Police Bhavan Kalaburagi

Police Bhavan Kalaburagi

Friday, April 5, 2019

KALABURAGI DISTRICT REPORTED CRIMES

ಹಲ್ಲೆ ಮಾಡಿ ಸರಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಪ್ರಕರಣ :
ಯಡ್ರಾಮಿ ಠಾಣೆ : ದಿನಾಂಕ 04-04-2019 ರಂದು ಜೇವರಗಿ ಯಿಂದ ಬೆಂಗಳೂರು ಮಾರ್ಗ ಸಂಖ್ಯೆ 56/57/56 ನೇದ್ದಕ್ಕೆ  ಹೋಗಲು ಬಸ್ಸ ನಂ ಕೆ.ಎ-32/ಎಫ್-2447 ನೇದ್ದನ್ನು ಕರ್ತವ್ಯಕ್ಕೆ ನಿಯೋಜಿಸಿದ್ದು ಇರುತ್ತದೆ, ಸದರಿ ಬಸ್ಸಿಗೆ ನನ್ನೊಂದಿಗೆ ಗುರುದೇವ ತಂದೆ ಶಿವಶಂಕ್ರೆಪ್ಪ ರವರು ಚಾಲಕರಿದ್ದರು, ಸದರಿ ಬಸ್ಸಿಗೆ ಯುಸೂಫ ಶರೀಫ್ ತಂದೆ ಅಹ್ಮದಅಲಿ ಜಾಲಗರ ಎಂಬುವರು ನಿರ್ವಾಹಕನಾಗಿರುತ್ತಾರೆ, ಜೇವರಗಿ ಯಿಂದ 2;45 ಪಿ.ಎಂ ಕ್ಕೆ ಹೊರಟು ನಂತರ ಯಡ್ರಾಮಿಗೆ ಬಂದು ಅಲ್ಲಿಂದ ಸುಂಬಡ ಗ್ರಾಮ ದಾಟಿ ಹೊಗುತ್ತಿದ್ದಾಗ ಬಸ್ಸನ್ನು ಚಾಲಕರಾದ ಗುರುದೇವ ರವರು ನಡೆಸುತ್ತಿದ್ದರು, ಕಚಾಪೂರ ಕ್ರಾಸ್ ಹತ್ತಿರ 3;45 ಪಿ.ಎಂ ಸುಮಾರಿಗೆ ಒಂದು ಮೋಟರ ಸೈಕಲ್ ಸವಾರನು ತನ್ನ ಮೋಟರ ಸೈಕಲನ್ನು ನಮ್ಮ ಬಸ್ಸಿಗೆ ಸೈಡ ಹೊಡೆದು ಮುಂದೆ ಬಂದು ನಿಲ್ಲಿಸಿದನು, ನಂತರ ಬಸ್ಸನ್ನು ನಿಲ್ಲಿಸಿದಾಗ ಆ ವ್ಯಕ್ತಿ ಚಾಲಕನ ಹತ್ತಿರ ಬಂದು ಏ ಸೂಳಿಮಗನೆ ಸುಂಬಡ ಗ್ರಾಮದಲ್ಲಿ ಯಾಕ ಬಸ್ಸ ನಿಲ್ಲಿಸಿಲ್ಲಾ ಅಂತಾ ಅಂದನು, ಆಗ ಗುರುದೇವ ರವರು ಸುಂಬಡ ಗ್ರಾಮದಲ್ಲಿ ನಮ್ಮ ಬಸ್ಸ ಸ್ಟಾಪ ಇಲ್ಲಾ ಅಂತಾ ಅಂದಾಗ ಏ ಭೋಸಡಿಕೆ ಬಸ್ಸ ಸ್ಟಾಪ ಇಲ್ಲಾ ಅಂತಿಯಾ ಅಂತಾ ಅಂದು ಚಾಲಕನ ಎದೆಯ ಮೇಲಿನ ಅಂಗಿ ಹಿಡಿದು ಬಸ್ಸಿನ ಕೆಳಗೆ ಇಳಿಸಿ ಅವನಿಗೆ ಕೈಯಿಂದ ಹೊಡೆ ಬಡೆ ಮಾಡಿದನು, ನಂತರ ನಾನು ಮತ್ತು ನಿರ್ವಾಹಕ ಯುಸೂಫ ಶರೀಫ್ ರವರು ಕೂಡಿ ಬಿಡಿಸಕೊಂಡಿರುತ್ತೇವೆ, ಆಗ ಜಗಳ ತೆಗೆದಿದ್ದವನು ಆಯಾ ತಪ್ಪಿ ಕೆಳಗೆ ಬಿದ್ದಿದ್ದರಿಂದ ಅವನ ಎದೆಗೆ ಪೆಟ್ಟಾಗಿದ್ದು ಇತ್ತು,  ಅವನ ಹೆಸರು ವಿಚಾರಿಸಲಾಗಿ ಹೈದರ ಅಲಿ ತಂದೆ ನಬೀಲಾಲ ತೇಲಿ ಎಂಬುವನಿರುತ್ತಾನೆ ಅಂತಾ ಗೊತ್ತಾಯಿತು, ಅವನಿಗೆ ಉಪಚಾರ ಕುರಿತು ನಮ್ಮ ಬಸ್ಸಿನಲ್ಲೇ ಹಾಕಿಕೊಂಡು ಯಡ್ರಾಮಿಗೆ ಬರುವಾಗ ಸುಂಬಡ ಗ್ರಾಮದಲ್ಲಿ ನಮ್ಮ ಬಸ್ಸನ್ನು ಕೆಲವು ಜನರು ನಿಲ್ಲಿಸಿ ಬಸ್ಸನಲ್ಲಿ ನುಗ್ಗಿ ಚಾಲಕ ಗುರುದೇವ ರವರಿಗೆ ಕೈಯಿಂದ ಕಾಲಿನಿಂದ ಮೈ ಕೈಗೆ ಹೊಡೆ-ಬಡೆ ಮಾಡಿ ತೊರಡಿನ ಹತ್ತಿರ ಒದ್ದಿರುತ್ತಾರೆ, ಅವರಲ್ಲಿ ಕೆಲವರು ಕೈಯಿಂದ ನನ್ನ ಮುಖದ ಮೇಲೆ, ತಲೆಗೆ ಹೊಡೆ ಬಡೆ ಮಾಡಿ ಗುಪ್ತ ಪೆಟ್ಟು ಪಡಿಸಿ ಈ ಸೂಳಿ ಮಕ್ಕಳಿಗೆ ಇವತ್ತ ಬಿಡಬ್ಯಾಡರಿ ಹೊಡೆದು ಖಲಾಸೆ ಮಾಡರಿ ಅಂತಾ ಅನ್ನುತ್ತಿದ್ದಾಗ ಅಲ್ಲೇ ಇದ್ದ ಕೆಲವರು ಬಂದು ಬಿಡಿಸಕೊಂಡಿರುತ್ತಾರೆ, ಹೊಡೆದವರಲ್ಲಿ ಇಬ್ಬರ ಹೆಸರುಗಳು ಗೊತ್ತಿದ್ದು, 1] ಹೈದರಅಲಿ ತಂದೆ ನಬೀಲಾಲ ತೇಲಿ, 2] ಮಂಜುರ ತಂದೆ ನಬೀಲಾಲ ತೇಲಿ ಅಂತಾ ಇರುತ್ತದೆ ಅವರೊಂದಿಗೆ ಇತರರಿದ್ದರು ಅವರನ್ನು ನೋಡಿದಲ್ಲಿ ಗುರುತಿಸುತ್ತೇನೆ, ಅಂತಾ ಶ್ರೀ ಈರಣ್ಣ ತಂದೆ ಪರುತರೆಡ್ಡಿ ಬಾಗಣ್ಣರ ಸಾ|| ಲಕ್ಣಾಪೂರ ಗ್ರಾಮ ಹಾ|||| ಬಸವೇಶ್ವರ ನಗರ ಜೇವರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಅಮೀರ ಸೊಹೇಲ ತಂದೆ ಫಕ್ರುದ್ದಿನ ಪಟೇಲ ಸಾ: ತಾಜ ಕಾಲೇಜ ಹಿಂದೂಗಡೆ ಅಹ್ಮದ ನಗರ ಕಲಬುರಗಿ ರವರ ಹತ್ತಿರ  ಜಮೀರ ಪಟೇಲ ಹಾಗೂ ಜೀಶ್ಯಾನ ಪಿಓಪಿ ಕೆಲಸ ಮಾಡಿಕೊಂಡಿರುತ್ತಾರೆ ಹೀಗಿದ್ದು ದಿನಾಂಕ 02.04.2019 ರಂದು  ಮನೆಯಲ್ಲಿದ್ದಾಗ ಜಮೀರ ಪಟೇಲ ಹಾಗೂ ಜೀಶ್ಯಾನ ಇವರು ಬಂದು ಚಹಾ ಕುಡಿಯಲು ಹೋಗೊಣ ಬಾ ಅಂತಾ ಅಂದರು ಆಗ ನಾನು ಅವರ ಮೋಟಾರ ಸೈಕಲ ಮೇಲೆ ಕುಳಿತಿದ್ದು ಸದರಿ ಮೋಟಾರ ಸೈಕಲ ಜಮೀರ ಪಟೇಲ ನಡೆಸುತಿದ್ದನ್ನು ಮೋಟಾರ ಸೈಕಲ ಬಹುಮನಿ ಇದ್ಗಾ ಹತ್ತಿರ ತಂದು ನಿಲ್ಲಿಸಿ ನನಗೆ ಇಳಿಯಲು ಹೇಳಿದರು ನಾನು ಮೋಟಾರ ಸೈಕಲದಿಂದ ಕೆಳಗೆ ಇಳಿದೆನು ಜಮೀರ ಪಟೇಲ ಈತನು ತನ್ನ ಕೈಯಲಿದ್ದ ರಾಡನಿಂದ ಒಮ್ಮೆಲೆ ಹೊಡೆದನು ಆಗ ನಾನು ಯಾಕೆ ಹೊಡೆಯುತ್ತಿಯಾ ಅಂದಾಗ ಬೊಸಡಿ ಮಗನೆ ನಾವು ಕೆಲಸ ಮಾಡಿದ ಹಣ ಕೊಡು ಅಂದರೆ ಕೊಡಲ್ಲ ನಿನ್ನ ಸೊಕ್ಕ ಬಹಳ ಆಗ್ಯಾದ ಅಂದವನೆ ನನ್ನ ಎಡಗೈ ರಟ್ಟೆಯ ಮೇಲೆ ಅದೆ ರಾಡನಿಂದ ಎರಡು ಮೂರು ಬಾರಿ ಹೊಡೆದನು ಜೀಶ್ಯಾನ ಈತನು ಬಡಿಗೆಯಿಂದ ಬಲಗೈ ರಟ್ಟೆಯ ಮೇಲೆ ಮೈಕೈಗೆ ಹೊಡೆದು ಗುಪ್ತಗಾಯಪಡಿಸಿದನು ಆಗ ಅಲ್ಲಿಯೆ ಇದ್ದ ಸಲಿಂ ತಂದೆ ಮಹ್ಮದ ಸರ್ದಾರ ಹಾಗೂ ರಫೀಕ ತಂದೆ ಸದಾಂ ಇವರುಗಳು ನನಗೆ ಹೊಡೆಯುತ್ತಿರುವುದನ್ನು ನೋಡಿ ಬಿಡಿಸಿಕೊಂಡರು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣಗಳು :
ರಾಘವೇಂದ್ರ ನಗರ ಠಾಣೆ : ಶ್ರೀ ಸುರೇಶ ತಂದೆ ಲಕ್ಷ್ಮಣರಾವ ಬೆನಕನಳ್ಳಿ ಸಾ: ಚೌಡೇಶ್ವರಿ ಕಾಲೋನಿ ಕಲಬುರಗಿ ರವರು ದಿನಾಂಕ 31.03.2019 ರಂದು ಬೆಳ್ಳಿಗ್ಗೆ 8.00 ಗಂಟೆಯಿಂದ ನಾನು ನಮ್ಮ ಅಂಗಡಿಯಲ್ಲಿ ಹಾಲಿನ ವ್ಯಾಪಾರ ಮಾಡಿಕೊಂಡಿದ್ದು. ನಮ್ಮ ಅಂಗಡಿ ಮುಂದೆ ಇರುವ ಗೊದುತಾಯಿ ಕಾಲೇಜ ಮುಂದೆ ಇರುವ ಕಂಪೌಂಡ ಜಾಲಿಗೆ ಹತ್ತಿಕೊಂಡು ಒಬ್ಬ ಅಪರಿಚಿತ ವ್ಯಕ್ತಿ ಮಲಗಿದ್ದು. ಸಾಯಂಕಾಲ 4 ಗಂಟೆಯಾದರು ಸದರಿ ವ್ಯಕ್ತಿ ಎದ್ದು ಹೊಗದೆ ಅಲ್ಲೆ ಮಲಗಿದ್ದು, ಸಂಶಯ ಬಂದು ನಾನು ಹೊಗಿ ನೋಡಲು ಸದರಿ ವ್ಯಕ್ತಿಗೆ ಎಬ್ಬಿಸಲು ಪ್ರಯತ್ನಿಸಿದ್ದು ಸದರಿಯವನು ಯಾವುದೆ ಪ್ರತಿಕ್ರೀಯೆ ಮಾಡದೆ ಇದ್ದಾಗ ನಾನು ಅವನಿಗೆ ಹೊರಳಿ ನೋಡಲು ಸದರಿಯವನು ಮೃತ ಪಟ್ಟಿದ್ದು ಕಂಡು ಬಂದಿದ್ದು ಇರುತ್ತದೆ. ಸದರಿ ವ್ಯಕ್ತಿ ಅಪರಿಚಿತ ಗಂಡು ಮನುಷ್ಯನಿದ್ದು ಸದರಿಯವನ ವಯಸ್ಸು ಅಂದಾಜ 60-65 ವರ್ಷ ಇದ್ದು. ಮುಖದ ಮೇಲೆ ಬಿಳಿ ದಾಡಿ ಮತ್ತು ಮೀಸೆ ಇದ್ದು. ತಲೆಯ ಮೇಲೆ ಬಿಳಿ ಕೂದಲು ಇದ್ದು. ಕಪ್ಪು ಬಣ್ಣ ಹೊಂದಿದ್ದು. ತೆಳ್ಳನೆಯ ಮೈಕಟ್ಟು ಇದ್ದು. ಮೈಮೇಲೆ ಆನಂದಿ ಬಣ್ಣದ ಶರ್ಟ, ಕಂದು ಬಣ್ಣದ ಪ್ಯಾಂಟ ಮತ್ತು ಖಾಕಿ ಬಣ್ಣದ ಸ್ವೇಟರ ಹೊಂದಿದ್ದು ಸದರಿಯವನ ಹೆಸರು ವಿಳಾಸ ಗೊತ್ತಾಗಿರುವದಿಲ್ಲ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಘವೇಂದ್ರ ನಗರ ಠಾಣೆ : ಶ್ರೀಮತಿ ವಿಜಯಲಕ್ಷ್ಮೀ ಅಧೀಕ್ಷಕರು ರಾಜ್ಯ ಮಹಿಳಾ ನಿಲಯ ಕಲಬುರಗಿ ರವರು  ರಾಜ್ಯ ಮಹಿಳಾ ನಿಲಯದ ನಿವಾಸಿಯಾದ ಪಲ್ಲವಿ ತಂದೆ ಕಾಜಪ್ಪ ದೊಡ್ಡಮನಿ ವ:19 ವರ್ಷ ಜಾ:ಹರಿಜನ ಸಾ:ಭುಯಾರ ತಾ:ಇಂಡಿ ಜಿ:ವಿಜಯಪುರ ಇವಳು ವಿಕಲ ಚೇತನಳಾಗಿದ್ದು ಎಲುಬು, ಕೀಲು, ನರದೌರ್ಬಲ್ಯದಿಂದ, ಬಲಹೀನತೆಯಿಂದ ಬಳಲುತಿದ್ದಳು ದಿನಾಂಕ:15/03/2019 ರಂದು ಸರ್ಕಾರಿ ಆಸ್ಪತ್ರೆಗೆ ಕಳುಹಿಸಿ ಚಿಕಿತ್ಸೆ ಕೊಡಿಸಲಾಯಿತು. ಸ್ವಲ್ಪ ಚೇತರಿಸಿಕೊಂಡು ತಿರಗಿ ಉಸಿರಾಟದ ತೊಂದರೆ ಉಂಟಾದಾಗ ಸರ್ಕಾರಿ ಆಸ್ಪತ್ರೆಗೆ ಎಮ್‌‌.ಐ.ಸಿ.ಯು ವಾರ್ಡಿನಲ್ಲಿ ದಾಖಲಿಸಲಾಯಿತು. ದಿನಾಂಕ:03/04/2019 ರಂದು ಸಾಯಂಕಾಲ 3.50 ಪಿ.ಎಂಕ್ಕೆ ವೈದ್ಯಾಧಿಕಾರಿಗಳು ಮೃತಪಟ್ಟಿರುತ್ತಾಳೆಂದು ಹೇಳಿರುತ್ತಾರೆ. ಈ ಬಗ್ಗೆ ಯಾರಮೇಲೆ ಯಾಗಲಿ ಸಂಶಯ ವಗೈರೆ ಇರುವದಿಲ್ಲ ಸದರಿ ನಿವಾಸಿ ಕಾಯಿಲೆಯಿಂದ ಮೃತಪಟ್ಟಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಫರತಾಬಾದ ಠಾಣೆ : ಶ್ರೀ ಮಾಹಾಂತಗೌಡ ತಂದೆ ಸಿದ್ರಾಮಗೌಡ ಪಾಟೀಲ ಸಾ : ಆತನೂರ  ರವರಿಗೆ ನಮ್ಮೂರಿನ ಶ್ರವಣಕುಮಾರ ತಂದೆ ಶ್ರೀಶೈಲ ಇವರು ಫೊನ ಮಾಡಿ ತಿಳಿಸಿದ್ದೆನಂದರೆ. ನಿಮ್ಮ ಅಣ್ಣನಾದ ಜಗದೇವಪ್ಪ ಇವರಿಗೆ ಹಾರುತಿ ಹಡಗಿಲ ಕ್ರಾಸ ದಾಟಿ ಸ್ವಲ್ಪ ಮುಂದೆ ರಸ್ತೆ ಅಪಘಾತವಾಗಿದ್ದು ನಿಮ್ಮ ಅಣ್ಣನಿಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೆ ಮೃತಪಟ್ಟಿರುತ್ತಾನೆ ಅಂತಾ ತಿಳಿಸಿದ ಕೂಡಲೆ ನಾನು ಗಾಬರಿಯಾಗಿ ನಾನು ಮತ್ತು ಇತರರು ಕೂಡಿಕೊಂಡು ಬಂದು ನೋಡಲಾಗಿ ನನ್ನ ಅಣ್ಣನ ತಲೆಗೆ ಬಾರಿ ರಕ್ತಗಾಯವಾಗಿ ಬಲ ಮಗ್ಗಲಿಗೆ ಬಾರಿರಕ್ತಗಾಯ ಮತ್ತು ಬಲಗೈಗೆ ಭಾರಿ ರಕ್ತಗಾಯಗಳಾಗಿದ್ದು. ನೋಡಲಾಗಿ ಮೃತಪಟ್ಟಿದ್ದನು. ನಂತರ ಅಲ್ಲೆ ಇದ್ದ ಶ್ರವಣಕುಮಾರನಿಗೆ ವಿಚಾರ ಮಾಡಲು ತಿಳಿಸಿದ್ದೆನಂದರೆ. ನಾನು ಹಡಗಿಲ ಹಾರುತಿ ಕ್ರಾಸ ಹತ್ತೀರ ಇದ್ದಾಗ ನಿಮ್ಮ ಅಣ್ಣನಾದ ಜಗದೇವಪ್ಪ ಇವರು ಕಲಬುರಗಿ ಕಡೆಯಿಂದ ಕಾರ ನಂಬರ. ಕೆಎ.32 ಪಿ.4176 ನೇದ್ದರಲ್ಲಿ ಬರುತ್ತಿದ್ದು ಅವರ ಎದುರುಗಡೆಯಿಂದ ಅಂದರೆ ಅಫಜಲಪೂರ ಕಡೆಯಿಂದ ಒಬ್ಬ ಟಿಪ್ಪರ ಚಾಲಕನು ತನ್ನ ಟಿಪ್ಪರನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದವನೆ ನಿಮ್ಮಣ್ಣ ಚಲಾಯಿಸುತ್ತಿದ್ದ ಕಾರಿಗೆ ಡಿಕ್ಕಿ ಪಡಿಸಿದನು. ನಾನು ಹೋಗಿ ನೋಡಲಾಗಿ ನಿಮ್ಮಣ್ಣನಿಗೆ ಈ ರೀತಿ ಗಾಯಗಳಾಗಿ ಸ್ಥಳದಲ್ಲೆ ಮೃತಪಟ್ಟಿರುತ್ತಾನೆ ಅಪಘಾತ ಪಡಿಸಿದ ಟಿಪ್ಪರ ಚಾಲಕನು ಅಪಘಾತ ಪಡಿಸಿದ ನಂತರ ತನ್ನ ಟಿಪ್ಪರನ್ನು ಸ್ಥಳದಲ್ಲಿಯೆ ಬಿಟ್ಟು ಹೋಗಿದ್ದು ಅದರ ನಂಬರ ನೋಡಲಾಗಿ ಕೆಎ.32 ಸಿ.4497 ನೇದ್ದು ಇತ್ತು ಸದರಿ ಘಟನೆ ನಡೆದಾಗ ಸಮಯ 11.00 ಎ.ಎಮ್ ಆಗಿತ್ತು ಅಂತಾ ತಿಳಿಸಿದರು. ದಿನಾಂಕ:02.04.2019 ರಂದು 11.00 ಎ.ಎಮ್. ಸೂಮಾರಿಗೆ ಕಲುರಗಿ ಅಫಜಲಪೂರ ರೋಡಿನ ಹಾರುತಿ ಹಡಗಿಲ ಕ್ರಾಸ ದಾಟಿ ಸ್ವಲ್ಪ ಮುಂದೆ ರೋಡಿನ ಮೇಲೆ ಟಿಪ್ಪರ ನಂ.ಕೆಎ.32 ಸಿ. 4497  ನೇದ್ದರ ಚಾಲಕನು ತನ್ನ ಟಿಪ್ಪರನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಅಣ್ಣನಾದ ಜಗದೇವಪ್ಪ ಇವರು ಚಲಾಯಿಸುತ್ತಿದ್ದ ಕಾರ ನಂ.ಕೆಎ.32 ಪಿ.4176 ನೇದ್ದಕ್ಕೆ ಡಿಕ್ಕಿ ಪಡಿಸಿದ್ದರಿಂದ ನನ್ನ ಅಣ್ಣನಿಗೆ ಭಾರಿ ರಕ್ತಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.