Police Bhavan Kalaburagi

Police Bhavan Kalaburagi

Saturday, August 4, 2018

BIDAR DISTRICT DAILY CRIME UPDATE 04-08-2018

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 04-08-2018

ªÀÄ£ÁßJSÉÃ½î ¥Éưøï oÁuÉ C¥ÀgÁzsÀ ¸ÀA. 98/2018, PÀ®A. 4, 5, 7, 9, 11 ¢ PÀ£ÁðlPÀ ¦æªÉ£ÀµÀ£ï D¥ï PË ¸Ëèlgï DåAqï PÁål¯ï ¦ædgÀªÉµÀ£ï DåPïÖ DåAqï 269 eÉÆvÉ 34 L¦¹ :-  
ದಿನಾಂಕ 03-08-2018 ರಂದು ಮನ್ನಾಎಖೇಳ್ಳಿ ಗ್ರಾಮದ ಜಾಮೀಯಾ ಮಜಿದ್ ಹತ್ತಿರ  ಇಬ್ಬರು ವ್ಯಕ್ತಿಗಳು ಅನಧಿಕೃತವಗಿ ಮತ್ತು ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಪಡೆಯದೇ ದನಗಳನ್ನು ಕಡಿಯುತ್ತಿದ್ದಾರೆ ಮತ್ತು ಅದರಿಂದ ದುರ್ವಾಸನೆ ಎದ್ದು ಆ ದುರ್ವಾಸನೆ ಇಂದ ಪರಿಸರಕ್ಕೆ ಮತ್ತು ಸಾರ್ವಜನಿಕರಿಗೆ ಸೊಂಕು ತಗಲುವ ಬಗ್ಗೆ ಮಾಹಿತಿ ರವಿಕುಮಾರ ಪಿಎಸ್ಐ ಮನ್ನಾಎಖೆಳ್ಳಿ ಪೊಲೀಸ್ ಠಾಣೆ ರವರಿಗೆ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಹಾಗೂ ಮನ್ನಾಏಖೇಳ್ಳಿ ಪಶು ವೈಧ್ಯಾಧಿಕಾರಿಯವರಿಗೂ ಸಹ ಬರಮಾಡಿಕೊಂಡು ಎಲ್ಲರೂ ಜಾಮಿಯಾ ಮಜಿದ್ ಹತ್ತಿರ ಬೋರಾಳ ರೋಡಿನ ಮೇಲೆ ತಲುಪಿ ಮೈನೊದ್ದಿನ ಲಗಪತಿ ರವರ ಮೆನೆಯ ಹಿಂದೆ ಮರೆಯಾಗಿ ನಿಂತು ನೊಡಲು ಆರೋಪಿತರಾದ 1) ಅಬ್ದುಲ ಗನಿ ತಂದೆ ಮಸ್ತಾನಸಾಬ ಖುರೇಷಿ ವಯ: 50 ವರ್ಷ, ಜಾತಿ: ಮುಸ್ಲಿಂ ಹಾಗೂ 2) ಯುಸುಫ ತಂದೆ ಇಬ್ರಾಹಿಂಸಾಬ ಖುರೆಷಿ ವಯ: 40 ವರ್ಷ, ಜಾತಿ: ಮುಸ್ಲಿಂ, ಇಬ್ಬರು ಸಾ: ಮನ್ನಾಏಖೇಳ್ಳಿ ಇವರಿಬ್ಬರು ಒಂದು ದನವನ್ನು ಕಡಿದು ಅದರ ಚರ್ಮ ಸುಲಿಯುತ್ತಿದ್ದ ಬಗ್ಗೆ ಖಚಿತ ಪಡಿಸಿಕೊಂಡು ಸಿಬ್ಬಂದಿಯವರ ಸಹಾಯದಿಂದ ದನವನ್ನು ಕಡಿಯುತ್ತಿದ್ದ ಆರೋಪಿತರ ಮೇಲೆ ದಾಳಿ ನಡೆಯಿಸಿ ಅವರಿಗೆ ಹಿಡಿದು, ನಂತರ ದನವನ್ನು ಪರಿಶಿಲಿಸಿ ನೋಡಲು ಒಂದು ಆಕಳು ಇದ್ದು ಅವರಿಗೆ ಸದರಿ ಆಕಳು ಕತ್ತರಿಸಲು ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಪಡೆದ ಬಗ್ಗೆ ವಿಚಾರಿಸಲು ಅನುಮತಿ ಪಡೆಯದೇ ಅನಧಿಕೃತವಾಗಿ ಕತ್ತರಿಸುತ್ತಿದ್ದ ಬಗ್ಗೆ ನುಡಿದ್ದಿದ್ದು, ಸದರಿ ಕತ್ತರಿಸಿದ ಮಾಂಸದಿಂದ ದುರ್ವಾಸನೆ ಹರಡಿ ಸಾರ್ವಜನಿಕರ ಜೀವಕ್ಕೆ ಸೊಂಕು ತಗಲಬಹುದೆಂದು ತಿಳಿದು ಮಾಂಸದ ತುಂಡುಗಳನ್ನು ಜಪ್ತಿ ಮಾಡಿರುವುದಿಲ್ಲ, ಮಾಂಸವನ್ನು ಕಡಿಯಲು ಉಪಯೋಗಿಸಿದ 1) ಕಬ್ಬಿಣದ 4 ಚೂರಿಗಳು ರಕ್ತದ ಕಲೆ ಹತ್ತಿದ್ದು, 2) ಕಬ್ಬಿಣದ ಎರಡು ಸುತೂರ ರಕ್ತದ ಕಲೆ ಕತ್ತಿದ್ದು ನೇದವುಗಳನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪಿತರಿಗೆ ವಶಕ್ಕೆ ಪಡೆದುಕೊಂಡು, ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

KALABURAGI DISTRICT REPORTED CRIMES

ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ಅಫಜಲಪೂರ ಠಾಣೆ : ದಿನಾಂಕ 03-08-2018 ರಂದು  ಅಫಜಲಪೂರ ಪಟ್ಟಣದ ಹೊರವಲಯದಲ್ಲಿರುವ ಸೊಂದುಸಾಬ ಧರ್ಗಾ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಪಣಕ್ಕೆ ಹಣ ಹಚ್ಚಿ ಇಸ್ಪೆಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಸಿಪಿಐ ಸಾಹೇಬರು ಅಫಜಲಪೂರ ರವರ ಮಾರ್ಗದರ್ಶನದಲ್ಲಿ ಸ್ಥಳಕ್ಕೆ ಹೋಗಿ, ಮರೆಯಾಗಿ ನಿಂತು ನೋಡಲು ಅಫಜಲಪೂರ ಪಟ್ಟಣದ ಹೊರವಲಯದಲ್ಲಿರುವ ಸೊಂದುಸಾಬ ಧರ್ಗಾ ಹತ್ತಿರ ಸಾರ್ವಜನಿಕ ಜಾಗದಲ್ಲಿ ಕೆಲವು ಜನರು ದುಂಡಾಗಿ ಕುಳಿತುಕೊಂಡು ಇಸ್ಪೇಟ ಎಲೆಗಳ ಸಹಾಯದಿಂದ ಅಂದರ ಬಾಹರ ಜೂಜಾಟ ಆಡುತ್ತಿದ್ದರು, ನಾವು ಜೂಜಾಟ ಆಡುತ್ತಿದ್ದುದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಜೂಜಾಡುತಿದ್ದ ಎಲ್ಲಾ 06 ಜನರನ್ನು ಹಿಡಿದಿದ್ದು ಅವರ ಹೆಸರು ವಿಳಾಸ ವಿಚಾರಿಸಿ ಅಂಗ ಶೋಧನೆ ಮಾಡಲಾಗಿ 1) ಯಲ್ಲಪ್ಪ ತಂದೆ ಹಸನಪ್ಪ ಆರೇಕರ್ ಸಾ|| ಜೈ ಭೀಮ ನಗರ ಅಫಲಪೂರ 2) ಗೌಸಪಾಶಾ ತದೆ ಅಫ್ಜಲಪಾಶಾ ಖಾಜಿ ಸಾ|| ಖಾಜಿ ಗಲ್ಲಿ ಅಫಜಲಪೂರ 3) ರಮೇಶ ತಂದೆ ಚಂದ್ರಶಾ ಬಳಗಾನೂರ ಸಾ|| ಜೈ ಭೀಮ ನಗರ ಅಫಜಲಪೂರ 4) ಲಕ್ಷ್ಮೀಪುತ್ರ ತಂದೆ ಪರೇಪ್ಪ ಬಳೂರ್ಗಿ ಸಾ|| ಲಿಂಬಿ ತೋಟ ಅಫಲಪೂರ 5) ಶಿವಾನಂದ ತಂದೆ ಶಂಕರ ಚಲವಾದಿ ಸಾ|| ಜೈ ಭೀಮ ನಗರ ಅಫಲಪೂರ 6) ಸೊಂದಪ್ಪ ತಂದೆ ಭೀಮಶಾ ಸಿಂಗೆ ಸಾ|| ಜೈ ಭೀಮ ನಗರ ಅಫಜಲಪೂರ ಅಂತ ತಿಳಿಸಿದ್ದು ಸದರಿಯವರ ಅಂಗ ಶೋಧನೆ ಮಾಡಲಾಗಿ ಇಸ್ಪೇಟ ಜೂಜಾಟಕ್ಕೆ ಸಂಬಂದಪಟ್ಟ ನಗದು ಹಣ ಒಟ್ಟು 3600/- ರೂ ನಗದು ಹಣ  ಮತ್ತು 52 ಇಸ್ಪೆಟ ಎಲೆಗಳು ದೊರೆತಿದ್ದು  ವಶಕ್ಕೆ  ತೆಗೆದುಕೊಂಡು ಸದರಿಯವರೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಅಫಜಲಪೂರ ಠಾಣೆ : ದಿನಾಂಕ 03-08-2018 ರಂದು ಅಫಜಲಪೂರ ಪಟ್ಟಣದ ಹೊರವಲಯದಲ್ಲಿರುವ ಬಸ್ ಡಿಪೊ ಹಿಂದಿನ ಸಾರ್ವಜನಿಕ ಸ್ಥಳದ ಖಾಲಿ ಜಾಗದಲ್ಲಿ ಕೆಲವು ಜನರು ಪಣಕ್ಕೆ ಹಣ ಹಚ್ಚಿ ಇಸ್ಪೆಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಸಿಪಿಐ ಸಾಹೇಬರು ಅಫಜಲಪೂರ ರವರ ಮಾರ್ಗದರ್ಶನದಲ್ಲಿ ಸ್ಥಳಕ್ಕೆ ಹೋಗಿ, ಮರೆಯಾಗಿ ನಿಂತು ನೋಡಲು ಅಫಜಲಪೂರ ಪಟ್ಟಣದ ಹೊರವಲಯದಲ್ಲಿರುವ ಬಸ್ ಡಿಪೋ ಹಿಂದಿನ ಸಾರ್ವಜನಿಕ ಜಾಗದಲ್ಲಿ ಕೆಲವು ಜನರು ದುಂಡಾಗಿ ಕುಳಿತುಕೊಂಡು ಇಸ್ಪೇಟ ಎಲೆಗಳ ಸಹಾಯದಿಂದ ಅಂದರ ಬಾಹರ ಜೂಜಾಟ ಆಡುತ್ತಿದ್ದರು, ನಾವು ಜೂಜಾಟ ಆಡುತ್ತಿದ್ದುದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿದಾಗ 02 ಜನ ಓಡಿ ಹೊಗಿದ್ದು, 06 ಜನರನ್ನು ಹಿಡಿದಿದ್ದು ಅವರ ಹೆಸರು ವಿಳಾಸ ವಿಚಾರಿಸಿ ಅಂಗ ಶೋಧನೆ ಮಾಡಲಾಗಿ 1) ಶಿವಾನಂದ ತಂದೆ ಗುರುಲಿಂಗಪ್ಪ ಕಲಕೇರಿ ಸಾ|| ಸಿದ್ರಾಮೇಶ್ವರ ಗುಡಿಯ ಹತ್ತಿರ ಅಫಜಲಪೂರ 2) ಬಸಣ್ಣ ತಂದೆ ಈರಣ್ಣ ಅಳ್ಳಗಿ ಸಾ|| ಅಫಜಲಪೂರ 3) ಗಿರೀಶ ತಂದೆ ಈರಣ್ಣ ಅವರಗೊಂಡ ಸಾ|| ರಾಜಿವ ಗಾಂದಿ ನಗರ ಅಫಲಪೂರ 4) ಮಳೇಂದ್ರ ತಂದೆ ಚಂದ್ರಶಾ ದೇಸಾಯಿ ಸಾ|| ದೇಸಾಯಿ ಗಲ್ಲಿ ಅಫಜಲಪೂರ 5) ಆನಂದ ತಂದೆ ನಾರಾಯಣಸಿಂಗ್ ರಜಪೂತ ಸಾ|| ಅಫಜಲಪೂರ 6) ಧನರಾಜ @ ಧನು ತಂದೆ ರೇವಣಸಿದ್ದಪ್ಪ ಕಲಕೇರಿ ಸಾ|| ಸಿದ್ರಾಮೇಶ್ವರ ಗುಡಿ ಹತ್ತಿರ ಅಫಲಪೂರ. ಓಡಿ ಹೊದವರ ಹೆಸರು ವಿಳಾಸ ವಿಚಾರಿಸಲಾಗಿ 7) ತಾತಾಪ್ಪ @ ತಾತು ತಂದೆ ಬಾಳಾಸಾಬ ಕುಲಕರ್ಣಿ ಸಾ|| ಕೂಡಿಗನೂರ ಹಾ|| || ಲಿಂಬಿ ತೋಟ ಅಫಜಲಪೂರ 8) ಸಂತೋಷ ಮ್ಯಾಳೇಸಿ ಸಾ|| ಅಫಲಪೂರ ಅಂತಾ ತಿಳಿಸಿದ್ದು  ಸದರಿಯವರಿಂದ ಇಸ್ಪೇಟ ಜೂಜಾಟಕ್ಕೆ ಸಂಭಂದಪಟ್ಟ ನಗದು ಹಣ 4140/- ರೂ ಮತ್ತು 52 ಇಸ್ಪೆಟ ಎಲೆಗಳು ದೊರೆತಿದ್ದು, ವಶಕ್ಕೆ ತೆಗೆದುಕೊಂಡು ಸದರಿಯವರೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.