ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 15-05-2020
ಮನ್ನಾಏಖೇಳ್ಳಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ
39/2020 ಕಲಂ 9,10,11 ಬಾಲ್ಯ ವಿವಾಹ ನಷೇಧ ಕಾಯ್ದೆ :-
ದಿನಾಂಕ:
14/05/2020 ರಂದು 1400 ಗಂಟೆಗೆ ಫಿರ್ಯಾದಿ
ಶ್ರೀಮತಿ ಶೋಭಾ ಕಟ್ಟಿ
ಗಂಡ ರವಿನಂದ ವಯ:
58 ವರ್ಷ ಜಾ: ಕ್ರೀಶ್ಚಿಯನ್ ಉ:
ಶಿಶು ಅಭಿವೃದ್ದಿ
ಅಧಿಕಾರಿ ಹುಮನಾಬಾದ ಇವರು
ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದರ ಸಾರಂಶವೆನೆಂದರೆ. ಚಿಟಗುಪ್ಪ ತಾಲ್ಲೂಕಿನ
ಉಡಬಾಳ ಗ್ರಾಮದ ಬಾಲಕಿಯಾದ
ಕುಮಾರಿ ಸ್ವೇತಾಳ ವಯಸ್ಸು
14 ವರ್ಷ ಆಗಿದ್ದು, ಇವಳ ಮದುವೆಯು ನಿರ್ಣಾ ಗ್ರಾಮದ ನಿವಾಸಿಯಾದ
ಲಾಲಪ್ಪನ ಮಗನಾದ ಕುಮಾರ
ಆಕಾಶನ ಜೊತೆಯಲ್ಲಿ (ವಯಸ್ಸು 19 ವರ್ಷ) ದಿನಾಂಕಃ 13/05/2020 ರಂದು ಸಾಯಂಕಾಲ 1630 ಗಂಟೆಗೆ
ಜರುಗಿರುತ್ತದೆ ಎಂಬ ಮಾಹಿತಿಯು
ಮಕ್ಕಳ ಕಲ್ಯಾಣ ಸಮಿತಿ
ಬೀದರರವರ ದೂರವಾಣಿ ಕರೆ ಮೂಲಕ ತಿಳಿದು
ಬಂದಿರುತ್ತದೆ. ಈ ಪ್ರಯುಕ್ತ
ಸದರಿ ಮಾಹಿತಿಯನ್ನು ಮನ್ನಾಎಖೇಳ್ಳಿ ಪೊಲಿಸ್ ಠಾಣೆಯ
ಪೊಲೀಸ್ ಉಪನಿರೀಕ್ಷಕರು ಆದ ಶ್ರೀ
ಶಿವರಾಜ ಪಾಟೀಲ ರವರಿಗೆ
ದೂರವಾಣಿ ಮೂಲಕ ತಿಳಿಸಲಾಗಿದ್ದು, ಅಲ್ಲದೇ ಅಂದು ರಾತ್ರಿ
ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ
ಕಲಾವತಿಯವರು ಸದರಿ ಸ್ಥಳಕ್ಕೆ
ಭೇಟಿ ನೀಡಿ, ಈ ಬಾಲಕಿಯನ್ನು ರಕ್ಷಣೆ ಮಾಡಿ
ನಿರ್ಣಾ ಗ್ರಾಮದಲ್ಲಿ ಆಕಾಶನ
ಅಕ್ಕಳಾದ ಶ್ರೀಮತಿ ಮೋಹಿತಾ
ಗಂಡ ಸುರೇಶ ಹಲಗೆನೋರ್
ರವರ ಮನೆಯಲ್ಲಿ ಸುರಕ್ಷಿತವಾಗಿ ಆಶ್ರಯ ನೀಡಲಾಯಿತ್ತು. ತದನಂತರ ದಿನಾಂಕಃ 14/05/2020 ರಂದು
ಸದರಿ ಗ್ರಾಮಕ್ಕೆ ಜಿಲ್ಲಾ
ಮಕ್ಕಳ ರಕ್ಷಣಾ ಘಟಕದ
ಅಧಿಕಾರಿ/ಸಿಬ್ಬಂದಿ ಮತ್ತು
ನಿರ್ಣಾ ವಲಯದ ಮೇಲ್ವಿಚಾರಕಿಯಾದ ಶ್ರೀಮತಿ ಕಲಾವತಿರೆಡ್ಡಿ ಹಾಗೂ ಮಕ್ಕಳ
ಸಹಾಯವಾಣಿ ಔಟ್ ರೀಚ್
ವರ್ಕರೊಂದಿಗೆ ಭೇಟಿ ನೀಡಿ,
ಬಾಲಕ ಮತ್ತು ಬಾಲಕಿ
ಹಾಗೂ ಅವರ ಪಾಲಕರನ್ನ
ಗ್ರಾಮ ಪಂಚಾಯತ ನಿರ್ಣಾಕ್ಕೆ ಕರೆಯಿಸಿ, ಬಾಲ್ಯವಿವಾಹದ ದುಷ್ಪಾರಿಣಾಮದ ಮತ್ತು ಶಿಕ್ಷೆಯ
ಬಗ್ಗೆ ತಿಳಿಹೇಳಲಾಯಿತ್ತು. ಅದೇ ರೀತಿ
ಪೋನ್ ಮುಖಾಂತರ ಮಕ್ಕಳ
ಕಲ್ಯಾಣ ಸಮಿತಿಯವರಿಗೆ ಈ ಘಟನೆಯ
ಕುರಿತು ಚರ್ಚಿಸಿದಾಗ, ಮಕ್ಕಳ ಕಲ್ಯಾಣ
ಸಮಿತಿ ಬೀದರರವರು ಬಾಲಕಿಯನ್ನು ಮದುವೆ ಮಾಡಿಕೊಂಡಿರುವ ಆಕಾಶ ಎಂಬ ವ್ಯಕ್ತಿಯ ಮೇಲೆ
ಹಾಗೂ ಆತನ ಪಾಲಕರು
ಹಾಗೂ ಬಾಲಕಿಯರ ಪಾಲಕರ
ವಿರುದ್ದ ಪ್ರಕರಣ ದಾಖಲಿಸುವಂತೆ ತಿಳಿಸಿರುತ್ತಾರೆ. ಮುಂದುವರೆದು ಸದರಿ
ನೊಂದ ಬಾಲಕಿಯನ್ನು ಅವಳ ಅಜ್ಜನಾದ (ತಾಯಿಯ ತಂದೆ) ಲಕ್ಷ್ಮಣ ತಂದೆ
ನಾಗಪ್ಪ ಹೊಸಳ್ಳಿಕರ್ ಸಾಃ ಬನ್ನಳ್ಳಿ ಇವರ ಆಶ್ರಯಕ್ಕೆ ಒಪ್ಪಿಸುವಂತೆ ದೂರವಾಣಿ ಮುಖಾಂತರ ಆದೇಶ
ನೀಡಿರುತ್ತಾರೆ. ಆದರಂತೆ
ಸದರಿ ಬಾಲಕಿಯನ್ನು ಅವಳ ಅಜ್ಜನ ಸುಪರ್ದಿಗೆ
ಒಪ್ಪಿಸಲಾಗಿರುತ್ತದೆ. ಆದ್ದರಿಂದ ಸದರಿ
ಬಾಲಕಿಯನ್ನು ಮದುವೆ ಮಾಡಿಕೊಂಡಿರುವ ಆಕಾಶ ಎಂಬ ವ್ಯಕ್ತಿಯ
ಮೇಲೆ ಹಾಗೂ ಆತನ ಪಾಲಕರು ಹಾಗೂ ಬಾಲಕಿಯರ
ಪಾಲಕರ ವಿರುದ್ದ ಕಾನೂನು
ಪ್ರಕಾರ ಕ್ರಮ ಕೈಗೊಳ್ಳಲು
ತಿಳಿಸಿದೆ. ಅಂತಾ ಕೋಟ್ಟ
ಫಿರ್ಯಾದು ದೂರು ಸಾರಂಶದ
ಆಧಾರದ ಮೇಲಿಂದ ಠಾಣೆ
ಗುನ್ನೆ ನಂ 39/2020 ಕಲಂ: 9,10,11 ಬಾಲ್ಯ ವಿವಾಹ
ನೀಷೇಧ ಕಾಯಿದ್ದೆ ನೇದರಡಿಯಲ್ಲಿ ಪ್ರಕರಣ ದಾಖಲಿಸಿ ತನೀಖೆ
ಕೈಗೊಳ್ಳಲಾಗಿದೆ.