Police Bhavan Kalaburagi

Police Bhavan Kalaburagi

Saturday, January 23, 2021

BIDAR DISTRICT DAILY CRIME UPDATE 23-01-2021

 

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 23-1-2021

 

ಬೀದರ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 12/2021 ಕಲಂ 279, 304(ಎ) ಐಪಿಸಿ ಜೊತೆ 187 ಐಎಮ್.ವಿ. ಕಾಯ್ದೆ :-

 

ದಿನಾಂಕ 22.01.2021 ರಂದು 0300 ಗಂಟೆಗೆ ಫಿರ್ಯಾದಿ ಶ್ರೀ ಸಚಿನ ತಂದೆ ಬಸವರಾಜ ಯದಲಾಪೂರೆ, ವಯ 27 ವರ್ಷ, ಜಾತಿ ಲಿಂಗಾಯತ, ಉ: ಖಾಸಗಿ ಕೆಲಸ ಸಾ: ಬೇಮಳಖೇಡ ತಾ: ಚಿಟಗುಪ್ಪ ಸದ್ಯ ಬ್ಯಾಂಕ ಕಾಲೋನಿ ಬೀದರ ರವರು ಠಾಣೆಗೆ ಬಂದು ದೂರು ನೀಡಿದರ ಸಾರಾಂಶವೆನೆಂದರೆ, ದಿನಾಂಕ 21.01.2021 ರಂದು ಮಧ್ಯಾಹ್ನ ಇವರ ತಂದೆ ಬಸವರಾಜ ತಂದೆ ವಿರಶೆಟ್ಟಿ ಯದಲಾಪೂರೆ, ವಯ 54 ವರ್ಷ, ಜಾತಿ ಲಿಂಗಾಯತ, ಉ: ಒಕ್ಕಲುತನ ಸಾ: ಬೇಮಳಖೇಡ ತಾ: ಚಿಟಗುಪ್ಪ ಸದ್ಯ ಬ್ಯಾಂಕ ಕಾಲೋನಿ ಬೀದರ ಮತ್ತು  ತಾಯಿ ಸುನೀತಾ ಗಂಡ ಬಸವರಾಜ ಇಬ್ಬರು ಕೂಡಿಕೊಂಡು ಮೊಟಾರ ಸೈಕಲ ನಂ. ಕೆಎ38ಯು6060 ನೇದ್ದರ ಮೇಲೆ ಖಾಸಗಿ ಕೆಲಸ ಕುರಿತು ಮನೆಯಿಂದ ಅಂದರೆ ಬ್ಯಾಂಕ ಕಾಲೋನಿ ಕಡೆಯಿಂದ ಬಸವೇಶ್ವರ ವೃತ್ತದ ಕಡೆಗೆ ಹೋಗುತ್ತಿದ್ದರು. ಇವರ ತಂದೆ ಮೊಟಾರ ಸೈಕಲ ಚಲಾಯಿಸುತ್ತಿದ್ದರು. ಮದ್ಯಾಹ್ನ ಸಮಯ ಅಂದಾಜು 3:15 ಗಂಟೆಗೆ ಯುನೈಟೆಡ್ ಆಸ್ಪತ್ರೆ ಗುಂಪಾ ರೋಡ ಹತ್ತಿರ ಬಂದಾಗ ಹಿಂದಿನಿಂದ ಒಂದು ಅಪರಿಚಿತ ಮೊಟಾರ ಸೈಕಲ ಸವಾರ ಅತೀ ವೇಗ ಹಾಗು ನಿಸ್ಕಾಳಜಿನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಮಾಡಿ, ಮೊಟಾರ ಸೈಕಲ ನಿಲ್ಲಿಸಿ, ಅಲ್ಲೆ ಇದ್ದ ಯುನೈಟೆಡ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಅಲ್ಲೆ ಬಿಟ್ಟು ವಾಹನ ತೆಗೆದುಕೊಂಡು ಓಡಿ ಹೋಗಿರುತ್ತಾನೆ. ಅವನಿಗೆ ನೋಡಿದರೆ ಎಲ್ಲರು ಗುರುತ್ತಿಸುತ್ತೇವೆ. ಗಾಬರಿಯಲ್ಲಿ ಯಾರು ಮೊಟಾರ ಸೈಕಲ ನಂಬರ ನೋಡಿರಲಿಲ್ಲ. ಇವರ ತಂದೆ ಬಸವರಾಜ ರವರಿಗೆ ಹಣೆಯ ಮೇಲೆ ಭಾರಿ ರಕ್ತಗಾಯ, ಎದೆಗೆ ಗುಪ್ತಗಾಯವಾಗಿರುತ್ತದೆ.  ಯುನೈಟೆಡ್ ಆಸ್ಪತ್ರೆಯಲ್ಲಿ ಎಮ್.ಎಲ್.ಸಿ ಮಾಡಿಸದೆ ಗಾಬರಿಯಲ್ಲಿ ಸೋಲಾಫುರ ಆಸ್ಪತ್ರೆಗೆ ಒಂದು ಖಾಸಗಿ ವಾಹನದಲ್ಲಿ ತೆಗೆದುಕೊಂಡು ಹೋಗಿದ್ದು, ಸೋಲಾಪೂರ ಎಸ್.ಎಸ್. ಬೆಲ್ದಾವ್ ಆಸ್ಪತ್ರೆ ಹತ್ತಿರ ದಿನಾಂಕ 21.01.2021 ರಂದು ರಾತ್ರಿ 10:00 ಗಂಟೆಗೆ ಮೃತಪಟ್ಟಿರುತ್ತಾರೆ. ಮರಳಿ ಬೀದರ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಬಂದಿರುತ್ತೇವೆ. ಬೀದರಕ್ಕೆ ಬಂದು ದೂರು ನೀಡಲು ತಡವಾಗಿರುತ್ತದೆ. ಕಾರಣ   ಅಪರಿಚಿತ ಮೊಟಾರ ಸೈಕಲ ಸವಾರನ ವಿರುದ್ದ ಕಾನೂನು ಕ್ರಮ ಕೈಕೊಳ್ಳಲು ವಿನಂತಿ ಅಂತ ನೀಡಿದ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

 

ಹಳ್ಳಿಖೇಡ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 6/2021 ಕಲಂ 302, 201 ಐಪಿಸಿ :-

ದಿನಾಂಕ 22/01/2021 ರಂದು ಮುಂಜಾನೆ 08:30 ಗಂಟೆ ಸುಮಾರಿಗೆ ಪಿಎಸ್ಐ (ಕಾಸು) ಪೆಟ್ರೋಲಿಂಗ ಕರ್ತವ್ಯದಲ್ಲಿದ್ದಾಗ ನಂದಗಾಂವ ಗ್ರಾಮದ ಶಿವಾರದ ವಿಠಲರಾವ ಕಲ್ಯಾಣಿ ರವರ ಹೊಲದ ಬಿಳಿ ಜೋಳದ ಬೆಳೆಯಲ್ಲಿ ಒಬ್ಬ ವ್ಯಕ್ತಿಯ ಮೃತ ದೇಹ ಬಿದಿರುತ್ತದೆ ಅಂತಾ ಮಾಹಿತಿ ಬಂದಿದ ಮೇರೆಗೆ ಸಿಬ್ಬಂದಿಯವರನ್ನು ಕರೆದುಕೊಂಡು ಸ್ಥಳಕ್ಕೆ ಭೇಟಿ ನೀಡಿ ನೋಡಲು ವಿಠಲರಾವ ಕಲ್ಯಾಣಿ ರವರ ಹೊಲ ಸವರ್ೇ ನಂ 216 ರಲ್ಲಿ ಬೆಳೆದ ಜೋಳದ ಬೆಳೆಯಲ್ಲಿ ಮೃತ ದೇಹ ಬಿದಿದ್ದು ನೋಡಲು ಎರಡು ಕಣ್ಣುಗಳಿಗೆ ಮತ್ತು ಮೂಗಿಗೆ ಹೊಡೆದು ಗಾಯ ಪಡಿಸಿದ ರಕ್ತಗಾಯವಾಗಿದ್ದು ಮತ್ತು ಶವದ ಪಕ್ಕದಲ್ಲಿ ಸೊಂಟಕ್ಕೆ ಹಾಕಿಕೊಳ್ಳುವ ಬೇಲ್ಟ್ ಎರಡು ತುಕ್ಕಡಿಗಳು ಬಿದಿದ್ದು ಮೃತನ ಕುತ್ತಿಗೆಗೆ ಬೇಲ್ಟನಿಂದ ದಬಾಯಿಸಿ ಸಾಯಿಸಿದ ಬಗ್ಗೆ ಕಂಡು ಬಂದಿತ್ತದೆ. ನಂತರ ಮೃತ ವ್ಯಕ್ತಿಯ ಹೆಸರು ವಿಳಾಸ ತಿಳಿದುಕೊಳ್ಳಲು ಸದರಿ ಮೃತ ವ್ಯಕ್ತಿಯ ಹೆಸರು ರೇವಣಸಿದ್ದಯ್ಯಾ ತಂದೆ ವೀರಯ್ಯಾ ಸ್ವಾಮಿ ಸಾ: ಸಿಸರ್ಿ ಔರಾದ ತಾ: ಬೀದರ ಸದ್ಯ ಮದರಗಾಂವ ಅಂತಾ ಗೊತ್ತಾಗಿದ್ದು, ನಂತರ ಸದರಿ ವಿಷಯ ಮೃತನ ಹೆಂಡತಿ ಮತ್ತು ತಂದೆ ತಾಯಿಗೆ ಗೊತ್ತಾಗಿ ಅವರು ಸ್ಥಳಕ್ಕೆ ಬಂದು ನೋಡಿ ಮೃತನ ಮೃತ ದೇಹ ಗುರುತಿಸಿ ನಂತರ ಅವರು ಈ ಬಗ್ಗೆ ಫಿಯರ್ಾದು ಅಜರ್ಿ 11:15 ಗಂಟೆಗೆ ಬರೆದು ಕೊಟ್ಟಿದನ್ನು ಸ್ವೀಕರಿಸಿಕೊಂಡು ನೋಡಲು ಸಾರಂಶವೆನೆಂದರೆ, ಫಿರ್ಯಾದಿ ಚನ್ನಮ್ಮಾ ಗಂಡ ವೀರಯ್ಯಾ ಮಠಪತಿ ವಯಸ್ಸು: 55 ವರ್ಷ ಜಾತಿ: ಸ್ವಾಮಿ ಉ: ಮನೆ ಕೆಲಸ ಸಾ: ಸಿಸರ್ಿ ಔರಾದ ತಾ:ಜಿ: ಬೀದರ ದೂರು ನಿಡಿದರ ಸಾರಾಂಶವೆನೆಂದರೆ ಇವರಿಗೆ ಎರಡು ಗಂಡು ಮತ್ತು ಎರಡು ಹೆಣ್ಣು ಮಕ್ಕಳು ಇರುತ್ತಾರೆ.   ಮಗನಾದ ರೇವಣಸಿದ್ದಯ್ಯಾ ಮದರಗಾಂವ ಗ್ರಾಮದ ಪೂಜಾ ಇವಳೊಂದಿಗೆ ಸುಮಾರು 6 ವರ್ಷಗಳ ಹಿಂದೆ ಮದುವೆ ಮಾಡಿದ್ದು  ಮಗನಿಗೆ ಸೋಮನಾಥ-5 ವರ್ಷ ಮತ್ತು ಶಿವಶಂಕರ-2 ವರ್ಷ ಹೀಗೆ 2 ಜನ ಗಂಡು ಮಕ್ಕಳಿರುತ್ತಾರೆ.   ರೇವಣಸಿದ್ದಯ್ಯಾ ತಂದೆ ವೀರಯ್ಯಾ ಮಠಪತಿ ವಯಸ್ಸು: 32 ವರ್ಷ ಜಾತಿ: ಸ್ವಾಮಿ ಉ: ಕೂಲಿ ಕೂಲಿಸ ಸಾ: ಸಿಸರ್ಿ ಔರಾದ ತಾ:ಜಿ: ಬೀದರ ಇವನು ಸರಾಯಿ ಕುಡಿಯುವ ಚಟವುಳ್ಳವನಾಗಿದ್ದು   ಈಗ ಲಾಕ್ಡೌನ್ ಸಂಬಂಧ 10 ತಿಂಗಳ ಹಿಂದೆ ಇವರ ಮಗ ಹೈದ್ರಾಬಾದನಿಂದ   ಊರಿಗೆ ಬಂದು ನಂತರ ಸದ್ಯ   ಹೀಗೆ ಸರಾಯಿ ಕುಡಿತಿದ್ದರಿಂದ  ಇವರ ಸೋಸೆ ಮಕ್ಕಳೊಂದಿಗೆ ತನ್ನ ತವರು ಮನೆಗೆ ಹೊಗಿರುತ್ತಾಳೆ. ನಂತರ ಇವರ ಮಗ ಅವಾಗಾವಾಗ ಮದರಗಾಂವ ಗ್ರಾಮಕ್ಕೆ ಹೋಗಿರುತ್ತಿದ್ದನು. ಈಗ ಸದ್ಯ 1 ತಿಂಗಳು ನನ್ನ ಮಗ ಠಾಕೂರ ಧಾಬಾ ಹುಡಗಿಯಲ್ಲಿ ಕೂಲಿ ಮಾಡಿಕೊಂಡು ಇದ್ದನು.  ಹೀಗಿರುವಲ್ಲಿ  ದಿನಾಂಕ 21/01/2021 ರಂದು ಮಲ್ಲಿಕಾಜರ್ುನ ಜಾತ್ರೆ ಇರುವು ಸಂಬಂಧ ಫಿರ್ಯಾದಿ ಮಗ ಮದಗರಾಂವ ಗ್ರಾಮಕ್ಕೆ ಹೋಗಿ ತನ್ನ ಮಗನಿಗೆ ಆಟದ ಸಾಮಾನು ಕೊಡಿಸಿರುತ್ತಾನೆ ತಿಳಿಸಿರುತ್ತಾನೆ. ತನ್ನ ಮಗನಿಗೆ ಯಾರೋ ಸರಾಯಿ ಕುಡಿದು ಜಗಳ ಮಾಡಿ ದಿನಾಂಕ 21/01/2021 ರಂದು ರಾತ್ರಿ 8:30 ಗಂಟೆಯಿಂದ ಇಂದು ದಿನಾಂಕ 22/01/2021 ರಂದು ಮುಂಜಾನೆ 06:00 ಗಂಟೆಯ ವರೆಗಿನ ಸಮಯದಲ್ಲಿ ಕಣ್ಣಿನ ಮೇಲೆ ಹೊಡೆದು ರಕ್ತಗಾಯ ಪಡಿಸಿ ಬೇಲ್ಟಿನಿಂದ ಕುತ್ತಿಗೆಗೆ ಬಿಗಿದು ಕೊಲೆ ಮಾಡಿರುತ್ತಾರೆ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಬೇಮಳಖೇಡಾ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 01/2021 ಕಲಂ 78 (3) ಕೆಪಿ ಕಾಯ್ದೆ :-

ದಿನಾಂಕ 22-01-2021 ರಂದು 15:00 ಗಂಟೆಗೆ  ಪಿಎಸ್ಐ ರವರು ಠಾಣೆಯಲ್ಲಿದ್ದಾಗ   ಪೊಲಕಪಳ್ಳಿ ಕ್ರಾಸ ಹತ್ತಿರ ಬಸ್ ನಿಲ್ದಾಣದ ಎದುರಿಗೆ ಬೀದರ ಚಿಂಚೊಳಿ ರೋಡಿನ ಮೇಲೆ ಒಬ್ಬ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಎಂಬ ನಸೀಬಿನ ಜೂಜಾಟ ನಡೆಸುತ್ತಿದ್ದಾನೆ ಅಂತಾ ಮಾಹಿತಿ ಬಂದ ಮೇರೆಗೆ ಸಿಬ್ಬಂದಿಯೊಂದಿಗೆ ಹೋಗಿ  ಸದರಿಯವನ ಮೇಲೆ ದಾಳಿ  ಮಾಡಿ ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದವನಿಗೆ ಹಿಡಿದು ಅವನ ಹೆಸರು ವಿಚಾರಿಸಲಾಗಿ ಅವನು ತನ್ನ ಹೆಸರು ಸೂರ್ಯಕಾಂತ ತಂದೆ ಬಕ್ಕಪ್ಪಾ ಮರಕುಂದಿ ವಯ:22 ವರ್ಷ ಜಾತಿ:ಕುರುಬ : ಕೂಲಿ ಕೆಲಸ ಸಾ:ಪೊಲಕಪಳ್ಳಿ ಅಂತಾ ತಿಳಿಸಿದನು. ಇವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂದಿಸಿದ ನಗದು ಹಣ 1420/-ರೂಪಾಯಿಗಳು ಮತ್ತು ಮಟಕಾ ನಂಬರ್ ಬರೆದ 1 ಮಟಕಾ ಚೀಟಿ, ಹಾಗು ಒಂದು ಬಾಲ್ ಪೆನ್ ಜಪ್ತಿ ಮಾಡಿಕೊಂಡಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

 

ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 11/2021 ಕಲಂ 78(3) ಕೆ.ಪಿ. ಕಾಯ್ದೆ :-

ದಿನಾಂಕ 21/01/2021 ರಂದು 13:30 ಗಂಟೆಗೆ ನಾನು ಠಾಣೆಯಲ್ಲಿದ್ದಾಗ ಭಾಲ್ಕಿಯ ಕನಕದಾಸ ಕಟ್ಟೆ ಹತ್ತಿರ ಮೂರು ಜನರು ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಕುಳಿತುಕೊಂಡು 1 ರೂ ಗೆ 80 ರೂ ಕೊಡುತ್ತೆವೆ ಇದು ಬಾಂಬೆ ಮಟಕಾ ಇರುತ್ತದೆ ಅಂತಾ ಹೇಳಿ ಜನರಿಗೆ ಕೂಗಿ ಕೂಗಿ ಕರೆದು ಅವರಿಂದ ಹಣ ಪಡೆದು ಮಟಕಾ ನಂಬರಿನ ಚೀಟಿ ಬರೆದುಕೊಡುತ್ತಿದ್ದಾರೆ ಅಂತಾ ಖಚಿತ ಮಾಹಿತಿ ಬಂದ ಮೇರೆಗೆ ಸಿಬ್ಬಂದಿಯೊಂದಿಗೆ ಹೋಗಿ ದಾಳಿ ಮಾಡಿ ಮಹೀಳಾ ಸಿಬ್ಬಂದಿ ಸಹಾಯದಿಂದ ಒಬ್ಬ ಮಹಿಳೆ ಮತ್ತು ಇಬ್ಬರು ಪುರುಷರನ್ನು ಹಿಡಿದು ವಿಚಾರಿಸಲು ತಮ್ಮ ಹೆಸರು 1] ವಿಲಾಸ ತಂದೆ ಶಂಕರರಾವ ಕೊಡಂಬ್ಲೆ ವಯ: 60 ವರ್ಷ ಜಾತಿ; ಎಸ್.ಟಿ ಗೊಂಡ ಉ: ಕೂಲಿ ಕೆಲಸ ಸಾ: ಬೀರದೆವ ಗಲ್ಲಿ ಕನಕದಾಸ ಕಟ್ಟೆ ಹತ್ತಿರ ಭಾಲ್ಕಿ, ಲಲೀತಾ ಗಂಡ ವಿಲಾಸ ಕೊಂಡಬ್ಲೆ ವಯ: 45 ವರ್ಷ ಜಾತಿ: ಎಸ್.ಟಿ ಗೊಂಡ ಉ: ಮನೆ ಕೆಲಸ ಸಾ: ಬೀರದೆವ ಗಲ್ಲಿ ಕನಕದಾಸ ಕಟ್ಟೆ ಹತ್ತಿರ ಭಾಲ್ಕಿ, ಅಂಬಾದಾಸ ತಂದೆ ಗಣಪತರಾವ ಕೋರೆ ವಯ: 40 ವರ್ಷ ಜಾತಿ: ಕುರುಬ ಉ: ಕೂಲಿ ಕೆಲಸ ಸಾ: ಲಖ್ಖಣಗಾಂವ ತಾ: ಭಾಲ್ಕಿ  ಅಂತಾ ತಿಳಿಸಿದ್ದು ಪಂಚರ ಸಮಕ್ಷಮ ಅವರ ವಶದಿಂದ 1] ನಗದು ಹಣ 3250 ರೂ 2] 9 ಮಟಕಾ ಚೀಟಿಗಳು 3] ಮೂರು ಬಾಲ ಪೆನ್ನ ಜಪ್ತಿ ಮಾಡಿಕೊಂಡು ಸದರಿಯವರಿಗೆ ಪುನಃ ವಿಚಾರಣೆ ಮಾಡಲು ತಿಳಿಸಿದ್ದೆನೆಂದರೆ ನಾವು ಮೂರು ಜನರು 1 ರೂ ಗೆ 80 ರೂ ಕೊಡುತ್ತೆವೆ ಅಂತಾ ಹೆಳಿ ಜನರಿಗೆ ಕೂಗಿ ಕೂಗಿ ಕರೆದು ಅವರಿಂದ ಹಣ ಪಡೆದು ಮಟಕಾ ನಂಬರ ಬರೆದು ಕೊಡುತಿದ್ದೆವೆ ಅಂತಾ ಒಪ್ಪಿಕೊಂಡಿದರಿಂದ ಸದರಿಯವರಿಗೆ ವಶಕ್ಕೆ ತೆಗೆದುಕೊಂಡು ಸದರಿಯವರ ವಶದಿಂದ ಪಂಚರ ಸಮಕ್ಷಮ ಜಪ್ತಿ ಆರೊಪಿತರ ವಿರುದ್ದ ಗುನ್ನೆ  ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.