ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 27-06-2021
ಚಿಟಗುಪ್ಪಾ ಪೊಲೀಸ ಠಾಣೆ ಯು.ಡಿ.ಆರ್ ಸಂ. 08/2021, ಕಲಂ. 174 ಸಿ.ಆರ್.ಪಿ.ಸಿ :-
ಫಿರ್ಯಾದಿ ಸುಂದರಮ್ಮಾ ಗಂಡ ಭೀಮಣ್ಣಾ ಬೈರನಳ್ಳಿ, ವಯ : 75 ವರ್ಷ, ಜಾತಿ: ಎಸ್.ಸಿ ಮಾದಿಗ, ಸಾ: ಬೇಳಕೇರಾ, ತಾ: ಚಿಟಗುಪ್ಪಾ ರವರ ಮಗನಾದ ಬಾಬು ತಂದೆ ಭೀಮಣ್ಣಾ ಬೈರನಳ್ಳಿ, ವಯ: 55 ವರ್ಷ ಈತನು ಸರಾಯಿ ಕುಡಿಯುವ ಚಟದವನಿದ್ದು, ಅನಾರೋಗ್ಯದಿಂದ ಬಳಲಿ ದಿನಾಂಕ 26-06-2021 ರಂದು ಬೇಳಕೇರಾ ಶಿವಾರದ ನಾಗಪ್ಪಾ ಶಿವಣ್ಣನೋರ ಹೋಲದ ಪಕ್ಕದಲ್ಲಿನ ಅರಣ್ಯ ಪ್ರದೇಶದಲ್ಲಿ ಬೇವಿನ ಗಿಡದ ಫಂಟಿಗೆ ಹಗ್ಗದಿಂದ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ, ತನ್ನ ಮಗನ ಸಾವಿನ ಬಗ್ಗೆ ಯಾರ ಮೇಲೆ ಯಾವುದೇ ಸಂಶಯ ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಹುಮನಾಬಾದ ಪೊಲೀಸ್ ಠಾಣೆ ಅಪರಾಧ ಸಂ. 111/2021, ಕಲಂ. 78(3) ಕೆ.ಪಿ ಕಾಯ್ದೆ :-
ದಿನಾಂಕ 26-06-2021 ರಂದು ಘಾಟಬೋರಳ ಗ್ರಾಮದ ಗಾಂಧಿ ಚೌಕ ಹತ್ತಿರ ರಸ್ತೆಯ ಮೇಲೆ ಅಕ್ರಮವಾಗಿ ಮಟಕಾ ಅಂಕೆ ಸಂಖ್ಯೆ ಬರೆದುಕೊಳ್ಳುತ್ತಿರುವುದಾಗಿ ರವಿಕುಮಾರ ಪಿಎಸ್ಐ (ಕಾಸು) ಹುಮನಾಬಾದ ಪೊಲೀಸ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ವವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ತಮ್ಮ ಸಿಬ್ಬಂದಿಯವರೊಡನೆ ಘಾಟಬೋರಾಳ ಗ್ರಾಮಕ್ಕೆ ಹೋಗಿ ಆರೋಪಿತನಾದ ಚಂದ್ರಕಾಂತ ತಂದೆ ಲೋಮನೀ ಪಂಚಾಳ, ವಯ 50 ವರ್ಷ, ಜಾತಿ: ಬಡಿಗೇರ, ಸಾ: ಘಾಟಬೋರಳ ಇತನ ಮೇಲೆ ದಾಳಿ ಮಾಡಿ ಅವನಿಂದ ಒಟ್ಟು 1820/- ರೂ. ನಗದು ಹಣ, ಒಂದು ಬಾಲ ಪೆನ್ನ, 6 ಮಟಕಾ ಅಂಕಿ ಸಂಖ್ಯೆ ಚೀಟಿಗಳು ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.