಡೆ ಔರಾದ(ಬಿ) ರವರು ತಮ್ಮ ಮನೆಂiÀÄ ಮುಂದೆ ಕಸಗೂಡಿಸುತ್ತಿರುವಾಗ ಐಬಿ ರಿಂಗ ರೋಡ ಕಡೆಯಿಂದ ಮೋಟರ ಸೈಕಲ ಮೇಲೆ ಒಬ್ಬ ಅಪರಿಚಿತ ವ್ಯಕ್ತಿ ಬಂದು ಫಿರ್ಯಾದಿಯವರ ಕೊರಳಿನಲ್ಲಿನ ಬಂಗಾರದ 84 ಗುಂಡುಗಳು ಮತ್ತು 3 ಮಾಸಿ ಬಂಗಾರದ ಮಾಂಗಲ್ಯ ಅಂದಾಜು 1 ತೊಲೆ ಬಂಗಾರ ಅ.ಕಿ 31,000/- ರೂಪಾಯಿ ನೇದನ್ನು ದೋಚಿಕೊಂಡು ಮೋಟರ ಸೈಕಲ ಮೇಲೆ ಪರಾರಿಯಾಗುವಾಗ ಚಿರಾಡಿ ಅವನಿಗೆ ಬೆನ್ನು ಹತ್ತಿದಾಗ ಅವನು ಅಲ್ಲಿಂದ ಮೋಟರ ಸೈಕಲ ಮೇಲೆ ಫರಾರಿಯಾಗಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 93/2021, ಕಲಂ. 3 & 7 ಇ.ಸಿ ಕಾಯ್ದೆ :-
ದಿನಾಂಕ 22-08-2021 ರಂದು ಫಿರ್ಯಾದಿ ರಾಜೇಂದ್ರಕುಮಾರ ಆಹಾರ ನಿರೀಕ್ಷಕರು ತಹಶೀಲ ಕಛೇರಿ ಬಸವಕಲ್ಯಾಣ ರವರಿಗೆ ಪಿ.ಎಸ್.ಐ (ಕಾ.ಸೂ) ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ರವರು ಕರೆ ಮೂಲಕ ಹುಮನಾಬಾದ ಕಡೆಯಿಂದ ಸರಕಾರದಿಂದ ವಿವಿಧ ಯೋಜನೆ ಅಡಿಯಲ್ಲಿ ಸರಬರಾಜು ಆಗುವ ಅಕ್ಕಿಯನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡುವ ಕುರಿತು ಒಂದು ಲಾರಿಯಲ್ಲಿ ತುಂಬಿಕೊಂಡು ಬರುತ್ತಿದ್ದಾರೆಂದು ಮಾಹಿತಿ ನೀಡಿ ಕೂಡಲೇ ಹಳ್ಳಿ ಶಿವಾರದಲ್ಲಿ ರಾ.ಹೆ ಬದಿಯಲ್ಲಿರುವ ಜೈ ಭವಾನಿ ಧಾಬಾ ಹತ್ತಿರ ಬರುವಂತೆ ತಿಳಿಸಿದಾಗ ಫಿರ್ಯಾದಿಯು ಸ್ಥಳಕ್ಕೆ ಹೋಗಿದ್ದು ನಂತರ ಲಾರಿ ಸಂ. ಜಿ.ಜೆ-36/ಟಿ-7666 ನೇದು ಬಂದಾಗ ಸಂಶಯದ ಮೇರೆಗೆ ಅದನ್ನು ತಡೆದು ಅದರ ಚಾಲಕನಾದ ಗಲಾ ತಂದೆ ಕಾನಾಭಾಯಿ ಘೇಲಿಯಾ ವಯ: 27 ವರ್ಷ, ಜಾತಿ: ರಬ್ಬಾರಿ, ಸಾ: ರಿನಾವಡ್ಡಾ, ತಾ: ಜಿ: ಪೋರಬಂದರ ಮತ್ತು ಲಾರಿಯಲ್ಲಿದ್ದ ಮತ್ತೊಬ್ಬ ವ್ಯಕ್ತಿ ವಿರಾ ತಂದೆ ಕಾನಾಭಾಯಿ ಘೇಲಿಯಾ ವಯ: 25 ವರ್ಷ, ಜಾತಿ: ರಬ್ಬಾರಿ, ಸಾ: ರಿನಾವಡ್ಡಾ, ತಾ: ಜಿ: ಪೋರಬಂದರ ರವರಿಗೆ ವಶಕ್ಕೆ ಪಡೆದುಕೊಂಡು ಲಾರಿ ಪರಿಶೀಲಿಸಿ ನೋಡಲು ಬೀಳಿ ಬಣ್ಣದ ಪ್ಲಾಸ್ಟೀಕ ಚೀಲಗಳಲ್ಲಿ 50 ಕೆ.ಜಿ ವುಳ್ಳ 450 ಅಕ್ಕಿ ಚೀಲ ಇದ್ದು ಒಟ್ಟು 225 ಕ್ವೀಂಟಲ ಅಕ್ಕಿ ಇದ್ದು, ಸದರಿ ಅಕ್ಕಿಯನ್ನು ಪರಿಶೀಲಿಸಿ ನೋಡಲು ಸದರಿ ಅಕ್ಕಿ ಸರಕಾರದಿಂದ ವಿವಿಧ ಯೋಜನೆ ಅಡಿಯಲ್ಲಿ ಸರಬರಾಜು ಆಗುವ ಅಕ್ಕಿ ಇರುವದು ಮೇಲ್ನೋಟಕ್ಕೆ ಕಂಡು ಬಂದಿರುವದರಿಂದ ಸದರಿ ಲಾರಿ ಚಾಲಕರು ಈ ಅಕ್ಕಿಯನ್ನು ಹೆಚ್ಚಿನ ಬೆಲೆಗೆ ಕಾಳ ಸಂತೆಯಲ್ಲಿ ಮಾರಾಟ ಮಾಡುವ ಕುರಿತು ಸಾಗಿಸುತ್ತಿದ್ದು ಈ ಅಕ್ಕಿಯ ಅ.ಕಿ 6,75,000 ರೂ. ಮತ್ತು ಲಾರಿಯ ಅ.ಕಿ 12 ಲಕ್ಷ ರೂ. ಹೀಗೆ ಎಲ್ಲಾ ಸೇರಿ ಅಂದಾಜು 18,75,000 ರೂ.ದಷ್ಟು ಇದ್ದು, ಇ ಬಗ್ಗೆ ಪಂಚರ ಸಮಕ್ಷಮ ಸದರಿ ಲಾರಿ ಹಾಗೂ ಅಕ್ಕಿಯನ್ನು ಜಪ್ತಿ ಮಾಡಿಕೊಂಡು ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.