Police Bhavan Kalaburagi

Police Bhavan Kalaburagi

Saturday, August 4, 2018

KALABURAGI DISTRICT REPORTED CRIMES

ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ಅಫಜಲಪೂರ ಠಾಣೆ : ದಿನಾಂಕ 03-08-2018 ರಂದು  ಅಫಜಲಪೂರ ಪಟ್ಟಣದ ಹೊರವಲಯದಲ್ಲಿರುವ ಸೊಂದುಸಾಬ ಧರ್ಗಾ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಪಣಕ್ಕೆ ಹಣ ಹಚ್ಚಿ ಇಸ್ಪೆಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಸಿಪಿಐ ಸಾಹೇಬರು ಅಫಜಲಪೂರ ರವರ ಮಾರ್ಗದರ್ಶನದಲ್ಲಿ ಸ್ಥಳಕ್ಕೆ ಹೋಗಿ, ಮರೆಯಾಗಿ ನಿಂತು ನೋಡಲು ಅಫಜಲಪೂರ ಪಟ್ಟಣದ ಹೊರವಲಯದಲ್ಲಿರುವ ಸೊಂದುಸಾಬ ಧರ್ಗಾ ಹತ್ತಿರ ಸಾರ್ವಜನಿಕ ಜಾಗದಲ್ಲಿ ಕೆಲವು ಜನರು ದುಂಡಾಗಿ ಕುಳಿತುಕೊಂಡು ಇಸ್ಪೇಟ ಎಲೆಗಳ ಸಹಾಯದಿಂದ ಅಂದರ ಬಾಹರ ಜೂಜಾಟ ಆಡುತ್ತಿದ್ದರು, ನಾವು ಜೂಜಾಟ ಆಡುತ್ತಿದ್ದುದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಜೂಜಾಡುತಿದ್ದ ಎಲ್ಲಾ 06 ಜನರನ್ನು ಹಿಡಿದಿದ್ದು ಅವರ ಹೆಸರು ವಿಳಾಸ ವಿಚಾರಿಸಿ ಅಂಗ ಶೋಧನೆ ಮಾಡಲಾಗಿ 1) ಯಲ್ಲಪ್ಪ ತಂದೆ ಹಸನಪ್ಪ ಆರೇಕರ್ ಸಾ|| ಜೈ ಭೀಮ ನಗರ ಅಫಲಪೂರ 2) ಗೌಸಪಾಶಾ ತದೆ ಅಫ್ಜಲಪಾಶಾ ಖಾಜಿ ಸಾ|| ಖಾಜಿ ಗಲ್ಲಿ ಅಫಜಲಪೂರ 3) ರಮೇಶ ತಂದೆ ಚಂದ್ರಶಾ ಬಳಗಾನೂರ ಸಾ|| ಜೈ ಭೀಮ ನಗರ ಅಫಜಲಪೂರ 4) ಲಕ್ಷ್ಮೀಪುತ್ರ ತಂದೆ ಪರೇಪ್ಪ ಬಳೂರ್ಗಿ ಸಾ|| ಲಿಂಬಿ ತೋಟ ಅಫಲಪೂರ 5) ಶಿವಾನಂದ ತಂದೆ ಶಂಕರ ಚಲವಾದಿ ಸಾ|| ಜೈ ಭೀಮ ನಗರ ಅಫಲಪೂರ 6) ಸೊಂದಪ್ಪ ತಂದೆ ಭೀಮಶಾ ಸಿಂಗೆ ಸಾ|| ಜೈ ಭೀಮ ನಗರ ಅಫಜಲಪೂರ ಅಂತ ತಿಳಿಸಿದ್ದು ಸದರಿಯವರ ಅಂಗ ಶೋಧನೆ ಮಾಡಲಾಗಿ ಇಸ್ಪೇಟ ಜೂಜಾಟಕ್ಕೆ ಸಂಬಂದಪಟ್ಟ ನಗದು ಹಣ ಒಟ್ಟು 3600/- ರೂ ನಗದು ಹಣ  ಮತ್ತು 52 ಇಸ್ಪೆಟ ಎಲೆಗಳು ದೊರೆತಿದ್ದು  ವಶಕ್ಕೆ  ತೆಗೆದುಕೊಂಡು ಸದರಿಯವರೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಅಫಜಲಪೂರ ಠಾಣೆ : ದಿನಾಂಕ 03-08-2018 ರಂದು ಅಫಜಲಪೂರ ಪಟ್ಟಣದ ಹೊರವಲಯದಲ್ಲಿರುವ ಬಸ್ ಡಿಪೊ ಹಿಂದಿನ ಸಾರ್ವಜನಿಕ ಸ್ಥಳದ ಖಾಲಿ ಜಾಗದಲ್ಲಿ ಕೆಲವು ಜನರು ಪಣಕ್ಕೆ ಹಣ ಹಚ್ಚಿ ಇಸ್ಪೆಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಸಿಪಿಐ ಸಾಹೇಬರು ಅಫಜಲಪೂರ ರವರ ಮಾರ್ಗದರ್ಶನದಲ್ಲಿ ಸ್ಥಳಕ್ಕೆ ಹೋಗಿ, ಮರೆಯಾಗಿ ನಿಂತು ನೋಡಲು ಅಫಜಲಪೂರ ಪಟ್ಟಣದ ಹೊರವಲಯದಲ್ಲಿರುವ ಬಸ್ ಡಿಪೋ ಹಿಂದಿನ ಸಾರ್ವಜನಿಕ ಜಾಗದಲ್ಲಿ ಕೆಲವು ಜನರು ದುಂಡಾಗಿ ಕುಳಿತುಕೊಂಡು ಇಸ್ಪೇಟ ಎಲೆಗಳ ಸಹಾಯದಿಂದ ಅಂದರ ಬಾಹರ ಜೂಜಾಟ ಆಡುತ್ತಿದ್ದರು, ನಾವು ಜೂಜಾಟ ಆಡುತ್ತಿದ್ದುದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿದಾಗ 02 ಜನ ಓಡಿ ಹೊಗಿದ್ದು, 06 ಜನರನ್ನು ಹಿಡಿದಿದ್ದು ಅವರ ಹೆಸರು ವಿಳಾಸ ವಿಚಾರಿಸಿ ಅಂಗ ಶೋಧನೆ ಮಾಡಲಾಗಿ 1) ಶಿವಾನಂದ ತಂದೆ ಗುರುಲಿಂಗಪ್ಪ ಕಲಕೇರಿ ಸಾ|| ಸಿದ್ರಾಮೇಶ್ವರ ಗುಡಿಯ ಹತ್ತಿರ ಅಫಜಲಪೂರ 2) ಬಸಣ್ಣ ತಂದೆ ಈರಣ್ಣ ಅಳ್ಳಗಿ ಸಾ|| ಅಫಜಲಪೂರ 3) ಗಿರೀಶ ತಂದೆ ಈರಣ್ಣ ಅವರಗೊಂಡ ಸಾ|| ರಾಜಿವ ಗಾಂದಿ ನಗರ ಅಫಲಪೂರ 4) ಮಳೇಂದ್ರ ತಂದೆ ಚಂದ್ರಶಾ ದೇಸಾಯಿ ಸಾ|| ದೇಸಾಯಿ ಗಲ್ಲಿ ಅಫಜಲಪೂರ 5) ಆನಂದ ತಂದೆ ನಾರಾಯಣಸಿಂಗ್ ರಜಪೂತ ಸಾ|| ಅಫಜಲಪೂರ 6) ಧನರಾಜ @ ಧನು ತಂದೆ ರೇವಣಸಿದ್ದಪ್ಪ ಕಲಕೇರಿ ಸಾ|| ಸಿದ್ರಾಮೇಶ್ವರ ಗುಡಿ ಹತ್ತಿರ ಅಫಲಪೂರ. ಓಡಿ ಹೊದವರ ಹೆಸರು ವಿಳಾಸ ವಿಚಾರಿಸಲಾಗಿ 7) ತಾತಾಪ್ಪ @ ತಾತು ತಂದೆ ಬಾಳಾಸಾಬ ಕುಲಕರ್ಣಿ ಸಾ|| ಕೂಡಿಗನೂರ ಹಾ|| || ಲಿಂಬಿ ತೋಟ ಅಫಜಲಪೂರ 8) ಸಂತೋಷ ಮ್ಯಾಳೇಸಿ ಸಾ|| ಅಫಲಪೂರ ಅಂತಾ ತಿಳಿಸಿದ್ದು  ಸದರಿಯವರಿಂದ ಇಸ್ಪೇಟ ಜೂಜಾಟಕ್ಕೆ ಸಂಭಂದಪಟ್ಟ ನಗದು ಹಣ 4140/- ರೂ ಮತ್ತು 52 ಇಸ್ಪೆಟ ಎಲೆಗಳು ದೊರೆತಿದ್ದು, ವಶಕ್ಕೆ ತೆಗೆದುಕೊಂಡು ಸದರಿಯವರೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.

No comments: