ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 30-08-2020
ಔರಾದ (ಬಿ) ಠಾಣೆ ಅಪರಾಧ ಸಂ. 69/2020, ಕಲಂ. 379 ಐಪಿಸಿ :-
ದಿನಾಂಕ 29-08-2020 ರಂದು ಫಿರ್ಯಾದಿ ಶಿವಾನಂದ ತಂದೆ ಶಂಕ್ರೇಪ್ಪಾ ಹಂಗರಗೆ ವಯ: 34 ವರ್ಷ, ಜಾತಿ: ಲಿಂಗಾಯತ, ಸಾ: ಯನಗುಂದಾ, ಸದ್ಯ: ದತ್ತ ಮಂದಿರ ಹತ್ತಿರ ಔರಾದ (ಬಿ) ರವರು ಹೊಲದಲ್ಲಿ ಬಿತ್ತಿದ ಸೋಯಾಬೀನ ಬೆಳೆಗೆ ಔಷಧಿ ಹೊಡೆಯಬೇಕೆಂದು ಮೋಟರ ಸೈಕಲ ನಂ. ಕೆಎ-38/ಕ್ಯೂ-7873 ನೇದರ ಮೇಲೆ ಮಾರ್ಕೇಟಗೆ ಹೋಗಿ ಔಷಧಿ ತೆಗೆದುಕೊಂಡು ಮನೆಗೆ ಬಂದು ಸದರಿ ಮೋಟರ ಸೈಕಲನ್ನು ಬಾಡಿಗೆಯಿಂದ ವಾಸವಾಗಿರುವ ಮನೆಯ ಮುಂದೆ ನಿಲ್ಲಿಸಿ ಮನೆಯಲ್ಲಿ ಹೋಗಿ ಊಟ ಮಾಡಿ ಹೊಲಕ್ಕೆ ಹೋಗಬೇಕೆಂದು ಮನೆಯಿಂದ ಹೊರಗೆ ಬಂದು ನೊಡುವಷ್ಟರಲ್ಲಿ ಮೋಟರ ಸೈಕಲ ಮನೆಯ ಮುಂದೆ ಇರಲಿಲ್ಲ, ನಂತರ ಅಲ್ಲಲ್ಲಿ ಎಲ್ಲಾ ಕಡೆಗೆ ಹುಡುಕಾಡಿದರೂ ಸದರಿ ವಾಹನ ಸಿಕ್ಕಿರುವುದಿಲ್ಲ, ಸದರಿ ವಹನವನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು, ಹೋಗಿರುತ್ತಾರೆ, ಕಳುವಾದ ವಾಹನ ವಿವಿರ 1) ಹಿರೊ ಹೊಂಡಾ ಸ್ಪ್ಲೇಂಡರ ಮೋಟಾರ್ ಸೈಕಲ್ ನಂ. ಕೆಎ-38/ಕ್ಯೂ-7873, 2) ಚೆಸ್ಸಿ ನಂ. MBLHA10ASDHK00316, 3) ಇಂಜಿನ ನಂ. HA10ELDHK00141, 4) ಮಾಡಲ್: 2013 ಹಾಗೂ 5) ಅ.ಕಿ 30,000/- ರೂ. ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬೀದರ ನೂತನ ನಗರ ಠಾಣೆ ಅಪರಾಧ ಸಂ. 96/2020, ಕಲಂ. 379 ಐಪಿಸಿ :-
ದಿನಾಂಕ 23-08-2020 ರಂದು 1400 ಗಂಟೆಯಿಂದ 2000 ಗಂಟೆಯ ಅವಧಿಯಲ್ಲಿ ಬೀದರ ನಗರದ ಸರಕಾರಿ ಆಸ್ಪತ್ರೆಯ ಎದುರಿಗೆ ನಿಲ್ಲಿಸಿದ ಫಿರ್ಯಾದಿ ಜಗದೀಪ ತಂದೆ ಘಾಳೆಪ್ಪ ಸಾ: ಬೆಮಳಖೇಡಾ, ಸದ್ಯ: ಕೆ.ಎಚ.ಬಿ ಕಾಲೋನಿ ಬೀದರ ರವರ ಹೀರೊ ಸ್ಪ್ಲೆಂಡರ ಮೋಟರ ಸೈಕಲ ನಂ. ಕೆಎ-39/ಇ-7743 ನೇದನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ, ಕಳುವಾದ ವಾಹನದ ವಿವರ 1) ಹೀರೊ ಸ್ಪ್ಲೆಂಡರ ಮೋಟರ ಸೈಕಲ ನಂ. KA-39/E-7743, 2) ಚಾಸಿಸ್ ನಂ. 02G20C13238, 3) ಇಂಜಿನ್ ನಂ. 0218M09009, 4) ಮಾಡಲ್: 2002, 5) ಬಣ್ಣ: ಕಪ್ಪು ಬಣ್ಣ ಹಾಗೂ 6) ಅ.ಕಿ 15,000/- ರೂ. ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 29-08-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬೀದರ ನೂತನ ನಗರ ಠಾಣೆ ಅಪರಾಧ ಸಂ. 97/2020, ಕಲಂ. 379 ಐಪಿಸಿ :-
ದಿನಾಂಕ 18-08-2020 ರಂದು 1500 ಗಂಟೆಯಿಂದ 1830 ಗಂಟೆಯ ಅವಧಿಯಲ್ಲಿ ಬೀದರ ಫಿರ್ಯಾದಿ ವಿಜಯಕುಮಾರ ತಂದೆ ಶಂಕ್ರೆಪ್ಪ ಚಿಕಲಿಂಗೆ ಸಾ: ರಾಘವೇಂದ್ರ ಕಾಲೋನಿ ಬೀದರ ರವರು ತಮ್ಮ ಮನೆಯ ಎದುರಿಗೆ ನಿಲ್ಲಿಸಿದ ತನ್ನ ಹೀರೊ ಸ್ಪ್ಲೆಂಡರ ಪ್ಲಸ್ ಮೋಟರ ಸೈಕಲ ನಂ. ಕೆಎ-32/ಎಸ್-2702 ನೇದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ, ಕಳುವಾದ ವಾಹನದ ವಿವರ 1) ಹೀರೊ ಸ್ಪ್ಲೆಂಡರ ಪ್ಲಸ್ ಮೋಟರ ಸೈಕಲ ನಂ. ಕೆಎ-32/ಎಸ್-2702, 2) ಚಾಸಿಸ್ ನಂ. 07B16F14522, 3) ಇಂಜಿನ್ ನಂ. 07B15E14184, 4) ಮಾಡಲ್: 2007, 5) ಬಣ್ಣ: ಕಪ್ಪು ಬಣ್ಣ ಹಾಗೂ 6) ಅ.ಕಿ 20,000/- ರೂ ಆಗಿರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 29-08-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.