Police Bhavan Kalaburagi

Police Bhavan Kalaburagi

Wednesday, March 20, 2019

KALABURAGI DISTRICT REPORTED CRIMES

ಅಸ್ವಾಭಾವಿಕ ಸಾವು ಪ್ರಕರಣ :
ಯಡ್ರಾಮಿ ಠಾಣೆ : ಶ್ರೀ ಸೋಮಶೇಖರ ತಂದೆ ಗುರುಲಿಂಗಪ್ಪ ಖಾನಗೌಡರ ಸಾ|| ಸುಂಬಡ ತಾ|| ಜೇವರ್ಗಿ ರವರ ತಂದೆಯ ಹೆಸರಿಗೆ  ನಮ್ಮೂರ ಸಿಮಾಂತರದಲ್ಲಿ ನಮ್ಮದೊಂದು ಹೊಲ ಇದ್ದು, ಅದರ ಸರ್ವೆ ನಂ 76 ನೇದ್ದರಲ್ಲಿ 4 ಎಕರೆ ಜಮೀನು ಇರುತ್ತದೆ, ಹೊಲದ ಸಲುವಾಗಿ ನಮ್ಮ ತಂದೆ ಯಡ್ರಾಮಿ ಪಿ.ಕೆ.ಜಿ.ಬಿ ಬ್ಯಾಂಕನಲ್ಲಿ ಸುಮಾರು 95,000/- ಸಾವಿರ ಹಾಗೂ ಖಾಸಗಿಯಾಗಿ 3 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದರು, ನಮ್ಮ ತಂದೆ ಆಗಾಗ ನಮ್ಮ ಮುಂದೆ ನಮಗೆ ಸಾಲ ಬಹಳಾಗಿದೆ, ಸಾಲ ಹೇಗೆ ತೀರಿಸುವುದು. ಸಲ ಹೊಲದಲ್ಲಿನ ಬೆಳೆಯು ಸಹ ಸರಿಯಾಗಿ ಬೆಳೆದಿಲ್ಲಾ, ಊರಲ್ಲಿ ನಾನು ಮುಖ ಎತ್ತಿ ತಿರುಗಾಡಲು ಆಗುತ್ತಿಲ್ಲಾ, ನಾನು ಸತ್ತರೆ ಎಲ್ಲಾ ಸರಿಹೋಗುತ್ತದೆ ಅಂತಾ ಅನ್ನುತ್ತಿದ್ದರು ಆಗ ನಾವು ಅವರಿಗೆ ಸಮಾಧಾನ ಹೇಳುತ್ತಾ ಬಂದಿರುತ್ತೇವೆ. ದಿನಾಂಕ; 19-03-2019 ರಂದು ಮದ್ಯಾಹ್ನ 12-30 ಗಂಟೆ ಸುಮಾರಿಗೆ ನಾನು ಮತ್ತು ನಮ್ಮ ತಂದೆ ಗುರುಲಿಂಗಪ್ಪ ತಾಯಿ ಸಾವಿತ್ರಿ ತಮ್ಮ ಮಡಿವಾಳಪ್ಪ ಎಲ್ಲರೂ ಕೂಡಿ ಮನೆಯಲ್ಲಿ ಇದ್ದಾಗ ನಮ್ಮ ತಂದೆ ಮನೆಯ ಒಳಗಡೆ ಹೋಗಿ, ಮೈಗೆ ಸೀಮೆ ಎಣ್ಣಿ ಹಾಕಿಕೊಂಡು ಮೈಗೆ ಬೆಂಕಿ ಹಚ್ಚಿಕೊಂಡು ಚಿರಾಡುತ್ತಾ ಹೋರಗೆ ಬಂದರು, ಆಗ ನಾವು ಗಾಬರಿಗೊಂಡು, ಬೆಂಕಿ ಹಾರಿಸಿದೇವು, ಆಗ ತಂದೆಗೆ ನೋಡಲಾಗಿ, ತಮ್ಮ ತಂದೆಯ ಹೊಟ್ಟೆಗೆ,ಮರ್ಮಾಂಗಕ್ಕೆ,ಎರಡು ಮೊಳಕಾಳ ಹತ್ತಿರ ಮೈಗೆ ಅಲ್ಲಲ್ಲಿ ಸುಟ್ಟ ಗಾಯಗಳು ಆಗಿರದ್ದುವು, ನಂತರ ನಾವು ಚಿರಾಡುವ ಶಬ್ದ ಕೇಳಿ ನಮ್ಮ ಅಣ್ಣತಮ್ಮಂಕ್ಕಿಯ ಬಸವರಾಜ ತಂದೆ ಪ್ರಭುರಾಯಗೌಡ ಖಾನಗೌಡರ,ಮಲ್ಲಿನಾಥ ತಂದೆ ಸುಬ್ಬರಾಯಗೌಡ ಖಾನಗೌಡರ ಇವರು ಬಂದರು ಎಲ್ಲರೂ ಕೂಡಿ ಉಪಚಾರ ಕುರಿತು  ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಜೇವರಗಿಗೆ ಹೋಗುತ್ತಿದ್ದಾಗ ಮಾರ್ಗ ಮದ್ಯೆ ಜೇವರಗಿ ಸಮೀಪ ಪೈಯರ ಆಪೀಸ್ ಎದುರಡಗೆ ಮದ್ಯಾಹ್ನ 2-30 ಗಂಟೆಯ ಸುಮಾರಿಗೆ ನಮ್ಮ ತಂದೆ ಮೃತ ಪಟ್ಟಿರುತ್ತಾನೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ರೇವೂರ ಠಾಣೆ : ದಿನಾಂಕ:13/03/2019 ರಂದು ರಾತ್ರಿ 1:30  ಎ.ಎಮ್.ಕ್ಕೆ ಅಫಜಲಪೂರ ತಾಲೂಕಿನ ನೀಲೂರ ಗ್ರಾಮದ ಜಿಯೋ ರಿಲಾಯನ್ಸ ಟವರಿನ 1) ) PATCH CORD SM DUP LCUPC 60M||ಕಿ||68182/- ರೂಪಾಯಿ 2) RRH POWER,JH,850 BAND 60M||ಕಿ||87272/-ರೂಪಾಯಿ ಒಟ್ಟು 155454/-ರೂಪಾಯಿ ಕಿಮ್ಮತ್ತಿನ ಕೇಬಲ ವಾಯರನ್ನು ಯಾರೋ ಕಳ್ಳರು  ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತ ಶ್ರೀ ಆನಂದ ತಂದೆ ಯೋಗೇಶ್ವರಪ್ಪ ಜಿಯೋ ರಿಲಾಯನ್ಸ ಟವರ ಕಂಪನಿ ನಂ 51 ಪ್ಲಾಲೇಸ ರೋಡ ಕ್ರಾಸ್ ವಸಂತ ನಗರ ಬೆಂಗಳೂರು 52 ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರೇವೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.