ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 14-11-2020
ಬೀದರ ನೂತನ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 125/2020 ಕಲಂ ಮಹಿಳೆ ಕಾಣೆ :-
ದಿನಾಂಕ 13/11/2020 ರಂದು 11:15 ಗಂಟೆಗೆ ಶ್ರೀ ಬಾಲಾಜಿ ತಂದೆ ದಿಗಂಬರ ಪಂಚಾಳ ವಯ 21 ಜಾ: ಪಂಚಾಳ ಉ: ಬಟ್ಟೆ ಅಂಗಡಿಯಲ್ಲಿ ಕೆಲಸ ಸಾ: ಹಿಪ್ಪರಗರ್ಾಮಾಲ ತಾ: ಬಿಲೋಯಿ ಜಿ: ನಾಂದೇಡ (ಎಂಎಸ್) ಸಧ್ಯ ಲಿಂಬೋಲಿ ಅಡ್ಡಾ ಹೈದ್ರಾಬಾದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಇವರು ಠಾಣೆಗೆ ಹಾಜರಾಗಿ ದೂರು ನೀಡಿದ ಸಾರಾಂಶವೆನೆಂದರೆ, ಇವರ ಹೆಂಡತಿ ಸ್ವಾತಿ ವಯ 19 ವರ್ಷ ಮನೆ ಕೆಲಸ ಮಾಡಿಕೊಂಡಿದ್ದರು, ಇಂದಿಗೆ 09-11-2020 ರಂದು ಹೈದ್ರಾಬಾದನ ಬಾಡಿಗೆಯ ಮನೆಯಲ್ಲಿನಿ ಇವರಿಬ್ಬರ ವ್ಮಧ್ಯೆ ಸಣ್ಣ ಪುಟ್ಟ ವಿಷಯಕ್ಕೆ ಮಾತಿನ ತಕರಾರು ಆಗಿರುವುದರಿಂದ ಇವರ ಹೆಂಡತಿ ತವರು ಮನೆ ಭಂಡಾರ ಕುಮಟಾಕ್ಕೆ ಹೋಗುತ್ತೇನೆ ನನ್ನನ್ನು ತವರು ಮನೆಗೆ ಬಿಟ್ಟು ಬಾ ಅಂತಾ ಅಂದಿದ್ದಕ್ಕೆ ಹೈದ್ರಾಬಾದದಿಂದ ಭಂಡಾರ ಕುಮಟಾಕ್ಕೆ ಬಿಡಲು ದಿನಾಂಕ 09-11-2020 ರಂದು ರಾತ್ರಿ 2000 ಗಂಟೆ ಸುಮಾರಿಗೆ ಬೀದರ ಕೇಂದ್ರ ಬಸ್ ನಿಲ್ದಾಣಕ್ಕೆ ಬಂದು ಬಸ್ ನಿಲ್ದಾಣದಲ್ಲಿ ಇವರ ಪತ್ನಿಯು ನೀನು ಹಿಂತಿರುಗಿ ಹೈದ್ರಾಬಾದಕ್ಕೆ ಹೋಗು ನಾನು ನನ್ನ ತವರು ಮನೆಗೆ ಹೋಗುತ್ತೇನೆಂದು ಹೇಳಿ ತಕರಾರು ಮಾಡುತ್ತಾ ರಾತ್ರಿ 2030 ಗಂಟೆ ಸುಮಾರಿಗೆ ಬಸ್ ನಿಲ್ದಾಣದ ಎದುರಿನಲ್ಲಿ ಒಂದು ಆಟೋದಲ್ಲಿ ಕುಳಿತುಕೊಂಡು ನೌಬಾದ ಕಡೆಗೆ ಹೋದಳು ನಂತರ ಫಿರ್ಯಾದಿಯು ಬೇರೊಂದು ಆಟೊದಲ್ಲಿ ಅವಳನ್ನು ಹಿಂಬಾಲಿಸಿಕೊಂಡು ನೌಬಾದ ಕಡೆಗೆ ಹೋಗಿ ಹುಡುಕಾಡಲು ಇವರ ಹೆಂಡತಿಯು ಸಿಗಲಿಲ್ಲಾ. ನಂತರ ಈ ವಿಷಯವನ್ನು ಮಾವ ಬಳಿರಾಮ (ಹೆಂಡತಿಯ ತಂದೆ) ರವರನ್ನು ಫೋನ ಮಾಡಿ ವಿಚಾರಿಸಲು ಅವರು ಗೊತ್ತಿರುವುದಿಲ್ಲಾ. ನಂತರ ಮಾವ ಬಳಿರಾಮ ರವರು ಬೀದರಕ್ಕೆ ಬಂದು ಇಬ್ಬರು ಕೂಡಿ ನೌಬಾದ, ಪ್ರತಾಪನಗರ, ಶಿವನಗರ ಕಡೆಗಳಲ್ಲಿ ನನ್ನ ಹೆಂಡತಿಯನ್ನು ಹುಡುಕಿದರೂ ಸಿಗಲಿಲ್ಲಾ. ಭಂಡಾರ ಕುಮಟಾ ಗ್ರಾಮಕ್ಕೆ ನಮ್ಮ ಸಂಬಂಧಿಕರಲ್ಲಿ, ಬೀದರನ ದೇವಸ್ಥಾನಗಳಲ್ಲಿ, ಹುಡುಕಾಡಿದ್ದು, ಎಲ್ಲಿಯೂ ಇವರ ಪತ್ನಿ ಸ್ವಾತಿ ರವರು ಪತ್ತೆಯಾಗಿರುವುದಿಲ್ಲಾ. ಸ್ವಾತಿ ರವರು ಇಂದಿಲ್ಲ ನಾಳೆ ಬರಬಹುದು ಎಂದು ನಿರೀಕ್ಷಣೆ ಮಾಡಿ ಎಲ್ಲಾ ಕಡೆ ಹುಡಕಾಡಿ ಪೊಲೀಸ ಠಾಣೆಗೆ ಬಂದು ದೂರು ನೀಡಲು ತಡವಾಗಿರುತ್ತದೆ. ಕಾಣೆಯಾದವರ ವಿವರ ಈ ಕೆಳಗಿನಂತೆ ಇರುತ್ತದೆ. ಹೆಸರು :- ಸ್ವಾತಿ, ಗಂಡನ ಹೆಸರು :- ಬಾಲಾಜಿ, ವಯಸು :- 19 ವರ್ಷ, ಎತ್ತರ :- 5.2 ಫೀಟ್, ಚಹರೆ ಪಟ್ಟಿ :- ತೆಳ್ಳನೆಯ ಮೈಕಟ್ಟು, ಗೋದಿ ಮೈಬಣ್ಣ, ಇರುತ್ತದೆ. ಧರಿಸಿದ ಬಟ್ಟೆಗಳು :-ಕೆಂಪು ಬಣ್ಣದ ಲೆಗಿಂಗ್, ಗ್ರೆ ಬಣ್ಣದ ಒಳಗಡೆ ಕೆಂಪು ಹೂವುಳ್ಳ ಟಾಪ, ಬಿಳಿ ಬಣ್ಣದ ಸ್ಕಾರ್ಪ ಮಾತನಾಡುವ ಭಾಷೆ :-ಮರಾಠಿ, ಹಿಂದಿ ಭಾಷೆ ಮಾತನಾಡುತ್ತಾರೆ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮನ್ನಾಏಖೇಳ್ಲಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 102/2020 ಕಲಂ 41 (ಡಿ) 102 ಸಿಆರ್.ಪಿ.ಸಿ ಜೊತೆ 379, ಐಪಿಸಿ :-
ದಿನಾಂಕ 13/11/2020 ರಂದು 0900 ಗಂಟೆಗೆ ಪಿಎಸ್ಐ ಹಾಗೂ ಸಿಬ್ಬಂದಿಯವರು ಬಾಲಮ್ಮಾ ಗುಡಿಯ ಹತ್ತಿರ ಮೋಟಾರ ವಾಹನ ಕಾಯ್ದೆ ಅಡಿಯಲ್ಲಿ ಕೇಸ್ ಹಾಕುತ್ತಿದ್ದಾಗ ಮನ್ನಾಎಖೇಳ್ಳಿ ಕಡೆಯಿಂದ ಎರಡು ಮೋಟರ ಸೈಕಲಗಳ ಮೇಲೆ ಇಬ್ಬರೂ ಜನರು ಬರುತ್ತಿದ್ದು ಅವರಿಗೆ ಸಿಬ್ಬಂದಿಯವರು ನಿಲ್ಲಲು ಕೈ ಸನ್ನೆ ಮಾಡಿದಾಗ ಇಬ್ಬರೂ ತಮ್ಮ ಮೋಟರ ಸೈಕಲಗಳನ್ನು ನಿಲ್ಲಿಸದೇ ವೇಗವಾಗಿ ಮೀನಕೇರಾ ಕ್ರಾಸ ಕಡೆ ಜಹೀರಾಬಾದ ರೋಡಿಗೆ ಹೋಗುತ್ತಿದ್ದಾಗ ಪಿಸ್ಐ ರವರು ಸಿಬ್ಬಂದಿಯೊಂದಿಗೆ ಜಿಪ್ನಲ್ಲಿ ಬೆನ್ನಟ್ಟಿ ಹಿಡಿದು ವಾಹನ ಚಾಲಕರಿಗೆ ವಿಚಾರಣೆ ಮಾಡಲು ಅವರಿಗೆ ಎರಡು ಮೋಟರ ಸೈಕಲಗಳ ಕಾಗದ ಪತ್ರಗಳ ಬಗ್ಗೆ ಕೇಳಿದಾಗ ಯಾವುದೇ ಸಮಂಜಸವಾದ ಉತ್ತರ ನೀಡದೇ ತಮ್ಮ ಹೆಸರು, ವಿಳಾಸ ಹೇಳಲು ಮರೆಮಾಚಿದ್ದು ಈ ಎರಡು ಜನರ ಮೇಲೆ ಬಲವಾದ ಸಂಶಯ ಬಂದು ಸದರಿ ವಾಹನಗಳನ್ನು ಕಳವು ಮಾಡಿಕೊಂಡು ಬಂದಿರಬಹುದೇಂದು ಸಂಶಯ ಬಂದು ಅವರನ್ನು ವಾಹನ ಸಮೇತ ಠಾಣೆಗೆ ತಂದು ಹೆಸರು ವಿಳಾಸ ವಿಚಾರಿಸಲು ತನ್ನ ಹೆಸರು ಎಮ್.ಡಿ ಅಜರ್ ತಂದೆ ಎಮ್.ಡಿ ಶಫರ್ೋದ್ದಿನ ನಾವದಗಿ ವಯ: 19 ವರ್ಷ ಜಾತಿ: ಮುಸ್ಲಿಂ ಉ: ಕೂಲಿ ಕೆಲಸ ಸಾ: ನೂರ್ ಕಾಲೋನಿ ಮನ್ನಾಎಖೇಳ್ಳಿ ಅಂತ ಹೇಳಿದ್ದು ಸದರಿ ಎಮ್.ಡಿ ಅಜರ್ ಇತನಿಗೆ ವಿಚಾರಿಸಲು ಈ ಮೋಟರ ಸೈಕಲ ಎಲ್ಲಿಂದ ತಂದಿದ್ದು, ಯಾರದು ಅಂತ ಕೇಳಲು ಆತನು ನಾನು ಹಾಗೂ ನನ್ನ ಗೆಳೆಯ ಎಮ್.ಡಿ ಅಮೀರ ತಂದೆ ಎಮ್.ಡಿ ಮೈನೋದ್ದಿನ ಬಂಬಳಗಿವಾಲೆ ಸಾ|| ಮನ್ನಾಎಖ್ಖೇಳ್ಳಿ ಇಬ್ಬರೂ ಕೂಡಿ ಸುಮಾರು 5 ತಿಂಗಳ ಹಿಂದೆ ಚಿಟಗುಪ್ಪಾ ಗ್ರಾಮದ ದಸ್ತಗಿರ ಮೊಹಲ್ಲಾದಲ್ಲಿ ನಾವು ಇಬ್ಬರೂ ಕೂಡಿಕೊಂಡು ರಾತ್ರಿ ವೇಳೆಯಲ್ಲಿ ಕಳವು ಮಾಡಿಕೊಂಡು ಬಂದಿರುತ್ತೇವೆ. ಈ ವಾಹನದ ಮಾಲೀಕರು ಯಾರು ಎನ್ನುವ ಬಗ್ಗೆ ನಮಗೇ ಗೊತ್ತಿಲ್ಲ ಅಂತ ಹೇಳಿದಾಗ ಈ ಮೋಟರ ಸೈಕಲ ವಾರಸುದಾರರು ಇಲ್ಲದ ಮೋಟರ ಸೈಕಲ ಆಗಿದ್ದು ಕಳವಿನಿಂದ ತಂದಿದ್ದು ಅಂತ ತಮ್ಮ ತಪ್ಪು ಒಪ್ಪಿಕೊಂಡ ಮೇರೆಗೆ ವಾಹನವನ್ನು ನೋಡಿ ಪರಿಶೀಲಿಸಲಾಗಿ ಟಿವಿಎಸ್ ಸ್ಟಾರ ಸಿಟಿ ಕಂಪನಿಯ ಮೋಟರ ಸೈಕಲ ಇದ್ದು ಅದರ ನಂಬರ ಪ್ಲೇಟ್ ಇರುವುದಿಲ್ಲ. ಅದರ ಚೆಸ್ಸಿ ನಂಬರ ಪರಿಶೀಲಿಸಿ ನೋಡಲು ಎಮ್.ಡಿ.625ಎನ್.ಎಫ್.1ಬಿಸಿ1ಎಫ್93575 ಹಾಗೂ ಇಂಜಿನ್ ನಂಬರ್ ನೋಡಲು ಎಎಫ್.1ಎಫ್.ಸಿ.1603922 ಇರುತ್ತದೆ. ಇದರ ಅಂ.ಕಿ. 30,000/-ರೂಪಾಯಿ ಇರುತ್ತದೆ. ಅದರಂತೆ ರಾಯಲ್ ಎನ್ಫೀಲ್ಡ್ ಮೋಟರ ಸೈಕಲ ಚಲಾಯಿಸುತ್ತಿದ್ದ ವ್ಯಕ್ತಿಯ ಹೆಸರು ಅಜರ್ ತಂದೆ ಅಬ್ದುಲ ರಹೀಮ್ ಇಟಲಿವಾಲೇ ವಯ: 18 ವರ್ಷ ಜಾತಿ: ಮುಸ್ಲಿಂ ಉ: ಕೂಲಿ ಕೆಲಸ ಸಾ: ಪುಗಟ ನಗರ ಮನ್ನಾಎಖೇಳ್ಳಿ ಅಂತ ಹೇಳಿದ್ದು ಮೋಟರ ಸೈಕಲ ಯಾರದ್ದು, ಎಲ್ಲಿಂದ ತಂದಿದ್ದು ಅಂತ ಕೇಳಲು 4-5 ತಿಂಗಳ ಹಿಂದೆ ಬೀದರದ ನ್ಯೂ ಆದರ್ಶ ಕಾಲೋನಿಯಲ್ಲಿ ನಾನು ಹಾಗೂ ಎಮ್.ಡಿ ಇಮ್ತಿಯಾಜ್ ತಂದೆ ಅಬ್ದುಲ ರಶೀದ ದಜರ್ಿ ಸಾ: ಪುಗಟ ನಗರ ಮನ್ನಾಎಖೇಳ್ಳಿ ಇಬ್ಬರೂ ಕೂಡಿಕೊಂಡು ರಾತ್ರಿ ವೇಳೆಯಲ್ಲಿ ಕಳವು ಮಾಡಿಕೊಂಡು ಬಂದಿದ್ದು ಇದರ ಮಾಲೀಕರು ಯಾರು ಎನ್ನುವ ಬಗ್ಗೆ ನಮಗೇ ಗೊತ್ತಿಲ್ಲ ಅಂತ ಹೇಳಿದನು. ಸದರಿ ವಾಹನಗಳು ಕಳವು ಮಾಡಿಕೊಂಡು ಬಂದಿದ್ದರಿಂದ ಇವುಗಳ ವಾರಸುದಾರರು ಯಾರೆಂಬುದು ಗೊತ್ತಿಲ್ಲದ ಕಾರಣ ಸದರಿ ವಾಹನ ನೋಡಲು ಇದು ರಾಯಲ್ ಎನ್ಫೀಲ್ಡ್ ಕಂಪನಿಯ ವಾಹನ ಕಪ್ಪು ಬಣ್ಣದ್ದು ಇದ್ದು ಇದಕ್ಕೆ ನಂಬರ್ ಪ್ಲೇಟ್ ಇರುವುದಿಲ್ಲ. ಅದರ ಚೆಸ್ಸಿ ನಂಬರ್ ನೋಡಿ ಪರಿಶೀಲಿಸಲು ಎಮ್.ಇ.3ಯು3ಎಸ್5ಸಿ1ಎಚ್.ಸಿ.102926 & ಇಂಜಿನ್ ನಂಬರ ಯು.3ಎಸ್.5ಸಿ1ಎಚ್.ಸಿ.010256 ಇರುತ್ತದೆ. ಇದರ ಅಂ.ಕಿ. 80000/- ರೂಪಾಯಿ ಇರುತ್ತದೆ. ಬೈಕ್ಗಳು ಜಪ್ತಿ ಮಾಡಿಕೊಂಡು ಅರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
ಖಟಕ ಚಿಂಚೋಳ್ಳಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 79/2020 ಕಲಂ 87 ಕೆ.ಪಿ. ಕಾಯ್ದೆ :-
ದಿನಾಂಕ:13/11/2020 ರಂದು 1430 ಗಂಟೆಗೆ ಪಿಎಸ್ಐ ರವರು ಠಾಣೆಯಲ್ಲಿದ್ದಾಗ ಡಾವರಗಾಂವ ಗ್ರಾಮದಲ್ಲಿನ ಸರಕಾರಿ ಆಸ್ಪತ್ರೆಯ ಹತ್ತಿರ ಮಾದಪ್ಪಾ ರವರ ಹೊಟೇಲ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಕೆಲವು ಜನರು ಪರೇಲ್ ಎಂಬ ಮೂರು ಎಲೆಯ ಇಸ್ಪೀಟ ಜೂಜಾಟ ಆಡುತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಸಿಬ್ಬಂದಿಯೊಂದಿಗೆ ಡಾವರಗಾಂವ ಗ್ರಾಮದಲ್ಲಿನ ಸರಕಾರಿ ಆಸ್ಪತ್ರೆಯ ಹತ್ತಿರ ಹೋಗಿ ಸರಕಾರಿ ಆಸ್ಪತ್ರೆಯ ಕಂಪೌಂಡ್ ಮರೆಯಾಗಿ ನಿಂತು ನೋಡಲು ಮಾದಪ್ಪಾ ರವರ ಹೊಟೇಲ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಕೆಲವು ಜನರು ದುಂಡಾಗಿ ಕುಳಿತು ಪರೇಲ ಎಂಬ ನಸೀಬಿನ ಜೂಜಾಟ ಆಡುತಿದ್ದನ್ನು ಖಚಿತ ಪಡಿಸಿಕೊಂಡು ಸದರಿ ವ್ಯಕ್ತಿಗಳ ಮೇಲೆ ದಾಳಿ ಮಾಡಿ ಅವರಿಗೆ ಹಿಡಿದುಕೊಂಡು ಅವರ ಹೆಸರು ಮತ್ತು ವಿಳಾಸ ವಿಚಾರಿಸಲು 1) ದಯಾನಂದ ತಂದೆ ಮಾದಪ್ಪಾ ಗೋದಹಿಪ್ಪರಗೆ 2)ನಾಗಶೇಟ್ಟಿ ತಂದೆ ಸಿದ್ರಾಮಪ್ಪ ಕುಂಬಾರ 3) ಮಲ್ಲಿಕಾರ್ಜುನ ತಂದೆ ಹಣಮಂತಪ್ಪಾ ಬೆಳಕುಣೆ 4) ಪ್ರಭು ತಂದೆ ಸಿದ್ದಪ್ಪಾ ಮಲ್ಲಪೂರೆ 5) ಮಧುಕರ ತಂದೆ ಗಣಪತರಾವ ಜಾಂಜೆ 6) ಧನರಾಜ ತಂದೆ ಸಂಗಣ್ಣಾ ತುಗಾಂವೆ 7) ಜಗನ್ನಾಥ ತಂದೆ ಬಾಬುಶೇಟ್ಟಿ ಚಳಕಾಪೂರೆ ಎಲ್ಲರೂ ಸಾ/ಡಾವರಗಾಂವ ಅಂತಾ ತಿಳಿಸಿದ್ದು ನಂತರ ಸದರಿ ಪಂಚರ ಸಮಕ್ಷಮ ಆಟದಲ್ಲಿದ್ದ ಒಟ್ಟು ಹಣ 6650/- ರೂಪಾಯಿ ಮತ್ತು 52 ಇಸ್ಪೀಟ್ ಎಲೆಗಳು 02 ಮೋಟಾರ ಸೈಕಲ ನೇದ್ದವುಗಳನ್ನು 15:40 ಗಂಟೆಯಿಂದ 16:40 ಗಂಟೆಯವರೆಗೆ ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.